Friday, August 10, 2012

Vachana 102: Hasidu banda gandanige - True Devotion

ಹಸಿದು ಬಂದ ಗಂಡನಿಗೆ ಉಣಲಿಕ್ಕದೆ
ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ
ಬಂದುದನರಿಯಳು, ಇದ್ದುದ ಸವಸಳು!
ದುಃಖವಿಲ್ಲದಕ್ಕೆ ಹಗರಣಿಗನ ತೆರನಂತೆ!ಕೂಡಲಸಂಗಮದೇವಾ
TRANSLITERATION
Hasidu baMda gaMDanige uNalikkade
baDavaadaneMdu maruguva satiya snEhadaMte
baMdudanariyaLu, idduda savasaLu!
dukkhavilladakke  hagaraNigana teranaMte!
kUDalasaMgadEvaa

CLICK HERE TO READ-ALONG:
TRANSLATION (WORDS)

Hasidu (hungry)  baMda (who comes)  gaMDanige  (to the husband) uNalikkade (without serving food)
baDavaadaneMdu (saying, he has lost weight) maruguva (worrying)  satiya ( a wife’s)  snEhadaMte (like the love of)
baMdudanariyaLu,(is not aware of what has come her way ) idduda (what is) savasaLu (doesn’t let spend)!
Dukkhavilladakke (crying for not  real suffering)  hagaraNigana (an actor)  teranaMte! (like)
kUDalasaMgamadEvaa (Kudalasamgamadeva)
TRANSLATION

It is like the love of a wife worrying that her husband has grown weak, without serving him food when he comes in hungry!
She is not aware of what has come her way, She cannot spend what she has!
Like an actor crying for not real suffering! Kudalasangamadeva!

 COMMENTARY

In this Vachana Basavanna comments on how common devotees do not understand the opportunity they have been provided to be true devotees, do not acquire the knowledge needed to be a true devotee and cultivate it to be one. These individuals just pretend to be devotees while questioning as to why the Lord has not reached them.
Sharanas equated the relation between the devotee and God to that between the husband and wife. They said sharana sati (devotee is wife) and Linga pati (God is husband). The love between husband and wife must be pure, serene and unpretentious. Their relation must be one of understanding each other and appreciating the precious gift each has been endowed with.
Basavanna says that the wife who does not make any effort to understand the needs of her husband and does not try to  provide the necessary support for him, yet complains that he has grown weak, is simply pretending that she loves him. She does not know what she has. She does not know how to use the precious gift she has been endowed with. All she does is complain that something went wrong in spite of her love and support.  She is like an actor who is crying for an assumed suffering!
Basavanna implies that a devotee should understand the precious opportunity he has been provided to be capable of reaching Him; he should acquire and enhance the knowledge to stay on the spiritual path and achieve the union with God (Linga-Anga Saamarasya). Anything short of that is just pretending. Such pretension and ritualistic devotion is not useful.

