Friday, August 3, 2012

Vachana 101: Neera Bobbulikege - True Living

ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ  ಮಾಡುವ ಭರವ ನೋಡಾ!
ಮಹಾದಾನಿ ಕೂಡಲ ಸಂಗಮ ದೇವನ ಪೂಜಿಸಿ ಬದುಕುವೋ
ಕಾಯವ ನಿಶ್ಚಯಿಸದೆ

TRANSLITERATION

nIra bobbuLikege  kabbunada katta koTTu
surakShitava maaDuva bharava nODaa!
Mahaadaani kUDalasaMgama dEvana poojisi badukuvO
kAayava niScayisade.

CLICK HERE TO READ-ALONG:

http://youtu.be/amTzJ6NTZTw
TRANSLATION (WORDS)

nIra (of water)  bobbuLikege (for bubble)  kabbunada (of iron) katta (frame) koTTu (giving,making)
surakShitava (secure) maaDuva (making)  bharava  (frenzy, haste)  nODaa(you see)!
Mahaadaani (great giver) kUDalasaMgama dEvana (God Kudalasamgama ) poojisi (worshipping) badukuvO ( Oh, you! live)
kAayava (the body)  niScayisade (not considering  as truth)

TRANSLATION

Oh! Look at the frenzy in securing the water bubble with an iron frame!
Oh, You! Live by worshipping the great giver Lord Kudalasangama, do not consider this body as the truth!

COMMENTARY

This simple yet powerful Vachana from Basavanna illustrates the nature of the whole human race. Our body and life is compared to a water bubble. We do not know when it bursts. Yet, we surround that with an iron frame. The iron frame is all the materialistic activities we conduct and objects we acquire. This iron frame cannot prevent the bubble from bursting, although the frame remains intact. Basavanna is suggesting not considering the body as the truth, but lead a life of surrender to the great giver, the Lord.

Indeed, we spend all our time and efforts to acquire wealth to support our bodies and satisfy our senses. Acquisition of a house leads to the desire to acquire a larger one. This race to satisfy continues for ever. It is not wrong to be in this race. In fact, it is necessary for our survival in this world. But, we need to reach a level of satisfaction on our own and turn inwards to find Him within us.

Basavanna is calling the Lord, the great giver. He is the one who own everything. What all we have is His. As such, it is obvious that we need to invite Him into our lives. This invitation is not through ritualistic worshipping. The worship Basavanna is calling for is the Linga-Anga Saamarasya or being one with Him. 
Essentially, Basavanna is advocating realizing the impermanence of material world and developing the God mindedness and realizing the Self as the best mode of living!

 Let us turn inwards at the earliest moment!

