ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಂಗೆ ಹಾರಿತ್ತು.
ಅಯ್ಯಾ ಒಂದು ಸೋಜಿಗ!
ಕೈಯ ನೀಡಲು ಮೈಯೆಲ್ಲವ ನುಂಗಿತ್ತು.
ಒಯ್ಯನೆ ಕರೆದಡೆ ಮುಂದೆ ನಿಂತಿತ್ತು.
ಮುಯ್ಯಾಂತಡೆ ಬಯಲಾಯಿತ್ತು ಗುಹೇಶ್ವರಾ
TRANSLITERATION
Amgada koneya mElaNa kODaga koMbiMge haarittu
ayyaa oMdu sOjiga !
kaiya neeDalu maiyellava nuMgittu
oyyane karedaDe muMde niMtittu
muyyaaMtaDe bayalaayittu guhEshvaraa
CLICK HERE TO READ-ALONG:
TRANSLATION (WORDS)
Amgada (of the body) koneya( at the end) mElaNa(on, top) kODaga ( the monkey)
koMbiMge (to the branches) haarittu (jumped)
ayyaa (sir) oMdu sOjiga ! (what a wonder)
kaiya (hand) neeDalu (when stretched) maiyellava (the whole body) nuMgittu (swallowed)
oyyane (lovingly) karedaDe (if called) muMde(before me) niMtittu (stood)
muyyaaMtaDe (when put in to contemplation) bayalaayittu (it disappeared) guhEshvaraa(Guheshvara)
TRANSLATION
The monkey on the limb jumped over branches.
Sir, What a wonder!
When a hand was offered, the whole body was swallowed.
When called lovingly, it stood right in front (of me).
When put in to contemplation, it disappeared, Guhesvara!
COMMENTARY
In this Vachana, Allama Prabhu offers suggestions for cultivating the human mind to reach the divine. The mind is compared to a monkey whose nature is to jump from branch to branch on a tree constantly. The monkey grabs a fruit from the branch it is on and starts eating it. Even before finishing the fruit, it sees another fruit on the next branch. It throws the half eaten fruit away and grabs the next fruit. The monkey does not even have the patience to enjoy the fruit at hand. So is the human mind. It starts on one thought and jumps to other thoughts as they occur. The sense organs keep stimulating the mind constantly and the mind keeps reacting to the stimuli. Allama Prabhu says ‘when a hand is offered, the whole body is swallowed’ meaning that when we yield to the simplest of the vagaries of the mind we get consumed completely. We stay tangled in the ropes of the material world. We continue to make the web more complex and binding rather than trying to get out of it. We always stay in an unsatisfied state. Even when we are enjoying a pleasure offered by our sense organs and mind, we will be looking for a more pleasurable event or activity. We thus become slaves of our senses and mind. Allama Prabhu offers a simple first step and says if we can call the mind lovingly, it comes and stands before us ready to serve. Calling the mind lovingly corresponds to understanding the nature of the mind and utilizing it to help us on the spiritual path, meaning minimizing wants and needs, not yielding to the desires posed by the wandering mind and concentrating on the divine. Allama Prabhu offers putting the mind in to contemplation as the next step. When the mind is stabilized and turned inwards ‘it disappears’ meaning that we reach the divine within us. We have called this state as achieving null or shoonya sampaadane, i.e. merging with Him.
Let us start understanding, loving and contemplating to reach the divine!
