Friday, June 3, 2011

Vachana 42: Aase Embudu Arasingallade - Desire is for Kings!


ಆಸೆ ಎಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ,
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.


TRANSLITERATION

Ase eMbudu arasiMgallade SivaBaktariguMTe ayyA?
rOShaveMbudu yamadUtarigallade ajAtariguMTe ayyA?
IsakkiyAse nimagEke? ISvaranoppa,
mArayyapriya amarESvaraliMgakke dUra mArayya.


CLICK HERE TO HEAR IT:

http://www.youtube.com/watch?v=eAx0hyJjIag


TRANSLATION

Ase eMbudu(desire is) arasiMgallade(if not for a king) SivaBaktariguMTe(is it for devotees of Shiva) ayyA(Sir)?
rOShaveMbudu(anger is) yamadUtarigallade(if not for the emissaries of the God of death) ajAtariguMTe(is it for those who are not born) ayyA(Sir)?
Isakkiy(This much Rice) Ase(desire) nimagEke(why is it for you)? ISvaranoppa(Lord ISvara will not approve),
mArayyapriya(Maarayya’s beloved) amarESvaraliMgakke(Lord Immortal ISvara Linga) dUra (you will be driven away) mArayya(Maarayya).


Sir! Desire is for the King, not for devotees of the Lord!
Sir! Anger is for the emissaries of the God of death (Yama), not for those who are not born!
Why did you desire this much rice? The Lord will not approve of it!
You will be driven away from your beloved Lord Immortal ISvara Linga, Maarayya!

COMMENTARY

In our previous posting Sharana Maarayya attached the highest priority to work or duty. His occupation was collecting spilled rice from stores. He and his wife Lakkamma would then clean the collected grains, use just enough needed for them and distribute the rest to others in need. Basavanna observes Maarayya’s work and feels that he may not be collecting adequate quantity for a good living, and spills a large quantity of rice intentionally. Unaware, Maarayya collects and brings the rice home. This vachana is from Sharane Lakkamma in her effort to impress on Maarayya that there is no need for them to have such a large quantity of rice. It will only bleed desire into them, the Lord will not approve of it and the eventual result is that the Lord will move away from their lives!

Lakkamma says that the desire is a natural attribute of kings. They desire a large army, a wide kingdom, a golden palace, etc. and always go after such mundane needs. Being desireless is what the devotees of the Lord strive for. Buddha said that desire is the root cause of sadness. Desire when unfulfilled leads to anger. Anger eventually destroys the individual. The emissaries of Lord Yama have the thankless job of bringing those whose time has come to Yama. It is said that the living, being afraid of death, try to escape from these emissaries, thus making them frustrated and angry. But, for those who have conquered the fear of death are also free from anger and frustration. The devotees, who have advanced in their spiritual quest to realize the Lord within, would have reached such fearless state.

In saying that aspiring for the riches of rice makes us strangers to the Lord, Lakkamma summarizes the divine economic principle that can bring peace on Earth, the principle of living with just enough (minimizing the needs), not hoarding and sharing the excess with fellow beings. She feels that when we hoard, we are depriving those who need the same.

Maarayya and Lakkamma lived the ‘work is bliss’ principle, cultivated simplicity and living with less attributes and through the distribution of excess grains they collected made daasoha the prime part of their lives!

Let us not desire more than what we need, for the harmony of us and those around us!


