Friday, August 30, 2013

Vachana 157: Bhoota Bhootava Koodi – The Elements Mingled Together

VACHANA IN KANNADA

ಭೂತ ಭೂತವ ಕೂಡಿ ಅದ್ಭುತವಾಯಿತ್ತು.
ಕಿಚ್ಚು ಕೋಡಿತ್ತು ನೀರು ನೀರಡಿಸಿತ್ತು!
ಉರಿ ಪವನದೋಷದೊಳಗಿರ್ದು
ವಾಯು ಇಮ್ಮಡಿಸಿತ್ತ ಕಂಡೆ ಗುಹೇಶ್ವರಾ

 TRANSLITERATION
 
bhoota bhootva kooDi adbhutavaayittu.
kiccu kODittu nIru nIraDisittu!
uri pavana doShadoLagirdu
vaayu immmaDisitta  kaMDe guhEshvaraa.

CLICK HERE FOR A RECITATION:

TRANSLATION (WORDS):
 
Bhoota (gross or great element)  bhootva ( into gross element)  kooDi (joined together) adbhutavaayittu (became a wonder - wonderful human body has come into being).
kiccu (fire)  kODittu (got extinguished) nIru (water) nIraDisittu! (has become thirsty - mind which is like water has become thirsty)
uri (fire)  pavana (wind) doShadoLagirdu (having badly influenced)
vaayu (air) immmaDisitta ( doubling)  kaMDe (I saw) guhEshvaraa (Guheshvara).

VACHANA IN ENGLISH
 
The element joined the elements and became a wonder.
The fire got extinguished, the water became thirsty!
The fire, having badly influenced by the wind
I saw the air doubling, Guhesvara!

 COMMENTARY
In this Vachana, Allama Prabhu comments on how our desires complemented by our wandering minds create havoc in life.
 
The first line of the Vachana says that the five gross elements (air, water, fire, earth and ether) joined together to create a wonder, the human body. This body is wonderful, for it is the container of the spark of life. It is the one that allows one to feel that he/she is what he/she is. It allows one to hold the knowledge (jnaana) needed and allows growing of that knowledge into keen awareness of here and beyond. It is indeed a great wonder. With all the technology in the modern world we have not been able to create anything close to it, let alone understanding it completely!

 The second line refers to jnaana (awareness, knowledge) as the ‘fire’ and says that this fire got extinguished. This is the influence of maya, the illusion we have fallen into. The mind, referred to as ‘water’ became thirsty, drank more water and got further diluted. Wandering is the nature of the mind. The uncontrolled mind, desirous of more and more, became much more of a wanderer.

The third line tags the sorrow of life as ‘fire’. This fire got badly influenced by the wind (the wandering mind).
The result of this combination is doubling of the wandering of the mind. Allama Prabhu laments “Oh, Guhesvara, the wind called wandering mind did not quench the fire called sorrow. I saw the fire getting stronger and the wind doubling. “

 In summary, we have been bestowed with a great and wonderful instrument, our body. It houses all the spark of life we need and can use. We extinguish this spark with our wandering mind and uncontrolled desires. With our deep attachments to mundane world and its ups and downs, we also have become experts in increasing our sorrow and further enhancing the wandering nature of our mind.

Let us contain our desires and stabilize mind and kindle into true awareness!

 KANNADA COMMENTARY

ಅರ್ಥ:

ಭೂತ ಭೂತವ ಕೂಡಿ  (ಪಂಚ ಭೂತಗಳು  ಕೂಡಿಕೊಂಡು) ಅದ್ಭುತವಾಯಿತ್ತು(ಆಶ್ಚ್ರರ್ಯಕರವಾಗಿ ರೂಪುಗೊಂಡವು)
ಕಿಚ್ಚು (ಜ್ಞಾನವೆಂಬ ಕಿಚ್ಚು) ಕೋಡಿತ್ತು (ಆರಿ ಹೋಯಿತು) ನೀರು ನೀರಡಿಸಿತ್ತು!(ಮನಸ್ಸೆಂಬ ನೀರು ವಿಷಯಗಳ ಹಿಂದೆ ಹರಿದಾಡಿ ಇನ್ನೂ ನೀರಡಿಸಿತ್ತು)
ಉರಿ (ಸಾಂಸಾರಿಕ ದುಃಖ) ಪವನ ದೋಷದೊಳಗಿರ್ದು (ಚಂಚಲವಾದ ಮನಸ್ಸೆಂಬ ಗಾಳಿಯೊಂದಿಗೆ ಕೂಡಿತು)
ವಾಯು ಇಮ್ಮಡಿಸಿತ್ತ ಕಂಡೆ ಗುಹೇಶ್ವರಾ (ಸಾಂಸಾರಿಕ ದುಃಖದಿಂದ ಚಿತ್ತ ಚಾಂಚಲ್ಯ ಇಮ್ಮಡಿಯಾದುದನ್ನು ಕಂಡೆ) 

ತಾತ್ಪರ್ಯ:

ಇಲ್ಲಿ ಆಸೆ ಮತ್ತು ಚಾಂಚಲ್ಯ ಎರಡೂ ಒಂದಕ್ಕೊಂದು ಪೂರಕವಾಗಿ ಜೀವ ನ ಸ್ಥಿತಿ ಹೇಗೆ ಹದಗೆಡುತ್ತ ಹೋಗುತ್ತದೆ ಎನ್ನುವುದನ್ನು ಸೊಗಸಾಗಿ ಹೇಳುತ್ತಾರೆ ಅಲ್ಲಮಪ್ರಭುಗಳು. 

ಪಂಚ ಭೂತಗಳು ಪರಸ್ಪರ ಕೂಡಿಕೊಂಡು ಈ ಮಾನವ ದೇಹದ ರಚನೆಯಾಗುತ್ತದೆ. ಇದು ಒಂದು ಅದ್ಭುತವಾದ ಮತ್ತು ಸಂಕೀರ್ಣವಾದ ನಿರ್ಮಿತಿ. ಇದನ್ನು ಅದ್ಭುತ ಎನ್ನುತ್ತಾರೆ ಅಲ್ಲಮರು. ಏಕೆ ಇದು ಅದ್ಭುತ?  ಏಕೆಂದರೆ ಈ ದೇಹದಲ್ಲಿ ಚೈತನ್ಯವಿದೆ,  ಈ ದೇಹವೆ ನಾನೆಂಬ  ಭಾವವಿದೆ.   ಮತ್ತು ಈ ದೇಹ ನಾನಲ್ಲ ಎಂಬ ಜ್ಞಾನವಾಗಬೇಕಾದರೆ ಈ ದೇಹ ಬಹು ಮುಖ್ಯ. ಈ ದೇಹದಲ್ಲಿರುವಾಗಲೇ ಅರಿವು ಮೂಡುತ್ತದೆ.  ದೇಹವಿಲ್ಲದಿದ್ದರೆ ಅರಿವೂ ಇಲ್ಲ. ಈ ದೇಹವು ಅರಿವು ಪಡೆಯಲು ಒಂದು ಅನಿವಾರ್ಯ ಸಾಧನ. ಆದ್ದರಿಂದ ಇದು ಅದ್ಭುತ.
 
