Friday, July 29, 2011

VACHANA 50: Olage Nodidare - Completeness



ಒಳಗೆ ನೋಡಿದರೆ ಒಳಗೆ ಬಯಲು,
ಹೊರಗೆ ನೋಡಿದರೆ ಹೊರಗೆ ಬಯಲು,
ನೆನೆದಿಹೆನೆಂದರೆ ಮನ ಬಯಲು
ನಾನೂ ಬಯಲು ನೀನೂ ಬಯಲು ನೋಡಾ.
ಅರುಹು ಶೂನ್ಯವಾದುದೇ ಅಖಂಡ ನಿರಾಳ ನೋಡಾ ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೆ. (ತೋಂಟದ ಸಿದ್ಧಲಿಂಗ ಯತಿಗಳು)

TRANSLITERATION

oLage nODidare oLage bayalu,
horage nODidare horage bayalu,
nenediheneMdare mana bayalu
nAnU bayalu nInU bayalu nODA.
aruhu SUnyavAdudE aKaMDa nirALa nODA mahAliMga guru Siva siddhESvara praBuve. (tOMTada siddhaliMga yatigaLu)

CLICK HERE TO HEAR IT:



TRANSLATION

oLage(inside) nODidare(if looked) oLage(inside is) bayalu(whole, plenary),
horage(outside) nODidare(if looked) horage(outside is) bayalu(whole, plenary),
nenediheneMdare(if I want to remember) mana(mind is) bayalu (whole, plenary)
nAnU(I too am) bayalu(whole, plenary) nInU(you too are) bayalu(whole, plenary) nODA(you see).
Aruhu(knowledge) SUnyavu(whole)AdudE(becoming itself) aKaMDa(complete, unbroken) nirALa(calm) nODA(you see) mahAliMga guru Siva siddhESvara praBuve(Lord mahAliMga guru Siva siddhESvara).
- By tOMTada siddhaliMga yatigaLu


Looking inside, the inside is whole,
Looking outside, the outside is whole,
If I want to remember, my mind is whole,
I too am whole and you too are whole, you see!
With the knowledge complete, I am at complete calmness, Oh Lord! mahAliMga guru Siva siddhESvara praBu!


COMMENTARY

In the previous posting, we used the words ‘Shoonya’ and ‘Bayalu’ to represent the ultimate state one should strive to achieve. This is the state of ‘Shoonya Sampaadane’ or ‘Linga anga saamarasya – merging of God and Man’ or ‘filling the trench of you and I’ or complete bliss of being one with God. In this vachana, Sharana Tontada Siddalingeswara describe the state of bliss further. He says, it is the state in which both the inside and outside have achieved the completeness; the mind does not strive to recall old memories or create new ones; one does not see the duality of I and you, and there is a complete, unbounded calmness within.

Being a part of this mundane world, what do we see when we examine ourselves inside? We see the various pressures we are subjected to, the pain created by those pressures, unsatisfactory work habits to escape from these pressures, yet expectation of great results, guilt of nonperformance, various desires, happiness and sadness, so on and so forth. The outside scene is not much different from the one inside – violence, pain, dissatisfaction, anger, jealousy, etc. Although none of these are permanent, they never let us be at complete peace. We are so immersed in all these, that we do not even think about getting out of them. We get involved more and more and begin to think that that state of mind is the norm and we do not have to do anything different.
Sharanas probe into the fundamental cause for the agitation of mind, gain the knowledge needed to combat the cause, and develop the inner strength to achieve the complete peace.
The key for us then, is to question the basic causes of the disturbance of our mind and eliminate those to achieve the complete peace. Successful journey through the spiritual path and acquisition of complete knowledge of within and without, erases the dualities of life and provides the basis for ‘bayalu’ or ‘shoonya’ state.

Let us eliminate duality and achieve the ultimate peace.

KANNADA COMMENTARY

ಈ ವಚನದಲ್ಲಿ ತೋಂಟದ ಸಿದ್ಧಲಿಂಗೇಶ್ವರವರು “ಬಯಲು” ಸ್ಥಿತಿಯಲ್ಲಿ ಏನಾಗುತ್ತದೆ ಎಂಬುದನ್ನು ಹೇಳುತ್ತಿದ್ದಾರೆ. ಒಳಗೆ ನೋಡಿದರೆ ಒಳಗೆ ಬಯಲು, ಹೊರಗೆ ನೋಡಿದರೆ ಹೊರಗೆ ಬಯಲು. ನೆನೆಯಬೇಕೆಂದು ಕೊಂಡರೆ ಮನಸ್ಸು ಕೂಡ ಬಯಲಾಗಿದೆ. ಬುದ್ಧಿ ಶೂನ್ಯವಾಗಿ ಅಖಂಡವಾದ ಶಾಂತ ಸ್ಥಿತಿಯುಂಟಾಗಿದೆ ಎಂದು ಹೇಳುತ್ತಿದ್ದಾರೆ.


