ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯಾ
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ
ಆಗುಹೋಗೆಂಬುದನರಿಯರು!
ಭಕ್ತಿಯನರಿಯರು, ಯುಕ್ತಿಯನರಿಯರು, ಮುಕ್ತಿಯನರಿಯರು
ಮತ್ತೂ ವಾದಕೆಳಿಸುವರು ಹೋದರು
ಗುಹೇಶ್ವರಾ, ಸಲೆ ಕೊಂಡ ಮಾರಿಂಗೆ!
TRANSLITERATION
akSharava balleveMdu ahaMkaaraveDegoMDu lekkagoLLarayyaa
guru hiriyaru tOrida upadEshadiMda
vaagadvaitava kalitu vaadiparallade
aaguhOgeMbudanariyaru!
Bhaktiyanariyaru, yuktiyanariyaru, mutiyanariyaru
mattU vaadakeLisuvaru hodaru
guhEshvaraa. Sele koMDa maariMge!
CLICK HERE TO READ-ALONG:
http://youtu.be/k0USXSAKEnU
TRANSLATION (WORDS)
akSharava (scriptures) balleveMdu (thinking I know) ahaMkaaraveDegoMDu (being proud) lekkagoLLarayyaa (don’t respect)
guru (teacher)hiriyaru (seniors, those who are knowledgeable) tOrida(shown, taught) upadEshadiMda( from the teachings)
vaagadvaitava (nonduality only in words) kalitu (learning) vaadiparallade (they argue, but)
aaguhOgeMbudanariyaru! (they don’t know what is actually happening)
Bhaktiyanariyaru,(they don’t know devotion) yuktiyanariyaru,(they don’t know the way) muktiyanariyaru (they don’t know the freedom)
mattU (even then) vaadakeLisuvaru (they get into argument, discussion) hodaru (went)
guhEshvaraa. (Guheshvara) Sele koMDa maariMge! (they sold the material at the cost price and hence no profit)
TRANSLATION
Thinking that they know the scriptures, they become proud and do not respect others!
Having learnt the non-duality (concept) only in words from the teachings of the Guru and knowledgeable elders,
they argue, but they don’t really know what is actually happening!
They don’t know devotion, they don’t know the way, they don’t know the freedom (Mukti),
But they get into arguments, Oh! Guhesvara, they sell the material at the cost price (and hence no profit)!
COMMENTARY
In this Vachana, Allama Prabhu comments on individuals who read scriptures just for reading sake and do not actually understand them and do not use the knowledge from these scriptures in progressing on the spiritual path. These individuals gain the knowledge through reading, through interactions with the teacher and knowledgeable elders. But, they stop at becoming proud of their knowledge and start disrespecting others. They deliver lectures on scriptures, but do not utilize the knowledge in reaching the divine. They grasp the concepts of anga (Jivatma), linga (Divine, paramatma) and the merger of the two, only in words and not in practice. They do not know the technique of getting away from the materialism, neither they have the devotion to take them towards the God, nor they can even imagine the state of bliss at the merger of anga with linga (Linga anga saamarasya). Allama Prabhu says that such individuals don’t know what devotion is, they don’t know the way to reach the God, and they don’t know the true meaning of merger with the God (mukti). But, they are fond of arguing and discussions. Allama Prabhu compares these individuals to merchants selling their goods at cost price, with no profits! Truly, they do not know the price of the goods (knowledge) they possess!
Let us internalize the knowledge gained!
