Friday, June 29, 2012

Vachana 96: Jangama jamgamavendu - True Jangama

ಜಂಗಮ ಜಂಗಮವೆಂದು ನುಡಿದು, ಜಗದ ಹಂಗಿಗರಾಗಿ ಇರಲಾಗದು.
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಜಂಗುಳಿಗಳ ಬಾಗಿಲ ಕಾಯಲಾಗದು.
ಜಂಗಮದ ಸುಳುಹು ಎಂತಿರಬೇಕೆಂದರೆ, ತನ್ನ ನಂಬಿದ ಸಜ್ಜನರ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮಿಸಿ,
ತಾ ಕಂಡ ಲಿಂಗಾಂಗವನು ಅಲ್ಲಿಯೇ ನಿಕ್ಷೇಪಿಸಿ, ತಾ ನಿರ್ಗಮಿನಿಯಾಗಿ ಸುಳಿಯಬಲ್ಲರೆ, ಜಂಗಮಲಿಂಗವದು 
ಇಂತಲ್ಲದೆ ಕಂಡವರ ಕಾಡಿ ಬೇಡಿ, ಕೊಟ್ಟರೆ ಕೊಂಡಾಡಿ, ಕೊಡದಿದ್ದಡೆ ಜರಿದು,
ತಾಗು ನಿರೋಧಕ್ಕೆ ಗುರಿಯಾಗಿ ನೋವುತ್ತ, ಬೇವುತ್ತ ಧಾವತಿಗೊಂಬ ಗಾವಿಲರ
ಎಂತು ಜಂಗಮವೆಂಬೆ? ಬಸವಪ್ರಿಯ ಕೂಡಲಚೆನ್ನ್ನಬಸವಣ್ಣ. 

TRANSLITERATION

Jamgama jaMgamavemDu nuDidu, jagada haMgigaraagi iralaagadu.
Jagada karatana kaiyalli hiDidukoMDu jaMguLigaLa baagila kaayalaagadu.
JMgamada suLuhu eMtirabEkeMdare , tanna naMbida sajjanara sadbhktarallige limgavAgi gamisi. 
taa kaMDa liMgaaMgavanu alliyE nikShEpisi taa nirgamaniyaagi  suLiyaballare, jaMgama liMgavadu.
iMtallade kaMDavara kaaDi bEDi kottare koMDaaDi , koDadiddaDe jaridu,
taagu nirOdhakke guriyaagi nOvutta bEvutta dhaavatigoMba gaavilara eMtu jaMgamaveMbe? basava priya kUDalacennabasavaNNa.


CLICK HERE TO READ – ALONG:
http://youtu.be/YXdrvTqYm6Y



TRANSLATION (WORDS)

Jamgama (devotee)  jaMgama (devotee) vemDu  nuDidu, (saying  as) jagada (of the world) haMgigaraagi (under   obligation) iralaagadu.(can’t live)
Jagada (of the world) karatana (creator) kaiyalli ( in own hands) hiDidukoMDu (holding) jaMguLigaLa (of crowd) baagila (at the doors) kaayalaagadu.(can’t wait)
JMgamada (of the devotee)  suLuhu   (clue) eMtirabEkeMdare (should be like), tanna ( one self) naMbida (those believed) sajjanara ( gentlemen’s)  sadbhktarallige (true devotees)  limgavAgi (as the God) gamisi (arrived) 
taa  (own self) kaMDa (seen) liMgaaMgavanu (unity of god and the body)  alliyE (there alone)  nikShEpisi  ( keeping as treasure)  taa (one self) nirgamaniyaagi  (without movement)  suLiyaballareI (if can move), jaMgama liMgavadu.(that is God in devotee, that is living God)
iMtallade (other than that)  kaMDavara (everybody)  kaaDi bEDi ( begging, pestering to give) kotare(if given) koMDaaDi (praising) , koDadiddaDe (if not given) jaridu (condemning),
taagu (hurt) nirOdhakke  ( of obstruction) guriyaagi (target) nOvutta (paining)  bEvutta (agonizing) dhaavatigoMba ( get troubled) gaavilara (fools) eMtu( how) jaMgamaveMbe?(to consider a devotee) basava priya kUDalacennabasavaNNa.(Basavapriya Koodalacennabasavanna)


TRANSLATION

Calling oneself a Jangama (wandering ascetic, realized soul), one cannot live under the obligation of the world.
Holding the creator of the world in own hands, cannot wait at the doors of the crowd.
What should be the clue of a Jangama?  Appearing at the true devotees believing in him as the God, treasuring the unity of the self and the divine realized prior to, right there and moving away without being noticed, is the true nature of jangama.  
How can I call the fool who pesters and begs everybody to give, praises the one who gives and condemns the one who does not give, and subjects himself to pain and agony, a jangama?  Oh!  basava priya kUDalacennabasavaNNa.


COMMENTARY

In this Vachana Sharana Hadapada Appanna outlines the characteristics of a true Jangama.  Jangama is a wandering ascetic, a truly realized soul who has dedicated himself to initiate others into the ‘unity of the body and the divine’ he has realized himself. He does this without any expectations, he does not leave a trace of his presence, he neither takes credit for what he does, nor does he expect anything in return.  We have commented on the importance of Guru in providing the knowledge necessary to follow the spiritual path and kindle the keen awareness to follow the path successfully, resulting ultimately in the unification of the human and the divine (linga-Anga Saamarasya). The Guru is a teacher, while the Jangama is a practitioner who has already achieved the unification. The sole goal of the jangama is to initiate and guide the devotees to reach the divine. He does that without any expectations.  No wonder Sharanas advocated dedicating one’s wealth to support the activities of the jangamas.


Let us receive the knowledge from the teacher and guidance from the practitioner, for success in all we seek!

