Friday, June 10, 2011

Vachna 43: mana shuddavilladavange - Needs versus Wants!


ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ,
ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ
ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು,
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕಾ.

TRANSLITERATION

mana SuddhavilladavaMge dravyada baDatanavallade,
citta Suddhadalli kAyakava mADuvalli sadBaktaMge
etta nODidaDatta lakShmi tAnAgippaLu,
mArayyapriya amarESvaraliMgada sEveyuLLannakkA.


CLICK HERE TO HEAR IT:

http://www.youtube.com/watch?v=FWwzWTvFKN0

TRANSLATION

Mana (mind) Suddhavillada (is corrupted) avaMge(to him, whose) dravyada(funds, wealth) baDatanavu (poverty) allade(but not),
Citta (mind) Suddhadalli (uncorrupted) kAyakava(work) mADuvalli (doing) sadBaktaMge(for the true devotee)
etta nODidaDatta(wherever seen) lakShmi(Goddess of wealth) tAnAgippaLu(appears/ manifests herself),
mArayyapriya(beloved of Maarayya) amarESvaraliMgada(of Lord amarESvara Linga) sEveyuLLannakkA(as long as in service).


One with a corrupted mind is always in nothing but poverty!
For a true devotee performing his work with uncorrupted mind, the Goddess of wealth (lakShmi) manifests herself everywhere,
as long as he serves Lord amarESvara linga!


COMMENTARY

In our previous posting, Sharane Lakkamma addressed the concept of accumulating just enough to satisfy the daily needs and dedicating the excess to the service of the community. She extends that concept further in this Vachana, saying that an individual with a corrupted mind is always in poverty, while an individual with an uncorrupted mind, who performs his work (kaayaka) in an unselfish way, and as a service to the Lord is always rich.
How does the mind get corrupted? Human tendency is to aspire always for something better than (or perceived to be better than) what one has in terms of material and comforts. We are in general, never satisfied with what we have. Even when our basic needs are met, we would still want more and better things. This desire for more is the main cause of corruption of mind. It is the first of the arishadvarga, the six passions of mind or enemies: kama (desire, lust), krodha (anger), lobha (greed), moha (delusion), mada (pride) and matsarya (jealousy). These negative characteristics prevent man from realizing the atman (Reality that is his True Being). As long as our ‘wants’ dictate our lives, we have corrupted minds and are always in poverty. As we size our ‘needs’ to provide us a comfortable life and curb our ‘wants’ we get richer and richer. Performing our duty (work) with the best of our efforts, sharing our excess with the fellow beings, dedicating the work we do as our service to the Lord, and curbing ‘desire’ from our minds is the path to the true riches. A true devotee sees the Lord in everyone and everything around him. The richness a true devotee seeks is not materialistic, but the knowledge of the Lord within.


Let us be rich by balancing our needs and wants and sharing our riches with fellow beings.


