Saturday, July 27, 2013

Vachana 152: Hasiya Bisilane Koydu - The way of the true Devotee

VACHANA IN KANNADA

ಹಸಿಯ ಬಿಸಿಲನೆ ಕೊಯ್ದು ಪದಾರ್ಥವ ಮಾಡಿ
ಉಸಿರ ಎಸರಲ್ಲಿ ಬಾಗುತ್ತಿಪ್ಪರಯ್ಯಾ,
ಇಕ್ಕಲಿಲ್ಲಾರಿಗೆಯೂ ಎರೆಯಲಿಲ್ಲಾರಿಗೆಯೂ
ಭಿಕ್ಷಾವೃತ್ತಿಗಳು ಬಂದು ಬೇಡುತ್ತಿಪ್ಪರಯ್ಯಾ
ನಿಮ್ಮ ಒಕ್ಕುದ ಮಿಕ್ಕುದ ಉಡಿಯಲ್ಲಿ ಕಟ್ಟಿಕೊಂಡಿಪ್ಪರಯ್ಯಾ
ಗುಹೇಶ್ವರ ನಿಮ್ಮ ಶರಣರು!

TRANSLITERATION
hasiya bisilane koydu padaarthava maaDi
usira esaralli baaguttipparayyaa
ikkalilllaarigeyU  ereyalillaarigeyU
bhikShaavRuttigaLu baMdu bEduttpparayyaa
nimma okkuda mikkuda uDiyalli kaTTikoMDipparayyaa
guhEshvara nimma sharaNaru!

CLICK HERE FOR A RECITATION:


TRANSLATION (WORDS)
hasiya (Raw)  bisilane (sunshine)   (immature knowledge) koydu  (cut) (taking  and disciplining it) padaarthava (fit material)  maaDi (prepared) (making it ready for the God)
usira (breath)  esaralli (hot  water) (stopping from hindrance) )  baaguttipparayyaa (are bowing, Sir)
ikkalilllaarigeyU(didn’t give it to anybody)  ereyalillaarigeyU (didn’t let it flow anywhere)
bhikShaavRuttigaLu (begging elements)  (the senses) baMdu (having come) bEduttpparayyaa (are begging, Sir) 
nimma (to You) okkuda (offered)  mikkuda (remaining)  (that which has been offered) uDiyalli (in the lap) kaTTikoMDipparayyaa (have carefully kept, Sir)
guhEshvara  (Oh! Guheshvara )  nimma (your) sharaNaru! (devotees)

VACHANA IN ENGLISH

Having cut the raw Sunshine and prepared the material fit for you,
They are boiling it in the hot water called breath, and bowing Sir!
Did not give it to anybody, did not let it flow anywhere,
The begging elements having come are begging, Sir!
They have tied the remainder of that which has been offered to you in their lap, Sir!
Oh! Guhesvara, your devotees! 

COMMENTARY

 This is another very cryptic Vachana from Allama Prabhu describing the ways of true devotees who ripen their raw minds through their intense and unwavering journey through the spiritual path to reach God. Once reached, they will never leave that abode! 

The first line of the Vachana refers to the immature mind (or knowledge) to raw Sunshine. The devotee ripens that immature mind and gets it ready to be offered to God, meaning that he controls the ever wandering mind and makes it suitable for offering to God.  The second line refers to the devotee stopping all hindrances (boiling in hot water called breath) and becoming completely God minded and devoting self to knowing and realizing God. The devotee is now bowing to God with his utmost respect. This offering to God will come back to him as the blessing or grace (prasaada).

The third line says that the devotee would not share this prasaada with anyone who is not God minded enough and this prasaada would not flow to any place that is not the abode of God. Essentially, the sole focus of the devotee is God and his mind is not shared with any materialistic aspect.

The fourth line refers to senses as begging elements that forever tempt the individual into worldly ways. The devotee steers clear of these elements.

The fifth line says that the devotee holds the prasaada tightly in his lap, meaning that he cherishes the blessing from Him and holds it close to his heart forever.  

The mind of the common man is raw or immature. He cannot distinguish between the right and the wrong. He typically sways towards immediate gratification rather than what provides him with the true and permanent bliss. The ways of true devotees are different from this. They control and sanitize their mind and fix it in God. Their mind stays with God and nothing else. Once they offer their mind to God, it becomes his blessing (prasaada). They will not share it with anyone else, meaning that the mind does not wander from this state of unity with God. The sense organs cannot tempt them anymore. The devotee stays in this blissful state forever. 

Let us go past the immediate gratification to the permanent bliss! 

COMMENTARY IN KANNADA

ಅರ್ಥ:

ಹಸಿಯ ಬಿಸಿಲನೆ (ಅಪಕ್ವವಾದ ಜ್ಞಾನ)  ಕೊಯ್ದು (ತೆಗೆದುಕೊಂಡು,ಸಾಧನೆಗೆ ತೊಡಗಿಸಿ)  ಪದಾರ್ಥವ ಮಾಡಿ ( ಪಕ್ವಮಾಡಿ, ಯೋಗ್ಯವನ್ನಾಗಿ ಮಾಡಿ)
ಉಸಿರ ಎಸರಲ್ಲಿ (ಉಸಿರೆಂಬ ಬಿಸಿ ನೀರಲ್ಲಿ, ಮನಸ್ಸನ್ನು ನಿರೋಧಿಸಿ) ಬಾಗುತ್ತಿಪ್ಪರಯ್ಯಾ, (ದೇವರಿಗೆ ನಮಿಸುತ್ತಿರುವರು)
ಇಕ್ಕಲಿಲ್ಲಾರಿಗೆಯೂ (ಆ ಮನಸ್ಸನ್ನು ಯಾರಿಗೂ ಕೊಡಲಿಲ್ಲ) ಎರೆಯಲಿಲ್ಲಾರಿಗೆಯೂ (ಬೇರೆಲ್ಲಿಗೂ ಹರಿಯಗೊಡಲಿಲ್ಲ)
ಭಿಕ್ಷಾವೃತ್ತಿಗಳು (ವಿಷಯೇಂದ್ರಿಯಗಳು) ಬಂದು ಬೇಡುತ್ತಿಪ್ಪರಯ್ಯಾ(ಆ ಮನಸ್ಸನ್ನು ತಮ್ಗೆ ಒಡು ಎಂದು ಬೇಡುತ್ತಿವೆ)
ನಿಮ್ಮ ಒಕ್ಕುದ ಮಿಕ್ಕುದ (ದೇವರಿಗೆ ಅರ್ಪಿತವಾಗಿರುವದನ್ನು) ಉಡಿಯಲ್ಲಿ ಕಟ್ಟಿಕೊಂಡಿಪ್ಪರಯ್ಯಾ(ತಮ್ಮ ಉಡಿಯಲ್ಲಿ ಕಾಳಜಿಯಿಂದ ಕಟ್ಟಿಕೊಂಡಿದ್ದಾರೆ)
ಗುಹೇಶ್ವರ ನಿಮ್ಮ ಶರಣರು!

