Friday, November 7, 2014

Vachana 219: Naanembudu Pramaana – What we call as I is a measure



PLEASE NOTE THAT THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH THE VACHANA IS COMPOSED ORIGINALLY) SCROLL TO SECTIONS 5 AND 6.

1.       VACHANA IN KANNADA

ನಾನೆಂಬುದು ಪ್ರಮಾಣ  ನೀನೆಂಬುದು ಪ್ರಮಾಣ
ಸ್ವಯವೆಂಬುದು ಪ್ರಮಾಣ  ಪರವೆಂಬುದು ಪ್ರಮಾಣ
ಪ್ರಮಾಣವೆಂಬುದು ಪ್ರಮಾಣ
ಗುಹೇಶ್ವರನೆಂಬುದು ಅಪ್ರಮಾಣ

2.       TRANSLITERATION

naaneMbudu pramaaNa nIneMbdu pramaaNa
svyaveMbudu pramaaNa paraveMbudu pramaaNa
pramaaNaveMbudu pramaaNa
guhEshvaraneMbudu apramaaNa

3.       RECITATION


4.       TRANSLATION (WORDS)

naaneMbudu (what we call as I)  pramaaNa (is a measure) nIneMbdu (what we call as you)  pramaaNa (is a measure)
svyaveMbudu (what we call as the self) pramaaNa (is a measure) paraveMbudu (what we call as “the other”) pramaaNa (is a measure)
pramaaNaveMbudu pramaaNa (what we call as measure is a measure)
guhEshvaraneMbudu apramaaNa (Guheshvara is immeasure)

5.       VACHANA IN ENGLISH

What we call as I is a measure, what we call as you is a measure
What we call as the self is a measure, what we call as “the other” is a measure
What we call as measure is a measure
What we call Guheshvara is immeasure!

6.       COMMENTARY

This seemingly simple Vachana by Allama Prabhu sets us into deep thoughts. What we call I is a measure. The moment we say ‘I’ we imply ‘I am tall’, ‘I am rich’ etc. When we say ‘you’ we imply ‘you are different’, ‘you are distant’ etc. The I and the you become measures of who we are vs who the others are. The comparison begins and the differences evolve. The ‘I-ness’ takes over immersing us into the ups and downs of this world. Similarly, the self and the other are also measures that emphasize the differences and distances between us. These measures simply increase the barrier between the individuals. The only way to reduce and eliminate these barriers is to realize Guhesvara, the divine. He is the only immesure!

According to philosopher J. Krishnamurti:
“..........We use time as measure both outwardly and inwardly. We use time as measure as going
from here to there, that is, covering the distance needs time, physically. And we also think or, being educated in our culture, we think that psychologically, inwardly, inside the skin as it were, we need time to understand, we need time to conquer, we need time to break down our bondages, we need time to understand sorrow. So we use time as a measure both outwardly and inwardly........”

“............So to cover from a certain point to another point needs time, which is measure. Now we apply the same measurement inwardly. I need time to get over a habit, I need time to stop smoking, I need time to conquer my anger, I need time in order to achieve a certain psychological result, I need time to find enlightenment, (laughs) I need time to get over my sorrow. So outwardly we apply the measure of time, and inwardly we do the same, psychologically............”.

“….. An immeasurable  vastness that is utterly still and silent. There is no space, nor time to cover that space. The beginning and the ending are here, of all things. There is really nothing that can be said about it…”.

J. Krishnamurti    Seventh Public Discussion in Saanen   August 1972; Krishnamurti's Notebook (13)

 Let us get out of the bondage of measures!
Dear Readers,
Our goal in starting this blog was to provide a total of 52 Vachanas to cover one year’s worth of thoughts. We got carried away by your enthusiastic support and comments. We have translated and interpreted these Vachanas the way we understood them. While we have learnt a lot, we feel there is much more to learn. The more Vachanas we read the more their meanings expanded. We feel that it is time to stop writing. You have read our writings and we appreciate all the comments. Thanks a lot.
Sajjan Shiva and Leela Garady.

7.      KANNADA COMMENTARY

ನಾನೆಂಬುದು ಪ್ರಮಾಣ (ನಾನು ಎಂಬುದು ಒಂದು ಅಳತೆ)  ನೀನೆಂಬುದು ಪ್ರಮಾಣ (ನೀನು ಎಂಬುದು ಒಂದು ಅಳತೆ)ಸ್ವಯವೆಂಬುದು ಪ್ರಮಾಣ (ತಾನು ಎಂಬುದು ಒಂದು ಅಳತೆ)  ಪರವೆಂಬುದು ಪ್ರಮಾಣ (ಪರವೆಂಬುದು ಎಂಬುದು ಒಂದು ಅಳತೆ)
ಪ್ರಮಾಣವೆಂಬುದು ಪ್ರಮಾಣ
ಗುಹೇಶ್ವರನೆಂಬುದು ಅಪ್ರಮಾಣ(ಅಳತೆಯಿಲ್ಲದ್ದು, ಅಳತೆಗೆ ಸಿಕ್ಕದ್ದು)