“ಒಳಗೆ ನೋಡಿದರೆ ಒಳಗೆ ಬಯಲು, ಹೊರಗೆ ನೋಡಿದರೆ ಹೊರಗೆ ಬಯಲು” ಏನು ಹೀಗೆಂದರೆ? ಮನಸ್ಸನ್ನು ಒಳಹೊಕ್ಕು ನೋಡಿಕೊಂಡರೆ ಅಥವಾ ಹೊರಗೆ ನೋಡಿದರೆ ಅಲ್ಲಿ ಎಲ್ಲಿಯೂ ಅಂತರವಿಲ್ಲದ ಪೂರ್ಣತೆ ತುಂಬಿಕೊಂಡಿದೆ ಎನ್ನುತ್ತಾರೆ ಅನುಭಾವಿಗಳು. ನಮ್ಮಂತಹ ಸಾಮಾನ್ಯರು ಒಳಗೆ ನೋಡಿಕೊಂಡಾಗ ಏನು ಕಾಣುತ್ತದೆ ನೋಡೋಣ: ನಾನಾ ರೀತಿಯ ಒತ್ತಡಗಳು, ಅವುಗಳಿಂದ ಹಿಂಸೆ, ಆ ಒತ್ತಡಗಳಿಗೆ ಒಳಗಾಗಿ ಅಸಮರ್ಪಕವಾಗಿ ನಿರ್ವಹಿಸುವ ಕೆಲಸಗಳು, ಆದರೂ ಉತ್ಕೃಷ್ಟವಾದ ಫಲದ ನಿರೀಕ್ಷೆ, ಇಲ್ಲವೆ ಅಸಮರ್ಪಕವಾದ ಕೆಲಸದಿಂದ ಅಪರಾಧಿ ಭಾವ, ನಾನಾ ಆಸೆಗಳು, ಆಸೆಗಳು ಕೈಗೂಡಿದಾಗ ಉಂಟಾಗುವ ಸಂತಸದಿಂದ ಬೀಗುವಿಕೆ, ಎಲ್ಲ ಆಸೆಗಳು ಕೈಗೂಡದ ಕಾರಣ ನಿರಾಸೆ, ಅತೃಪ್ತಿ, ಕೋಪ, ನಮಗಿಂತ ಚೆನ್ನಾಗಿ ಇರುವವರನ್ನು ಕಂಡಾಗ ಉಂಟಾಗುವ ಅಸೂಯೆ, ನಾನಾ ಸುಖಗಳಿಗೆ ಅಂಟಿಕೊಳ್ಳುವಿಕೆ, ಅವುಗಳು ದೂರವಾದಾಗ ಉಂಟಾಗುವ ಖಿನ್ನತೆ, ಹೀಗೆ ಲೆಕ್ಕವಿಲ್ಲದ ವಿಷಯಗಳು ಕಂಡು ಬರುತ್ತವೆ. ಹೊರಗೆ ಕೂಡ ಇದೇ ಸ್ಥಿತಿಯಿದೆ: ಹಿಂಸೆ, ಗೊಂದಲ, ನೋವು, ಖಿನ್ನತೆ, ಕೋಪ, ಅಹಂಕಾರ, ಈರ್ಷ್ಯೆ, ಕ್ಷಣಿಕ ಸುಖ, ಅದಕ್ಕೆ ಅಂಟಿಕೊಳ್ಳುವಿಕೆ, ಅದು ಕಳೆದು ಹೋಗುವುದೆಂಬ ಭಯ, ಒಂದಲ್ಲ ಒಂದು ರೀತಿಯ ಒತ್ತಡ, ನಿತಂತರವಾದ ಧಾವಂತ, ಉದ್ವೇಗ ಇತ್ಯಾದಿ. ಇಲ್ಲಿ ಕಂಡು ಬರುವ ಪ್ರತಿಯೊಂದೂ ಅಪೂರ್ಣವೇ. ಯಾವುದೂ ಸದಾ ಇರುವಂತಹುದಲ್ಲ. ಇದ್ಯಾವುದಕೂ ಗಟ್ಟಿಯಾದ ತಳಹದಿಯಿಲ್ಲ. ಪ್ರತಿಯೊಂದೂ ಮನಸ್ಸಿಗೆ ಕಿರಿಕಿರಿ ಉಂಟುಮಾಡುವಂತಹವೇ. ಎಲ್ಲಿಯೂ ಅಖಂಡವಾದ ಶಾಂತಿಯ ಲವಲೇಶವೂ ಇಲ್ಲ. ನಾವು ಇದರಿಂದ ಹೊರಬರುವ ಉಪಾಯವನ್ನೂ ಮಾಡುವುದಿಲ್ಲ. ಅವುಗಳಿಂದ ನಾವು ತೊಳಲಾಡುತ್ತಿದ್ದೇವೆ ಎಂದು ಕೂಡ ನಾವು ಅರಿಯುವುದಿಲ್ಲ. ಇದು ಸಾಮಾನ್ಯನ ಮನಸ್ಸಿನ ಸ್ಥಿತಿ. ಆದರೆ ಶರಣರು, ಇದನ್ನು ಗುರುತಿಸುತ್ತಾರೆ, ಇದರಿಂದ ಮುಕ್ತವಾಗುವ ಆಳವಾದ ಹಂಬಲದಿಂದ ಹೊರಬರುವ ಮಾರ್ಗವನ್ನು ಕೈಗೊಳ್ಳುತ್ತಾರೆ. ಮೊಟ್ಟಮೊದಲಿಗೆ ಈ ಎಲ್ಲವುಗಳು ಹುಟ್ಟಿಕೊಳ್ಳಲು ಕಾರಣವೇನು ಎಂಬುದನ್ನು, ಮನಸ್ಸಿನ ವ್ಯಾಪಾರವನ್ನು, ಅದು ಕೆಲಸಮಾಡುವ ಪ್ರಕ್ರಿಯೆಯನ್ನು, ಮನಸ್ಸಿನ ಈ ಎಲ್ಲ ಆಯಾಮಗಳ ಅಸ್ತಿತ್ವವೇನು, ಎಂಬುದರ ಕಡೆಗೆ ಗಮನ ಹರಿಸುತ್ತಾರೆ. ಆಂತರಿಕ ಶಿಸ್ತಿನ ಬದುಕಿನಿಂದ ಅವುಗಳ ಅಸ್ತಿತ್ವವೇ ಇಲ್ಲದಂತೆ ಮಾಡುತ್ತಾರೆ. ಅದರ ಮುಂದಿನದು ಅನುಭಾವಿಗಳಿಗೆ ಮಾತ್ರ ನಿಲುಕುವಂತಹದು. ಮನಸ್ಸಿನ ಆಯಾಮದಲ್ಲಿಯೇ ಇರುವಂತಹ ನಾವು ಅವರ ಉದ್ಗಾರಗಳಿಂದ ಆ ಬಯಲಿನ ಕಲ್ಪನೆ ಮಾತ್ರ ಮಾಡಬಹುದು. ಅಲ್ಲಿ, ಗಟ್ಟಿಯಾದ ತಳಹದಿಇಲ್ಲದುದರ ಮೇಲೆ ನಾನಾ ಸೌಧಗಳನ್ನು ನಿರ್ಮಾಣ ಮಾಡಿ ಎಲ್ಲವೂ “ನಿಜ”ವೇ ಎಂದು ಭ್ರಮೆ ಹುಟ್ಟಿಸುವಂತಹ ಬುದ್ಧಿಯು ಶೂನ್ಯವಾಗುತ್ತದೆ, ದೇವರು, ತಾನು ಎಂಬ ದ್ವೈತ ಭಾವ ಅಳಿಯುತ್ತದೆ, ಅಲ್ಲಿ ಕೇವಲ ಒಂದೇ ಇರುತ್ತದೆ, ಅದು ಇರದ ಠಾವೇ ಇರುವುದಿಲ್ಲ. ಎಲ್ಲವು ಅದರಿಂದಲೇ ತುಂಬಿರುತ್ತದೆ. ಅಲ್ಲಿ ಅಖಂಡವಾದ ಶಾಂತಿ, ಆನಂದ ಕಂಡುಬರುತ್ತದೆ ಎನ್ನುತ್ತಾರೆ ಶರಣರು.



