Friday, July 27, 2012

Vachana 100: Tannanariyenembudu – Knowledge and Ignorance

ತನ್ನನರಿಯೆನೆಂಬುದು ಅಜ್ಞಾನ ನೋಡಾ,
ಅರಿಯದಜ್ಞಾನವ ಅಗಳೆದು ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ!
ಎಲ್ಲವ ತೋರುವ ಘನವನು ಎಲ್ಲಿಯೂ ಕಾಣಬಾರದು ನೋಡಾ,
ಕಾಣಬಾರದ  ನಿಜವ  ತೋರಬಾರದು, ತೋರಬಾರದ ನಿಜವ ತಿಳಿಯಬಾರದು
ಗುಹೇಶ್ವರ ಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ
ತಿಳುಹಲಿಲ್ಲವೆಂಬುದು ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯಾ

TRANSLITERATION

tannanariyeneMbudu aj~jaana nODaa,
ariyada j~jaanava agaLedu j~jaanava kaaNeneMbudu vipareeta bhaava nODaa!
Ellava tOruva ghanavanu elliyU kaaNabaaradu nODaa,
kaaNabaarada nijava tOrabaaradu, tOrabaarada nijava tiLiyabaaradu
guhEshvara liMgadalli bayakeyuLLannakka tavaka eDegoMDaDippa kaaraNa
tiLUhalillaveMbudu ninna tiLidu nODaa siddharaamayyaa

CLICK HERE TO READ-ALONG:


TRANSLATION (WORDS)
tannanu (myself) ariyenu (don’t know) eMbudu (that which says)  aj~jaana (is ignorance) nODaa, (you see)
ariyada (not knowing)  j~jaanava  (the knowledge of )agaLedu (denying)
j~jaanava ( the knowledge) kaaNeneMbudu ( saying cannot see) vipareeta bhaava (is contradictory) nODaa! (you see)
Ellava (all, entire world) tOruva (which shows) ghanavanu ( that profound )elliyU (any where) kaaNabaaradu  (cannot be seen)nODaa,(you see)
kaaNabaarada (which cannot be seen) nijava (the true self) tOrabaaradu (cannot be shown)
tOrabaarada (which cannot be shown)  nijava (the true self) tiLiyabaaradu (cannot be understood)
guhEshvara (Guheshvara) liMgadalli  (the truth)bayakeyuLLannakka (if you yearn for)
tavaka ( eagerness, anxiousness)eDegoMDaDippa ( the existence of) kaaraNa (because of)
tiLUhalillaveMbudu (that nobody revealed to me)  ninna (your self) tiLidu(by understanding) nODaa (you see) siddharaamayyaa (Siddharaamayya)

TRANSLATION

Saying that I don’t know myself is ignorance, you see!
Denying the knowledge not known and saying that the knowledge cannot be seen is contradictory, you see!
That profound which shows the entire world, cannot be seen anywhere, you see!
The true self that cannot be seen, cannot be shown, you see!
The true self that cannot be shown cannot be understood.
Realize your own self and understand that having an intense desire to realize the divine with anxiety and eagerness is why you did not realize Him, Oh! Siddaramayya!

COMMENTARY

In the previous posting, Sharana Siddarama described how he is yearning with an intense desire and longing for the union with God. In this Vachana, Allama Prabhu clarifies that the prerequisite for the union with God is realization of the Self. Without such realization, no amount of desire and yearning would take one to the Lord. Allama Prabhu is providing guidance to distinguish between true knowledge and ignorance.  He says, not understanding oneself is ignorance.  Are we all in this state? Don’t we know who we are?  We identify ourselves as brother, sister, teacher, friend and foe of someone. We identify ourselves with the positions we hold and our status in society. These are all descriptions relative to others around us. We really don’t know the answer for ‘who am I?’ This is ignorance. Indeed, we do not even think that we are ignorant! We deny being ignorant. Without erasing that ignorance, we would not know who we are!

We cannot see and feel the divine principle that is the creator of this Universe, although He is omnipresent, omnipotent and omniscient. He cannot be sensed through any of our sense organs; neither he can be visualized by any stretch of our mind and thinking capabilities. Our language and thinking put limit on what we can visualize to the objects and people we know and have seen. As such, if one is anxious to realize the divine, he tends to form an image of the divine and what he realizes is that image and not the true formless God who is beyond our sense perceptions. Allama Prabhu thus says that the God cannot be realized through intense desire and yearning. One has to cultivate the state of a subtle mind, with no desires and expectations. This will eventually lead to the understanding of the Self and hence the union with the divine.

Let us gain the true knowledge of the Self!   

KANNADA COMMENTARY


ಜ್ಞಾನ ಅಜ್ಞಾನವೆಂದರೇನು ಎಂದು  ಆಳವಾಗಿ ಅಲೋಚಿಸುವವರಿಗೆ ಕೈಪಿಡಿಯಂತಿದೆ  ಅಲ್ಲಮಪ್ರಭುಗಳ ಈ ವಚನ.
ಅಜ್ಞಾನವೆಂದರೇನು? ತನ್ನನ್ನು ತಾನು ಅರಿಯದೆ ಇರುವುದೇ ಅಜ್ಞಾನ. ನಾವೆಲ್ಲ ಇರುವುದೇ ಈ ಸ್ಥಿತಿಯಲ್ಲಿ. “ನಾನು ಯಾರು” ಎಂದು ನಮಗೆ ತಿಳಿದಿಲ್ಲ. ನಾವು ನಮ್ಮನ್ನು,  ಅಪ್ಪ, ಅಮ್ಮ, ಮಗ , ಮಗಳು, ಅಳಿಯ, ಸೊಸೆ, ಅಣ್ಣ, ತಮ್ಮ, ತಂಗಿ,ಅಕ್ಕ, ಗೆಳೆಯ, ಗೆಳತಿ ಇತ್ಯಾದಿ ಎಂದೋ , ಇಲ್ಲವೆ  ನಾವು ಹೊಂದಿದ ಪದವಿಗಳಿಂದಲೋ, ನಮ್ಮ ಹೆಸರು ಇಲ್ಲವೆ ಸ್ವಭಾವದಿಂದಲೋ,ನಮ್ಮ ಜನಾಂಗದ ಹೆಸರಿನಿಂದಲೋ ಅಥವಾ ಇನ್ನಾವುದೋ ರೀತಿಯಿಂದಲೋ ಗುರುತಿಸಿಕೊಳ್ಳುತ್ತೇವೆ. ಇದನ್ನೇ “ನಾನು” ಎಂದುಕೊಳ್ಳುತ್ತೇವೆ. ಆದರೆ  ಈ ಎಲ್ಲವೂ ಸಂಬಂಧವನ್ನು ಅವಲಂಬಿಸಿವೆ (relative). ನಿಜವಾದ “ನಾನು” ಈ ಆವುದೂ ಅಲ್ಲ. ಹೀಗಾಗಿ ಇದೆಲ್ಲವೂ ಅಜ್ಞಾನವೇ. ಇಷ್ಟೇ ಅಲ್ಲ “ಇದು ಅಜ್ಞಾನ”ವೆಂದು ನಾವು ಗುರುತಿಸುವುದೂ ಇಲ್ಲ.  ಇಂತಹ ಅಜ್ಞಾನ ನಮ್ಮಲ್ಲಿದ್ದರೂ  ನಾವು ಅದನ್ನುಅಲ್ಲಗಳೆಯುತ್ತೇವೆ. ಅಂದರೆ ಇಂತಹ ಅಜ್ಞಾನ ನನ್ನಲಿಲ್ಲ ಎಂದುಕೊಳ್ಳುತ್ತೇವೆ. ಆದರೆ ಅಜ್ಞಾನ ಅಳಿಯದೆ ಜ್ಞಾನ ಉಂಟಾಗುವುದಿಲ್ಲ.