 
ತಾತ್ಪರ್ಯ: 

ಈ ವಚನದಲ್ಲಿ ಅಲ್ಲಮ ಪ್ರಭುಗಳು ಅಪಕ್ವವಾದ ಮನಸ್ಸನ್ನು ಲಿಂಗ ಸಾಧನೆಯಲ್ಲಿ ತೊಡಗಿಸಿ ಅದನ್ನು ಪರಿಪಕ್ವಗೊಳಿಸಬೇಕು, ಮತ್ತು  ಹಾಗೆ ಮಾಡಿದ ಮೇಲೆ ಅದು ಶಿವನನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂಬುದನ್ನು ಹೇಳುತ್ತಿದ್ದಾರೆ. 

ಸಾಮಾನ್ಯ ವ್ಯಕ್ತಿಯ ಮನಸ್ಸು ಅಪಕ್ವವಾದದ್ದು. ಎಂದರೆ ಅತನಿಗೆ ಯಾವುದು ಸರಿ ಯಾವುದು ತಪ್ಪು ಎಂಬ ಜ್ಞಾನವಿರುವುದಿಲ್ಲ.ಯಾವುದರಿಂದ ತನಗೆ ಶಾಶ್ವತ ಸುಖ ಸಿಗುತ್ತದೆ ಎಂಬುದನ್ನು ಆತನು ಅರಿಯದು. ಆದ್ದರಿಂದ ವಿಷಯ ಸುಖದ ಸುಳಿಗೆ ಸಿಕ್ಕು ಘಾಸಿಗೊಳ್ಳುತ್ತಾನೆ.   ಆದರೆ ಶರಣರ ರೀತಿಯೇ ಬೇರೆ. ಅಂತಹ ಅಪಕ್ವ ಮನಸ್ಸಿನ ಅರಿವಾಗಿ ಅದನ್ನು ಹಿಡಿದು ಸಾಧನೆಯಲ್ಲಿ ತೊಡಗಿಸಿ, ಅದನ್ನು ಪಕ್ವವಾಗಿಸುತ್ತಾರೆ ಶರಣರು. ಉಸಿರೆಂಬ ಬಿಸಿನೀರಿನಲ್ಲಿ ಬೇಯಿಸಿ, ಎಂದರೆ ಅಪಕ್ವ ಮನಸ್ಸನ್ನು ಲಿಂಗದ ಧ್ಯಾನದ ತಪಸ್ಸಿನಲ್ಲಿ ತೊಡಗಿಸುತ್ತಾರೆ.  ಶಿವನ ಧ್ಯಾನವಲ್ಲದೆ ಬೇರೆ ಕಡೆಗೆ ಮನಸ್ಸು ಹೋಗದಂತೆ  ಮಾಡುವುದು ಒಂದು ಮಹಾ ತಪಸ್ಸು. ಆ ತಪಸ್ಸನ್ನು ಸಾಧಿಸಿ ಶರಣರು ಆ ದೇವರಿಗೆ ನಮಿಸುತ್ತಾರೆ. ಆ ಲಿಂಗದ ಮುಂದೆ ಬಾಗುತ್ತಾರೆ. ತಮ್ಮ ಮನಸ್ಸನ್ನು ದೇವರಿಗೆ ಅರ್ಪಿಸಿದ ಮೇಲೆ  ಅದು ಪ್ರಸಾದವಾಗುತ್ತದೆ. ಅಂತಹ ಮನಸ್ಸನ್ನು ಅವರು  ಬೇರೆ ಇನ್ನಾರಿಗೂ ಕೊಡುವುದಿಲ್ಲ. ಅಂದರೆ ಆ ಮನಸ್ಸನ್ನು ಬೇರೆ ವಿಷಯಗಳಿಗೆ ಹರಿಯಗೊಡುವುದಿಲ್ಲ. ವಿಷಯೇಂದ್ರಿಯಗಳು ಅದನ್ನು ಬೇರೆ ಕಡೆಗೆ ಎಳೆಯಲು ನೋಡುತ್ತವೆ. ಅವುಗಳು  ಆ ಮನಸ್ಸನ್ನು ತಮಗೆ ಕೊಡು ಎಂದು ಭಿಕ್ಷೆ ಕೇಳುತ್ತವೆ. ಆದರೆ  ಅ ಮನಸ್ಸು ಆಗಲೆ ಶಿವನಿಗೆ ಅರ್ಪಿತವಾಗಿರುವುದರಿಂದ ಶಿವನನ್ನು ಬಿಟ್ಟು ಅದು ಎಲ್ಲಿಗೂ ಹೋಗುವುದಿಲ್ಲ. ಅದನ್ನು ಶಿವನಿಗೆ ಕೊಟ್ಟಮೇಲೆ ಅವರಲ್ಲಿ ಈಗ ಆ ಶಿವನ ಪ್ರಸಾದವೆಂಬ ಮನಸ್ಸು ಮಾತ್ರ ಉಳಿದಿದೆ. ಅದನ್ನು ಅವರು ಬಹು ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಅದು ಮತ್ತೆ ಎಲ್ಲಿಯೂ ಜಾರಿಹೋಗದಂತೆ  ಭದ್ರವಾಗಿಟ್ಟುಕೊಳ್ಳುತ್ತಾರೆ.ಅಂತಹ ಮನಸ್ಸನ್ನು ಅವರು ಬಹಳ ಕಾಳಜಿಯಿಂದ ತಮ್ಮ ಉಡಿಯಲ್ಲಿ ಕಟ್ಟಿಕೊಂಡು ಕಾಯುತ್ತಾರೆ, ಎಂದು ಹೇಳುತ್ತಾರೆ ಅಲ್ಲಮರು. 