ಇದು ಕೂಡ ಅಲ್ಲಮಪ್ರಭುಗಳ ವಚನ. ಬಹಳ ಸರಳವೆಂದು ತೋರುವ ಈ ವಚನದ ಅರ್ಥ ಬಹಳ ಗಹನ.
ಈ ಪ್ರಪಂಚದಲ್ಲಿರುವ ಎಲ್ಲವೂ ಅಳತೆಗೆ ಸಿಗುವಂತಹದ್ದು , ನಾನು ಎನ್ನುವುದು ಒಂದು ಅಳತೆ ಎಂದು ಹೇಳುತ್ತಾರೆ ಅಲ್ಲಮರು. ಅದು ಹೇಗೆ ಎಂಬುದನ್ನು ನೋಡೋಣ. ನಾನು ಈಗ ಹೀಗಿದ್ದೇನೆ. ನಾಳೆ ನಾನು ಹಾಗಾಗಬೇಕು ಎಂದುಕೊಳ್ಳುತ್ತೇನೆ. ಅಲ್ಲಿ ಇಂದಿನ ನನ್ನ ಸ್ಥಿತಿ ಮತ್ತು ನಾನು ನಾಳೆ ಸಾಧಿಸಬೇಕಾದ ಸ್ಥಿತಿಗೂ ಅಂತರವಿದೆ. ಇದು ಪ್ರಮಾಣ, ಅಳತೆ.  ನಾನು ಎಂದಾಗ ನಾನು ನನ್ನನ್ನು ಇನ್ನಿತರರಿಂದ ಬೇರ್ಪಡಿಸುತ್ತಿದ್ದೇನೆ. ಅಂದರೆ ನನ್ನ ಮತ್ತು ಇತರರ ಮಧ್ಯ ಎನೋ ಅಂತರವಿದೆ ಎಂದಾಯಿತು. ಈ ಅಂತರವೇ ಅಳತೆ. ನಾನು ಒಂದು ಮಿತಿ. ನೀನು ಎಂಬುದು ಇನ್ನೊಂದು ಮಿತಿ. ಇವೆರಡರ ಮಧ್ಯ ಅಂತರ. ಈ ಅಂತರ ಒಂದು ಅಳತೆ. ನಾನು ನನ್ನ ಮಿತಿಯನ್ನು ಮೀರಲು ಇಷ್ಟಪಡುವುದಿಲ್ಲ. ನೀನು  ನಿನ್ನ ಮಿತಿಯನ್ನು ಮೀರಲು ಇಷ್ಟಪಡುವುದಿಲ್ಲ. ಈ ಅಂತರದ ಮತ್ತು ಅಳತೆಯ ಸಂದರ್ಭಗಳು ಭಯ, ಚಿಂತೆ, ಸಂದೇಹ ಮುಂತಾದ ಭಾವನೆಗಳಿಗೆ ಎಡೆಮಾಡಿಕೊಡುತ್ತವೆ.  ಈ ಅಳತೆಯೆ ಈ ಸಂಸಾರದ ಜಂಜಾಟಗಳಿಗೆ ಕಾರಣ.

ಇದನ್ನು ಪ್ರಸಿದ್ಧ  ದಾರ್ಶನಿಕರಾದ  ಜೆ. ಕೃಷ್ಣಮೂರ್ತಿಯವರು ಬಹಳ ಸರಳವಾಗಿ ಹೀಗೆ ಹೇಳುತ್ತಾರೆ-

“..........We use time as measure both outwardly and inwardly. We use time as measure as going
from here to there, that is, covering the distance needs time, physically. And we also think or, being educated in our culture, we think that psychologically, inwardly, inside the skin as it were, we need time to understand, we need time to conquer, we need time to break down our bondages, we need time to understand sorrow. So we use time as a measure both outwardly and inwardly........”

“............So to cover from a certain point to another point needs time, which is measure. Now we apply the same measurement inwardly. I need time to get over a habit, I need time to stop smoking, I need time to conquer my anger, I need time in order to achieve a certain psychological result, I need time to find enlightenment, (laughs) I need time to get over my sorrow. So outwardly we apply the measure of time, and inwardly we do the same, psychologically............”.
(J. Krishnamurti    Seventh Public Discussion in Saanen   August 1972)
ಇದೇ ರೀತಿ ತಾನು ಎನ್ನುವುದು ಮತ್ತು ಪರವೆನ್ನುವುದು ಕೂಡ ಅಳತೆ.  ಪರವೆಂಬುದು ತನ್ನಿಂದ ದೂರ. ಈ ದೂರವೇ,  ತಾನು ಅದನ್ನು ಪಡೆಯಬೇಕು, ಅಲ್ಲಿಗೆ ಹೋಗಬೇಕು, ಎನ್ನುವ ಭಾವ ಉಂಟು ಮಾಡುತ್ತದೆ. ಅದು ಅಳತೆಯ ಸಂಕೇತ. ಆದ್ದರಿಂದಲೇ ಅಲ್ಲಮರು ಈ ವಚನದಲ್ಲಿ ನಾನು, ತಾನು, ನೀನು,ಪರ ಮತ್ತು ಫ್ರಮಾಣವೂ ಪ್ರಮಾಣ ಅಥವಾ ಅಳತೆ ಎಂದು ಹೇಳುತ್ತಿದ್ದಾರೆ. ಆದರೆ ಗುಹೇಶ್ವರನೆಂಬುದು ಮಾತ್ರ  ಅಪ್ರಮಾಣ, ಎಂದರೆ ಅಳತೆಯನ್ನು ಮೀರಿದ್ದು ಎನ್ನುತ್ತಾರೆ.  ಅಳತೆಗಳ ಸಂಕೋಲೆ ನಮ್ಮಿಂದ ಕಳಚಿಹೋಗಬಹುದೆ?

ಆ ಅಪ್ರಮಾಣದ ಬಗ್ಗೆ ಜೆ. ಕೃಷ್ಣಮೂರ್ತಿಯವರು  ಹೀಗೆ ಹೇಳುತ್ತಾರೆ--      

“….. An immeasurable  vastness that is utterly still and silent. There is no space, nor time to cover that space. The beginning and the ending are here, of all things. There is really nothing that can be said about it…”.
Krishnamurti's Notebook (13) July 1st


ಪ್ರೀತಿಯ ಓದುಗರೆ,

ಇಲ್ಲಿಯವರೆಗೆ ನಾವು ವಚನಗಳ  ಅರ್ಥವನ್ನು  ನಮಗೆ ತಿಳಿದಂತೆ  ಬರೆದಿದ್ದೇವೆಈ ಬರವಣಿಗೆಯು ನಮ್ಮ ಕಲಿಕೆಗೆ ಸಾಧನವಾದದ್ದು  ನಮಗೆ ಆದ ಲಾಭ. ಇಲ್ಲಿ ನಮಗೆ ತಿಳಿದದ್ದು ಕಡಿಮೆ ಮತ್ತು ತಿಳಿಯಬೇಕಾದದ್ದು ಅಪಾರ ಎನಿಸುತ್ತಿದೆ. ಹೆಚ್ಚು ಹೆಚ್ಚು ಓದಿದಂತೆ ಅವುಗಳ ಅರ್ಥ ವಿಸ್ತಾರವಾಗುತ್ತ ಹೋಗುವುದು ನಮ್ಮ ಗಮನಕ್ಕೆ ಬಂದಿದೆ. ಈಗ ಬರೆದದ್ದು ಸಾಕು ಎನಿಸಿ ಅದನ್ನು ನಿಲ್ಲಿಸುತ್ತಿದ್ದೇವೆ. ನೀವು  ಇಲ್ಲಿಯವರೆಗೆ  ನಮ್ಮ ಬ್ಲಾಗನ್ನು ಓದುತ್ತ ಬಂದಿದ್ದೀರಿ ಮತ್ತು ಸ್ಪಂದಿಸಿದ್ದೀರಿ. ನಿಮಗೆ ಅನಂತ ಧನ್ಯವಾದಗಳು.

