ತನ್ನನರಿಯೆನೆಂಬುದು ಅಜ್ಞಾನ ನೋಡಾ,
ಅರಿಯದಜ್ಞಾನವ ಅಗಳೆದು ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ!
ಎಲ್ಲವ ತೋರುವ ಘನವನು ಎಲ್ಲಿಯೂ ಕಾಣಬಾರದು ನೋಡಾ,
ಕಾಣಬಾರದ ನಿಜವ ತೋರಬಾರದು, ತೋರಬಾರದ ನಿಜವ ತಿಳಿಯಬಾರದು
ಗುಹೇಶ್ವರ ಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ
ತಿಳುಹಲಿಲ್ಲವೆಂಬುದು ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯಾ
TRANSLITERATION
tannanariyeneMbudu aj~jaana nODaa,
ariyada j~jaanava agaLedu j~jaanava kaaNeneMbudu vipareeta bhaava nODaa!
Ellava tOruva ghanavanu elliyU kaaNabaaradu nODaa,
kaaNabaarada nijava tOrabaaradu, tOrabaarada nijava tiLiyabaaradu
guhEshvara liMgadalli bayakeyuLLannakka tavaka eDegoMDaDippa kaaraNa
tiLUhalillaveMbudu ninna tiLidu nODaa siddharaamayyaa
CLICK HERE TO READ-ALONG:
TRANSLATION (WORDS)
tannanu (myself) ariyenu (don’t know) eMbudu (that which says) aj~jaana (is ignorance) nODaa, (you see)
ariyada (not knowing) j~jaanava (the knowledge of )agaLedu (denying)
j~jaanava ( the knowledge) kaaNeneMbudu ( saying cannot see) vipareeta bhaava (is contradictory) nODaa! (you see)
Ellava (all, entire world) tOruva (which shows) ghanavanu ( that profound )elliyU (any where) kaaNabaaradu (cannot be seen)nODaa,(you see)
kaaNabaarada (which cannot be seen) nijava (the true self) tOrabaaradu (cannot be shown)
tOrabaarada (which cannot be shown) nijava (the true self) tiLiyabaaradu (cannot be understood)
guhEshvara (Guheshvara) liMgadalli (the truth)bayakeyuLLannakka (if you yearn for)
tavaka ( eagerness, anxiousness)eDegoMDaDippa ( the existence of) kaaraNa (because of)
tiLUhalillaveMbudu (that nobody revealed to me) ninna (your self) tiLidu(by understanding) nODaa (you see) siddharaamayyaa (Siddharaamayya)
TRANSLATION
Saying that I don’t know myself is ignorance, you see!
Denying the knowledge not known and saying that the knowledge cannot be seen is contradictory, you see!
That profound which shows the entire world, cannot be seen anywhere, you see!
The true self that cannot be seen, cannot be shown, you see!
The true self that cannot be shown cannot be understood.
Realize your own self and understand that having an intense desire to realize the divine with anxiety and eagerness is why you did not realize Him, Oh! Siddaramayya!
COMMENTARY
In the previous posting, Sharana Siddarama described how he is yearning with an intense desire and longing for the union with God. In this Vachana, Allama Prabhu clarifies that the prerequisite for the union with God is realization of the Self. Without such realization, no amount of desire and yearning would take one to the Lord. Allama Prabhu is providing guidance to distinguish between true knowledge and ignorance. He says, not understanding oneself is ignorance. Are we all in this state? Don’t we know who we are? We identify ourselves as brother, sister, teacher, friend and foe of someone. We identify ourselves with the positions we hold and our status in society. These are all descriptions relative to others around us. We really don’t know the answer for ‘who am I?’ This is ignorance. Indeed, we do not even think that we are ignorant! We deny being ignorant. Without erasing that ignorance, we would not know who we are!
