Friday, October 24, 2014

Vachana 217: Tapavembudu Tagahu – The Penance is an Obstacle


PLEASE NOTE THAT THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH THE VACHANA IS COMPOSED ORIGINALLY) SCROLL TO SECTIONS 5 AND 6.

1.       VACHANA IN KANNADA

ತಪವೆಂಬುದು ತಗಹು, ನೇಮವೆಂಬುದು ಬಂಧನ,
ಶೀಲವೆಂಬುದು ಸೂತಕ,  ಭಾಷೆ ಎಂಬುದು ಪ್ರಾಣಘಾತಕ,
ಇಂತೀ ಚತುರ್ವಿಧದೊಳಗಲ್ಲ
ಗುಹೇಶ್ವರಾ, ನಿಮ್ಮ ಶರಣರು ಅಗ್ರಗಣ್ಯರು.

2.       TRANSLITERATION

tapaveMbudu tagahu,  nEmaveMbudu baMdhana,
sheelaveMbudu sUtaka, bhaaShe eMbudu praaNaghaataka,
iMtI caturvidhadoLgalla
guhEshvaraa, nimma sharaNaru agragaNyaru.

3.       RECITATION


4.       TRANSLATION (WORDS)

tapaveMbudu ( so called penance)tagahu (an obstacle),  nEmaveMbudu (ritualistic regime)baMdhana (is bondage),
sheelaveMbudu (so called virtue) sUtaka (is pollution), bhaaShe eMbudu (so called oath) praaNaghaataka (is life taking),
iMtI caturvidhadoLgalla (is not in these four types)
guhEshvaraa (Guheshavra) , nimma sharaNaru agragaNyaru (your sharaNas are above all).

5.       VACHANA IN ENGLISH

So called penance is an obstacle, ritualistic regime is bondage,
So called virtue is pollution, so called oath is life taking,
Thus, they are not in these four types
Guheshavra, your devotees are above all these!

6.       COMMENTARY

Allama Prabhu is commenting on the multiple modes people employ to reach God. They go through serious penance,  rirtualistic worshipping, living  a virtuos life, and taking oaths and promising  Him various things if the wishes are fulfilled. Allama Prabhu says that none of these methods bring one close to God. The true devotees of  God are above all these.

We have been told that a deep penance where we subject our body to all sorts of descipline and hardships, give up all the worldly luxuries, continue to chant His name repeatedly, and concentrate on Him would make us  reach Him. But, how can you concentrate on the one who cannot be seen, cannot be touched and cannot even be imagined?  The moment we imagine Him in a particular form, we have just realized that form and there is no need for the penance. Penance is thus at best an obstacle and does not allow us to  reach Him!  He can only be experienced!
All the rituals we go through to worship Him are the methods and modes we have created. They make us spend time and resources on the rituals rather than allowing us to experience Him.
Virtuos living is said to be the way to live to reach God.  Allama Prabhu says that it is  just a pollution and gives us the false notion of the path to reach Him.
 It is very common that we promise to offer God one or more of our belongings in return to some favor we ask of Him. Everything we have came from Him.  How can we promise to give Him what He has given us?
A true devotee is above employing these methods. He does not need all these modes!
He/she has realized the Self and has merged with Him.

Let us strive to experience Him!

7.       KANNADA COMMENTARY

ತಪವೆಂಬುದು ತಗಹು (ಅಡ್ಡಿ ತಡೆ), ನೇಮ (ಕಟ್ಟುಪಾಡು, ಕ್ರಮಬದ್ಧ ಆಚರಣೆ)ವೆಂಬುದು ಬಂಧನ
ಶೀಲ (ಒಳ್ಳೆಯ ನಡತೆ,ಸಚ್ಚಾರಿತ್ರ್ಯ)ವೆಂಬುದು ಸೂತಕ (ಮೈಲಿಗೆ),  ಭಾಷೆ (ಪ್ರತಿಜ್ಞೆ, ಆಣೆ)ಎಂಬುದು ಪ್ರಾಣಘಾತಕ (ಪ್ರಾಣಕ್ಕೆ ಮಾರಕ),
ಇಂತೀ ಚತುರ್ವಿಧದೊಳಗಲ್ಲ (ಈ  ನಾಲ್ಕು ವಿಧಗಳಲ್ಲಿಯೂ ಇಲ್ಲ)
ಗುಹೇಶ್ವರಾ, ನಿಮ್ಮ ಶರಣರು ಅಗ್ರಗಣ್ಯರು (ಇದಕ್ಕಿಂತ ಶ್ರೇಷ್ಠರು)