KANNADA COMMENTARY
ಮನವೆಂಬ ಮರ್ಕಟನ ಸ್ವಭಾವವನ್ನು ವಿವರಿಸುತ್ತ ಅದನ್ನು ಐಕ್ಯ ಸ್ಥಿತಿಗೆ ಒಯ್ಯುವ ಪರಿಯನ್ನು ಸರಳವಾಗಿ ತಿಳಿಸುತ್ತಿದ್ದಾರೆ ಅಲ್ಲಮ ಪ್ರಭುಗಳು. ಮನಸ್ಸನ್ನು ಗಮನಿಸಿದವರಿಗೆಲ್ಲ ಅದು ಕೋಡಗದಂತೆ ಎನ್ನುವುದು ತಿಳಿದೇ ಇರುತ್ತದೆ. ಮಂಗ ಹಣ್ಣು ಕಾಯಿಗಳ ಆಸೆಗಾಗಿ ಕೊಂಬೆಯಿಂದ ಕೊಂಬೆಗೆ ಹಾರುತ್ತದೆ. ಹಣ್ಣನ್ನು ನೋಡಿ ತಿನ್ನುವ ಆಸೆಗೆ ಒಳಗಾಗಿ ಕೊಂಬೆಯ ಹಣ್ಣಿಗೆ ಹಾರುತ್ತದೆ. ಅದನ್ನು ಶಾಂತಿಯಿಂದ ಪೂರ್ತಿಯಾಗಿ ತಿನ್ನುವುದೂ ಇಲ್ಲ. ಒಂದು ಹಣ್ಣು ತಿನ್ನುವಾಗಲೂ ಕೂಡ ಅದರ ಕಣ್ಣು ಆಗಲೆ ಇನ್ನೊಂದು ಹಣ್ಣಿನ ಮೇಲಿರುತ್ತದೆ. ಅರ್ಧಂಬರ್ಧ ತಿಂದು ಅದನ್ನು ಎಸೆದು ಇನ್ನೊಂದಕ್ಕೆ ಹಾರುತ್ತದೆ. ಇದು ಮಂಗನ ಸ್ವಭಾವ. ಒಂದೆಡೆ ನಿಲ್ಲುವುದಿಲ್ಲ ಕೋಡಗ. ಮನಸ್ಸಿನ ಪರಿಸ್ಥಿತಿಯೂ ಸಹ ಇದೇ ಆಗಿದೆ. ಮನಸ್ಸು ನಿಂತಲ್ಲಿ ನಿಲ್ಲುವುದಿಲ್ಲ. ಅದು ಸುಲಭವಾಗಿ ತೃಪ್ತಗೊಳ್ಳುವುದಿಲ್ಲ. ಪ್ರತಿಸಲವೂ ಹೊಸದನ್ನು ಅರಸುತ್ತಲೇ ಇರುತ್ತದೆ. ತಾನೇ ಇಂದ್ರಿಯಗಳ ಆಕರ್ಷಣೆಗೆ ಒಳಗಾಗುತ್ತದೆ. ಒಂದು ಸುಖವನ್ನು ಅನುಭವಿಸುತ್ತಿರುವಾಗಲೇ ಅದಕ್ಕೆ ಇನ್ನೊಂದರ ಮೇಲೆ ಕಣ್ಣು. ಹೀಗಿರುವಾಗ ಅದಕ್ಕೇನಾದರೂ ಸ್ವಲ್ಪ ಹೆಚ್ಚಿನ ರುಚಿಯನ್ನು ತೋರಿಸಿದರೆ ಅಥವಾ ನಾವಾಗಿ ಇಂದ್ರಿಯ ವಿಷಯಸುಖದ ರುಚಿಯನ್ನು ತೋರಿಸಿದರೆ ಅದು ಇಡೀ ವಿಷಯ ಪ್ರಪಂಚವನ್ನೇ ನುಂಗಿಹಾಕುತ್ತದೆ. ಇದು ಸೋಜಿಗದ ವಿಷಯ. ಇದನ್ನೇ ಅಲ್ಲಮರು, “ಕೈಯ ನೀಡಲು ಮೈಯೆಲ್ಲವ ನುಂಗಿತ್ತು” ಎಂದು ಹೇಳುತ್ತಾರೆ. ಎನೋ ಪಾಪ ಎಂದು ಇಂದ್ರಿಯ ಸುಖಕ್ಕೆ ಒಂದವಕಾಶ ಮಾಡಿ ಕೊಟ್ಟಲ್ಲಿ ಅದು ಇಡೀ ಮೈಯನ್ನೇ ನುಂಗುತ್ತದೆ. ಈ ವಿಷಯದಲ್ಲಿ ಅದರ ಶಕ್ತಿ ಅಗಾಧವಾದದ್ದು. ಅಂದರೆ ಅದು ಇಂದ್ರಿಯಗಳನ್ನು ತೃಪ್ತ ಗೊಳಿಸುವುದರಲ್ಲಿ ಪೂರ್ತಿಯಾಗಿ ಮುಳುಗಿ ಹೋಗುತ್ತದೆ. ಅದರ ಗಮನ ಬೇರೆ ಇನ್ನಾವುದರ ಕಡಗೂ ಹರಿಯುವುದಿಲ್ಲ. ಆದರೆ ಅದು ಎಂದಿಗೂ ತೃಪ್ತವಾಗುವುದಿಲ್ಲ. ಅಂದರೆ ವ್ಯಕ್ತಿಯು ಸಂಸಾರದಲ್ಲಿ ಪೂರ್ತಿಯಾಗಿ ಮುಳುಗಿಹೋಗುತ್ತಾನೆ, ಘಾಸಿಗೊಳ್ಳುತ್ತಾನೆ. ಅಂದರೆ ಮನಸ್ಸನ್ನು ಅದರ ಇಷ್ಟದಂತೆ ಸ್ವಲ್ಪ ಹರಿಯ ಬಿಟ್ಟರೆ ಸಾಕು ಆನಂದವೆಂಬುದನ್ನು ಕಳೆದುಕೊಂಡಂತೆಯೆ. ವ್ಯಕ್ತಿಯೇ ಅದರ ದಾಸನಾಗುತ್ತಾನೆ. ಆದರೆ ಅದೇ ಮನಸ್ಸನ್ನು “ಒಯ್ಯನೆ ಕರೆದಡೆ”- ಪ್ರೀತಿಯಿಂದ ಸಂತೈಸಿದರೆ ಅದು ನಾವು ಹೇಳಿದಂತೆ ಕೇಳುತ್ತದೆ. ನಮ್ಮ ಮುಂದೆ ದಾಸನಂತೆ ಬಂದು ನಿಲ್ಲುತ್ತದೆ. ಅದನ್ನು ನಮ್ಮಿಷ್ಟಬಂದೆಡೆಗೆ ತಿರುಗಿಸಬಹುದು. ಇಷ್ಟು ಸಾಕಲ್ಲವೆ ನಮಗೆ. ಆದರೆ ಅಲ್ಲಮರು ಇದಕ್ಕಿಂತ ಎತ್ತರದ ದಾರಿ ತೋರಿಸುತ್ತಾರೆ. “ಮುಯ್ಯಾಂತಡೆ ಬಯಲಾಯಿತ್ತು” ಎನ್ನುತ್ತಾರೆ. ಸಂಯಮದಿಂದ ಮನಸ್ಸನ್ನು ಚಿಂತನೆಗೆ ಹಚ್ಚಿದರೆ ಅದು ಬಯಲಾಗುತ್ತದೆ. ಅದನ್ನು ಅದರಲ್ಲಿಯೇ ಹುದುಗಿರುವ ಅತ್ಮದ ಚಿಂತನೆಗೆ ತೊಡಗಿಸಿದರೆ ಮನಸ್ಸು ಅದರಲ್ಲಿಯೇ ಮಗ್ನವಾಗುತ್ತದೆ. ಅದರ ಚಂಚಲತೆ ಮಾಯವಾಗಿ ಮನಸ್ಸೇ ಇಲ್ಲಾಗುತ್ತದೆ. ಅದು ಬಯಲಾಗುತ್ತದೆ. ಕ್ಷುಲ್ಲಕವಾದ ಇಂದ್ರಿಯ ಸುಖದಿಂದ ಎತ್ತಿ ಮನಸ್ಸನ್ನು ಆತ್ಮನ ಚಿಂತನೆಗೆ ಹಚ್ಚುವ ಕೆಲಸ ನಾವು ಮಾಡಬೇಕಾದದ್ದು.
ಇಂದ್ರಿಯಗಳಂಬ ಕೊಂಬೆಗಳಿಗೆ ಹಾರಾಡುವ ಮನಸ್ಸನ್ನು ಸಂಯಮದಿಂದ ಒಲಿಸಿಕೊಂಡು ಆತ್ಮ ಚಿಂತನೆಗೆ ತೊಡಗಿಸಬೇಕು, ಎಂದು ಹೇಳುತ್ತಾರೆ ಅಲ್ಲಮಪ್ರಭುಗಳು.
No comments:
Post a Comment