Friday, October 26, 2012

Vachana 113: Guruvininda Lingava kandenallade - Dynamic Awareness


ಗುರುವಿನಿಂದ ಲಿಂಗವ ಕಂಡೆನಲ್ಲದೆ
ಲಿಂಗದಿಂದ ಲಿಂಗವ ಕಾಣಲಿಲ್ಲಯ್ಯಾ.
ಲಿಂಗದಿಂದ ಫಲಪದಂಗಳಲ್ಲದೆ
ಫಲಪದಂಗಳಿಂದ ಫಲಪದಂಗಳ ಕಾಣಲಿಲ್ಲಯ್ಯಾ,
ಜಂಗಮದಿಂದ ಮೋಕ್ಷವ ಕಂಡೆನಲ್ಲದೆ
ಮೋಕ್ಷದಿಂದ ಮೋಕ್ಷವ ಕಾಣಲಿಲ್ಲಯ್ಯಾ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

TRANSLITERATION

guruviniMda liMgava kaMDenallade 
liMgadiMda  liMgava kaaNalillayyaa,
liMgadiMda phala padaMgaLallade 
phalapadaMgaLiMda  phalapadaMgala kaaNlillayyaa
jaMgamadiMda mOkShava  kaMDenallade
mOkShadimda mOkaShava kaaNalillayyaa nODaa 
kapilasiddhamallikaarjunaa.

CLICK HERE TO READ-ALONG:
http://youtu.be/xV-KU_tKVsw

TRANSLATION (WORDS)

guruviniMda  (through the Guru) liMgava (Limga, God)  kaMDenallade (realized but not, attained  but not)
liMgadiMda  (through the Linga, icon) liMgava ( God,) kaaNalillayyaa,(did not realize, Sir)
liMgadiMda (through the Linga, God)  phala padaMgaLallade  (awareness, realization as the product but not)
phalapadaMgaLiMda  (through  fruits and chanting)   phalapadaMgala (knowledge, fruitfulness) kaaNlillayyaa ( did not realize, Sir)
jaMgamadiMda (the which is moving and not static)  mOkShava (salvation)  kaMDenallade (realized but not)
mOkShadimda  (through  so called salvation)  mOkaShava (salvation)  kaaNalillayyaa nODaa (did not realize , atttain  Sir) nODaa (you see)
kapilasiddhamallikaarjunaa.(Kapilasiddhamallikarjuna)

TRANSLATION

I realized Linga (God) through the Guru,
I did not realize Linga (God) through the Linga (icon), oh Sir!
I attained knowledge (realization,fruitfulness) through the Linga (God),
I did not attain knowledge (fruitfulness) through fruits and chanting, oh Sir!
I attained salvation through the Jangama (dynamic, never static),
I did not attain salvation through the so called salvation, you see
Sir kapilasiddhamallikaarjunaa.

COMMENTARY

In this Vachana Sharana Siddarameswara   emphasizes the roles of Guru (Teacher) and Linga (icon), and clarifies the meaning of Jangama (the dynamic). In the first line of the Vachana he says that he realized Linga (God) through the teacher, but not through the Linga (icon). Recall that the role of Guru is to impart awareness to the disciple, mark the occasion with the offer of icon, and moving forward to other disciples. The disciple does not have any use for the icon once he has gained the awareness and lost his ignorance. As such, one does not realize Linga (God) through the Linga (icon). The Linga (icon) is simply a stone carved out of a larger stone. It does not offer anything if the awareness for what it stands for is forgotten.

The second line of the Vachana says that one attains the awareness (fruitfulness) through Linga (God), but not through offering fruits and chanting.  Siddarameswara is emphasizing that offering fruits and flowers and continuous chanting does not take one towards realization of God. 

The third line provides the meaning of Jangama as that which is not static. We have said that the Jangama is a realized ascetic who has taken the vow of spreading his realization to the community at large by moving from disciple to disciple. Siddarameswara interprets Jangama as the non-static awareness, meaning that the knowledge and what one knows should not stay static; it should continue to improve upon itself. One should not assume that he/she knows it all. The thirst for enhancing one’s awareness and knowledge should continue forever.  Siddarameswara says that one attains salvation by being dynamic. Moksha (salvation) is the ultimate state. As such it can be viewed as static.  Siddarameswara says that static nature does not lead to salvation.

It is said that Siddarameswara was a builder of temples and tanks. He was an avid worshipper of the static form of Shivalinga in these temples. He believed that building tanks as offering immense service to the community since these tanks became sources of water for the community.  Once Allama Prabhu meets him and makes him aware of a higher cause than just being a philanthropic citizen of the community. Siddarameswara takes Allama Prabhu as his Guru. This Vachana seems to illustrate his own experience and journey towards the realization of the ultimate principle.

Let us be aware and dynamic!

 KANNADA COMMENTARY

ಇದು ಸಿದ್ಧರಾಮೆಶ್ವರರ ಚಿಕ್ಕದಾದ ಆದರೆ ಬಹಳ ಸುಂದರವಾದ ಮತ್ತು  ಆಳವಾದ ಅರ್ಥವನ್ನು ಸುಲಭವಾಗಿ ತಿಳಿಸುವ ವಚನ. ಈ ವಚನದ ಮೊದಲನೆ ಸಾಲೇ ನಮ್ಮನ್ನು ಯೋಚಿಸಲು ಹಚ್ಚುತ್ತದೆ. “ಗುರುವಿನಿಂದ ಲಿಂಗವ ಕಂಡೆನಲ್ಲದೆ ಲಿಂಗದಿಂದ ಲಿಂಗವನ್ನು ಕಾಣಲಿಲ್ಲಯ್ಯಾ” ಎನ್ನುತ್ತಾರೆ ಅವರು. 