KANNADA COMMENTARY

ಇದು ಆಯ್ದಕ್ಕಿ ಮಾರಯ್ಯನವರ ಪತ್ನಿಯಾದ ಲಕ್ಕಮ್ಮನವರ ವಚನ. ಮಹಾಮನೆಯಲ್ಲಿ, ಅಂಗಡಿಗಳ ಮುಂಗಟ್ಟುಗಳಲ್ಲಿ, ಕೆಳಗೆ ಚೆಲ್ಲಿದ ಅಕ್ಕಿಯನ್ನು ಆರಿಸುವ ಕಾಯಕ ಮಾರಯ್ಯನವರದ್ದು. ಪ್ರತಿನಿತ್ಯವೂ ಅವರು ತಂದ ಅಕ್ಕಿಯನ್ನು ಹಸನು ಮಾಡಿ ಪತಿಪತ್ನಿಯರು ಏಕೋಭಾವದಿಂದ ದಾಸೋಹ ಮಾಡುವರು. ಇದು ಅವರ ಜೀವನ. “ಚೆಲ್ಲಿದ ಅಕ್ಕಿ ಅವರಿಗೆ ಎಷ್ಟು ಮಹಾ ಸಿಗುತ್ತಿರಬಹುದು? ಅವರು ಕಷ್ಟಪಡುತ್ತಿರಬಹುದು” ಎಂದುಕೊಂಡ ಕರುಣಾಮಯಿ ಬಸವಣ್ಣನವರು ಒಮ್ಮೆ ಬೇಕೆಂದೇ ಹೆಚ್ಚು ಅಕ್ಕಿಯನ್ನು ಚೆಲ್ಲಿದರು. ಇದನ್ನು ಗಮನಿಸದ ಮಾರಯ್ಯನವರು ಹೆಚ್ಚು ಅಕ್ಕಿಯನ್ನು ಆರಿಸಿ ಮನೆಗೆ ತಂದರು. ಆದರೆ ಅದು ಲಕ್ಕಮ್ಮನ ಗಮನಕ್ಕೆ ಬಂದಿತು. ಆಗ ಆಕೆ ಈ ವಚನದ ಮೂಲಕ ತನ್ನ ಪತಿಯನ್ನು ಎಚ್ಚರಿಸುತ್ತಾಳೆ.

ಅರಸನಿಗೆ ಆಸೆ ಎಂಬುದು ಸಹಜ. ಆತನಿಗೆ, ಸೈನ್ಯಬಲ, ಸೇವಕರು, ಒಡವೆ, ವಸ್ತ್ರ, ಮನೆ. ಅರಮನೆ, ವಸ್ತು, ವಾಹನ, ಧನ, ಕನಕ ಎಲ್ಲವೂ ಬೇಕು. ಇಡೀ ಪ್ರಜಾಸ್ತೋಮವನ್ನು ಮೆಚ್ಚಿಸಬೇಕು, ತನ್ನ ಪ್ರತಿಷ್ಠೆಯನ್ನು ಕಾಪಾಡಬೇಕು. ತನ್ನ ಸ್ಥಾನಮಾನಕ್ಕೆ ತಕ್ಕಂತೆ ಆತನಿಗೆ ಎಲ್ಲವೂ ಬೇಕು. ಹಾಗಾಗಿ ಅರಸನಿಗೆ ಆಸೆ ಇರುವುದು ಸಹಜ.