KANNADA COMMENTARY

ಅಪ್ಪಣ್ಣನವರು ಇಲ್ಲಿ ಜಂಗಮನ ಲಕ್ಷಣಗಳನ್ನು ತಿಳಿಸುತ್ತಿದ್ದಾರೆ. ಅವರು ಹೇಳುತ್ತಾರೆ:  ಜಂಗಮನೆಂದು ಹೇಳಿಕೊಂಡು  ಜಗದ ಹಂಗಿಗನಾಗಿ ಇರುವುದು ಸರಿಯಲ್ಲ. ಸಾಮಾನ್ಯವಾಗಿ ಜಂಗಮರು ಎಂದು ಹೇಳಿಕೊಳ್ಳುವವರು ಜನರ ಭಿಕ್ಷೆಗಾಗಿ ಕಾಯುತ್ತಾರೆ. ಯಾವ ಕಾಯಕವೂ ಮಾಡದೆ, ಸ್ವಾವಲಂಬಿಯಾಗದೆ, ಕಾಷಾಯ ವಸ್ತ್ರಧಾರಿಯಾಗಿ, ವಿಭೂತಿ ಮತ್ತು ರುದ್ರಾಕ್ಷಿಗಳನ್ನು ಧರಿಸಿ, ಲೋಕದ ಜನರ ದಯೆಯನ್ನೇ ಅವಲಂಬಿಸಿರುತ್ತಾರೆ. ಇಂತಹವರನ್ನು ಕುರಿತು, “ಜಗತ್ತಿನ ಸೃಷ್ಟಿಕರ್ತನನ್ನು ಕೈಯಲ್ಲಿಟ್ಟುಕೊಂಡು  ಸಾಮಾನ್ಯ ಜನರ ಕರುಣೆಗಾಗಿ ಕಾಯುವುದು ಸರಿಯೆ” ಎಂದು ಕೇಳುತ್ತಾರೆ.  “ಜಗದ ಕರ್ತನನ್ನು ಕೈಯಲ್ಲಿಟ್ಟುಕೊಂಡು” ಎಂದರೇನು? ಜಂಗಮರು ಲಿಂಗಪೂಜೆಮಾಡುವವರು. ಕೈಯಲ್ಲಿ ಇರುವ ಲಿಂಗವು ಪರಮಾತ್ಮನ ಕುರುಹು. “ ಈ ಚರಾಚರಾತ್ಮಕವಾದ (animate and inanimate) ಜಗತ್ತು ಯಾವ ವಸ್ತುವಿನಲ್ಲಿ ಲೀನ (merge)ವಾಗುತ್ತದೆಯೋ ಮತ್ತು ಎಲ್ಲಿಂದ ಉತ್ಪತ್ತಿಯನ್ನು (originate)  ಪಡೆಯುತ್ತದೆಯೋ ಆ ವಸ್ತುವೇ ಲಿಂಗ”ವೆಂದು ಬಲ್ಲವರು ಹೇಳುವರು. ಲಿಂಗವೆಂಬ ಆ ಕುರುಹನ್ನು ಹಿಡಿದು ಅರಿವನ್ನು ಪಡೆಯುವುದು. ಅದು ಯಾವುದರ ಕುರುಹು ಎಂಬುದನ್ನು ಧ್ಯಾನಿಸಿ ನೋಡುವುದು. ಎಂದರೆ ಈ ಚರಾಚರಾತ್ಮಕವಾದ ಜಗತ್ತೆಲ್ಲವೂ ಆ ಪರಮಾತ್ಮನ ಸ್ವರೂಪವೇ ಎಂಬ ಅರಿವನ್ನು ಹೊಂದುವುದು. ಕೇವಲ ಬೌದ್ಧಿಕವಾಗಿ ತಿಳಿದುಕೊಳ್ಳುವುದಲ್ಲ. ಅದನ್ನು ಸಾಕ್ಷಾತ್ಕರಿಸಿಕೊಂಡು  ತಾನು ಅದರೊಂದಿಗೆ ಒಂದಾಗುವುದು. ಅಂತಹ ಮಹತ್ತನ್ನು ಸಾಧಿಸುವುದನ್ನು ಬಿಟ್ಟು ಜಗದ ಜಂಗುಳಿಯ ದಯೆಗಾಗಿ ಕಾಯುವುದು ಹೆಡ್ಡತನವೆನ್ನುತ್ತಾರೆ. ಅದು ನಿಜವಾದ ಜಂಗಮತ್ವವಲ್ಲ. ಜಂಗಮನ ಸುಳುಹು ಯಾವುದೆಂದರೆ  ತನ್ನನ್ನು ನಂಬಿದ ಸಜ್ಜನರಲ್ಲಿ ತಾನು ಆ ಲಿಂಗವೆ ಆಗಿ ಬರುವುದು, ಅಂದರೆ ಯಾರ ಮನಸ್ಸು ಆ ಪರಮಾತ್ಮನ ಅರಿವನ್ನು ಪಡೆಯಲು ಸಿದ್ಧವಾಗಿದೆಯೋ ಅದನ್ನು ಗುರುತಿಸಿ ಅಲ್ಲಿಗೆ ತಾನೇ ಬಂದು ತಾನು ಕಂಡುಕೊಂಡ ಅರಿವನ್ನು ಅಲ್ಲಿ ನಿಕ್ಷೇಪಿಸುವುದು. ಎಂದರೆ ಅಂತಹ ಘನವಾದ ಅರಿವನ್ನು ಅವರಲ್ಲಿ ಸ್ಥಾಪಿಸುವುದು. ತಾನು ಬಂದು ಹೋದುದರ ಕುರುಹುವಿಲ್ಲದಂತಿರುವುದು. ಎಂದರೆ, ತಾನು ಬಂದು ಈ ಜ್ಞಾನವನ್ನು ಕೊಟ್ಟು ಹೋದೆ ಎಂಬ ಅಹಂಕಾರದ ಲವಲೇಶವೂ ಇಲ್ಲದಂತಿರುವುದು. ಅದು ನಿಜವಾದ ಜಂಗಮದ ಗುಣವೆನ್ನುತ್ತಾರೆ ಅಪ್ಪಣ್ಣನವರು. ಅದೆಲ್ಲವ ಬಿಟ್ಟು, ಕಂಡ ಕಂಡವರನ್ನು ಕಾಡಿ ಬೇಡುವುದು. ಕೊಟ್ಟವರನ್ನು ಕೊಂಡಾಡು( praise)ವುದು, ಕೊಡದೆ ಇದ್ದವರನ್ನು ಜರಿದು (condemn) ಮಾತಾಡುವುದು. ಮತ್ತು ಆ ಮೂಲಕ ಮನವು ಘಾಸಿಗೊಂಡು  ನೋವು ಮತ್ತು ತಾಪಕ್ಕೆ ಗುರಿಯಾಗಿ ಬರಿದೆ ಆಯಾಸಗೊಳ್ಳುವವರನ್ನು ಹೇಗೆ ಜಂಗಮರೆನ್ನಲಾಗುತ್ತದೆ? ಎಂದು ಕೇಳುತ್ತಾರೆ ಅಪ್ಪಣ್ಣನವರು. 

Friday, June 22, 2012

Vachana 95: Harahara endu Hattubaari – The Means to Reach the Divine

ಹರಹರ ಎಂದು ಹತ್ತುಬಾರಿ ಎನಬಹುದಲ್ಲ್ಲದೆ,
ಹರಿವ ಮನವ ಮೆಟ್ಟಿ ಲಿಂಗದೊತ್ತಿನಲ್ಲಿ ನಿಂದಲರಿಯದು ನೋಡಾ!
ಇದು ಕಾರಣ, ತನುವ ಗುರುವಿಂಗಿತ್ತು,ಮನವ ಲಿಂಗಕ್ಕಿತ್ತು,
ಧನವ ಜಂಗಮಕ್ಕಿತ್ತು, ತ್ರಿವಿಧವನು ತ್ರಿವಿಧಕ್ಕಿತ್ತ  ಬಳಿಕ,
ಒಂದಲ್ಲದೆ ಎರಡುಂಟೆ?
ಇದು ಮುಂದೆ ಆವನಾನೊಬ್ಬ ಭಕ್ತನು ನೋಡಿ ನಡೆವುದಕ್ಕೆ ಇದೇ ಸಾಧನ,
ಬಸವ ಪ್ರಿಯ ಕೂಡಲಚೆನ್ನಬಸವಣ್ಣಾ

