Friday, August 16, 2013

Vachana 155: Suliva Suttuva – Wandering in this World

VACHANA IN KANNADA

ಸುಳಿವ ಸುತ್ತುವ ವ್ಯವಹರಣೆಯುಳ್ಳನ್ನಕ್ಕರ
ಅರಿಯೆನರಿಯೆ ಶಿವಪಥವ
ಗುಹೇಶ್ವರ ಲಿಂಗದ ನಿಜವರಿದ ಬಳಿಕ
ಅರಿಯೆನರಿಯೆ ಲೋಕದ ಬಳಕೆಯ!

TRANSLITERATION
suLiva suttuva  vyvaharaNe yuLLannakkara
ariyenariye shivapathava
guhEshvara liMgada nijavarida baLika
ariyenariye lOkada  baLkeya!
CLICK HERE FOR A RECITATION
TRANSLATION (WORDS)
suLiva (roaming, wandering) suttuva (go round and round)   vyvaharaNe yuLLannakkara (involved in day today business)
ariyenariye  ( don’t know, un aware of  )  shivapathava (the way to God)
guhEshvara liMgada (God Guheshvara) nijavarida baLika (after knowing  the truth)
ariyenariye ( don’t know, un aware of)  lOkada  baLkeya! (this world’s day today business)
VACHANA IN ENGLISH

While wandering and going round and round in day to day business,
Unaware of the way to God!
After knowing the truth of God Guhesvara,
Unaware of this world’s day to day business!
COMMENTARY
In this Vachana, Allama Prabhu highlights the difference between the way of God and the way of mundane world. As long as we are completely immersed in the activities of this mundane world, we would not be aware of the way to God; we would not even feel the necessity to know God. The comforts of this world and the excitement we receive of our successes keep us completely closed from any other thought. If for some reason, we reach a breakpoint and the events propel us towards becoming spiritual, there is a very good chance that we turn towards the way to God or ways of God become our life. When such transition takes place, the ups and downs of the mundane life are of no consequence to us.
The Vachana at the first reading seems to imply that one should give up the mundane world to reach God. The truth is that one has to realize the impermanence and illusive nature of the mundane world and make room for the way of God. When this God mindedness becomes part of our lives, the mundane world becomes more enjoyable and we create heaven on Earth!
Let us balance the mundane with spiritual!
KANADA COMMENTARY
 ಸುಳಿವ (ಅತ್ತಿತ್ತ ತಿರುಗುವ)  ಸುತ್ತುವ (ಅಲೆದಾಡುವ) ವ್ಯವಹರಣೆಯುಳ್ಳನ್ನಕ್ಕರ (ದೈನಂದಿನ ಕಾರ್ಯದಲ್ಲಿ ತೊಡಗಿರುವಾಗ)ಅರಿಯೆನರಿಯೆ (ತಿಳಿಯುವುದಿಲ್ಲ) ಶಿವಪಥವ (ಶಿವನ ದಾರಿ)
ಗುಹೇಶ್ವರ ಲಿಂಗದ ನಿಜವರಿದ ಬಳಿಕ (ಗುಹೇಶ್ವರನ ಸತ್ಯ ರೂಪವನ್ನು ತಿಳಿದ ಮೇಲೆ)
ಅರಿಯೆನರಿಯೆ (ತಿಳಿಯುವುದಿಲ್ಲ)ಲೋಕದ ಬಳಕೆಯ! (ಲೋಕದ ವ್ಯವಹಾರ)
ಅರ್ಥ:
ಈ ವಚನದಲ್ಲಿ ಅಲ್ಲಮರು ಶಿವಪಥ ಮತ್ತು  ಲೋಕದ ವ್ಯವಹಾರಗಳು ಹೇಗೆ ಬೇರೆ ಬೇರೆ, ಮತ್ತು ಒಂದು ಇದ್ದಾಗ ಮತ್ತೊಂದು ಇರುವುದಿಲ್ಲ, ಎಂಬುದನ್ನು ಹೇಳುತ್ತಿದ್ದಾರೆ. ಎಲ್ಲಿಯವರೆಗೆ ಜೀವನು ಲೋಕದ ವ್ಯವಹಾರದಲ್ಲಿ ಪೂರ್ತಿಯಾಗಿ ತೊಡಗಿಕೊಂಡಿರುತ್ತಾನೆಯೋ ಅಲ್ಲಿಯ ವರೆಗೆ ಅವನಿಗೆ ಶಿವಪಥವೆಂಬುದೊಂದಿದೆ ಎಂಬುದು ಕೂಡ ತಿಳಿಯುವುದಿಲ್ಲ. ಏಕೆಂದರೆ ಆತನ ಮನಸ್ಸು ಲೋಕದ ವ್ಯವಹಾರದಲ್ಲಿ ಮುಳುಗಿರುತ್ತದೆ.ಲೋಕದ ವಿಷಯಗಳ ಸುತ್ತ ಸುಳಿಯುತ್ತಿರುತ್ತದೆ. ಸುತ್ತಿ ಸುತ್ತಿ ಮತ್ತೆ ಅಲ್ಲಿಯೆ ತಳವೂರುತ್ತದೆ. ಬೇರೆ ಏನೂ ಅದಕ್ಕೆ ರುಚಿಸದು. ಮನಸ್ಸು ಚಂಚಲವಾಗಿದ್ದು ಸಂಸಾರದ ಕ್ಷಣಿಕ ಸುಖಕ್ಕೆ ತುತ್ತಾಗುತ್ತದೆ. ಹಾಗಾಗಿ ಶಿವಪಥದ ಕಡೆಗೆ ಗಮನ ಹರಿಯುವುದಿಲ್ಲ. ಲೋಕದ ಸುಖಗಳನ್ನು ಅನುಭವಿಸುವ ತೀವ್ರ ಆಸೆ. ಜೀವನನ್ನು ಲೋಕದೊಂದಿಗೆ ಕಟ್ಟಿ ಹಾಕುತ್ತದೆ. ಅದನ್ನು ಮೀರುವ ಶಕ್ತಿಯೇ ಆತನಲ್ಲಿ ಕಂಡುಬರುವುದಿಲ್ಲ. ಆ ಸುಖ ಕ್ಷಣಿಕವಾದರೂ ಅದರ ಆಕರ್ಷಣೆ ಅಪಾರ. ಇಡೀ ಜೀವನವೇ ಅದಕ್ಕಾಗಿ ಮುಡುಪಾಗಿಡುತ್ತದೆ ಜೀವ. ಆ ಅಕರ್ಷಣೆಗೆ ಒಳಗಾದ ಜೀವ ಶಿವಪಥದ ಗೊಡವೆಗೆ ಹೋಗುವುದೇ ಇಲ್ಲ. ಶಿವಪಥವು ಆತನಿಗೆ ಮುಚ್ಚಿಯೇ ಇರುತ್ತದೆ.
ಆದರೆ ಒಂದು ಸಲ ಅದರಿಂದ ಹೇಗೋ ಬಿಡಿಸಿಕೊಂಡು ಮನಸ್ಸನ್ನು ಶಿವನ ಕಡೆಗೆ ತಿರುಗಿಸಿದ ಮೇಲೆ ಅದರ ಸ್ಥಿತಿಯೇ ಬದಲಾಗುತ್ತದೆ. ಅದು ಮತ್ತೆಂದಿಗೂ ಲೋಕದ ವ್ಯವಹಾರದೊಳಗೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಲೋಕದ ವ್ಯವಹಾರ ಸಾರಹೀನವಾಗಿ ತೋರುತ್ತದೆ. ಶಿವನನ್ನು ಅರಿಯುವುದು ಎಂದರೆ ಸತ್ಯವನ್ನು ಅರಿಯುವುದು.ಈ ಜಗತ್ತಿನ ಮೂಲವಾದ ಸತ್ಯವನ್ನು ಅರಿತುಕೊಂಡರೆ  ಮಿಕ್ಕ ಎಲ್ಲವೂ ಒಂದು ಭ್ರಮೆ ಎಂಬುದು ಗಮನಕ್ಕೆ ಬರುತ್ತದೆ. ಆಗ  ಸಂಸಾರದ ವ್ಯವಹಾರದಲ್ಲಿ ಮನಸ್ಸು ತೊಡಗುವುದಿಲ್ಲ. ಆ ಸತ್ಯದ ನೆಲೆಯಲ್ಲಿ , ಈ ಜಗತ್ತನ್ನು ಕಾಡುವ ಅಶಾಂತತೆ ಧಾವಂತ ಇತ್ಯಾದಿಗಳು ಇಲ್ಲವಾಗುತ್ತವೆ. ಆ ಶಾಶ್ವತವಾದ ಆನಂದ ಕಂಡುಕೊಂಡನಂತರ ಮನಸ್ಸು ನಶ್ವರವಾದ ಸುಖದಕಡೆಗೆ ನೋಡುವುದಿಲ್ಲ, ಎನ್ನುತ್ತಾರೆ ಅಲ್ಲಮರು.
ಲೋಕದ ವ್ಯವಹಾರದಲ್ಲಿ ಸುಳಿದು ಸುತ್ತುವ ಮನಸ್ಸು ಎಂದರೆ ಏನು? ಮತ್ತು ಅದರಿಂದ ಬಿಡಿಸಿಒಳ್ಳುವುದು ಎಂದರೇನು?