ಇಲ್ಲಿ ಜ್ಞಾನವೂ ಇದೆ. ಅದೇ ಕಿಚ್ಚು. ಆದರೆ ಮಾಯೆಯ ಕಾರಣದಿಂದ  ಆ ಕಿಚ್ಚು ಆರಿ ಹೋಗಿದೆ. ಮನಸ್ಸು ಮಾತ್ರ ಅತಿ ಚಟುವಟಿಕೆಯಿಂದ ಕೂಡಿದೆ. ಆ ಮನಸ್ಸು ನೀರಿನಂತೆ ಚಂಚಲವಾದದ್ದು. ಹತ್ತಾರುಕಡೆ ಹರಿದಾಡುವಂತಹದು. ಮುಖ್ಯವಾಗಿ ವಿಷಯ ಸುಖದ ಹಿಂದೆ ಓಡುವಂತಹುದು. ಅದರ ಹಿಂದೆ ಓಡಿದಷ್ಟೂ ಇನ್ನೂ ಇನ್ನೂ ಆ ಸುಖ ಪಡೆಯಬೇಕೆಂಬ ಆಸೆ ಹೆಚ್ಚುತ್ತದೆ. ಅದೇ ಬಾಯಾರಿಕೆ.  ಅದು ಎಂದಿಗೂ ಹಿಂಗದ ಬಾಯಾರಿಕೆ.  ಮನಸ್ಸಿನ ಆಸೆಗಳು ಎಂದೂ ಪೂರ್ತಿಯಾಗಿ ತಣಿಯುವುದೇ ಇಲ್ಲ. ಹಾಗಾಗಿ ದುಃಖ,  ಉರಿ. ಇದಕ್ಕೆ  ಚಂಚಲವಾದ ಮನಸ್ಸು ಗಾಳಿಯಂತೆ. ಗಾಳಿ ಹೆಚ್ಚಾದಷ್ಟೂ ಉರಿ ಹೆಚ್ಚುತ್ತದೆ. ಅಂದರೆ ಚಂಚಲತೆಯಿಂದ ಮನಸ್ಸು ನಾನಾ ವಿಷಯಗಳ ಹಿಂದೆ ಹೋದ ಹಾಗೆಲ್ಲ ದುಃಖ ಹೆಚ್ಚುತ್ತದೆ. ದುಃಖ ಹೆಚ್ಚಿದಷ್ಟೂ ಮನಸ್ಸು ಅದನ್ನು ಸಂತಸಗೊಳಿಸಲು ಇನ್ನೂ ಇನ್ನೂ ಸುಖಗಳ ಹಿಂದೆ ಓಡುತ್ತದೆ.ಹೀಗೆ  ಚಿತ್ತ ಚಾಂಚಲ್ಯ ಇಮ್ಮಡಿಯಾಗುವುದನ್ನು ನೋಡಿದೆ ಎನ್ನುತ್ತಾರೆ ಅಲ್ಲಮರು.  

ಇದು ಒಂದು ವಿಷವೃತ್ತ. ಸುಖಕಾಗಿ ಮನಸ್ಸು ವಿಷಯಸುಖಗಳ  ಹಿಂದೆ ಅಲೆಯುವುದು, ಆದರೆ ಅಲ್ಲಿ ಶಾಶ್ವತ ಸುಖವಿಲ್ಲ. ಆದ್ದರಿಂದ ನಿರಾಶೆ ಮತ್ತು ದುಃಖ. ಆ ದುಃಖವನ್ನು ದೂರಗೊಳಿಸಲು ವಿಷಯಗಳಲ್ಲಿ ಇನ್ನೂ  ಹೆಚ್ಚಿನ ಸುಖದ ಅರಸುವಿಕೆ. ಇದರಿಂದ ಸಾಮಾನ್ಯ ಮಾನವನಿಗೆ ಬಿಡುಗಡೆಯೇ ಇಲ್ಲವೆಂದು ತೋರುತ್ತದೆ. ಆದರೆ ಈ ಸತ್ಯವನ್ನು ಅಲ್ಲಮರು “ನಾನು ಕಂಡೆ” ಎನ್ನುತ್ತಾರೆ. ಅವರು ಆ ರೀತಿಯಾಗಿ ವಿಷಯ ಸುಖದ ಹಿಂದೆ  ಓಡುವುದು ಎಷ್ಟು ನಿರರ್ಥಕ ಎಂಬುದನ್ನು ಮನಗಂಡಿದ್ದಾರೆ.

 

Saturday, August 24, 2013

Vachana 156: Huliya Benninali ondu Hulle Hogi – The Deer that went behind the Tiger

VACHANA IN KANNADA

ಹುಲಿಯ ಬೆನ್ನಿನಲಿ ಒಂದು ಹುಲ್ಲೆ ಹೋಗಿ ಮೇದು ಬಂದೆನೆಂದಡೆ
ಇದ ಕಂಡು ಬೆರಗಾದೆ!
ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈಯ್ದು ಬಂದೆನೆಂದೆಡೆ
ಇದ ಕಂಡು ಬೆರಗಾದೆ!
ಜವನ ಮನೆಗೆ ಹೋಗಿ ಸಾಯದೆ ಬಂದೆನೆಂದಡೆ
ಇದಕಂಡು ಬೆರಗಾದೆ ಗುಹೇಶ್ವರಾ!

TRANSLITERATION
huliya benninali oMdu hulle hOgi  mEdu baMdeneMdaDe
ida kaMDu beragaade!
rakkasiya manege hOgi nidregaiydu baMdeneMdaDe
ida kaMDu beragaade!
javana manege hOgi saayade baMdeneMdaDe
ida kaMDu beragaade guhEshvaraa!

CLICK HERE FOR A RECITATION:
 
TRANSLATION (WORDS)
huliya  (the tiger) benninali ( behind, following) oMdu hulle (a deer)  hOgi (going) mEdu
(after grazing) baMdeneMdaDe (if says ‘I have come back’)
ida kaMDu (seeing this)  beragaade! (am surprised)
rakkasiya (of an  ogress) manege (to the house)  hOgi  (going) nidregaiydu  (after sleeping)
baMdeneMdaDe (if one says ‘I have come back’)
ida kaMDu (seeing this)  beragaade! (am surprised)
javana (of the death) manege (to the house) hOgi (going) saayade (without dying)
baMdeneMdaDe(if one says ‘I have come  back’)
ida kaMDu (seeing this)  beragaade! (am surprised) guhEshvaraa (Guheshvara)

VACHANA IN ENGLISH
If a deer says that ‘I have come back after grazing behind a Tiger’
I am surprised seeing this!
If one says that ‘I have come back after sleeping in an ogress’ house’
I am surprised seeing this!
If one says that ‘I have come back without dying after visiting the house of death’
I am surprised seeing this, Guhesvara!

COMMENTARY
Allama Prabhu comments on three manifestations of Maya (Illusion) in this Vachana and says he will be wonderstruck if one escapes from these.
 
The Deer knows very well that the Tiger would slice its throat and eat it alive. Yet, its intense desire to graze in the green field behind the Tiger makes it ignore the ill fate that might come along.  If indeed, it succeeds in grazing the field without being eaten by the Tiger, it is an event to be wonderstruck! Here the Tiger indicates human’s ill desire and the Deer is the human. The ordinary human gets consumed by the desire, a manifestation of Maya. If one succeeds in conquering the desire, he should be commended!

An ogress takes the most beautiful form to attract others. Her intent though is to clobber the individual that comes close to her. How can one spend a night in her house and expect to come out alive? If that happens, it is indeed an event to be celebrated! Here the Ogress symbolizes ‘attachment – Moha’. The individual that comes out alive from the house of Ogress is indeed an accomplished one who has overcome Moha!

No one can escape from death.  It is impossible to visit house of death and come out alive. However the realized soul can achieve this, meaning that they conquer the fear of death by true awareness of the illusory nature of life.

The lesson then is that we are surrounded by the manifestation trio of desire, attachment and death. Gaining awareness of these and staying above their influence is indeed admirable.

 Let us conquer desire and attachment and not be clouded by the thought of death!  

KANNADA COMMENTARY

ಅರ್ಥ:
ಹುಲಿಯ ಬೆನ್ನಿನಲಿ (ಹುಲಿಯ ಹಿಂದೆ)  ಒಂದು ಹುಲ್ಲೆ  ಹೋಗಿ (ಒಂದು ಜಿಂಕೆ ಹೋಗಿ) ಮೇದು ಬಂದೆನೆಂದಡೆ (ಹುಲ್ಲನ್ನು ಮೆಯ್ದು ಬಂದೆ ಎಂದು ಹೇಳಿದರೆ)
ಇದ ಕಂಡು ಬೆರಗಾದೆ! (ನಾನು ಬೆರಗಾದೆನು)
ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈಯ್ದು ಬಂದೆನೆಂದೆಡೆ (ರಾಕ್ಷಸಿಯ ಮನೆಗೆ ಹೋಗಿ ಚೆನ್ನಾಗಿ ನಿದ್ದೆ ಮಾಡಿಬಂದೆ ಎಂದು ಹೇಳಿದರೆ)
ಇದ ಕಂಡು ಬೆರಗಾದೆ!      (ನಾನು ಬೆರಗಾದೆನು)
ಜವನ ಮನೆಗೆ ಹೋಗಿ ಸಾಯದೆ ಬಂದೆನೆಂದಡೆ (ಮೃತ್ಯುವಿನ ಮನೆಗೆ ಹೋಗಿ ಸಾಯದೆ ಬಂದೆ  ಎಂದು ಹೇಳಿದರೆ)
ಇದಕಂಡು ಬೆರಗಾದೆ ಗುಹೇಶ್ವರಾ!( ನಾನು ಬೆರಗಾದೆ ಗುಹೇಶ್ವರ!)
 
ತಾತ್ಪರ್ಯ:

ಇಲ್ಲಿ ಅಲ್ಲಮ ಪ್ರಭುಗಳು, ಈ ಪ್ರಪಂಚದ ಬದುಕಿನ ಆಕರ್ಷಣೆಗಳಿಂದ  ತಪ್ಪಿಸಿಕೊಳ್ಳುವುದು ಜೀವನ ಪಾಲಿಗೆ ಎಷ್ಟು ಕಷ್ಟ, ಮತ್ತು ಯಾರಾದರೂ ಆರೀತಿಯಾಗಿ ತಪ್ಪಿಸಿಕೊಂಡು ಬಂದರೆ ಅದು  ಬೆರಗಾಗುವ ವಿಷಯವೆಂದು ದೃಷ್ಟಾಂತದ ಮೂಲಕ ಹೇಳುತ್ತಾರೆ.
ಹುಲಿಯು ಜಿಂಕೆಯನ್ನು ತಿನ್ನುವುದು ಸಹಜ. ಅದ್ದರಿಂದ ಹುಲಿಯ ಹಿಂದೆ ಜಿಂಕೆ ಹೋಗುವುದಿಲ್ಲ. ಆದರೆ ಗಂಟಲನ್ನು  ಸೀಳಿ ತಿನ್ನುವ ಹುಲಿಯ ಹಿಂದೆ ಹೋಗಿ ಜಿಂಕೆ ನಿಶ್ಚಿಂತೆಯಿಂದ ಹುಲ್ಲನ್ನು ಮೇಯ್ದು ಬಂದೆ ಎಂದು ಹೇಳಿದರೆ ಅದನ್ನು ನಂಬಬಹುದೆ?  ಜೀವನಿಗೆ ಅನೇಕ ಆಸೆ ದುರಾಸೆಗಳಿರುತ್ತವೆ. ಅವುಗಳಿಂದ ಬಿಡಿಸಿಕೊಳ್ಳುವುದು ಕಷ್ಟ. ಹಾಗಾಗಿ ಜೀವನು ಅವುಗಳ ಆಕರ್ಷಣೆಗೆ ಒಳಗಾಗುತ್ತಾನೆ. ಈ ದುರಾಶೆ ಹುಲಿಯಂತೆ, ಮತ್ತು ಜೀವ ಜಿಂಕೆಯಂತೆ. ಜೀವವೆಂಬ ಜಿಂಕೆ ದುರಾಸೆ ಎಂಬ ಹುಲಿಯ ಹಿಂದೆ ಹೋಗುತ್ತದೆ. ಜೀವನಿಗೆ ಹುಲಿಗಿಂತ ಅದು ಇರುವ ಹುಲ್ಲುಗಾವಲು ಮಾತ್ರ ಮತ್ತೂ ಸುಂದರವಾಗಿ ಕಾಣುತ್ತದೆ. ಅದರೆ ದುರಾಸೆಯ ಇತರ ಪರಿಣಾಮಗಳು ಕಣ್ಣಿಗೆ ಕಾಣುವುದಿಲ್ಲ. ಅದು ದುರಾಸೆಯನ್ನು ಅನುಸರಿಸಿ ಹೋಗಿ ನಾಶವಾಗುತ್ತದೆ. ಅದು ನೆಮ್ಮದಿಯಿಂದ ಹಿಂತಿರುಗಿ ಬರುವುದಿಲ್ಲ. ಹಾಗೇನಾದರು ಬಂದರೆ ಅದು ಅಚ್ಚರಿಯ ವಿಷಯ. ಕೇವಲ ಶರಣರು ಮಾತ್ರ ಅದನ್ನು ಮಾಡಲು ಸಾಧ್ಯವೆಂಬ ಧ್ವನಿ.
ರಾಕ್ಷಸಿಯ ಮನೆಗೆ ಹೋಗಿ ಯಾರಾದರು ನಿಶ್ಚಿಂತೆಯಿಂದ ನಿದ್ರೆ ಮಾಡಲು ಸಾಧ್ಯವೆ? ಆ ರಾಕ್ಷಸಿ ಯಾವಾಗ ತನ್ನನ್ನು ತಿಂದುಬಿಡುತ್ತಾಳೆಯೋ ಎನ್ನುವ ಭಯ ಆವರಿಸಿರುವಾಗ ನೆಮ್ಮದಿಯ ನಿದ್ರೆ ಸಾಧ್ಯವಾಗುವುದಿಲ್ಲ. ಹಾಗೇನಾದರೂ ಆದರೆ ಅದು ಅಚ್ಚರಿಯ ವಿಷಯ. ಇಲ್ಲಿ ಅಲ್ಲಮರು ಮೋಹದ ವಿಷಯವಾಗಿ ಹೇಳುತ್ತಿದ್ದಾರೆ. ರಾಕ್ಷಸಿ ಎಂದರೆ ಮೋಹ. ಮೋಹ ಮನುಷ್ಯನನ್ನು ರಾಕ್ಷಸಿಯಂತೆ ನುಂಗಿಬಿಡುತ್ತದೆ. ಆದರೆ ಜೀವನಿಗೆ ಅದರ ರಾಕ್ಷಸಿಯ ರೂಪ ಕಾಣುವುದಿಲ್ಲ. ಕೇವಲ ಮೋಹದ ಮೋಹಕ ರೂಪ ಕಾಣುತ್ತದೆ. ಅದಕ್ಕೆ ವಶವಾಗಿ ಜೀವನು ಅಪಾರ ನೋವು ಅನುಭವಿಸುತ್ತಾನೆ.  ಮೋಹ, ಮೇಲು ನೋಟಕ್ಕೆ ಮೋಹಕವಾಗಿ ಕಂಡರೂ ಒಳಗೊಳಗೇ ಅದು ಆತನ ನೆಮ್ಮದಿಯನ್ನೇ ಕೆಡಿಸಿಬಿಡುತ್ತದೆ. ಅಂತಹ ಮೋಹಕ್ಕೆ ವಶವಾಗಿ ಯಾರಾದರೂ ನಾನು ನೆಮ್ಮದಿಯಿಂದ ಇದ್ದೇನೆ ಎಂದು ಹೇಳಿದರೆ ಅದು ಕೂಡ ಅಚ್ಚರಿಯ ವಿಷಯವೆ.
ಇನ್ನು ಮೂರನೆಯದಾಗಿ ಮೃತ್ಯುವಿನ ವಿಷಯ ಹೇಳುತ್ತಾರೆ. ಮೃತ್ಯುವಿನ ಮನೆಗೆ ಹೋಗಿ ಸಾಯದೆ ಬಂದೆ ಎಂದು ಯಾರಾದರೂ ಹೇಳಿದರೆ ಅದು ನಂಬಲಸಾಧ್ಯವಾದ ವಿಷಯ. ಏಕೆಂದರೆ ಮೃತ್ಯು ಎಲ್ಲರನ್ನೂ ಕಬಳಿಸುತ್ತದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾರರು. ಹುಟ್ಟಿದ ಪ್ರತಿ ಜೀವವೂ ಸಾಯಲೇ ಬೇಕು. ಆದ್ದರಿಂದ ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟಕರ. ಆದರೆ  ಶರಣರು ಅದರ ಪ್ರಭಾವಕ್ಕೆ ಒಳಗಾಗುವುದಿಲ್ಲ. ಅಂದರೆ ಅರಿವಿನಿಂದ ಸಾವನ್ನು ಗೆಲ್ಲುವರು ಶರಣರು.
ಸಾಮಾನ್ಯ ಮಾನವನು ದುರಾಸೆ, ಮೋಹ ಮತ್ತು ಸಾವುಗಳಿಗೆ ಪಕ್ಕಾಗುತ್ತಾನೆ. ಒಂದು ರೀತಿಯಿಂದ ಇವುಗಳು ಅಜೇಯ ಎಂದು ತೋರುತ್ತವೆ. ಇವುಗಳ  ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯವಲ್ಲ.  ಆದರೆ ಶರಣರು ಇವು ಮೂರನ್ನೂ ಗೆಲ್ಲಬಲ್ಲರು ಎನ್ನುವ ಧ್ವನಿ ಈ ವಚನದ್ದು. ಅಂತಹವರನ್ನು ಕಂಡು ನಾನು ಬೆರಗಾದೆ ಎನ್ನುತ್ತಾರೆ ಅಲ್ಲಮಪ್ರಭುಗಳು.
 