ದೇವರ ಕುರುಹಾದ ಲಿಂಗವನ್ನು ಕೈಯಲ್ಲಿ ಹಿಡಿದು ಕೇವಲ ಬಾಹ್ಯ ಪೂಜೆ ಮಾಡುವುದರಿಂದ ನಿಜವಾದ ಲಿಂಗವು (ಅರಿವು) ಕೈಗೂಡಲಿಲ್ಲ. ಗುರುವಿನ ಕಾರುಣ್ಯದಿಂದ ಮಾತ್ರ ಅದು ನನಗೆ ಲಭ್ಯವಾಯಿತು ಎನ್ನುತ್ತಾರೆ. ಲಿಂಗವನ್ನು ಕೈಯಲ್ಲಿ ಇಟ್ಟುಕೊಂಡು ಘಂಟಾನುಗಟ್ಟಲೆ ಪೂಜೆ ಮಾಡುವುದರಿಂದ ಯಾವ ಲಾಭವೂ ಇಲ್ಲ. ಎಷ್ಟೇ ಆದರು ಅದು ಕೇವಲ ಜೀವವಿಲ್ಲದ ಕಲ್ಲಿಂದ ಕಟೆದ ಲಿಂಗ. ಅದು ದೇವರ ಕುರುಹು ಮಾತ್ರ, ಆ ಕುರುಹಿನ ಹಿಂದೆ ಇರುವ ಅರಿವನ್ನು ತೋರಿಸಿ ಕೊಟ್ಟವನು ಗುರು. ಆದ್ದರಿಂದ ಆ ಗುರುವಿನಿಂದ ನಾನು ಲಿಂಗವನ್ನು ಕಂಡುಕೊಂಡೆ ಎನ್ನುತ್ತಾರೆ ಸಿದ್ಧರಾಮೇಶ್ವರರು. ಇಲ್ಲಿ “ಗುರು” ಎಂಬುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹು ಮುಖ್ಯ.  ಸಿದ್ಧರಾಮೇಶ್ವರರ ಜೀವನದಲ್ಲಿ ಅಲ್ಲಮರು, ಒಂದು ರೀತಿಯಿಂದ ಮೊದಲ ಗುರುಗಳಾಗಿ ಬಂದರು. ಅವರು ದೀಕ್ಷೆ ಕೊಟ್ಟ ಗುರುಗಳಲ್ಲ. ಆದರೂ ಲೋಕಕಲ್ಯಾಣವೇ ಎಲ್ಲವೂ ಅಲ್ಲ ಎಂಬ ಅರಿವಿನ ಕಡೆಗೆ ಅವರ ಮನವನ್ನು ತಿರುಗಿಸಿದವರು ಅಲ್ಲಮರು. ಅವರಿಂದ ಸಿದ್ಧರಾಮರ  ಆಂತರ್ಯದಲ್ಲಿ ಉದಿಸಿದ ಜ್ಞಾನ, ಪ್ರತಿಯೊಂದನ್ನು ಒರೆಗೆ ಹಚ್ಚಿ ಸತ್ಯವನ್ನು ಕಂಡುಕೊಳ್ಳುವ ಗುಣ, ಯಾವುದನ್ನೂ ಯಾಂತ್ರಿಕವಾಗಿಮಾಡದೆ, ಸದಾ ಎಚ್ಚರದಿಂದಿರುವ ರೀತಿ, ಇದಕ್ಕಿಂತ ಹೆಚ್ಚಿನದು. ಅದು ನಿಜವಾದ ಗುರು, ಗುರು ತತ್ವ. ಅದರಿಂದಲೇ ಅವರಿಗೆ ಲಿಂಗದ ಜ್ಞಾನವಾಯಿತು. ಅವರು,ಇನ್ನೂ ಮುಂದುವರಿದು, ಅಂತಹ, ಅಂದರೆ ಆ ಗುರು ತೋರಿಸಿದ ಲಿಂಗದ ಮುಖಾಂತರ ನಾನು “ಫಲಪದಂಗಳ”ನ್ನು ಪಡೆದೆನೆ ಹೊರತು “ಫಲಪದಂಗಳಿಂದ” “ಫಲಪದಗಳ”ನ್ನು ಕಾಣಲಿಲ್ಲ ಎನ್ನುತ್ತಾರೆ. ಇಲ್ಲಿ ಮೊದಲನೆ ಸಲ ಬರುವ “ಫಲಪದಂಗಳು” ಎಂದರೆ, ಕುರುಹಿನ ಹಿಂದಿರುವ ಆ ಪರಮತತ್ವದ ಅರಿವು. ಗುರುವು ತೋರಿಸಿಕೊಟ್ಟ ಆ ವಿಶೇಷವಾದ ಲಿಂಗದ ಮುಖಾಂತರ  ಉಂಟಾಯಿತು, ಅರಿವೆಂಬ ಫಲ, ಅಜ್ಞಾನದ ಪದ ಹೋಗಿ ಜ್ಞಾನದ ಪದ ಪ್ರಾಪ್ತಿಯಾಯಿತು  ಎನ್ನುತ್ತಾರೆ. ಎರಡನೆ ಸಲ ಬರುವ “ಫಲಪದಂಗಳು” ಎಂಬ ಪದಕ್ಕೆ “ಹಣ್ಣು ಹಂಪಲು ಮತ್ತು ಸ್ತುತಿಪದ್ಯಗಳೆಂ”ಬ ಅರ್ಥವಿರುವುದು.  ಲಿಂಗಕ್ಕೆ ಬಾಹ್ಯ ಫಲಗಳನ್ನು, ಹಣ್ಣು ಹಂಪಲುಗಳನ್ನು ಅರ್ಪಿಸುವುದರಿಂದ ಮತ್ತು ಪದಗಳು ಅಂದರೆ ಸ್ತುತಿ ಪದ್ಯಗಳ ಮೂಲಕ ಪೂಜಿಸುವುದರಿಂದ ಅರಿವು ಉಂಟಾಗುವುದಿಲ್ಲವೆನ್ನುತ್ತಾರೆ.  “ಜಂಗಮದಿಂದ ಮೋಕ್ಷವ ಕಂಡೆನಲ್ಲದೆ ಮೋಕ್ಷದಿಂದ ಮೋಕ್ಷವ ಕಾಣಲಿಲ್ಲಯ್ಯಾ” ಎನ್ನುತ್ತಾರೆ. “ಜಂಗಮ”  ಎಂದರೆ ಸದಾ ಚಲಿಸುವಂತಹದು, ನಿಂತ ನೀರಿನಂತಲ್ಲದ್ದು. ನವ ನವೀನವಾದದ್ದು. ಈ ಹುಟ್ಟು ಸಾವಿನ ಚಕ್ರದಿಂದ ಮುಕ್ತಿಯನ್ನು  ಪಡೆಯ ಬೇಕಾದರೆ ಸದಾ ಬುದ್ಧಿ, ಮನಸ್ಸು ಜಾಗೃತವಾಗಿರಬೇಕೇ ಹೊರತು ಒಂದು ಸಲ ಯವುದನ್ನೋ ಅರಿತುಕೊಂಡು ಅದೇ ಕೊನೆ ಎಂದು ನಿರ್ಣಯಿಸಿ ಅಲ್ಲಿಯೇ ನಿಂತುಬಿಡುವುದಲ್ಲ. ಆ ಎಚ್ಚರವೇ ಜಂಗಮ. ಈ ಜಂಗಮ ತತ್ವದಿಂದಲೇ ಬಿಡುಗಡೆ ಸಾಧ್ಯ. ಅಂತಹ ಜಂಗಮ ತತ್ವದಿಂದ ಮೋಕ್ಷವ ಪಡೆದೆ ಎನ್ನುತ್ತಾರೆ. ಇಲ್ಲಿಯೂ ಸಹ “ಜಂಗಮ” ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವದು ಮುಖ್ಯ. ವಿಭೂತಿ, ರುದ್ರಾಕ್ಷಿ, ಕಾವಿ ಧಾರಿಯಾದ ವ್ಯಕ್ತಿಯನ್ನು ಮಾತ್ರ ಜಂಗಮವೆಂದುಕೊಂಡರೆ ಅದು ಅಜ್ಞಾನದ ಪರಮಾವಧಿ.  ಜಂಗಮ ತತ್ವ ಅರಿಯುವುದು ಮುಖ್ಯ. ಯಾಂತ್ರಿಕತೆಯನ್ನು ತ್ಯಜಿಸಿ ಸದಾ ಎಚ್ಚರದಿಂದಿರುವುದು ಜಂಗಮ ತತ್ವ. ಇದರಿಂದಲೇ  ಬಿಡುಗಡೆ ಸಾಧ್ಯ. ಆಮೇಲೆ ಸಿದ್ಧರಾಮರು “ಮೋಕ್ಷದಿಂದ ಮೋಕ್ಷವಲ್ಲ” ಎನ್ನುತ್ತಾರೆ. ಏನು ಹಾಗೆಂದರೆ. “ಲಿಂಗದ ಬಾಹ್ಯ ಪೂಜೆಯಿಂದ, ಸ್ತುತಿಗಳಿಂದ, ಫಲಪುಷ್ಪಗಳಿಂದ, ಗಂಧ, ದೀಪ ಧೂಪಗಳಿಂದ ತಪ್ಪದೆ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಬಲವಾಗಿ ನಂಬಿ ಆ ನಂಬಿಕೆಯಿಂದ ಚಲಿಸದೆ, ಅದರಲ್ಲಿಯೇ ಮುಳುಗಿರುವುದರಿಂದ ಮೋಕ್ಷ ಸಿಗುತ್ತದೆ ಎಂಬುದು ಸಾಮಾನ್ಯವಾದ ಒಂದು ನಂಬಿಕೆ.ಇಂತಹ ನಾನಾ ನಂಬಿಕೆಗಳು ಜನರಲ್ಲಿ ಪ್ರಚಲಿತವಾಗಿವೆ. ಆದರೆ ಅವೆಲ್ಲವುಗಳಿಂದ ಅದು ಖಂಡಿತ ಸಾಧ್ಯವಿಲ್ಲ ಎನ್ನುತ್ತಾರೆ ಸಿದ್ಧರಾಮರು. ಅಂತಹುದರಿಂದ ನಾನು ಮೋಕ್ಷವನ್ನು ಕಾಣಲಿಲ್ಲಯ್ಯ ಎನ್ನುತ್ತಾರೆ. ಮೊದಲು ಸ್ಥಾವರ ಪೂಜೆಯಲ್ಲಿ ಮತ್ತು ಕೆರೆ ಅರವಟ್ಟಿಗೆಗಳನ್ನು ಕಟ್ಟಿಸಿ ಲೋಕಾಲ್ಯಾಣದ ಕಾರ್ಯದಲ್ಲಿ ನಿರತರಾದವರು ಅದರ ಸೀಮಿತ ಫಲವನ್ನು ಅರಿತು ಲಿಂಗದ ನಿಜವಾದ ಅರ್ಥವನ್ನು ಕೈಗೂಡಿಸಿಕೊಂಡ ಸಿದ್ಧರಾಮರು ತಮ್ಮ ಸ್ವಂತ ಅನುಭವವನ್ನೇ ಇಲ್ಲಿ ಹೇಳಿದ್ದಾರೆ. 