TRANSLITERATION

harahara eMdu hattubaari enabahudallade,
hariva manava meTTi  liMgadottinalli niMdalariyadu nODaa!
Idu kaaraNa, tanuva guruviMgittu, manava liMgakkittu.
Dhanava jaMgamakkittu, trividhavanu trividhakkitta baLika,
oMdallade eraduMTe?
Idu muMde aavanaanobba bhaktanu nODi naDevudakke idE saadhana,
Basava priya kUDalacennabasavaNNaa

CLICK HERE TO READ-ALONG:

 http://youtu.be/paQ7vlPbToE



TRANSLATION (WORDS)

harahara (Hara Hara, God’s name) eMdu  (as) hattu baari (ten times) enabahudallade,(one can say or chant, but)
hariva ( wavering) manava (mind)  meTTi (by controlling)  liMgadottinalli (in linga, in God) niMdalariyadu  (can’t establish) nODaa! (you see!)
Idu (for this)  kaaraNa (reason) tanuva (the body) guruviMgittu,(offering to the teacher)  manava (the mind) liMgakkittu.(offering to the God)
Dhanava (the  wealth)jaMgamakkittu,(offering to the Jamgama) trividhavanu (triform,) trividhakkitta (offering to the triform) baLika,(after)
oMdallade (only one) eraduMTe?(can there be two, can there be duality)
Idu (this)  muMde (later)  aavanaanobba (some one) bhaktanu (devotee) nODi(observe, see) naDevudakke (to follow) idE saadhana, (this is the means)
Basava priya kUDalacennabasavaNNaa (Basavapriya Koodalacennabasavannaa)

TRANSLATION

One can chant God’s name (Hara Hara) tens of  times,
But can’t control the wavering mind and establish it in Him, you see!
As such, offering the body to teacher (guru), mind to God (Linga) and the wealth to ascetics (jangama), thus offering the triform to the triform,
there can only be one, how can there be a duality?  
This is the means to be followed by all future devotees,
Basava priya kUDala cennabasavaNNaa!

COMMENTARY

This Vachana from Sharana Hadapada Appanna hints at the only means of reaching the divine. We have commented on the three resources we all have – Body, Mind and Wealth. The body should be offered to the teacher (Guru) implying that one should be in close proximity and service of the Guru in order to be indoctrinated with the true knowledge and awareness of the spiritual path. This knowledge and awareness will lead the devotee towards controlling the wandering mind to establish it in Linga, the divine. The wealth should be utilized in support of the activities of Jangamas, the realized souls (wandering ascetics) who have devoted themselves to enhance the Godliness of the individuals and society.  Appanna says that once the trifold resources are thus appropriately allocated and spent, there would be no question of man/God duality; the two will have merged into one. He says this is the only means of merging with the divine (reaching the God). No amount of rituals such as chanting multiple names of God multiple times, without actually developing the single minded intensity and awareness would be useful.  This Vachana not only advocates the development of the self (body and mind), but also proactive support for the community for such development.

Let us dedicate our trifold resources to bring the heaven on Earth!
 
KANNADA COMMENTARY

ಹಡಪದ ಅಪ್ಪಣ್ಣನವರು ತನು ಮನ ಧನಗಳನ್ನು ಹೇಗೆ ಸಾರ್ಥಕವಾಗಿ ಉಪಯೋಗಿಸಬೇಕೆಂಬುದನ್ನು ಇಲ್ಲಿ ಹೇಳುತ್ತಾರೆ. ಜನರು ಬಾಯಿಯಿಂದ ದೇವರನಾಮವನ್ನು ಹೇಳುತ್ತಾರೆ, ಆದರೆ ಮನಸ್ಸೆಲ್ಲೋ ಇರುತ್ತದೆ. ಹತ್ತು ಸಲವೋ ನೂರುಸಲವೋ ದೇವರ ಹೆಸರನ್ನು ಹೇಳಿದ ಮಾತ್ರಕ್ಕೆ ದೇವರು ಸಿಗುವುದಿಲ್ಲ. ಹರಹರ ಎಂದರೆ ಹರನು ಸಿಗನು, ಹರಿವ ಮನಸ್ಸು ಲಿಂಗದಲ್ಲಿ ನಿಲ್ಲದು. ಮನಸ್ಸನ್ನು ಒಂದು ಕಡೆ ನಿಲ್ಲಿಸಲು ಉಪಾಯವಿದೆ. ಅದೇ ತ್ರಿವಿಧವನ್ನು ತ್ರಿವಿಧದಲ್ಲಿ ನಿಲ್ಲಿಸುವುದು. ತ್ರಿವಿಧವೆಂದರೆ ತನು, ಮನ ಮತ್ತು ಧನ. ಈ ತ್ರಿವಿಧವನ್ನು ಗುರು, ಲಿಂಗ , ಜಂಗಮವೆಂಬ ತ್ರಿವಿಧದಲ್ಲಿ ನಿಲ್ಲಿಸಬೇಕೆನ್ನುತ್ತಾರೆ. ಮೊಟ್ಟ ಮೊದಲಿಗೆ ತನುವನ್ನು ಗುರುವಿಗೆ ನೀಡಬೇಕು. ದೈಹಿಕವಾಗಿ ನಾವು ಗುರುವಿನ ಸೇವೆ ಮಾಡಿದರೆ ಗುರುವಿನ ಗುಣಗಳಿಂದ ಆಕರ್ಷಿತರಾಗುವ ಸಂಭವವಿರುತ್ತದೆ. ಆಗ ಗುರು ನಮಗೆ ಶಿವ ಕಾರುಣ್ಯ ಪಡೆಯುವ ದಾರಿಯನ್ನು ತೋರಿಸಿಕೊಡುತ್ತಾನೆ.  ಆ ಕಾರುಣ್ಯ ನಮ್ಮ ಅಂತರಂಗದಲ್ಲಿ ಉದಿಸಿದ ನಂತರ ಅದನ್ನು ಬೆಳೆಸಿಕೊಳ್ಳುವುದರಲ್ಲಿ  ಮನಸ್ಸು ಅನಾಯಾಸವಾಗಿ ತೊಡಗುತ್ತದೆ. ಹೀಗಾಗಿ ಮನಸ್ಸು ಲಿಂಗದಲ್ಲಿ ನಿಲ್ಲುವ ಸಂಭವವಿರುತ್ತದೆ. ಈ ಹಂತದಲ್ಲಿ ನಾವು ಸ್ವಲ್ಪ ಪ್ರಯತ್ನ ಮಾಡಬೇಕು. ಅದು ಯಾಂತ್ರಿಕವಾಗಿ “ಹರಹರ” ವೆನ್ನುವ ರೀತಿಯದಲ್ಲ.  ಅರಿವಿನ ಕಣ್ಣು ತೆಗೆಸುವಂತಹದು. ತನು ಮನಗಳು ಗುರು ಲಿಂಗಕ್ಕೆ ಅರ್ಪಿಸಿದ ನಂತರ ಇನ್ನು ಧನವನ್ನು ಜಂಗಮಕ್ಕೆ ಅರ್ಪಿಸಬೇಕೆನ್ನುತ್ತಾರೆ. ಧನವನ್ನು ಜಂಗಮಕ್ಕೆ  ಅರ್ಪಿಸದೆ ಅದನ್ನು ಬೇರೆಯದರಲ್ಲಿ ತೊಡಗಿಸಿದರೆ ಅದು  ಜೀವನನ್ನು  ಮಾಯಾಮೋಹಗಳಲ್ಲಿ ಮುಳುಗುವಂತ ಮಾಡುತ್ತದೆ. ಮರೆವಿನಲ್ಲಿ ಮುಳುಗಿಸುತ್ತದೆ. ಆದ್ದರಿಂದ ಧನವನ್ನು ಜಂಗಮನಲ್ಲಿ ತೊಡಗಿಸುವುದು ಬಹು ಮುಖ್ಯ ಮತ್ತು  ಲೋಕಕಲ್ಯಾಣದ ಮೂಲಕ ಅರಿವಿನತ್ತ ಒಯ್ಯುವಂತಹದ್ದು. ಆಗ ತನು ಮನ ಧನಗಳು ಒಂದಾಗುತ್ತವೆ. ದೇವ ಮತ್ತು ತಾನು ಎಂಬ ದ್ವೈತ ಭಾವ ಅಳಿಯುತ್ತದೆ. ಇಂತಹವನನ್ನು ನೋಡಿ ಮುಂದೆ ಇತರ ಭಕ್ತರು ತಾವೂ ಅದೇ ದಾರಿಯನ್ನು ಅನುಸರಿಸಲು ಅನುವು ಮಾಡಿಕೊಡುತ್ತದೆ ಎನ್ನುತ್ತಾರೆ ಹಡಪದ ಅಪ್ಪಣ್ಣನವರು. ಮುಂದಿನ ವಚನದಲ್ಲಿ ಅವರು ಯಾರನ್ನು ಜಂಗಮವೆನ್ನುತ್ತಾರೆ ನೋಡೋಣ.



Friday, June 15, 2012

Vachana 94: Angada koneya melana - The Wandering Mind



ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಂಗೆ ಹಾರಿತ್ತು.
ಅಯ್ಯಾ ಒಂದು ಸೋಜಿಗ!
ಕೈಯ ನೀಡಲು ಮೈಯೆಲ್ಲವ ನುಂಗಿತ್ತು.
ಒಯ್ಯನೆ ಕರೆದಡೆ ಮುಂದೆ ನಿಂತಿತ್ತು.
ಮುಯ್ಯಾಂತಡೆ ಬಯಲಾಯಿತ್ತು ಗುಹೇಶ್ವರಾ

TRANSLITERATION

Amgada  koneya  mElaNa  kODaga koMbiMge haarittu
ayyaa oMdu sOjiga !
kaiya neeDalu maiyellava nuMgittu
oyyane karedaDe muMde niMtittu
muyyaaMtaDe  bayalaayittu guhEshvaraa

CLICK HERE TO READ-ALONG:


TRANSLATION (WORDS)

Amgada (of the body) koneya( at the end)  mElaNa(on, top)  kODaga ( the monkey)
koMbiMge (to the branches) haarittu (jumped)
ayyaa (sir) oMdu sOjiga ! (what a wonder)
kaiya (hand) neeDalu (when  stretched)  maiyellava (the  whole body) nuMgittu (swallowed)
oyyane (lovingly)  karedaDe (if called)  muMde(before me) niMtittu (stood)
muyyaaMtaDe (when put in to contemplation) bayalaayittu (it disappeared)  guhEshvaraa(Guheshvara)

TRANSLATION

The monkey on the limb jumped over branches.
Sir, What a wonder!
When a hand was offered, the whole body was swallowed.
When called lovingly, it stood right in front (of me).
When put in to contemplation, it disappeared, Guhesvara!


COMMENTARY

In this Vachana, Allama Prabhu offers suggestions for cultivating the human mind to reach the divine. The mind is compared to a monkey  whose nature is to jump from branch to branch on a tree constantly. The monkey grabs a fruit from the branch it is on and starts eating it. Even before finishing the fruit, it sees another fruit on the next branch. It throws the half eaten fruit  away and grabs the next fruit. The monkey does not even have the patience to enjoy the fruit at hand.  So is the human mind. It starts on one thought and jumps to other thoughts as they occur. The sense organs keep stimulating the mind constantly and the mind keeps reacting to the stimuli.  Allama Prabhu says ‘when a hand is offered, the whole body is swallowed’ meaning that when we yield to the simplest of the vagaries of the mind we get consumed completely.  We stay tangled in the ropes of the material world. We continue to make the web more complex and binding rather than trying to get out of it. We always stay in an unsatisfied state. Even when we are enjoying a pleasure offered by our sense organs and mind, we will be looking for a more pleasurable event or activity. We thus become slaves of our senses and mind.   Allama Prabhu offers a simple first step and says if we can call the mind lovingly, it comes and stands before us ready to serve. Calling the mind lovingly corresponds to understanding the nature of the mind and utilizing it to help us on the spiritual  path, meaning minimizing  wants and needs,  not yielding to the desires posed by the wandering mind and concentrating on the divine. Allama Prabhu  offers  putting the mind in to contemplation as the next step. When the mind is stabilized and turned inwards ‘it disappears’   meaning that we reach the divine within us. We have called this state as achieving null or shoonya sampaadane, i.e. merging with Him.

Let us start understanding, loving and contemplating to reach the divine!


