Friday, August 29, 2014

Vachana 209: Kaadugiccheddade – If there is a Fire

PLEASE NOTE:  THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH VACHANAS WERE COMPOSED ORIGINALLY), SCROLL DOWN TO SECTIONS 5 AND 6.

1.     VACHANA IN KANNADA

ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ
ನೀರುಗಿಚ್ಚೆದ್ದಡೆ ಸಮುದ್ರವೇ ಗುರಿ
ಒಡಲುಗಿಚ್ಚೆದ್ದಡೆ ತನುವೆ ಗುರಿ
ಕಾಲಾಗ್ನಿಯೆದ್ದೆಡೆ ಲೋಕಂಗಳೆ ಗುರಿ
ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದಡೆ ನಿಂದಕರೆ ಗುರಿ
ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ  ನಾನು ಗುರಿಯಲ್ಲ ಕೇಳಾ.

2.     TRANSLITEARTION

kaaDugicceddaDe  aDaviye guri
nIrugicceddaDe samudrave guri
oDalugicceddaDe tanuve guri
kaalaagniyeddDe lOkaMgaLe guri
shivasharaNa  manadalli kOpaagniyeddDe niMdakare guri
guhEshvaraa nimma maayada hoDegicciMge  naanu guriyalla kaaNaa.

3.     CLICK HERE FOR A RECITATION


4.     TRANSLATION (WORDS)

kaaDugicceddaDe (if there is forest fire)  aDaviye guri (the forest is the target)
nIrugicceddaDe ( if there is fire at the bottom of the sea) samudrave guri (sea will be the target)
oDalugicceddaDe (if there is fire in the stomach)  tanuve guri (body is the target)
kaalaagniyeddDe (if there is  fire of death)  lOkaMgaLe guri (worlds are the targets)
shivasharaNa manadalli kOpaagniyeddDe (if there is fire in the mind of shiva’s devotees)   niMdakare guri (reproachers  are the targets)
guhEshvaraa nimma (guheshvara your)  maayada (of illusion)  hoDegicciMge (fierce fire)
naanu guriyalla kaaNaa (I am not the target you see).

5.     VACHANA IN ENGLISH

If there is forest fire, the forest is the target.
If there is fire at the bottom of the sea, the sea will be the targett.
If there is fire in the stomach, body is the target.
If there is the fire of death, worlds are the targets.
If there is fire in the mind of Shiva’s devotees, reproachers are the targets.
Guheshvara, I am not the target of your fierce fire of illusion (maya), you see!

6.     COMMENTARY

In this Vachana, Allama Prabhu uses several similes to drive home the effect of maya (illusion) and says “Lord Guhesvara, I am not (I do not want to be) the target of the fierce fire of illusion.”

The forest fire gulps the whole forest. The fire under the sea dries up the whole sea. The fire in the stomach (hunger) eats up the whole body. The fierce fire of the death, consumes all the worlds. Devotees of Shiva are immensely tolerant. But, they can never tolerate the reproach of the Divine and the realized souls. Allama Prabhu equates the forest fire, sea fire, fire of hunger, etc. to 'Maya' implying that the Maya engulfs us. He says, he has realized what maya is and this awareness will keep him immune to the fierce fire of illusion!
‘Maya’ is roughly translated as ‘illusion’. It portrays untruth as truth. As the popular example goes, it is the rope in the dark that appears as a snake. Once the darkness is removed, the truth emerges. It is the mirage in the sunny desert that draws the thirsty animal to it for water. Once the ignorance goes away, the truth emerges.
We get attached to things and people. The ego keeps on blinding us as to continue to being attached to our meterial world. This is the human condition.  We need to keep active and do our duties. But, we need to realize the impermanence of this real world and gain the permanent bliss, the Truth!



Let us distinguish between the transient and the permanent!
  

7.     KANNADA COMMENTARY

ಅರ್ಥ:

ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ  (ಕಾಳ್ಗಿಚ್ಚಿನಿಂದ ಅಡವಿಯೆ ಸುಟ್ಟು ಹೋಗುತ್ತದೆ)
ನೀರುಗಿಚ್ಚೆದ್ದಡೆ ಸಮುದ್ರವೇ ಗುರಿ (ಬಡಬಾಗ್ನಿಗೆ ಸಮುದ್ರದ ನೀರು ಸುಟ್ಟು ಹೋಗುತ್ತದೆ)
ಒಡಲುಗಿಚ್ಚೆದ್ದಡೆ ತನುವೆ ಗುರಿ (ಒಡಲಿನ ಹಸಿವಿನ ಕಿಚ್ಚಿಗೆ ಶರೀರವೆ ಹಾಳಾಗುತ್ತದೆ)
ಕಾಲಾಗ್ನಿಯೆದ್ದೆಡೆ ಲೋಕಂಗಳೆ ಗುರಿ (ಕಾಲನ ಅಗ್ನಿಗೆ ಲೋಕಗಳೆ ಆಹುತಿಯಾಗುತ್ತವೆ)
ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದಡೆ ನಿಂದಕರೆ ಗುರಿ (ಶಿವ ಶರಣರ ಕೋಪಕ್ಕೆ ನಿಂದಕರು ಗುರಿಯಾಗುತ್ತಾರೆ)
ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ
ನಾನು ಗುರಿಯಲ್ಲ ಕೇಳಾ. (ಹೊಡೆಯುವ, ಆವರಿಸಿಕೊಳ್ಳುವ ನಿಮ್ಮ ಮಾಯದ ಕಿಚ್ಚಿಗೆ ನಾನು ಗುರಿಯಾಗುವುದಿಲ್ಲ)