Friday, July 22, 2011

VACHANA 49: NAANIHA PARIYANTARA – FILLING THE I AND YOU TRENCH


ನಾನಿಹ ಪರಿಯಂತರ ನೀನುಂಟು
ನೀನಿಹ ಪರಿಯಂತರ ನಾನುಂಟು
ನಾನು ನೀನೆಂಬ ಉಭಯದ ಸಂದು ಹೂಳಿದ ಬಳಿಕ
ಇನ್ನೇನುಂಟು ಹೇಳಾ ಅಖಂಡೇಶ್ವರಾ? (ಷಣ್ಮುಖ ಸ್ವಾಮಿ)

TRANSLITERATION

nAniha pariyaMtara nInuMTu
nIniha pariyaMtara nAnuMTu
nAnu nIneMba uBayada saMdu hULida baLika
innEnuMTu hELA aKaMDESvarA? (By ShaNmuKa svAmi)

CLICK HERE TO HEAR IT:


TRANSLATION

nAniha (I am) pariyaMtara(until) nInuMTu(you are)
nIniha(you are) pariyaMtara(until) nAnuMTu(I am)
nAnu(I) nIneMba(you, so called) uBayada(of duality) saMdu(trench) hULida(filled) baLika(after)
innEnuMTu(what else remains) hELA(pray tell) aKaMDESvarA(Lord Akandesvara)?

I am until you are!
You are until I am!
After the trench of the duality of I and you is filled,
What else remains, pray tell! Lord Akandesvara?

