Friday, July 15, 2011

Vachana 48: Jaalegaarana Kaalu Mullu Taagi – Double Standards

ಜಾಲೆಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ
ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರುಗುವಂತೆ
ಠಕ್ಕನ ಪೂಜೆಗೆ ಮೆಚ್ಚುವನೇ ನಮ್ಮ ಗುಹೇಶ್ವರನು?

TRANSLITERATION
jAlegArana kAlu muLLu tAgi noMditteMbaMte
sUnegArana maneyalli heNa hOgi aLuvaMte
kannagaLLana maneyalli baTTalu hOgi maruguvaMte
Thakkana pUjege meccuvanE namma guhESvaranu?

CLICK HERE TO HEAR IT:

TRANSLATION
jAlegArana(fisherman’s) kAlu(foot) muLLu(thorn) tAgi(pierced) noMdittu (as though pained) eMbaMte(saying that)
sUnegArana(butcher’s)  maneyalli(in the house) heNa hOgi(for a corpse) aLuvaMte(as though mourning)
kannagaLLana(thief’s) maneyalli(in the house of) baTTalu(bowl) hOgi(lost) maruguvaMte(as though saddened)
Thakkana(shuffler’s) pUjege(worship) meccuvanE(will appreciate) namma(our) guhESvaranu(Lord Guhesvara)?

As the fisherman pained by the thorn piercing his feet,
As the butcher mourns a corpse in his house,
As the thief saddened by a bowl he lost,
Does our Lord Guhesvara appreciate the worship by a shuffler?

COMMENTARY
In this vachana,  Allama Prabu illustrates  how we cultivate double standards in our lives through three examples  and says that the Lord does not appreciate such behavior. A fisherman continues to use hooks to catch fish, never stopping to think even for a second as to how much of a pain he is causing them. But, he does not hesitate to make a big issue of a thorn piercing his foot causing him pain. A butcher does not feel the pain of animals he is killing. But, a dead body in his house causes an immense pain. A thief never thinks about the pain and inconvenience he causes to those from which he steals. But, losing a bowl of his own, saddens him. Allama Prabhu says cultivating such double standards is not an acceptable behavior for true devotees of the Lord.

It is very easy for us to be part of the pleasure of our fellow beings. But, do we feel the pain of others when we cause it?  Are we even aware that we are the cause of the pain? Teasing, disrespecting or ignoring others comes easy to us. But, we are hurt when we are subjected to the same. We are always sympathetic to the poor and have not’s. But, we never think in terms of how our materialistic living might be taking the resources away from others. We must be constantly aware of the effect of our behavior on the fellow beings and the environment we live in.  Shiva Sharanas preached and practiced compassion to all the living beings. Compassion eliminates the double standards. Awareness (knowledge) is the key for compassionate living.

Let us see ourselves in others!