ಅಪಕ್ವ ವ್ಯಕ್ತಿಯ ಮನಸ್ಸು ಕ್ಷಣಿಕವಾದ ಸುಖದ ಆಕರ್ಷಣೆಗೆ ಒಳಗಾಗುತ್ತದೆ.  ಕ್ಷಣಿಕವಾದ ಆ ಸುಖದ ಕೊನೆಗೆ ಅಪಾರ ದುಃಖ ನೋವು ಇದ್ದರೂ ಮತ್ತೆ ಮತ್ತೆ ಅದೇ ಸುಖದ ಹಿಂದೆ ಓಡುತ್ತಿರುತ್ತದೆ. ಆದರೆ ಶರಣರು ಅದನ್ನು ಗಮನಿಸುತ್ತಾರೆ.  ಮನಸ್ಸು ಆ ಸುಖದ ಹಿಂದೆ ಹೋಗುವಾಗ ಅದಕ್ಕೆ ತಿಳಿಹೇಳಿ ಅದನ್ನು ಶಿವನ ಕಡೆಗೆ ತಿರುಗಿಸುತ್ತಾರೆ. ಅದೇ ತಪಸ್ಸು. ಈ ರೀತಿ ಸದಾ ಎಚ್ಚರದಿಂದಿದ್ದು ಅದನ್ನು ಶಿವನ ಕಡೆಗೆ ತಿರುಗಿಸಿದಾಗ ಮನಸ್ಸಿಗೆ ಭೌತಿಕ ಸುಖದ ನಶ್ವರತೆಯ ಸ್ಪಷ್ಟ ಅರಿವಾಗುತ್ತದೆ. ಹಾಗಾಗಿ ಅದು ಮತ್ತೆಂದಿಗೂ ಆ ಕಡೆಗೆ ತಿರುಗುವುದಿಲ್ಲ.

 

 

 

 

 

 

 

Friday, July 19, 2013

Vachana 151: Hoha Batteyalondu Maaye Idduda Kande - The Illusion

VACHANA IN KANNADA 

ಹೋಹ ಬಟ್ಟೆಯಲೊಂದು ಮಾಯೆ ಇದ್ದುದ ಕಂಡೆ
ಠಾಣಾಂತರ ಹೇಳಿತ್ತು, ಠಾಣಾಂತರ ಹೇಳಿತ್ತು
ಅಲ್ಲಿಗಲ್ಲಿಗೆ  ಅಲ್ಲಿಗಲ್ಲಿಗೆ  ಅಲ್ಲಿಗಲ್ಲಿಗೆ!
ಗುಹೇಶ್ವರನ ಕರಣಂಗಳು ಕುತಾಪಿಗಳು 

TRANSLITERATION
 
hOha baTTeyaloMdu maaye idduda kaMDe
ThaaNaaMtara hELittu, ThaaNaaMtara hELittu
alligallige  alligallige  alligallige!
guhEshvarana karaNaMgaLu kutaapigaLu.

CLICK HERE FOR A RECITATION:

TRANSLATION (WORDS)
 
hOha (tread up on) baTTeyaloMdu (in the path people) maaye  idduda kaMDe (I saw the illusion being there )
ThaaNaaMtara hELittu (shows the different place other than The God), ThaaNaaMtara hELittu (shows the different place other than The God),
alligallige  alligallige  alligallige! (there and there, to the attractions of senses)
guhEshvarana (which are meant for knowing Guheshvara) karaNaMgaLu (the senses)  kutaapigaLu (are troublesome)

VACHANA IN ENGLISH

In the path that people tread upon, I saw the illusion (Maaye)
It showed a different place (other than God), It showed a  different place
There and there, There and there, There and there (to the attraction of senses)!
The senses which are meant for knowing God Guhesvara are troublesome. 

COMMENTARY

In this cryptic Vachana, Allama Prabhu says that he sees Maaye (Illusion) in the path common people tread upon, and the Maaye directs people to a path other than the one that leads to realizing God. It forces people’s senses to be immersed in materialistic, mundane worldly activities. People follow this altered path willingly and happily. Allama Prabhu wonders how the senses that are meant to take the individual towards God have become troublesome through the influence of Maaye!

It is interesting to examine the lives of Sharanas in light of this Vachana. Allama Prabhu had reached the highest spiritual cliff. As a realized soul he was a Guru, Jangama and considered the living Linga (God). Other Sharanas seem to be well within the realm of worldly life. But, they practiced selfless service (Kaayaka) and sharing (Daasoha), and considered everything they have is the blessing (Prasaada) from God. They continued with their worldly kaayaka with the utmost respect for it. They did not curb their senses, neither did they indulged in them. This balanced approach to life is what they called ‘Kailasa’ the abode of Shiva created here on Earth.  This Vachana is urging us to follow the spiritual path demonstrated by Sharanas. It is urging us to be aware of the influences of our senses and the power they have to dissuade us from the joy, freedom and bliss we can achieve! 

Does it mean that we should get away from what we have accomplished? Should we give up all the comforts and gadgets?  Should we not enjoy our success?  The answers lie in realizing that no matter how successful we are, we are always burdened by that irksome feeling that the success may vanish in a hurry. If we can rise to the level of being equanimous in success and failure, then we will have overcome the influence of Maaye (the illusion). Such equanimity will keep us in the true path of realization! That equanimous path is not as glamorous as the one that Maaye pushes us into.  The journey through it requires a subtle mindset! 

Let us not sway from the spiritual path! 