COMMENTARY

In this simple, yet powerful vachana, Sharana Shanmuka Swami addresses the concept of merging with the Lord or being one with Him. Sharanas have termed the merger 'Shoonya Sampaadane' (Shoonya = zero, Sampaadane = earning). This should not be interpreted as earning null or nothing. The symbol for 'zero' is a circle. It is complete (poorna), rounded, and serves as the boundary of everything (in it). It is a symbol of completeness. As such, Shoonya Sampaadane is achieving that completeness. Sharanas have also used the word 'bayalu' to indicate this state. Bayalu stands for an 'open field'. In this interpretation bayalu is that vast field without any boundaries. Shoonya Sampaadane is thus reaching and becoming one with that complete, vast and unbounded, the Lord.
  
It is said that the individual souls are sparks of the super soul, the Lord. The goal of individual souls is to eventually merge into the super soul, i.e. erasing the duality of the individual and the Lord and being one with Him. Since the Lord is in all the individuals around us, merging with the Lord is the same as being one with our fellow beings. Shanmuka Swami says that the duality of I and you exists as long as we maintain the ‘I-ness’ and see others as separate (you). Once, we realize that we are all one and the same, nothing much remains to be held on to!

 

The fundamental causes for our I-ness (ego) are our memories and experiences. Through these we accumulate wealth, knowledge and develop feelings, prejudices and opinions. These in turn make us feel that we are special and superior to others, thus bringing in the trench of I and You. The only way to remove the I-ness is then to realize that everything that one has contributing to the ‘I’ is superficial. Following the spiritual path to recognize this superficiality and quenching it is the way to fill the I and You trench. Note the use of the word 'fill' rather than 'close'. We are asked to gain over the superficiality, realize the reality and fill the trench with our knowledge, compassion and love.  

Let us strive to be one with the fellow beings and progress towards being one with the Lord!

KANNADA COMMENTARY

ಈ ವಚನವು ಹದಿನೇಳನೆ ಶತಮಾನದಲ್ಲಿದ್ದ ಷಣ್ಮುಖಸ್ವಾಮಿಗಳೆಂಬ ಶರಣರದು. ಇದು ಐಕ್ಯ ಸ್ಥಿತಿಯನ್ನು ವಿವರಿಸುತ್ತದೆ.ಇಲ್ಲಿ ಅವರು ಹೇಳುತ್ತಾರೆ- ನಾನಿರುವ ವರೆಗೆ ನೀನಿರುವೆ, ನೀನಿರುವವರೆಗೆ ನಾನಿರುವೆ. “ನಾನು” “ನೀನು” ಎಂಬ ಎರಡರ ನಡುವಿನ ಸಂದನ್ನು ತುಂಬಿದ ಬಳಿಕ ಇನ್ನೇನು ಉಳಿಯುವುದು? ಎಂದು ಕೇಳುತ್ತಾರೆ.
 

“ನಾನು” ಬೇರೆ ಎನ್ನುವ ಮನೋಭಾವ ಇರುವವರೆಗೆ, ಎಂದರೆ “ನಾನು” ಎಂಬ ಅಹಂ ಭಾವ ಇರುವವರೆಗೆ, ಕೇವಲ ಈ ದೇಹದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವವರೆಗೆ ಉಭಯ ಭಾವವಿರುತ್ತದೆ, ಎರಡು ಅಥವಾ ಅನೇಕ ಎಂಬ ಭಾವವಿರುತ್ತದೆ, ನಾನು ಬೇರೆ, ನೀನು ಬೇರೆ ಎನ್ನುವ ಭಾವವಿರುತ್ತದೆ. ಆದರೆ ನಾನು ಬೇರೆ, ನೀನು ಬೇರೆ ಎನ್ನುವ ವ್ಯತ್ಯಾಸ ಬಿಟ್ಟುಹೋದ ಮೇಲೆ, ಅಥವಾ ಈ ಎರಡರ ನಡುವಿನ ಕಂದಕವನ್ನು ಮುಚ್ಚಿದ ಮೇಲೆ ಇನ್ನೆಲ್ಲಿಯ ಎರಡರ ಭಾವ? ಅಲ್ಲಿ ಯಾವ ಸಂದೂ ಉಳಿಯದು. ಎಂದು ಹೇಳುತ್ತಾರೆ ಷಣ್ಮುಖಸ್ವಾಮಿಗಳು. ಇದನ್ನೇ “ಬಯಲು” ಅಥವಾ “ಶೂನ್ಯ” ಎಂದು ಸಹ ಹೇಳುವರು ಶರಣರು.

