Friday, August 17, 2012

Vachana 103: Bhktiyemba Prithviya Mele – The Spiritual Path


ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು
ಲಿಂಗವೆಂಬ ಎಲೆಯಮೇಲೆ, ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು, ನಿಷ್ಪತ್ತಿಯೆಂಬ ಹಣ್ಣಾಯಿತ್ತು
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮ ದೇವನು ತನಗೆ ಬೇಕೆಂದು ಎತ್ತಿಕೊಂಡ

TRANSLITERATION
bhaktiyeMba pRuthviya  mEle, guruveMba bIjavaMkurisi
liMgaveMba eleyaayittu
liMgaveMba eleyamEle, vicaaraveMba  hUvaayittu
aacaaraveMba  kaayayittu, niShpatti eMba haNNaayittu
niShpattieMba haNNu toTTu kaLacibILuvalli
kUDalasamgmadEvanu tanage bEekeMdu ettikoMDanu

CLICK HERE TO READ-ALONG:

http://youtu.be/-PxceyENZ0U


TRANSLATION (WORDS)
bhaktiyeMba (of bhakti, devotion) pRuthviya  (the earth) mEle (on)guruveMba (called the Teacher)  bIjavaMkurisi (sprouted the seed)
liMgaveMba (called the Limga) eleyaayittu (came out the leaf)
liMgaveMba (called the Limga) eleyamEle (on the leaf)
vicaaraveMba ( of contemplation, thinking) hUvaayittu (bloomed the flower)aacaaraveMba  (called action, behavior) kaayayittu (came the fruit)
niShpatti eMba ( ripened) haNNaayittu (fruit)
niShpattieMba haNNu (that  ripened fruit)  toTTu kaLacibILuvalli (before was separated from the tree)
 kUDalasamgmadEvanu (kudalasamgamadeva) tanage (for himself) bEekeMdu (saying he needs) ettikoMDanu (picked it)

 TRANSLATION
On the Earth of devotion (Bhakti), sprouted the seed called teacher.
Then came out the leaf called Linga
On the leaf called Linga
bloomed the flower of contemplation (thinking) and then came the fruit called action (behavior)
The fruit ripened.
As the ripe fruit was about to separate from the tree, Kudalasangamadeva picked it up saying that He needs it!


COMMENTARY

In this Vachana, Basavanna outlines the sequence of events leading to the merger with God.  Earth is essential for growing anything. Devotion is the Earth here. Just the devotion and intense desire is not enough to be successful in spiritual path. A Guru (teacher) is needed to lead the devotee in the right direction and hence the Guru is the seed. Guru puts the seed of God mindedness into the devotee. The seed sprouts and results in the leaf called Linga (God), meaning that the Guru has successfully implanted the devotee with God mindedness. Then the devotee must develop deep thinking and contemplation (flower) and corresponding right behavior (fruit).  The actions of the devotee should be guided by his deep contemplation on God and not be just ritualistic.  Once the fruit ripens, meaning that the devotee has reached the mature level of being one with God, he will be just about to release himself from the tree of material life and the God will pick him up, meaning that the devotee merges with the God.

The spiritual path thus consists of intense devotion guided by the Guru, resulting contemplation and thinking and the corresponding right behavior, which when matures turns into the merger with God.

Let our actions follow deep thinking and contemplation!