ಈ ಜಗತ್ತಿನಲ್ಲಿ ಎಲ್ಲವನ್ನು ಉಂಟುಮಾಡುವ ಆ ಘನ ತತ್ವವು ತನ್ನ ನಿಜ ರೂಪದಲ್ಲಿ ಎಲ್ಲಿಯೂ ನೋಡಲು ಸಿಗುವುದಿಲ್ಲ. ಅಂದರೆ ಅದು ಇಂದ್ರಿಯಗಳಿಗೆ ನಿಲುಕಲಾರದ್ದು. ಆದ್ದರಿಂದ ಅದು ಕಣ್ಣಿಗೆ ಕಾಣುವುದಿಲ್ಲ. ಕಾಣದೆ ಇರುವುದನ್ನು ತೋರಿಸುವುದು ಅಸಾಧ್ಯ. ಕಾಣದೆ ಇರುವುದನ್ನು, ತೋರಿಸಲು ಬಾರದೆ ಇರುವುದನ್ನು ತಿಳಿಯುವುದು ಕಷ್ಟ. ಒಟ್ಟಿನಲ್ಲಿ ಅದು ಇಂದ್ರಿಯಕ್ಕಗೋಚರವಾದದ್ದು. ಅಷ್ಟೇ  ಅಲ್ಲ, “ಗುಹೇಶ್ವರ ಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ ತಿಳುಹಲಿಲ್ಲ”  ಎಂದು ಹೇಳುತ್ತಾರೆ ಅಲ್ಲಮರು.    ಬಯಕೆ ಇದ್ದರೆ ಅಲ್ಲಿ  ಆತುರವಿರುತ್ತದೆ. ಮತ್ತು,  ಆತುರ ಮತ್ತು  ಬಯಕೆಯು  ಇರುವ ಕಾರಣ ನಮಗೆ ಅರಿವು ಉಂಟಾಗದು ಎಂಬುದು “ನನ್ನನ್ನು ನಾನು ಅರಿತಮೇಲೆ ತಿಳಿಯುತ್ತದೆ” ಎನ್ನುತ್ತಾರೆ ಅಲ್ಲಮರು. ಹಾಗಾದರೆ ಲಿಂಗವನ್ನು ಕಾಣಬೇಕು, ಎಂಬ ಬಯಕೆ ಮತ್ತು ತವಕ ಇರಬಾರದೆ?  ಇದನ್ನು ಅರಿತುಕೊಳ್ಳಲು ಪ್ರಯತ್ನಿಸೋಣ.  ಇಂದ್ರಿಯಕ್ಕಗೋಚರವಾದ ಆ ಘನ ತತ್ವವನ್ನು ಅರಿಯಲು ಮನಸ್ಸು ನಿರ್ಭಾವವಾಗಿರಬೇಕಾದದ್ದು ಬಹು ಮುಖ್ಯ. ಇಲ್ಲದಿದ್ದರೆ ನಮ್ಮ ಮನಸ್ಸು ನಮ್ಮಲ್ಲಿರುವ ಭಾವವನ್ನೇ ನಮಗೆ ಕಾಣುವಂತೆ ಮಾಡುತ್ತದೆ.  ಈಗ  ಬಯಕೆ ಅಥವಾ ಆಸೆ ಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ನಾವು ಹೇಳುತ್ತೇವೆ: “ ನನಗೆ ದೋಸೆ ತಿನ್ನಬೇಕೆಂಬ ಆಸೆಯಾಗಿದೆ” ಎಂದು. ಅಂದರೆ ನನಗೆ ದೋಸೆ ಎಂಬುದರೆ ಪರಿಚಯವಿದೆ, ಅದರ ರುಚಿ, ಅದರ ಪರಿಮಳ, ಅದರ ಸ್ಪರ್ಶ ಇತ್ಯಾದಿಗಳು ನನಗೆ ಸುಖ ಕೊಡುತ್ತವೆ. ಅವನ್ನು ನಾನು ಬಯಸುತ್ತೇನೆ ಎಂದರ್ಥ . ಅಲ್ಲವೆ?   ಆದರೆ ನಾವು ಪ್ರಾಮಾಣಿಕವಾಗಿ ಕೇಳಿಕೊಳ್ಳಲೇ ಬೇಕಾದ ಪ್ರಶ್ನೆ ಏನೆಂದರೆ,  ನನಗೆ ಪರಿಚಯವೇ ಇಲ್ಲದ್ದನ್ನು ನಾನು ಆಸೆ ಪಡಲು ಸಾಧ್ಯವೆ?  ಅದನ್ನು ಪಡೆಯಲು ಆತುರಗೊಳ್ಳಲು ಸಾಧ್ಯವೆ?  ಎಂದು.   ಏಕೆಂದರೆ  ಅಲ್ಲಮಪ್ರಭುಗಳು ಹೇಳುತ್ತಾರೆ “ಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ ತಿಳುಹಲಿಲ್ಲ” ( ಲಿಂಗವನ್ನು ಕಾಣಬೇಕೆಂಬ ಬಯಕೆ ಮತ್ತು ಆತುರ ಇದ್ದುದರಿಂದ ಲಿಂಗ ಕಾಣಲಿಲ್ಲ)  ಎಂದು. ಲಿಂಗವನ್ನು ಕಾಣಬೇಕು ಎಂಬ ಬಯಕೆ ಮತ್ತು ಬಯಕೆ ಈಡೇರಿಸಿಕೊಳ್ಳುವ ಆತುರ ಮನದಲ್ಲಿ ಮನೆ ಮಾಡಿದೆ ಎಂದರೆ ಆ ಲಿಂಗದ ಬಗ್ಗೆ ನಮ್ಮ ಮನದಲ್ಲಿ ಆಗಲೆ ಒಂದು ಚಿತ್ರವಿದೆ ಎಂದರ್ಥವಾಯಿತು.  ಅಂದರೆ  ಇಂದ್ರಿಯಕ್ಕಗೋಚರವಾದುದರ ಬಗ್ಗೆ ನಮಗೆ  ಆಗಲೇ ಒಂದು ಕಲ್ಪನೆಯಿದೆ ಅಲ್ಲವೆ?  ಯಾರೂ ತೋರಿಸಲು ಬಾರದ್ದುದರ ಬಗ್ಗೆ, ಯಾರೂ ವರ್ಣಿಸಲಾರದ್ದರ ಬಗ್ಗೆ, ವಾಙ್ಮನಕ್ಕತೀತವಾದುದರ ಬಗ್ಗೆ ನಮಗೆ ಆಗಲೇ ಒಂದು ಕಲ್ಪನೆ ಇದೆ ಎಂದರ್ಥವಾಯಿತ್ತಲ್ಲವೆ? ಇದು ಎಂತಹ ಅಸಂಬದ್ಧವಾದದ್ದು? ಹೀಗಿದ್ದಾಗ ನಾವು ನಮ್ಮ ಕಲ್ಪನೆಯನ್ನೇ ಕಾಣುತ್ತೇವೆಯೇ ಹೊರತು ನಿಜವಾದ ಲಿಂಗವನ್ನಲ್ಲ. ಆದ್ದರಿಂದ ನಮಗೆ ಲಿಂಗವು ಅರಿವಿಗೆ ಬರುವುದಿಲ್ಲ. ಎನ್ನುತ್ತಾರೆ ಅಲ್ಲಮಪ್ರಭುಗಳು. ಆ ಘನ ತತ್ವವನ್ನು ಕಂಡು ಕೊಳ್ಳಲು ನಾವು ನಮ್ಮ ಮನಸ್ಸನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಬೇಕು ಎಂಬುದನ್ನು ಸಿದ್ಧರಾಮರಿಗೆ ಹೇಳುತ್ತಿರುವ ಅಲ್ಲಮರ ಈ ವಚನವು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.