ರೋಷವು ಯಮದೂತರಿಗೆ ಸಹಜವಾದದ್ದು. ಅವರ ಕೆಲಸವೇ ಅಂತಹದು. ಯಮನ ಆಜ್ಞೆಯಂತೆ ಅವರು ಜೀವನನ್ನು ಯಮಪುರಿಗೆ ಕರೆದೊಯ್ಯಲು ಬರುವರು. ಆದರೆ ಜೀವನಿಗೆ ಯಮಪುರಿಗೆ ಹೋಗಲು ಇಷ್ಟವಿಲ್ಲ. ಜೀವ ಯಮಪುರಿಯನ್ನು ತಪ್ಪಿಸಿಕೊಳ್ಳಲು ನಾನಾ ಉಪಾಯ ಮಾಡುತ್ತದೆ. ಇದರಿಂದ ಯಮದೂತರ ಕೆಲಸ ಸುಲಭವಾಗಿ ಕೈಗೂಡುವುದಿಲ್ಲ. ಆದರೆ ಅವರು ಯಮನ ದೂತರಾದ್ದರಿಂದ ಯಮನ ಆಜ್ಞೆಯನ್ನು ಪಾಲಿಸುವ ಕಟ್ಟಿಗೆ ಒಳಗಾಗಿದ್ದಾರೆ. ತಮ್ಮ ಮೇಲೆ ಕರ್ತವ್ಯದ ಭಾರವಿರುವುದರಿಂದ ಯಮದೂತರಿಗೆ ಕೋಪ ಬರುವುದು ಸಹಜ. ಆದರೆ ಅಜಾತನಿಗೆ ಏಕೆ ರೋಷ? ಅಜಾತ ಎಂದರೆ ಹುಟ್ಟು ಇಲ್ಲದವನು. ಹುಟ್ಟೇ ಇಲ್ಲದವನಿಗೆ ರೋಷವು ಇರುವುದಿಲ್ಲ. ಆದರೆ ಹುಟ್ಟು ಇಲ್ಲದವನು ಇರಲು ಹೇಗೆ ಸಾಧ್ಯ? ಹುಟ್ಟು ಸಾವುಗಳ ಚಕ್ರದಲ್ಲಿ ತೊಳಲುವವನು ಸಾಮಾನ್ಯ ಜೀವಿ. ಆದರೆ ಭಕ್ತರು ದಿನ ನಿತ್ಯದ ಆಗು ಹೋಗುಗಳಲ್ಲಿ ಮುಳುಗದೆ, ತನ್ನ್ನ ತಾನರಿಯುವುದರಲ್ಲಿ , ಆತ್ಮೋನ್ನತಿಯಲ್ಲಿ ತೊಡಗಿಸಿ ಕೊಂಡವರು. ಇದನ್ನು ಸಾಧಿಸಿದವರಿಗೆ ಹುಟ್ಟು ಸಾವುಗಳು ಬಾಧಿಸುವುದಿಲ್ಲ. ಅವರು ಅದನ್ನು ಗೆದ್ದು ಅತೀತರಾಗಿ ನಿಲ್ಲುತ್ತಾರೆ. ಹಾಗಾಗಿ ಕೋಪ ತಾಪಗಳೂ ಉಂಟಾಗುವುದಿಲ್ಲ. ಅಂತಹವರನ್ನು ಇಲ್ಲಿ ಅಜಾತರು ಎನ್ನುತ್ತಿದ್ದಾರೆ ಲಕ್ಕಮ್ಮನವರು.

ನಾವು ಶಿವ ಭಕ್ತರು, ಅರಿವುಳ್ಳವರು. ಶಿವಭಕ್ತರಿಗೆ ಎಂತಹ ಆಸೆ, ಎಂತಹ ರೋಷ? ಕೇವಲ ಶಿವನನ್ನು ಮೆಚ್ಚಿಸುವುದು ಮಾತ್ರ ನಮಗೆ ಬೇಕು. ಇನ್ನೇನೂ ಬೇಡ. ಶಿವನನ್ನು ಮೆಚ್ಚಿಸಲು ಬೇಕಾದದ್ದು ಪ್ರಾಮಾಣಿಕತೆ. ಪ್ರಾಮಾಣಿಕತೆಯಿಂದ ಕಾರೆಸೊಪ್ಪಾದರೂ ತಂದು ದಾಸೋಹ ಮಾಡಿದರೂ ಶಿವನು ಒಪ್ಪುತ್ತಾನೆ. ನನಗೆ ಮೃಷ್ಟಾನ್ನವನ್ನೇಕೆ ಅರ್ಪಿಸಲಿಲ್ಲವೆಂದು ಮುನಿಯನು. ಆದರೆ ಅತಿಯಾಸೆಯಿಂದ, ಅಪ್ರಾಮಾಣಿಕತೆಯಿಂದ ಅರ್ಪಿಸಿದುದನ್ನು ಆತನು ಒಪ್ಪನು. ಹಾಗೆ ಮಾಡಿದಲ್ಲಿ ಆತನು ನಮ್ಮಿಂದ ದೂರನಾಗುತ್ತಾನೆ ಎನ್ನುತ್ತಾಳೆ ಲಕ್ಕಮ್ಮ. ಹೀಗಿರುವಾಗ ನೀವು ಹೆಚ್ಚಿನ ಅಕ್ಕಿಯಾಸೆಯಿಂದ ನಮಗೆ ಸೇರದ್ದನ್ನು ತಂದಿರುವಿರಿ. ಇದನ್ನು ಶಿವ ಮೆಚ್ಚನು. ನಮ್ಮದಲ್ಲದ್ದನ್ನು ಅಲ್ಲಿಯೇ ಸುರಿದು ಬನ್ನಿರಿ ಎನ್ನುತ್ತಾಳೆ.