KANNADA COMMENTARY

ಈ ವಚನದ ಎರಡು ಸಾಲುಗಳು ಇಡೀ ಮಾನವ ಜನಾಂಗದ ಸ್ವಭಾವವನ್ನು ಸೂಚಿಸುತ್ತವೆ. ನಮ್ಮ ದೇಹ ಮತ್ತು ಬದುಕು ನೀರ ಗುಳ್ಳೆಯಂತಿದೆ.  ಯಾವ ಗಳಿಗೆಯಲ್ಲಿ ಅದು ಒಡೆದು ಹೋಗುತ್ತದೆಯೋ ತಿಳಿದಿಲ್ಲ. ಆದರೆ ಅದನ್ನು ಉಳಿಸಿಕೊಳ್ಳಲು ಮನವು ನಾನಾ ಉಪಾಯ ಮಾಡುತ್ತದೆ, ಅದನ್ನು ಸುರಕ್ಷಿತವಾಗಿರಿಸಲು  ಸದಾ ಹೆಣಗುತ್ತದೆ. ಆದರೆ ಅದು ಸಾಧ್ಯವೇ?  ಅದು, ನೀರ ಬೊಬ್ಬುಳಿಕೆಗೆ  ಕಬ್ಬಿಣದ ಕಟ್ಟನ್ನು ಕಟ್ಟುವಂತಾಗುತ್ತದೆ, ಕಟ್ಟು ಉಳಿಯುತ್ತದೆ ಆದರೆ ಯಾವುದರ ಸುರಕ್ಷತೆಗೆ ಅದನ್ನು ಕಟ್ಟಲಾಗಿತ್ತೋ ಅದು ಮಾತ್ರ ನಾಶವಾಗಿ ಹೋಗುತ್ತದೆ.  ಈ ದೇಹವನ್ನು ಸುರಕ್ಷಿತವಾಗಿಡಲು, ಮನೆ ಮಾರು, ಧನ ಸಂಪತ್ತು ಗಳನ್ನು ಮಾಡಿಯೇ ಮಾಡುತ್ತಾರೆ ಎಲ್ಲರೂ. ಅದನ್ನು ತಕ್ಕ ಮಟ್ಟಿಗೆ ಮಾಡಲೇ ಬೇಕು. ಆದರೆ ಅದು ಕೊನೆಯಿಲ್ಲದಂತೆ ನಡೆಯುತ್ತಲೇ ಇರುತ್ತದೆ. ಎಷ್ಟು ಮಾಡಿದರೂ ಸುರಕ್ಷತೆಯ ಭಾವ ಉಂಟಾಗುವುದೇ ಇಲ್ಲ.  ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಮಾನಸಿಕವಾಗಿ ಸುರಕ್ಷಿತವಾಗಿರಲು  ಮಾನವನು ಇನ್ನೂ ಏನೇನೋ ಮಾಡುತ್ತಾನೆ. ಯಾವುದೋ ಒಂದು  ಗುಂಪು, ಜನಾಂಗ, ಧರ್ಮ,  ದೇಶವನ್ನು ಅವಲಂಬಿಸುವುದು,  ಅಥವಾ, ವಿಷೇಶವಾದ ಜ್ಞಾನವನ್ನು , ಪದವಿಯನ್ನು ಗಳಿಸುವುದು, ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸುವುದು, ಉದಾಹರಣೆಗೆ ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ಇಲ್ಲವೆ ಗುರುಗಳನ್ನು, ದೇವರುಗಳನ್ನು, ಅವಲಂಬಿಸುತ್ತಾರೆ. ಆದರೆ ಈ ಯಾವಾವೂ ಸಂಪೂರ್ಣ ಸುರಕ್ಷತೆಯನ್ನು ಕೊಡಲಾರವು. ಏಕೆಂದರೆ, ಅವು ಕೂಡ  ನಶ್ವರವಾದವುಗಳೇ.   ವಾದದಲ್ಲಿ ಸೋತಾಗ  ವ್ಯಕ್ತಿ  ಗಳಿಸಿದ  ಜ್ಞಾನ  ರಕ್ಷಿಸಲು ಬಾರದು,  ನಂಬುಗೆಗಳು ಅರ್ಥವಿಲ್ಲದವು ಎಂಬುದನ್ನು ತೋರಿಸಿಕೊಟ್ಟಾಗ ಒಂದು ಸಣ್ಣ ಕಾರಣವು ಆ ನಂಬುಗೆಯನ್ನೇ ಅಲ್ಲಾಡಿಸಿ ಬಿಡುತ್ತದೆ. ಅದರೊಂದಿಗೇ ಆ ಸುರಕ್ಷೆಯ ಭಾವವೂ ಹೋಗಿಬಿಡುತ್ತದೆ.  