Friday, June 24, 2011

VACHANA 45: Enage Maneyilla – Everything I have is Yours

ಎನಗೆ ಮನೆಯಿಲ್ಲ, ಎನಗೆ ಧನವಿಲ್ಲ
ಮಾಡುವುದೇನು? ನೀಡುವುದೇನು?
ಎನ್ನ ಧನ ಸಕಲ ಸಂಪದ ಸೌಖ್ಯವುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು
ಎನ್ನೊಡಲ ಹೊರೆವೆನಾಗಿ ಅಮರೇಶ್ವರ ಲಿಂಗಕ್ಕೆ
ನೀಡುವ ಬಯಕೆ ಎನಗಿಲ್ಲ

TRANSLITERATION

enage maneyilla, enage dhanavilla
mADuvudEnu? nIDuvudEnu?
enna dhana sakala saMpada sauKyavuLLa
nimma SaraNara tappalakkiyanAydu taMdu
ennoDala horevenAgi amarESvara liMgakke
nIDuva bayake enagilla

CLICK TO HEAR IT:

http://www.youtube.com/watch?v=NhBeMwoDsVg

TRANSLATION

enage maneyilla(I don’t have a house), enage dhanavilla(I don’t have wealth)
mADuvudEnu(what can I do)? nIDuvudEnu(what can I give)?
Enna(my) dhana(wealth) sakala(all) saMpada(wealth) sauKyavuLLa(having contentment)
Nimma(your) SaraNara(devotees’) tappalakkiyanu(rice fallen on the ground)Aydu(collect) taMdu(brought)
ennoDala(my stomach) horevenAgi(because I fill) amarESvara liMgakke (to amareshvara linga)
nIDuva(giving) bayake(desire) enagilla(I don’t have)

I don’t have a house, I don’t have wealth,
What can I do? What can I give?
My wealth is the rice that I collect from the grounds of your devotees’ who have all the wealth and contentment, to fill my stomach!
I don’t have a desire to give to Lord Amaresvara Linga!

COMMENTARY

In this Vachana Aaydakki Marayya opens up the innermost feelings of a daasohi (i.e. one involved in daasoha). He says “I have neither a house nor any wealth. As such, what I can do or give? I just collect the rice fallen at the grounds of Your devotees blessed with wealth and contentment and fill my stomach. As such, I do not feel that ‘I give’ to the Lord”. Maarayya is expressing his utmost humility by saying that he has nothing of his own, everything he has comes from the devotees of the Lord and whatever he gives belongs to the Lord.

 In true daasoha, there is no ‘giver’ and no ‘taker’ since the giver will have developed the attitude that he does not have anything to give and whatever he gives belongs to the Lord. Similarly, the taker will have developed the feeling that whatever he takes is for the work of the Lord. As such the ‘I-ness” is completely absent. The work (kaayaka) performed without a selfish motive is daasoha (serving the Lord). Kaayaka and Daasoha are two faces of the same coin. They must go hand in hand. Professor T. R. Mahadevaiah expresses that daasoha is a much broader concept than feeding the poor (Anna daasoha, Anna = rice, indicative of food). It is providing a means of living by those with to those without (Dhana Daasoha, Dhana=wealth); spreading knowledge by those with to those without(Jnaana Daasoha, Jnaana = knowledge); the strong supporting the weak; the confident enlightening the souls of those who have lost confidence; encouraging the inactive to become active in kaayaka thus the serving the society and the Lord; and in general seeing the Lord within us and all around us and treating our purpose in life as the service of the Lord.

Shiva Sharanas thus promoted the dignity of labor and encouraged performing one’s duties with utmost sincerity and unselfishness, no matter what one’s profession is. There is no room for being inactive. They advocated removing the ‘I-ness’ and developing the mental framework of seeing the Lord within and in everything around us and dedicating ourselves to the service of the Lord through the service to the community.
Let us acquire the bliss through Kaayaka and Daasoha!

