Friday, July 1, 2011

Vachana 46: Ura sIrege asaga - Detachment


ಊರ ಸೀರೆಗೆ ಅಸಗ ಬಡಿವಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು, ಎಂದು ಮರುಳಾದೆ
ನಿಮ್ಮನರಿಯದ ಕಾರಣ, ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.


TRANSLITERATION
Ura sIrege asaga baDivaDedaMte
honnennadu, heNNennadu, maNNennadu, eMdu maruLAde.
nimmanariyada kAraNa, kemmane keTTe kUDalasaMgamadEva.
CLICK HERE TO HEAR IT:

TRANSLATION

Ura(of the town) sIrege(for clothes) asaga(=agasa =washerman) baDivaDedu (exerts himself washing) aMte(like)
Honnennadu (Gold is mine), heNNennadu (woman is mine), maNNennadu(land is mine), eMdu(thinking) maruLAde (became a fool).
Nimmanariyada(not realizing you) kAraNa (because), kemmane(totally) keTTe(ruined) kUDalasaMgamadEva (Lord kUDalasaMgamadEva) .


Like the washerman exerting himself washing town’s clothes,
I became a fool thinking wealth is mine, woman is mine and land is mine.
Lord KudalaSangamaDeva! Not realizing You, I am totally ruined!
COMMENTARY

In this Vachana Basavanna comments on how we spend all our lives in trivial pursuits while ignoring the ultimate wealth (i.e. realizing the Lord).  He uses a washer man as an example. The washer man exhausts himself,  washing the clothes of others, feeling as though they are his own, not realizing that the clothes will belong to others as soon as he completes washing them. Further, he is so involved in his work that he does not have any time to think about cleaning his own clothes, let alone his mind. Along the same lines, we are so involved in accumulating gold (indicative of wealth), woman (or man, indicative of relationships) and land (indicative of house and other properties) that we do not spend any time in spiritually uplifting ourselves and realizing the God. Basavanna says that without realization of the Lord (self), one’s life is totally ruined.
Basavanna is not advocating inaction, neither he is advocating not putting 100% effort and sincerity into our work. He is recommending being detached to  material aspects of life, stay away from ‘mine’ frame of mind, and develop God mindedness.     
Indeed, if we examine our lives of today, we spend our childhood years in schools qualifying ourselves for higher education. We spend our youth and later years in solidifying our education and acquiring skills needed for a career. We then spend all our efforts in succeeding in the career, building and supporting a family and acquiring wealth for comfortable living now and later. As we move into older age, depending on life’s events, we may start feeling that all the wealth and people around us may not be adequate to give us the so called ‘peace of mind’. We then tend to get philosophical and try to get into seeking spiritual paths. But, it might be too late to succeed in that endeavor, since we will have not acquired adequate skills for that path. Basavanna suggests starting with the spiritual path at the earliest and pursue it throughout. Our ‘peace of mind’ depends on the spiritual success rather than the material success.
Let us place the highest priority on spirituality!

