ಹರಹರ ಎಂದು ಹತ್ತುಬಾರಿ ಎನಬಹುದಲ್ಲ್ಲದೆ,
ಹರಿವ ಮನವ ಮೆಟ್ಟಿ ಲಿಂಗದೊತ್ತಿನಲ್ಲಿ ನಿಂದಲರಿಯದು ನೋಡಾ!
ಇದು ಕಾರಣ, ತನುವ ಗುರುವಿಂಗಿತ್ತು,ಮನವ ಲಿಂಗಕ್ಕಿತ್ತು,
ಧನವ ಜಂಗಮಕ್ಕಿತ್ತು, ತ್ರಿವಿಧವನು ತ್ರಿವಿಧಕ್ಕಿತ್ತ ಬಳಿಕ,
ಒಂದಲ್ಲದೆ ಎರಡುಂಟೆ?
ಇದು ಮುಂದೆ ಆವನಾನೊಬ್ಬ ಭಕ್ತನು ನೋಡಿ ನಡೆವುದಕ್ಕೆ ಇದೇ ಸಾಧನ,
ಬಸವ ಪ್ರಿಯ ಕೂಡಲಚೆನ್ನಬಸವಣ್ಣಾ
TRANSLITERATION
harahara eMdu hattubaari enabahudallade,
hariva manava meTTi liMgadottinalli niMdalariyadu nODaa!
Idu kaaraNa, tanuva guruviMgittu, manava liMgakkittu.
Dhanava jaMgamakkittu, trividhavanu trividhakkitta baLika,
oMdallade eraduMTe?
Idu muMde aavanaanobba bhaktanu nODi naDevudakke idE saadhana,
Basava priya kUDalacennabasavaNNaa
CLICK HERE TO READ-ALONG:
harahara (Hara Hara, God’s name) eMdu (as) hattu baari (ten times) enabahudallade,(one can say or chant, but)
hariva ( wavering) manava (mind) meTTi (by controlling) liMgadottinalli (in linga, in God) niMdalariyadu (can’t establish) nODaa! (you see!)
Idu (for this) kaaraNa (reason) tanuva (the body) guruviMgittu,(offering to the teacher) manava (the mind) liMgakkittu.(offering to the God)
Dhanava (the wealth)jaMgamakkittu,(offering to the Jamgama) trividhavanu (triform,) trividhakkitta (offering to the triform) baLika,(after)
oMdallade (only one) eraduMTe?(can there be two, can there be duality)
Idu (this) muMde (later) aavanaanobba (some one) bhaktanu (devotee) nODi(observe, see) naDevudakke (to follow) idE saadhana, (this is the means)
Basava priya kUDalacennabasavaNNaa (Basavapriya Koodalacennabasavannaa)
TRANSLATION
One can chant God’s name (Hara Hara) tens of times,
But can’t control the wavering mind and establish it in Him, you see!
As such, offering the body to teacher (guru), mind to God (Linga) and the wealth to ascetics (jangama), thus offering the triform to the triform,
there can only be one, how can there be a duality?
This is the means to be followed by all future devotees,
Basava priya kUDala cennabasavaNNaa!
COMMENTARY
This Vachana from Sharana Hadapada Appanna hints at the only means of reaching the divine. We have commented on the three resources we all have – Body, Mind and Wealth. The body should be offered to the teacher (Guru) implying that one should be in close proximity and service of the Guru in order to be indoctrinated with the true knowledge and awareness of the spiritual path. This knowledge and awareness will lead the devotee towards controlling the wandering mind to establish it in Linga, the divine. The wealth should be utilized in support of the activities of Jangamas, the realized souls (wandering ascetics) who have devoted themselves to enhance the Godliness of the individuals and society. Appanna says that once the trifold resources are thus appropriately allocated and spent, there would be no question of man/God duality; the two will have merged into one. He says this is the only means of merging with the divine (reaching the God). No amount of rituals such as chanting multiple names of God multiple times, without actually developing the single minded intensity and awareness would be useful. This Vachana not only advocates the development of the self (body and mind), but also proactive support for the community for such development.
Let us dedicate our trifold resources to bring the heaven on Earth!