KANNADA COMMENTARY

 ಆಯ್ದಕ್ಕಿ ಮಾರಯ್ಯನವರ ಈ ವಚನ ದಾಸೋಹಿಯ ಆತ್ಮವನ್ನೇ ತೆರೆದಿಡುತ್ತದೆ. “ ನನಗೆ ಮನೆಯಿಲ್ಲ, ನನಗೆ ಧನವಿಲ್ಲ. ಈ ಎರಡೂ ಇಲ್ಲದವನಾದ ನಾನು ಏನು ಮಾಡುವೆನು? ಏನನ್ನು ಕೊಡುವೆನು? ಎನ್ನ ಧನ, ಸಕಲ ಸಂಪತ್ತುಳ್ಳ ನಿಮ್ಮ ಶರಣರ (ಶರಣರ ಕಲ್ಯಾಣಗುಣವೇ ಅವರ ಸಂಪತ್ತು ಮತ್ತು ಸೌಖ್ಯ) ಮನೆಯಂಗಳದಲ್ಲಿ ಕೆಳಗೆ ಬಿದ್ದ ಅಕ್ಕಿ ಆಯುವ ಪುಣ್ಯ. ಅದನ್ನು ಆಯ್ದು ತಂದು ನನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವೆನು. (ಆ ಅಕ್ಕಿಯೂ ಸಹ ನಿಮ್ಮ ಶರಣರಿಗೆ ಸೇರಿದ್ದು) ಹೀಗಾಗಿ ಲಿಂಗಕ್ಕೆ “ನಾನು” ನೀಡುತ್ತೇನೆ ಎಂಬ ಭಾವ ನನಗಿಲ್ಲ” ಎನ್ನುತ್ತಾರೆ ಆಯ್ದಕ್ಕಿ ಮಾರಯ್ಯನವರು. ಇದು ವಿನಯದ ಪರಾಕಾಷ್ಠೆ.

ದಾಸೋಹದಲ್ಲಿ ನೀಡುವವರು ಮತ್ತು ನೀಡಿಸಿಕೊಳ್ಳುವವರು ಯಾರೂ ಇರುವುದಿಲ್ಲ. ಏಕೆಂದರೆ ನೀಡುವವರಿಗೆ, ಏನೂ ತನ್ನದಲ್ಲ, ಎಲ್ಲವೂ ಆ ಶಿವನಿಗೆ ಸೇರಿದ್ದು, ತಾನು ಏನೂ ಮಾಡುತ್ತಿಲ್ಲ, ಆ ಶಿವನೇ ತನ್ನಿಂದ ಎಲ್ಲವನ್ನೂ ಮಾಡಿಸುತ್ತಿದ್ದಾನೆ ಎನ್ನುವ ಭಾವ ಇರುತ್ತದೆ. ಹಾಗೂ ಮಾಡಿಸಿಕೊಳ್ಳುವ ಜಂಗಮನಿಗಂತೂ ಎಲ್ಲವೂ ಕೇವಲ ಶಿವಮಯವಾಗಿ ಕಾಣುತ್ತದೆ. ಶಿವನಲ್ಲದೆ ಇರುವುದು ಬೇರೇನೂ ಕಾಣುವುದೇ ಇಲ್ಲ. ತಾನು ತನ್ನದೆಂಬ ಭಾವ ಸಂಪೂರ್ಣವಾಗಿ ಇಲ್ಲವಾಗಿರುವುದರಿಂದ ಮಾಡಿಸಿಕೊಂಬುವವನು ಕೂಡ ಆ ಶಿವನೇ ಆಗಿರುತ್ತಾನೆ. ಹೀಗಾಗಿ “ಕೊಡುವಾತ ಕೊಂಬಾತ” ಆ ಶಿವನೇ ಹೊರತು ತಾನಲ್ಲ. “ನಾನು” ಎಂಬುದನ್ನು ಮರೆತು ಮಾಡುವ ಪ್ರತಿಯೊಂದು ಕೆಲಸವೂ ಕಾಯಕ ಮತ್ತು ದಾಸೋಹವಾಗುತ್ತದೆ. ಕಾಯಕ ಮತ್ತು ದಾಸೋಹ ಬೇರೆ ಅಲ್ಲ, ಅವು ಒಂದೇ ನಾಣ್ಯದ ಎರಡು ಮುಖಗಳು. ಸ್ವಾರ್ಥವಿಲ್ಲದ ಕಾಯಕವೇ ದಾಸೋಹ ವಾಗುತ್ತದೆ.