KANNADA COMMENTARY

ಆಚಾರ ವಿಚಾರಗಳಿಂದ ಬೆಳೆದ ಭಕ್ತಿಯ ಪರಿಪೂರ್ಣ ಸ್ವರೂಪವನ್ನು ಹೇಳುತ್ತಿದ್ದಾರೆ ಇಲ್ಲಿ. ಯಾವುದೇ ಬೆಳೆ ಬೆಳೆಯಬೇಕಾದರೆ ಭೂಮಿ ಇರಬೇಕಾದದ್ದು ಮುಖ್ಯ. ಇಲ್ಲಿ ಭಕ್ತಿಯೇ ಭೂಮಿ. ಶ್ರದ್ಧೆ ಮತ್ತು ಭಕ್ತಿಯೆಂಬ ಪೃಥ್ವಿ ಇದೆ. ಶ್ರದ್ಧೆಯಿಲ್ಲದಿದ್ದಲ್ಲಿ ಏನೂ ನಡೆಯುವುದಿಲ್ಲ. ಆದರೆ ಆ ಶ್ರದ್ಧೆ  ಸರಿಯಾದ ದಾರಿಯಲ್ಲಿ ಮುಂದುವರಿಯಬೇಕು. ಅದಕ್ಕೆ ಗುರು ಮುಖ್ಯ. “ಅದಕ್ಕೇ ಗುರುವೆಂಬ ಬೀಜವಂಕುರಿಸಿ” ಎಂದು ಹೇಳುತ್ತಾರೆ. ಗುರುವು ಆ ಶ್ರದ್ಧೆಯನ್ನು ತೀಕ್ಷ್ಣಗೊಳಿಸಿ ಮಾರ್ಗದರ್ಶನ ಮಾಡಿಸುತ್ತಾನೆ. ಆ ಬೀಜ ಅಂಕುರಿಸಿ ಲಿಂಗವೆಂಬ ಎಲೆಯಾಗುತ್ತದೆ. ಆ ಗುರುವಿನ ಮಾರ್ಗ ದರ್ಶನದಿಂದ ಲಿಂಗದೆಡೆಗೆ ಮನ ತಿರುಗುತ್ತದೆ.  ಆಮೇಲೆ ವಿಚಾರವೆಂಬ ಹೂವಾಗುತ್ತದೆ. ಅಂದರೆ ಎಲ್ಲವನ್ನು ವಿಚಾರಿಸಿ ನೋಡುವ ಮನೋಭಾವ ಬೆಳೆಯುತ್ತದೆ. ಎಲ್ಲವನ್ನೂ ವಿವೇಚಿಸಿ ನೋಡುವ ಬುದ್ಧಿ ಬೆಳೆಯುತ್ತದೆ. ಇಲ್ಲದಿದ್ದಲ್ಲಿ ಮೂಢನಂಬಿಕೆ ಮನೆ ಮಾಡುವ ಅವಕಾಶವಿರುತ್ತದೆ. ಆದ್ದರಿಂದ ವಿಚಾರವು ಅತ್ಯಂತ ಮುಖ್ಯವಾದದ್ದು. ಇದಾದನಂತರ ಆಚಾರದ ಸರದಿ. ಕೇವಲ ವಿವೇಚನೆ ಮಾಡಿದರೆ ಲಾಭವಿಲ್ಲ. ಅದು ಆಚಾರದಲ್ಲಿ ತೋರಿ ಬರಬೇಕು. ಆಚಾರದಿಂದ ವಿಚಾರ ಸಾರ್ಥಕವಾಗುತ್ತದೆ. ವಿಚಾರವೆಂಬ ಹೂವಿನೊಂದಿಗೆ ಆಚಾರವೆಂಬ ಕಾಯಾಗುತ್ತದೆ.ಅಲ್ಲಿ ವಿಚಾರವೆಂಬ ಹೂವೂ ಇರುತ್ತದೆ ಮತ್ತು ಆಚಾರವೆಂಬ ಕಾಯಿಯೂ ಇರುತ್ತದೆ. ಆ ಕಾಯಿ ಹಣ್ಣಾದಾಗ ಅದು ಪೂರ್ಣವಾದಂತೆ.  “ನಿಷ್ಪತ್ತಿ ಎಂಬ ಹಣ್ಣಾಯಿತು” ಎನ್ನುತ್ತಾರೆ. “ನಿಷ್ಪತ್ತಿ” ಎಂದರೆ  ಐಕ್ಯವೆಂದರ್ಥ. ಭಕ್ತಿಯು ಪರಿಪೂರ್ಣವಾದಾಗ ಲಿಂಗದಲ್ಲಿ ಐಕ್ಯವಾಗುತ್ತದೆ. ಅಂದರೆ ಅದು ಕೂಡಲಸಂಗಮದಲ್ಲಿ ಒಂದಾಗುತ್ತದೆ. ಅದನ್ನೇ ಇಲ್ಲಿ ಕೂಡಸಂಗಮನು ಎತ್ತಿಕೊಂಡನೆಂದು ಹೇಳುತ್ತಾರೆ. 

ಬಸವಣ್ಣನವರ  ಈ ವಚನ  ಸಾಧಕ ಜೀವನದ ಕೈಪಿಡಿಯಂತಿದೆ. ಸಾಧಕನ ಮನದಲ್ಲಿ ಶ್ರದ್ಧೆ ಭಕ್ತಿ ಇರುವುದು ಮುಖ್ಯ. ಅದು ಗುರುವಿನ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು. ಆದರೆ ಗುರುವೆಂದರೆ ಯಾವನೋ ಒಬ್ಬ ವ್ಯಕ್ತಿ ಅಲ್ಲ ಎಂಬುದು ಮೊದಲೇ ಹೇಳಿದೆ.ಗುರುವಿನ ಮಾರ್ಗದರ್ಶನದಿಂದ ಲಿಂಗದ ಅರಿವಾಗುತ್ತದೆ. ಅದು ವಿಚಾರವೆಂಬ ಹೂವಿನಿಂದ ಅರಳುತ್ತದೆ. ಆಚಾರದಿಂದ ಗಟ್ಟಿಗೊಂಡು ಕಾಯಾಗುತ್ತದೆ. ಆ ಕಾಯಿ ಸಿದ್ಧಿಯ ಹಣ್ಣಾಗುತ್ತದೆ, ಅಂದರೆ ಲಿಂಗಾಂಗ ಸಾಮರಸ್ಯವಾಗುತ್ತದೆ. ಸಾಧಕ ಜೀವನದ ಎಲ್ಲ ಹಂತಗಳ ಸಾರ್ಥಕವಾದ ವಿವರಣೆ ಇಲ್ಲಿದೆ.

ನಿಷ್ಪತ್ತಿ= ಸಂ) ೧ ಹುಟ್ಟು, ಉತ್ಪತ್ತಿ ೨ ಮುಕ್ತಾಯ, ಸಮಾಪ್ತಿ ೩ ಸಿದ್ಧಿ, ಪರಿಪಾಕ ೪ ಐಕ್ಯವಾಗುವಿಕೆ ೫ ನಿರ್ಣಯ, ತೀರ್ಮಾನ ೬ (ವ್ಯಾಕರಣದಲ್ಲಿ) ಶಬ್ದದ - ಹುಟ್ಟು, ಮೂಲ, ವ್ಯುತ್ಪತ್ತಿ


No comments:

Post a Comment