Friday, July 20, 2012

Vachana 99: Ele Ayyaa, Nimma Baravinge – Yearning for Your Arrival


ಎಲೆ ಅಯ್ಯಾ, ನಿಮ್ಮ ಬರವಿಂಗೆ ಕಣ್ಬೇಟಗೊಂಡೆನು,
ಎಲೆ ಅಯ್ಯಾ, ನಿಮ್ಮ ಬರವಿಂಗೆ ಎನ್ನ ಮನವೆಂಬ ಮಂಚವ ಪಚ್ಚಪಡಿಸಿದೆ,
ಎಲೆ ಅಯ್ಯಾ, ನಿಮ್ಮ ಬರವಿಂಗೆ ಚಿತ್ತ ಸುಯಿಧಾನಿಯಾಗಿದ್ದೇನೆ,
ಎಲೆ ಅಯ್ಯಾ, ನಿಮ್ಮ ಬರವಿಂಗೆ ಜ್ಞಾನದ ಸೆರಗ ಹಾಸಿ ಆಸೆಬಡುತ್ತಿದ್ದೇನೆ,
ಎಲೆ ಅಯ್ಯಾ, ನೀ ಬಂದು ವಿರತವಿಲ್ಲದೆ(ಕೊನೆಯಿಲ್ಲದೆ) ಕೂಡಿ ನಿನ್ನವಳೆಂದೆನಿಸಾ,
ಕಪಿಲಸಿದ್ಧಮಲ್ಲಿಕಾರ್ಜುನಾ.

TRANSLITERATION
ele ayyaa nimma baraviMge  kaNbETagoMDenu,
eleayyaa, nimma baraviMge enna manaveMba maMcava paccapaDiside,     
ele ayyaa nimma baraviMge   citta suyidhaaniyaagiddEne,
ele ayyaa nimma baraviMge  j~jaanada seraga haasi aasebaDuttiddEne,
ele ayyaa nI baMdu viratavillade kUDi ninnavaLeMdenisaa,
kapilasiddhamallikaarjunaa.

CLICK HERE TO READ-ALONG:

TRANSLATION (WORDS)
ele ayyaa (sir) nimma(for your) baraviMge (arrival) kaNbETagoMDenu,(I am yearning)
ele ayyaa (sir) nimma(for your) baraviMge (arrival) enna (my) manaveMba ( called  mind) maMcava (cot) paccapaDiside,(I have decorated)
ele ayyaa (sir) nimma(for your) baraviMge (arrival) citta (my mind) suyidhaaniyaagiddEne,(kept wakefull)
ele ayyaa (sir) nimma(for your) baraviMge (arrival) j~jaanada (of knowledge) seraga (veil) haasi (by spreading) aasebaDuttiddEne,(I have been longing)
ele ayyaa(sir) nI (you) baMdu (come and) viratavillade (endlessly) kUDi (uniting with me)ninnavaLeMdenisaa,(make me yours, take me as your wife)
kapilasiddhamallikaarjunaa.(Kapilasiddhamallikaarjuna)

TRANSLATION
Dear Sir, I am yearning for your arrival
Dear Sir, I have decorated the cot of mind for your arrival
Dear Sir, I have kept my mind wakeful for your arrival
Dear Sir, having spread the veil of knowledge, I have been longing for your arrival
Dear Sir, please come, unite with me and make me yours,
Kapilasiddhamallikaarjunaa!