KANNADA COMMENTARY

ಮನವೆಂಬ ಮರ್ಕಟನ ಸ್ವಭಾವವನ್ನು ವಿವರಿಸುತ್ತ ಅದನ್ನು ಐಕ್ಯ ಸ್ಥಿತಿಗೆ ಒಯ್ಯುವ ಪರಿಯನ್ನು ಸರಳವಾಗಿ ತಿಳಿಸುತ್ತಿದ್ದಾರೆ ಅಲ್ಲಮ ಪ್ರಭುಗಳು. ಮನಸ್ಸನ್ನು ಗಮನಿಸಿದವರಿಗೆಲ್ಲ ಅದು ಕೋಡಗದಂತೆ ಎನ್ನುವುದು ತಿಳಿದೇ ಇರುತ್ತದೆ.  ಮಂಗ ಹಣ್ಣು ಕಾಯಿಗಳ ಆಸೆಗಾಗಿ ಕೊಂಬೆಯಿಂದ ಕೊಂಬೆಗೆ  ಹಾರುತ್ತದೆ. ಹಣ್ಣನ್ನು ನೋಡಿ ತಿನ್ನುವ ಆಸೆಗೆ ಒಳಗಾಗಿ  ಕೊಂಬೆಯ ಹಣ್ಣಿಗೆ ಹಾರುತ್ತದೆ. ಅದನ್ನು ಶಾಂತಿಯಿಂದ ಪೂರ್ತಿಯಾಗಿ ತಿನ್ನುವುದೂ ಇಲ್ಲ. ಒಂದು ಹಣ್ಣು  ತಿನ್ನುವಾಗಲೂ   ಕೂಡ   ಅದರ  ಕಣ್ಣು ಆಗಲೆ ಇನ್ನೊಂದು ಹಣ್ಣಿನ ಮೇಲಿರುತ್ತದೆ. ಅರ್ಧಂಬರ್ಧ ತಿಂದು ಅದನ್ನು ಎಸೆದು ಇನ್ನೊಂದಕ್ಕೆ ಹಾರುತ್ತದೆ. ಇದು ಮಂಗನ ಸ್ವಭಾವ. ಒಂದೆಡೆ ನಿಲ್ಲುವುದಿಲ್ಲ ಕೋಡಗ. ಮನಸ್ಸಿನ ಪರಿಸ್ಥಿತಿಯೂ ಸಹ ಇದೇ ಆಗಿದೆ. ಮನಸ್ಸು ನಿಂತಲ್ಲಿ ನಿಲ್ಲುವುದಿಲ್ಲ. ಅದು ಸುಲಭವಾಗಿ ತೃಪ್ತಗೊಳ್ಳುವುದಿಲ್ಲ. ಪ್ರತಿಸಲವೂ ಹೊಸದನ್ನು ಅರಸುತ್ತಲೇ ಇರುತ್ತದೆ. ತಾನೇ ಇಂದ್ರಿಯಗಳ ಆಕರ್ಷಣೆಗೆ ಒಳಗಾಗುತ್ತದೆ.  ಒಂದು ಸುಖವನ್ನು ಅನುಭವಿಸುತ್ತಿರುವಾಗಲೇ ಅದಕ್ಕೆ ಇನ್ನೊಂದರ ಮೇಲೆ ಕಣ್ಣು.  ಹೀಗಿರುವಾಗ ಅದಕ್ಕೇನಾದರೂ ಸ್ವಲ್ಪ ಹೆಚ್ಚಿನ ರುಚಿಯನ್ನು ತೋರಿಸಿದರೆ ಅಥವಾ ನಾವಾಗಿ ಇಂದ್ರಿಯ ವಿಷಯಸುಖದ ರುಚಿಯನ್ನು ತೋರಿಸಿದರೆ ಅದು ಇಡೀ ವಿಷಯ ಪ್ರಪಂಚವನ್ನೇ ನುಂಗಿಹಾಕುತ್ತದೆ. ಇದು ಸೋಜಿಗದ ವಿಷಯ. ಇದನ್ನೇ ಅಲ್ಲಮರು,  “ಕೈಯ ನೀಡಲು ಮೈಯೆಲ್ಲವ ನುಂಗಿತ್ತು” ಎಂದು ಹೇಳುತ್ತಾರೆ. ಎನೋ ಪಾಪ ಎಂದು ಇಂದ್ರಿಯ ಸುಖಕ್ಕೆ ಒಂದವಕಾಶ ಮಾಡಿ ಕೊಟ್ಟಲ್ಲಿ ಅದು ಇಡೀ ಮೈಯನ್ನೇ ನುಂಗುತ್ತದೆ. ಈ ವಿಷಯದಲ್ಲಿ ಅದರ ಶಕ್ತಿ ಅಗಾಧವಾದದ್ದು.  ಅಂದರೆ ಅದು ಇಂದ್ರಿಯಗಳನ್ನು ತೃಪ್ತ ಗೊಳಿಸುವುದರಲ್ಲಿ ಪೂರ್ತಿಯಾಗಿ ಮುಳುಗಿ ಹೋಗುತ್ತದೆ. ಅದರ ಗಮನ ಬೇರೆ ಇನ್ನಾವುದರ ಕಡಗೂ ಹರಿಯುವುದಿಲ್ಲ. ಆದರೆ ಅದು ಎಂದಿಗೂ ತೃಪ್ತವಾಗುವುದಿಲ್ಲ. ಅಂದರೆ ವ್ಯಕ್ತಿಯು ಸಂಸಾರದಲ್ಲಿ ಪೂರ್ತಿಯಾಗಿ ಮುಳುಗಿಹೋಗುತ್ತಾನೆ,  ಘಾಸಿಗೊಳ್ಳುತ್ತಾನೆ.  ಅಂದರೆ ಮನಸ್ಸನ್ನು ಅದರ ಇಷ್ಟದಂತೆ ಸ್ವಲ್ಪ ಹರಿಯ ಬಿಟ್ಟರೆ ಸಾಕು ಆನಂದವೆಂಬುದನ್ನು ಕಳೆದುಕೊಂಡಂತೆಯೆ. ವ್ಯಕ್ತಿಯೇ ಅದರ ದಾಸನಾಗುತ್ತಾನೆ.  ಆದರೆ ಅದೇ ಮನಸ್ಸನ್ನು “ಒಯ್ಯನೆ ಕರೆದಡೆ”-  ಪ್ರೀತಿಯಿಂದ ಸಂತೈಸಿದರೆ  ಅದು ನಾವು ಹೇಳಿದಂತೆ ಕೇಳುತ್ತದೆ. ನಮ್ಮ ಮುಂದೆ ದಾಸನಂತೆ ಬಂದು ನಿಲ್ಲುತ್ತದೆ.  ಅದನ್ನು ನಮ್ಮಿಷ್ಟಬಂದೆಡೆಗೆ ತಿರುಗಿಸಬಹುದು. ಇಷ್ಟು ಸಾಕಲ್ಲವೆ ನಮಗೆ. ಆದರೆ ಅಲ್ಲಮರು ಇದಕ್ಕಿಂತ  ಎತ್ತರದ ದಾರಿ ತೋರಿಸುತ್ತಾರೆ. “ಮುಯ್ಯಾಂತಡೆ ಬಯಲಾಯಿತ್ತು” ಎನ್ನುತ್ತಾರೆ.  ಸಂಯಮದಿಂದ ಮನಸ್ಸನ್ನು ಚಿಂತನೆಗೆ ಹಚ್ಚಿದರೆ ಅದು ಬಯಲಾಗುತ್ತದೆ. ಅದನ್ನು ಅದರಲ್ಲಿಯೇ ಹುದುಗಿರುವ ಅತ್ಮದ ಚಿಂತನೆಗೆ ತೊಡಗಿಸಿದರೆ ಮನಸ್ಸು ಅದರಲ್ಲಿಯೇ ಮಗ್ನವಾಗುತ್ತದೆ. ಅದರ ಚಂಚಲತೆ ಮಾಯವಾಗಿ   ಮನಸ್ಸೇ ಇಲ್ಲಾಗುತ್ತದೆ.  ಅದು ಬಯಲಾಗುತ್ತದೆ. ಕ್ಷುಲ್ಲಕವಾದ ಇಂದ್ರಿಯ ಸುಖದಿಂದ ಎತ್ತಿ ಮನಸ್ಸನ್ನು ಆತ್ಮನ ಚಿಂತನೆಗೆ ಹಚ್ಚುವ ಕೆಲಸ  ನಾವು ಮಾಡಬೇಕಾದದ್ದು.