ಸಾಮಾನ್ಯವಾಗಿ ಜನರು ದೇವರನ್ನು ಪಡೆಯಲು ನಾನಾ ಉಪಾಯಗಳನ್ನು ಮಾಡುತ್ತಾರೆ. ತಪಸ್ಸು  ಕೈಗೊಳ್ಳುತ್ತಾರೆ, ವ್ರತ ನಿಯಮಗಳನ್ನು ಮತ್ತು ಸಚ್ಚಾರಿತ್ರ್ಯವನ್ನು ಪಾಲಿಸುತ್ತಾರೆ, ಇಂತಿಂತಹದನ್ನು ಮಾಡುತ್ತೇನೆ ಇಂತಿಂತಹದನ್ನು ಮಾಡುವುದಿಲ್ಲ ಎಂದು ಆಣೆ ಭಾಷೆ ಮಾಡುತ್ತಾರೆ. ಆದರೆ ಅಲ್ಲಮರು ಹೇಳುತ್ತಾರೆ, ದೇವರು ಇವುಗಳಲ್ಲಿ ಇಲ್ಲ. ಶರಣರು ಇವುಗಳನ್ನೆಲ್ಲ ಮೀರಿದವರು ಎಂದು.

ತಪಸ್ಸು ದೇವರನ್ನು, ಪರತತ್ವವನ್ನು  ಕಾಣುವುದರಲ್ಲಿ ಅಡ್ಡಿ ಮಾಡುತ್ತದೆ ಎನ್ನುತ್ತಾರೆ. ಇದನ್ನು ಅರ್ಥಮಾಡಿಕೊಳ್ಳಲು ಮೊದಲು ತಪಸ್ಸು ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ತಪಸ್ಸು ಎಂದರೆ, ವ್ರತ, ನಿಯಮಗಳಿಂದ ದೇಹವನ್ನು ದಂಡಿಸುತ್ತ ಧ್ಯಾನ ಮಾಡುವುದು,  ಮನಸ್ಸನ್ನು ಒಂದೇ ವಿಷಯದಲ್ಲಿ ಸ್ಥಿರವಾಗಿಡುವುದು, ಮನಸ್ಸಿನ ಏಕಾಗ್ರತೆ ಎಂಬ ಅರ್ಥಗಳಿವೆ. ದೇವರು ಅಥವಾ ಪರತತ್ವ ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಅದನ್ನು ಅನುಭವಿಸಬೇಕು. ಅದು ನೋಟಕ್ಕೆ, ಸ್ಪರ್ಶಕ್ಕೆ, ಕಲ್ಪನೆಗೆ, ಮಾತಿಗೆ ಸಿಗುವಂತಹದಲ್ಲ. ಅಂತಹದನ್ನು ಕುರಿತು ತಪಸ್ಸು ಮಾಡಲು ಸಾಧ್ಯವೆ?  ಕಲ್ಪನೆಗೆ ನಿಲುಕದ್ದನ್ನು ಕುರಿತು ಹೇಗೆ ಧ್ಯಾನ ಮಾಡುವುದು?  ಯಾವುದರ ಬಗ್ಗೆ ಏಕಾಗ್ರತೆ  ಸಾಧಿಸುವುದು? ಹಾಗಾದರೆ ತಪಸ್ಸು ಮಾಡುವುದರಿಂದ ಏನಾಗುತ್ತದೆ? ಅಂದರೆ ನಾವು ನಮಗೆ ತಿಳಿದ ವಿಷಯದ ಬಗ್ಗೆ ತಪಸ್ಸು ಆಚರಿಸುತ್ತೇವೆ. ಅಂದರೆ ನಮ್ಮ ತಿಳಿವಳಿಕೆ ನಮಗೆ ದೇವರನ್ನು ಕಾಣುವುದರಲ್ಲಿ ಅಡ್ಡಿ ಉಂಟುಮಾಡುತ್ತದೆ. ಇದನ್ನೇ ಅಲ್ಲಮರು ಹೇಳುತ್ತಿರುವುದು.