KANNADA COMMENTARY

ಸದಾಚಾರಕ್ಕೆ
ಹೆಚ್ಚಿನ ಮಹತ್ವ ಕೊಟ್ಟಿರುವರು ನಮ್ಮ ಶರಣರು. ಸದಾಚಾರಕ್ಕೆ ಜ್ಞಾನ ಅಥವಾ ಸಂವೇದನಶೀಲತೆಯೇ ಅಧಾರ. ಆದರೆ ನಮ್ಮ ಬದುಕೆಲ್ಲ ಅಜ್ಞಾನದಲ್ಲಿಯೇ ಕಳೆದು ಹೊಗುತ್ತದೆ. ಸಂವೇದನಶೀಲತೆಗೆ ಅಲ್ಲಿ ಸ್ಥಾನವೇ ಇಲ್ಲ. ಅದನ್ನೇ ಇಲ್ಲಿ ಅಲ್ಲಮಪ್ರಭುಗಳು ಉದಾಹರಣೆ ಸಹಿತ ವಿವರಿಸುತ್ತಿದ್ದಾರೆ. ಜಾಲಗಾರನು (ಮೀನು ಹಿಡಿಯುವವನು) ತನ್ನ ಜಾಲವನ್ನು ಚೆಲ್ಲಿ ನೂರಾರು ಮೀನುಗಳನ್ನು ಹಿಡಿಯುತ್ತಾನೆ, ಅವುಗಳ ಸಾವಿಗೆ ಕಾರಣನಾಗುತ್ತನೆ. ಅವುಗಳು ವಿಲವಿಲನೆ ಒದ್ದಾಡಿ ಸಾಯುವಾಗ ಅವನಿಗೆ ಹಿಂಸೆಯಾಗದು. ಅದರಿಂದ ತನಗೆ ಉಂಟಾಗುವ ಲಾಭವನ್ನು ನೆನೆದು ಸಂತಸವಾಗುತ್ತದೆಯೇ ಹೊರತು ಅವುಗಳ ದಾರುಣ ಸ್ಥಿತಿಯನ್ನು ಕಂಡು ಅವನಿಗೆ ನೋವಾಗದು.  ಆದರೆ ತನ್ನ ಕಾಲಿಗೆ ಸಣ್ಣ ಮುಳ್ಳೊಂದು ಚುಚ್ಚಿದಾಗ ಆತನು ನೊಂದುಕೊಳ್ಳುತ್ತಾನೆ. ಸೂನೆಗಾರನು (ಪ್ರಾಣಿಗಳನ್ನು ಕೊಲ್ಲುವ ಕಟುಕ) ದಿನನಿತ್ಯ ಪ್ರಾಣಿಗಳನ್ನು ನಿರ್ದಯವಾಗಿ ಕೊಲ್ಲುತ್ತಾನೆ. ಅವುಗಳ ಸಾವಿನಿಂದ ಅವನಿಗೆ ಯಾವ ದುಃಖವೂ ಆಗದು. ಆದರೆ ತನ್ನ ಮನೆಯಲ್ಲಿ ಯಾರಾದರು ತೀರಿಕೊಂಡರೆ ಅವನು ದುಃಖದಿಂದ ಅಳುತ್ತಾನೆ. ಇತರರ ಮನೆಗೆ ಕನ್ನ ಕೊರೆದು ಹಲವು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಾನೆ ಕಳ್ಳನು. ಸಮಯದಲ್ಲಿ ಅವನಿಗೆ ಏನೂ ಎನಿಸದು. ಆದರೆ ತನ್ನ ಮನೆಯ ಒಂದು ಬಟ್ಟಲು ಕಾಣೆಯಾದರೆ ಆತನು ಮರುಗುತ್ತಾನೆ. ರೀತಿಯಾಗಿ ತಾನು, ತನ್ನವರು ಬೇರೆ, ಮತ್ತು ಇತರರು ಬೇರೆ, ಎಂದುಕೊಳ್ಳುವವರು ಮಹಾ ಠಕ್ಕರು. ಗುಹೇಶ್ವರನು ಇಂತಹವರ ಪೂಜೆಯನ್ನು ಎಂದೂ ಮೆಚ್ಚನು ಎನ್ನುತ್ತಾರೆ ಅಲ್ಲಮಪ್ರಭುಗಳು.
ನಡತೆಯಲ್ಲಿ ಏಕರೂಪತೆಯಿಲ್ಲದಿದ್ದವರನ್ನು ಸದಾಚಾರಿಗಳು ಎಂದು ಹೇಗೆ ಹೇಳುವುದು? ಭಿನ್ನ ಭಿನ್ನ ಪರಿಸ್ಥಿತಿಗಳಲ್ಲಿ ಭಿನ್ನ ಭಿನ್ನವಾಗಿ ನೆಡೆದುಕೊಳ್ಳುವುದು ಸರಿಯೇ? ಅವರು ಠಕ್ಕರಲ್ಲದೆ ಇನ್ನೇನು?
ಇಲ್ಲಿ ಕೊಟ್ಟ ಉದಾಹರಣೆಗಳನ್ನು ಓದಿಸದ್ಯ ನಾವು ಹಾಗೆ ಮಾಡುವವರಲ್ಲಎಂದು ನಾವು ನಮ್ಮ ಬೆನ್ನು ತಟ್ಟಿಕೊಳ್ಳಬಹುದು. ಆದರೆ ಅದೂ ಕೂಡ ಅಜ್ಞಾನವೇ. ಏಕೆಂದರೆ  ಇಲ್ಲಿ ಉದ್ಧರಿಸಿರುವ ಮೀನುಗಾರ, ಕಟುಕ ಮತ್ತು ಕಳ್ಳ ಇವರುಗಳು ಉದಾಹರಣೆ ಮಾತ್ರ. ನಾವು ಮೀನುಗಾರರಲ್ಲ, ಕಟುಕರಲ್ಲ ಅಥವಾ ಕಳ್ಳರೂ ಅಲ್ಲ ಎಂದುಕೊಂಡು ಸಮಾಧಾನ ಪಟ್ಟುಕೊಳ್ಳುವುದು ಸರಿಯಲ್ಲ. ಏಕೆಂದರೆ, ನಮ್ಮ ನಡತೆಯೂ ಸಹ ಯಾವಗಲೂ ಒಂದೇ ತೆರನಾಗಿರುವುದಿಲ್ಲ. ನಮಗೆ ಇತರರು ಅವಮಾನ ಮಾಡಿದಾಗ, ನಮ್ಮನ್ನು ಉದಾಸೀನ ಮಾಡಿದಾಗ ನಮಗೆ ನೋವಾಗುತ್ತದೆ. ಆದರೆ, ನಾವು ಇನ್ನೊಬ್ಬರನ್ನು ಅವಮಾನಿಸುತ್ತೇವೆ, ಉದಾಸೀನ ಮಾಡುತ್ತೇವೆ. ಇನ್ನೊಬ್ಬರ ಮೇಲೆ ಕೋಪಗೊಳ್ಳುತ್ತೇವೆ. ಹಾಗೆ ಮಾಡುವಾಗ ಅದು ನಮ್ಮ ಗಮನಕೆ ಬರುವುದಿಲ್ಲ. ಏಕೆಂದರೆ  ನಾವು ಸದಾ ಸಂವೇದನಶೀಲರಾಗಿರುವುದಿಲ್ಲ, ಇಲ್ಲವೆ ನಮ್ಮಲ್ಲಿನಾನುತಪ್ಪು ಮಾಡುವವನೇ ಅಲ್ಲ ಎಂಬ ಅಹಂಕಾರವಿರುತ್ತದೆ.  