ಇಂದ್ರಿಯಗಳಂಬ ಕೊಂಬೆಗಳಿಗೆ ಹಾರಾಡುವ ಮನಸ್ಸನ್ನು ಸಂಯಮದಿಂದ ಒಲಿಸಿಕೊಂಡು ಆತ್ಮ ಚಿಂತನೆಗೆ ತೊಡಗಿಸಬೇಕು, ಎಂದು ಹೇಳುತ್ತಾರೆ ಅಲ್ಲಮಪ್ರಭುಗಳು.

Friday, June 8, 2012

Vachana 93: Bhoomiya katinawanu - Inherent Potential

ಭೂಮಿಯ ಕಠಿಣವನು ಆಕಾಶದ ಮೃದುವನು
ತಿಳಿವ ಗಮನ ಅಲ್ಲಿಯೇ ನಿಂದಿತ್ತು
ಉದಕದೊಳಗೆ ಹುಟ್ಟಿದ  ತೃಷ್ಣೆ ಉದಕವನರಸಿತ್ತಲ್ಲಾ!
ಒಳಗೆ ಸತ್ತು ಹೊರಗೆ ಆಡುತ್ತದೆ;
ಗುಹೇಶ್ವರ ನಿಬ್ಬೆರಗಾಗಿ ಅಲ್ಲಿಯೇ ನಿಂದನು

TRANSLITERATION

bhUmiya  kaThiNavanu  aakaashada mRuduvanu
tiLiva gamana alliyE niMdittu
udakadoLage  huTTida  tRuShNe  udakavanarasittallaa!
oLage sattu horage aaDuttade;
guhEshvara nibberagaagi alliyE niMdanu

CLCK HERE TO READ-ALONG:


TRANSLATION (WORDS)

bhUmiya (of the earth) kaThiNavanu (the hard quality,arduous)   aakaashada (of the sky) mRuduvanu (softness)
tiLiva(understanding) gamana(attention) alliyE(right there) niMdittu (got stuck)
udakadoLage(in the waters) huTTida  (taken birth)tRuShNe (thirst) udakavanarasittallaa!( alas! searches for water)
oLage(inside)  sattu (dead) horage(outside) aaDuttade;(is playing)
guhEshvara(Guheshvara)  nibberagaagi (being aghast)alliyE niMdanu (stood right there)

TRANSLATION

Though capable of understanding the hardness of the Earth and softness of the sky, the attention got stuck right there (short of it).
Alas! The thirst that took birth in the water, searches for the water!
Dead inside, but playing outside;
Being aghast, Guhesvara stood right there.

COMMENTARY

We have said that the ultimate goal of all individual souls (Anga, Jiva, Jivaatma) is to merge with the divine (Linga, Isvara, Paramaatma), i.e. linga-anga saamarasya or reaching that nothingness (shoonya sampaadane). The jiva is inherently capable of reaching Isvara. But, it gets entangled in the affairs of the material world (Maya) and fails to reach that ultimate state.  In this Vachana, Allama Prabhu wonders about this sorry state of the individual. The individual is capable of understanding the hardness (gross) of the Earth and the softness (subtle) of the sky, meaning that the capability is there to understand the Universe and hence the divine. But, the attention of the individual is stuck at the material world and is entangled in its affairs. The thirst born out of water is looking for water, meaning that having born in this mundane world, the individual is seeking the mundane world. He is not getting past the influences of the mundane world. The inherent capability to seek and reach the divine is dead inside, but behaves as an accomplished one outside.  Observing this state of the individual, even Guhesvara is aghast.

The message of the Vachana then is that every individual is inherently capable of reaching the divine. He/she should recognize that inherent capability, overcome the distracting influences and strive to reach that goal.  As Napoleon Hill says in his book ‘Think and Grow Rich’, ‘if you can think of it, you can achieve it!’ 



Let us recognize our inherent potential and with it, reach the Ultimate!

KANNADA COMMENTARY

ಇಲ್ಲಿ ಅಲ್ಲಮ ಪ್ರಭುಗಳು ಜೀವಾತ್ಮನ ರೀತಿಯನ್ನು ಹೇಳುತ್ತಿದ್ದಾರೆ. ಜೀವಾತ್ಮ ಭೂಮಿಯ ಕಾಠಿಣ್ಯವನ್ನು ಮತ್ತು ಆಕಾಶದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವ  ಸಾಮರ್ಥ್ಯವನ್ನು ಹೊಂದಿದೆ. ಅಂದರೆ ವಿಶ್ವದ ಆಳ ಮತ್ತು ವಿಸ್ತಾರಗಳನ್ನು ಅದು ಅರಿತುಕೊಳ್ಳಬಲ್ಲುದು. ಭೂಮಿ, ಜಲ, ವಾಯು, ತೇಜ ಮತ್ತು ಆಕಾಶ ಇವುಗಳನ್ನು ಅರಿತು ವಿಶ್ವವನ್ನು ಅರಿಯಬಲ್ಲುದು. ಸ್ಥೂಲವಂತೂ ಕಣ್ಣಿಗೆ ಕಾಣುತ್ತದೆ. ಆದರೆ ಅದರ ಹಿಂದೆ ಇರುವ ಸೂಕ್ಷ್ಮವನ್ನು ಅದು ಅರಿಯಬಲ್ಲುದು. ಅದರೆಡೆಗೆ ಗಮನ ಕೊಡಬೇಕು ಅಷ್ಟೆ. ಆಳವನ್ನು ಹೊಕ್ಕು ನೋಡಬೇಕು. ಆದರೆ ಜೀವಾತ್ಮನ ಗಮನ ಆ ದಿಕ್ಕಿನಲ್ಲಿ  ಹೋಗದೆ ನಿಂತಲ್ಲಿಯೇ ನಿಂತುಬಿಟ್ಟಿದೆ.ಅಂದರೆ ಅದು ವಿಷಯ ಭೋಗಗಳಲ್ಲಿ ನಿಂತುಬಿಟ್ಟಿದೆ. ಅದರ ಈ ಸ್ಥಿತಿಯನ್ನು ನೋಡಿ ಅಲ್ಲಮರು “ಉದಕದೊಳಗೆ ಹುಟ್ಟಿ ತೃಷ್ಣೆ ಉದಕವನ್ನರಸಿತ್ತಲ್ಲಾ” ಎಂದು ಅಚ್ಚರಿಪಡುತ್ತಾರೆ. ತೃಷ್ಣೆಯು  ಉದಕದಲ್ಲಿ ಎಂದರೆ ಸಂಸಾರದಲ್ಲಿ ಹುಟ್ಟಿ ಉದಕವನ್ನು ಎಂದರೆ ಸಂಸಾರವನ್ನೇ ಅರಸುತ್ತದೆ, ಸಂಸಾರದಲ್ಲಿಯ ವಿಷಯವಿಲಾಸವನ್ನೇ ಅರಸುತ್ತದೆ. ಅದರ ತೃಷ್ಣೆ ತೀರುವುದೇ ಇಲ್ಲ. ಆ ತೃಷ್ಣೆಯನ್ನು ಪೂರ್ತಿಗೊಳಿಸುವ ಅಸೆಯಿಂದ ಅಲ್ಲಿಯೇ ನಿಂತುಬಿಡುತ್ತದೆ ಜೀವ. ಅದು ತನ್ನ ಗಮನವನ್ನು ಬೇರೆಡೆಗೆ ಹರಿಸುವುದೂ ಇಲ್ಲ. ಸದಾ ವಿಷಯ ಸುಖದಲ್ಲಿ ಮುಳುಗಿರುವುದರಿಂದ ಅದು ಒಳಗೆ ಸತ್ತುಹೋಗಿದೆ. ಹೊರಗೆ ಕಂಡು ಬರುವ ಇಂದ್ರಿಯ ಸುಖದ ಬೆನ್ನು ಹತ್ತಿ ಹೋಗುತ್ತದೆ. ಸೂಕ್ಷ್ಮವಾದ ತನ್ನ ಒಳಗನ್ನು ಮರೆತಿದೆ.  ಅಂದರೆ ಅದು ತನ್ನ ನಿಜವಾದ ಸ್ವರೂಪವನ್ನು ಮರೆತಿದೆ. ಆದ್ದರಿಂದ ಒಳಗೆ ಅದು ಸತ್ತು ಹೋಗಿದೆ. ಅಲ್ಲಿ ಕೇವಲ ಅಜ್ಞಾನವಿದೆ.ಹೊರಗೆ ಮಾತ್ರ ಆಡುತ್ತಿರುತ್ತದೆ. ಹೊರಗೆ  ತಾನು ಜ್ಞಾನಿಯಂತೆ ನಡೆದುಕೊಳ್ಳುತ್ತದೆ.  ಅದರ ಈ ಸ್ಥಿತಿಯನ್ನು ಕಂಡು ಗುಹೇಶ್ವರನು ಬೆರಗುಗೊಂಡು ಸಾಕ್ಷಿಯಾಗಿ ಅಲ್ಲಿಯೇ ನಿಂತಿದ್ದಾನೆ ಎನ್ನುತ್ತಾರೆ ಅಲ್ಲಮರು.