Friday, October 19, 2012

Vachana 112: Kaayave Peethike – Icons


ಕಾಯವೆ ಪೀಠಿಕೆ ಲಿಂಗವೆ ಪ್ರಾಣವಾಗಿರಲು,
ಬೇರೆ ಮತ್ತೆ ಕುರುಹೇಕಯ್ಯಾ?
ಕುರುಹುವಿಡಿದು ಕೂಡುವ ನಿರವಯವುಂಟೆ? ಜಗದೊಳಗೆ
ನಷ್ಟವ ಕೈಯಲಿ ಹಿಡಿದು ದೃಷ್ಟವ ಕಂಡೆಹೆನೆಂದಡೆ
ಕಪಿಲಸಿದ್ಧಮಲ್ಲಿನಾಥಯ್ಯನು ಸಾಧ್ಯವಹ ಪರಿಯ ಹೇಳಾ ಪ್ರಭುವೆ.

TRANSLITERATION

kaayave pIThike liMgave praaNavaagiralu,
bEre matte kuruhEkayyaa?
kuruhuviDidu  kUDuva niravayavuMTe? jagadoLage,
naShTava kaiyali hiDidu dRuShtava kaMdeheneDade
kapilasiddhamallinaaThayyanu saadhyavahaa pariya hELaa prabhuve.

CLICK HERE TO READ-ALONG:
http://youtu.be/l5P8LOJDJ0E

TRANSLATION (WORDS)

kaayave  ( when the body itself)  pIThike ( is the seat)  liMgave  ( when Linga the icon it self) praaNavaagiralu,(is life, breath)
bEre (other)  matte (again)  kuruhEkayyaa? (why  other icon)
kuruhuviDidu  (through the icon)  kUDuva  (uniting) niravayavuMTe? (is there a formless) jagadoLage (in the world),
naShTava (destroyable)  kaiyali  (in hand)  hiDidu (holding) dRuShtava  (that which is to be seen, perceived) kaMDeheneMdaDe ( if one says “I will see”)
kapilasiddhamallinaaThayyanu  (Kapilasiddhamallinathayya)   saadhyavahaa pariya (how is it possible) hELaa prabhuve.(say Oh Prabhu, Allama Prabhu)

TRANSLATION

When the body is the seat and the life breath is the Linga (icon),
Sir, where is the need for another icon?
Can the formless be united with through the icon, in this world?
Holding the destroyable (icon) in hand, if one says “I will see that which is to be perceived (to be seen)”,
Pray tell Oh Prabhu (Allama Prabhu)! how is it possible uniting with the Lord Kapilasiddhamallinathayya?

COMMENTARY

In this Vachana, Sharana Siddarameswara continues with his thoughts on the role of icon from the previous Vachana where he said that the icon is not needed (becomes useless) once the devotee gains the awareness of the Lord within. He says that the body is the seat of the Linga(icon, symbol of God) and the life breath (Prana) is the Linga(icon). As such, where is the need for another icon? How can an icon unite one with the formless?  He questions as to how one can say that he/she has seen that to be seen ( perceived) and imperishable, holding a perishable icon in the hand. Siddarameswara is addressing Allama Prabhu to confirm his thoughts.

An icon is just an icon. It is perishable. One has to go past it. If one holds on to the icon, he/she will not perceive the omniscient, formless principle. Uniting with Him requires a separation from the icon.
Icons, idols and the rituals associated with them may be needed to develop the initial awareness of the concept of God, i.e. for one to become God minded. But, one has to go past these and realize the God within.

Let us not quit moving inwards!