ಲೀಲಾ ಗರಡಿ ಮತ್ತು ಸಜ್ಜನ್ ಶಿವ



Saturday, November 1, 2014

Vachana 218: Dhareya Melulla Aruhiriyarellaru – The Intelligent People of the Earth


PLEASE NOTE THAT THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH THE VACHANA IS COMPOSED ORIGINALLY) SCROLL TO SECTIONS 5 AND 6.

1.       VACHANA IN KANNADA

ಧರೆಯ ಮೇಲುಳ್ಳ ಅರುಹಿರಿಯಲ್ಲರೂ
ಮರುಳುಗೊಂಡೋಡಾಡುತ್ತಿದ್ದಾರೆ ನೋಡಾ,
ಮಂಜಿನ ಮಡಕೆಯೊಳಗೆ ರಂಜನೆಯ ಭಂಡವ (ವಸ್ತುವನ್ನು) ತುಂಬಿ
ಅಂಜದೆ ಪಾಕವ ಮಾಡಿಕೊಂಡು ಉಂಡು
ಭಂಡವ  ಮಾರುತಿರ್ಪರು ನೋಡಾ.
ಸಂಜೀವನಿಯ ಬೇರೆ ಕಾಣದೆ ಮರಣಕ್ಕೊಳಗಾದರು
ಗುಹೇಶ್ವರನನರಿಯದ  ಭವ ಭಾರಕರೆಲ್ಲರು.

2.       TRANSLITERATION

dhareya mEluLLa aruhiriyarellarU maruLugoMDODaaDuttiddaare nODaa.
maMjina maDakeyoLage raMjaneya  bhaMDava tuMbi
aMjade paakava maaDikoMDu uMDu
bhaMDava maarutirparu nODaa,
saMjIvaniya bEre kaaNade maraNakkoLagaadaru
guhEshAVaranariyada bhava bhaarakarellaru

3.       RECITATION


4.       TRANSLATION (WORDS)

dhareya (the earth) mEluLLa (living on) aruhiriyarellarU(all the intelligent people)  maruLugoMDODaaDuttiddaare (are acting foolish)  nODaa (you see).
maMjina (fog) maDakeyoLage (in the pot of) raMjaneya (pleasure,happiness)  bhaMDava (thing, matter of) tuMbi (filled)
aMjade( not fearing) paakava  maaDikoMDu (cooking) uMDu (eating)
bhaMDava (material, matter) maarutirparu nODaa   (selling it you see),
saMjIvaniya  (life giving root) bEre kaaNade (not finding) maraNakkoLagaadaru (are succambed to death)
guhEshAVaranariyada (not realizing Guheshvara) bhava bhaarakarellaru (all the people who are carrying the burden of this world).

5.       VACHANA IN ENGLISH

All the intelligent people on the earth are acting fooloish, you see!
Having filled the pot of fog with the material of pleasure,
cooking and eating it without fear, and selling it, you see!
They are succumbed to death without finding the SaMjIvini (the life giving root),
the people carrying the burden of this world, having not realized Guhesvara!

6.       COMMENTARY

Allama Prabhu is commenting on the ways of the people in this world. Even the so called intelligent individuals are behaving in a foolsh manner. They are not using their intelligence towards achieving the permanent bliss. They are filling the pot made of fog with the material of the world. They are cooking it without the fear of this pot of fog melting away. They are not only immersed in this percieved pleasure and happiness, they are selling it to the fellow beings too.They have forgotten that the true happiness is the realization of Guhesvara, the divine, the Sanjivini (life giving root). Allama Prabhu wonders why all these intelligent individuals are so immersed in carrying the burden of this world, instead of moving towards realization of the Divine! The message of this Vachana then is that we have to realize that the pleasures of the world are temporary. The more we acquire the more we would like to have. This never ending quest of materialistic world has to stop. We need to use our intelligence in realizing this fact and move towards the true and permanent hapiness, the realization of the Self!

Let us perceive the impermanence of the materialistic world!

7.       KANNADA COMMENTARY

ಜಗತ್ತಿನ ರೀತಿಯನ್ನು ಕಂಡು ವ್ಯಕ್ತಗೊಂಡ ಅಲ್ಲಮರ ಈ ಉದ್ಗಾರ ಈಗಲೂ ಅತ್ಯಂತ  ಪ್ರಸ್ತುತವಾಗಿದೆ  ಮತ್ತು  ಬಹಳ ಸೊಗಸಾಗಿ ಮನಮುಟ್ಟುವಂತೆ ವ್ಯಕ್ತವಾಗಿದೆ.