 
“ನಾನು” ಎಂಬ ಭಾವದ ಮೂಲವೇನು? ಎಂದು ಯೋಚಿಸಿದಾಗ, ನನ್ನ ಅನುಭವಗಳು, ನನ್ನ ನೆನೆಪುಗಳು, ಆ ಮೂಲಕ ನಾನು ಗಳಿಸಿದ ಜ್ಞಾನ, ನನ್ನ ವಿಚಾರಗಳು, ನನ್ನ ಅನಿಸಿಕೆಗಳು, ಇವೆಲ್ಲವು ನನಗೆ ವಿಶಿಷ್ಟವಾಗಿ ತೋರಿ “ನಾನು” ಇತರರಿಗಿಂತ ಬೇರೆ ಅಥವಾ ವಿಶೇಷ ಎಂದು ತೋರುತ್ತದೆ. ಪ್ರತಿಯೊಬ್ಬರಿಗೂ ತನ್ನ ಅನುಭವ, ತನ್ನ ನೆನಪುಗಳು, ಆ ಮೂಲಕ ತಾನು ಗಳಿಸಿದ ಜ್ಞಾನ ಎಲ್ಲವೂ ವಿಶಿಷ್ಟವಾಗಿಯೇ ತೋರಿ ತಾನು ಇತರರಿಗಿಂತ ಬೇರೆ ಎನ್ನುವ ಭಾವ ಉಂಟಾಗುತ್ತದೆ. ಎಷ್ಟೇ ಆದರೂ ಈ ಎಲ್ಲವೂ ಮೇಲ್ಮೈಯಲ್ಲಿರುವಂತಹುದು. ಇದೆಲ್ಲವನ್ನು ತ್ಯಜಿಸಿ ನೋಡಿದಾಗ ಏನಾಗಬಹುದು? ಎಲ್ಲರೂ ಒಂದೇ ಆಗಿರುತ್ತಾರೆ ಅಲ್ಲವೇ? ಆದರೆ ಈ ಎಲ್ಲವನ್ನು ತ್ಯಜಿಸುವುದು ಹೇಗೆ? ಅದನ್ನು ತ್ಯಜಿಸುವುದು ಎಂದರೆ “ಅಹಂ” ಅನ್ನು ತ್ಯಜಿಸುವುದು, ಅಹಂ ಅನ್ನು ತ್ಯಜಿಸುವುದು ಎಂದರೆ, ನನಗೆ ಮಾತ್ರ ವಿಶಿಷ್ಟವೆಂದು ತೋರುವ ತನ್ನ ಅನುಭವಗಳ, ನೆನಪುಗಳ, ತಾನು ಗಳಿಸಿದ ಜ್ಞಾನದ ಪರಿಧಿಯಿಂದ ಹೊರ ಬರುವುದು. ನಾನು ಮತ್ತು ಇತರರು ಎಂಬ ಸಂದನ್ನು ಮುಚ್ಚಿಬಿಡುವುದು. “ನಾನು” ಎಂದರೆ, ಮೇಲೆ ಹೇಳಿದ ಎಲ್ಲ ಗುಣ ವಿಶೇಷಗಳನ್ನು ಹೊಂದಿರುವುದು. ಆಗ ನಾನು ಆ ನಿಜವಾದ “ನಾನು” ವಿನಿಂದ (ಯಾವ ಗುಣ ವಿಶೇಷವನ್ನು ಹೊಂದದೆ ಇರುವುದರಿಂದ) ಬೇರೆಯಾಗಿರುತ್ತಾನೆ. ನಿಜವಾದ “ನಾನು” ಎಂದರೆ ನಾನು ಯಾವುದನ್ನು ನನ್ನದು ಎಂದು ನಂಬುತ್ತೇನೆಯೋ ಅದು ಕೇವಲ ತೋರಿಕೆ ಮಾತ್ರ, ಎನ್ನುವ ಭಾವ ಗಟ್ಟಿಗೊಂಡಿರುವುದು. ಈ ತೋರಿಕೆಯ ಭಾವವನ್ನೇ ನಿಜವೆಂದು ನಂಬಿದಾಗ ಆ ಇಬ್ಬರ ನಡುವೆ ಕಂದಕವಿರುತ್ತದೆ. ತೋರಿಕೆಯ “ನಾನು” ಎನ್ನುವುದನ್ನು ತ್ಯಜಿಸಿದಾಗ ಆ ಕಂದಕ ಇಲ್ಲವಾಗುತ್ತದೆ. ಅಲ್ಲಿ “ನಾನು” “ನೀನು” ಎಂಬ ಸಂದು ತುಂಬಿಕೊಂಡು ಶೂನ್ಯವಾಗುತ್ತದೆ. “ಶೂನ್ಯ” ಎಂದರೆ ಏನೂ ಇಲ್ಲವೆಂದಲ್ಲ. “ತೋರಿಕೆಯ ನಾನು” ಇಲ್ಲ ಆದರೆ ಅಲ್ಲಿರುವುದು ಒಂದು ಪರಿಪೂರ್ಣ ಎನ್ನುತ್ತಾರೆ ಶರಣರು.

