Thursday, August 30, 2012

Vachana 105: Vaada Buddiya Bala – True Awareness


ವಾದ ಬುದ್ಧಿಯ ಬಲ, ವಾದ ಅಭ್ಯಾಸದ ಬಲ;
ಮಹತ್ವ ಸುಕೃತದ ಫಲ, ಮಹತ್ವ  ಸಿದ್ಧಿಯ ಬಲ;
ಅರಿವು ಜ್ಞಾನದ ಬಲ, ಅರಿವು ಸಜ್ಜನ ಸಹವಾಸದ ಬಲ,
ಅರಿವು ಬಾಹ್ಯದಲ್ಲಿ ಇಷ್ಟಲಿಂಗ, ಅರಿವು ಅಂತರಂಗದಲ್ಲಿ ಪ್ರಾಣಲಿಂಗ, ಅರಿವು ಭಾವದಲ್ಲಿ ಆತ್ಮಲಿಂಗ,
ಇದು ಕಾರಣ,
 ವಾದಿಸಿದಲ್ಲಿ ಹುರುಳಿಲ್ಲ, ಮಹತ್ವ ಮಾಡುವಲ್ಲಿ ಹುರುಳಿಲ್ಲ,
ಲಿಂಗ ಜ್ಞಾನವೇ ಹುರುಳು ಕಪಿಲಸಿದ್ಧಮಲ್ಲಿಕಾರ್ಜುನ

TRANSLITERATION

vaada buddhiya bala, vaada abhyaasada bala;
mahatva sukRutada phala, mahatva siddhiya bala;
arivu j~jaanada bala, arivu sajjana sahavaasada bala,
arivu baahyadalli iShTaliMga, arivu aMtaraMgadalli praaNaliMga, arivu bhaavadalli aatmaliMga,
idu kaaraNa,
vaadisidalli huruLilla, mahatva maaDuvalli huruLilla,
liMgaj~jaanavE huruLu kapilasiddhamallikaarjuna

CLICK HERE TO READ-ALONG


TRANSLATION (WORDS)
vaada (argument, debate is) buddhiya (of intellect) bala (power), vaada (argument, debate  is) abhyaasada( of habit) bala (power);
mahatva(greatness is) sukRutada (of good deeds) phala (result), mahatva (greatness is) siddhiya (of achievement, accomplishment) bala (power of);
arivu (awareness is) j~jaanada(of knowledge) bala (power), arivu (awareness is) sajjana (gentlemen,noblemen) shavaasada ( of company of) bala (power),
arivu (awareness is) baahyadalli (outwardly) iShTaliMga (ishtalinga, the symbol of  THAT)
arivu (awareness is) aMtaraMgadalli (inwardly) praaNaliMga (praanalinga, physiological THAT),
arivu (awareness is) bhaavadalli (subtle mind?) aatmaliMga (aatmalinga, THAT  in the soul),
idu kaaraNa (for this reason),
vaadisidalli (in argument, debate) huruLilla (no sense, essence ), mahatva (greatness) maaDuvalli (achieving) huruLilla (no sense, essence),
liMga j~jaanavEhe (awareness of the Linga is alone)  huruLu (of significance, of essence) kapilasiddhamallikaarjuna (Kapilasiddhamallikaarjuna)

TRANSLATION

Debate (argument) is power of intellect, Debate is power of habit!
Greatness is result of good deeds, Greatness is power of accomplishments!
Awareness is power of knowledge; Awareness is power of the company of noblemen!
Awareness is outwardly symbol of THAT (God)!
Inwardly Awareness is physiological THAT!
Subtle-minded Awareness is soul-based THAT!
For this reason,
There is no essence in Debating; there is no essence in achieving Greatness!
Awareness of Linga (God) alone is of the essence! KapilaSiddaMallikarjuna!
COMMENTARY

In this Vachana, Sharana Siddarameswara  comments on how certain aspects we place high importance to in our lives, come in the way of achieving true awareness i.e. self -awareness or realization of the God within. Most of us enjoy debates and arguments. We try to impress on others of our knowledge and acumen through debating. Indeed the knowledge acquired through reading, observation and through others helps us in being good debaters.  Success in debating makes us start thinking that ‘we know it all’ and ‘we are superior to others’, essentially enhancing our ego. Winning in debates becomes habitual. This habit lets us concentrate more on winning debates and stops us from enhancing and sharpening our knowledge and awareness. Our knowledge thus stays superficial.

