ಅರಿದುದ ಅರಿಯಲೊಲ್ಲದು, ಅದೆಂತಯ್ಯಾ?
ಮರೆದುದ ಮರೆಯಲೊಲ್ಲದು, ಅದೆಂತೆಯ್ಯಾ?
ಅರಿದು ಮರೆತ ಮನವ
ಕೂಡಲಸಂಗಯ್ಯ ತಾನೆ ಬಲ್ಲ!
TRANSLITERATION
ariduda ariyalolladu, adeMtayyaa?
mareduda mareyalolladu, adeMtayyaa?ariduda ariyalolladu, adeMtayyaa?
aridu mareta manava
kUDalasaMgayya taane balla!
CLICK HERE TO READ-ALONG:
TRANSLATION (WORDS)
ariduda (that which is known) ariyalolladu(does’n want to know/put in to practice), adeMtayyaa ? (how is it sir?)
mareduda(that which is forgotten) mareyalolladu (does’nt want to forget, let go), adeMtayyaa ? (how is it sir?)aridu (known) mareta (forgotten) manava (mind) kUDalasaMgayya (Kudalasangama) taane (himself) balla (knows)
TRANSLATION
How is it Sir, that it does not want to know that which is known?
How is it Sir, that it does not want to forget that which is forgotten?Only Lord Kudalasangama knows the known, forgotten mind!
COMMENTARY
Basavanna is wondering about the nature of the human mind in this Vachana. The mind is aware of and knows a multitude of things. But it behaves as though it is not aware of them on occasions. For instance, it is aware that one should not lie, or one should control anger. But, when the occasion arises, it forgets these concepts and behaves as though it is not aware of them. Along the same lines, it does not forget what needs to be forgotten. For instance, we might have ill feelings about an individual and will have made all efforts to forget them. But, on occasion (say, when we see the individual) the feelings reappear as though we have not made any efforts to forget them. Basavanna questions as to why the mind behaves in this manner. This happens when the knowledge we have is superficial and has not sunk to our heart. Such knowledge is of no use. He says only Lord Kudalasangama knows the known and forgotten mind, implying that one has to be at the level of the Lord to understand the behavior of the mind. The knowledge we acquire should be internalized and felt in our hearts. When we reach that level we become one with Him. Only then, there will not be a distinction between our thoughts and actions. Only then we will be in tune with Him.