ಇನ್ನು ನೇಮಗಳಬಗ್ಗೆ ಹೇಳುತ್ತಾರೆ. ನಮಗೆ ನಾವೇ ಕಟ್ಟುಪಾಡು ಮಾಡಿಕೊಳ್ಳುವುದು, ಕ್ರಮಬದ್ಧವಾದ ಆಚರಣೆ ಮಾಡುವುದು. ಇದು ನಮಗೆ ನಾವೇ ಬಂಧನವನ್ನು ಹೇರಿಕೊಂಡಂತೆ. ಯಾವುದು ಮಾಡಬೇಕು ಯಾವುದು ಮಾಡಬಾರದು ಎಂಬುದನ್ನು ಆಯಾ ವಿಷಯದ ತಳಮಟ್ಟದವರೆಗುಹೋಗಿ ಅರ್ಥಮಾಡಿಕೊಂಡಾಗ  ಅಲ್ಲಿ ಕ್ರಿಯೆ ತಾನಾಗಿಯೆ ಮೂಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಂತಹದನ್ನು ಮಾಡುತ್ತೇನೆ ಇಂತಹದನ್ನು ಮಾಡುವುದಿಲ್ಲ ಎಂಬಂತಹ ವ್ರತ ನೇಮಗಳ ಅವಶ್ಯಕತೆಯಿರುವುದಿಲ್ಲ. ಇವುಗಳು ಬಂಧನವಾಗಿ ಪರತತ್ವದ ಅರಿವುಪಡೆಯುವ ದಾರಿಯಲ್ಲಿ ಅಡ್ಡಿಯಾಗುತ್ತವೆ.

ಶೀಲವೆಂಬುದು ಸೂತಕವೆನ್ನುತ್ತಾರೆ. ಸಚ್ಚಾರಿತ್ರ್ಯ, ಸದಾಚಾರ ಕೂಡ ತನ್ನನ್ನು ತಾನು ಆಳವಾಗಿ ಅರಿತಾಗ  ಸಹಜವಾಗಿ ಅಳವಡುವ ನಡೆವಳಿಕೆ. ಅದನ್ನು ಸಚ್ಚಾರಿತ್ರ್ಯ, ದುರ್ನಡತೆ ಎಂದು ಭೇದಮಾಡಿ ಅಭ್ಯಾಸ ಮಾಡುವ ಅವಶ್ಯಕತೆಯಿರುವುದಿಲ್ಲ. ಶೀಲವೆಂಬುದು ಮೇಲ್ಮೈ ನಡೆವಳಿಕೆ. ಇದು ಅಹಂಕಾರಕ್ಕೆ ಎಡೆಮಾಡಿಕೊಟ್ಟು ಇತರರಿಂದ ದೂರವಿರಿಸುತ್ತದೆ.  ಅದೇ ಒಂದು ಸೂತಕವಾಗುತ್ತದೆ.

ಆಣೆ ಭಾಷೆಗಳು  ಪ್ರಾಣಘಾತಕ ಎನ್ನುತ್ತಾರೆ.  ಆಣೆ ಭಾಷೆಗಳು ನಮಗೆ ನಾವು ಹೇರಿಕೊಂಡ  ನಿರ್ಬಂಧನೆಗಳು. ಈ ನಿರ್ಬಂಧನೆಗಳಿಂದ ಆ ಪರತತ್ವ ಸಾಧಿಸುತ್ತೇನೆ ಎನ್ನುವುದು ಭ್ರಮೆ.  ಉದಾಹರಣೆಗೆ – ಸಂನ್ಯಾಸಿಗಳು ಬ್ರಹ್ಮಚರ್ಯದ, ಒಂದೇ ಸ್ಥಳದಲ್ಲಿ  ಬಹಳಕಾಲ ವಾಸ ಮಾಡದ, ಇಂತಿಂತಹ ಆಹಾರ ಪದಾರ್ಥಗಳನ್ನು ಸ್ವೀಕರಿಸಿದ ನಾನಾ ತರಹದ ಆಣೆ ಭಾಷೆಗಳನ್ನು ಮಾಡಿರುತ್ತಾರೆ. ಇವು ಕೇವಲ ನಿರ್ಬಂಧನೆಗಳು ಇವುಗಳಿಂದ ಯಾವ ಪ್ರಯೋಜನವೂ ಇಲ್ಲ.

ಅಲ್ಲಮರು ಹೇಳುತ್ತಾರೆ- ಶರಣರು ಇವುಗಳ ಆಯಾಮದಲ್ಲಿ ಬರುವುದಿಲ್ಲ. ಅವರು ಇವುಗಳನ್ನ್ನು ಮೀರಿರುವರು, ಇವುಗಳಿಗಿಂತ ಶ್ರೇಷ್ಠರು.  ಇವುಗಳಲ್ಲಿ ಸಿಕ್ಕಿಕೊಂದವರು ಪರತತ್ವವವನ್ನು ಕಾಣುವುದಿಲ್ಲ ಎಂಬ ಧ್ವನಿ ಇಲ್ಲಿದೆ.





No comments:

Post a Comment