ಸಂಸಾರದ ಆಕರ್ಷಣೆಗಳಲ್ಲಿ ಸಿಲುಕಿಕೊಂಡ ಜನರನ್ನು ನೋಡಿ ಅಲ್ಲಮರು - ಈ ಧರೆಯ ಮೇಲಿರುವ ಬುದ್ಧಿವಂತ ಹಿರಿಯರೆಲ್ಲರೂ ಹುಚ್ಚರಂತೆ ಓಡಾಡುತಿದ್ದಾರೆ, ಅವರ ನಡತೆಯಲ್ಲಿ ಬುದ್ಧಿವಂತಿಕೆ ಕಾಣುತ್ತಿಲ್ಲ, ಏಕೆಂದರೆ ಅವರು ಬಿಸಿಲಿಗೆ ಕರಗಿ ಹೋಗುವ ಮಂಜಿನ ಮಡಕೆಯೊಳಗೆ ಮನಸ್ಸಿಗೆ ಸುಖಕೊಡುವ ವಸ್ತುಗಳನ್ನು ತುಂಬಿದ್ದಾರೆ,  ಮಡಕೆ ಕರಗಿಹೋದರೆ ಸುಖ ನಾಶವಾಗುತ್ತದೆ ಎಂಬ ಭಯವಿಲ್ಲದೆ  ಅದರಲ್ಲಿಯೇ ಅಟ್ಟು ಉಣ್ಣುತ್ತಿದ್ದಾರೆ, ಆ ಮಂಜಿನ ಮಡಕೆ ಅದು ಯಾವ ಕ್ಷಣದಲ್ಲಾದರೂ ಕರಗಿಹೋಗಬಹುದು ಎಂಬುದರ ಅರಿವು ಅವರಿಗಿಲ್ಲ, ಅಷ್ಟೇ ಅಲ್ಲದೆ  ಧೈರ್ಯದಿಂದ ಅದನ್ನು ಇತರರಿಗೂ ಮಾರುತ್ತಿದ್ದಾರೆ, ಈ ಸಂಸಾರದ ಭಾರವನ್ನು ಹೊತ್ತವರು ಇದರಿಂದ ಮುಕ್ತರಾಗಲು ಸಂಜೀವನಿಯು ದೊರೆಯದೆ ಮರಣಕ್ಕೆ ಒಳಗಾಗಿದ್ದಾರೆ – ಎನ್ನುತ್ತಾರೆ.

ಇದು ಇಂದು ನಮ್ಮ ಮುಂದೆ ನಡೆಯುತ್ತಿರುವುದರ ಪ್ರತ್ಯಕ್ಷ ನಿದರ್ಶನ. ಜನರು ಬುದ್ಧಿವಂತರಂತೆ ಕಂಡರೂ ಅವರು ಮಾಡುತ್ತಿರುವುದು ಮೂರ್ಖತೆಯ ಪರಮಾವಧಿ. ಮಂಜಿನ ಮಡಕೆಯೊಳಗೆ ಸುಖಕೊಡುವ ವಸ್ತುವನ್ನು ತುಂಬಿ ಅಡುಗೆಮಾಡಿ ಉಣ್ಣುತ್ತಿದ್ದಾರೆ. ಅಂದರೆ ಅನೇಕ ವಿಷಯಗಳ ಹಿಂದೆ ಓಡುತ್ತ, ತಮ್ಮ ಕಲ್ಪನೆ ,ಮತ್ತು ಸಾಮರ್ಥ್ಯಗಳಿಂದ  ಅವುಗಳ ರುಚಿಯನ್ನು ಹೆಚ್ಚಿಸುತ್ತ  ಅನುಭವಿಸುತ್ತಿದ್ದಾರೆ. ಆದರೆ ಅದು ಮಂಜಿನ ಮಡಕೆ ಎಂಬುದೆ ಅವರಿಗೆ ತಿಳಿದಿಲ್ಲ. ಮನರಂಜನೆಯೇ ಜೀವನದ ಉದ್ದೇಶವಾಗಿದೆ- ನಾನಾ ದೇಶದ ಅಡುಗೆ ಊಟಗಳು. ವೇಶ ಭೂಷೆಗಳು, ಅಂದ ಚಂದದ ಸಾಮಾನುಗಳು, ಸೌಕರ್ಯದ ವಸ್ತುಗಳು, ಬಗೆ ಬಗೆಯ ಮನೆಗಳು, ವಾಹನಗಳು, ಯಂತ್ರಗಳು,  ಕೊನೆಯೇ ಇಲ್ಲದ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವುಗಳನ್ನು ಪಡೆಯುವ ತವಕ, ನಂತರ ಹೊಸದನ್ನು ಪಡೆಯುವ ಹಂಬಲ, ಇವುಗಳನ್ನು ಪಡೆದು ಇವುಗಳ ಸುಖ ಅನುಭವಿಸುವುದರಲ್ಲಿಯೆ ಜೀವನ ಕಳೆದು ಹೋಗುತ್ತದೆ.  ಅಷ್ಟೇ ಅಲ್ಲದೆ ಮೃಗಜಲದಂತೆ ಇರುವ  ಇದೇ ವಸ್ತುವನ್ನು ಇತರರಿಗೂ ಮಾರುತ್ತಿದ್ದಾರೆ.
ಆದರೆ ಈ ಸುಖ, ತನ್ನ ಕಲ್ಪನೆ , ಜನರ ಮಾತು ಮತ್ತು ಪ್ರಚಾರ ಮತ್ತು ಜಾಹಿರಾತುಗಳನ್ನು ಅವಲಂಬಿಸಿದೆ. ಅದು ಯಾವಾಗ ಬೇಕಾದರೂ ಬದಲಾಗಬಹುದು ಎಂಬುದು ಅರಿವಿಗೆ ಬರುವುದಿಲ್ಲ.
ಆಳವಾಗಿ ನೋಡಿದಲ್ಲಿ ಅದರಲ್ಲಿ ಸುಖವಿಲ್ಲ ಎಂಬುದು ಅರಿವಿಗೆ ಬರುತ್ತದೆ. ಆದರೆ ಅದರಿಂದ ಪಾರಾಗಲು ಅವರಿಗೆ ಸಂಜೀವನಿಯು ದೊರೆಯುತ್ತಿಲ್ಲ. ಹಾಗಾಗಿ ಅದರಲ್ಲಿಯೇ ಮುಳುಗಿ ಸಾವಿಗೀಡಾಗುತಿದ್ದಾರೆ. ಈ ಸಂಸಾರದ ಭಾರವನ್ನು ಹೊತ್ತು ತಿರುಗಾಡುತ್ತಿರುವ ಇವರು ಗುಹೇಶ್ವರನೆಂಬ ಸಂಜೀವನಿಯನ್ನು ಪಡೆಯದೆ  ಮರಣಕ್ಕೊಳಗಾಗುತ್ತಿದ್ದಾರೆ.


Friday, October 24, 2014

Vachana 217: Tapavembudu Tagahu – The Penance is an Obstacle


PLEASE NOTE THAT THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH THE VACHANA IS COMPOSED ORIGINALLY) SCROLL TO SECTIONS 5 AND 6.