Friday, August 16, 2013

Vachana 155: Suliva Suttuva – Wandering in this World

VACHANA IN KANNADA

ಸುಳಿವ ಸುತ್ತುವ ವ್ಯವಹರಣೆಯುಳ್ಳನ್ನಕ್ಕರ
ಅರಿಯೆನರಿಯೆ ಶಿವಪಥವ
ಗುಹೇಶ್ವರ ಲಿಂಗದ ನಿಜವರಿದ ಬಳಿಕ
ಅರಿಯೆನರಿಯೆ ಲೋಕದ ಬಳಕೆಯ!

TRANSLITERATION
suLiva suttuva  vyvaharaNe yuLLannakkara
ariyenariye shivapathava
guhEshvara liMgada nijavarida baLika
ariyenariye lOkada  baLkeya!
CLICK HERE FOR A RECITATION
TRANSLATION (WORDS)
suLiva (roaming, wandering) suttuva (go round and round)   vyvaharaNe yuLLannakkara (involved in day today business)
ariyenariye  ( don’t know, un aware of  )  shivapathava (the way to God)
guhEshvara liMgada (God Guheshvara) nijavarida baLika (after knowing  the truth)
ariyenariye ( don’t know, un aware of)  lOkada  baLkeya! (this world’s day today business)
VACHANA IN ENGLISH

