Friday, December 27, 2013

Vachana 174: BarusaTagana Bhakti DiTavendu Neccalubeda – Don’t believe in the devotion of a false Devotee

VACHANA IN KANNADA

ಬರುಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತ್ತು ಕಾಣಾ ರಾಮನಾಥ.
TRANSLITERATION
barusaThagana bhakti  diTaveMdu neccalubEDa
maThadoLagaNa bekku iliya kaMDu
puTanegedaMTaayittu kaaNaa raamanaathaa.

CLICK HERE FOR A RECITATION


TRANSLATION (WORDS)
barusaThagana (of a man pretending as a devotee/ false devotee)  bhakti (devotion)  diTaveMdu (true)  neccalubEDa (don’t believe as)
maThadoLagaNa  ( living in a holy place) bekku (a cat)  iliya (a mouse)  kaMDu (seeing )
puTanegedaMTaayittu (like pouncing on)  kaaNaa (you see)  raamanaathaa (Ramanatha)

VACHANA IN ENGLISH
Don’t trust the devotion of one pretending as a devotee
Like the cat living in a holy place, on seeing a mouse,
pounces on, you see Ramanatha!
COMMENTARY
This Vachana is from Devara Dasimayya (Jedara Dasimayya). ‘Ramanatha’ is his signature for the Vachanas he composed.
Dasimayya asks us not to trust the devotional behavior of one pretending to be a devotee. He/she might be exhibiting this behavior just to get the attention of others, or the respect a true devotee receives. Just because his/her external behavior is that of a devotee, does not mean that he/she is ripe enough to overcome the ups and downs of the mortal world. His showy equanimity vanishes the moment a mortal attraction appears before him/her. A cat cannot give up its inherent nature of pouncing on a mouse just because it is residing in a holy place. Its true nature comes into play the moment it sees a mouse. So is the nature of a pretending devotee. The message of the Vachana then is that just the external behavior and showmanship does not make one a true devotee. True devotion requires the internal maturity!

Let us seek the internal maturity!
 
KANNADA COMMENTARY  
ಅರ್ಥ:
ಬರುಸಠಗನ (ಹುಸಿ ಭಕ್ತನ)  ಭಕ್ತಿ ದಿಟವೆಂದು (ನಿಜವೆಂದು)  ನಚ್ಚಲು ಬೇಡ (ನಂಬ ಬೇಡ)
ಮಠದೊಳಗಣ (ಮಠದಲ್ಲಿ ಇರುವ) ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತ್ತು (ಒಮ್ಮಿಲೆ ಎಗರಿದಂತಾಯಿತು)  ಕಾಣಾ ರಾಮನಾಥ.

ತಾತ್ಪರ್ಯ:

ಇದು ಜೇಡರ ದಾಸಿಮಯ್ಯ ಅಥವಾ ದೇವರ ದಾಸಿಮಯ್ಯನವರ ವಚನ.  ರಾಮನಾಥವೆಂಬುದು ಅವರ ಅಂಕಿತ. ಇಲ್ಲಿ ಅವರು ಕೇವಲ ಬಾಹ್ಯ ಆಚರಣೆಗಳು ಮುಖ್ಯವಲ್ಲ ಎಂಬುದನ್ನು ಹೇಳುತ್ತಿದ್ದಾರೆ.
ಹೊರಗೆ ಭಕ್ತನಂತೆ ನಟಿಸುವ ಭಕ್ತನನ್ನು ನಂಬಬೇಡ ಎಂದು ಹೇಳುತ್ತಾರೆ. ಬಾಹ್ಯದಲ್ಲಿ ಭಕ್ತನಂತೆ ಆಚರಿಸುವವನು ನಿಜವಾಗಿಯೂಭಕ್ತನಾಗಿರ ಬೇಕಿಲ್ಲ. ಆತ ಕೇವಲ ನಟನೆ ಮಾಡುತ್ತಿರಬೇಕು. ಭಕ್ತನಿಗಿರುವ ಗೌರವ ಆತನನ್ನು ಹಾಗೆ ಮಾಡಲು ಪ್ರೇರೇಪಿಸುತ್ತಿರಬೇಕು. ಆತನ ಹೊರಗಿನ ಆಚರೆಣೆಗೆ ಮರುಳಾಗಿ ಆತನು ನಿಜವಾಗಿಯೂ ಭಕ್ತನೇ ಎಂದು ನಂಬಬಾರದು. ಏಕೆಂದರೆ ಬಹು ಬೇಗ ಆತನ ನೈಜ ಗುಣಗಳು ತೋರಿ ಬರುತ್ತವೆ. ಅದಕ್ಕೆ ಅವರು ಒಂದು ಒಳ್ಳೆಯ ಉದಾಹರಣೆ ಕೊಡುತ್ತಾರೆ.  ಮಠದಲ್ಲಿ ಬೆಕ್ಕು ಇರುತ್ತದೆ. ಕೇವಲ ಮಠದಲ್ಲಿ ಇರುವ ಕಾರಣದಿಂದ ನಾವು ಅದು ಸಾತ್ವಿಕವಾದದ್ದು ಎಂದು ನಂಬ ಬೇಕಿಲ್ಲ. ಏಕೆಂದರೆ ತನ್ನ ಸ್ವಭಾವ ಅದು ಸುಲಭವಾಗಿ ಬಿಡಲು ಸಾಧ್ಯವಿಲ್ಲ. ಮಠದಲ್ಲಿದ್ದರೂ ಅದು ತನ್ನ ಸ್ವಭಾವಕ್ಕನುಗುಣವಾಗಿ ಇಲಿಯನ್ನು ಕಂಡ ತಕ್ಷಣ ನೆಗೆದು ಅದನ್ನು ತಿನ್ನಲು ಓಡುತ್ತದೆ.