1.       VACHANA IN KANNADA

ತಪವೆಂಬುದು ತಗಹು, ನೇಮವೆಂಬುದು ಬಂಧನ,
ಶೀಲವೆಂಬುದು ಸೂತಕ,  ಭಾಷೆ ಎಂಬುದು ಪ್ರಾಣಘಾತಕ,
ಇಂತೀ ಚತುರ್ವಿಧದೊಳಗಲ್ಲ
ಗುಹೇಶ್ವರಾ, ನಿಮ್ಮ ಶರಣರು ಅಗ್ರಗಣ್ಯರು.

2.       TRANSLITERATION

tapaveMbudu tagahu,  nEmaveMbudu baMdhana,
sheelaveMbudu sUtaka, bhaaShe eMbudu praaNaghaataka,
iMtI caturvidhadoLgalla
guhEshvaraa, nimma sharaNaru agragaNyaru.

3.       RECITATION


4.       TRANSLATION (WORDS)

tapaveMbudu ( so called penance)tagahu (an obstacle),  nEmaveMbudu (ritualistic regime)baMdhana (is bondage),
sheelaveMbudu (so called virtue) sUtaka (is pollution), bhaaShe eMbudu (so called oath) praaNaghaataka (is life taking),
iMtI caturvidhadoLgalla (is not in these four types)
guhEshvaraa (Guheshavra) , nimma sharaNaru agragaNyaru (your sharaNas are above all).

5.       VACHANA IN ENGLISH

So called penance is an obstacle, ritualistic regime is bondage,
So called virtue is pollution, so called oath is life taking,
Thus, they are not in these four types
Guheshavra, your devotees are above all these!

6.       COMMENTARY

Allama Prabhu is commenting on the multiple modes people employ to reach God. They go through serious penance,  rirtualistic worshipping, living  a virtuos life, and taking oaths and promising  Him various things if the wishes are fulfilled. Allama Prabhu says that none of these methods bring one close to God. The true devotees of  God are above all these.

We have been told that a deep penance where we subject our body to all sorts of descipline and hardships, give up all the worldly luxuries, continue to chant His name repeatedly, and concentrate on Him would make us  reach Him. But, how can you concentrate on the one who cannot be seen, cannot be touched and cannot even be imagined?  The moment we imagine Him in a particular form, we have just realized that form and there is no need for the penance. Penance is thus at best an obstacle and does not allow us to  reach Him!  He can only be experienced!
All the rituals we go through to worship Him are the methods and modes we have created. They make us spend time and resources on the rituals rather than allowing us to experience Him.
Virtuos living is said to be the way to live to reach God.  Allama Prabhu says that it is  just a pollution and gives us the false notion of the path to reach Him.
 It is very common that we promise to offer God one or more of our belongings in return to some favor we ask of Him. Everything we have came from Him.  How can we promise to give Him what He has given us?
A true devotee is above employing these methods. He does not need all these modes!
He/she has realized the Self and has merged with Him.

Let us strive to experience Him!

7.       KANNADA COMMENTARY

ತಪವೆಂಬುದು ತಗಹು (ಅಡ್ಡಿ ತಡೆ), ನೇಮ (ಕಟ್ಟುಪಾಡು, ಕ್ರಮಬದ್ಧ ಆಚರಣೆ)ವೆಂಬುದು ಬಂಧನ
ಶೀಲ (ಒಳ್ಳೆಯ ನಡತೆ,ಸಚ್ಚಾರಿತ್ರ್ಯ)ವೆಂಬುದು ಸೂತಕ (ಮೈಲಿಗೆ),  ಭಾಷೆ (ಪ್ರತಿಜ್ಞೆ, ಆಣೆ)ಎಂಬುದು ಪ್ರಾಣಘಾತಕ (ಪ್ರಾಣಕ್ಕೆ ಮಾರಕ),
ಇಂತೀ ಚತುರ್ವಿಧದೊಳಗಲ್ಲ (ಈ  ನಾಲ್ಕು ವಿಧಗಳಲ್ಲಿಯೂ ಇಲ್ಲ)
ಗುಹೇಶ್ವರಾ, ನಿಮ್ಮ ಶರಣರು ಅಗ್ರಗಣ್ಯರು (ಇದಕ್ಕಿಂತ ಶ್ರೇಷ್ಠರು)

ಸಾಮಾನ್ಯವಾಗಿ ಜನರು ದೇವರನ್ನು ಪಡೆಯಲು ನಾನಾ ಉಪಾಯಗಳನ್ನು ಮಾಡುತ್ತಾರೆ. ತಪಸ್ಸು  ಕೈಗೊಳ್ಳುತ್ತಾರೆ, ವ್ರತ ನಿಯಮಗಳನ್ನು ಮತ್ತು ಸಚ್ಚಾರಿತ್ರ್ಯವನ್ನು ಪಾಲಿಸುತ್ತಾರೆ, ಇಂತಿಂತಹದನ್ನು ಮಾಡುತ್ತೇನೆ ಇಂತಿಂತಹದನ್ನು ಮಾಡುವುದಿಲ್ಲ ಎಂದು ಆಣೆ ಭಾಷೆ ಮಾಡುತ್ತಾರೆ. ಆದರೆ ಅಲ್ಲಮರು ಹೇಳುತ್ತಾರೆ, ದೇವರು ಇವುಗಳಲ್ಲಿ ಇಲ್ಲ. ಶರಣರು ಇವುಗಳನ್ನೆಲ್ಲ ಮೀರಿದವರು ಎಂದು.