While wandering and going round and round in day to day business,
Unaware of the way to God!
After knowing the truth of God Guhesvara,
Unaware of this world’s day to day business!
COMMENTARY
In this Vachana, Allama Prabhu highlights the difference between the way of God and the way of mundane world. As long as we are completely immersed in the activities of this mundane world, we would not be aware of the way to God; we would not even feel the necessity to know God. The comforts of this world and the excitement we receive of our successes keep us completely closed from any other thought. If for some reason, we reach a breakpoint and the events propel us towards becoming spiritual, there is a very good chance that we turn towards the way to God or ways of God become our life. When such transition takes place, the ups and downs of the mundane life are of no consequence to us.
The Vachana at the first reading seems to imply that one should give up the mundane world to reach God. The truth is that one has to realize the impermanence and illusive nature of the mundane world and make room for the way of God. When this God mindedness becomes part of our lives, the mundane world becomes more enjoyable and we create heaven on Earth!
Let us balance the mundane with spiritual!
KANADA COMMENTARY
 ಸುಳಿವ (ಅತ್ತಿತ್ತ ತಿರುಗುವ)  ಸುತ್ತುವ (ಅಲೆದಾಡುವ) ವ್ಯವಹರಣೆಯುಳ್ಳನ್ನಕ್ಕರ (ದೈನಂದಿನ ಕಾರ್ಯದಲ್ಲಿ ತೊಡಗಿರುವಾಗ)ಅರಿಯೆನರಿಯೆ (ತಿಳಿಯುವುದಿಲ್ಲ) ಶಿವಪಥವ (ಶಿವನ ದಾರಿ)
ಗುಹೇಶ್ವರ ಲಿಂಗದ ನಿಜವರಿದ ಬಳಿಕ (ಗುಹೇಶ್ವರನ ಸತ್ಯ ರೂಪವನ್ನು ತಿಳಿದ ಮೇಲೆ)
ಅರಿಯೆನರಿಯೆ (ತಿಳಿಯುವುದಿಲ್ಲ)ಲೋಕದ ಬಳಕೆಯ! (ಲೋಕದ ವ್ಯವಹಾರ)
ಅರ್ಥ:
ಈ ವಚನದಲ್ಲಿ ಅಲ್ಲಮರು ಶಿವಪಥ ಮತ್ತು  ಲೋಕದ ವ್ಯವಹಾರಗಳು ಹೇಗೆ ಬೇರೆ ಬೇರೆ, ಮತ್ತು ಒಂದು ಇದ್ದಾಗ ಮತ್ತೊಂದು ಇರುವುದಿಲ್ಲ, ಎಂಬುದನ್ನು ಹೇಳುತ್ತಿದ್ದಾರೆ. ಎಲ್ಲಿಯವರೆಗೆ ಜೀವನು ಲೋಕದ ವ್ಯವಹಾರದಲ್ಲಿ ಪೂರ್ತಿಯಾಗಿ ತೊಡಗಿಕೊಂಡಿರುತ್ತಾನೆಯೋ ಅಲ್ಲಿಯ ವರೆಗೆ ಅವನಿಗೆ ಶಿವಪಥವೆಂಬುದೊಂದಿದೆ ಎಂಬುದು ಕೂಡ ತಿಳಿಯುವುದಿಲ್ಲ. ಏಕೆಂದರೆ ಆತನ ಮನಸ್ಸು ಲೋಕದ ವ್ಯವಹಾರದಲ್ಲಿ ಮುಳುಗಿರುತ್ತದೆ.ಲೋಕದ ವಿಷಯಗಳ ಸುತ್ತ ಸುಳಿಯುತ್ತಿರುತ್ತದೆ. ಸುತ್ತಿ ಸುತ್ತಿ ಮತ್ತೆ ಅಲ್ಲಿಯೆ ತಳವೂರುತ್ತದೆ. ಬೇರೆ ಏನೂ ಅದಕ್ಕೆ ರುಚಿಸದು. ಮನಸ್ಸು ಚಂಚಲವಾಗಿದ್ದು ಸಂಸಾರದ ಕ್ಷಣಿಕ ಸುಖಕ್ಕೆ ತುತ್ತಾಗುತ್ತದೆ. ಹಾಗಾಗಿ ಶಿವಪಥದ ಕಡೆಗೆ ಗಮನ ಹರಿಯುವುದಿಲ್ಲ. ಲೋಕದ ಸುಖಗಳನ್ನು ಅನುಭವಿಸುವ ತೀವ್ರ ಆಸೆ. ಜೀವನನ್ನು ಲೋಕದೊಂದಿಗೆ ಕಟ್ಟಿ ಹಾಕುತ್ತದೆ. ಅದನ್ನು ಮೀರುವ ಶಕ್ತಿಯೇ ಆತನಲ್ಲಿ ಕಂಡುಬರುವುದಿಲ್ಲ. ಆ ಸುಖ ಕ್ಷಣಿಕವಾದರೂ ಅದರ ಆಕರ್ಷಣೆ ಅಪಾರ. ಇಡೀ ಜೀವನವೇ ಅದಕ್ಕಾಗಿ ಮುಡುಪಾಗಿಡುತ್ತದೆ ಜೀವ. ಆ ಅಕರ್ಷಣೆಗೆ ಒಳಗಾದ ಜೀವ ಶಿವಪಥದ ಗೊಡವೆಗೆ ಹೋಗುವುದೇ ಇಲ್ಲ. ಶಿವಪಥವು ಆತನಿಗೆ ಮುಚ್ಚಿಯೇ ಇರುತ್ತದೆ.
ಆದರೆ ಒಂದು ಸಲ ಅದರಿಂದ ಹೇಗೋ ಬಿಡಿಸಿಕೊಂಡು ಮನಸ್ಸನ್ನು ಶಿವನ ಕಡೆಗೆ ತಿರುಗಿಸಿದ ಮೇಲೆ ಅದರ ಸ್ಥಿತಿಯೇ ಬದಲಾಗುತ್ತದೆ. ಅದು ಮತ್ತೆಂದಿಗೂ ಲೋಕದ ವ್ಯವಹಾರದೊಳಗೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಲೋಕದ ವ್ಯವಹಾರ ಸಾರಹೀನವಾಗಿ ತೋರುತ್ತದೆ. ಶಿವನನ್ನು ಅರಿಯುವುದು ಎಂದರೆ ಸತ್ಯವನ್ನು ಅರಿಯುವುದು.ಈ ಜಗತ್ತಿನ ಮೂಲವಾದ ಸತ್ಯವನ್ನು ಅರಿತುಕೊಂಡರೆ  ಮಿಕ್ಕ ಎಲ್ಲವೂ ಒಂದು ಭ್ರಮೆ ಎಂಬುದು ಗಮನಕ್ಕೆ ಬರುತ್ತದೆ. ಆಗ  ಸಂಸಾರದ ವ್ಯವಹಾರದಲ್ಲಿ ಮನಸ್ಸು ತೊಡಗುವುದಿಲ್ಲ. ಆ ಸತ್ಯದ ನೆಲೆಯಲ್ಲಿ , ಈ ಜಗತ್ತನ್ನು ಕಾಡುವ ಅಶಾಂತತೆ ಧಾವಂತ ಇತ್ಯಾದಿಗಳು ಇಲ್ಲವಾಗುತ್ತವೆ. ಆ ಶಾಶ್ವತವಾದ ಆನಂದ ಕಂಡುಕೊಂಡನಂತರ ಮನಸ್ಸು ನಶ್ವರವಾದ ಸುಖದಕಡೆಗೆ ನೋಡುವುದಿಲ್ಲ, ಎನ್ನುತ್ತಾರೆ ಅಲ್ಲಮರು.
ಲೋಕದ ವ್ಯವಹಾರದಲ್ಲಿ ಸುಳಿದು ಸುತ್ತುವ ಮನಸ್ಸು ಎಂದರೆ ಏನು? ಮತ್ತು ಅದರಿಂದ ಬಿಡಿಸಿಒಳ್ಳುವುದು ಎಂದರೇನು?

ದಿನ ಬೆಳಗಾದರೆ ನಾನಾ ಕೆಲಸ ಕಾರ್ಯಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ಈ ಜಗತ್ತಿನಲ್ಲಿ ಬಾಳುವವನಿಗೆ ಇದು ಸಹಜ. ಆದರೆ ಅವುಗಳಿಗಾಗಿಯೇ ಬಾಳುವುದು,  ಮನಃ ಪೂರ್ತಿ ಅವುಗಳನ್ನೇ ತುಂಬಿಕೊಳ್ಳುವುದು, ಅವುಗಳಿಂದ ಬರವ  ಕ್ಷಣಿಕ ಲಾಭ, ಸುಖ ಗಳಲ್ಲಿ ಮುಳುಗುವುದು ಲೋಕದ ವ್ಯವಹಾರದಲ್ಲಿ ಮುಳುಗುವುದು ಆಗಿದೆ. ಅವುಗಳು ಒಡ್ಡುವ ತಾತ್ಕಾಲಿಕ ಸುಖದ ಆಮಿಷಕ್ಕೆ ಒಳಗಾಗುತ್ತೇವೆ ನಾವು. ಮತ್ತು ಆ ಸುಖವನ್ನು ಪಡೆಯುವ ವಿವಿಧ ದಾರಿಗಳನ್ನು ಹುಡುಕುತ್ತ ಇರುತ್ತೇವೆ. ಒಂದು ಆಮಿಷಕ್ಕೆ ಒಳಗಾಗಿ ಅದನ್ನು ಪೂರೈಸುವ ವೇಳೆಗೆ ಇನ್ನೊಂದು ತಲೆ ಎತ್ತುತ್ತದೆ. ಹೀಗೆ ಅದರ ಸರಪಳಿಯಲ್ಲಿ ಸಿಕ್ಕಿಕೊಳ್ಳುತ್ತೇವೆ. ಇನ್ನು ಶಿವಪಥ ಅರಿಯುವ ಮನಸ್ಸಾಗಲಿ ಅಥವಾ ಸಮಯವಾಗಲಿ ಎಲ್ಲಿರುತ್ತದೆ?