“ಈಸಕ್ಕಿಯಾಸೆ ನಿಮಗೇಕೆ” ಎನ್ನುವಲ್ಲಿ, ನಮ್ಮ ಬಳಿ ಇರುವುದರಲ್ಲಿ ನಮಗೆ ತೃಪ್ತಿಯಿಲ್ಲವೆ? ಅದು ನಮಗೆ ಸಾಲುವುದಿಲ್ಲವೆ? ಹೆಚ್ಚಿನದಕ್ಕಾಗಿ, ನೀವು ಇಂದು ಆರಿಸಿಕೊಂಡು ಬಂದ ಇಷ್ಟೊಂದು ಅಕ್ಕಿಗೆ ಹಾತೊರೆಯುವ ಅವಶ್ಯಕತೆ ಇದೆಯೆ? ಸಂಗ್ರಹ ಬುದ್ಧಿ ಪಾಪಕ್ಕೆ ಹಾದಿ ಮಾಡಿಕೊಡುವುದು. ಅದು ಅಗತ್ಯವಿರುವವನಿಗೆ ಮೋಸ ಮಾಡಿದಂತೆ. ಪ್ರತಿಯೊಬ್ಬನೂ ತನಗೆ ಅಗತ್ಯವಾಗಿ ಬೇಕಾದುದಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚಿನದಕ್ಕೆ ಆಸೆಪಡುವುದು ಈಶ್ವರನೊಪ್ಪದ ಮಾತು. ಈಶ್ವರನೊಪ್ಪದ ಬದುಕಿನಿಂದೇನು ಫಲ? ಆಸೆಯಿಂದ ಮಾಡುವ ಕೆಲಸ ಕಾಯಕವಾಗುವುದಿಲ್ಲ. ಎನ್ನುವ ಅರ್ಥ ಅಡಗಿದೆ.
 
ಈಶ್ವರನು ಒಪ್ಪಬೇಕು ಅದು ಮುಖ್ಯ. ಈಶ್ವರನು, ಸತ್ಯ ಶುದ್ಧ ಕಾಯಕವನ್ನು ಮಾತ್ರ ಒಪ್ಪುತ್ತಾನೆ. ವಂಚನೆ, ದುರಾಸೆಯಿಂದ ಮಾಡುವ ಕೆಲಸ ಕಾಯಕವಲ್ಲ. ಅಂತಹ ಕೆಲಸಮಾಡುವವರಿಂದ ಆತನು ದೂರ ಸರಿಯುತ್ತಾನೆ ಎನ್ನುತ್ತಾಳೆ ಲಕ್ಕಮ್ಮ.ಇಡೀ ಸಮಾಜದ ಆರ್ಥಿಕ ಸಮತೋಲನಕ್ಕೆ ಅಗತ್ಯವಾದ ಭೂಮಿಕೆ ಶಿವಭಕ್ತಳಾದ ಆಯ್ದಕ್ಕಿ ಲಕ್ಕಮ್ಮನ ಮಾತಿನಲ್ಲಡಗಿದೆ.









No comments:

Post a Comment