ಅದೇ ರೀತಿಯಾಗಿ ಭಕ್ತನ  ವೇಷದವನು ತನ್ನ ತನುಗುಣಗಳನ್ನು ಬಿಡುವುದು ಸುಲಭವಲ್ಲ. ವಿಷಯಗಳೆಡೆಗೆ ಆತನ ಮನ ಎಳೆಯುತ್ತಲೇ ಇರುತ್ತದೆ. ತಾನು ಭಕ್ತನಾಗಿದ್ದೇನೆ ಎಂಬ ಅರಿವು ಕೂಡ ಆತನಿಗಿರುವುದಿಲ್ಲ. ಇಲಿಯನ್ನು ಕಂಡು ತಾನು ಮಠದ ಬೆಕ್ಕು ಎನ್ನುವುದನ್ನೂ ಮರೆಯುವ ಬೆಕ್ಕಿನಂತೆ ಆತನೂ ಎಲ್ಲವನ್ನೂ ಮರೆತು ವಿಷಯಗಳಿಗೆ ತುತ್ತಾಗುತ್ತನೆ.
ಒಟ್ಟಿನಲ್ಲಿ  ಕೇವಲ ಬಾಹ್ಯ ಲಾಂಛನಗಳು ಅಥವಾ ಆಡಂಬರಗಳು ವ್ಯಕ್ತಿಯನ್ನು ಭಕ್ತನನ್ನಾಗಿ ಮಾಡುವುದಿಲ್ಲ ಎಂಬುದನ್ನು ಸುಂದರವಾದ ಉದಾಹರಣೆಯೊಂದಿಗೆ ಹೇಳುತ್ತಿದ್ದಾರೆ.

Saturday, December 21, 2013

Vachana 173: Nelada Mareya Nidhaanadante – Like the Treasure Hidden in the Earth


VACHANA IN KANNADA

ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯ ಬಾರದು

TRANSLITERATION
nelada mareya nidhaanadaMte
phalada mareya ruciyaMte
shileya mareya hEmadaMte
tilada mareya tailadaMte
marada mareya tEjadaMte
bhaavada mareya brahmavaagippa
cennamallikaarjunana nilavanaarU ariya baaradu.
CLICK HERE FOR A RECITATION


TRANSLATION (WORDS)
nelada  (in earth) mareya (hidden/ unseen)  nidhaanadaMte (like the  treasure)
phalada (in a fruit)  mareya  (hidden/unseen) ruciyaMte (like sweetness)
shileya  (in the rock) mareya  (hidden/unseen) hEmadaMte (like gold)
tilada (in  sesame seed)  mareya (hidden/ unseen)  tailadaMte (like oil)
marada (in the tree)  mareya  (hidden/ unseen) tEjadaMte (like fire)
bhaavada  (in the feeling) mareya (hidden/unseen)  brahmavaagippa (that truth)
cennamallikaarjunana  (of Chennamallikaarjuna) nilavanaarU  (being) ariya baaradu (is almost impossible to understand/ is  difficult to understand).
VACHANA IN ENGLISH
Like the treasure hidden in the Earth
Like the sweetness hidden in the fruit
Like the Gold hidden in the rock
Like the oil hidden in the sesame seed
Like the fire hidden in the wood
The Truth is hidden in the feeling!
It is difficult to understand the being of the Divine Chenna Mallikaarjuna!

COMMENTARY

In this Vachana, Akka Mahaadevi emphasizes that the being of the Divine is very difficult to understand and it can only be felt. She uses several similes to drive the point home.
The treasure (minerals, oil, etc.) is hidden in the Earth. It cannot be seen by the superficial observation.  Gaining the knowledge of what is hidden where and how deep and excavating is needed to unearth the treasure.
The sweetness of the fruit can only be experienced. No amount of description by others can convey how sweet the fruit is and what that sweetness is.
The Gold is hidden in the rocks. One has to break the rocks, powder them and filter the Gold out of that powder. This calls for not only an extreme effort, but a good knowledge of how to distinguish between the Gold and the rock.
 The oil is hidden in the sesame seed. The seed need to be crushed to extract the oil. One needs to know how to crush and might have to utilize tools and assistance from others.
We can produce the fire by rubbing one piece of wood against the other. We should know the technique and need to put the effort to see the fire. We need to also be ready to lose the wood that produced the fire.
To understand the being of the Divine, awareness, knowledge and great effort is needed. The being can only be felt by such a devotee. It cannot be explained by others.
It is interesting that Akka is using so many similes to illustrate the concept of the being of the Divine. A close examination of each of these similes indicates what is expected of a devotee to understand His being. The devotee should cultivate awareness (the awareness that the treasure is hidden in the Earth), the intense curiosity  (not be satisfied with the description of others of the sweetness of the fruit), the effort and care (effort to powder the stone and care to not lose even a small strand of Gold in it), collaboration (with tools and knowledegeble people to crush the seed to extract oil), and finally the sacrifice (to sacrifice the wood that generated the fire).