ಆದರೆ ಶಿವಪಥದಲ್ಲಿ ಮನಸ್ಸಿಟ್ಟ ವ್ಯಕ್ತಿಯ ತಿಳಿವಳಿಕೆಯೇ ಬೇರೆ. ಆತನೂ ಲೋಕದ ವ್ಯವಹಾರದಲ್ಲಿ ತೊಡಗಿರುತ್ತಾನೆ. ಆದರೆ ಆತನಿಗೆ ಅವುಗಳ ಆಮಿಷವು ಕಾಣುವುದಿಲ್ಲ. ಅವುಗಳು ಕೊಡುವ ಕ್ಷಣಿಕ ಸುಖದ ಪೂರ್ಣ ಅರಿವು ಆತನಿಗಾಗಿರುತ್ತದೆ. ಅವುಗಳು ಒಡ್ಡುವ ನಶ್ವರವಾದ ಸುಖದ ಕುಣಿಕೆಯಲ್ಲಿ ಅವನು ಸಿಕ್ಕಿಹಾಕಿಕೊಳ್ಳುವುದಿಲ್ಲ. ಆದ್ದರಿಂದ ಆ ವ್ಯವಹಾರಗಳನ್ನು ಅಂಟಿಯೂ ಅಂಟದಂತೆ ನಿರ್ವಹಿಸುತ್ತಾನೆ. ತನ್ನ ಬದುಕಿಗೆ ಎಷ್ಟು ಬೇಕೋ ಅಷ್ಟನ್ನೇ ಆತ ಮಾಡುತ್ತಾನೆ. ಅದು ಕೂಡ ಸಂಪೂರ್ಣ ನಿಷ್ಕಾಮದ ದೃಷ್ಟಿಯಿಂದ. ಹೀಗಾಗಿ  ಅಲ್ಲಿ ಆತನಿಗೆ ಅಶಾಂತತೆ ಅಥವಾ ಈ ಜಗತ್ತಿನ ಧಾವಂತಗಳು ಕಾಡುವುದಿಲ್ಲ.  ಆತನಿಗೆ ಸತ್ಯದ ನೆಲೆಯ ಅರಿವಾಗಿರುತ್ತದೆ. ಅದು ಆತನನ್ನು ಲೋಕದ ವ್ಯವಹಾರದಲ್ಲಿ ಮುಳುಗಲು ಬಿಡುವುದಿಲ್ಲ.

 

 

Friday, August 9, 2013

Vachana 154: Tappi Nodidade - The Right View

VACHANA IN KANNADA


ತಪ್ಪಿ ನೋಡಿದಡೆ  ಮನದಲ್ಲಿ ಅಚ್ಚೊತ್ತಿದಂತಿತ್ತು
ಇಪ್ಪೆಡೆಯ ವಿಚಾರಿಸಿ ನೋಡಿದಡೆ  ಇಲ್ಲದಂತಾಯಿತ್ತು
ತೆಪ್ಪದ ಜಲದ ಪಾದ ಘಾತದಂತೆ
ಕರ್ತೃತ್ವವೆಲ್ಲಿಯದೋ ಗುಹೇಶ್ವರಾ?


TRANSLITERATION

tappi  nODidaDe manadalli accottidaMtittu
ippeDeya vicaarisi nODidaDe illadaMtaayittu
teppada jalada paada ghaatadaMte
kartRutvavelliyadO guheshvaraa?


CLICK HERE FOR A RECITATION:




TRANSLATION (WORDS)


tappi (without looking at the source) nODidaDe (if looked at the world) manadalli (in the mind) accottidaMtittu (the material world gets imprinted as the truth)
ippeDeya  (the source of the world) vicaarisi nODidaDe (if looked at carefully)  illadaMtaayittu (it dies)
teppada (of the small float)  jalada (in water)  paada (feet) ghaatadaMte (just as moving of)
kartRutvavelliyadO (where is the feeling of I ness) guheshvaraa?

VACHANA IN ENGLISH


When looked at the world the wrong way (ignoring the source), in the mind
The material world gets imprinted as the truth!
If looked carefully at the source of the world, it vanishes!
Just as the moving of the feet (of the swimmer) holding on to a float.
Where is the feeling of I-ness, Oh, Guhesvara?


 COMMENTARY


Allama Prabhu directs us to the right perspective of viewing this material world in this Vachana, saying that the one who has realized the divine who is the source of this world, although participates in the business of the world fully, will never feel that he is the doer. He is the one who will have conquered the I-ness (ego).

 It is important that everyone is aware of the divine as the source of this world. In practice, this is not the case.  To most, this world appears real and true when they have not developed the God mindedness and have not invited Him into their lives.  This is the state of the mind of common individuals. But, when the individual develops the subtle mind and probes to gain the awareness of the divine as the source, he graduates to the realization that the material world is an illusion. He then stays above the consequences of this world while being a full part of this world. He understands the limits and does not get perturbed by the highs and lows in his life. Allama Prabhu uses an interesting simile to describe this state. A swimmer holding on to the float moves his feet in rhythm to move forward. But he very soon realizes that he is moving forward because of the float and not due to his effort.  He realizes that the swimming and moving forward are all His and the self is simply an actor in this drama of the Divine. He owns nothing and creates nothing without Him being behind it. Such realization in life is what is needed to remove the ‘I am the doer’ syndrome and to conquer the ego.


Oh Lord, Everything I do and I have is Yours!


KANNADA COMMENTARY


ಅರ್ಥ:


ತಪ್ಪಿ (ಶಿವನನ್ನು ನೋಡದೆ ತಪ್ಪಿ)  ನೋಡಿದಡೆ (ಈ ಸಂಸಾರನ್ನು ನೋಡಿದರೆ)  ಮನದಲ್ಲಿ ಅಚ್ಚೊತ್ತಿದಂತಿತ್ತು (ಈ ಸಂಸಾರ ನಿಜವೆಂಬತೆ  ಅಚ್ಚೊತ್ತಿ ನಿಲ್ಲುತ್ತದೆ)
ಇಪ್ಪೆಡೆಯ (ಇಪ್ಪ=ಎಡೆ.ಇರುವ ಸ್ಥಳ,   ಸಂಸಾರದ ಮೂಲವನ್ನು)  ವಿಚಾರಿಸಿ ನೋಡಿದಡೆ  ಇಲ್ಲದಂತಾಯಿತ್ತು (ವಿಚಾರ ಮಾಡಿ ನೋಡಿದಾಗ ಅದು ಇಲ್ಲವಾಯಿತು)
ತೆಪ್ಪದ ಜಲದ ಪಾದ ಘಾತದಂತೆ (ತೆಪ್ಪವನ್ನು ಹಿಡಿದು ಈಜುವವನ ಕಾಲು ಬಡಿಯುವಿಕೆ ಯಂತೆ)
ಕರ್ತೃತ್ವವೆಲ್ಲಿಯದೋ ಗುಹೇಶ್ವರಾ? (ತಾನು ಮಾಡಿದೆನೆಂಬ ಭಾವ ಇರುವುದಿಲ್ಲ)


ತಾತ್ಪರ್ಯ:


ಈ ಸಂಸಾರದ ಮೂಲದಲ್ಲಿರುವ ಪರವಸ್ತುವಿನ ಅರಿವು ಪಡೆದವನು  ಈ ಸಂಸಾರದಲ್ಲಿ ಇದ್ದು ಇಲ್ಲಿಯ ವ್ಯವಹಾರದಲ್ಲಿ ಭಾಗವಹಿಸಿದರೂ ಸಹ ಆತನಲ್ಲಿ ಆ ಕೆಲಸ ತಾನು ಮಾಡಿದೆನು ಎಂಬ ಭಾವವಿರುವುದಿಲ್ಲ ಎನ್ನುತ್ತಾರೆ ಅಲ್ಲಮರು.