ತಾತ್ಪರ್ಯ:

ಸಾಮಾನ್ಯವಾಗಿ ಎಲ್ಲರೂ ಮಾಯೆಯ ಪ್ರಭಾವಕ್ಕೆ ಒಳಗಾಗುತ್ತಾರೆ. ಅದರಿಂದ ತಪ್ಪಿಸಿಕೊಳ್ಳುವವರು ಯಾರೂ ಇಲ್ಲ. ಅದು ಸಹಜಆದರೆ ಇಲ್ಲಿ ಅಲ್ಲಮರು ತಾನು ಅದಕ್ಕೆ ತುತ್ತಾಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಕಾಳ್ಗಿಚ್ಚು ಬಹಳ ಅಪಾಯಕಾರಿ. ಇಡೀ ಅಡವಿಯೆ ಅದಕ್ಕೆ ತುತ್ತಾಗುತ್ತದೆ. ಅದನ್ನು ತಪ್ಪಿಸುವುದು  ಅಸಾಧ್ಯವೆಂಬಷ್ಟೇ ಕಷ್ಟಕರಏಕೆಂದರೆ ಅದು ಪಕ್ಕ ಪಕ್ಕದಲ್ಲಿಯೆ ಇರುವ ಮರಗಳಿಗೆ ಹಬ್ಬಿ ಕಾಡನ್ನು ಪೂರ್ತಿಯಾಗಿ ಸುಡುತ್ತದೆ. ಅದೇ ರೀತಿಯಾಗಿ ಬಡಬಾಗ್ನಿಯೂ  ಸಹ ಸಮುದ್ರದ ನೀರನ್ನೇ ಸುಟ್ಟುಬಿಡುತ್ತದೆ. ನೀರನಲ್ಲಿಯೇ ಇದ್ದರು ಅದು ನೀರನ್ನೇ ಸುಡುತ್ತದೆ. ಇನ್ನು ಹಸಿವೆ ಎಂಬ ಅಗ್ನಿ ದೇಹದಲ್ಲಿ ಕಾಣಿಸಿಕೊಂಡಾಗ ಅದು ಇಡೀ ದೇಹವನ್ನೇ ಹಾಳು ಮಾಡುತ್ತದೆಕಾಲ ಎಂದರೆ ಮೃತ್ಯು ಅಥವಾ ಪ್ರಳಯ. ಇವುಗಳಿಗೆ ಎಲ್ಲ ಲೋಕಗಳು ಗ್ರಾಸವಾಗುತ್ತವೆ. ಇವುಗಳಿಂದ ತಪ್ಪಿಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಅಲ್ಲಮರು ಹೇಳುತ್ತಾರೆ ಶಿವಶರಣರ ಕೋಪವೂ ಕೂಡ ಬಹಳ ಅಪಾಯಕಾರಿ ಶಿವ ಶರಣರಿಗೆ ಕೋಪ ಬಂದರೆ ನಿಂದಕರು ಅದಕ್ಕೆ ಗುರಿಯಾಗುತ್ತಾರೆ ಎಂದು.  ಶರಣರು ಸಾಮಾನ್ಯವಾಗಿ ಕೋಪಗೊಳ್ಳುವವರಲ್ಲ. ಆದರೆ ಅವರಿಂದ ಜಂಗಮರ  ಅಥವಾ ಶಿವನ ನಿಂದೆ ಕೇಳಲಾಗುವುದಿಲ್ಲ. ಬೇರೆ ಏನೆನ್ನೇ ಸಹಿಸಿದರೂ ಶಿವ ಶರಣರು ನಿಂದಕರನ್ನು ಸಹಿಸುವುದಿಲ್ಲ. ನಿಂದೆ ಮಾಡಿದವರು ಅವರ ಕೋಪಕ್ಕೆ ಭಾಜನರಾಗಬೇಕಾಗುತ್ತದೆ.