Let us make an all-out effort to invite Him into our feelings!

KANNADA COMMENTARY
ನೆಲದ ಮರೆಯ ನಿಧಾನದಂತೆ (ಭೂಮಿಯ ಮರೆಯಲ್ಲಿ ಅಡಗಿರುವ ನಿಢಿಯಂತೆ)
ಫಲದ ಮರೆಯ ರುಚಿಯಂತೆ (ಹಣ್ಣಿನ ಮರೆಯಲ್ಲಿ ಇರುವ ರುಚಿಯಂತೆ)
ಶಿಲೆಯ ಮರೆಯ ಹೇಮದಂತೆ (ಕಲ್ಲಿನ ಮರೆಯಲ್ಲಿ ಅಡಗಿರುವ ಚಿನ್ನದಂತೆ)
ತಿಲದ ಮರೆಯ ತೈಲದಂತೆ (ಎಳ್ಳಿನ ಮರೆಯಲ್ಲಿ ಅಡಗಿರುವ ಎಣ್ಣೆಯಂತೆ)
ಮರದ ಮರೆಯ ತೇಜದಂತೆ  (ಮರದ ಮರೆಯಲ್ಲಿ ಅಡಗಿರುವ ಅಗ್ನಿಯಂತೆ)
ಭಾವದ ಮರೆಯ ಬ್ರಹ್ಮವಾಗಿಪ್ಪ  (ಭಾವದಲ್ಲಿ ಅಡಗಿರುವ ಬ್ರಹ್ಮನಂತೆ)
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯ ಬಾರದು (ಇರುವ ಚೆನ್ನ ಮಲ್ಲಿಕಾರ್ಜುನನ್ನು ಯಾರೂ ತಿಳಿದುಕೊಳ್ಳಲು ಬರುವುದಿಲ್ಲ)


ಇದು  ಅಕ್ಕಮಹಾದೇವಿಯ ವಚನ. ಇಲ್ಲಿ ಅಕ್ಕ ಮಹಾದೇವಿ ಆ ಪರವಸ್ತುವಿನ ಇರವು ಹೇಗಿದೆ ಎನ್ನುವುದನ್ನ್ನು ಅನೇಕ ಉದಾಹರಣೆಗಳ ಮೂಲಕ ಹೇಳುತ್ತಿದ್ದಾಳೆ.
’ನೆಲದ ಮರೆಯ ನಿಧಾನದಂತೆ’ ಎಂದು ಹೇಳುತ್ತಾಳೆ ಮೊದಲಿಗೆ. ಭೂಮಿಯ ಒಳಗೆ ನಮ್ಮ ಕಣ್ಣಿಗೆ ಕಾಣದೆಹೋದರೂ ನಿಧಿ ಅಡಗಿರುತ್ತದೆ. ಅದು ಮೇಲು ನೋಟಕ್ಕೆ ಕಾಣದೆ ಹೋದರೂ ಒಳಗೆ ಅಡಗಿರುತ್ತದೆ. ಅದನ್ನು ಶ್ರಮವಹಿಸಿ ಹುಡುಕ ಬೇಕು. ಅದೆಲ್ಲಿ ಇದೆ, ಎಷ್ಟು ಆಳದಲ್ಲಿ ಹುದುಗಿದೆ, ಎಂದು ನಮಗೆ ತಿಳಿದು ಬರುವುದಿಲ್ಲ. ಆದರೆ ಅದು ತನ್ನ ಪಾಡಿಗೆ ತಾನಿರುತ್ತದೆ. ಹುಡುಕಿದವರಿಗೆ ಸಿಗುತ್ತದೆ.
”ಫಲದ ಮರೆಯ ರುಚಿಯಂತೆ’ ಎಂದು ಹೇಳುವಲ್ಲಿ ಆ ಪರವಸ್ತುವಿನ ಇನ್ನೊಂದೇ ತೆರನ ಗುಣ ತಿಳಿಯುತ್ತದೆ. ಇಲ್ಲಿ ಹಣ್ಣು ಎದುರಿಗೆ ಕಾಣುತ್ತಿದೆ. ಕಣ್ಣಿಗೆ ಕಾಣುವ ಆ ಹಣ್ಣಿಗೆ ಒಂದು ರುಚಿಯಂತೂ ಇರಲೇ ಬೇಕು. ಆದರೆ ಅದನ್ನು ತಿಂದು ಅನುಭವಿಸುವವರೆಗೆ ಅದರ ರುಚಿ ಎಂತಹುದು ಎಂಬುದು ಯಾರಿಗೂ ತಿಳಿಯುವುದಿಲ್ಲ. ಅದನ್ನು ಅನುಭವಿಸಿದವರು, ಅದನ್ನು ನಾನಾ ರೀತಿಯಾಗಿ ವರ್ಣಿಸಬಹುದು. ಅದು ಜೇನಿನಂತೆ, ಬೆಲ್ಲದಂತೆ, ಸಕ್ಕರೆಯಂತೆ,  ಸಿಹಿಯಾಗಿದೆ ಎಂದು ಎಂದು ಅದರ ಸವಿಯನ್ನು ವರ್ಣಿಸ ಬಹುದು.  ಆದರೆ ಅವರ ಈ ಮಾತುಗಳಲ್ಲಿ ಯಾವುದು ನಿಜ? ಅಥವಾ ಅದು ಈ ಎಲ್ಲದರಗಿಂತ ಬೇರೆಯಾದ ರುಚಿ ಇದೆಯೇ ಎಂಬುದು ತಾನು ತಿಂದು ಅನುಭವಿಸಿದ ಮೇಲೆಯೇ ತಿಳಿಯುವುದು. ಅಲ್ಲಿಯವರೆಗೂ ಅದು ನಮ್ಮಿಂದ ಮರೆಯಾಗಿರುತ್ತದೆ.