ಪ್ರತಿಯೊಬ್ಬನೂ ಈ ಸಂಸಾರದ ಮೂಲವನ್ನು ಕಂಡುಕೊಳ್ಳಬೇಕಾದದ್ದು  ಸೂಕ್ತ, ನ್ಯಾಯ. ಅದರೆ ಹಾಗೆ ಆಗುವುದಿಲ್ಲ. ಆ ಶಿವನನ್ನು ಅರಿತುಕೊಳ್ಳದೆ ತಪ್ಪಿ ಈ ಜಗತ್ತನ್ನು ನೋಡಿದರೆ ಈ ಜಗತ್ತೇ ನಿಜವಾಗಿ ತೋರುತ್ತದೆ. ಮನಸ್ಸಿನಲ್ಲಿ ಅದರ ಅಚ್ಚು ಸತ್ಯವೆಂಬಂತೆ ಮೂಡಿಬಿಡುತ್ತದೆ. ಇದು  ಸಹಜ. ಆದರೆ  ವಿಚಾರ ಮಾಡಿ ಮೂಲವಸ್ತುವನ್ನು ನೋಡಿದಾಗ, ಅಂದರೆ “ನಾನು ನೋಡುತ್ತಿರುವ ಈ ಸಂಸಾರ ನಿಜವಾದದ್ದೇ? ಅಥವಾ ಇದರ ಮೂಲದಲ್ಲಿ ಬೇರೆ ಏನಾದರು ಇದೆಯೆ?” ಎಂದು ವಿಚಾರಮಾಡಿ  ಕಂಡುಕೊಂಡಾಗ  ನಿಜದ ಅರಿವು ಆಗುತ್ತದೆ. ಆ ಅರಿವು ಈ ಸಂಸಾರವನ್ನು ಇಲ್ಲವಾಗಿಸುತ್ತದೆ. ಏಕೆಂದರೆ ಕಣ್ಣಿಗೆ ಸತ್ಯವಾಗಿ ಕಾಣುವ ಸಂಸಾರಕ್ಕಿಂತಲೂ  ಸೂಕ್ಷ್ಮವಾದರೂ ಘನವಾದ ಸತ್ಯದ ಅನುಭವವಾಗುತ್ತದೆ ವಿಚಾರಿಸಿ ನೋಡಿದಾಗ. ಹಾಗೆ ಆದಾಗ ಆ ಅರಿವು ಪಡೆದವನು ಈ ಸಂಸಾರದಲ್ಲ್ಲಿ ಇದ್ದುಕೊಂಡು ಇಲ್ಲದವನಾಗುತ್ತಾನೆ. ಅಂದರೆ ಅದರ ಇತಿ ಮಿತಿಗಳನ್ನು ಅರಿತ ಶರಣನು ಸಂಸಾರದ ಕಾರ್ಯ ಕೆಲಸಗಳನ್ನು ನಿರ್ವಹಿಸಿದರೂ ಆತನಲ್ಲಿ ಅವುಗಳನ್ನು ತಾನು ಮಾಡಿದೆನೆಂಬ ಭಾವವಿರುವುದಿಲ್ಲ.  ತೆಪ್ಪವನ್ನು ಹಿಡಿದು ಈಜುತ್ತಿರುವವನು ನೀರಿನಲ್ಲಿ ತಾನು  ಕಾಲುಬಡಿಯುತ್ತಿದ್ದರೂ ತಾನು  ಚಲಿಸುತ್ತಿರುವುದು ತನ್ನ ಶಕ್ತಿಯಿಂದ ಅಲ್ಲ. ತೆಪ್ಪದ ಕಾರಣದಿಂದ ನಾನು ಚಲಿಸುತ್ತಿದ್ದೇನೆ ಎಂಬುದರ ಅರಿವು ಇರುತ್ತದೆ.  ಅದೇ ರೀತಿ ಆತನಲ್ಲಿ ಕರ್ತೃತ್ವ ಭಾವವಿರುವದಿಲ್ಲ. ಆತನು ಶಿವನೆಂಬ ತೆಪ್ಪವನ್ನು ಹಿಡಿದುಕೊಂಡು ಈ ಸಂಸಾರ ಸಾಗರದಲ್ಲಿ ಈಜುತ್ತಿರುತ್ತಾನೆ. ಶಿವ ಭಾವ ಅವನನ್ನು ನಡೆಸುತ್ತದೆ. ಆತನಿಗೆ ಅದರ ಅರಿವಿರುತ್ತದೆ. ಆದ್ದರಿಂದ ಈಜಾಟ ಶಿವನದೆ. ತಾನು ನೆಪಮಾತ್ರವೆಂಬ ತಿಳಿವಳಿಕೆ ಆತನಲ್ಲಿರುತ್ತದೆ.


Friday, August 2, 2013

Vachana 153: Khandaakhanda Samyogavillada – He is Within!

VACHANA IN KANNADA

ಖಂಡಾಖಂಡ ಸಂಯೋಗವಿಲ್ಲದ ಅಖಂಡಿತನ ನಿಲವು
ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ.
ಬಯಲ ಹಿರಿಯರು ಬಯಲನೇ ಅರಸುವರು
ಅಲ್ಲಿ ಉಂಟೇ ಹೇಳಾ ಗುಹೇಶ್ವರಾ?

TRANSLITERATION
khaMDaakhaMDa saMyOgavillada  akhaMDitana  nilavu
tannalli allade matteelliyU illa
bayala hiriyaru  bayalane arasuvaru
alli uMTE hELaa guhEshvaraa?

CLICK HERE FOR A RECITATION

TRANSLATION (WORDS)
 
khaMDa (the fragmented, Body) akhaMDa  (the  unbroken, not fragmented, soul) saMyOgavillada (is not touched by,  is beyond)  akhaMDitana  (the whole, divine ) nilavu (the being of)
tannalli  (in one self) allade (other than)  matteelliyU (anywhere else)  illa (not found )
bayala (open field)  hiriyaru  (the elders) bayalane (only in the open field) arasuvaru (look for, seek)
alli (there) uMTE (is it)  hELaa (tell)  guhEshvaraa? (Guheshvara)

VACHANA IN ENGLISH

The being of the Whole (Divine) who is beyond the fragmented and the not fragmented,
cannot be found anywhere else other than in oneself.
The elders of the open field seek only in the open field.
Pray tell, Guhesvara! Is He there?

COMMENTARY

In this Vachana, Allama Prabhu says that the divine is within oneself and cannot be found anywhere else.  He stresses that the people of this world seek Him in this world without realizing that He cannot be found there.

The word ‘khaMda’ in the first line could mean ‘the fragmented’ and ‘the body’. Correspondingly, the word ‘akhaMda’ means ‘unfragmented, whole’ and ‘that without body –the soul or Jiva’. The Divine is ‘akhaMdita’, whole. He is beyond the fragmented and unfragmented; beyond the body and the soul.  We tend to conceptualize our individual souls (Jivaatma) as sparks from the super soul (paramaatma). This Vachana discounts the duality of individual and super souls and implies that the Divine is just One and unfragmented. The popular simile is that although the Sunshine in individual houses seem to be a fragment of the light provided by the Sun, it is just one and whole.

The second line stresses that the Divine is completely within oneself. The third line uses the word ’bayalu’ (open field) to mean the mundane world. This world does not stay as an open field. Its form and contents keep changing. As such, it is not permanent. People attached to this world develop the ego to make them believe that everything they need is here. Such elders (so called knowledgeable seekers) keep seeking Him in this world. Allama Prabhu ends the Vachana questioning ‘Lord Guhesvara, is He in this World?’

It is interesting to explore the concept of  ‘seeking within’ a bit further. We can start examining how our mind behaves. We can start questioning as to why certain thoughts appear in our mind? What is the source of those thoughts? This line of questioning would lead us to the realization that what we know and feel is really a fragment and not the whole. This realization of incompleteness will prod us to probe further towards the whole and complete. This will make our mind behave with care and concern. Such care and concern seems to be the first step in exploring within! 