KANNADA COMMENTARY

ಹಿಂದಿನ ವಚನದ  ಭಾವವೇ ಇಲ್ಲಿಯೂ ಮುಂದುವರಿಯುತ್ತದೆ. ಈ ವಚನದಲ್ಲಿ ಸಿದ್ಧರಾಮರು ಕುರುಹಿನ ಸ್ಥಾನವನ್ನು, ತಿಳಿಸುತ್ತಿದ್ದಾರೆ. ಅವರು ಹೇಳುತ್ತಾರೆ; ಈ ದೇಹವೆ ಲಿಂಗದ (ದೇವರ) ಪೀಠವಾಗಿದೆ. ಮತ್ತು ಪ್ರಾಣವೇ ಲಿಂಗವಾಗಿದೆ. ಅದೇ ಮುಖ್ಯ. ಹಾಗಿರುವಾಗ ಬೇರೆ ಕುರುಹು ಏಕೆ ಬೇಕು? ಈ ಮೂಲಕ ಅವರು ನಮ್ಮ ದೇಹವನ್ನೇ ದೇಗುಲವಾಗಿಸಬೇಕು ಎಂಬುದನ್ನು ಹೇಳುತ್ತಿದ್ದಾರೆ. ಪ್ರಾಣವೆ ಲಿಂಗವಾಗಿರುವಾಗ ಅದು ಕುಳಿತಿರುವ ಈ ದೇಹವು ಅದರ ಪೀಠವಾಗುತ್ತದೆ. ಇಲ್ಲಿ ಲಿಂಗ ಯಾವುದರ ಕುರುಹಾಗಿದೆಯೋ ಆ ಮೂಲ ವಸ್ತು ಇಲ್ಲಿಯೇ ಇರುವಾಗ ಆ ಬಾಹ್ಯ ಕುರುಹಿನ ಅವಶ್ಯಕತೆ ಇದೆಯೆ? ಎನ್ನುವ ಪ್ರಶ್ನೆ ಕೇಳುತ್ತಾರೆ. ಕುರುಹಿನ ಮೂಲಕ  ಆ ಅಖಂಡವಾದುದನ್ನು, ನಿರವಯವಾದುದನ್ನು, ಅವಯವಗಳಿಲ್ಲದಂತಹ ಆ ನಿರಾಕಾರವಾದುದನ್ನು ಕೂಡುವುದು ಸಾಧ್ಯವೆ?  ಕಾಲಾಂತರದಲ್ಲಿ ನಷ್ಟವಾಗುವ ಲಿಂಗವನ್ನು ಕೈಯಲ್ಲಿ  ಹಿಡಿದುಕೊಂಡು  ಅವಿನಾಶಿ ತತ್ವವನ್ನು ಕಾಣುವೆನೆಂದರೆ ಹೇಗೆ ಸಾಧ್ಯವಾಗುವುದು ಹೇಳು ಎನ್ನುತ್ತಾರೆ.  ಕುರುಹು ಯಾವ ಉಪಯೋಗಕ್ಕೂ ಬರುವುದಿಲ್ಲ. ಅದನ್ನು ಬಿಡುವುದೆ ಸರಿ. ಏಕೆಂದರೆ ಕುರುಹು ನಷ್ಟವಾಗುವಂತಹುದು, ಅದು ಪ್ರಾಣವಿಲ್ಲದ್ದು, ಅದನ್ನು ಹಿಡಿದರೆ ಎಂದರೆ ಅದರಲ್ಲಿಯೇ ಉಳಿದರೆ ಅವಿನಾಶಿ ತತ್ವವನ್ನು ನೋಡಲು ಸಾಧ್ಯವಿಲ್ಲ.  ಕೈಯಲ್ಲಿ  ನಾಶ ಹೊಂದುವ ವಸ್ತುವನ್ನು ಹಿಡಿದು ಅದರ ಮೂಲಕ ಅವಿನಾಶಿಯನ್ನು ಕಾಣುತ್ತೇನೆ ಎಂಬುದು ಅರ್ಥವಿಲ್ಲದ್ದು.  ಒಟ್ಟಿನಲ್ಲಿ ಅಖಂಡವಾದುದನ್ನು, ನಿರವಯವಾದುದನ್ನು ಕಾಣಲು ಕುರುಹನ್ನು ಬಿಡಬೇಕಾಗುತ್ತದೆ ಎನ್ನುತ್ತಾರೆ. ಎಲ್ಲಿಯವರೆಗೆ ನಾವು  ಕುರುವಿಗೆ ಅಂಟಿಕೊಂಡಿರುತ್ತೇವೆಯೋ ಅಲ್ಲಿಯವರೆಗೆ ನಾವು ಅಂಧಕಾರದಲ್ಲಿರುತ್ತೇವೆ.  ಅಲ್ಲಿಯವರೆಗೆ ನಮಗೆ ಆ ಅವಿನಾಶಿ ತತ್ವ ಕೈಗೂಡುವುದಿಲ್ಲ. 

Saturday, October 13, 2012

Vachana 111: Kateda Kalla Lingava Maadikottaatha – The Icon


ಕಟೆದ ಕಲ್ಲ ಲಿಂಗವ ಮಾಡಿಕೊಟ್ಟಾತ  ಗುರುವೆಂಬರು;
ಆ ಲಿಂಗವ ಧರಿಸಿದಾತ ಶಿಷ್ಯವೆಂಬರು.
ಕೊಟ್ಟ ಗುರು ದೇಶಪಾಲಾದ;  ಕೊಟ್ಟ ಕಲ್ಲು ಲಿಂಗವೋ?
ಕಲ್ಲಿನ ಕಲ್ಲು ಕಲ್ಲೆಂಬೆಡೆ,  ಲಿಂಗವ ಮಾಡಿಕೊಟ್ಟ;
ಲಿಂಗವೆಂದಡೆ  ಪೂಜಾವಿರಹಿತವಾಯಿತ್ತು, ಪೂಜೆಯಿಲ್ಲದ ಲಿಂಗ ಪಾಷಾಣ,
ಹೋದ ಗುರುವಿನ ಲಿಂಗ ಪಾಷಾಣ ಭೇದಿ; ಭೇದಿಸಿದಡೆ  ಹುರುಳಿಲ್ಲ,
ನದಿಯ ದಾಟುವಲ್ಲಿ ಭೈತ್ರವ ಹಿಡಿದು, ದಾಂಟಿದಂತ್ಯದಲಿ ಬಿಟ್ಟು ಹೋದರು.
ಬಿಟ್ಟ ನಾವೆ ಮತ್ತೊಬ್ಬರಿಗೆ ಲೇಸು., ಈ ಲಿಂಗ ಬರದು ಆರಿಗೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.