’ಶಿಲೆಯ ಮರೆಯ ಹೇಮದಂತೆ’. ಕಲ್ಲಿನಲ್ಲಿ ಬಂಗಾರ ಕಣಕಣ ವಾಗಿ  ಅಡಗಿಕೊಂಡಿರುತ್ತದೆ. ಯಾವಾಗಲೋ ಒಂದೊಂದು ಸಲ ಮಾತ್ರ ಹೊಳೆಯುತ್ತದೆ. ಅದನ್ನು ಗುರುತಿಸಿ ಶ್ರಮವಹಿಸಿ ಆ ಕಲ್ಲನ್ನು ಕುಟ್ಟಿ ಪುಡಿಮಾಡಿ ಶೋಧಿಸಿ ತೆಗೆದಾಗ ಅದು ದೊರೆಯುತ್ತದೆ. ಇಲ್ಲದಿದ್ದರೆ ಇಲ್ಲ. ಆ ಪರವಸ್ತುವೂ ಅಷ್ಟೆ, ಯಾವಾಗಲಾದರೊಮ್ಮೆ ಹೊಳೆದು ಮಾಯವಾಗುವ ಅದನ್ನು ಗುರುತಿಸಿ ಶ್ರಮಪಟ್ಟಾಗ ಅದು ದೊರೆಯುವ ಸಾಧ್ಯತೆ ಇರುತ್ತದೆ.

’ತಿಲದ ಮರೆಯ ತೈಲದಂತೆ’. ಇಲ್ಲಿ ಅಕ್ಕನು ಆ ಪರವಸ್ತು ಎಳ್ಳಿನ ಮರೆಯಲ್ಲಿ ಅಡಗಿದ ಎಣ್ಣೆಯಂತೆ ಇದೆ ಎನ್ನುತ್ತಾಳೆ. ಎಳ್ಳನ್ನು ನೋಡಿದಾಗ ಅದು ಕಣ್ಣಿಗೆ ಕಾಣುವುದಿಲ್ಲ. ಅದರೆ ಅದನ್ನು ಗಾಣದಲ್ಲಿ ತಿರುವಿದಾಗ ಎಣ್ಣೆ ಸಿಗುತ್ತದೆ. ಅಂದರೆ ಅದನ್ನು ಪಡೆಯಲು ತಾನು ಶ್ರಮ ಪಡುವುದಲ್ಲದೆ ಇತರರ ಎಂದರೆ ಗಾಣದ, ಎತ್ತುಗಳ ಸಹಯೋಗದ ಅವಶ್ಯಕತೆಯೂ ಇದೆ ಎನ್ನುವುದನ್ನು ಸೂಚಿಸುತ್ತಿದ್ದಾಳೆ.

’ಮರದ ಮರೆಯ ತೇಜದಂತೆ’ ಎಂದು ಹೇಳುವಲ್ಲಿ ಮರದಲ್ಲಿ ಅಡಗಿರುವ ಅಗ್ನಿಯನ್ನು ಪಡೆಯಲು ಮರವನ್ನು ಘರ್ಷಿಸಬೇಕಾಗುತ್ತದೆ ಮತ್ತು ಆ ಕ್ರಿಯೆಯಲ್ಲಿ ಮರವು ಭಸ್ಮವಾಗುತ್ತದೆ ಎಂಬ ಭಾವವಿದೆ.