COMMENTARY

In this Vachana, Sharana Siddarama expresses his intense desire to be one with the divine and describes how much he is yearning for His arrival. He has prepared his mind, calling it a cot(bed) he has decorated for the arrival of the divine. He has kept his mind wakeful. He has acquired all the knowledge he can and has spread the veil of knowledge for the divine to step in. Siddarama asks the Lord to come and unite with him and make him His.
We have said that the ultimate goal of the spiritual path is to unite with God. We have called it Linga (God) – Anga (Man) saamarasya (uniting).   Sharanas have equated the union with God to that of the union of husband and wife (Sharana sati – Sharana (devotee) is wife; Linga pati – God is Husband), as two bodies and one soul, forever. The mantra ‘Om Namah Shivaaya’ is widely interpreted as ‘I salute Lord Shiva’. Its subtle interpretation is ‘Oh Lord Shiva, make me yours’.
How can we achieve the union with God in this material world we live in? It is by acquiring the knowledge necessary to see the God within us and in our fellow beings and utilizing this knowledge to develop an intense desire to move the individual soul (Jeevatma) to become part of the collective soul (Paramatma) through kaayaka (selfless service) and daasoha (sharing), and bringing the heaven to Earth.
As Siddarama expresses in this Vachana, he has acquired all the necessary knowledge for the spiritual path, he has prepared his mind and has kept it wakeful with an intense desire to welcome the Lord into his life.  The next Vachana from Allama Prabhu will address if such an intense desire is the path for union with God?

Let us not stray from the spiritual path!

KANNADA COMMENTARY

ಇದು ಸಿದ್ಧರಾಮರ ವಚನ. ಇಲ್ಲಿ ಅವರು ತಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಬರವಿಗಾಗಿ ತಾವು ಹಾರೈಸುತ್ತಿರುವ ಪರಿಯನ್ನು ತಿಳಿಸುತ್ತಾರೆ. ಅವರ ಕಣ್ಣುಗಳು ಆತನ ಬರವನ್ನು ಬಯಸುತ್ತಿವೆ. ಅವರು ಆತನ ಬರವಿಗಾಗಿ ತಮ್ಮ ಮನವೆಂಬ ಮಂಚವನ್ನು ಅಲಂಕರಿಸಿ ಸಿದ್ಧಪಡಿಸಿ ಕಾಯುತ್ತಿದ್ದಾರೆ. ಅಂದರೆ ಆತನ ಬರವಿಗಾಗಿಯೇ  ಮನವನ್ನು ಶುದ್ಧಗೊಳಿಸಿ ಅಣಿಗೊಳಿಸಿದ್ದಾರೆ. ಆತನನ್ನು ಕೂಡುವ ಅಪೇಕ್ಷೆ  ಆತುರ ಅವರಲ್ಲಿ ಕಾಣುತ್ತಿದೆ. ಆತನ ಬರವನ್ನು ಎಚ್ಚರಿಕೆಯಿಂದ ಕಾಯುತ್ತಿದ್ದಾರೆ. ಆತನು ಬಂದಾಗ ತನ್ನ ಜ್ಞಾನವನ್ನೆಲ್ಲ ಅರ್ಪಿಸಲು ಸಿದ್ಧರಾಗಿದ್ದಾರೆ. ಅಂದರೆ ಅವರು ಜ್ಞಾನಾರ್ಜನೆ ಮಾಡುತ್ತಿರುವದೇ ಆತನಿಗಾಗಿ. ಇಷ್ಟೆಲ್ಲ ಮಾಡಿದ ಮೇಲೆನೀನು ಬಂದು ನನ್ನನ್ನು ಎಂದೂ ಅಗಲದಂತೆ ಕೂಡಿ ನನ್ನನ್ನು ನಿನ್ನವಳೆಂದೆನಿಸುಎಂದು ಕೇಳಿಕೊಳ್ಳುತ್ತಾರೆ. “ಲಿಂಗ ಪತಿ ಶರಣ ಸತಿಎಂಬ ಭಾವ ಇಲ್ಲಿ ತೋರುತ್ತಿದೆ. ಸತಿ ಪತಿಯರು ಕೊನೆಯವರೆಗು ಒಂದಾಗಿರುವಂತೆ ತಾನು ಮತ್ತು ಕಪಿಲಸಿದ್ಧಮಲ್ಲಿಕಾರ್ಜುನನು ಒಂದಾಗಿರಬೇಕು. ಯಾವ ಕಾರಣಕ್ಕೂ ಆತ ತನ್ನಿಂದಗಲಬಾರದು ಎನ್ನುವ ಆಸೆ ಇಲ್ಲಿ ವ್ಯಕ್ತವಾಗುತ್ತದೆ. ಇಲ್ಲಿ ಆತನನ್ನು ಕಾಣುವ ಉತ್ಕಟವಾದ ಹಂಬಲ ಕಂಡು ಬರುತ್ತದೆ. ನಾನು ನೀನು ಎಂಬ ಭಿನ್ನ ಭಾವ ತೋರುತ್ತದೆ. ಆತನ ಬರವಿಗಾಗಿ ಪರಿಪರಿಯಾಗಿ ಬೇಡಿಕೊಳ್ಳುವ, ನಾನಾ ರೀತಿಯಾಗಿ ಅಣಿಯಾಗುವ ರೀತಿ ಕಂಡುಬರುತ್ತದೆ. ಇಲ್ಲಿ ಭಕ್ತನ ಪ್ರತಿಯೊಂದು ಕ್ರಿಯೆಯಲ್ಲೂ ತಾನು ಆತನನ್ನು ಕೂಡ ಬೇಕು ಎಂಬ ಆಸೆ ತೋರಿಬರುತ್ತಿದೆ. ಆತನನ್ನು ಕೂಡಲೆಂದೇ ಭಕ್ತ ಏನೇನೋ ಮಾಡುತ್ತಾನೆ.   ಆದರೆ ಇಂತಹ ಬಯಕೆ ಆತುರತೆಯಿಂದ ಆತನನ್ನು ಪಡೆಯಲಾಗುತ್ತದೆಯೇ ಎಂಬುದನ್ನು ಮುಂದಿನ ವಚನದಲ್ಲಿ ನೋಡೋಣ.