KANNADA COMMENTARY
ಈ ವಚನದಲ್ಲಿ ಅಲ್ಲಮಪ್ರಭುಗಳು ಶಾಸ್ತ್ರಗಳನ್ನು ಕೇವಲ ಓದಿಗಾಗಿ ಓದಿದವರು ಹೇಗೆ ನಡೆದುಕೊಳ್ಳುತ್ತಾರೆ ಮತ್ತು ಅವರ ಗತಿ ಏನಾಗುತ್ತದೆ ಎಂಬುದನ್ನು ಹೇಳುತ್ತಿದ್ದಾರೆ. “ಅಕ್ಷರ” ಎಂಬ ಪದವು ಶಾಸ್ತ್ರಗಳನ್ನು ಪ್ರತಿಪಾದಿಸುತ್ತದೆ. ಶಾಸ್ತ್ರಗಳನ್ನು ಓದಿ ವ್ಯಕ್ತಿಯು ಅಹಂಕಾರಗೊಳ್ಳುತ್ತಾನೆ. ಶಾಸ್ತ್ರಗಳ ತಿಳಿವಳಿಕೆಯು ಆತನಲ್ಲಿ ತಾನು ಎಲ್ಲವನ್ನು ಬಲ್ಲವ, ತಾನೇ ಶ್ರೇಷ್ಠ, ಎಂಬ ಭಾವವನ್ನುಂಟುಮಾದುತ್ತದೆ. ಆ ಶಾಸ್ತ್ರಗಳ ಆಶಯದ ಕಡೆಗೆ ಆತನ ಗಮನ ಹೋಗುವುದಿಲ್ಲ. ಕೇವಲ ಓದಿನಿಂದ ಗಳಿಸಿದ ಜ್ಞಾನದ ಬಗ್ಗೆ ಉಂಟಾದ ಅಹಂಕಾರವು ಆತನು ಯಾರನ್ನೂ ಲೆಕ್ಕಿಸದಂತೆ ಮಾಡುತ್ತದೆ. ಇತರರೇನು ಮಹಾ ಎನ್ನುವ ಭಾವಕ್ಕೆಡೆ ಮಾಡಿಕೊಡುತ್ತದೆ. ತನಗೆ ಉಪದೇಶಮಾಡಿದ ಗುರು ಹಿರಿಯರಿಂದ ತನಗೆ ದೊರೆತ ಕೇವಲ ಮಾತಿನ, ಶಾಬ್ದಿಕವಾದ ಅದ್ವೈತವನ್ನು ಕಲಿತು ವಾದಮಾಡುತ್ತಾನೆಯೆ ಹೊರತು ನಿಜವಾದ ಜ್ಞಾನವನ್ನು ಅರಿಯುವುದಿಲ್ಲ. ಬದುಕಿನ ಆಗುಹೋಗುಗಳನ್ನು, ಅವುಗಳ ನಿಜವಾದ ಸ್ಥಾನವನ್ನು ಅರಿಯುವುದಿಲ್ಲ. ಸತ್ಯವನ್ನು ಅರಿಯುವುದರಲ್ಲಿ ಆತನಿಗೆ ಆಸಕ್ತಿ ಕಂಡು ಬರುವುದಿಲ್ಲ. ಶಾಸ್ತ್ರಗಳನ್ನು ಮೀರಿ ಹೊಗುವುದು ಮುಖ್ಯ. ಆದರೆ ಮನಸ್ಸು ಅಲ್ಲಿಯೇ ನಿಂತುಬಿಡುತ್ತದೆ. ತನಗೆ ಇತರರಿಂದ ದೊರೆತ ಜ್ಞಾನದಿಂದ ಅಹಂಕಾರಗೊಳ್ಳುತ್ತದೆ. ತಾನಾಗಿಯೇ ಏನನ್ನೂ ಕಂಡುಕೊಳ್ಳುವುದಿಲ್ಲ. ನಿಜವಾದ ಜ್ಞಾನವನ್ನು ಯಾರೂ ಕೊಡಲಾರರು. ಅದನ್ನು ಪ್ರತಿಯೊಬ್ಬನು ತಾನಾಗಿಯೇ ಕಂಡುಕೊಳ್ಳಬೇಕು. ಅಹಂಕಾರಕ್ಕೂ ಅದಕ್ಕೂ ಬಲು ದೂರ. ನಿಜವಾದ ಜ್ಞಾನವು ಅದ್ವೈತ ಭಾವವನ್ನುಂಟುಮಾಡುತ್ತದೆ. ಅದ್ವೈತ ಜ್ಞಾನದಿಂದ ವ್ಯಕ್ತಿಯು ವಿನೀತನಾಗುತ್ತಾನೆ. ಅಲ್ಲಿ ಅಹಂಕಾರಕ್ಕೆ ಸ್ಥಾನವೇ ಇರುವುದಿಲ್ಲ. ಆದರೆ ಶಾಸ್ತ್ರಗಳ ಜ್ಞಾನವು ಅದರ ಬಗ್ಗೆ ಒಣ ಹಮ್ಮು ಹುಟ್ಟುವಂತೆ. ಅಂದರೆ ಕೇವಲ ಮಾತುಗಳಲ್ಲಿ ಅಥವಾ ತರ್ಕಬದ್ಧವಾಗಿ ಅದನ್ನು ಮಂಡಿಸಲು ಕಲಿತು ಇತರರೊಂದಿಗೆ ವಾದಕ್ಕಿಳಿಯುತ್ತಾನೆ ವ್ಯಕ್ತಿ. ದೇವರ ಬಗ್ಗೆ ಭಕ್ತಿಯಾಗಲಿ, ಸಂಸಾರದ ಜಂಜಾಟದಿಂದ ಬಿಡಿಸಿಕೊಳ್ಳುವ ಯುಕ್ತಿಯಾಗಲಿ ಅಥವಾ ನಿಜವಾದ ಮುಕ್ತಿಯಾಗಲಿ ಅವನಿಗೆ ತಿಳಿದಿರುವುದಿಲ್ಲ. ಆದರೆ ಅವುಗಳ ಬಗ್ಗೆ ವಾದಮಾಡುವುದರಲ್ಲಿ ಅವನಿಗೆ ಆಸಕ್ತಿ. ಇಂತಹವನು ತಾನು ಕೊಂಡ ಸರಕನ್ನು ಕೊಂಡ ಬೆಲೆಗೆ ಮಾರಿ ಹೋಗುವ ವ್ಯಾಪರಿಯಂತೆ. ಎಂದರೆ ಅವನಿಗೆ ಯಾವ ಲಾಭವೂ ಆಗಲಿಲ್ಲ. ಅದರ ಬದಲಿಗೆ ಸರಕನ್ನು ಹೊತ್ತು ತಿರುಗಿದ ಆಯಾಸ ಮಾತ್ರ ಉಳಿಯುತ್ತದೆ. ಅಂದರೆ ಗುರು ಹಿರಿಯರಿಂದ ಪಡೆದ ಜ್ಞಾನವನ್ನು ತಾನು ಪಡೆದು ವೃಥಾ ವಾದಮಾಡಿದ ಆಯಾಸವನ್ನುಳಿದು ಯಾವ ಲಾಭವೂ ಆತನಿಗೆ ಆಗುವುದಿಲ್ಲ. ಅಲ್ಲಿ ಪಡೆದುದನ್ನು ಇಲ್ಲಿ ಒಪ್ಪಿಸುತ್ತಾನೆ ಅಷ್ಟೆ. ಆದರೆ ಶಾಸ್ತ್ರಗಳ ಉದ್ದೇಶವೇ ಬೇರೆ. ಅವುಗಳ ಅಧ್ಯಯನದ ಮೂಲಕ ಅವು ತೋರುವ ಮಾರ್ಗದಲ್ಲಿ ಮುಂದುವರಿದು ಸತ್ಯವನ್ನು ಕಂಡುಕೊಳ್ಳುವುದು. ಅವಗಳು ಕೇವಲ ದಾರಿ ತೋರುತ್ತವೆ. ಅದನ್ನು ಅರಿತು ಸ್ವತಃ ಸತ್ಯವನ್ನು ಕಂಡುಕೊಳ್ಳುವುದು ಪ್ರತಿಯೊಬ್ಬನು ಮಾಡಬೇಕಾದ ಕೆಲಸ.
No comments:
Post a Comment