KANNADA COMMENTARY

ಕಾಯಕದ ಬಗ್ಗೆ ಲಕ್ಕಮ್ಮನ ಇನ್ನೊಂದು ವಚನವಿದು. ಮನ ಶುದ್ಧವಿಲ್ಲವರಿಗೆ ದ್ರವ್ಯದ ಬಡತನ, ಹಣದ ಕೊರತೆ ಉಂಟಾಗುತ್ತದೆ. ಆದರೆ ಚಿತ್ತ ಶುದ್ಧವಾಗಿರುವ ಭಕ್ತನಿಗೆ, ಲಿಂಗದ ಸೇವೆಯಲ್ಲಿ ತೊಡಗಿಸಿಕೊಂಡವನಿಗೆ, ಎಲ್ಲೆಡೆಯೂ ಲಕ್ಷ್ಮಿಯೇ ಕಂಡು ಬರುತ್ತಾಳೆ, ಅಂದರೆ ಸಮೃದ್ಧಿಯೇ ಕಂಡುಬರುತ್ತದೆ, ಯಾವ ಕೊರತೆಯೂ ಉಂಟಾಗುವುದಿಲ್ಲ ಎನ್ನುತ್ತಾಳೆ ಲಕ್ಕಮ್ಮ.
ಮನ ಶುದ್ಧವಿಲ್ಲದವನು ಎಂದರೆ ಏನೆಂದು ತಿಳಿದುಕೊಳ್ಳಲು ಪ್ರಯತ್ನಿಸೋಣ. ಯಾವ ಮನಸ್ಸು ಭ್ರಷ್ಟತೆಗೆ ಒಳಗಾಗಿರುತ್ತದೆಯೋ ಅದನ್ನು ಅಶುದ್ಧ ಮನಸ್ಸೆನ್ನಬಹುದು. ಆಸೆಗೆ ಬಲಿಯಾದ ಮನಸ್ಸು ನ್ಯಾಯ ಅನ್ಯಾಯಗಳ ವಿವೇಚನೆಯನ್ನೇ ಕಳೆದು ಕೊಳ್ಳುತ್ತದೆ.
ಒಂದು ಸಣ್ಣ ಆಸೆಗೆ ಬಲಿಯಾದ ಮನಸ್ಸು ಅದರ ಪರಿಣಾಮವಾಗಿ ಒಂದಾದ ಮೇಲೊಂದರಂತೆ ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳಿಗೆ ಗುರಿಯಾಗಿ ತಾನು ತೊಳಲುತ್ತದೆಯಲ್ಲದೆ ಇತರರಿಗೂ ನೋವನ್ನುಂಟುಮಾಡುತ್ತದೆ. ಹೀಗಾಗಿ ತನ್ನ ಸುತ್ತಮುತ್ತಲೆಲ್ಲ ನಕಾರಾತ್ಮಕ ಭಾವನೆಗಳಿಗೆ ಎಡೆಮಾಡಿಕೊಡುತ್ತದೆ. ಹಾಗಾದರೆ ಆಸೆಗಳೇ ಇಲ್ಲದೆ ಬದುಕಬೇಕೆ? ಬದುಕಬಹುದೆ? ಬದುಕಿಗೆ ಅನೇಕ ಅವಶ್ಯಕತೆಗಳಿರುತ್ತವೆ. ಅವಶ್ಯಕತೆಗಳು ಆಸೆಗಳಲ್ಲ. ಬಯಕೆ ಮತ್ತು ಅವಶ್ಯಕತೆಗೆ ಬಹಳ ವ್ಯತ್ಯಾಸವಿದೆ. ಬದುಕಿಗೆ ಬೇಕೇಬೇಕಾದವುಗಳು ಅವಶ್ಯಕತೆ ಎನ್ನಿಸಿಕೊಳ್ಳುತ್ತವೆ. ಅವಶ್ಯಕತೆಗಿಂತಲೂ ಹೆಚ್ಚಿನವು ಆಸೆ ಎನ್ನಿಸಿಕೊಳ್ಳುತ್ತವೆ. ಬದುಕಲು ಅವಶ್ಯಕವಾದವುಗಳನ್ನು ಬಿಟ್ಟು ಹೆಚ್ಚಿನವುಗಳನ್ನು ಆಶಿಸುವುದು ಅನ್ಯಾಯ. ಏಕೆಂದರೆ ಅದರಿಂದ ಬೇರೆಯವರ ಸ್ವತ್ತನ್ನು ನಾವು ಕಸಿದುಕೊಂಡಂತೆ ಆಗುತ್ತದೆ. ಇನ್ನಾರದೋ ಅವಶ್ಯಕತೆಗಳಿಗೆ ಅಡ್ಡಿ ಮಾಡಿದಂತಾಗುತ್ತದೆ. ಆದ್ದರಿಂದ ಶುದ್ಧ ಮನಸ್ಸು ಎಂದರೆ ತಮಗೆ ಅಗತ್ಯವಿಲ್ಲದ್ದನ್ನು ಬಯಸದೆ ಇರುವುದು.