Let us appreciate what we have and strive to use it be one with Him


KANNADA COMMENTARY

 ಇಲ್ಲಿ ಬಸವಣ್ಣನವರು ಸಾಮಾನ್ಯ ಭಕ್ತರ ಪರಿಯನ್ನು ಬಹಳ ಚೆನ್ನಾಗಿ ತಿಳಿಸಿದ್ದಾರೆ. ಅವರು ಹೇಳುತ್ತಾರೆ: ಹಸಿದು ಬಂದ ಗಂಡನಿಗೆ ಊಟಕ್ಕೆ ಇಡದೆ “ಆತನು ಬಡವಾಗಿದ್ದಾನೆ “ ಎಂದು ಮರುಗುವ ಸತಿಯಂತೆ ಇರುತ್ತಾರೆ ಸಾಮಾನ್ಯ ಭಕ್ತರು. ತಮ್ಮ ರೀತಿಯನ್ನು ವಿಶ್ಲೇಷಣೆ ಮಾಡಿಕೊಳ್ಳದ ಭಕ್ತರ ಪರಿ ಇದು ಎನ್ನುತ್ತಾರೆ. ನಿಜವಾಗಿಯೂ ಗಂಡನ ಬಗ್ಗೆ ಪ್ರೀತಿಯಿರುವ ಹೆಂಡತಿ ಆತನಿಗೆ ಬೇಕಾದುದನ್ನು, ಎಂದರೆ ಆವಶ್ಯಕವಿರುವುದನ್ನು ಆತನಿಗೆ ಉಣಬಡಿಸಿ ಆನಂದಿಸುತ್ತಾಳೆ. ಆದರೆ ನಿಜವಾದ ಪ್ರೀತಿಯಿರದವಳು  ಹಾಗೆ ಮಾಡುವುದಿಲ್ಲ. ಏನೋ ಕಾಟಾಚಾರಕ್ಕೆ ತನ್ನ ಕರ್ತವ್ಯವನ್ನು ಮಾಡುತ್ತಾಳೆ ಅಷ್ಟೆ. ಸರಿಯಾದ ಊಟ ಕೊಡದಿದ್ದಾಗ ಆತ ಬಡವಾಗುವುದು ಸಹಜ. ಅದಕ್ಕೆ ಆಕೆ ದುಃಖಪಡುತ್ತಾಳೆ. ಆದರೆ ಅದರಿಂದೇನು ಪ್ರಯೋಜನ? ಆಕೆಯ ದುಃಖ ಒಂದು ನಟನೆ, ಎನ್ನುತ್ತಾರೆ ಬಸವಣ್ಣನವರು. ಇಲ್ಲಿ ಸತಿ ಎಂದರೆ ಭಕ್ತ,  ಪತಿ ಎಂದರೆ ಲಿಂಗ. ಭಕ್ತ ಮತ್ತು ದೇವರ ಸಂಬಂಧ ಸತಿ ಪತಿಯರ ಸಂಬಂಧದಂತಿರುತ್ತದೆ. ಅವರದ್ದು ಪ್ರೀತಿಯ ಬಂಧನ. ಅಲ್ಲಿ ನಟನೆಗೆ ಅವಕಾಶವಿಲ್ಲ. ಆದರೆ ಎಲ್ಲರೂ ಅಂತಹ ಸಂಬಂಧ ಹೊಂದಿರುವುದಿಲ್ಲ. ಕೆಲವರು ಸಮಾಜಕ್ಕೆ ತಾವು ಸತಿ ಪತಿಯರೆಂದು ತೋರಿಸಿಕೊಳ್ಳುತ್ತಾರೆ. ಆದರೆ ಆಂತರ್ಯದಲ್ಲಿ ನಿಜವಾದ ಪ್ರೀತಿಯಿರುವುದಿಲ್ಲ. ಆದ್ದರಿಂದ ಆಕೆಗೆ ತನಗೆ ಸಿಕ್ಕದುದರ ಬಗ್ಗೆ ಅರಿವಿರುವುದಿಲ್ಲ. ಅಂದರೆ ಭಕ್ತನಿಗೆ ಅರಿವನ್ನು ಹೊಂದುವ ಅವಕಾಶ ಸಿಕ್ಕಿದುದುರ ಅರಿವಿರುವುದಿಲ್ಲ ಎಂದರ್ಥ. ಈಗ ಸಿಕ್ಕ ಮಾನವ ಜನ್ಮದಲ್ಲಿ ಅರಿವನ್ನು ಪಡೆದರೆ ಹುಟ್ಟು ಸಾವುಗಳನ್ನು ಮೀರಬಹುದು. ಆದರೆ ಅದರ ಅರಿವಿಲ್ಲದಾಗಿ, ಇರುವುದನ್ನು ಸವೆಸುವುದಿಲ್ಲ. ಅಂದರೆ, ತನ್ನಲ್ಲಿರುವುದನ್ನು ಅರ್ಥಪೂರ್ಣವಾಗಿ ವ್ಯಯಿಸುವುದಿಲ್ಲ. ತನ್ನ ಬದುಕನ್ನು ಸಾರ್ಥಕವಾಗಿ ಕಳೆಯುವುದಿಲ್ಲ. ಹಾಗಾದಾಗ ಅದರ ಪರಿಣಾಮ ಏನಾದೀತು?  ಆಕೆಯ ದುಃಖ ಒಬ್ಬ ನಟನ ದುಃಖದಂತಿರುತ್ತದೆ. ನಟನ, ವೆಷಧಾರಿಯ ದುಃಖ ನಿಜವಾದದ್ದಲ್ಲ. ಅದು ಆತನು ಧರಿಸಿರುವ ಪಾತ್ರದ್ದು. ಆಕೆಯ ದುಃಖ ಕೂಡ ನಟನೆಯ ದುಃಖ. ಅನೇಕರು ಆಚಾರಗಳನ್ನು ಅನುಸರಿಸುತ್ತಾರೆ. ಆದರೆ ಅದರ ಹಿಂದಿನ ಅರ್ಥವನ್ನು ಅರಿಯುವುದಿಲ್ಲ. ಆಗ ಆ ಆಚಾರಗಳಿಂದ ಪ್ರಯೋಜನವಾಗುವುದಿಲ್ಲ. ಆದರೆ ಅವರು “ನಾನು ಎಷ್ಟು ಭಕ್ತಿ ಮಾಡುತ್ತಿದ್ದೇನೆ, ಆದರೆ ದೇವರು ಒಲಿಯುತ್ತಿಲ್ಲ?” ಎಂದು ಎಲ್ಲ ತಪ್ಪನ್ನು ದೇವರ ಮೇಲೆ ಹೊರಿಸುತ್ತಾರೆ. ಇಂತಹವರ ಭಕ್ತಿ ನಟನೆಯಷ್ಟೆ.

No comments:

Post a Comment