ತಪಸ್ಸು ದೇವರನ್ನು, ಪರತತ್ವವನ್ನು  ಕಾಣುವುದರಲ್ಲಿ ಅಡ್ಡಿ ಮಾಡುತ್ತದೆ ಎನ್ನುತ್ತಾರೆ. ಇದನ್ನು ಅರ್ಥಮಾಡಿಕೊಳ್ಳಲು ಮೊದಲು ತಪಸ್ಸು ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ತಪಸ್ಸು ಎಂದರೆ, ವ್ರತ, ನಿಯಮಗಳಿಂದ ದೇಹವನ್ನು ದಂಡಿಸುತ್ತ ಧ್ಯಾನ ಮಾಡುವುದು,  ಮನಸ್ಸನ್ನು ಒಂದೇ ವಿಷಯದಲ್ಲಿ ಸ್ಥಿರವಾಗಿಡುವುದು, ಮನಸ್ಸಿನ ಏಕಾಗ್ರತೆ ಎಂಬ ಅರ್ಥಗಳಿವೆ. ದೇವರು ಅಥವಾ ಪರತತ್ವ ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಅದನ್ನು ಅನುಭವಿಸಬೇಕು. ಅದು ನೋಟಕ್ಕೆ, ಸ್ಪರ್ಶಕ್ಕೆ, ಕಲ್ಪನೆಗೆ, ಮಾತಿಗೆ ಸಿಗುವಂತಹದಲ್ಲ. ಅಂತಹದನ್ನು ಕುರಿತು ತಪಸ್ಸು ಮಾಡಲು ಸಾಧ್ಯವೆ?  ಕಲ್ಪನೆಗೆ ನಿಲುಕದ್ದನ್ನು ಕುರಿತು ಹೇಗೆ ಧ್ಯಾನ ಮಾಡುವುದು?  ಯಾವುದರ ಬಗ್ಗೆ ಏಕಾಗ್ರತೆ  ಸಾಧಿಸುವುದು? ಹಾಗಾದರೆ ತಪಸ್ಸು ಮಾಡುವುದರಿಂದ ಏನಾಗುತ್ತದೆ? ಅಂದರೆ ನಾವು ನಮಗೆ ತಿಳಿದ ವಿಷಯದ ಬಗ್ಗೆ ತಪಸ್ಸು ಆಚರಿಸುತ್ತೇವೆ. ಅಂದರೆ ನಮ್ಮ ತಿಳಿವಳಿಕೆ ನಮಗೆ ದೇವರನ್ನು ಕಾಣುವುದರಲ್ಲಿ ಅಡ್ಡಿ ಉಂಟುಮಾಡುತ್ತದೆ. ಇದನ್ನೇ ಅಲ್ಲಮರು ಹೇಳುತ್ತಿರುವುದು.

ಇನ್ನು ನೇಮಗಳಬಗ್ಗೆ ಹೇಳುತ್ತಾರೆ. ನಮಗೆ ನಾವೇ ಕಟ್ಟುಪಾಡು ಮಾಡಿಕೊಳ್ಳುವುದು, ಕ್ರಮಬದ್ಧವಾದ ಆಚರಣೆ ಮಾಡುವುದು. ಇದು ನಮಗೆ ನಾವೇ ಬಂಧನವನ್ನು ಹೇರಿಕೊಂಡಂತೆ. ಯಾವುದು ಮಾಡಬೇಕು ಯಾವುದು ಮಾಡಬಾರದು ಎಂಬುದನ್ನು ಆಯಾ ವಿಷಯದ ತಳಮಟ್ಟದವರೆಗುಹೋಗಿ ಅರ್ಥಮಾಡಿಕೊಂಡಾಗ  ಅಲ್ಲಿ ಕ್ರಿಯೆ ತಾನಾಗಿಯೆ ಮೂಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಂತಹದನ್ನು ಮಾಡುತ್ತೇನೆ ಇಂತಹದನ್ನು ಮಾಡುವುದಿಲ್ಲ ಎಂಬಂತಹ ವ್ರತ ನೇಮಗಳ ಅವಶ್ಯಕತೆಯಿರುವುದಿಲ್ಲ. ಇವುಗಳು ಬಂಧನವಾಗಿ ಪರತತ್ವದ ಅರಿವುಪಡೆಯುವ ದಾರಿಯಲ್ಲಿ ಅಡ್ಡಿಯಾಗುತ್ತವೆ.

ಶೀಲವೆಂಬುದು ಸೂತಕವೆನ್ನುತ್ತಾರೆ. ಸಚ್ಚಾರಿತ್ರ್ಯ, ಸದಾಚಾರ ಕೂಡ ತನ್ನನ್ನು ತಾನು ಆಳವಾಗಿ ಅರಿತಾಗ  ಸಹಜವಾಗಿ ಅಳವಡುವ ನಡೆವಳಿಕೆ. ಅದನ್ನು ಸಚ್ಚಾರಿತ್ರ್ಯ, ದುರ್ನಡತೆ ಎಂದು ಭೇದಮಾಡಿ ಅಭ್ಯಾಸ ಮಾಡುವ ಅವಶ್ಯಕತೆಯಿರುವುದಿಲ್ಲ. ಶೀಲವೆಂಬುದು ಮೇಲ್ಮೈ ನಡೆವಳಿಕೆ. ಇದು ಅಹಂಕಾರಕ್ಕೆ ಎಡೆಮಾಡಿಕೊಟ್ಟು ಇತರರಿಂದ ದೂರವಿರಿಸುತ್ತದೆ.  ಅದೇ ಒಂದು ಸೂತಕವಾಗುತ್ತದೆ.

ಆಣೆ ಭಾಷೆಗಳು  ಪ್ರಾಣಘಾತಕ ಎನ್ನುತ್ತಾರೆ.  ಆಣೆ ಭಾಷೆಗಳು ನಮಗೆ ನಾವು ಹೇರಿಕೊಂಡ  ನಿರ್ಬಂಧನೆಗಳು. ಈ ನಿರ್ಬಂಧನೆಗಳಿಂದ ಆ ಪರತತ್ವ ಸಾಧಿಸುತ್ತೇನೆ ಎನ್ನುವುದು ಭ್ರಮೆ.  ಉದಾಹರಣೆಗೆ – ಸಂನ್ಯಾಸಿಗಳು ಬ್ರಹ್ಮಚರ್ಯದ, ಒಂದೇ ಸ್ಥಳದಲ್ಲಿ  ಬಹಳಕಾಲ ವಾಸ ಮಾಡದ, ಇಂತಿಂತಹ ಆಹಾರ ಪದಾರ್ಥಗಳನ್ನು ಸ್ವೀಕರಿಸಿದ ನಾನಾ ತರಹದ ಆಣೆ ಭಾಷೆಗಳನ್ನು ಮಾಡಿರುತ್ತಾರೆ. ಇವು ಕೇವಲ ನಿರ್ಬಂಧನೆಗಳು ಇವುಗಳಿಂದ ಯಾವ ಪ್ರಯೋಜನವೂ ಇಲ್ಲ.