ಇದನ್ನು ಅರಿತು ಚಿತ್ತವನ್ನು ಶುದ್ಧವಾಗಿಟ್ಟುಕೊಂಡವನಿಗೆ ಎಲ್ಲೆಡೆಯೂ ಲಕ್ಷ್ಮಿ ಕಂಡು ಬರುತ್ತಾಳೆ. ಏಕೆಂದರೆ ಆತನು ತನ್ನಲ್ಲದ ವಸ್ತುವನ್ನು ಬಯಸುವುದಿಲ್ಲ. ತನಗೆ ಅವಶ್ಯಕವಾದುದನ್ನು ತನ್ನ ದುಡಿಮೆಯಿಂದ ತಾನು ಪಡೆದುಕೊಳ್ಳುವುದರಿಂದ ಆತನ ಆತ್ಮ ಸಂಪೂರ್ಣವಾಗಿ ತೃಪ್ತವಾಗಿರುತ್ತದೆ. ಆ ದುಡಿಮೆಯಲ್ಲಿಯೇ ಆತನು ಗುರು, ಲಿಂಗ, ಜಂಗಮರ ಸೇವೆಯೂ ಮಾಡುತ್ತಾನೆ. ಇಂತಹವನಿಗೆ ಯಾವ ಕೊರತೆಯೂ ಇರುವುದಿಲ್ಲ. ವಾಸ್ತವಾಗಿ ಬದುಕಿನ ಅವಶ್ಯಕತೆಗಳು ಬಹಳ ಕಡಿಮೆ. ನಾವುಗಳೆಲ್ಲರೂ ನಮಗೆ ಬೇಡದೆ ಇರುವುದನ್ನೆಲ್ಲ, ಮನೆಯಲ್ಲಿ, ಮನದಲ್ಲಿ ತುಂಬಿಸಿಕೊಂಡು, ಅದರ ನಿರ್ವಹಣೆಯಲ್ಲಿಯೇ ತೊಡಗಿ ತೊಳಲಾಡುತ್ತೇವೆ. ಅದೇ ನಮ್ಮ ಜೀವನದ ಬಹು ಮುಖ್ಯ ಉದ್ದೇಶವಾಗುತ್ತದೆ. ನಾನು ಏನೋ ಬಹು ಮಹತ್ತರವಾದ ಕೆಲಸ ಮಾಡುತ್ತಿದ್ದೇನೆ ಎಂಬ ಭ್ರಮೆ ಹುಟ್ಟಿಸುತ್ತದೆ. ಇಂತಹ ಭ್ರಮೆಯಿಂದ ಮದಮತ್ತರಾಗಿರುತ್ತೇವೆ. ಚಿತ್ತ ಶುದ್ಧತೆಯು ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ಭಕ್ತನಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮೋನ್ನತಿ. ಅದರ ಹಂಬಲವನ್ನು ಬಿಟ್ಟು ಆತನಿಗೆ ಇನ್ನಾವದೂ ಬೇಕಾಗಿಲ್ಲ. ಹೀಗಾಗಿ ಆತನು ಮಾಡುವ ಕಾಯಕವು ಉದಾತ್ತತೆಯನ್ನು ಪಡೆದುಕೊಳ್ಳುತ್ತದೆ. ಆ ಕಾಯಕದಿಂದ ಬರುವ ದ್ರವ್ಯವು ಕಾಯಕದ ಸಂಭಾವನೆಯಾಗದೆ ಪ್ರಸಾದವಾಗುತ್ತದೆ. ಅದರಲ್ಲಿ ತನಗೆ ಅಗತ್ಯವಾದಷ್ಟನ್ನು ಮಾತ್ರವಿಟ್ಟು ಕೊಂಡು ಉಳಿದುದನ್ನು ತನ್ನ ಬದುಕಿಗೆ ದಾರಿ ದೀಪವಾದ ಸಮಾಜಕ್ಕೆ ಅರ್ಪಿಸುವುದು ನಿಜವಾದ ಕಾಯಕ. ಇದನ್ನೇ ಹೇಳುತ್ತಾಳೆ ಆಯ್ದಕ್ಕಿ ಲಕ್ಕಮ್ಮ.


No comments:

Post a Comment