 KANNADA COMMENTARY

ಅರ್ಥ:

ಹೋಹ (ಜನರು ಹೋಗುವ, ನಡೆಯುವ) ಬಟ್ಟೆಯಲೊಂದು (ದಾರಿಯಲ್ಲೊಂದು) ಮಾಯೆ ಇದ್ದುದ ಕಂಡೆ (ಮಾಯೆ ಇರುವುದನ್ನು ಕಂಡೆ)
ಠಾಣಾಂತರ ಹೇಳಿತ್ತು (ಶಿವ ಪಥವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗಲು ಹೇಳಿತ್ತು),  ಠಾಣಾಂತರ ಹೇಳಿತ್ತು (ಶಿವ ಪಥವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗಲು ಹೇಳಿತ್ತು), 
ಅಲ್ಲಿಗಲ್ಲಿಗೆ   ಅಲ್ಲಿಗಲ್ಲಿಗೆ   ಅಲ್ಲಿಗಲ್ಲಿಗೆ!  (ಆಯಾ ವಿಷಯಗಳಲ್ಲಿಗೆ)
ಗುಹೇಶ್ವರನ ಕರಣಂಗಳು (ಗುಹೇಶ್ವರನನ್ನು ಕಾಣಲು ಇರುವ ಇಂದ್ರಿಯಗಳು) ಕುತಾಪಿಗಳು (ಕಂಟಕಗಳಾಗಿವೆ)

ತಾತ್ಪರ್ಯ:

ಈ ವಚನದಲ್ಲಿ ಅಲ್ಲಮಪ್ರಭುಗಳು ಮಾಯೆ ಹೇಗೆ ಇಂದ್ರಿಯಗಳನ್ನು ಬೇರೆಡೆಗೆ ಸೆಳೆದು ಜೀವನನ್ನುಶಿವ ಪಥದಿಂದ ದೂರವಿಡುತ್ತದೆ ಎಂಬುದನ್ನು ಹೇಳುತ್ತಾರೆ.
 
ಜನರು ಸಾಮಾನ್ಯವಾಗಿ ತುಳಿಯುವ ಹಾದಿಯಲ್ಲಿ ಮಾಯೆಯನ್ನು ಕಂಡೆ ಎಂದು ಹೇಳುತ್ತಾರೆ. ಇಲ್ಲಿ ಒಂದು ವಿಷಯ ಗಮನಕ್ಕೆ ಬರುತ್ತದೆ. ಆ ದಾರಿಯಲ್ಲಿ ಹೋಗುವ ಜನರಿಗೆ ಅದರ ಅರಿವು ಉಂಟಾಗುವುದಿಲ್ಲ. ಆದರೆ ಅನುಭಾವಿಗಳಾದ ಅಲ್ಲಮರಿಗೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಜನರು ಮಾಯೆ ತೋರಿದ ಹಾದಿಯಲ್ಲಿ ಸಾಗುತ್ತಿದ್ದಾರೆ. ಆ ಮಾಯೆಯೋ ಶಿವನನ್ನು ಕಾಣುವ ದಾರಿಯನ್ನು ಬಿಟ್ಟು ಬೇರೆಯದೇ ದಾರಿ ತೋರುತ್ತದೆ. ಜೀವ ಮಾಯೆ ಹೇಳಿದಂತೆಯೆ  ಮಾಡುತ್ತದೆ. ಏಕೆಂದರೆ, ಶಿವ ಪಥದಲ್ಲಿ ಥಳುಕಿಲ್ಲ. ಅದು ಮಹಾನ್ ಸಾತ್ವಿಕವಾಗಿ ಸದಾ ಮರೆಯಲ್ಲಿರುವಂತಹುದು, ಸೂಕ್ಷ್ಮವಾದದ್ದು. ಮಾಯೆ ಥಳುಕಿನ  ರೂಪವನ್ನು ತೋರಿ ಜೀವನನ್ನು ಆಕರ್ಷಣೆಗೆ ಒಳಗು ಮಾಡುತ್ತದೆ. ಆಯಾ ಇಂದ್ರಿಯಗಳಿಗೆ ಆಯಾ ರೀತಿಯ ಆಕರ್ಷಣೆಗಳನ್ನು ತೋರುತ್ತದೆ. ಆ  ಜೀವನನ್ನು  ಅಲ್ಲಲ್ಲಿಯೇ ನಿಂತು ಹೋಗುವಂತೆ ಅಥವಾ ಅದೇ ದಾರಿಯಲ್ಲಿ ಇನ್ನೂ ಹೆಚ್ಚಿನ ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತದೆ. ಆಯಾ ಇಂದ್ರಿಯಗಳು ತಮ್ಮ ತಮ್ಮ ವಿಷಯಗಳಲ್ಲಿ ಸುಖವಿದೆ ಎಂದು ನಂಬುವಂತೆ ಮಾಡುತ್ತದೆ. ಆ ಭ್ರಮೆಗೆ ಸಿಕ್ಕು ಜೀವ ದೇವನನ್ನು, ಶಾಶ್ವತ ಸುಖವನ್ನು ಕಡೆಗಣಿಸುತ್ತದೆ.

ಮೂಲಭೂತವಾಗಿ ದೇವನನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಇಂದ್ರಿಯಗಳು ತಮ್ಮ ಚಂಚಲತೆಗೆ ಒಳಗಾಗಿ ದೇವನನ್ನು ಸಂಪೂರ್ಣವಾಗಿ ಮರೆಯುತ್ತವೆ. ಅವುಗಳ ಈ ಚಂಚಲ ಬುದ್ಧಿಯೇ ಅವುಗಳನ್ನು ಜೀವನಿಗೆ ಕಂಟಕಗಳನ್ನಾಗಿ ಮಾಡಿದೆ. ಮಾಯೆಯ ಆಕರ್ಷಣೆಗೆ ಪಕ್ಕಾಗಿ ಇಂದ್ರಿಯಗಳು ಜೀವನನ್ನು ಭೌತಿಕ ಜೀವನದ ನರಕಕ್ಕೆ ತಳ್ಳುತ್ತವೆ. ಈ ಮಾಯೆಯ ಭ್ರಮೆಯನ್ನು ಅರಿತು ಅದರಿಂದ ಬಿಡಿಸಿಕೊಂಡರೆ ಲಿಂಗವನ್ನು ಸ್ವಾಯತ ಮಾಡಿಕೊಳ್ಳಬಹುದು. 

ಇಲ್ಲಿ ಅನೇಕ ಪ್ರಶ್ನೆಗಳು  ಹುಟ್ಟುತ್ತವೆ. ಭೌತಿಕ ಜೀವನವು ನರಕವೇ?  ನಾವೆಲ್ಲ ಸುಖವಾಗಿಯೇ ಇದ್ದೇವಲ್ಲ. ಶಾಶ್ವತವಾದ ಸುಖವಾವುದು? ಇತ್ಯಾದಿ.