Along the same lines, greatness is achieved by good conduct and good deeds. Greatness could be due to the inherent good nature of the individuals or due to the untiring efforts of the individual. In general, everyone can achieve greatness through constant efforts, being in the company of noblemen and through the inherent interest in being a good citizen of the community. But, greatness does not imply awareness.
Awareness is the result of questioning the knowledge acquired. It requires a sincere observation and analysis of what is observed and learnt, through all the sources including the company of noblemen.  Such questioning has to be the result of an intense desire and effort on the part of the individual to explore within and internalize all the subtle aspects. Once realized, this awareness is ever expanding and subtle. It traverses from gross to subtle to soul. As Siddarameswara says, the only true awareness is the one of realizing the Lord within.

Let us sharpen our questioning to take us inwards! 

KANNADA COMMENTARY

ನಾವು ಜೀವನದಲ್ಲಿ ಅನೇಕ ವ್ಯರ್ಥವಾದ ವಿಷಯಗಳಿಗೆ ದೊಡ್ಡ ಸ್ಥಾನ ಕೊಡುತ್ತೇವೆ. ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ವಿವರಿಸುತ್ತಿದ್ದಾರೆ ಸಿದ್ಧರಾಮೇಶ್ವರರು. ಮಾನವನು ವಾದ ಮಾಡುವುದರಲ್ಲಿ ಹೆಚ್ಚಿನ ಸಂತೋಷವನ್ನು ಪಡೆಯುತ್ತಾನೆ. ವಾದದಿಂದ ತನಗೆ ಹೆಚ್ಚು ತಿಳಿದಿದೆ, ತಾನು ಇತರರಿಗಿಂತ ಮೇಲು ಎಂಬಂತೆ ತೋರುತ್ತದೆ. ಆದರೆ ಅದು ನಿಜವಾದ ಜ್ಞಾನವಲ್ಲ. ಬುದ್ಧಿಯ ಬಲದಿಂದ ವಾದ ಮಾಡಬಹುದು. ಬುದ್ಧಿಯು ತಾನಾಗಿಯೇ ಬರುವುದಿಲ್ಲ. ಇತರರಿಂದ, ಪುಸ್ತಕಗಳಿಂದ ಅಥವಾ ಇನ್ನಾವುದೋ ಮೂಲದಿಂದ ಬರುತ್ತದೆ. ಅದು ಮೇಲ್ಮೈಯದು. ಅಷ್ಟೇ ಅಲ್ಲದೆ, ಮತ್ತೆ ಮತ್ತೆ ವಾದ ಮಾಡುವುದರಿಂದ ವ್ಯಕ್ತಿಯು ಅದರಲ್ಲಿ ನಿಷ್ಣಾತನಾಗುತ್ತಾನೆ. ವಾದ ಮಾಡುವುದು ಒಂದು ಅಭ್ಯಾಸವಾಗುತ್ತದೆ. ಅಭ್ಯಾಸದ ಬಲದಿಂದ ವ್ಯಕ್ತಿ ವಾದಮಾಡಿ ಗೆಲ್ಲಬಹುದು.