 TRANSLITERATION

kaTeda  kalla   limgava  maaDikoTTaata guruveMbaru;
aa liMgava dharisidaata shiShyaveMbaru,
koTTa guru deshapaalaada; koTTakallu liMgavO
kallina kallu kalleMbaDe,  liMgava maaDikoTTa;
liMgaveMdaDe  poojaavirahitavaayittu, poojeyillada liMga paaShaaNa,
hOda guruvina liMga paaShaaNa bhEdi; bhEdisidaDe huruLilla,
nadiyadaaTuvalli bhaitrava hiDidu, daaMTidaMtyadali biTTu hOdaru.
biTTa naave mattobbarige lEsu, I liMga baradu aarige nODaa;
kapilasiddhamallikaarjunaa.
CLICK HERE TO READ-ALONG:
 TRANSLATION (WORDS)
kaTeda  (carved)  kalla (stone)   limgava (God, the Linga)  maaDikoTTaata  (he who made) guruveMbaru (is said to be the Guru The teacher;)
aa  (that) liMgava (Linga)  dharisidaata (he who wares it on) shiShyaveMbaru (is said to be the disciple Shishya),
koTTa ( who gave Linga)  guru ( The teacher ,Guru) deshapaalaada ( went away); koTTa (given)kallu  (stone) liMgavO? (is it a Linga?)
kallina (of the stone) kallu (stone)  kalleMbaDe, (is said to be the stone)  liMgava  (Linga) maaDikoTTa  ( he who made
liMgaveMdaDe (that said  linga)  poojaavirahitavaayittu, (is of no worship)
poojeyillada (without  worship) liMga (the Linga) paaShaaNa, (is a stone,)
hOda (who went away) guruvina  ( of the Guru )liMga  (the Linga) paaShaaNa bhEdi (is penetrable, can pierce through);
bhEdisidaDe (if penetrated, if seen in to)  huruLilla (has no essence),
nadiyadaaTuvalli (while crossing river) bhaitrava ( a ship) hiDidu (taking),
daaMTidaMtyadali (after crossing) biTTu (abandened) hOdaru.( and went)
biTTa (the abandoned)  naave  (boat) mattobbarige (for others)  lEsu,( is good)
I (this)  liMga (Linga)  baradu  (is not of use ) aarige (to anybody) nODaa (you see);
kapilasiddhamallikaarjunaa (Kapilasiddhamallikarjuna)

TRANSLATION 

The one who tranformed the carved stone into a Linga is the Guru (Teacher).
The one who wore the Linga is the disciple.
The Guru who gave Linga, went away,  Is the stone he gave still a Linga?
Although a stone carved out stone is still a stone, he made it in to a Linga;
The Linga now is without worship; Linga without worship is a stone.
The Linga of the Guru who went away is penetrable (seen through),
Penetrating it shows no essence!
One catches a boat to cross a river.
After crossing, he leaves it and goes away!
The boat thus left is useful for others, but the Linga (after seen through) is not of any use, you see! KapilaSiddhaMallikaarjunaa. 
 
COMMENTARY


In this Vachana Sharana Siddarameswara clarifies the roles of Guru (Teacher), Sishya (Disciple) and Linga (the Icon). The role of Guru is to impart knowledge and awareness to his disciple. He transforms a mere stone into Linga (an Icon, Idol or any symbol) and offers it to the disciple, meaning that he has implanted the deep awareness in the disciple. For the disciple, wearing and worshipping the Linga means deepening the knowledge and awareness he just received into the light in his quest for self-realization or finding Him within. Any other type of external worshipping has no meaning.  After offering the Linga, the Guru moves on to other disciples. Once he moves away, if the disciple forgets the worship (i.e. sharpening his awareness) the Linga becomes a stone.  In fact, Siddarameswara implies that the Linga is not needed once the disciple attains awareness. As the icon of awareness the Linga has served its purpose. It is now just a stone. Siddarameswara is urging us to go beyond the symbology offered by the icon, the Linga or an Idol. He is asking us to get away from meaningless rituals and worshipping, instead develop a keen and deep awareness of the God within us and strive to reach the ultimate truth.

 The Vachana ends with a beautiful scenario. A boat is useful to cross a river. Once used, the traveler leaves it on the banks for the other travelers. The boat is useful for others. But, Siddarameswara says that the Linga is not of any use to others, meaning that the awareness is so personal – it is yours, and only yours!


Let us be disciples of the truest kind!