Friday, July 13, 2012

Vachana 98: Ura Madhyada Kanna Kaadinolage - Sense Organs


ಊರಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು,
ಬಂದು ಬಂದು ಅಳುವರು, ಬಳಗ ಘನವಾದ ಕಾರಣ!
ಹೆಣನೂ ಬೇಯದು ಕಾಡೂ ನಂದದು;
ಮಾಡು ಉರಿಯಿತ್ತು ಗುಹೇಶ್ವರಾ


TRANSLITERATION
Ura madhyada kaNNa kaaDnoLage biddaidaave aidu heNanu
baMdu baMdu aLuvaru baLaga ghanavaada kaaraNa!
heNanU bEyadu, kaaDU naMdadu;
maaDu uriyittu guhEshvaraa


CLICK HERE TO READ-ALONG:
TRANSLATION (WORDS)
Ura  (of a town,  of  the world)  madhyada (at  the centre) kaNNa (of the eye) kaaDinoLage(in the forest) biddaidaave(are lying) aidu (five) heNanu (corpses)
baMdu  baMdu (coming again and again) aLuvaru(weep) baLaga (relatives) ghanavaada (are in big number,innumerable) kaaraNa!(because)
heNanU(the corpse too) bEyadu,(doesn’t get burnt) kaaDU (the forest too)naMdadu;(doesn’t get extinguished)
maaDu(a place to keep some thing, the body)  uriyittu(got burnt) guhEshvaraa.(Guheshvara)


TRANSLATION
In the forest seen at the center of the town are lying five corpses,
Innumerable relatives come over and over again and weep!
Neither the corpses get burnt, nor the forest gets extinguished (vanishes);
The body got burnt, Oh! Guhesvara!

COMMENTARY
This is another cryptic (mystifying, poking, awakening) Vachana by Allama Prabhu.  The town mentioned in the first line is the Universe. In this Universe is the world seen by us referred to as the forest. The five corpses lying in the forest are the five sense organs. Innumerable relatives come again and again and weep for these corpses, meaning that innumerable people aspire for these sense organs over and over again. But, the sense organs do not get burnt, meaning that the thirst for what these organs offer never ends. The forest does not vanish either, meaning that there is no desire in any one to move away from this material world’s influence, even though the body burns (or vanishes). This aspiration continues life after life!

It is interesting that the world we are in is tagged as ‘forest’. Indeed, we fall prey for our senses and weave a complex web and get tangled in it. We are always lost in this forest. The sense organs are corpses – they are guided by the past experiences, not the present or the future. We remember the taste of a sweet dish and crave for the same. We get frustrated if we did not get to taste it again. Similar is the story of other senses. We are always in the mode of acquiring more to satisfy and continue the sensual experiences of the past. But, we fail to satisfy them. We continue to be frustrated and continue to make the material world more complex. The world never dies, although the body vanishes eventually.  

Let us not deprive of our sense organs, but not become their slaves!

KANNADA COMMENTARY
ಇದು ಅಲ್ಲಮಪ್ರಭುಗಳ ಇನ್ನೊಂದು ಬೆಡಗಿನ ವಚನ. ಊರು ಎಂದರೆ ವಿಶ್ವ. ಈ ವಿಶ್ವದಲ್ಲಿ ನಮ್ಮ ಕಣ್ಣಿಗೆ ಕಂಡು ಬರುವ ಪ್ರಪಂಚವಿದೆ.  ಇದೇ ಕಣ್ಣ ಕಾಡು. ಕಣ್ಣಿಗೆ ಕಾಣುವ ಪ್ರಪಂಚವನ್ನು ಅಲ್ಲಮರು ಕಾಡು ಎನ್ನುತ್ತಾರೆ. ಏಕೆಂದರೆ ಜೀವರು ಅದರಲ್ಲಿ ಮುಳುಗಿ ಹೋಗಿ, ದಾರಿ ತಪ್ಪುತ್ತಾರೆ. ಈ ಕಾಡಿನಲ್ಲಿ ಐದು ಹೆಣಗಳು ಬಿದ್ದಿವೆ ಎನ್ನುತ್ತಾರೆ ಅವರು.  ಐದು ಹೆಣಗಳು ಎಂದರೆ ಐದು ಜ್ಞಾನೇಂದ್ರಿಯಗಳು; ಶಬ್ದ, ಸ್ಪರ್ಶ,ರಸ, ರೂಪ, ಗಂಧ. ಇವುಗಳಿಗಾಗಿ  ಅಸಂಖ್ಯ ಜೀವರು ಬಂದು ಅಳುವರು ಎನ್ನುತ್ತಾರೆ. ಇಲ್ಲಿ  ಇಂದ್ರಿಯಗಳನ್ನು ಹೆಣವೆನ್ನುತ್ತಿರುವುದು ಕುತೂಹಲದ ವಿಷಯ. ಎಲ್ಲರೂ ಇಂದ್ರಿಯ ಸುಖವನ್ನು ಬಯಸುತ್ತಾರೆ. ಈ ಸುಖದ ಆಸೆಗಾಗಿ, ವಿಷಯ ಭೋಗಕ್ಕಾಗಿ ಜೀವ ಮತ್ತೆ ಮತ್ತೆ ಬರುತ್ತದೆ ಇದನ್ನೇ “ಬಂದು ಬಂದು ಅಳುವರು” ಎಂದು ಸೂಚಿಸುತ್ತಾರೆ. ಆದರೆ ಈ ಸುಖವೇನು? ಉದಾಹರಣೆಗೆ,  ವ್ಯಕ್ತಿ ಸ್ಪರ್ಶ ಸುಖವನ್ನು ಬಯಸುತ್ತಾನೆ. ಹಿಂದೊಮ್ಮೆ ತನಗೆ ಸ್ಪರ್ಶದಿಂದಾದ ಸುಖದ ನೆನಪಿನಿಂದ ಮತ್ತೆ ಅದೇ ಸುಖವನ್ನು ಪಡೆಯುವುದಕ್ಕೆ ಹವಣಿಸತ್ತಾನೆ. ಆ ಸುಖ ಸಿಕ್ಕಾಗ ಅದನ್ನು ತಾನು ಹಿಂದೆ ಪಡೆದ ಸುಖದೊಂದಿಗೆ ಹೋಲಿಸಿ ಇನ್ನೂ ಹೆಚ್ಚಿನ ಸುಖಕ್ಕಾಗಿ ಆಶಿಸುತ್ತಾನೆ.  ಅದಕ್ಕಾಗಿ ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ಒಟ್ಟಿನಲ್ಲಿ ಅವನು ಪಡೆಯ ಬೇಕೆನ್ನುವ , ಅಥವಾ ಬೇಡವನ್ನುವ ಆ ಪ್ರತಿಯೊಂದೂ,  ಹಿಂದೆ ತಾನು ಅನುಭವಿಸಿದುದನ್ನೇ ಅವಲಂಬಿಸಿರುತ್ತದೆ. ಅದರಲ್ಲಿ ಹೊಸತನವೇನೂ ಇಲ್ಲ. ಅಂದರೆ ಅದರಲ್ಲಿ ವರ್ತಮಾನ (present)ವೇನೂ ಇಲ್ಲ. ಇರುವುದೆಲ್ಲ ಭೂತ(past)ವನ್ನೇ  ಅವಲಂಬಿಸಿದೆ.  ಅದಕ್ಕಾಗಿ ಇಂದ್ರಿಯಗಳನ್ನು ಹೆಣವೆನ್ನುತ್ತಾರೆ ಅಲ್ಲಮರು. ಆದರೆ ಈ ಹೆಣಗಳಿಗಾಗಿ ಎಲ್ಲ ಜೀವರು  ಮತ್ತೆ ಮತ್ತೆ ಬಂದು ಹೆಣಗುತ್ತಾರೆ.  ಅವರ ಇಡೀ ಜೀವನವೇ ಆ ಹೆಣಗಳಿಗಾಗಿ ಮುಡಿಪಾಗಿರುತ್ತದೆ. ಅವರಿಗೆ ಎಂದಿಗೂ ತಾವು ಬಯಸಿದ ಸುಖ ಸಿಗುವುದಿಲ್ಲ. ಏಕೆಂದರೆ ಅವರು ಬಯಸಿದ ಸುಖ ಆ ವಸ್ತುವಿನಲ್ಲಿ ಇರುವದಿಲ್ಲ. ಅದು ಕೇವಲ ಅವರ  ಭಾವನೆಯಲ್ಲಿ ಮಾತ್ರ ಇರುವುದು.  ಹಾಗಾಗಿ ಆ ಹೆಣಗಳು ಎಂದಿಗೂ ಬೇಯುವುದಿಲ್ಲ. ಎಂದರೆ ಇಂದ್ರಿಯಗಳು ಆ ವಿಷಚಕ್ರದಿಂದ ಹೊರಬರುವುದಿಲ್ಲ. ಅಂದರೆ ವಿಷಯಗಳ ಬಗ್ಗೆ ಆತನ ಭಾವನೆಗಳು ಸದಾ ಜಾಗೃತವಾಗಿರುತ್ತವೆ. ಇನ್ನೂ ಹೆಚ್ಚು ಹೆಚ್ಚು ಸಂಕೀರ್ಣ (complex)ವಾಗುತ್ತ ಹೋಗುತ್ತವೆ. ಆದ್ದರಿಂದ ಹೆಣವೂ ಬೇಯುವುದಿಲ್ಲ ಎನ್ನುತ್ತಾರೆ. ಕಣ್ಣಿಗೆ ಕಾಣುವ ದೃಶ್ಯ ಪ್ರಪಂಚವೂ ಇಲ್ಲದಂತಾಗುವುದಿಲ್ಲ.ಅಂದರೆ ಆ ಮಾಯಾ ಪ್ರಪಂಚ ಅಳಿಯುವುದಿಲ್ಲ. ಅದನ್ನೇ “ಕಾಡೂ ನಂದದು” ಎನ್ನುತ್ತಾರೆ. “ಮಾಡು ಉರಿಯಿತ್ತು”  ಎಂದರೆ ಜೀವವಿರುವ  ದೇಹಗಳು. ದೇಹಗಳು  ಮಾತ್ರ ಸುಟ್ಟು ಹೋಗುತ್ತವೆ ಅಥವಾ ನಾಶಗೊಳ್ಳುತ್ತವೆ.  ಆದರೆ ಇಂದ್ರಿಯಗಳ ಹೋರಾಟ, ಹೆಣಗಾಟ ಮಾತ್ರ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎನ್ನುತ್ತಾರೆ ಅಲ್ಲಮಪ್ರಭುಗಳು.



