’ಭಾವದ ಮರೆಯ ಬ್ರಹ್ಮವಾಗಿಪ್ಪ’  ಎಂದು ಹೇಳಿ ಆ ಪರವಸ್ತುವು ಕೊನೆಗೆ ಭಾವದಲ್ಲಿ  ಅಡಗಿ ಹೋಗುತ್ತದೆ ಎನ್ನುತ್ತಾಳೆ. ಅದು ಇನ್ನು ಬೇರೆ ಯಾವ ರೀತಿಯಲ್ಲಿಯೂ ತೋರಿಸಲು, ಹೇಳಲು, ವರ್ಣಿಸಲು ಬರುವುದಿಲ್ಲವೆಂದು ಹೇಳುತ್ತಾಳೆ.

ಇಲ್ಲಿ ಒಂದು ಪ್ರಶ್ನೆ ಹುಟ್ಟುತ್ತದೆ. ಆ ಪರವಸ್ತು ಯಾವ ರೀತಿ ಇದೆ ಎನ್ನುವುದಕ್ಕೆ ಏಕೆ ಇಷ್ಟೊಂದು ಉದಾಹರಣೆಗಳನ್ನು ಕೊಡಬೇಕು. ಯಾವುದಾದರು ಒಂದು ಉದಾಹರಣೆ ಸಾಲುತ್ತಿರಲಿಲ್ಲವೆ? ಎಂದು. ಆದರೆ ಇಲ್ಲಿಯ ಒಂದೊಂದನ್ನೂ ಸೂಕ್ಶ್ಮವಾಗಿ ಗಮನಿಸಿದಾಗ ಅದರ ಔಚಿತ್ಯ ಗೊತ್ತಾಗುತ್ತದೆ. ಅದು, ನೆಲದ  ನಿಧಿ, ಹಣ್ಣಿನ ರುಚಿ, ಕಲ್ಲಿನಲ್ಲಿರುವ ಚಿನ್ನ, ಎಳ್ಳಿನಲ್ಲಿರುವ ಎಣ್ಣೆ, ಮತ್ತು ಮರದಲ್ಲಿ ಅಡಗಿರುವ ಅಗ್ನಿಯಂತೆ ಎಂದು ಹೇಳುತ್ತಾಳೆ.  ನೆಲದ ಮರೆಯ ನಿಧಾನವನ್ನು ಪಡೆಯಲು ಅದರ ಬಗ್ಗೆ ಏನೂ ತಿಳಿಯದಿದ್ದರೂ ಅದು ಇದೆ ಎನ್ನುವ ಬಗ್ಗೆ ಶ್ರದ್ಧೆ ಇರಬೇಕಾಗುತ್ತದೆ.  ಫಲದ ಮರೆಯಲ್ಲಿರುವ, ನಾನಾ ಜನರು ನಾನಾ ರೀತಿಯಾಗಿ ವರ್ಣಿಸುವ ಹಣ್ಣಿನ ರುಚಿಯು ಹೇಗಿರಬಹುದೆಂಬ ಜಿಜ್ಞಾಸೆ ಇರಬೇಕು.  ಕಲ್ಲಿನ ಮರೆಯಲ್ಲಿ ಹೊಳೆಯುವ ಚಿನ್ನವನ್ನು ಪಡೆಯಲು ಬೇಕಾಗುವ ಶ್ರಮ ಮತ್ತು ಕಲ್ಲು ಒಡೆಯುವಾಗ ಅದರ ಒಂದು ಚಿಕ್ಕ ತುಂಡು ಹಾರಿ ಹೋದರೂ ಚಿನ್ನ ಕಳೆದುಹೋಗಬಹುದು ಎಂಬ ಎಚ್ಚರಿಕೆ ಇರಬೇಕು. ಎಳ್ಳಿನಲ್ಲಿ ಇರುವ ಎಣ್ಣೆಯನ್ನು ಪಡೆಯಲು ಗಾಣದ ಸಹಾಯ ಮತ್ತು ಎತ್ತುಗಳ ಸಹಯೋಗ ಬೇಕು. ಮತ್ತು ಕೊನೆಯದಾಗಿ  ಘರ್ಷಣೆಯಿಂದ ಮರದಲ್ಲಿರುವ ಅಗ್ನಿ ಹೊರಬಂದು ಆ ಮರವನ್ನೇ ಸುಡುವಂತೆ ತಾನು ಅವಲಂಬಿಸಿದವುಗಳನ್ನೇ ತ್ಯಜಿಸುವ ಗಟ್ಟಿತನ ಬೇಕು. ಈ ರೀತಿಯಾಗಿ  ಶ್ರದ್ಧೆ, ಜಿಜ್ಞಾಸೆ, ಎಚ್ಚರಿಕೆ, ಇತರರ ಸಹಯೋಗ ಮತ್ತು ನಿರಾವಲಂಬನೆಗಳು ಬೇಕಾಗುತ್ತವೆ. ಈ ಎಲ್ಲವೂ ಒಟ್ಟುಗೂಡಿದಾಗ ಆ ಪರವಸ್ತುವಿನ ಅನುಭವ ಆಗುವ ಸಾಧ್ಯತೆ ಇರಬಹುದು. ಅದು ಕೂಡ ಬಹಳ ಕಷ್ಟ ಎಂಬುದನ್ನು ಅಕ್ಕ ಹೇಳುತ್ತಿದ್ದಾಳೆ ಎನ್ನಿಸುತ್ತದೆ.