KANNADA COMMENTARY
 

ಈ ವಚನದಲ್ಲಿ ಸಿದ್ಧರಾಮರು, ಗುರು ಎಂದರೆ ಯಾರು? ಗುರುವಿನ ಮಹತ್ವವೇನು? ಲಿಂಗವೆಂದರೇನು? ಅದರ  ಸ್ಥಾನವೆನು? ಎಂಬುದನ್ನು ಬಹಳ ಚೆನ್ನಾಗಿ ವಿವರಿಸುತ್ತಿದ್ದಾರೆ.
“ಕಟೆದ ಕಲ್ಲ ಲಿಂಗವ ಮಾಡಿಕೊಟ್ಟಾತ  ಗುರುವೆಂಬರು;  ಕಲ್ಲನ್ನು ಕಟೆದು ಲಿಂಗ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವುದೇ. ಆದ್ದರಿಂದ ಲಿಂಗವೂ ಕೇವಲ ಕಲ್ಲು. ಆದರೆ ಗುರುವು  ಅದನ್ನು ಅರುಹಿನ (awareness, the ultimate knowledge) ಕುರುಹು (symbol)  ಎಂದು ಹೇಳಿ ಆ ಕುರುಹಿನ ರಹಸ್ಯವನ್ನು ತಿಳಿಸಿ ಅದಕ್ಕೆ ಲಿಂಗದ ಸ್ಥಾನ ಕೊಡುತ್ತಾನೆ. ಗುರುವು ಅದನ್ನು ಧಾರಣೆ ಮಾಡಿಸಿದಾಗ ಅದು ಕೇವಲ ಕಲ್ಲಾಗಿ ಉಳಿಯುವುದಿಲ್ಲ. ಆ ಕಲ್ಲು “ಲಿಂಗ” ವಾಗುತ್ತದೆ. ಆ ರೀತಿಯಾಗಿ ಕಲ್ಲನ್ನು ಲಿಂಗವಾಗಿ ಮಾಡಿಕೊಟ್ಟವನನ್ನು ಗುರುವೆನ್ನುತ್ತಾರೆ. ಮತ್ತು ಆ ಲಿಂಗವನ್ನು ಧರಿಸಿದವನು ಶಿಷ್ಯನೆನ್ನಿಸಿಕೊಳ್ಳುತ್ತ್ತಾನೆ. ಆ ಲಿಂಗದ ರಹಸ್ಯವನ್ನು ತಿಳಿಸಿಕೊಟ್ಟ ಮೇಲೆ ಅಲ್ಲಿ, ಆ ಶಿಷ್ಯನ ಹತ್ತಿರ ಗುರುವಿನ ಕೆಲಸ ಮುಗಿಯಿತು. ಆತನು ಮತ್ತೆ ಬೇರೆಯ ಶಿಷ್ಯರಿಗೆ ಲಿಂಗದ ರಹಸ್ಯವನ್ನು ತಿಳಿಸಿಕೊಡಲು, ಅಂದರೆ ದೇಶದ ಇತರರ ಹಿತಕ್ಕಾಗಿ ಹೊರಟು ಹೋಗುತ್ತಾನೆ, ದೇಶಪಾಲಾಗುತ್ತಾನೆ. ಆದರೆ ಆತ ಕೊಟ್ಟ ಕಲ್ಲನ್ನು ಲಿಂಗವಾಗಿ ಉಳಿಸಿಕೊಳ್ಳುವುದು ಶಿಷ್ಯನ ಕರ್ತವ್ಯ. ಅದರ ಹಿಂದಿನ ರಹಸ್ಯವನ್ನು ಮರೆತರೆ ಅದು ಆತನಿಗೆ ಪುನಃ ಕೇವಲ ಕಲ್ಲಾಗಿ ಉಳಿಯುತ್ತದೆ. ಆ ಲಿಂಗ ಮೊದಲು ದೊಡ್ಡ ಕಲ್ಲಿನಿಂದ ಕಟೆದ ಕೇವಲ ಒಂದು ಚಿಕ್ಕ ಕಲ್ಲಾಗಿತ್ತು. ಅಂದರೆ ಅದು ಶಿಷ್ಯನ ಪಾಲಿಗೆ  ಕಲ್ಲಾಗಿತ್ತು. ಆದರೆ ಅರಿವನ್ನು ಪಡೆದ ಗುರುವು ಅದನ್ನಾತನಿಗೆ ನಿಜವಾದ “ಲಿಂಗ “ ಮಾಡಿಕೊಟ್ಟ. ಆ ನಿಜವಾದ “ಲಿಂಗ ಪೂಜಾವಿರಹಿತವಾಗಿತ್ತು” ಎನ್ನುತ್ತಾರೆ ಸಿದ್ಧರಾಮರು. ಏಕೆಂದರೆ ಆ “ಲಿಂಗ”ಕ್ಕೆ ಈ ಬಾಹ್ಯ ಪೂಜೆಯ ಅವಶ್ಯಕತೆಯಿಲ್ಲ. ಆದ್ದರಿಂದ ಆ ಲಿಂಗದ ರಹಸ್ಯವನ್ನು ಅರಿತವನಿಗೆ ಈ ಲಿಂಗ ಕೇವಲ “ಪಾಷಾಣ” ಅಂದರೆ ಕೇವಲ ಕಲ್ಲು. ಅಂದರೆ ಲಿಂಗದ ನಿಜವಾದ ಅರ್ಥವನ್ನು ತಿಳಿದವನಿಗೆ ಬಾಹ್ಯ ಪೂಜೆಯ ಅವಶ್ಯಕತೆಯಿಲ್ಲ್ಲ. ಮತ್ತು ಕುರುಹಿನ ಅವಶ್ಯಕತೆಯೂ ಇರುವುದಿಲ್ಲ. ಆತನ ಪಾಲಿಗೆ ಬಾಹ್ಯ ಕುರುಹು ಕೇವಲ ಕಲ್ಲು. ಅರಿವಿನ ದಾರಿಯನ್ನು ತೋರಿಸಿ ಹೋದ ಗುರವಿನ “ಲಿಂಗ” ಅಂದರೆ ಆತನ ಅರಿವು “ಪಾಷಾಣ ಭೇದಿ” ಎನ್ನುತ್ತಾರೆ. ಆಂದರೆ ಆ ಗುರುವು ತೋರಿದ ಮಾರ್ಗದಿಂದ ಶಿಷ್ಯ ತಾನು, ಕೇವಲ ಪಾಷಾಣವಾದ ಲಿಂಗದ ರಹಸ್ಯವನ್ನು ಭೇದಿಸಿದನು. ಆ ರಹಸ್ಯವನ್ನು ಭೇದಿಸಿದ ಮಲೆ ಈ ಹೊರ ಕುರುಹಿನಲ್ಲಿ ಯಾವ ಹುರುಳೂ ಇಲ್ಲವೆಂಬುದು ಕಂಡುಬರುತ್ತದೆ.
ಜನರು ನದಿ ದಾಟುವಾಗ ನಾವೆಯನ್ನು ಅವಲಂಬಿಸುತ್ತಾರೆ. ದಾಟಿದ ಮೇಲೆ ಅದನ್ನು ಹಿಂದೆಬಿಟ್ಟು ಮುಂದೆ ಹೋಗುತ್ತಾರೆ.ನದಿ ದಾಟಿದ ಮೇಲೆ ಆ ನಾವೆಯ ಅವಶ್ಯಕತೆಯಿರುವುದಿಲ್ಲ.  ಹಾಗೆ ಹಿಂದೆ ಬಿಟ್ಟ ನಾವೆ ನದಿ ದಾಟ ಬಯಸುವ ಮತ್ತೊಬ್ಬರಿಗೆ ಲೇಸು, ಅದು ಅವರ ಉಪಯೋಗಕ್ಕೆ ಬರುತ್ತದೆ. ಆದರೆ ಲಿಂಗದ ವಿಷಯದಲ್ಲಿ ಹಾಗಲ್ಲ. ಅರಿವನ್ನು ಪಡೆಯಲು ಕೆಲಸಕ್ಕೆ ಬಂದ ಲಿಂಗ ಅರಿವು ಪಡೆದ ಮೇಲೆ ಯಾರ ಕೆಲಸಕ್ಕೂ ಬಾರದು ಎನ್ನುತ್ತಾರೆ ಸಿದ್ಧರಾಮರು.



Friday, October 5, 2012

Vachana 110: Hubbagalella Ubbubbi - The Festival

ಹಬ್ಬಗಳೆಲ್ಲ ಉಬ್ಬುಬ್ಬಿ ಲಿಂಗದ ಹಬ್ಬಕ್ಕೆ ಬಂದಬ್ಬರವ ನೋಡಾ!
ಲಿಂಗದ ಹಬ್ಬ ನಿಮ್ಮ ಬಾಯಿಗೆ ಒಬ್ಬಿಯಲ್ಲದೆ ನಿಮ್ಮ ಜನನಕ್ಕೆ ಹಬ್ಬವೇನೋ?
ಕಬ್ಬಿಲ ಮಬ್ಬುಳ್ಳ  ಕೊಬ್ಬಿಗರಿರಾ!
ಕಪಿಲಸಿದ್ಧಮಲ್ಲಿಕಾರ್ಜುನನರಿಯದಿರ್ದೆಡೆ?

TRANSLITERATION

habbagaLella ubbubbi liMgada habbakke baMdabbbarava nODaa!
liMgada habba nimma baayige obbiyallade nimma jananakke  habbavEnO?
kabbila mabbuaLLa kobbigariraa!
kapilasiddhamallikaarjunanariyadirdeDe?