Friday, July 6, 2012

Vachana 97: anyara rajava somkade – All we have is His!


ಅನ್ಯರ ರಜವ ಸೋಂಕದೆ, ತನ್ನ ರಜವ ಬಾಧಿಸದೆ
ರವಿಯ ಬೆಳಸ ಬಳಸದೆ, ಲಿಂಗದ ಬೆಳಸ ತಂದು
ಜಂಗಮಕ್ಕೆ ಸವೆಸುತ್ತಿಪ್ಪ ಲಿಂಗ ಭಕ್ತ
ಆ ಭಕ್ತನಲ್ಲಿ ಗುಹೇಶ್ವರಲಿಂಗನಿಪ್ಪನು

TRANSLITERATION

Anyara rajava sOMkade, tanna rajava baadhisade
Raviya beLasa baLasade liMgada beLasa taMdu
jaMgamakke savesuttippa linga bhakta
aa bhaktanalli guEshvaraliMganippanu

CLICK HERE TO READ-ALONG:

 http://youtu.be/q8MZF09uQog


TRANSLATION (WORDS)

Anyara (other’s) rajava (wealth,riches)  sOMkade, (without touching) tanna (one’s own) rajava(the body) baadhisade ( not troubling)
Raviya(of sun, of nature) beLasa (crop,produce) baLasade (not using)liMgada (of God) beLasa(produce) taMdu (bringing)
jaMgamakke (for jangama) savesuttippa(spending, using) linga bhakta (devotee)
aa (that) bhaktanalli (in devotee) guEshvaraliMganippanu (is God Guheshvara)



TRANSLATION

Without touching other’s wealth, without troubling his own body,
without using the produce of the Sun (nature), bringing the produce of the God,
the devotee is offering it to the service of Jangama (wandering ascetic).
God Guheshvara Linga is in that devotee!

COMMENTARY

In this Vachana Allama Prabhu speaks on how we should treat the natural resources as precious gifts from God and stay away from greed, mindless usage of these resources and consumerism. Although spoken hundreds of years ago, these words are equally applicable to today’s society. One should not be after the wealth of others (the wealth of fellow beings  and the natural resources provided by God, in general).  One should not pollute the precious body given by the Lord with excessive indulgence and lusting for more. One should treat all natural resources as precious and refrain from mindless consumerism. One should treat them as the wealth of God and earn the right to use them through honest, selfless effort (kaayaka). One should utilize the minimum needed and offer the rest (daasoha) to the service of God through wandering ascetics. Such is the nature of the true devotee. Allama Prabhu says that Lord Guhesvara resides in that devotee!