We cannot see and feel the divine principle that is the creator of this Universe, although He is omnipresent, omnipotent and omniscient. He cannot be sensed through any of our sense organs; neither he can be visualized by any stretch of our mind and thinking capabilities. Our language and thinking put limit on what we can visualize to the objects and people we know and have seen. As such, if one is anxious to realize the divine, he tends to form an image of the divine and what he realizes is that image and not the true formless God who is beyond our sense perceptions. Allama Prabhu thus says that the God cannot be realized through intense desire and yearning. One has to cultivate the state of a subtle mind, with no desires and expectations. This will eventually lead to the understanding of the Self and hence the union with the divine.
Let us gain the true knowledge of the Self!
KANNADA COMMENTARY
ಜ್ಞಾನ ಅಜ್ಞಾನವೆಂದರೇನು ಎಂದು ಆಳವಾಗಿ ಅಲೋಚಿಸುವವರಿಗೆ ಕೈಪಿಡಿಯಂತಿದೆ ಅಲ್ಲಮಪ್ರಭುಗಳ ಈ ವಚನ.
ಅಜ್ಞಾನವೆಂದರೇನು? ತನ್ನನ್ನು ತಾನು ಅರಿಯದೆ ಇರುವುದೇ ಅಜ್ಞಾನ. ನಾವೆಲ್ಲ ಇರುವುದೇ ಈ ಸ್ಥಿತಿಯಲ್ಲಿ. “ನಾನು ಯಾರು” ಎಂದು ನಮಗೆ ತಿಳಿದಿಲ್ಲ. ನಾವು ನಮ್ಮನ್ನು, ಅಪ್ಪ, ಅಮ್ಮ, ಮಗ , ಮಗಳು, ಅಳಿಯ, ಸೊಸೆ, ಅಣ್ಣ, ತಮ್ಮ, ತಂಗಿ,ಅಕ್ಕ, ಗೆಳೆಯ, ಗೆಳತಿ ಇತ್ಯಾದಿ ಎಂದೋ , ಇಲ್ಲವೆ ನಾವು ಹೊಂದಿದ ಪದವಿಗಳಿಂದಲೋ, ನಮ್ಮ ಹೆಸರು ಇಲ್ಲವೆ ಸ್ವಭಾವದಿಂದಲೋ,ನಮ್ಮ ಜನಾಂಗದ ಹೆಸರಿನಿಂದಲೋ ಅಥವಾ ಇನ್ನಾವುದೋ ರೀತಿಯಿಂದಲೋ ಗುರುತಿಸಿಕೊಳ್ಳುತ್ತೇವೆ. ಇದನ್ನೇ “ನಾನು” ಎಂದುಕೊಳ್ಳುತ್ತೇವೆ. ಆದರೆ ಈ ಎಲ್ಲವೂ ಸಂಬಂಧವನ್ನು ಅವಲಂಬಿಸಿವೆ (relative). ನಿಜವಾದ “ನಾನು” ಈ ಆವುದೂ ಅಲ್ಲ. ಹೀಗಾಗಿ ಇದೆಲ್ಲವೂ ಅಜ್ಞಾನವೇ. ಇಷ್ಟೇ ಅಲ್ಲ “ಇದು ಅಜ್ಞಾನ”ವೆಂದು ನಾವು ಗುರುತಿಸುವುದೂ ಇಲ್ಲ. ಇಂತಹ ಅಜ್ಞಾನ ನಮ್ಮಲ್ಲಿದ್ದರೂ ನಾವು ಅದನ್ನುಅಲ್ಲಗಳೆಯುತ್ತೇವೆ. ಅಂದರೆ ಇಂತಹ ಅಜ್ಞಾನ ನನ್ನಲಿಲ್ಲ ಎಂದುಕೊಳ್ಳುತ್ತೇವೆ. ಆದರೆ ಅಜ್ಞಾನ ಅಳಿಯದೆ ಜ್ಞಾನ ಉಂಟಾಗುವುದಿಲ್ಲ.