ಅಲ್ಲಮರು ಹೇಳುತ್ತಾರೆ- ಶರಣರು ಇವುಗಳ ಆಯಾಮದಲ್ಲಿ ಬರುವುದಿಲ್ಲ. ಅವರು ಇವುಗಳನ್ನ್ನು ಮೀರಿರುವರು, ಇವುಗಳಿಗಿಂತ ಶ್ರೇಷ್ಠರು.  ಇವುಗಳಲ್ಲಿ ಸಿಕ್ಕಿಕೊಂದವರು ಪರತತ್ವವವನ್ನು ಕಾಣುವುದಿಲ್ಲ ಎಂಬ ಧ್ವನಿ ಇಲ್ಲಿದೆ.





Friday, October 17, 2014

Vachana 216: Tatvava Nudiva Hiriyarellaru – The Elders Preaching Righteousness


PLEASE NOTE:  THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH VACHANAS WERE COMPOSED ORIGINALLY), SCROLL DOWN TO SECTIONS 5 AND 6.

1.       VACHANA IN KANNADA

ತತ್ವವ  ನುಡಿವ ಹಿರಿಯರೆಲ್ಲರು
ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗ ಪಡುತ್ತಿದ್ದರು ನೋಡಾ
ನಿತ್ಯಾನಿತ್ಯವ  ಹೇಳುವ  ಹಿರಿಯರು  ತಮ್ಮ  ಒಡಲ ಕಕ್ಕುಲತೆಗೆ ಹೋಗಿ.
ಭಕ್ತಿಯ ಹೊಲಬನರಿಯದ, ಜಡ ಜೀವಿ  ಮಾನವರ ಇಚ್ಛೆಯ ನುಡಿದು,
ಹಲಬುತಿಪ್ಪರು ನೋಡಾ!
ಕತ್ತೆಗೆ ಕರ್ಪೂರವ ಹೇರಿದಂತೆ
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ?

2.       TRANSLITERATION

tatvava nuDiva hiriyarellaru
tuttnikkuvara baagilalli, accugapaDuttiddaru nODaa!
nityaanityava hELuva hiriyaru tamma oDala kakkulatege hOgi,
bhaktiya holabanariyada jaDa jIvi maanavara icCeya nuDidu,
halabuttipparu nODA!
kattege karpoorava hEridaMte
 avarige innettaNA muktiyO  guhEshvaraa?

3.     RECITATION


4.     TRANSLATION (WORDS)

tatvava  (principles of the dharma) nuDiva (speaking of) hiriyarellaru (all the elders)
tuttnikkuvara (those who provide food) baagilalli (at the door), accugapaDuttiddaru (worried) nODaa (you see)!
nityaanityava (eternal and the ephemeral) hELuva (saying)  hiriyaru (the elders) tamma (of their own) oDala (stomach) kakkulatege hOgi (for the worry of) ,
bhaktiya (of devotion)  holabanariyada (not knowing the path) jaDa jIvi (inert) maanavara (humans) icCeya nuDidu (talking of their interest),
halabuttipparu nODA (feeling sorry you see)!
kattege (the donkey) karpoorava (perfume) hEridaMte (like loading)
 avarige (for those) innettaNA (when)  muktiyO (liberation)   guhEshvaraa?

5.     VACHANA IN ENGLISH

All those elders speaking of Righteousness,
are at the doors of the providers of food, worried, you see!
The elders speaking of the eternal and ephemeral, with the worry of their own stomach, are speaking to the interest of inert humans who are not aware of the path of devotion and are feeling sorry, you see!
It is like loading a donkey with perfumes!
When will they attain liberation, Guhesvara?

6.       COMMENTARY

Allama Prabhu comments on how the individuals, who have gained the knowledge of the principles of righteousness and the awareness of the path of devotion, utilize that knowledge to merely earning their living and filling their stomachs. He says, this is like loading a donkey with perfume. The donkey carries a precious load, but is never aware of how precious what it is carrying. Allama Prabhu questions as to how such individuals ever gain liberation.

All these elders who preach the principals of righteousness are at the doors of those who provide them food. They are worried about filling their stomachs. Then there are elders (experts) who speak of eternal and ephemeral. Their interest again is to fill their stomach. They do not hesitate to speak to inert (ordinary) humans who have never been exposed to the path of devotion, what they would like to hear.

The knowledge and awareness gained by these elders has just become a way of earning a living. They never internalized it. They never thought of following what they preach. They are not interested in the eternal bliss.

We must gain the knowledge needed to be the best in our careers and professions. We must gain the knowledge that makes us devote human beings. The former brings us the worldly happiness and the latter brings us the inner bliss. It will be great if we can preach what we practice!

Let us not just say what others would like to hear!


7.       KANNADA COMMENTARY

ತತ್ವವ (ಧರ್ಮದ ಸಾರ) ನುಡಿವ ಹಿರಿಯರೆಲ್ಲರು
ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗ (ಮರುಕ) ಪಡುತ್ತಿದ್ದರು ನೋಡಾ
ನಿತ್ಯಾನಿತ್ಯವ  ಹೇಳುವ  ಹಿರಿಯರು  ತಮ್ಮ  ಒಡಲ ಕಕ್ಕುಲತೆಗೆ  (ಚಿಂತೆಗೆ)ಹೋಗಿ.
ಭಕ್ತಿಯ ಹೊಲಬನರಿಯದ (ಮಾರ್ಗವನ್ನರಿಯದ), ಜಡ ಜೀವಿ  ಮಾನವರ ಇಚ್ಛೆಯ ನುಡಿದು,
ಹಲಬುತಿಪ್ಪರು (ದುಃಖ ಪಡುತ್ತಿದ್ದಾರೆ) ನೋಡಾ!
ಕತ್ತೆಗೆ ಕರ್ಪೂರವ ಹೇರಿದಂತೆ
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ?