Friday, July 15, 2011

Vachana 48: Jaalegaarana Kaalu Mullu Taagi – Double Standards

ಜಾಲೆಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ
ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರುಗುವಂತೆ
ಠಕ್ಕನ ಪೂಜೆಗೆ ಮೆಚ್ಚುವನೇ ನಮ್ಮ ಗುಹೇಶ್ವರನು?

TRANSLITERATION
jAlegArana kAlu muLLu tAgi noMditteMbaMte
sUnegArana maneyalli heNa hOgi aLuvaMte
kannagaLLana maneyalli baTTalu hOgi maruguvaMte
Thakkana pUjege meccuvanE namma guhESvaranu?

CLICK HERE TO HEAR IT:

TRANSLATION
jAlegArana(fisherman’s) kAlu(foot) muLLu(thorn) tAgi(pierced) noMdittu (as though pained) eMbaMte(saying that)
sUnegArana(butcher’s)  maneyalli(in the house) heNa hOgi(for a corpse) aLuvaMte(as though mourning)
kannagaLLana(thief’s) maneyalli(in the house of) baTTalu(bowl) hOgi(lost) maruguvaMte(as though saddened)
Thakkana(shuffler’s) pUjege(worship) meccuvanE(will appreciate) namma(our) guhESvaranu(Lord Guhesvara)?

As the fisherman pained by the thorn piercing his feet,
As the butcher mourns a corpse in his house,
As the thief saddened by a bowl he lost,
Does our Lord Guhesvara appreciate the worship by a shuffler?

COMMENTARY
In this vachana,  Allama Prabu illustrates  how we cultivate double standards in our lives through three examples  and says that the Lord does not appreciate such behavior. A fisherman continues to use hooks to catch fish, never stopping to think even for a second as to how much of a pain he is causing them. But, he does not hesitate to make a big issue of a thorn piercing his foot causing him pain. A butcher does not feel the pain of animals he is killing. But, a dead body in his house causes an immense pain. A thief never thinks about the pain and inconvenience he causes to those from which he steals. But, losing a bowl of his own, saddens him. Allama Prabhu says cultivating such double standards is not an acceptable behavior for true devotees of the Lord.

It is very easy for us to be part of the pleasure of our fellow beings. But, do we feel the pain of others when we cause it?  Are we even aware that we are the cause of the pain? Teasing, disrespecting or ignoring others comes easy to us. But, we are hurt when we are subjected to the same. We are always sympathetic to the poor and have not’s. But, we never think in terms of how our materialistic living might be taking the resources away from others. We must be constantly aware of the effect of our behavior on the fellow beings and the environment we live in.  Shiva Sharanas preached and practiced compassion to all the living beings. Compassion eliminates the double standards. Awareness (knowledge) is the key for compassionate living.

Let us see ourselves in others!