CLICK HERE TO READ-ALONG:

TRANSLATION (WORDS)
habbagaLella  (all the festivals)  ubbubbi (swollen, heightened, enhanced) liMgada (for God’s) habbakke  (festival)  baMdabbbarava  ( have come with extravaganza) nODaa! (you see)
liMgada (God’s) habba (festival)  nimma (your)  baayige ( to your tongue) obbiyallade (other than sweet meet)
nimma( to your)  jananakke (birth)  habbavEnO? (is it a festival) kabbila mabbuaLLa (dense headed) kobbigariraa!( hauteur, haughty people!)
kapilasiddhamallikaarjunanariyadirdeDe? (if you don’t become aware of kapilasiddhamallikaarjuna)

TRANSLATION

With all the heightened excitement and festivities, look how extravagant these God’s festivals have become!
God’s festival has just become a sweet meet for your tongue, rather than a festival of your birth!
Oh! Dense headed hauteur!
(what good is it) if you don’t become aware of  Lord Kapilasiddha Mallikaarjuna?

COMMENTARY

From this Vachana of Siddarameswara, it is apparent that even in the twelfth century, people celebrated festivals with lot of excitement and extravaganza. The extravagance has taken a much higher level now a days. We spend a lot of money and time on these festivals. We build bigger and bigger idols; our processions get larger and more elaborate; we block city streets to conduct these festivities; we fight to prove that our idol is bigger or more beautiful than other’s. We do all this in the name of God, but we forget Him completely. Siddarameswara says that these festivals have become a means of devouring sweet meets to keep our tongues satisfied. He questions if we ever celebrate festival of our birth. That means awareness of god should become the festival of our life to gain freedom from the cycle of life and death. He uses fairly harsh words in calling one a dense headed hauteur, if he/she just celebrates these festivals without becoming aware of the God. 

The word ‘Kabbila’ means ‘hunter’. A hunter typically spends all his time in hunting animals. He boasts about how large or fierce an animal he killed. He feeds on the animals he hunts and does not think of anything else until the next day or the time his hunger propels him to hunt again. Siddrameswara compares people who simply celebrate festivals without becoming aware of God, to such hunters.

Celebrations and festivities are not wrong by any means. But, concentrating on the extravagance to show off what we have or what we can do; celebrating to prove one is superior to others; just following the rituals in the name of celebrating the God; etc. are not useful. What is most important is the awareness of God and striving to find Him within.

Let us always be aware of what we are celebrating!


KANNADA COMMENTARY

ಈ ವಚನವನ್ನೋದಿ ಹನ್ನೆರಡನೆಯ ಶತಮಾನದಲ್ಲಿಯೂ ಇಂದಿನಂತೆಯೇ ಜನರು ಹಬ್ಬಗಳನ್ನು ಶ್ರೀಮಂತಿಕೆಯ ಕೊಬ್ಬಿನಿಂದ, ವಿಜೃಂಭಣೆಯಿಂದ ಆಚರಿಸುತ್ತಿದ್ದರೆಂದು ತಿಳಿದು ಬರುತ್ತದೆ. ಈಗೀಗಂತೂ ಈ ಸಂಪ್ರದಾಯದ  ಹಾವಳಿ ಅತಿಯಾಗಿದೆ. ಹಿಂದೆ ಅದಕ್ಕೆ  ಬಡತನದ ಕಡಿವಾಣವಿತ್ತು. ಇಂದು ದುಡ್ಡಿನ ಅಬ್ಬರದೊಂದಿಗೆ ಹಬ್ಬಗಳ ಆಬ್ಬರವೂ ಹೆಚ್ಚಾಗಿದೆ. ಅಂತಹ ಅಬ್ಬರದ ಆಚರಣೆಯಿಂದ ಉಂಟಾಗುವ ಲಾಭವೇನೂ ಇಲ್ಲವೆಂದು ತಿಳಿಸುತ್ತಿದ್ದಾರೆ ಈ ವಚನದಲ್ಲಿ ಸಿದ್ಧರಾಮರು.