ಮೇಲ್ನೋಟಕ್ಕೆ ನಮ್ಮ ಬದುಕು ಸುಖಮಯವಾಗಿ ಕಂಡರೂ, ನನ್ನ ಈ ಸುಖ ಎಲ್ಲಿ ಕಳೆದು ಹೋಗುವುದೋ ಎನ್ನುವ (ಸಾಧಾಣವಾಗಿ ಗಮನಕ್ಕೆ ಬಾರದ) ಭಯದ ನರಕದಲ್ಲಿ ನಾವು ಬದುಕುತ್ತೇವೆ. ನಮಗೆ ತಿಳಿಯದೆಯೇ ಆ ಭಯ ನಮ್ಮನ್ನು ಪೂರ್ತಿಯಾಗಿ ಆವರಿಸಿಕೊಂಡಿದೆ. ಅದಕ್ಕಾಗಿಯೇ ನಾವು ನಮ್ಮೆಲ್ಲ ಸುಖ ಸಾಧನಗಳಿಗೆ ಗಟ್ಟಿಯಾಗಿ ಕಚ್ಚಿಕೊಂಡಿದ್ದೇವೆ.  ಆ ಎಲ್ಲ ಸುಖ ಸಾಧನಗಳು ಇಲ್ಲದೇ ಹೋದಾಗಲೂ ಸಹ ಶಾಂತಿಯಿಂದಿರುವ ಕಲೆಯನ್ನು ಕರಗತ ಮಾಡಿಕೊಂಡವನು ಶಾಶ್ವತ ಸುಖ ಪಡೆಯುತ್ತಾನೆ. ಅದನ್ನು ಗಳಿಸುವ ಮಾರ್ಗವೇ ಶಿವ ಪಥ. ಆ ಪಥದಲ್ಲಿ ಅಡ್ಡಿ ಉಂಟುಮಾಡುವ ಇಂದ್ರಿಯಗಳೇ  ಕುತಾಪಿಗಳು.

 

 

 

Friday, July 12, 2013

Vachana 150: Mana Beesaravemba Gaali Beesittu - The Wind of Disorder Blew!

VACHANA IN KANNADA

ಮನ ಬೀಸರವೆಂಬ ಗಾಳಿ ಬೀಸಿತ್ತು, ವಿದ್ಯಾ ಮುಖದ ಜ್ಯೋತಿ ನಂದಿತ್ತು
ಕತ್ತಲೆಯಲ್ಲಿ ಗತಿಯ ಕಾಣದೆ, ದುಮ್ಮಾನ ನೆಲೆಗೊಂಡಿತ್ತು, ಸುಮ್ಮಾನ ಹೋಯಿತ್ತು
ಸಕಳಕಳಾವಿದ್ಯಾ ಗುರುವಲ್ಲಾ!
ಮತಿತಾಳವೆಂಬ ಗುಹ್ಯ ತಾಗಿ, ಸುತಾಳವೆಂಬ ಶರಣನಂಗದಲ್ಲಿ ಬಿದ್ದು
ಗುರುವಿಂಗೆ ಪ್ರಸಾದವಾಯಿತ್ತು, ಶಿಷ್ಯಂಗೆ ಓಗರವಾಯಿತ್ತು,
ಲೌಕಿಕ ನಾಯಕನರಕ!
ಅರ್ಪಿತಮುಖವನರಿಯದೆ ಅನರ್ಪಿತಮುಖವಾಯಿತ್ತು ಗುಹೇಶ್ವರಾ

TRANSLITERATION

manabIsarveMba gaaLi bIsittu, vidyaamukhada jyOti   naMdittu
kattaleyalli gatiya kaaNade, dummaana nelegoMDittu, summaana hOyittu
sakaLakaLaavidyaa guruvallaa!
matitaaLaveMba guhyataagi , sutaaLaveMba sharaNanaMgadalli biddu
guruviMge prasaadavaayittu, sishyaMge Ogaravaayittu,
loukika naayakanaraka!
arpitamukhavanariyade anarpitavaayittu guhEshvaraa.

CLICK HERE FOR A RECITATION:


TRANSLATION (WORDS)

manabIsarveMba (called  disorder) gaaLi  (wind)  bIsittu (blew)
vidyaamukhada (called knowledge) jyOti (light)  naMdittu (was extinguished)
kattaleyalli (in darkness)  gatiya  (shelter)  kaaNade (not finding))
dummaana  (agitation, grief)nelegoMDittu (took place, set in)
summaana  (happiness, peace)hOyittu (vanished)
sakaLakaLaavidyaa guruvallaa! (true knowledge  itself is the teacher!)
matitaaLaveMba guhyataagi  (that light touched the subtle and deeper intelligent))
sutaaLaveMba sharaNanaMgadalli biddu (it falls in the Sharana’s body called mind)
guruviMge prasaadavaayittu (it turned prasaada for the Guru)
sishyaMge Ogaravaayittu (it turned food for the disciple)
loukika naayakanaraka! (material world is terrible  hell)
arpitamukhavanariyade (without knowing the offered,prasaada) anarpitavaayittu  (the life has become burden) guhEshvaraa(Guheshvara)

VACHANA IN ENGLISH

The wind of disorder blew; the light of knowledge was extinguished
Not finding the shelter in this darkness, grief and agitation set in, peace and happiness vanished
The true knowledge itself is the teacher!
That light touched the subtle and deeper intelligence; it fell on devotee’s body (mind),
It turned into prasaada (blessing, grace) for the teacher (Guru), and food for the disciple.
The material world is a terrible hell!
Without knowing the offered (prasaada), the life has become a burden, Oh, Guhesvara!   

COMMENTARY

In this somewhat paradoxical Vachana, Allama Prabhu says that everything we have around us is offered to us by God and should be treated as His blessing and grace; one without such a mindset leads a life of misery!

The ‘I-ness’ occupies the mind of the typical human. He/she gloats with the feeling that ‘I accomplished everything; I am capable; I created all I have, so on’. The wind of this ego blows away all the intelligence and knowledge and the individual becomes incapable of distinguishing between the true and the false. In this darkness, the mind gets perturbed, does not find a landing and becomes aimless and the individual loses the true peace and happiness.

Knowledge is the true teacher. When that teacher arrives and sheds light, the mind clears out and starts distinguishing the true from false and one sees the path of life clearly. Without that light one stays blind and wanders around in the darkness.

 For the light of knowledge to pearce us, the mind should become subtle. When that subtelity sets in, the light of knowledge makes the individual recognize the blessing and grace from God. When this mindset of ‘everything I have is His offering’ matures, the individual becomes the Guru and offers it to others. He becomes peaceful  and all the disorders of his mind dissappear. He is forever stays happy and blissful.