ಇಂದು ನಾವು, ಇಲ್ಲಿ ಕೊಟ್ಟಿರುವ ಉದಾಹರಣೆಯಂತಹ ಕಣ್ಣಿಗೆ ಕಾಣುವಂತಹ ಹಿಂಸೆಯ ಕೆಲಸಗಳನ್ನು ಮಾಡದೆ ಇದ್ದರೂ ಸಹ ನಮಗೆ ಗೊತ್ತಿಲ್ಲದೇ ಅನೇಕ ಹಿಂಸಾತ್ಮಕವಾದ ಕೆಲಸಗಳನ್ನು ಮಾಡುತ್ತೇವೆ. ನಮ್ಮ ನಡತೆಯೂ ಸಹ ಇಬ್ಬಗೆಯದೇ. ಒಂದು ಕಡೆ ಬಡವರ ಬಗ್ಗೆ ಮರುಕ ತೋರುವ, ಜನರ ಹೀನ ಸ್ಥಿತಿಯ ಬಗ್ಗೆ ಕನಿಕರ ತೋರುವ ನಾವು, ನಮ್ಮ ಐಷಾರಾಮಿ ಬದುಕಿನಿಂದ, ನಮ್ಮ ಅತ್ಯಾಧುನಿಕ ಜೀವನ ಶೈಲಿಯಿಂದ ನಮಗೇ ತಿಳಿಯದೆ ಅನೇಕ ತಪ್ಪುಗಳನ್ನು ಎಸಗುತ್ತಿದ್ದೇವೆ. ನಾವು ಬಳಸುವ ವಸ್ತುಗಳು, ನಮಗೆ ಹೇಗೆ ತಲುಪುತ್ತವೆ, ಅವುಗಳಿಂದ ಇತರರಿಗೆ ಯಾವ ರೀತಿಯ ಹಿಂಸೆಯಾಗುತ್ತಿದೆ ಎನ್ನುವುದರ ಕಡೆ ನಮ್ಮ ಗಮನ ಹೋಗುವುದಿಲ್ಲ. ನಮ್ಮ ಬಯಕೆಗಳನ್ನು ತೀರಿಸಿಕೊಳ್ಳುವದರಿಂದ ಪ್ರಕೃತಿ ಮತ್ತು ಪರಿಸರ ಹಾಳಾಗಿ ಅದರೊಂದಿಗೆ ಅನೇಕ ಜೀವಗಳು ಹೇಗೆ ಹೇಳ ಹೆಸರಿಲ್ಲದೆ ನಾಶವಾಗಿ ಹೋಗುತ್ತಿವೆ ಎನ್ನುವುದಕ್ಕೆ ನಾವು ಹೇಗೆ ಕುರುಡರಾಗಿದ್ದೇವೆ ಎಂಬುದನ್ನು ಮನಗಾಣಬೇಕು. ಒಂದು ಕಡೆ ಡಿವಿಜಿಯವರು ಹೇಳುತ್ತಾರೆ  ಅನ್ನ ಉಣುವಂದು ಕೇಳ್ :  ಅದು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೋ ಪರರ ಕಣ್ಣೀರೋ” ( ನಾವು ಅನ್ನ ಉಣ್ಣುವಾಗ  ನಮ್ಮನ್ನೇ ಕೇಳಿ ಕೊಳ್ಳಬೇಕು; ಅನ್ನವನ್ನು ಬೇಯಿಸಿದ ನೀರು ನಮ್ಮ ದುಡಿತದ ಫಲವೋ ಅಥವಾ ಅದು ಬೇರೆಯವರ ಕಣ್ಣೀರೋ) ಎಂದು. ನಾವು ಬಳಸುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ನಾವು ಸಂವೇದನಶೀಲರಾಗಿರಬೇಕಾದುದು ಅಗತ್ಯ. ಒಂದರ ಬಗ್ಗೆ ಸಂವೇದನಶೀಲತೆ ಇನ್ನೊಂದರ ಬಗ್ಗೆ ನಿರ್ದಯತೆ ತೋರಿದರೆ ಅದು ಠಕ್ಕರ ರೀತಿಯಾಗುತ್ತದೆ. ಇಂತಹವರ ಪೂಜೆಯನ್ನು ಗುಹೇಶ್ವರನು ಒಪ್ಪಿಕೊಳ್ಳಲಾರ ಎನ್ನುತ್ತಾರೆ ಅಲ್ಲಮಪ್ರಭುಗಳು.

1 comment:

  1. This is an amazing vachana, the meaning and implication of this vachana is truly deep.To me this vachana teaches us about how to live, to be mindful of all our activities, how to conduct oneself properly, to respect others, put yourself in someones shoes to understand their situation, compassion to other beings, to be grateful for what we have, to respect and appreciate nature and the environment and a tool to deal and cope with the ups and downs of life through understanding others.
    Thanks for this selection.
    Bharti

    ReplyDelete