Friday, June 1, 2012

Vachana 92: aksharava ballevendu - Bookish Knowledge


ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯಾ
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ
ಆಗುಹೋಗೆಂಬುದನರಿಯರು!
ಭಕ್ತಿಯನರಿಯರು, ಯುಕ್ತಿಯನರಿಯರು, ಮುಕ್ತಿಯನರಿಯರು
ಮತ್ತೂ ವಾದಕೆಳಿಸುವರು ಹೋದರು
ಗುಹೇಶ್ವರಾ, ಸಲೆ ಕೊಂಡ ಮಾರಿಂಗೆ!

TRANSLITERATION

akSharava balleveMdu ahaMkaaraveDegoMDu lekkagoLLarayyaa
guru hiriyaru tOrida upadEshadiMda
vaagadvaitava kalitu vaadiparallade
aaguhOgeMbudanariyaru!
Bhaktiyanariyaru, yuktiyanariyaru, mutiyanariyaru
mattU vaadakeLisuvaru hodaru
guhEshvaraa. Sele koMDa maariMge!

CLICK HERE TO READ-ALONG:
http://youtu.be/k0USXSAKEnU

TRANSLATION (WORDS)

akSharava (scriptures) balleveMdu (thinking I know) ahaMkaaraveDegoMDu (being proud) lekkagoLLarayyaa (don’t respect)
guru (teacher)hiriyaru (seniors, those who are knowledgeable) tOrida(shown, taught) upadEshadiMda( from the teachings)
vaagadvaitava (nonduality only in words) kalitu (learning) vaadiparallade (they argue, but)
aaguhOgeMbudanariyaru! (they don’t know what is actually happening)
Bhaktiyanariyaru,(they don’t know devotion) yuktiyanariyaru,(they don’t know the way) muktiyanariyaru (they don’t know the freedom)
mattU (even then) vaadakeLisuvaru (they get into argument, discussion) hodaru (went)
guhEshvaraa. (Guheshvara) Sele koMDa maariMge! (they sold the material at the cost price and hence no profit)

TRANSLATION

Thinking that they know the scriptures, they become proud and do not respect others!
Having learnt the non-duality (concept) only in words from the teachings of the Guru and knowledgeable elders,
they argue, but they don’t really know what is actually happening!
They don’t know devotion, they don’t know the way, they don’t know the freedom (Mukti),
But they get into arguments, Oh! Guhesvara, they sell the material at the cost price (and hence no profit)!


COMMENTARY

In this Vachana, Allama Prabhu comments on individuals who read scriptures just for reading sake and do not actually understand them and do not use the knowledge from these scriptures in progressing on the spiritual path. These individuals gain the knowledge through reading, through interactions with the teacher and knowledgeable elders. But, they stop at becoming proud of their knowledge and start disrespecting others. They deliver lectures on scriptures, but do not utilize the knowledge in reaching the divine. They grasp the concepts of anga (Jivatma), linga (Divine, paramatma) and the merger of the two, only in words and not in practice. They do not know the technique of getting away from the materialism, neither they have the devotion to take them towards the God, nor they can even imagine the state of bliss at the merger of anga with linga (Linga anga saamarasya). Allama Prabhu says that such individuals don’t know what devotion is, they don’t know the way to reach the God, and they don’t know the true meaning of merger with the God (mukti). But, they are fond of arguing and discussions. Allama Prabhu compares these individuals to merchants selling their goods at cost price, with no profits! Truly, they do not know the price of the goods (knowledge) they possess!

Let us internalize the knowledge gained!