ಜನರು ಹೇಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಧರ್ಮದ ಮಾತುಗಳನ್ನು ಬಳಸುತ್ತಾರೆ ಎಂಬುದನ್ನು ಹೇಳುತ್ತ ಅಂತಹವರಿಗೆ ಮುಕ್ತಿ ಹೇಗೆ ದೊರೆಯಲು ಸಾಧ್ಯ ಎನ್ನುತ್ತಾರೆ ಅಲ್ಲಮ ಪ್ರಭುಗಳು.

ಧರ್ಮದ ಸಾರವನ್ನು ಹೇಳುವ ಹಿರಿಯರಿಗೂ ಹೊಟ್ಟೆಯ ಚಿಂತೆಯಿದೆ. ಅವರು ತಮ್ಮ ಹೊಟ್ಟೆಯಪಾಡಿಗಾಗಿ ಉಳ್ಳವರ ಬಾಗಿಲಲ್ಲಿ ನಿಂತು ತಮಗಾಗಿ ಮರುಕಪಡುತ್ತಿದ್ದಾರೆ. ಧರ್ಮದ ಸಾರವನ್ನು ಬೌದ್ಧಿಕವಾಗಿ ತಿಳಿದುಕೊಂಡಿದ್ದರೂ ತಮಗಾಗಿ ಮರುಕ ಪಡುತ್ತಾರೆ. ತಾವು ತಿಳಿದುಕೊಂಡ ಧರ್ಮದ ಸಾರ ಅವರ ಸಹಾಯಕ್ಕೆ ಬರದಾಗಿದೆ.
ಯಾವುದು ನಿತ್ಯ ಯಾವುದು ಅನಿತ್ಯ  ಎಂದು ಹೇಳುವ ದೊಡ್ಡವರು ತಮ್ಮ ಹೊಟ್ಟೆಯ ಚಿಂತೆಗೆ ಬಲಿಯಾಗಿ  ಭಕ್ತಿ ಎಂದರೇನು ಎಂಬುದನ್ನು ತಿಳಿಯದ ಜಡ ಜೀವಿಗಳಿಗೆ  ಅವರು ತಮ್ಮ ಮನದಲ್ಲಿ ಏನನ್ನು ಬಯಸುತ್ತಾರೆಯೋ ಅದನ್ನೇ ಹೇಳಿ ತಾವು ದುಃಖಪಡುತ್ತಿದ್ದಾರೆ ಮತ್ತು ಅವರ ದುಃಖವನ್ನೂ ದೂರಮಾಡುತ್ತಿಲ್ಲ. ನಿತ್ಯ ಅನಿತ್ಯದ ಬಗ್ಗೆ ಹೇಳಿದರೂ ತಮ್ಮ ಅನಿತ್ಯವಾದ ಚಿಂತೆಯಿಂದ ಹೊರಬರಲು ಅವರಿಗೆ ಸಾಧ್ಯವಾಗಿಲ್ಲ. ಭಕ್ತಿಯ ದಾರಿಯನ್ನರಿಯದ ಜಡಜೀವಿಗಳು ಎನ್ನುತ್ತಾರೆ ಸಾಮಾನ್ಯರನ್ನು. ಏಕೆಂದರೆ ಭಕ್ತಿ ಇತರರಿಂದ ಕೇಳಿ ಮಾಡುವಂತಹುದಲ್ಲ. ಅದು ತಾನಾಗಿಯೇ ಸ್ಫುರಿಸಬೇಕು. ಭಕ್ತಿ ಮಾಡುವುದು ಮತ್ತು ಮಾಡುವುದನ್ನು ಹೇಳುವುದು ಎರಡು ಅರ್ಥವಿಲ್ಲದವು. ಆದರೆ ಜನರು ಭಕ್ತಿಯ ವಿಷಯದಲ್ಲಿ ತಾವು ಜಡವಾಗಿದ್ದು, ಹೊಟ್ಟೆಯ ಪಾಡಿಗಾಗಿ ಈ ಮಾರ್ಗವನ್ನು ಹಿಡಿದಿದ್ದಾರೆ. ತತ್ವವನ್ನು ಅರಿದವರಿಗೆ ತನುಗುಣಗಳು ಬಾಧಿಸುವುದಿಲ್ಲ. ಆದರೆ ಇಲ್ಲಿ ಹೊಟ್ಟೆಯ ಚಿಂತೆ ಅವರನ್ನು ಕಾಡುತ್ತಿದೆ.
ಕತ್ತೆಯ ಮೇಲೆ ಕರ್ಪೂರವನ್ನು ಹೇರಿದರೆ ಏನು ಉಪಯೋಗ. ಅದಕ್ಕೆ ಕರ್ಪೂರದ ಬೆಲೆ ಅಥವಾ ಅದರ ಸುವಾಸನೆಯ ಅರಿವು ಇಲ್ಲ. ಅದೇ ರೀತಿಯಾಗಿ ಇಂತಹ ಜನರು ಶಾಸ್ತ್ರಗಳನ್ನು ಓದಿ ತಿಳಿದಿರುತ್ತಾರೆ. ಆದರೆ ಅದರ ನಿಜವಾದ ಬೆಲೆ, ಅರ್ಥ ತಿಳಿದಿರುವುದಿಲ್ಲ. ಅದು  ಅವರ ಜೀವನದ ಆವಿಭಾಜ್ಯ ಅಂಗವಾಗಿರುವುದಿಲ್ಲ. ಅದು ತಿಳಿದುಕೊಳ್ಳಬೇಕಾದ ಮಹತ್ವ ಪೂರ್ಣ ಅಂಶವಾಗಿರುತ್ತದೆ ಅಷ್ಟೆ.  ಯಾವುದೋ ಕಾರಣಕ್ಕಾಗಿ ಅದನ್ನು ತಿಳಿದುಕೊಂಡು ಉಪಯೋಗಿಸಿದರೆ ಅದರಿಂದ ಹೊಟ್ಟೆ ತುಂಬಬಹುದೆ ಹೊರತು ಮುಕ್ತಿ ದೊರೆಯಲಾರದು ಎನ್ನುತ್ತಾರೆ ಅಲ್ಲಮರು.