KANNADA COMMENTARY

ವಚನದಲ್ಲಿ ಬಸವಣ್ಣನವರು ಮನಸ್ಸು ಹೇಗೆ ಅಲ್ಪವಾದುದರಲ್ಲಿ , ಅರ್ಥವಿಲ್ಲದುದರಲ್ಲಿ ತೊಡಗಿಕೊಂಡು ಅರ್ಥಪೂರ್ಣವಾದುದನ್ನು ಮರೆಯುತ್ತದೆ ಎನ್ನುವುದನ್ನು ಹೇಳುತ್ತಾರೆ. ಊರವರ ಸೀರೆಯನ್ನು, ಊರವರ ಬಟ್ಟೆಗಳನ್ನು ತನ್ನವು ಎನ್ನುವಂತೆ ಅಗಸನು ಅವುಗಳ ಕೊಳೆಯನ್ನು ತೆಗೆಯುವುದರಸಲುವಾಗಿ ಕಷ್ಟಪಟ್ಟು ಅವುಗಳನ್ನು ಬಡಿಬಡಿದು ತೊಳೆಯುತ್ತಾನೆ. ಅದೇ ರೀತಿ ತಾನು ಹೊನ್ನು, ಮಣ್ಣು ಹೆಣ್ಣುಗಳನ್ನು ತನ್ನವೆಂದುಕೊಂಡು ಮೂರ್ಖನಾದೆ , ಕೂಡಲಸಂಗಮದೇವನನ್ನು ಅರಿಯದ ಕಾರಣ ಪೂರ್ತಿಯಾಗಿ ಕೆಟ್ಟುಹೋದೆ ಎನ್ನುತ್ತಾರೆ.
ಅಗಸನ  ಕೆಲಸವೇ ಊರಜನರ ಬಟ್ಟೆಗಳನ್ನು ತೊಳೆಯುವುದು. ಕೆಲಸವನ್ನು ವಹಿಸಿಕೊಂಡು ಅವನು ಜನರ ಬಟ್ಟೆಯ ಕೊಳೆಯನ್ನು ತೆಗೆಯುವುದಕ್ಕಾಗಿ ಕಷ್ಟಪಟ್ಟು ಬಟ್ಟೆಗಳನ್ನು ಬಡಿಬಡಿದು ಒಗೆಯುತ್ತಾನೆ. ಅವನ ಮನಸ್ಸು ಅವುಗಳ ಕೊಳೆತೆಗೆಯುವುದರಲ್ಲಿಯೇ ತೊಡಗಿರುತ್ತದೆ. ಬಟ್ಟೆಗಳು ತನ್ನವೇ ಎಂಬುವಂತೆ ಅವುಗಳ ಬಗ್ಗೆ ಚಿಂತಿಸುತ್ತಾನೆ, ತನ್ನ ಎಲ್ಲ ಸಮಯ ಮತ್ತು ಶಕ್ತಿಯನ್ನು ಅವುಗಳ ಚಿಂತೆಯಲ್ಲಿ ಕಳೆಯುತ್ತಾನೆ. ವಾಸ್ತವಾಗಿ ತನ್ನದಲ್ಲದುದರ ಬಗ್ಗೆ ಯೋಚಿಸುವುದರಲ್ಲಿಯೇ ಆತನ ಬದುಕು ಕಳೆದು ಹೋಗುತ್ತದೆ. ಬೇರೆಯವರ ಬಟ್ಟೆಯ ಮೈಲಿಗೆ ತೊಳೆಯುವುದರಲ್ಲಿ ಮಗ್ನನಾದ ಅವನಿಗೆ ತನ್ನ ಮನದಲ್ಲಿಯೂ ಮೈಲಿಗೆ ಇರಬಹುದು, ಅದನ್ನು ತೊಳೆಯುವುದು ಮುಖ್ಯ ಅನ್ನುವ ಕಡೆ ಗಮನವೇ ಹೋಗುವುದಿಲ್ಲ. ಇದು ಅಗಸನ ಕತೆಯಾಯಿತು. ಬಸವಣ್ಣನವರು ಹೇಳುತ್ತಾರೆ, ತನ್ನ ಜೀವನವೂ ಸಹ ಅದೇ ರೀತಿಯಾಗುತ್ತಿದೆ. ಏಕೆಂದರೆ ತಾನೂ ಸಹ, ಹೆಣ್ಣು, ಹೊನ್ನು ಮತ್ತು ಮಣ್ಣು ತನ್ನವೇ ಎಂದು ಅವುಗಳಿಗಾಗಿಯೆ ತನ್ನ ಸಮಯ ಮತ್ತು ಶಕ್ತಿಯನ್ನು ವ್ಯಯಿಸುತ್ತಿದ್ದೇನೆ ಎನ್ನುತ್ತಿದ್ದಾರೆ. ಇಲ್ಲಿ ಅವರು ಆರೋಪವನ್ನು ತಮ್ಮ  ಮೇಲೆ ಹೊರಿಸಿಕೊಳ್ಳುತ್ತಿದ್ದಾರೆ. ಆದರೆ ಅದನ್ನು ಸಾಮಾನ್ಯರು ಮಾಡುತ್ತಿರುವುದರ ಕಡೆಗೆ ಗಮನ ಹರಿಯುವಂತೆ ಮಾಡುತ್ತಿದ್ದಾರೆ. ಎಲ್ಲರೂ ಮಾಡುವುದು ಅದನ್ನೇ. ಜನರು ತಮ್ಮ ಇಡೀ ಜೀವನವನ್ನು ಹೆಣ್ಣು ಅಥವಾ ಗಂಡಿನ ಸುಖಕ್ಕಾಗಿ, ಹೊನ್ನು ಕೂಡಿಡುವುದಕ್ಕಾಗಿ ಅಥವಾ  ಭೂಮಿಯನ್ನು ಕೊಂಡು ಕಾಯ್ದಿರಿಸುವುದಕ್ಕಾಗಿ ಮೀಸಲಿರಿಸುತ್ತಾರೆ. ಹಾಗೆ ಮಾಡುವಾಗ ಅದೆಲ್ಲವೂ ತನ್ನದೇ ಎನ್ನುವ ಬಲವಾಗಿ ನೆಚ್ಚಿರುತ್ತಾನೆ.    ತನಗೆ ಕಷ್ಟಬಂದಾಗ ಅದು ತನ್ನ ಸಹಾಯಕ್ಕೆ ಬರುತ್ತದೆ ಎನ್ನುವ ನಂಬಿಕೆಯಿರುತ್ತದೆ. ಆದರೆ ತನಗೆ ಒಂಟಿತನ ಕಾಡುವಾಗ, ತನ್ನ ಮನಸ್ಸಿಗೆ ಶಾಂತಿಯಿಲ್ಲದಾಗ, ಅಥವಾ ಇನ್ನಾವುದೋ ಚಿಂತೆ ಕಾಡುವಾಗ ಯಾವುವೂ ಕೆಲಸಕ್ಕೆ ಬಾರವು ಎಂಬುದು ಆಗ ಮನಸ್ಸಿಗೆ ಹೊಳೆಯುವುದಿಲ್ಲ. ತನ್ನ ಆಂತರಿಕ ಕಷ್ಟದಲ್ಲಿ ಅವು ಕೆಲಸಕ್ಕೆ ಬಾರದಿದ್ದಾಗ ತಾನು ಮೂರ್ಖನಾದೆ ಎನ್ನಿಸುತ್ತದೆ. ಆದರೆ ಆಗ ಹೊತ್ತು ಮೀರಿ ಹೋಗಿರುತ್ತದೆ. ಏಕೆಂದರೆ ನಿಜವಾದ ಸುಖವಿರುವುದು ತನ್ನ ತಾ ಅರಿತಾಗ ಅಥವಾ ಕೂಡಲಸಂಗಮನನ್ನು ಅರಿತಾಗ. ಅರಿವು ಎಲ್ಲ ಆಂತರಿಕ ತೊಳಲಾಟವನ್ನು ಕೊನೆಗೊಳಿಸುತ್ತದೆ. ಅದಕ್ಕಾಗಿ ಮನಸ್ಸನ್ನು ಆತನನ್ನು ಅರಿಯುವುದರಲ್ಲಿ ಮೊದಲಿನಿಂದಲೂ ತೊಡಗಿಸಿಕೊಳ್ಳುವುದು  ಸರಿ. ಆದರೆ ಮಾನವನ ಮನಸ್ಸು ಬೇಡದೆ ಇರುವದರಲ್ಲಿ ಅಥವಾ ತನ್ನದಲ್ಲದುದರಲ್ಲಿ ತೊಡಗಿಸಿಕೊಂಡು ನರಳಾಡುತ್ತದೆ. ಅದನ್ನೇ ಇಲ್ಲಿ ಬಸವಣ್ಣನವರು ಉದಾಹರಣೆಯ ಮೂಲಕ ತಿಳಿಸುತ್ತಿದ್ದಾರೆ. 
ನಾವು ಇಂದಿನ ನಮ್ಮ ಜೀವನ ಶೈಲಿಯನ್ನು ನೋಡಿಕೊಂಡಾಗ ಇದು ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ಚಿಕ್ಕಂದಿನಲ್ಲಿ ಶಾಲೆಯ ಓದು, ತಾರುಣ್ಯದಲ್ಲಿ ಹೆಚ್ಚಿನ ಓದು,ಮದುವೆ, ಒಳ್ಳೆಯ ಕೆಲಸ, ಆಸ್ತಿ ಮತ್ತು ಕೀರ್ತಿಯ ಮಹತ್ವಾಕಾಂಕ್ಷೆಗಳು ಮುಖ್ಯವಾಗುತ್ತವೆ. ಅವುಗಳು ಮನಸ್ಸನ್ನು ಪೂರ್ತಿಯಾಗಿ ಆವರಿಸಿಕೊಳ್ಳುತ್ತವೆ. ಬದುಕಿನ ವಾಸ್ತವತೆಯ ಕಡೆಗೆ ಗಮನ ಹರಿಯುವುದೇ ಇಲ್ಲ. ಅದರ ಬಗ್ಗೆ ಯೋಚಸುವ ಅವಕಾಶವಾಗಲಿ ಅಥವಾ ಇಚ್ಛೆಯಾಗಲಿ ಇರುವುದಿಲ್ಲ. ಮುದುಕರಾದಾಗ  ಆಯಾಸ, ಶಾರೀರಿಕ ತೊಂದರೆಗಳು ಮತ್ತು ಒಂಟಿತನ ಕಾಡಲು ಆರಂಭಿಸುತ್ತವೆ. ಆಗ ಮನಸ್ಸು ಅಧ್ಯಾತ್ಮದಲ್ಲಿ ಸುಖ ಕಾಣ ಬಯಸುತ್ತದೆ. ಅಂತಹ ಸಮಯದಲ್ಲಿ ಅನೇಕಾನೇಕ ಗುರುಗಳನ್ನು, ಧಾರ್ಮಿಕ  ಗ್ರಂಥಗಳನ್ನು ಆಶ್ರಯಿಸುತ್ತದೆ. ಆದರೆ  ಅಲ್ಲಿ, ಅಧ್ಯಾತ್ಮಕ್ಕೆ ಬೇಕಾದ ತೀವ್ರ ಹಂಬಲಕ್ಕಿಂತ  ಕಾತರತೆಯೇ ಹೆಚ್ಚಾಗಿರುತ್ತದೆ. ಇದರಿಂದ ಅರಿವಿಗಿಂತ ಗೊಂದಲವೇ  ಉಂಟಾಗಿ  ತನಗೆ ಕಂಡುಬಂದಷ್ಟೇ ಸತ್ಯವೆನ್ನುವ ಭ್ರಮೆಯಲ್ಲಿ ತೊಳಲುತ್ತದೆ. ಒಟ್ಟಿನಲ್ಲಿ ಇಡೀ ಬದುಕೆಲ್ಲ  ಕೆಲಸಕ್ಕೆ ಬಾರದ ಒಂದಲ್ಲ ಒಂದು ರೀತಿಯ ತೊಳಲಾಟದಲ್ಲಿಯೇ ಕಳೆದು ಹೋಗುತ್ತದೆ.  ಆದ್ದರಿಂದ ಅದನ್ನು ಮೊದಲೇ ಅರಿಯುವುದು ಮುಖ್ಯವಾಗುತ್ತದೆ. ಬದುಕಿನಲ್ಲಿ ಯಾವುದನ್ನು ನೆಚ್ಚ ಬೇಕು ಮತ್ತು ಯಾವುದನ್ನು ನೆಚ್ಚಬಾರದು ಎನ್ನುವುದರ ಗಮನವಿಡುವುದು ಅಗತ್ಯ.

1 comment:

  1. Awesome...i could read only the bit which is in english. It is amazing how a few lines from a great human who lived in the 12th century can so aptly write about our trivial pursuits of life. Vachanagalu andigu, indigu, yendendigu prasthuta....namma jeevanadalli adavallisikollabeku. I have been fortunate to have great parents who introduced me to vachanas at a very early age...I have been able to workhard at the same time realise that self realisation is the most important saadhane...these vachanas i read take me down the memory lane of my childhood days. Thanks..excellent writing.

    ReplyDelete