Let us start the journey to within! 

KANNADA COMMENTARY

ಅರ್ಥ:

ಖಂಡಾಖಂಡ ( ಖಂಡ ಮತ್ತು ಅಖಂಡ, ಅಂಶ ಮತ್ತು ಪರಿಪೂರ್ಣ) ಸಂಯೋಗವಿಲ್ಲದ  (ಈ ಎರಡರ ಸ್ಪರ್ಶವಿಲ್ಲದ) ಅಖಂಡಿತನ (ಪರಿಪೂರ್ಣವಾದವನ) ನಿಲವು (ಇರುವಿಕೆಯನ್ನು)
ತನ್ನಲ್ಲಿ ಅಲ್ಲದೆ ಮತ್ತೆಲ್ಲಿಯೂ ಇಲ್ಲ. (ತನ್ನ ಒಳಗಲ್ಲದೆ ಬೇರೆ ಎಲ್ಲಿಯೂ ಇಲ್ಲ)
ಬಯಲ ಹಿರಿಯರು (ನಾಶವಾಗುವ ಜಗತ್ತನ್ನು ನಂಬಿದ ಹಿರಿಯರು)  ಬಯಲನೇ ಅರಸುವರು (ನಾಶವಾಗುವ ಜಗತ್ತಿನಲ್ಲಿಯೇ ಆ ಪರವಸ್ತುವನ್ನು ಹುಡುಕುವರು)
ಅಲ್ಲಿ ಉಂಟೇ ಹೇಳಾ ಗುಹೇಶ್ವರಾ? ( ಆ ಪರಿಪೂರ್ಣ ವಸ್ತು ಅಲ್ಲಿದೆಯೆ?) 

ತಾತ್ಪರ್ಯ:

ಈ ವಚನದಲ್ಲಿ ಅಲ್ಲಮ ಪ್ರಭುಗಳು ಪರವಸ್ತುವಿನ ಸ್ಥಾನ ಎಲ್ಲಿದೆ ಎಂಬುದನ್ನು ಹೇಳುತ್ತ  ಅದಕ್ಕಾಗಿ ಎಲ್ಲಿ ನೋಡಬೇಕು ಎಂಬುದನ್ನು ಹೇಳುತ್ತಾರೆ.

ಆ ಪರವಸ್ತುವಿನಲ್ಲಿ  ಆಂಶಿಕತೆ  ಮತ್ತು  ಪರಿಪೂರ್ಣತೆ ಎಂಬ  ದ್ವೈತ ಭಾವ ವಿಲ್ಲ, ಅಂದರೆ ಖಂಡ ಮತ್ತು ಅಖಂಡ ಎಂಬ ಭಿನ್ನ ಭಾವದ ಸೋಂಕೂ ಅಲ್ಲಿ ಇಲ್ಲ. ಇಂತಹ ಪರಿಪೂರ್ಣವಸ್ತುವು ನಮ್ಮ ನಮ್ಮಲ್ಲಿಯೇ ಇದೆ. ಅಂದರೆ ಅದು ನಮ್ಮ  ಅಂತರಂಗದಲ್ಲಿಯೆ ಇದೆ. ಅದು ಬೇರೆ ಎಲ್ಲಿಯೂ ಇಲ್ಲ. ಆದರೆ ಬಯಲ ಹಿರಿಯರು ಅದನ್ನು ಬಯಲಲ್ಲಿ ಅರಸುತ್ತಾರೆ ಎನ್ನುತ್ತಾರೆ ಅಲ್ಲಮರು. ಇಲ್ಲಿ ಅಲ್ಲಮರು ಬಯಲು ಎಂಬ ಪದವನ್ನು ಹೊರಗಡೆ ಕಂಡು ಬರುವ ಬಯಲಿನ ಅರ್ಥದಲ್ಲಿ ಬಳಸುತ್ತಿದ್ದಾರೆ. ಭೌತಿಕವಾದ ಜಗತ್ತಿನಲ್ಲಿ ಕಂಡು ಬರುವ ಬಯಲು ನಶ್ವರವಾದದ್ದು. ಅದು ಸದಾಕಾಲ ಬಯಲಾಗಿಯೆ ಉಳಿಯುವುದಿಲ್ಲ. ಅದರ ರೂಪ, ಬದಲಾವಣೆಗೆ ಒಳಗಾಗುತ್ತದೆ. ಆದ್ದರಿಂದ ಆ ಬಯಲು ನಶ್ವರತೆಯನ್ನು ಪ್ರತಿನಿಧಿಸುತ್ತದೆ. ಅಂತಹ ಭೌತಿಕ ಜಗತ್ತನ್ನು ನೆಚ್ಚಿಕೊಂಡ ಜನರು ಅಹಂಕಾರವಶರಾಗಿತ್ತಾರೆ. ಆದ್ದರಿಂದ  ಅವರು ಹಿರಿಯರು. ಸತ್ತು ಹುಟ್ಟುವ ಜಗತ್ತನ್ನು ನಿಜವೆಂದು ನಂಬಿದವರು ಆ ಪರವಸ್ತುವನ್ನು ಅದರಲ್ಲಿಯೇ ಹುಡುಕುವರು. ಅಲ್ಲಿ ಅದು ಹೇಗೆ ಸಿಗಲು ಸಾಧ್ಯ? ಎಂದು ಕೇಳುತ್ತಾರೆ ಅಲ್ಲಮ ಪ್ರಭುಗಳು 

ಇಲ್ಲಿ ಅಂತರಂಗದಲ್ಲಿ ನೋಡುವುದು ಎಂದರೆ ಏನು? ಎಂಬ ಪ್ರಶ್ನೆ ಹುಟ್ಟುತ್ತದೆ. ಕೊನೇ ಪಕ್ಷ ಆರಂಭದಲ್ಲಿಯಾದರೂ ನಾವು ನಮ್ಮ ನಮ್ಮ ಮನಸ್ಸು ಹೇಗೆ ನಡೆದುಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕು. ಅದರ ಆಯಾ ನಡತೆಗೆ ಕಾರಣವೇನು? ಮನಸ್ಸಿನಲ್ಲಿ ಆಯಾ ಭಾವ ಹುಟ್ಟಲು ಕಾರಣವಾವುದು? ಆ ಭಾವನೆಗೆ  ನೆಲೆಯಾವುದು? ಎಂಬಂತಹ ವಿಷಯಗಳನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು. ಆಗ  ನಮಗೆ ತಿಳಿದಿರುವ ಎಲ್ಲವೂ ಅಂಶವೇ ಹೊರತು ಪರಿಪೂರ್ಣವಲ್ಲ ಎಂಬ ಅರಿವಾಗುತ್ತದೆ. ನಮಗೆ ಅಪೂರ್ಣತೆಯ ಅರಿವಾಗುತ್ತ ಹೋದಂತೆ ಆ ಪರಿಪೂರ್ಣದ ಹೊಳಹು ಉಂಟಾಗುತ್ತದೆ. ಇದರಿಂದ ಮನಸ್ಸು ತನ್ನ ಬಗ್ಗೆ ಎಚ್ಚರಿಕೆಯಿಂದರಲುತೊಡಗುತ್ತದೆ. ಈ ಎಚ್ಚರಿಕೆ, ನಮ್ಮ ಅಂತರಂಗವನ್ನು ನೋಡಿಕೊಳ್ಳಲು ಬಹಳ ಮುಖ್ಯವಾದ ಮೊದಲ ಹೆಜ್ಜೆ ಎಂದೆನಿಸುತ್ತದೆ.