ಇಂದು “ದಾಸೋಹ” ದ ಅರ್ಥ ಸಂಕುಚಿತಗೊಂಡಿದೆ. ದಾಸೋಹವೆಂದರೆ ಕೇವಲ ಊಟಕ್ಕೆ ಹಾಕುವುದು ಎಂಬ ಅರ್ಥ ಉಳಿದುಕೊಂಡಿದೆ. ಪ್ರೊಫೆಸರ್ ಟಿ. ಆರ್. ಮಹದೇವಯ್ಯನವರು “ ದಾಸೋಹವೆಂದರೆ ಬರಿ ಆಹಾರ ದಾನವಲ್ಲ, ಇದಕ್ಕೆ ವಿಶಾಲವಾದ ಅರ್ಥವಿದೆ. ಉಳ್ಳವರು ಇಲ್ಲದವರಿಗೆ ನೀಡುವುದು, ತಿಳಿದವರು ತಿಳಿಯದವರಿಗೆ ಕಲಿಸುವುದು, ಹತಾಶರಾದವರ ಎದೆಯಲ್ಲಿ ಆಶಾಜ್ಯೋತಿಯನ್ನು ಬೆಳಗಿಸುವುದು. ಬಲ್ಲಿದವರಾದವರು ಅಶಕ್ತರಿಗೆ ನೆರವಾಗಿ ಸಬಲಗೊಳಿಸುವುದು, ಕೀಳರಿಮೆಯಿಂದ ಮೂಲೆಗುಂಪಾದವರಿಗೆ ತಲೆ ಎತ್ತಿ ನಿಲ್ಲುವ ಆತ್ಮ ವಿಶ್ವಾಸ ಮೂಡಿಸುವುದು, ಜಡರಾದವರಿಗೆ, ನವೋತ್ಸಾಹ, ಕ್ರಿಯಾಶೀಲತೆಯನ್ನುಂಟುಮಾಡುವುದು, ಸುಪ್ತ ಪ್ರತಿಭೆಗಳ ಪ್ರಕಾಶನಕ್ಕೆ ಸೂಕ್ತ ಪ್ರೋತ್ಸಾಹ ನೀಡುವುದು, ಇವೆಲ್ಲವೂ ಸೇರುತ್ತವೆ, ಇವುಗಳ ಲಾಭ ಸಮಾಜಕ್ಕೆ, ದೇಶಕ್ಕೆ” ಎಂದು ಹೇಳುತ್ತಾರೆ.

ಶರಣರು ಈ ಲೋಕವನ್ನು, ಈ ಸಮಾಜವನ್ನು, ಈ ಬದುಕನ್ನು ಕಡೆಗಣಿಸಲಿಲ್ಲ. ಅವರು ಅದನ್ನು ಪೂರ್ತಿಯಾಗಿ ಸ್ವೀಕರಿಸಿ ಅದರ ಕಲ್ಯಾಣ ಮತ್ತು ಆತ್ಮೋನ್ನತಿಯಲ್ಲಿ ತೊಡಗಿದರು. ಈ ನಿಟ್ಟಿನಲ್ಲಿ ಅವರು ಕೈಗೊಂಡ ಕಾಯಕ ಮತ್ತು ದಾಸೋಹಗಳು ಅತ್ಯಂತ ಉದಾತ್ತವಾದ ವಿಚಾರಗಳು.


No comments:

Post a Comment