The first verse of Ishavasya Upanishad:

Ishavaasyam idam sarvam yathkincha jagatyaam jagat
tEna thekyEna bhunjithA mA grudhah kasyasviddanam


roughly translates to:


Every aspect of this changing Universe is His!
Use it with utmost caution and do not greed for other’s wealth!


One of the stanzas of the popular Aarathi ‘Jaya Jagadeesha Hare”  is “tanu, mana, dhana sab hi tera, sab kuch hi tera; tera tujko arpan, kya laage mera” meaning, body, mind and wealth are all Yours, everything I have is Yours, I offer whatever is Yours to You, I own nothing”.


Let us treat all we have as His gift and use it only in His service!

KANNADA COMMENTARY

ತನ್ನ ಆಸೆಬುರುಕುತನ, ಬೇಕಾಬಿಟ್ಟಿ ಬಳಸಿ ಬೀಸಾಡುವ ಅಭ್ಯಾಸ, (mindless usage of disposable things ) ಕೊಳ್ಳುಬಾಕತನ (consumerism) ಇತ್ಯಾದಿ  ಗುಣಗಳಿಂದ, ಇಡೀ ಪ್ರಪಂಚವನ್ನೇ ನಾಶದ ಅಂಚಿಗೆ ಕೊಂಡೊಯ್ಯುತ್ತಿರುವ ಮಾನವನಿಗೆ ಪ್ರತಿಯೊಂದು ವಸ್ತುವಿನ ಬಗ್ಗೆ  ಅತ್ಯಗತ್ಯವಾಗಿ ಇರಬೇಕಾದ ಭಾವವನ್ನು ತಿಳಿಸುವ  ಶರಣರ ಅರಿವಿನ ಮಾತುಗಳನ್ನು ಹೇಳುತ್ತದೆ ಈ ವಚನ. ಆದ್ದರಿಂದ ನೂರಾರು ವರ್ಷಗಳ ಹಿಂದೆ ಹೇಳಿದ್ದರೂ ಎಲ್ಲಕಾಲಕ್ಕೂ ಹೊಂದುವಂತಹ ಮಾತು ಇದು.


“ಅನ್ಯರ ರಜವ ಸೋಂಕದೆ” ಎಂದರೆ ಇನ್ನೊಬ್ಬರ ಧನವನ್ನು, ಪರರ ಸ್ವತ್ತನ್ನು ಮುಟ್ಟದೆ ಎಂದರ್ಥ, “ತನ್ನ ರಜವ ಬಾಧಿಸದೆ” ಎಂದರೆ “ತನ್ನ  ಆಸೆಗಳಿಂದ, ವ್ಯಸನಗಳಿಂದ ತನ್ನ ದೇಹ ಹಾಳಾಗದಂತೆ” ನೋಡಿಕೊಳ್ಳುವುದು ಎಂದರ್ಥ. ತಮ್ಮದಲ್ಲದ್ದನ್ನು (ಆಸೆಗೆ ಒಳಗಾಗಿ) ತೆಗೆದುಕೊಳ್ಳುವುದು ಮನಸ್ಸನ್ನು ಕೀಳಾಗಿಸುತ್ತದೆ ಮತ್ತು ದೇಹವನ್ನು ಕೆಡಿಸುತ್ತದೆ. ಅದು ವ್ಯಕ್ತಿಯನ್ನು ಮನಸ್ಸಿನ ದಾಸನನ್ನಾಗಿ ಮಾಡುತ್ತದೆ. ಈ ವಿಷಯದ ಬಗ್ಗೆ ಯೋಚಿಸುವಾಗ ನಾವೆಲ್ಲರೂ “ಅಬ್ಬಾ! ನಾನಂತು ಯಾರ ವಸ್ತುವನ್ನೂ ಮುಟ್ಟುವುದಿಲ್ಲ, ನನ್ನದನ್ನು ಮಾತ್ರ ನಾನು ಉಪಯೋಗಿಸುತ್ತಿದ್ದೇನೆ” ಎಂದುಕೊಂಡು ಸಮಾಧಾನ ಮಾಡಿಕೊಳ್ಳುತ್ತೇವೆ, ಕೆಲವರು ಬೀಗುತ್ತೇವೆ.  ಆದರೆ ನಾವೆಲ್ಲರೂ ಸ್ವಲ್ಪ ಸೂಕ್ಷ್ಮವಾಗಿ ಗಮನಿಸ ಬೇಕು. “ಅನ್ಯರ ರಜವ” ಎಂದರೆ ಕೇವಲ ಬೇರೆ “ವ್ಯಕ್ತಿ”ಗೆ ಸೇರಿದುದು ಎಂದರ್ಥವಲ್ಲ. ಅದು ಪ್ರಕೃತಿಯದೂ ಆಗಿರಬಹುದು, ಕಾಡಿನಲ್ಲಿರುವ ಒಂದು ಮರವೋ ಅಥವಾ ಒಂದು ಚಿಕ್ಕ ಸಸಿಯೋ ಆಗಿರಬಹುದು. ಜಗತ್ತಿನಲ್ಲಿಯ ಯಾವುದೇ ವಸ್ತುವಾಗಿರಬಹುದು. ಆದರೂ ಅದನ್ನು ಉಪಯೋಗಿಸುವಾಗ ಅದು ನಮಗೆ ನಿಜವಾಗಿಯೂ ಬೇಕಾಗಿದೆಯೇ? ಎಷ್ಟು ಬೇಕು? ಎಂದೆಲ್ಲ ಯೋಚಿಸಿ ಬಳಸಬೇಕು. ಯಾವ ವಸ್ತುವೂ ಯಾರದ್ದೂ ಅಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಅವಶ್ಯಕವಾದದ್ದನ್ನು ಮಾತ್ರ ತೆಗೆದುಕೊಳ್ಳಬೇಕು.  ಅದು “ಲಿಂಗದ ಬೆಳಸು” ಎಂದರೆ ಎಲ್ಲವೂ ದೇವರದ್ದೇ. ಅದನ್ನು ಕಾಯಕದಿಂದ ಸಂಪಾದಿಸಿ ತನಗೆ ಅವಶ್ಯಕವಾದಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ಜಂಗಮ ಸೇವೆಗಾಗಿ ಬಳಸಬೇಕು. ಯಾವುದೂ ನಮ್ಮ ಸ್ವತ್ತಲ್ಲ, ಯಾವುದರ ಮೇಲೆಯೂ ನಮ್ಮ ಅಧಿಕಾರವಿಲ್ಲ. ಎಲ್ಲವನ್ನೂ ಅ ದೇವರ ಕೃಪೆ ಎಂದು ಅರಿತು ಅದನ್ನು ಮಿತವಾಗಿ ಪ್ರಸಾದದ ಭಾವನೆಯಿಂದ ಬಳಸಬೇಕು. ಅಂತಹವನು ಮಾತ್ರ ನಿಜವಾದ ಲಿಂಗ ಭಕ್ತನು ಎಂದು ಹೇಳುತ್ತಾರೆ ಅಲ್ಲಮಪ್ರಭುಗಳು.