ಈ ಜಗತ್ತಿನಲ್ಲಿ ಎಲ್ಲವನ್ನು ಉಂಟುಮಾಡುವ ಆ ಘನ ತತ್ವವು ತನ್ನ ನಿಜ ರೂಪದಲ್ಲಿ ಎಲ್ಲಿಯೂ ನೋಡಲು ಸಿಗುವುದಿಲ್ಲ. ಅಂದರೆ ಅದು ಇಂದ್ರಿಯಗಳಿಗೆ ನಿಲುಕಲಾರದ್ದು. ಆದ್ದರಿಂದ ಅದು ಕಣ್ಣಿಗೆ ಕಾಣುವುದಿಲ್ಲ. ಕಾಣದೆ ಇರುವುದನ್ನು ತೋರಿಸುವುದು ಅಸಾಧ್ಯ. ಕಾಣದೆ ಇರುವುದನ್ನು, ತೋರಿಸಲು ಬಾರದೆ ಇರುವುದನ್ನು ತಿಳಿಯುವುದು ಕಷ್ಟ. ಒಟ್ಟಿನಲ್ಲಿ ಅದು ಇಂದ್ರಿಯಕ್ಕಗೋಚರವಾದದ್ದು. ಅಷ್ಟೇ ಅಲ್ಲ, “ಗುಹೇಶ್ವರ ಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ ತಿಳುಹಲಿಲ್ಲ” ಎಂದು ಹೇಳುತ್ತಾರೆ ಅಲ್ಲಮರು. ಬಯಕೆ ಇದ್ದರೆ ಅಲ್ಲಿ ಆತುರವಿರುತ್ತದೆ. ಮತ್ತು, ಆತುರ ಮತ್ತು ಬಯಕೆಯು ಇರುವ ಕಾರಣ ನಮಗೆ ಅರಿವು ಉಂಟಾಗದು ಎಂಬುದು “ನನ್ನನ್ನು ನಾನು ಅರಿತಮೇಲೆ ತಿಳಿಯುತ್ತದೆ” ಎನ್ನುತ್ತಾರೆ ಅಲ್ಲಮರು. ಹಾಗಾದರೆ ಲಿಂಗವನ್ನು ಕಾಣಬೇಕು, ಎಂಬ ಬಯಕೆ ಮತ್ತು ತವಕ ಇರಬಾರದೆ? ಇದನ್ನು ಅರಿತುಕೊಳ್ಳಲು ಪ್ರಯತ್ನಿಸೋಣ. ಇಂದ್ರಿಯಕ್ಕಗೋಚರವಾದ ಆ ಘನ ತತ್ವವನ್ನು ಅರಿಯಲು ಮನಸ್ಸು ನಿರ್ಭಾವವಾಗಿರಬೇಕಾದದ್ದು ಬಹು ಮುಖ್ಯ. ಇಲ್ಲದಿದ್ದರೆ ನಮ್ಮ ಮನಸ್ಸು ನಮ್ಮಲ್ಲಿರುವ ಭಾವವನ್ನೇ ನಮಗೆ ಕಾಣುವಂತೆ ಮಾಡುತ್ತದೆ. ಈಗ ಬಯಕೆ ಅಥವಾ ಆಸೆ ಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ನಾವು ಹೇಳುತ್ತೇವೆ: “ ನನಗೆ ದೋಸೆ ತಿನ್ನಬೇಕೆಂಬ ಆಸೆಯಾಗಿದೆ” ಎಂದು. ಅಂದರೆ ನನಗೆ ದೋಸೆ ಎಂಬುದರೆ ಪರಿಚಯವಿದೆ, ಅದರ ರುಚಿ, ಅದರ ಪರಿಮಳ, ಅದರ ಸ್ಪರ್ಶ ಇತ್ಯಾದಿಗಳು ನನಗೆ ಸುಖ ಕೊಡುತ್ತವೆ. ಅವನ್ನು ನಾನು ಬಯಸುತ್ತೇನೆ ಎಂದರ್ಥ . ಅಲ್ಲವೆ? ಆದರೆ ನಾವು ಪ್ರಾಮಾಣಿಕವಾಗಿ ಕೇಳಿಕೊಳ್ಳಲೇ ಬೇಕಾದ ಪ್ರಶ್ನೆ ಏನೆಂದರೆ, ನನಗೆ ಪರಿಚಯವೇ ಇಲ್ಲದ್ದನ್ನು ನಾನು ಆಸೆ ಪಡಲು ಸಾಧ್ಯವೆ? ಅದನ್ನು ಪಡೆಯಲು ಆತುರಗೊಳ್ಳಲು ಸಾಧ್ಯವೆ? ಎಂದು. ಏಕೆಂದರೆ ಅಲ್ಲಮಪ್ರಭುಗಳು ಹೇಳುತ್ತಾರೆ “ಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ ತಿಳುಹಲಿಲ್ಲ” ( ಲಿಂಗವನ್ನು ಕಾಣಬೇಕೆಂಬ ಬಯಕೆ ಮತ್ತು ಆತುರ ಇದ್ದುದರಿಂದ ಲಿಂಗ ಕಾಣಲಿಲ್ಲ) ಎಂದು. ಲಿಂಗವನ್ನು ಕಾಣಬೇಕು ಎಂಬ ಬಯಕೆ ಮತ್ತು ಬಯಕೆ ಈಡೇರಿಸಿಕೊಳ್ಳುವ ಆತುರ ಮನದಲ್ಲಿ ಮನೆ ಮಾಡಿದೆ ಎಂದರೆ ಆ ಲಿಂಗದ ಬಗ್ಗೆ ನಮ್ಮ ಮನದಲ್ಲಿ ಆಗಲೆ ಒಂದು ಚಿತ್ರವಿದೆ ಎಂದರ್ಥವಾಯಿತು. ಅಂದರೆ ಇಂದ್ರಿಯಕ್ಕಗೋಚರವಾದುದರ ಬಗ್ಗೆ ನಮಗೆ ಆಗಲೇ ಒಂದು ಕಲ್ಪನೆಯಿದೆ ಅಲ್ಲವೆ? ಯಾರೂ ತೋರಿಸಲು ಬಾರದ್ದುದರ ಬಗ್ಗೆ, ಯಾರೂ ವರ್ಣಿಸಲಾರದ್ದರ ಬಗ್ಗೆ, ವಾಙ್ಮನಕ್ಕತೀತವಾದುದರ ಬಗ್ಗೆ ನಮಗೆ ಆಗಲೇ ಒಂದು ಕಲ್ಪನೆ ಇದೆ ಎಂದರ್ಥವಾಯಿತ್ತಲ್ಲವೆ? ಇದು ಎಂತಹ ಅಸಂಬದ್ಧವಾದದ್ದು? ಹೀಗಿದ್ದಾಗ ನಾವು ನಮ್ಮ ಕಲ್ಪನೆಯನ್ನೇ ಕಾಣುತ್ತೇವೆಯೇ ಹೊರತು ನಿಜವಾದ ಲಿಂಗವನ್ನಲ್ಲ. ಆದ್ದರಿಂದ ನಮಗೆ ಲಿಂಗವು ಅರಿವಿಗೆ ಬರುವುದಿಲ್ಲ. ಎನ್ನುತ್ತಾರೆ ಅಲ್ಲಮಪ್ರಭುಗಳು. ಆ ಘನ ತತ್ವವನ್ನು ಕಂಡು ಕೊಳ್ಳಲು ನಾವು ನಮ್ಮ ಮನಸ್ಸನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಬೇಕು ಎಂಬುದನ್ನು ಸಿದ್ಧರಾಮರಿಗೆ ಹೇಳುತ್ತಿರುವ ಅಲ್ಲಮರ ಈ ವಚನವು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.
No comments:
Post a Comment