“ಹಬ್ಬಗಳೆಲ್ಲ ಉಬ್ಬುಬ್ಬಿ”  ಎಂದರೆ ಜನರು ಹಬ್ಬಗಳನ್ನು ಉಬ್ಬುಬ್ಬಿ ಉತ್ಸಾಹದಿಂದ ಅತಿ ಹಿಗ್ಗಿನಿಂದ ಆಚರಿಸುತ್ತಾರೆ. ಲಿಂಗದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಹಬ್ಬಗಳನ್ನು ಅಬ್ಬರದಿಂದ ಆಡಂಬರದಿಂದ ಆಚರಿಸುತ್ತಾರೆ. ಇಂತಹ ಹಬ್ಬಗಳಿಂದ ಏನು ಪ್ರಯೋಜನವೆಂದು ಕೇಳುತ್ತಾರೆ. ಅವು “ಬಾಯಿಗೆ ಒಬ್ಬಿ” ಅಷ್ಟೆ. ಹಬ್ಬಗಳ ನೆಪದಲ್ಲಿ ಒಬ್ಬಟ್ಟು ತಿನ್ನಲು ದೊರೆಯುತ್ತದೆ. ನಾಲಗೆಯ ಚಪಲ ತಾತ್ಕಾಲಿಕವಾಗಿ ತೀರುತ್ತದೆ (ಹೆಚ್ಚುತ್ತದೆ).  ಅದಕ್ಕಿಂತ ಹೆಚ್ಚಿನ ಲಾಭವೇನೂ ಇಲ್ಲ. ಹಬ್ಬಗಳ ಉದ್ದೇಶವಷ್ಟೇಯೆ? ಲಿಂಗ ಪೂಜೆ ಅಥವಾ ದೇವರ ಆಡಂಬರದ ಪೂಜೆಯೇ ಗುರಿ. ಅಷ್ಟೆಯೆ?  ಹೋಳಿಗೆ ಮಾಡಿ ತಿನ್ನುವುದೇ ಏಕೈಕ ಉದ್ದೇಶವೆ?  ಎಂದು ನಮ್ಮನ್ನೇ ನಾವು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ ಸಿದ್ಧರಾಮರು. ಹಬ್ಬಗಳ ಉದ್ದೇಶ ಅಷ್ಟೆಯಾದರೆ ಅದಕ್ಕೆ ಪೂಜೆಯ ನೆಪವೇಕೆ? ಹಾಗೆಯೇ ಹೋಳಿಗೆ ಮಾಡಿಕೊಂಡು ತಿಂದು ಬಾಯಿಯ ಚಪಲ ತೀರಿಸಿಕೊಳ್ಳಬಹುದಲ್ಲ? ಆದರೆ ಸಾಮಾನ್ಯವಾಗಿ ಜನರು ಹಬ್ಬಕ್ಕೇ ಹೋಳಿಗೆ ಮಾಡುತ್ತಾರೆ ಮತ್ತು ಅಂದು ಪೂಜೆ ಮುಖ್ಯವಾಗಿರುತ್ತದೆ. ಅಂದರೆ ಅದಕ್ಕೇನೋ ಹೆಚ್ಚಿನ ಅರ್ಥವಿರಬೇಕು? ಅದು ಯಾವುದು? ಅದನ್ನೇ ಮುಂದೆ “ ನಿನ್ನ ಜನನಕ್ಕೆ ಹಬ್ಬವೇನೋ” ಎಂದು ಕೇಳುವುದರಮೂಲಕ ನಮ್ಮ ಗಮನ ಆ ಕಡೆಗೆ ಹೋಗುವಂತೆ ಮಾಡುತ್ತಾರೆ.  ಜನನಕ್ಕೆ ಹಬ್ಬವೆಂದರೇನು? ನಾವು ದೇವರನ್ನು ಪೂಜಿಸುವುದು ನಮ್ಮ ಜನ್ಮಕ್ಕೆ
ಹಬ್ಬವಾಗಬೇಕು. ಅಂದರೆ ಅದರಿಂದ ನಾವು ಹುಟ್ಟು ಸಾವಿನ ಚಕ್ರದಿಂದ ಹೊರಬರಬೇಕು ಎನ್ನುವ ಅರ್ಥ.  ಆಗ ಅದು ನಿಜವಾದ ಹಬ್ಬವಾಗುತ್ತದೆ, ನಿಜವಾದ ಪೂಜೆಯಾಗುತ್ತದೆ. ಅಂದರೆ, ಆ ಪೂಜೆ ನಮಗೆ ಜ್ಞಾನೋದಯದ  ಸಾಧನವಾಗಬೇಕು. ಆಗ ಅದು ನಿಜವಾದ ಹಬ್ಬವಾಗುತ್ತದೆ. ಇಲ್ಲದಿದ್ದರೆ “ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ” ಆಗುತ್ತದೆ. ಈ ಅರ್ಥಬರುವ ಮಾತನ್ನು ಮಾತ್ರ ಹೇಳಿ ನಿಲ್ಲಿಸುವುದಿಲ್ಲ ಸಿದ್ಧರಾಮರು. ಈ ರೀತಿಯಾಗಿ  ಹಬ್ಬಗಳನ್ನು ಆಡಂಬರದಿಂದ ಆಚರಿಸಿ ತೃಪ್ತರಾಗಿ ಉಬ್ಬಿಹೋಗುವವರನ್ನು ಕುರಿತು “ಕಬ್ಬಿಲ ಮಬ್ಬುಳ್ಳ ಕೊಬ್ಬಿಗರಿರಾ” ಎಂದು ಹೇಳುತ್ತಾರೆ. ಕಬ್ಬಿಲ ಅಂದರೆ ಬೇಡ. ಬೇಡನು ಸದಾ ಬೇಟೆಯಿಂದ  ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆಯಲ್ಲಿರುತ್ತಾನೆ. ಅದೇ ಆತನ ಜೀವನದ ಗುರಿಯಾಗಿರುತ್ತದೆ. ಒಳ್ಳೆಯ ಬೇಟೆಯಾಡಿ ಚೆನ್ನಾಗಿ ತಿಂದು, ತಾನು ಮಾಡಿದ ಕೆಲಸದಿಂದ “ನಾನು ಇಂತಿಂತಿಹ ಪ್ರಾಣಿಯನ್ನು ಹೀಗೆ ಹೀಗೆ ಬೇಟೆಯಾಡಿದೆ” ಎಂದುಕೊಂಡು ತೃಪ್ತನಾಗಿ ಕೊಬ್ಬುವುದೇ ಆತನ ಪರಿ. ಅದನ್ನು ಬಿಟ್ಟು ಬೇರೆ ಯಾವುದರ ಕಡೆಗೂ ಆತನ ಮನಸ್ಸು ಹೋಗುವುದಿಲ್ಲ. ಆತನ ಬುದ್ಧಿಗೆ ಮಬ್ಬು ಕವಿದಿರುತ್ತದೆ. ದೇವರ ಹೆಸರಿನಲ್ಲಿ ಆಡಂಬರದ ಪೂಜೆಮಾಡಿ ಹೋಳಿಗೆಯನ್ನು ಮೆದ್ದು ಸಂತಸದಲ್ಲಿ ಮುಳುಗಿರುವವರು ಸಹ ಆತನಂತೆಯೇ,ಆತನಲ್ಲಿ ಮತ್ತು ಬೇಡನಲ್ಲಿ ಯಾವ ಅಂತರವೂ ಇಲ್ಲ  ಎಂದು ಹೇಳುವುದರ ಮೂಲಕ ನಮ್ಮ ತಪ್ಪನ್ನು ಸ್ಪಷ್ಟವಾಗಿ ತೋರಿಸಿ ಕೊಡುತ್ತಿದ್ದಾರೆ. ಕಪಿಲಸಿದ್ಧಮಲ್ಲಿಕಾರ್ಜುನನ್ನು ಅರಿಯದೆ ಕೇವಲ ಹಬ್ಬಗಳ ಆಡಂಬರಗಳಲ್ಲಿ ಮುಳುಗಿದ್ದರೆ ನಾವು ಕೊಬ್ಬಿದ, ಕೇವಲ ಹೊಟ್ಟೆ ತುಂಬಿಸಿಕೊಳ್ಳುವ, ನಾಲಗೆ ಚಪಲ ತೀರಿಸಿಕೊಳ್ಳುವ ಮಬ್ಬು ಕವಿದ ಬೇಟೆಗಾರನಂತೆ ಎಂದು ಹೇಳುತ್ತಾರೆ ಸಿದ್ಧರಾಮೇಶ್ವರರು. ಬೇಡನ ಬುದ್ಧಿಗೆ ಮಬ್ಬು ಕವಿದಿರುವ ಕಾರಣ ಆತನಿಗೆ ತಾನು ಮಾಡುತ್ತಿರುವ ಹಿಂಸೆ ತಪ್ಪೆಂದು ತೋರುವುದಿಲ್ಲ.  ಅದೇ ರೀತಿಯಾಗಿ ಪೂಜೆ ಮಾಡುವವನಿಗೆ ಆಡಂಬರದ ಹೆಸರಿನಲ್ಲಿ ನಡೆಸುವ ಪ್ರಾಕೃರ್ತಿಕ ಹಾನಿಯ ಕಡೆಗೆ, ಅಂತಹ ಪೂಜೆಯ ನಿರರ್ಥಕತೆಯ ಕಡೆಗೆ ಗಮನ ಹರಿಯುವುದಿಲ್ಲ. ಇಬ್ಬರಿಗೂ ತಾವು ಮಾಡುತ್ತಿರುವುದು ಸರಿ ಎಂಬ ಮಬ್ಬು ಕವಿದಿರುತ್ತದೆ.