ಇದು ಅಹಂಕಾರಕ್ಕೆ ಮೂಲವಾಗುತ್ತದೆ. ಮತ್ತು ನಿಜವಾದ ಜ್ಞಾನವನ್ನು ಪಡೆಯುವುದರಲ್ಲಿ ಅಡ್ಡಿಯುಂಟಾಗುತ್ತದೆ. ಇನ್ನು ಮಹಾನತೆ. ಮಹಾನತೆ ಒಳ್ಳೆಯ ನಡತೆಯಿಂದ ಬರುತ್ತದೆ. ತಾನು ಮಾಡಿದ ಒಳ್ಳೆಯ ಕೆಲಸಗಳಿಂದ ಸಮಾಜದಲ್ಲಿ ಮಹಾನತೆ ಸಿಗುತ್ತದೆ. ಸಾಧನೆಯಿಂದಲೂ ಒಬ್ಬ ಮಹಾನತೆಯನ್ನು ಪಡೆಯುತ್ತಾನೆ. ಅಂದರೆ “ಮಹತ್ವ”  ಒಳ್ಳೆಯ ಕೆಲಸ ಮತ್ತು ಸಾಧನೆಗಳಿಂದ ಪ್ರಾಪ್ತವಾಗುತ್ತದೆ. ಅದೂ ಕೂಡ ಅಭ್ಯಾಸದಿಂದ ಪಡೆಯಬಹುದು. ಅಂದರೆ ಯಾರು ಬೇಕಾದರೂ ಒಳ್ಳೆಯ ಕೆಲಸ ಮತ್ತು ಸಾಧನೆ ಮಾಡಿ ಮಹತ್ವವನ್ನು ಪಡೆಯಬಹುದು. ಒಳ್ಳೆಯ ಕೆಲಸ ಮಾಡುವವರೆಲ್ಲ ಜ್ಞಾನಿಗಳೆಂದು ಹೇಳಲಾಗುವುದಿಲ್ಲ. ಅವರು ಸ್ವಭಾವದಿಂದ ಒಳ್ಳೆಯವರಾಗಿರುವುದರಿಂದ ಮಹತ್ವವನ್ನು ಸಾಧಿಸಿರುತ್ತಾರೆ. ಮತ್ತು ಈ ರೀತಿಯಾಗಿ ಪಡೆದ ಮಹತ್ವ, ಹಾಗೂ ವಾದಮಾಡುವ ಸಾಮರ್ಥ್ಯಗಳು ಮನುಷ್ಯನಲ್ಲಿ ಅಹಂಕಾರವನ್ನು ಹುಟ್ಟಿಸುತ್ತವೆ. ಆದರೆ ಅರಿವು ಸಂಪೂರ್ಣವಾಗಿ ಬೇರೆಯದು. ಅರಿವು ಜ್ಞಾನದ ಬಲ. ಅಂದರೆ ಅದು ಇನ್ನೊಬ್ಬರಿಂದ  ಅಥವಾ ತರ್ಕದಿಂದ ಅಥವಾ ಒಳ್ಳೆಯ ಕೆಲಸಗಳಿಂದ ಅಥವಾ ಸಾಧನೆಯಿಂದ ಪಡೆಯುವಂತಹದಲ್ಲ. ಅದು ಸಜ್ಜನರ ಸಹವಾಸದಿಂದ, ಅವರ ಜ್ಞಾನವನ್ನು ಕಂಡು ಅದನ್ನು ಪ್ರಶ್ನಿಸಿ ಕಂಡುಕೊಳ್ಳುವಂತಹದು. ಅದು ಸ್ವತಃ ತಾನೇ ಗಳಿಸಿದ ಜ್ಞಾನದಿಂದ ಮಾತ್ರ ಸಾಧ್ಯ. ಜಿಜ್ಞಾಸೆಯಿಂದ ಪ್ರಶ್ನಿಸಿ ಸ್ವತಃ ಕಂಡುಕೊಳ್ಳುವುದರ ಮೂಲಕ ಪಡೆದುಕೊಂಡದ್ದು. ಆ ಅರಿವು ಅಮೂರ್ತವಾದದ್ದು. ಅದನ್ನು ಗಂಟು ಕಟ್ಟಿಕೊಂಡು ಇಟ್ಟುಕೊಳ್ಳುವುದು ಅಸಾಧ್ಯ. ಆದರೆ ಅದರ ಕುರುಹು ಬಾಹ್ಯದಲ್ಲಿ ಇಷ್ಟಲಿಂಗವಾಗುತ್ತದೆ, ಸೂಕ್ಷ್ಮರೂಪವಾಗಿ ಶರೀರದಲ್ಲಿ ಪ್ರಾಣಲಿಂಗವಾಗುತ್ತದೆ. ಇನ್ನೂ ಸೂಕ್ಶ್ಮವಾಗಿ ಭಾವದಲ್ಲಿ ಆತ್ಮಲಿಂಗವಾಗುತ್ತದೆ. ಈ ರೀತಿಯಾಗಿ ಅರಿವು ಇಷ್ಟಲಿಂಗ, ಪ್ರಾಣಲಿಂಗ ಮತ್ತು ಆತ್ಮಲಿಂಗವಾಗಿರುತ್ತದೆ. ಇದನ್ನು ಗಳಿಸುವುದು ಮುಖ್ಯ. ಅರಿವಿನಿಂದ ದೂರ ಕೊಂಡೊಯ್ಯುವ  ವಾದದಲ್ಲಾಗಲಿ, ಮಹಾನತೆಯಲ್ಲಾಗಲಿ ಯಾವ ಹುರುಳೂ ಇಲ್ಲ ವೆಂದು ಹೇಳುತ್ತಾರೆ ಸಿದ್ಧರಾಮೇಶ್ವರರು.

No comments:

Post a Comment