Friday, December 13, 2013

Vachana 172: Aakaaravilladaathange Angavendeke - The one who doesn’t have a Form


 

VACHANA IN KANNADA

ಆಕಾರವಿಲ್ಲದಾತಂಗೆ  ಅಂಗವೆಂದೇಕೆ ಕಲ್ಪಿಸಿ ಹೇಳುವಿರಿ?
ಅದು ಲಿಂಗಾನುಭವಿಗಳ ದೃಷ್ಟಿಯೆ? ಅಲ್ಲ, ಬಿಡಾ ಮರುಳೆ.
ಮಮಕಾರವಿಲ್ಲದವಂಗೆ ಮಾನಿನಿಯರಿಬ್ಬರೆಂದೇನೋ?
ಮಾನಿನಿಯರಿಬ್ಬರಿಲ್ಲದಾತಂಗೆ, ಲೀಲಾ ಮಾಯಿಕದ ಸಂಸಾರದ ಕುರುಹೆಂದೇನೋ?
ನಾಮ ನಿರ್ನಾಮನಾದ ನಿರಾಲಂಬಿಗೆ, ನಾಮ ಸೀಮೆಯ ಕಲ್ಪಿಸಲುಂಟೆ?
ನಿಸ್ಸೀಮಂಗೆ ನಿರ್ವಿಕಲ್ಪಿತಂಗೆ ಕಲ್ಪಿತ ಉಂಟೆ?
ಕಲ್ಪಿತಕ್ಕೆ ತಂದು ಸತಿ ಸುತ ಸಂಸಾರ ಉಂಟೆಂಬ ಹೂಸಕಗರ ಮಾತ ಕೇಳಲಾಗದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

TRANSLITERATION

aakaaravilladaataMge  aMgaveMdEke kalpisi hELuviri?
adu liMgaanubhavigaLa dRuShtiye? alla biDaa maruLe.
mamakaarsavilladavaMge maaniniyaribbareMMdEnO?
maaniniyaribbarilladaataMge, lIlaa maayikada saMsaarada kuruheMdEnO?
naama nirnaamanaada niraalaMbige naama seemeya kalpisaluMTe?
nissImaMge nirvikalpitaMge  kalpita uMTe?
kalpitakke taMdu sati suta samsara uMTeMba hUsakagara maata kELalaagadu kaaNaa
mahaaliMga guru shiva siddhEshvara prabhuve.

CLICK HERE FOR A RECITATION


TRANSLATION (WORDS)

aakaaravilladaataMge (who doesn’t have a form)  aMgaveMdEke( has a body) kalpisi (imagine)  hELuviri (why do you say)?
adu (that)  liMgaanubhavigaLa  (the one  who has experienced the God) dRuShtiye (is that the way of)? alla (no)  biDaa maruLe. (leave it oh! fool)
mamakaarsavilladavaMge (the one who doesn’t have any attachment)  maaniniyaribbareMdEnO (can one say that he has two wives)?
maaniniyaribbarilladaataMge (the one who doesn’t have two wives)
lIlaa maayikada (game of illusion) saMsaarada (of the world) kuruheMdEnO (as a symbol)?naama nirnaamanaada (one without name) niraalaMbige (who doesn’t have or need  any support)
naama (name)  seemeya (limit) kalpisaluMTe (can you give him)?
nissImaMge (without boundaries) nirvikalpitaMge (doesn’t change)  kalpita uMTe (can one give him forms in ones’ own imagination) ?
kalpitakke taMdu (imagining)  sati (wife)  suta (son)  samsara (household)  uMTeMba (saying he has)
hUsakagara (saying) maata (words) kELalaagadu kaaNaa (can’t listen to, you see)
mahaaliMga guru shiva siddhEshvara prabhuve (Mahalingaguru Shivasiddheshvara Prabhuve).

VACHANA IN ENGLISH

He doesn’t have a form – why do you imagine and say He has a body?
Is that the way of the one who has experienced the Divine? No, Quit it oh! fool.
He doesn’t have any attachments – why do you say he has two wives?
For the one who doesn’t have two wives, why create the symbol of the world’s game of illusion?
He is the one without a name, He doesn’t have or need any support – can one  give a name and assign a boundary?
He is limitless (without boundaries), He doesn’t change – can one give him forms in one’s own imagination?
I can’t listen to the words of people who imagine and say He has  a wife, son and household, you see!
Mahalingaguru Shivasiddheshvara Prabhuve!