ಕಾಳ್ಗಿಚ್ಚು, ಬಡಬಾಗ್ನಿ, ಕಾಲಾಗ್ನಿ, ಶಿವಶರಣ ಕೋಪ ಇವುಗಳು ಮಹಾ ವಿಪತ್ಕಾರಿಗಳು. ಮತ್ತು ಮಾಯೆಯೂ ಅದೇ ರೀತಿಯದು. ಅದರಿಂದಲೂ ಯಾರೂ ತಪ್ಪಿಸಿಕೊಳ್ಳಲಾರರು. ಆದರೆ ನಾನು ಅಂತಹ ಮಾಯೆಯನ್ನು  ಗೆದ್ದಿದ್ದೇನೆ. ಅದರ ಕಿಚ್ಚು ನನ್ನನ್ನು ಏನೂ ಮಾಡಲಾರದು ಎನ್ನುತ್ತಾರೆ ಅಲ್ಲಮಪ್ರಭುಗಳು.

ಮಾಯೆ ಎಂದರೆ ಯಾವುದು ಸತ್ಯವೋ ಅದನ್ನು ಮರೆಮಾಡಿ ಅಸತ್ಯವಾದುದನ್ನೇ ಸತ್ಯವೆಂದು ತೋರುವ ಭ್ರಮೆ.  ಬೇಸಿಗೆಯಲ್ಲಿ ಕಾಣುವ ಮೃಗಜಲವು ಇದಕ್ಕೊಂದು ಉದಾಹರಣೆ. ದೂರದಲ್ಲಿ ನೀರಿದೆಯೆಂದು ಕಾಣುತ್ತದೆ ಬಿಸಿಲಿನ ಬೇಗೆಯಲ್ಲಿ. ಅದನ್ನು ಹುಡುಕಿಕೊಂಡು  ಮುಂದೆ ಮುಂದೆ ಹೋದಂತೆ ಅದು ದೂರವಾಗುತ್ತಲೇ ಹೋಗುತ್ತದೆ. ನೀರಿರುವುದು ನಿಜವೆಂದೇ ತೋರುತ್ತದೆ. ಆದ್ದರಿಂದ ಅಜ್ಞನಾದ ಜೀವವು ಅದರ ಬೆಂಬತ್ತಿ ಬಳಲಿ ಬಸವಳಿದು ಹೋಗುತ್ತದೆ. ಅಜ್ಞಾನದ ಕಾರಣ ಮೃಗಜಲವನ್ನು ಸತ್ಯವೆಂದೇ ನಂಬಿ ಸೋತುಬೀಳುತ್ತದೆ. ಇದು  ಸಾಮಾನ್ಯವಾಗಿ ಎಲ್ಲರೂ ಅನುಭವಿಸುವಂತಹದು. ಬದುಕಿನಲ್ಲಿ ನಮಗೆ ಸುಖ ಕೊಡುತ್ತವೆ ಎಂದು ಅನೇಕ ಸಾಧನಗಳನ್ನು. ಉಪಾಯಗಳನ್ನು. ತಂತ್ರಗಳನ್ನು, ರೀತಿನೀತಿಗಳನ್ನು ನಂಬಿ ಮೋಸ ಹೋಗುತ್ತದೆ ಜೀವ. ಮರೆವೆಗೆ ಒಳಗಾದ ಜೀವದ ನಿರಂತರ ಪರಿಸ್ಥಿತಿ ಇದು. ಆದರೆ ಅದು  ಕೇವಲ ಭ್ರಮೆ ಎಂಬ ಅರಿವನ್ನು ಪಡೆದವನು ಎಂದಿಗೂ ಮೃಗಜಲದ ಹಿಂದೆ ಓಡುವುದಿಲ್ಲ. ಇದು ಅರಿವನ್ನು ಹೊಂದಿದ ಅಲ್ಲಮರ ಸ್ಥಿತಿ. ಅವರು ಯಾವುದು ಮಾಯೆ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಆದ್ದರಿಂದ ಅವರು ಮಾಯೆಯ ಹೊಡೆಗಿಚ್ಚಿಗೆ ಗುರಿಯಾಗುವುದಿಲ್ಲ.


1 comment:

  1. Very insightful. I have always been intrigued by the frequently referred (and probably rarely understood) word "Maya" in our scriptures. You have done well to explain it in terms of permanance and also the need to do the Duty, notwithstanding Maya.

    My small variant is that there is immense beauty in this imparmanent world and we should cherish it for all its glory while not getting attached to material things and while losing the ego. Interpersonal relationships are a case in point. All religions preach love to fellow beings and compassion. Our lives are ephemeral and transient but the world out there is a vast canvas that we can paint a picture, leave a small positive mark, even if for a moment. It is great for the individual and for the society as a whole. Enlightenment and realization of 'Reality' mean different things to different people.

    Hindi song: Jeena iseeka naam hai (True living is comforting those that hurt. Bring a smile to another's face.). Practice random acts of kindness.

    Just my two cents.

    Arun Kumtha

    ReplyDelete