For the individual who has not developed the subtelity of mind to see that everything around him/her is offered by God, the ‘I-ness’ dictates. This in turn, makes the life terrible to live.

 The point then is that we must contain our ego and develop the mindset of receiveing everything we have as His ‘prasaada’.

Let us enjoy and acknowledge His grace!

KANNADA COMMENTARY

ಅರ್ಥ:

ಮನಬೀಸರವೆಂಬ (ಅಸ್ತವ್ಯಸ್ತವೆಂಬ)  ಗಾಳಿ ಬೀಸಿತ್ತು
ವಿದ್ಯಾ ಮುಖದ (ಜ್ಞಾನದ) ಜ್ಯೋತಿ ನಂದಿತ್ತು (ಬೆಳಕು ಆರಿತ್ತು)
ಕತ್ತಲೆಯಲ್ಲಿ ಗತಿಯ ಕಾಣದೆ (ಅಜ್ಞಾನದ ಕತ್ತಲೆಯಲ್ಲಿ ಗತಿಗಾಣದೆ)
ದುಮ್ಮಾನ ನೆಲೆಗೊಂಡಿತ್ತು (ದುಃಖ ಮನೆಮಾಡಿತ್ತು)
ಸುಮ್ಮಾನ ಹೋಯಿತ್ತು (ಶಾಂತಿ ನಶ್ಟವಾಯಿತು)
ಸಕಳಕಳಾವಿದ್ಯಾ ಗುರುವಲ್ಲಾ! (ಬೆಳಕೇ ವಿದ್ಯೆಯಲ್ಲವೆ?)
ಮತಿತಾಳವೆಂಬ ಗುಹ್ಯ ತಾಗಿ (ಆ ಬೆಳಕು ಸೂಕ್ಷ್ಮವಾದ ಮತ್ತು ಆಳದಲ್ಲಿದ್ದ ಸುಮತಿಯನ್ನು ತಾಗಿ, ಮುಟ್ಟಿ)
ಸುತಾಳವೆಂಬ ಶರಣನಂಗದಲ್ಲಿ ಬಿದ್ದು (ಸುಮನವೆಂಬ ಶರಣನ ಅಂಗದಲ್ಲಿ ನೆಲೆಸಿ)
ಗುರುವಿಂಗೆ ಪ್ರಸಾದವಾಯಿತ್ತು ಶಿಷ್ಯಂಗೆ ಓಗರವಾಯಿತ್ತು,( ಆ ಶರಣನು ಅದನ್ನು ಪ್ರಸಾದವೆಂದು ಸ್ವೀಕರಿಸಿ ಗುರುವಾಗಿ ಶಿಷ್ಯನಿಗೆ ಕೊಟ್ಟನು, ಮತ್ತು ಶಿಷ್ಯನಿಗೆ ಅದು ಓಗರವಾಯಿತು)
ಲೌಕಿಕ ನಾಯಕನರಕ! (ಲೌಕಿಕ ಜಗತ್ತು ಮಹಾನರಕ)
ಅರ್ಪಿತಮುಖವನರಿಯದೆ ಅನರ್ಪಿತಮುಖವಾಯಿತ್ತು ಗುಹೇಶ್ವರಾ  (ಪ್ರಸಾದವನ್ನು ಅರಿಯದ ಕಾರಣ ಜಗತ್ತು ದುಃಖಮಯವಾಗಿದೆ)

 ತಾತ್ಪರ್ಯ:

ಇಲ್ಲಿ ಅಲ್ಲಮಪ್ರಭುಗಳು ಈ ಸೃಷ್ಟಿ ಅರ್ಪಿತವಾದದ್ದು ಅಂದರೆ ಪ್ರಸಾದ ವೆಂದು ಅರಿಯದವರ ಬದುಕು ನಾಯಕ ನರಕವೆಂದು ಹೇಳುತ್ತಾರೆ.
ಜೀವನ ಮನಸ್ಸು ಇಲ್ಲಿಯ ಎಲ್ಲವನ್ನೂ ತನ್ನದೆಂದು ತಿಳಿದು ಮೋಹಕ್ಕೆ ಒಳಗಾಗಿ ಅಸ್ತವ್ಯಸ್ತವಾಗುತ್ತದೆ. ಆ ಅಸ್ತವ್ಯಸ್ತದ ಗಾಳಿಗೆ ಬದುಕು ಡೋಲಾಯಮಾನವಾಗುತ್ತದೆ. ಆ ಮೋಹದ ಗಾಳಿಗೆ ಜ್ಞಾನವೆಂಬ ಬೆಳಕು, ಯಾವುದು ಸತ್ಯ ಯಾವುದು ಅಸತ್ಯವೆಂಬ ಜ್ಞಾನವೆಂಬ ಬೆಳಕು ನಂದಿಹೋಗುತ್ತದೆ. ಆ ಕತ್ತಲೆಯಲ್ಲಿ ದಾರಿಕಾಣದೆ ದುಃಖದಲ್ಲಿ ಮುಳುಗುತ್ತದೆ. ಮನಸ್ಸು ನೆಮ್ಮದಿಯನ್ನು ಕಳೆದುಕೊಳ್ಳುತ್ತದೆ. ದಾರಿತೋರುವ ಗುರುವಿಲ್ಲದೆ ಅಂದರೆ ಗುರುವೆಂಬ ಬೆಳಕಿಲ್ಲದೆ  ಜೀವ ತಳಮಳಿಸುತ್ತದೆ. ವಿದ್ಯೆಯೆಂಬ ಬೆಳಕೇ ಗುರುವಲ್ಲವೆ? ಏಕೆಂದರೆ ವಿದ್ಯೆ ಅಥವಾ ಜ್ಞಾನದ ಬೆಳಕಿನಲ್ಲಿ ಸತ್ಯ ಅಸತ್ಯಗಳು ನಿಚ್ಚಳವಾಗಿ ಕಂಡುಬರುತ್ತವೆ. ಜೀವನು ಬದುಕಿನ ಹಾದಿಯನ್ನು ಸ್ಪಷ್ಟವಾಗಿ ಕಾಣುತ್ತಾನೆ. ಆದರೆ ಅದಿಲ್ಲದಾಗ ಆತನು ಕುರುಡನಂತಾಗಿ ದಾರಿತಪ್ಪುತ್ತಾನೆ.
ಆ ಬೆಳಕು ಒಲಿಯಬೇಕಾದರೆ ಮನಸ್ಸು ಸೂಕ್ಷ್ಮವಾಗಬೇಕು. ಶರಣನ ಅಂಗವಾದ ಸೂಕ್ಷ್ಮಮನದಲ್ಲಿ ಆ ಬೆಳಕು ಬಂದು ನೆಲೆಸುತ್ತದೆ. ಅದು ಆತನಿಗೆ ಪ್ರಸಾದವಾಗುತ್ತದೆ. ಪ್ರಸಾದವಾಗಿ ಬಂದ ಆ ಜ್ಞಾನದ ಬೆಳಕನ್ನು ಶರಣನು ಇತರರಿಗೆ ಹಂಚಿ ಗುರುವಾಗುತ್ತಾನೆ. ಅಂದರೆ ಮನಸ್ಸು ಸೂಕ್ಷ್ಮವಾದಾಗ ಈ ಸೃಷ್ಟಿಯಲ್ಲಿ ತನ್ನದೆಂಬುದು ಯಾವುದೂ ಇಲ್ಲ. ಎಲ್ಲವೂ ಆ ದೇವರ ಪ್ರಸಾದವೆಂಬ ಭಾವ ಬಲಿಯುತ್ತದೆ. ಈ ಭಾವ ಅಳವಟ್ಟಾಗ ಆತ ಗುರುವಾಗುತ್ತಾನೆ. ಆತನಿಗೆ ತಾನು ಕಂಡ ಸತ್ಯವನ್ನು ಇತರರಿಗೆ ತೋರಿಸುವ ತವಕ ಉಂಟಾಗುತ್ತದೆ. ಮನಸ್ಸು ಸದಾ ಶಾಂತವಾಗಿ ಮನಸ್ಸಿನ ಅಸ್ತವ್ಯಸ್ತತೆ ಮಾಯವಾಗುತ್ತದೆ. ಆದರೆ ಮನಸ್ಸು ಇನ್ನೂ ಸೂಕ್ಷ್ಮವಾಗದವನ , ಹಾಗೂ ಜಗತ್ತಿನ ಮಾಯಮೋಹದ ಗಾಳಿಗೆ ಸಿಲುಕಿದ ಶಿಷ್ಯನಿಗೆ ಈ ಸೃಷ್ಟಿ ಪ್ರಸಾದವೆಂಬ ಭಾವವಿರುವುದಿಲ್ಲ. ಅದು ಆತನಿಗೆ  ಕೇವಲ ಓಗರವಾಗಿರುತ್ತದೆ.  ಆದ್ದರಿಂದ “ತಾನು ತನ್ನದು” ಎಂಬ ಭಾವ ದೊಡ್ಡದಾಗಿ ನಾನಾ ಕೋಟಲೆಗೆ ಒಳಗಾಗುತ್ತಾನೆ.  ಲೌಕಿಕ ಜಗತ್ತು ನರಕವಾಗುತ್ತದೆ. ಪ್ರಸಾದವೆಂದು ಅರಿಯದ ಕಾರಣ ಆತನ ಬದುಕು ದುಃಖಮಯವಾಗಿರುತ್ತದೆ.


  

Thursday, July 4, 2013

Vachana 149: Padavanarpisabahudallade - What can I offer?

VACHANA IN KANNADA

ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಬಾರದು,
ಓಗರವನರ್ಪಿಸಬಹುದಲ್ಲದೆ ಪ್ರಸಾದವನರ್ಪಿಸಬಾರದು,
ಗುಹೇಶ್ವರಾ ನಿಮ್ಮ ಶರಣರು
ಹಿಂದ ನೋಡಿ ಮುಂದನರ್ಪಿಸುವರು

TRANSLITERATION

padavarpisabahudallade  padaarthavanarpisabaaradu,
Ogaravarpisabahudallade  prasaadavanarpisabaaradu,
guhEshavara nimma sharaNaru
hiMda nODi muMdanarpisuvaru

CLICK HERE FOR A RECITATION:

TRANSLATION (WORDS)
 
padavarpisabahudallade  ( the feeling of “I” ness can be offered but)   padaarthavanarpisabaaradu,( not the things)
Ogaravarpisabahudallade  (things that are not offered can be offered but)  prasaadavanarpisabaaradu, (not the things that are already offered)
guhEshavara nimma sharaNaru (the devotees of Guheshvara)
hiMda nODi muMdanarpisuvaru (see the principle behind the world and  offer the “I” ness which is born later)
 
VACHANA IN ENGLISH

The feeling of ‘I-ness’ can be offered, but not other things.
The things that were not offered can be offered, but not the ones that were offered.
Oh! Guhesvara, your devotees,
Realize the principle behind the world and offer the I-ness which was born later!

COMMENTARY

As part of our worship, we offer food, fruits, milk and other things to God. We then consume them as His ‘prasaada’ (grace or blessing). The things that we offer were not offered before, as we see it. As such, we can offer them. But, once offered, they become prasaada from Him and hence cannot be offered again. But, a close examination reveals that everything we have in this material world came from Him.  The food we prepare to offer Him for example, was prepared out of several ingredients. These ingredients were grown or manufactured by someone else. They in turn used the raw material created by Him. As such, we do not have anything of our own. Everything we have is His blessing and grace. Since they are already ‘prasaadas’ we cannot offer them back to Him. The only thing we have that is our own is the ego, the I-ness. Allama Prabhu in this Vachana says that we can only offer that ‘I-ness’ to Him and with His grace get rid of it. Allama Prabhu says that a true devotee realizes the divine power behind everything in this world and offers only that which was born later, the I-ness to Him. 

Let us be humble, appreciate His grace and strive to be egoless!