KANNADA COMMENTARY
ಹಡಪದ ಅಪ್ಪಣ್ಣನವರು ತನು ಮನ ಧನಗಳನ್ನು ಹೇಗೆ ಸಾರ್ಥಕವಾಗಿ ಉಪಯೋಗಿಸಬೇಕೆಂಬುದನ್ನು ಇಲ್ಲಿ ಹೇಳುತ್ತಾರೆ. ಜನರು ಬಾಯಿಯಿಂದ ದೇವರನಾಮವನ್ನು ಹೇಳುತ್ತಾರೆ, ಆದರೆ ಮನಸ್ಸೆಲ್ಲೋ ಇರುತ್ತದೆ. ಹತ್ತು ಸಲವೋ ನೂರುಸಲವೋ ದೇವರ ಹೆಸರನ್ನು ಹೇಳಿದ ಮಾತ್ರಕ್ಕೆ ದೇವರು ಸಿಗುವುದಿಲ್ಲ. ಹರಹರ ಎಂದರೆ ಹರನು ಸಿಗನು, ಹರಿವ ಮನಸ್ಸು ಲಿಂಗದಲ್ಲಿ ನಿಲ್ಲದು. ಮನಸ್ಸನ್ನು ಒಂದು ಕಡೆ ನಿಲ್ಲಿಸಲು ಉಪಾಯವಿದೆ. ಅದೇ ತ್ರಿವಿಧವನ್ನು ತ್ರಿವಿಧದಲ್ಲಿ ನಿಲ್ಲಿಸುವುದು. ತ್ರಿವಿಧವೆಂದರೆ ತನು, ಮನ ಮತ್ತು ಧನ. ಈ ತ್ರಿವಿಧವನ್ನು ಗುರು, ಲಿಂಗ , ಜಂಗಮವೆಂಬ ತ್ರಿವಿಧದಲ್ಲಿ ನಿಲ್ಲಿಸಬೇಕೆನ್ನುತ್ತಾರೆ. ಮೊಟ್ಟ ಮೊದಲಿಗೆ ತನುವನ್ನು ಗುರುವಿಗೆ ನೀಡಬೇಕು. ದೈಹಿಕವಾಗಿ ನಾವು ಗುರುವಿನ ಸೇವೆ ಮಾಡಿದರೆ ಗುರುವಿನ ಗುಣಗಳಿಂದ ಆಕರ್ಷಿತರಾಗುವ ಸಂಭವವಿರುತ್ತದೆ. ಆಗ ಗುರು ನಮಗೆ ಶಿವ ಕಾರುಣ್ಯ ಪಡೆಯುವ ದಾರಿಯನ್ನು ತೋರಿಸಿಕೊಡುತ್ತಾನೆ. ಆ ಕಾರುಣ್ಯ ನಮ್ಮ ಅಂತರಂಗದಲ್ಲಿ ಉದಿಸಿದ ನಂತರ ಅದನ್ನು ಬೆಳೆಸಿಕೊಳ್ಳುವುದರಲ್ಲಿ ಮನಸ್ಸು ಅನಾಯಾಸವಾಗಿ ತೊಡಗುತ್ತದೆ. ಹೀಗಾಗಿ ಮನಸ್ಸು ಲಿಂಗದಲ್ಲಿ ನಿಲ್ಲುವ ಸಂಭವವಿರುತ್ತದೆ. ಈ ಹಂತದಲ್ಲಿ ನಾವು ಸ್ವಲ್ಪ ಪ್ರಯತ್ನ ಮಾಡಬೇಕು. ಅದು ಯಾಂತ್ರಿಕವಾಗಿ “ಹರಹರ” ವೆನ್ನುವ ರೀತಿಯದಲ್ಲ. ಅರಿವಿನ ಕಣ್ಣು ತೆಗೆಸುವಂತಹದು. ತನು ಮನಗಳು ಗುರು ಲಿಂಗಕ್ಕೆ ಅರ್ಪಿಸಿದ ನಂತರ ಇನ್ನು ಧನವನ್ನು ಜಂಗಮಕ್ಕೆ ಅರ್ಪಿಸಬೇಕೆನ್ನುತ್ತಾರೆ. ಧನವನ್ನು ಜಂಗಮಕ್ಕೆ ಅರ್ಪಿಸದೆ ಅದನ್ನು ಬೇರೆಯದರಲ್ಲಿ ತೊಡಗಿಸಿದರೆ ಅದು ಜೀವನನ್ನು ಮಾಯಾಮೋಹಗಳಲ್ಲಿ ಮುಳುಗುವಂತ ಮಾಡುತ್ತದೆ. ಮರೆವಿನಲ್ಲಿ ಮುಳುಗಿಸುತ್ತದೆ. ಆದ್ದರಿಂದ ಧನವನ್ನು ಜಂಗಮನಲ್ಲಿ ತೊಡಗಿಸುವುದು ಬಹು ಮುಖ್ಯ ಮತ್ತು ಲೋಕಕಲ್ಯಾಣದ ಮೂಲಕ ಅರಿವಿನತ್ತ ಒಯ್ಯುವಂತಹದ್ದು. ಆಗ ತನು ಮನ ಧನಗಳು ಒಂದಾಗುತ್ತವೆ. ದೇವ ಮತ್ತು ತಾನು ಎಂಬ ದ್ವೈತ ಭಾವ ಅಳಿಯುತ್ತದೆ. ಇಂತಹವನನ್ನು ನೋಡಿ ಮುಂದೆ ಇತರ ಭಕ್ತರು ತಾವೂ ಅದೇ ದಾರಿಯನ್ನು ಅನುಸರಿಸಲು ಅನುವು ಮಾಡಿಕೊಡುತ್ತದೆ ಎನ್ನುತ್ತಾರೆ ಹಡಪದ ಅಪ್ಪಣ್ಣನವರು. ಮುಂದಿನ ವಚನದಲ್ಲಿ ಅವರು ಯಾರನ್ನು ಜಂಗಮವೆನ್ನುತ್ತಾರೆ ನೋಡೋಣ.
No comments:
Post a Comment