ಪ್ರಕೃತಿಯ ಸಂಪನ್ಮೂಲಗಳನ್ನು ಯಾವ ವಿವೇಚನೆಯೂ ಇಲ್ಲದೆ ಬೇಕಾಬಿಟ್ಟಿಯಾಗಿ ಬಳಸುತ್ತಿರುವ ಮಾನವನಿಗೆ ಇದು ಕಿವಿಮಾತಾಗಬೇಕಲ್ಲವೆ?
ಈಶಾವಾಸ್ಯೋಪನಿಷತ್ತಿನ ಮೊದಲನೆ ಮಂತ್ರ ಇದನ್ನೇ ಹೇಳುತ್ತದೆ:
ಈಶಾವಾಸ್ಯಂ ಇದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತೆಕ್ತ್ಯೇನ ಭುಂಜಿಥಾ ಮಾ ಗೃಧಃ ಕಸ್ಯಸ್ವಿದ್ಧನಂ||

ಈಶಾವಾಸ್ಯಂ (ಈಶ್ವರನಿಂದ ವ್ಯಾಪ್ತವಾಗಿದೆ) ಇದಂ ಸರ್ವಂ (ಇದೆಲ್ಲವು) ಯತ್ಕಿಂಚ (ಯಾವುದನ್ನೂ ಬಿಡದೆ) ಜಗತ್ಯಾಂ ಜಗತ್ (ಬದಲಾಗುತ್ತಿರುವ ಸಮಸ್ತ ಜಗತ್ತಿನಲ್ಲಿ)|

ತೇನ ತೆಕ್ತ್ಯೇನ (ಅದನ್ನು ತ್ಯಾಗ ಮಾಡಿ, ತ್ಯಾಗದಿಂದ) ಭುಂಜಿಥಾ (ಭೋಗಿಸು) ಮಾ ಗೃಧಃ (ಆಶಿಸದಿರು)  ಕಸ್ಯಸ್ವಿದ್ಧನಂ (ಯಾರೊಬ್ಬರ ವಸ್ತುವನ್ನೂ)||


ಈಶನೆಂದರೆ ಒಡೆಯ. ಈ ಬದಲಾಗುತ್ತಿರುವ ಜಗತ್ತು ಒಳಗೂ ಹೊರಗೂ ಅವನಿಂದ ವ್ಯಾಪ್ತವಾಗಿದೆ. (ಎಲ್ಲವೂ ಲಿಂಗದ ಬೆಳಸು) ಇದನ್ನು ಅರಿತು, ಎಲ್ಲವೂ ಈಶ್ವರನ ಪ್ರಸಾದವೆಂದು ಜಗತ್ತಿನ ಸುಖವನ್ನು ಅನುಭವಿಸಬೇಕು. ತ್ಯಾಗದಲ್ಲಿ ಸುಖವಿದೆ. ಪರಿಗ್ರಹದಲ್ಲಿ ಸುಖವಿಲ್ಲವೆಂಬುದನ್ನು ಅರಿಯಬೇಕು. “ನಿನ್ನದೆಂಬುದು ಯಾವುದೂ ಇಲ್ಲ. ಇತರರ ಸ್ವತ್ತಿಗೆ ಆಸೆಪಡಬೇಡ” ವೆಂಬುದು ಈ ಮಂತ್ರದ ಅರ್ಥ.

ಇಲ್ಲಿ ಎರಡನೆ ವಾಕ್ಯದ ಅರ್ಥ ಈ ವಿವರಣೆಯಿಂದ ಸ್ಪಷ್ಟವಾಗಬಹುದು:  “ತ್ಯಾಗದಲ್ಲಿ ಸುಖ” ಎಂದರೆ, ನಮಲ್ಲಿ ಇರುವ ಅಥವಾ ನಮಗೆ ಸಿಕ್ಕ  ವಸ್ತುವನ್ನು ನಾವು ಇತರರೊಂದಿಗೆ ಹಂಚಿಕೊಂಡಾಗ  ನಮಗೆ ಆನಂದವಾಗುತ್ತದೆ. ನಮ್ಮಿಂದ ಪಡೆದವನ ಸಂತೋಷ  ನಮ್ಮ  ಆನಂದವನ್ನು ಹೆಚ್ಚಿಸುತ್ತದೆ. ಮತ್ತು ನಮ್ಮಲ್ಲಿ ಏನೂ ಉಳಿಯದೆ ಇರುವುದರಿಂದ ಯಾವ ಚಿಂತೆಯೂ ಇರುವುದಿಲ್ಲ. ಇದನ್ನೇ ತ್ಯಾಗದಲ್ಲಿ ಸುಖವಿದೆ ಎನ್ನುವುದು.

ಆದರೆ ನಾವು ವಸ್ತುಗಳನ್ನು ನಮ್ಮಲ್ಲಿ ಇಟ್ಟುಕೊಂಡರೆ, ಅವುಗಳ ರಕ್ಷಣೆಯ ಚಿಂತೆ,  ಅವುಗಳನ್ನು ಹೆಚ್ಚಿಸಿಕೊಳ್ಳುವ, ತೋರಿಸಿಕೊಳ್ಳುವ ಆಸೆ, ಅವುಗಳನ್ನು ಯಾವಾಗ ಅನುಭವಿಸಲಿ ಎಂಬುವ ಯೋಚನೆ, ಅವುಗಳ ಬಗ್ಗೆ ಮೋಹ ಮತ್ತು ಅದರಿಂದ ಆಹಂಕಾರ ಇತ್ಯಾದಿಗಳು ಕಾಡುತ್ತ ಅವುಗಳಿಂದ ಸಿಗಬೇಕಾದ ಆನಂದ ಮಾಯವಾಗುತ್ತದೆ.