 KANNADA COMMENTARY

ಅರ್ಥ:

ಪದವನರ್ಪಿಸಬಹುದಲ್ಲದೆ (ನನ್ನದು ಎನ್ನುವ ಭಾವವನ್ನು ಅರ್ಪಿಸಬಹುದು ಆದರೆ)  ಪದಾರ್ಥವನರ್ಪಿಸಬಾರದು,(ನಮ್ಮದಲ್ಲದ ಪದಾರ್ಥವನ್ನು ಅರ್ಪಿಸಲು ಬರದು)
ಓಗರವನರ್ಪಿಸಬಹುದಲ್ಲದೆ (ಅರ್ಪಿಸದೆ ಇರುವ ಆಹಾರವನ್ನು ಅರ್ಪಿಸ ಬಹುದು ಆದರೆ) ಪ್ರಸಾದವನರ್ಪಿಸಬಾರದು,(ಅರ್ಪಿತವಾದ ಪ್ರಸಾದವನ್ನು ಮತ್ತೆ ಅರ್ಪಿಸಲು ಬರದು)
ಗುಹೇಶ್ವರಾ ನಿಮ್ಮ ಶರಣರು
ಹಿಂದ ನೋಡಿ ಮುಂದನರ್ಪಿಸುವರು (ಗುಹೇಶ್ವರನ ಶರಣರು ಜಗತ್ತಿನ  ಹಿಂದೆ ಇರುವ ತತ್ವವನ್ನು ನೋಡಿ ಆಮೇಲೆ ಹುಟ್ಟಿದ ಭಾವವನ್ನು ಅರ್ಪಿಸುವರು)

ತಾತ್ಪರ್ಯ:

ನಾವು ದೇವರಿಗೆ ಏನನ್ನು ಅರ್ಪಿಸಬಹುದು ಎನ್ನುವುದನ್ನು ಇಲ್ಲಿ ಹೇಳುತ್ತಿದ್ದಾರೆ ಅಲ್ಲಮಪ್ರಭುಗಳು.

ನಮ್ಮ ಅಜ್ಞಾನದ ಕಾರಣದಿಂದ ನಾವು ದೇವರಿಗೆ ಇಂತಿಂತಹುದನ್ನು ಅರ್ಪಿಸಿದೆವು ಎಂದು ಹೇಳಿಕೊಳ್ಳುತ್ತೇವೆ. ಆದರೆ ಅದು ಕಡು ಮೂರ್ಖತನದ ಮಾತು.  ಈ ಪ್ರಪಂಚದ ಯಾವ ಪದಾರ್ಥಗಳೂ ನಮ್ಮವಲ್ಲ. ಎಲ್ಲವೂ ದೇವರಿಂದ ಸೃಷ್ಟಿಗೊಂಡವುಗಳು. ಆದ್ದರಿಂದ ಅವೆಲ್ಲವೂ ಆತನವೇ. ಆತನ ಪದಾರ್ಥಗಳನ್ನು ನಾವು ಪುನಃ ಆತನಿಗೆ ನಮ್ಮವೆಂದು ಭಾವಿಸಿ ಅರ್ಪಿಸಲು ಸಾಧ್ಯವೆ? ಅದು ಅಜ್ಞಾನ. ಆದರೆ ನಾವು ಆ ಪದಾರ್ಥಗಳು ನಮ್ಮವು ಎಂಬ ಭಾವವನ್ನು ಅರ್ಪಿಸಬಹುದು. ಅದು ನಿಜವಾಗಿಯೂ ಅರ್ಪಿಸಬೇಕಾದದ್ದು. ಎಲ್ಲವೂ ನನ್ನದು ಎನ್ನ್ನುವ ಭಾವವೇ ನಮ್ಮ ಅಹಂಕಾರದ ಮೂಲ. ವಾಸ್ತವದಲ್ಲಿ ಈ ಪ್ರಪಂಚದಲ್ಲಿ ನನ್ನದು ಎನ್ನುವುದು ಏನೂ ಇಲ್ಲ. ನಾವು ಸ್ವತಃ ಯಾವುದನ್ನೂ ಸೃಷ್ಟಿಸಿಲ್ಲ. ಅಂದಮೇಲೆ ನಮಗೆ ಯಾವುದನ್ನೂ ಅರ್ಪಿಸುವ ಅಧಿಕಾರವೇ ಇಲ್ಲ. ಆದ್ದರಿಂದಲೇ ಅಲ್ಲಮರು “ಪದವನರ್ಪಿಸಬಹುದಲ್ಲದೆ ಪದಾರ್ಥವನರ್ಪಿಸಲು ಬಾರದು” ಎನ್ನುತ್ತಾರೆ.

ಅಡುಗೆ ಮಾಡಿದುದನ್ನು, ಅಥವಾ ಅರ್ಪಿಸದೆ ಇರುವುದನ್ನು ದೇರಿಗೆ ಅರ್ಪಿಸಿ ಪ್ರಸಾದವನ್ನು ಪಡೆಯುತ್ತಾರೆ. ಆದರೆ ಪ್ರಸಾದವನ್ನು ಯಾರೂ ಅರ್ಪಿಸಲಾರರು. ಅದೇ ರೀತಿ ಈ  ಜಗತ್ತಿನಲ್ಲಿರುವುದೆಲ್ಲವೂ ಆ ದೇವರಿಗೆ ಸೇರಿರುವುದು. ಆದ್ದರಿಂದ ನಾವು ಯಾವುದನ್ನೂ ಅರ್ಪಿಸುವುದು ಸಾಧ್ಯವಿಲ್ಲ. ಆದರೆ  ಆ ವಸ್ತುಗಳು “ನಮ್ಮವು”  ಎನ್ನುವ ಭಾವವನ್ನು ನಾವು ಖಂಡಿತವಾಗಿಯೂ ಅರ್ಪಿಸಬಹುದು.

ಈ ಮರ್ಮವನ್ನು ತಿಳಿದ ಶರಣರು “ನನ್ನದು” ಎನ್ನುವ ಭಾವವನ್ನುಮಾತ್ರ ಅರ್ಪಿಸುವರು. ಮೂಲಭೂತವಾಗಿ ಈ ಪ್ರಪಂಚ  ಪಂಚಮಹಾಭೂತಗಳಿಂದ ಮಾಡಲಾಗಿದೆ. ಆ ಪಂಚಭೂತಗಳೇ ಈ ಪ್ರಪಂಚದ ಹಿಂದಿರುವ ಮೂಲ ತತ್ವಗಳು. ಆ ಹಿಂದಿರುವ ತತ್ವಗಳನ್ನು ಅರಿತು ಆಮೇಲೆ ಹುಟ್ಟಿರುವ “ನನ್ನದು” ಎನ್ನುವ ಭಾವವನ್ನು ಶರಣರು ದೇವರಿಗೆ ಅರ್ಪಿಸಿ ನಿರಾಳರಾಗುತ್ತಾರೆ.