KANNADA COMMENTARY

ಸದಾಚಾರಕ್ಕೆ
ಹೆಚ್ಚಿನ ಮಹತ್ವ ಕೊಟ್ಟಿರುವರು ನಮ್ಮ ಶರಣರು. ಸದಾಚಾರಕ್ಕೆ ಜ್ಞಾನ ಅಥವಾ ಸಂವೇದನಶೀಲತೆಯೇ ಅಧಾರ. ಆದರೆ ನಮ್ಮ ಬದುಕೆಲ್ಲ ಅಜ್ಞಾನದಲ್ಲಿಯೇ ಕಳೆದು ಹೊಗುತ್ತದೆ. ಸಂವೇದನಶೀಲತೆಗೆ ಅಲ್ಲಿ ಸ್ಥಾನವೇ ಇಲ್ಲ. ಅದನ್ನೇ ಇಲ್ಲಿ ಅಲ್ಲಮಪ್ರಭುಗಳು ಉದಾಹರಣೆ ಸಹಿತ ವಿವರಿಸುತ್ತಿದ್ದಾರೆ. ಜಾಲಗಾರನು (ಮೀನು ಹಿಡಿಯುವವನು) ತನ್ನ ಜಾಲವನ್ನು ಚೆಲ್ಲಿ ನೂರಾರು ಮೀನುಗಳನ್ನು ಹಿಡಿಯುತ್ತಾನೆ, ಅವುಗಳ ಸಾವಿಗೆ ಕಾರಣನಾಗುತ್ತನೆ. ಅವುಗಳು ವಿಲವಿಲನೆ ಒದ್ದಾಡಿ ಸಾಯುವಾಗ ಅವನಿಗೆ ಹಿಂಸೆಯಾಗದು. ಅದರಿಂದ ತನಗೆ ಉಂಟಾಗುವ ಲಾಭವನ್ನು ನೆನೆದು ಸಂತಸವಾಗುತ್ತದೆಯೇ ಹೊರತು ಅವುಗಳ ದಾರುಣ ಸ್ಥಿತಿಯನ್ನು ಕಂಡು ಅವನಿಗೆ ನೋವಾಗದು.  ಆದರೆ ತನ್ನ ಕಾಲಿಗೆ ಸಣ್ಣ ಮುಳ್ಳೊಂದು ಚುಚ್ಚಿದಾಗ ಆತನು ನೊಂದುಕೊಳ್ಳುತ್ತಾನೆ. ಸೂನೆಗಾರನು (ಪ್ರಾಣಿಗಳನ್ನು ಕೊಲ್ಲುವ ಕಟುಕ) ದಿನನಿತ್ಯ ಪ್ರಾಣಿಗಳನ್ನು ನಿರ್ದಯವಾಗಿ ಕೊಲ್ಲುತ್ತಾನೆ. ಅವುಗಳ ಸಾವಿನಿಂದ ಅವನಿಗೆ ಯಾವ ದುಃಖವೂ ಆಗದು. ಆದರೆ ತನ್ನ ಮನೆಯಲ್ಲಿ ಯಾರಾದರು ತೀರಿಕೊಂಡರೆ ಅವನು ದುಃಖದಿಂದ ಅಳುತ್ತಾನೆ. ಇತರರ ಮನೆಗೆ ಕನ್ನ ಕೊರೆದು ಹಲವು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಾನೆ ಕಳ್ಳನು. ಸಮಯದಲ್ಲಿ ಅವನಿಗೆ ಏನೂ ಎನಿಸದು. ಆದರೆ ತನ್ನ ಮನೆಯ ಒಂದು ಬಟ್ಟಲು ಕಾಣೆಯಾದರೆ ಆತನು ಮರುಗುತ್ತಾನೆ. ರೀತಿಯಾಗಿ ತಾನು, ತನ್ನವರು ಬೇರೆ, ಮತ್ತು ಇತರರು ಬೇರೆ, ಎಂದುಕೊಳ್ಳುವವರು ಮಹಾ ಠಕ್ಕರು. ಗುಹೇಶ್ವರನು ಇಂತಹವರ ಪೂಜೆಯನ್ನು ಎಂದೂ ಮೆಚ್ಚನು ಎನ್ನುತ್ತಾರೆ ಅಲ್ಲಮಪ್ರಭುಗಳು.
ನಡತೆಯಲ್ಲಿ ಏಕರೂಪತೆಯಿಲ್ಲದಿದ್ದವರನ್ನು ಸದಾಚಾರಿಗಳು ಎಂದು ಹೇಗೆ ಹೇಳುವುದು? ಭಿನ್ನ ಭಿನ್ನ ಪರಿಸ್ಥಿತಿಗಳಲ್ಲಿ ಭಿನ್ನ ಭಿನ್ನವಾಗಿ ನೆಡೆದುಕೊಳ್ಳುವುದು ಸರಿಯೇ? ಅವರು ಠಕ್ಕರಲ್ಲದೆ ಇನ್ನೇನು?
ಇಲ್ಲಿ ಕೊಟ್ಟ ಉದಾಹರಣೆಗಳನ್ನು ಓದಿಸದ್ಯ ನಾವು ಹಾಗೆ ಮಾಡುವವರಲ್ಲಎಂದು ನಾವು ನಮ್ಮ ಬೆನ್ನು ತಟ್ಟಿಕೊಳ್ಳಬಹುದು. ಆದರೆ ಅದೂ ಕೂಡ ಅಜ್ಞಾನವೇ. ಏಕೆಂದರೆ  ಇಲ್ಲಿ ಉದ್ಧರಿಸಿರುವ ಮೀನುಗಾರ, ಕಟುಕ ಮತ್ತು ಕಳ್ಳ ಇವರುಗಳು ಉದಾಹರಣೆ ಮಾತ್ರ. ನಾವು ಮೀನುಗಾರರಲ್ಲ, ಕಟುಕರಲ್ಲ ಅಥವಾ ಕಳ್ಳರೂ ಅಲ್ಲ ಎಂದುಕೊಂಡು ಸಮಾಧಾನ ಪಟ್ಟುಕೊಳ್ಳುವುದು