ನಮಗೆ ತಿಳಿಯದೇ ನಾವು ಅನೇಕ ರೀತಿಯಲ್ಲಿ, ಇನ್ನೊಬ್ಬರೊಂದಿಗಿನ ಸ್ನೇಹದಲ್ಲಿ, ಪ್ರೀತಿಯಲ್ಲಿ ಸುರಕ್ಷತೆಯನ್ನು ಪಡೆಯಲು ಪ್ರಯತ್ನಿಸುತ್ತೇವೆ. ಆದರೆ ಅವರು ಬಿಟ್ಟು ಹೋದಾಗ ಆ ಸುರಕ್ಷತೆಯ ಭಾವವೂ ಹೋಗಿಬಿಡುತ್ತದೆ, ದುಃಖ ಉಂಟಾಗುತ್ತದೆ. ಒಟ್ಟಿನಲ್ಲಿ ಸುರಕ್ಷೆಯೆಂಬುದು ಒಂದು ಭ್ರಮೆಯೇ ಹೊರತು ಸತ್ಯವಲ್ಲ. ಈ ಅನುಭವ ನಮಗೆಲ್ಲರಿಗೂ ಹೆಜ್ಜೆ ಹೆಜ್ಜೆಗೂ ಆಗುತ್ತಲೇ ಇರುತ್ತದೆ. ಆದರೆ ಮಾನವನು ಅದನ್ನು ಪಡೆಯಲು ಮಾಡುವ ಉಪಾಯಗಳಿಗೆ ಕೊನೆಯೇ ಇಲ್ಲ. ಇದನ್ನೇ ಬಸವಣ್ಣನವರು “ಕಬ್ಬುಣದ ಕಟ್ಟ ಕಟ್ಟುವ ಭರವ ನೋಡಾ!” ಎಂದು ಹೇಳುತ್ತಾರೆ.  ಹಾಗಾದರೆ ಇದಾವುದೂ ಮಾಡಬಾರದೆ? ಯಾರನ್ನೂ ಪ್ರೀತಿಸಬಾರದೆ? ಎಂಬುವ ಪ್ರಶ್ನೆ ಹುಟ್ಟುತ್ತದೆ.  ಆದರೆ ಬಸವಣ್ಣನವರು ಹಾಗೆ ಹೇಳುತ್ತಲಿಲ್ಲ.  “ಕೂಡಲಸಂಗಮನನ್ನು ಪೂಜಿಸು” ಎಂದು ಹೇಳುತ್ತಾರೆ. ಏನಿದರ ಅರ್ಥ?  ಕೂಡಲಸಂಗಮವೆಂದರೆ “ಲಿಂಗ” “ಅರಿವು”.  “ಈ ಚರಾಚರಾತ್ಮಕವಾದ ಜಗತ್ತು ಯಾವ ವಸ್ತುವಿನಲ್ಲಿ ಲೀನವಾಗುತ್ತದೆಯೋ  ಮತ್ತು ಎಲ್ಲಿಂದ ಉತ್ಪತ್ತಿ ಪಡೆಯುತ್ತದೆಯೋ  ಆ ವಸ್ತುವೇ ಲಿಂಗ” ಎಂದು ಬಲ್ಲವರು ಹೇಳುತ್ತಾರೆ. ಅಂದರೆ, ಯಾವ ವಸ್ತುವೂ ಸಾಯುವುದಿಲ್ಲ. ಆ ಲಿಂಗದ ಅರಿವು ನಮಗೆ ಸುರಕ್ಷತೆಯನ್ನುಂಟು ಮಾಡುತ್ತದೆಯೇ ಹೊರತು ಇತರ ವಿಷಯಗಳಲ್ಲ. ಆ ಅರಿವೇ ಕೂಡಲಸಂಗಮ. ಅದನ್ನು ಪೂಜಿಸಬೇಕು. ಪೂಜಿಸುವುದು ಎಂದರೆ ಬಾಹ್ಯ ಪೂಜೆಯಲ್ಲ. ಇದನ್ನು ನಾವು ಹಿಂದೆಯೇ ಅನೇಕ ವಚನಗಳಲ್ಲಿ ತಿಳಿದುಕೊಂಡಿದ್ದೇವೆ. ಸುರಕ್ಷತೆಯ ಉಪಾಯಗಳನ್ನು ಮಾಡುವುದು ತಪ್ಪಲ್ಲ. ಆದರೆ ಹಾಗೆ ಮಾಡಿದರೂ, ನಶ್ವರತೆಯ ಅರಿವು ಕೂಡ ಇರುವುದರಿಂದ ಅದು ಬಾಧಿಸುವುದಿಲ್ಲ, ಎಂಬ ಅರ್ಥ ಇಲ್ಲಿದೆ. 

No comments:

Post a Comment