COMMENTARY

In this Vachana Thontada Siddalinga Swamigalu wonders why we imagine all sorts of forms, activities, environment and boundaries for the God, while we know that He is omnipresent, omniscient and omnipotent. He is formless. He does not depend on anyone nor does He seek any support. He cannot be confined to a boundary- he is everywhere. He does not have a family – He is the one and only.  But, we imagine Him to be in our form. We associate Him with wives and children just as we do. We say that He created this world and the illusion associated with it as  part of His game playing.  Siddalinga Swamigalu says that this is not the way of a true devotee, one who has experienced the Divine and one who has realized Him. Granted, it is easier to visualize the Divine to be in our form. But this visualization limits our ability to see beyond the icon. As we have mentioned in previous posts, we should  go  beyond the icon and realize Him through the journey to within.

 Let us not be content with just seeing the Divine in our form!

KANNADA COMMENTARY
ಅರ್ಥ:
ಆಕಾರವಿಲ್ಲದಾತಂಗೆ  (ಆಕಾರವಿಲ್ಲದವನಿಗೆ) ಅಂಗವೆಂದೇಕೆ (ದೇಹವಿದೆ ಎಂದು)  ಕಲ್ಪಿಸಿ (ಊಹಿಸಿ) ಹೇಳುವಿರಿ?
ಅದು ಲಿಂಗಾನುಭವಿಗಳ ದೃಷ್ಟಿಯೆ (ಲಿಂಗವನ್ನು ಅರಿತು ಅನುಭವಿಸಿದವರ ದೃಷ್ಟಿಯೆ)? ಅಲ್ಲ, ಬಿಡಾ ಮರುಳೆ .
ಮಮಕಾರವಿಲ್ಲದವಂಗೆ (ಯಾವುದೇ ರೀತಿಯ ಮೋಹವಿಲ್ಲವನಿಗೆ)  ಮಾನಿನಿಯರಿಬ್ಬರೆಂದೇನೋ (ಇಬ್ಬರು ಹೆಂಡಿರು ಎಂದು ಹೇಳುವಿರಲ್ಲ)?
ಮಾನಿನಿಯರಿಬ್ಬರಿಲ್ಲದಾತಂಗೆ (ಇಬ್ಬರು ಹೆಂಡಿರು ಇಲ್ಲದವನಿಗೆ)
ಲೀಲಾ ಮಾಯಿಕದ (ಕ್ರೀಡೆಗಾಗಿ ಮಾಯೆಯಿಂದ ಕೂಡಿದ) ಸಂಸಾರದ  ಕುರುಹೆಂದೇನೋ (ಸಂಸಾರವೆಂಬ ಕುರುಹು ಸೃಷ್ಟಿಸಿದನೇನು)?
ನಾಮ (ಹೆಸರು) ನಿರ್ನಾಮನಾದ (ಹೆಸರಿಲ್ಲದವನಾದ)  ನಿರಾಲಂಬಿಗೆ (ಯಾವ ಆಲಂಬನೆ/ ಆಧಾರವಿಲ್ಲದೆ ಇರುವವನಿಗೆ)
ನಾಮ ಸೀಮೆಯ ಕಲ್ಪಿಸಲುಂಟೆ (ಆತನಿಗೊಂದು ಹೆಸರು,  ಸೀಮೆಯನ್ನು ಕಲ್ಪಿಸಬಹುದೆ)?
ನಿಸ್ಸೀಮಂಗೆ ( ಸೀಮೆಯೇ ಇಲ್ಲದವನಿಗೆ) ನಿರ್ವಿಕಲ್ಪಿತಂಗೆ (ಯಾವ ಬದಲಾವಣೆಯೂ ಹೊಂದದವನಿಗೆ)  ಕಲ್ಪಿತ ಉಂಟೆ (ನಾಮ  ಸೀಮೆ, ಬದಲಾವಣೆಗಳನ್ನು ಊಹಿಸಬಹುದೆ)?
ಕಲ್ಪಿತಕ್ಕೆ ತಂದು ಸತಿ ಸುತ ಸಂಸಾರ ಉಂಟೆಂಬ (ಆತನಿಗೆ ಹೆಂಡತಿ, ಮಗ ಮತ್ತು ಸಂಸಾರ ಉಂಟೆಂದು)
ಹೂಸಕಗರ (ಊಹೆಯನ್ನು ಧರಿಸುವವರ)  ಮಾತ ಕೇಳಲಾಗದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

ತಾತ್ಪರ್ಯ:

ವಚನದಲ್ಲಿ ಸಿದ್ಧಲಿಂಗ ಸ್ವಾಮಿಗಳು  ಆಕಾರವಿಲ್ಲದ, ನಿರ್ವಿಕಲ್ಪನಾದ ಪರವಸ್ತುವನ್ನು ಮೂರ್ಖ  ಜನರು ಹೇಗೆ ತಮ್ಮ ತಮ್ಮ ಕಲ್ಪನೆಯಿಂದ ನಾನಾವಿಧವಾಗಿ ಊಹಿಸಿ ಅನೇಕ ನಾಮ ಆಕಾರಗಳನ್ನು ಕೊಡುತ್ತಾರೆ, ಎಂಬುದನ್ನು ಹೇಳುತ್ತಿದ್ದಾರೆ.
ಆಕಾರವಿಲ್ಲದವನಿಗೆ  ದೇಹವಿದೆ ಎಂದು ಕಲ್ಪಿಸಿ ಏಕೆ ಹೇಳುತ್ತೀರಿ ಎಂದು ಕೇಳುತ್ತಾರೆ. ಪರವಸ್ತು ನಿರಾಕಾರವಾದದ್ದು. ನಿರಾಕಾರವಾದದ್ದಕ್ಕೆ ಶರೀರವಿರಲು ಹೇಗೆ ಸಾಧ್ಯ? ಇಲ್ಲದ್ದನ್ನು ಇದೆ ಎಂದು ಏಕೆ ಕಲ್ಪಿಸಿಕೊಳ್ಳಬೇಕು? ಇದು ಲಿಂಗವನ್ನು ಅನುಭವಿಸಿ ಅರಿತು ಹೇಳುವಂತಹ ಮಾತಲ್ಲ. ಲಿಂಗದ ಅನುಭವವಿಲ್ಲದವರು, ಅರಿವು ಇಲ್ಲದವರು, ಇದನ್ನು ಹೇಳುತ್ತಾರೆ. ಮತ್ತು ಮರುಳರು ಅದನ್ನು ನಂಬುತ್ತಾರೆ. ಅಂತಹವರ ಮಾತನ್ನು ನಂಬಬಾರದು.
ಲಿಂಗಕ್ಕೆ ಅಥವಾ ಪರವಸ್ತುವಿಗೆ ಮಮಕಾರವೇ ಇಲ್ಲ. ಅಂದರೆ ತನ್ನದು ಎನ್ನುವಂತಹದ್ದು ಏನೂ ಇಲ್ಲ. ಅದು ನನ್ನದು ತನ್ನದು ಎನ್ನುವ ಭಾವರಹಿತವಾದದ್ದು. ಅದಕ್ಕೆ ಯಾವ ರೀತಿಯ ಮೋಹವೂ ಇಲ್ಲ. ಅಂತಹವನಿಗೆ ಇಬ್ಬರು ಹೆಂಡಿರಿದ್ದಾರೆ ಎಂದು ಹೇಳುವುದು ಸರಿಯೆ? ಎಂದು ಕೇಳುತ್ತಾರೆ. ತಮಗೆ ಇಷ್ಟವಾದ ಅಥವಾ ತಿಳಿದ ಒಂದು ಆಕಾರವನ್ನು ಕಲ್ಪಿಸಿ ಅದನ್ನು ಪರವಸ್ತುವಿಗನ ಮೇಲೆ ಆರೋಪಿಸುತ್ತಾರೆ.
ಆತನು ಲೀಲೆಗಾಗಿ  ಮಾಯೆಯಿಂದ ಕೂಡಿದ  ಸಂಸಾರವನ್ನು ಸೃಷ್ಟಿಸಿದ,  ಅದು ಆತನ ಕುರುಹು ಎಂದು ಏನೇನೋ ಹೇಳುತ್ತಾರೆ.  ಹೆಸರೇ ಇಲ್ಲದವನಿಗೆ, ಯಾವ ಆಲಂಬನೆ ಅಥವಾ ಆಧಾರವೂ ಇಲ್ಲದವನಿಗೆ ಸೀಮೆಯನ್ನುಊಹಿಸಬಹುದೆ?  ಯಾವುದೇ ಪರಿಮಿತಿಗೆ ಸಿಗದವನನ್ನು , ಎಂದಿಗೂ ಬದಲಾಗದವನನ್ನು, ಊಹೆಯಿಂದ ಏನೇನೋ ಕಲ್ಪಿಸಿಕೊಂಡು ಮನಸ್ಸಿಗೆ ಬಂದುದನ್ನು ಹೇಳಬಹುದೆ? ಮಾನವರಂತೆ  ಅತನಿಗೂ ಮಡದಿ ಮಕ್ಕಳು ಇದ್ದಾರೆಂದು ಹೇಳುತ್ತಾರೆ ಜನರು. ತಾವು ಆತನನ್ನು ಅರಿತಿದ್ದೇವೆ ಎಂದು ತೋರಿಸಿಕೊಳ್ಳಬೇಕೆ ಎಂಬ ಜನರ ಆಸೆಯೇ ಅವರನ್ನು ಹೀಗೆ ಕೇಲು ಪ್ರೇರೇಪಿಸುತ್ತದೆ.
ಇದು ಸರಿಯೇ? ಎಂದು ಕೇಳುತ್ತಾರೆ ಸಿದ್ಧಲಿಂಗರು. ಇಲ್ಲದ ಸಲ್ಲದ ಕಲ್ಪನೆಯನ್ನು ಆರೋಪಿಸುವವರ ಮಾತು ಕೇಳಲಾಗದು , ಅಂತಹವರ ಮಾತುಗಳನ್ನು ನಂಬಲಾಗದು ಎಂದು ಹೇಳುತ್ತಾರೆ.