Let us internalize the knowledge we aquire so our thoughts and conduct are unified!
KANNADA COMMENTARY
ಇಲ್ಲಿ ಬಸವಣ್ಣನವರು ಮನದ ಸ್ವಭಾವದ ಬಗ್ಗೆ ಹೇಳುತ್ತ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. “ಅರಿದುದ ಅರಿಯಲೊಲ್ಲದು” ಎನ್ನುತ್ತಾರೆ. ಈ ಮನಸ್ಸು ಅನೇಕ ವಿಷಯಗಳನ್ನು ಅರಿತಿದೆ. ಆದರೆ ಅದು ತನಗೆ ತಿಳಿದೇ ಇಲ್ಲವೆಂಬಂತೆ ವರ್ತಿಸುತ್ತದೆ. ಉದಾಹರಣೆಗೆ “ಕೋಪಿಸಒಳ್ಳಬಾರದು, ಸುಳ್ಳು ಹೇಳಬಾರದು, ದೇವರು ಸ್ಥಾವರದಲ್ಲಿ ಇಲ್ಲ” ಇತ್ಯಾದಿ ವಿಷಯಗಳು. ಇವುಗಳನ್ನು ಬಹುತೇಕವಾಗಿ ಎಲ್ಲರೂ ಅರಿತಿರುತ್ತಾರೆ. ಆದರೆ ಮನಸ್ಸು ತಾನು ವರ್ತಿಸುವಾಗ ಇವೆಲ್ಲ ತನಗೆ ತಿಳಿದಿಲ್ಲವೆಂಬಂತೆ ನಡೆದುಕೊಳ್ಳುತ್ತದೆ. ಏಕೆ ಈ ವಿಚಿತ್ರ ವರ್ತನೆ? ಎಂದು ಪ್ರಶ್ನಿಸುತ್ತಾರೆ ಬಸವಣ್ಣನವರು. ಅದೇ ರೀತಿ ಮರೆಯಬೇಕಾದುದನ್ನು ಮರೆಯುವುದಿಲ್ಲ. ಮರೆತಂತೆ ಇರುತ್ತದೆ. ಆದರೆ ಮರೆತದ್ದು ಮತ್ತೆ ಮತ್ತೆ ನೆನಪಿಗೆ ಬರುತ್ತಲೇ ಇರುತ್ತದೆ. ಉದಾಹರಣೆಗೆ ಯಾರ ಬಗ್ಗೆಯೋ ನಮ್ಮ ಮನದಲ್ಲಿ ಅಸಮಾಧಾನವಿರುತ್ತದೆ. ಅದನ್ನು ಮರೆಯಬೇಕೆಂದು ಎಂದುಕೊಳ್ಳುತ್ತೇವೆ. ಹಾಗೇ ಮಾಡುತ್ತೇವೆ. ಆದರೆ ಅದನ್ನು ಪೂರ್ತಿಯಾಗಿ ಮರೆಯಲು ಸಾಧ್ಯವಾಗುವುದಿಲ್ಲ. ಅದು ಪುನಃ ಪುನಃ ನೆನಪಿಗೆ ಬರುತ್ತದೆ. ಅವರೊಂದಿಗೆ ವರ್ತಿಸುವಾಗ ಆ ಅಸಮಾಧಾನದ ಪ್ರಭಾವ ನಮ್ಮ ನಡತೆಯಲ್ಲಿ ತೋರಿಕೊಳ್ಳುತ್ತದೆ. ಅದು ಏಕೆ? ಎನ್ನುತ್ತಾರೆ ಬಸವಣ್ಣನವರು. ಆ ಅರಿವು ಕೇವಲ ಬೌದ್ಧಿಕವಾದುದೇ ಹೊರತು ಆಳವಾಗಿ ಅಂತರಂಗದಲ್ಲಿ ಇಳಿದಿರುವುದಿಲ್ಲ. ಅಂತಹ ಅರಿವಿನಿಂದ ಯಾವ ಪ್ರಯೋಜನವೂ ಇಲ್ಲ. ಬೌದ್ಧಿಕವಾದ ಅರಿವು ತರ್ಕದಿಂದ ಹುಟ್ಟಿರುವಂತಹದು. ಅದು ಮೇಲ್ಮೈಯ ಅರಿವು. ಆದರೆ ಅರಿವು ಹೃದ್ಗತವಾದಾಗ ಈ ಪ್ರಸಂಗ ಬರುವುದಿಲ್ಲ. ನಿಜವಾದ ಅರಿವು ಉಂಟಾದಾಗ “ಇದನ್ನು ಮರೆಯ ಬೇಕು, ಇದನ್ನು ನೆನಪಿಟ್ಟುಕೊಳ್ಳಬೇಕು” ಎಂಬ ಚಿಂತೆ ಇರದು. ಅಲ್ಲಿ ಇದು ಸರಿ, ಅದು ತಪ್ಪು, ಎಂಬಂತಹ ಭಾವ ಮತ್ತು ಆಮೇಲೆ ಅದರಂತೆ ನಡೆಯುವುದು ಇರುವುದಿಲ್ಲ. ಎಂದರೆ ಮೊದಲು ವಿಚಾರ ಮತ್ತು ಆಮೇಲೆ ನಡತೆ ಎಂಬ ಅಂತರವಿರುವುದಿಲ್ಲ. ಎಲ್ಲವೂ ನಿರಾಯಾಸವಾಗಿ ಕ್ಷಣಾರ್ಧದಲ್ಲಿ ನಡೆಯುತ್ತದೆ. ಅಂತಹ ಮನದ ರೀತಿ ಬೇರೆಯೇ ಆಗಿರುತ್ತದೆ. ಅದನ್ನು ಕೂಡಲಸಂಗಮನು ತಾನೇ ಬಲ್ಲ ಎನ್ನುತ್ತಾರೆ. ಅಂದರೆ ಅಲ್ಲಿ ಕೂಡಲಸಂಗಮನಿರುತ್ತಾನೆ. ಬೇರೆಯದಕ್ಕೆ ಅಲ್ಲಿ ಸ್ಥಾನವಿರುವುದಿಲ್ಲ, ಎನ್ನುತ್ತಾರೆ ಬಸವಣ್ಣನವರು.
No comments:
Post a Comment