KANNADA COMMENTARY

ಈ ವಚನದಲ್ಲಿ ಅಲ್ಲಮಪ್ರಭುಗಳು ಶಾಸ್ತ್ರಗಳನ್ನು ಕೇವಲ ಓದಿಗಾಗಿ ಓದಿದವರು ಹೇಗೆ ನಡೆದುಕೊಳ್ಳುತ್ತಾರೆ ಮತ್ತು ಅವರ ಗತಿ ಏನಾಗುತ್ತದೆ ಎಂಬುದನ್ನು ಹೇಳುತ್ತಿದ್ದಾರೆ. “ಅಕ್ಷರ” ಎಂಬ ಪದವು ಶಾಸ್ತ್ರಗಳನ್ನು ಪ್ರತಿಪಾದಿಸುತ್ತದೆ. ಶಾಸ್ತ್ರಗಳನ್ನು ಓದಿ ವ್ಯಕ್ತಿಯು ಅಹಂಕಾರಗೊಳ್ಳುತ್ತಾನೆ. ಶಾಸ್ತ್ರಗಳ ತಿಳಿವಳಿಕೆಯು ಆತನಲ್ಲಿ ತಾನು ಎಲ್ಲವನ್ನು ಬಲ್ಲವ, ತಾನೇ ಶ್ರೇಷ್ಠ, ಎಂಬ ಭಾವವನ್ನುಂಟುಮಾದುತ್ತದೆ. ಆ ಶಾಸ್ತ್ರಗಳ ಆಶಯದ ಕಡೆಗೆ ಆತನ ಗಮನ ಹೋಗುವುದಿಲ್ಲ. ಕೇವಲ ಓದಿನಿಂದ ಗಳಿಸಿದ ಜ್ಞಾನದ ಬಗ್ಗೆ ಉಂಟಾದ ಅಹಂಕಾರವು ಆತನು ಯಾರನ್ನೂ ಲೆಕ್ಕಿಸದಂತೆ ಮಾಡುತ್ತದೆ. ಇತರರೇನು ಮಹಾ ಎನ್ನುವ ಭಾವಕ್ಕೆಡೆ ಮಾಡಿಕೊಡುತ್ತದೆ. ತನಗೆ ಉಪದೇಶಮಾಡಿದ ಗುರು ಹಿರಿಯರಿಂದ ತನಗೆ ದೊರೆತ ಕೇವಲ ಮಾತಿನ, ಶಾಬ್ದಿಕವಾದ ಅದ್ವೈತವನ್ನು ಕಲಿತು ವಾದಮಾಡುತ್ತಾನೆಯೆ ಹೊರತು ನಿಜವಾದ ಜ್ಞಾನವನ್ನು ಅರಿಯುವುದಿಲ್ಲ. ಬದುಕಿನ ಆಗುಹೋಗುಗಳನ್ನು, ಅವುಗಳ ನಿಜವಾದ ಸ್ಥಾನವನ್ನು ಅರಿಯುವುದಿಲ್ಲ. ಸತ್ಯವನ್ನು ಅರಿಯುವುದರಲ್ಲಿ ಆತನಿಗೆ ಆಸಕ್ತಿ ಕಂಡು ಬರುವುದಿಲ್ಲ. ಶಾಸ್ತ್ರಗಳನ್ನು ಮೀರಿ ಹೊಗುವುದು ಮುಖ್ಯ. ಆದರೆ ಮನಸ್ಸು ಅಲ್ಲಿಯೇ ನಿಂತುಬಿಡುತ್ತದೆ. ತನಗೆ ಇತರರಿಂದ ದೊರೆತ ಜ್ಞಾನದಿಂದ ಅಹಂಕಾರಗೊಳ್ಳುತ್ತದೆ. ತಾನಾಗಿಯೇ ಏನನ್ನೂ ಕಂಡುಕೊಳ್ಳುವುದಿಲ್ಲ. ನಿಜವಾದ ಜ್ಞಾನವನ್ನು ಯಾರೂ ಕೊಡಲಾರರು. ಅದನ್ನು ಪ್ರತಿಯೊಬ್ಬನು ತಾನಾಗಿಯೇ ಕಂಡುಕೊಳ್ಳಬೇಕು. ಅಹಂಕಾರಕ್ಕೂ ಅದಕ್ಕೂ ಬಲು ದೂರ. ನಿಜವಾದ ಜ್ಞಾನವು ಅದ್ವೈತ ಭಾವವನ್ನುಂಟುಮಾಡುತ್ತದೆ. ಅದ್ವೈತ ಜ್ಞಾನದಿಂದ ವ್ಯಕ್ತಿಯು ವಿನೀತನಾಗುತ್ತಾನೆ. ಅಲ್ಲಿ ಅಹಂಕಾರಕ್ಕೆ ಸ್ಥಾನವೇ ಇರುವುದಿಲ್ಲ. ಆದರೆ ಶಾಸ್ತ್ರಗಳ ಜ್ಞಾನವು ಅದರ ಬಗ್ಗೆ ಒಣ ಹಮ್ಮು ಹುಟ್ಟುವಂತೆ. ಅಂದರೆ ಕೇವಲ ಮಾತುಗಳಲ್ಲಿ ಅಥವಾ ತರ್ಕಬದ್ಧವಾಗಿ ಅದನ್ನು ಮಂಡಿಸಲು ಕಲಿತು ಇತರರೊಂದಿಗೆ ವಾದಕ್ಕಿಳಿಯುತ್ತಾನೆ ವ್ಯಕ್ತಿ. ದೇವರ ಬಗ್ಗೆ ಭಕ್ತಿಯಾಗಲಿ, ಸಂಸಾರದ ಜಂಜಾಟದಿಂದ ಬಿಡಿಸಿಕೊಳ್ಳುವ ಯುಕ್ತಿಯಾಗಲಿ ಅಥವಾ ನಿಜವಾದ ಮುಕ್ತಿಯಾಗಲಿ ಅವನಿಗೆ ತಿಳಿದಿರುವುದಿಲ್ಲ. ಆದರೆ ಅವುಗಳ ಬಗ್ಗೆ ವಾದಮಾಡುವುದರಲ್ಲಿ ಅವನಿಗೆ ಆಸಕ್ತಿ. ಇಂತಹವನು ತಾನು ಕೊಂಡ ಸರಕನ್ನು ಕೊಂಡ ಬೆಲೆಗೆ ಮಾರಿ ಹೋಗುವ ವ್ಯಾಪರಿಯಂತೆ. ಎಂದರೆ ಅವನಿಗೆ ಯಾವ ಲಾಭವೂ ಆಗಲಿಲ್ಲ. ಅದರ ಬದಲಿಗೆ ಸರಕನ್ನು ಹೊತ್ತು ತಿರುಗಿದ ಆಯಾಸ ಮಾತ್ರ ಉಳಿಯುತ್ತದೆ. ಅಂದರೆ ಗುರು ಹಿರಿಯರಿಂದ ಪಡೆದ ಜ್ಞಾನವನ್ನು ತಾನು ಪಡೆದು ವೃಥಾ ವಾದಮಾಡಿದ ಆಯಾಸವನ್ನುಳಿದು ಯಾವ ಲಾಭವೂ ಆತನಿಗೆ ಆಗುವುದಿಲ್ಲ. ಅಲ್ಲಿ ಪಡೆದುದನ್ನು ಇಲ್ಲಿ ಒಪ್ಪಿಸುತ್ತಾನೆ ಅಷ್ಟೆ. ಆದರೆ ಶಾಸ್ತ್ರಗಳ ಉದ್ದೇಶವೇ ಬೇರೆ. ಅವುಗಳ ಅಧ್ಯಯನದ ಮೂಲಕ ಅವು ತೋರುವ ಮಾರ್ಗದಲ್ಲಿ ಮುಂದುವರಿದು ಸತ್ಯವನ್ನು ಕಂಡುಕೊಳ್ಳುವುದು. ಅವಗಳು ಕೇವಲ ದಾರಿ ತೋರುತ್ತವೆ. ಅದನ್ನು ಅರಿತು ಸ್ವತಃ ಸತ್ಯವನ್ನು ಕಂಡುಕೊಳ್ಳುವುದು ಪ್ರತಿಯೊಬ್ಬನು ಮಾಡಬೇಕಾದ ಕೆಲಸ.