ಸರಿಯಲ್ಲ. ಏಕೆಂದರೆ, ನಮ್ಮ ನಡತೆಯೂ ಸಹ ಯಾವಗಲೂ ಒಂದೇ ತೆರನಾಗಿರುವುದಿಲ್ಲ. ನಮಗೆ ಇತರರು ಅವಮಾನ ಮಾಡಿದಾಗ, ನಮ್ಮನ್ನು ಉದಾಸೀನ ಮಾಡಿದಾಗ ನಮಗೆ ನೋವಾಗುತ್ತದೆ. ಆದರೆ, ನಾವು ಇನ್ನೊಬ್ಬರನ್ನು ಅವಮಾನಿಸುತ್ತೇವೆ, ಉದಾಸೀನ ಮಾಡುತ್ತೇವೆ. ಇನ್ನೊಬ್ಬರ ಮೇಲೆ ಕೋಪಗೊಳ್ಳುತ್ತೇವೆ. ಹಾಗೆ ಮಾಡುವಾಗ ಅದು ನಮ್ಮ ಗಮನಕೆ ಬರುವುದಿಲ್ಲ. ಏಕೆಂದರೆ  ನಾವು ಸದಾ ಸಂವೇದನಶೀಲರಾಗಿರುವುದಿಲ್ಲ, ಇಲ್ಲವೆ ನಮ್ಮಲ್ಲಿನಾನುತಪ್ಪು ಮಾಡುವವನೇ ಅಲ್ಲ ಎಂಬ ಅಹಂಕಾರವಿರುತ್ತದೆ.  ಇಂದು ನಾವು, ಇಲ್ಲಿ ಕೊಟ್ಟಿರುವ ಉದಾಹರಣೆಯಂತಹ ಕಣ್ಣಿಗೆ ಕಾಣುವಂತಹ ಹಿಂಸೆಯ ಕೆಲಸಗಳನ್ನು ಮಾಡದೆ ಇದ್ದರೂ ಸಹ ನಮಗೆ ಗೊತ್ತಿಲ್ಲದೇ ಅನೇಕ ಹಿಂಸಾತ್ಮಕವಾದ ಕೆಲಸಗಳನ್ನು ಮಾಡುತ್ತೇವೆ. ನಮ್ಮ ನಡತೆಯೂ ಸಹ ಇಬ್ಬಗೆಯದೇ. ಒಂದು ಕಡೆ ಬಡವರ ಬಗ್ಗೆ ಮರುಕ ತೋರುವ, ಜನರ ಹೀನ ಸ್ಥಿತಿಯ ಬಗ್ಗೆ ಕನಿಕರ ತೋರುವ ನಾವು, ನಮ್ಮ ಐಷಾರಾಮಿ ಬದುಕಿನಿಂದ, ನಮ್ಮ ಅತ್ಯಾಧುನಿಕ ಜೀವನ ಶೈಲಿಯಿಂದ ನಮಗೇ ತಿಳಿಯದೆ ಅನೇಕ ತಪ್ಪುಗಳನ್ನು ಎಸಗುತ್ತಿದ್ದೇವೆ. ನಾವು ಬಳಸುವ ವಸ್ತುಗಳು, ನಮಗೆ ಹೇಗೆ ತಲುಪುತ್ತವೆ, ಅವುಗಳಿಂದ ಇತರರಿಗೆ ಯಾವ ರೀತಿಯ ಹಿಂಸೆಯಾಗುತ್ತಿದೆ ಎನ್ನುವುದರ ಕಡೆ ನಮ್ಮ ಗಮನ ಹೋಗುವುದಿಲ್ಲ. ನಮ್ಮ ಬಯಕೆಗಳನ್ನು ತೀರಿಸಿಕೊಳ್ಳುವದರಿಂದ ಪ್ರಕೃತಿ ಮತ್ತು ಪರಿಸರ ಹಾಳಾಗಿ ಅದರೊಂದಿಗೆ ಅನೇಕ ಜೀವಗಳು ಹೇಗೆ ಹೇಳ ಹೆಸರಿಲ್ಲದೆ ನಾಶವಾಗಿ ಹೋಗುತ್ತಿವೆ ಎನ್ನುವುದಕ್ಕೆ ನಾವು ಹೇಗೆ ಕುರುಡರಾಗಿದ್ದೇವೆ ಎಂಬುದನ್ನು ಮನಗಾಣಬೇಕು. ಒಂದು ಕಡೆ ಡಿವಿಜಿಯವರು ಹೇಳುತ್ತಾರೆ  ಅನ್ನ ಉಣುವಂದು ಕೇಳ್ :  ಅದು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೋ ಪರರ ಕಣ್ಣೀರೋ” ( ನಾವು ಅನ್ನ ಉಣ್ಣುವಾಗ  ನಮ್ಮನ್ನೇ ಕೇಳಿ ಕೊಳ್ಳಬೇಕು; ಅನ್ನವನ್ನು ಬೇಯಿಸಿದ ನೀರು ನಮ್ಮ ದುಡಿತದ ಫಲವೋ ಅಥವಾ ಅದು ಬೇರೆಯವರ ಕಣ್ಣೀರೋ) ಎಂದು. ನಾವು ಬಳಸುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ನಾವು ಸಂವೇದನಶೀಲರಾಗಿರಬೇಕಾದುದು ಅಗತ್ಯ. ಒಂದರ ಬಗ್ಗೆ ಸಂವೇದನಶೀಲತೆ ಇನ್ನೊಂದರ ಬಗ್ಗೆ ನಿರ್ದಯತೆ ತೋರಿದರೆ ಅದು ಠಕ್ಕರ ರೀತಿಯಾಗುತ್ತದೆ. ಇಂತಹವರ ಪೂಜೆಯನ್ನು ಗುಹೇಶ್ವರನು ಒಪ್ಪಿಕೊಳ್ಳಲಾರ ಎನ್ನುತ್ತಾರೆ ಅಲ್ಲಮಪ್ರಭುಗಳು.