ದಿನ ಬೆಳಗಾದರೆ ನಾನಾ ಕೆಲಸ ಕಾರ್ಯಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ಈ ಜಗತ್ತಿನಲ್ಲಿ ಬಾಳುವವನಿಗೆ ಇದು ಸಹಜ. ಆದರೆ ಅವುಗಳಿಗಾಗಿಯೇ ಬಾಳುವುದು,  ಮನಃ ಪೂರ್ತಿ ಅವುಗಳನ್ನೇ ತುಂಬಿಕೊಳ್ಳುವುದು, ಅವುಗಳಿಂದ ಬರವ  ಕ್ಷಣಿಕ ಲಾಭ, ಸುಖ ಗಳಲ್ಲಿ ಮುಳುಗುವುದು ಲೋಕದ ವ್ಯವಹಾರದಲ್ಲಿ ಮುಳುಗುವುದು ಆಗಿದೆ. ಅವುಗಳು ಒಡ್ಡುವ ತಾತ್ಕಾಲಿಕ ಸುಖದ ಆಮಿಷಕ್ಕೆ ಒಳಗಾಗುತ್ತೇವೆ ನಾವು. ಮತ್ತು ಆ ಸುಖವನ್ನು ಪಡೆಯುವ ವಿವಿಧ ದಾರಿಗಳನ್ನು ಹುಡುಕುತ್ತ ಇರುತ್ತೇವೆ. ಒಂದು ಆಮಿಷಕ್ಕೆ ಒಳಗಾಗಿ ಅದನ್ನು ಪೂರೈಸುವ ವೇಳೆಗೆ ಇನ್ನೊಂದು ತಲೆ ಎತ್ತುತ್ತದೆ. ಹೀಗೆ ಅದರ ಸರಪಳಿಯಲ್ಲಿ ಸಿಕ್ಕಿಕೊಳ್ಳುತ್ತೇವೆ. ಇನ್ನು ಶಿವಪಥ ಅರಿಯುವ ಮನಸ್ಸಾಗಲಿ ಅಥವಾ ಸಮಯವಾಗಲಿ ಎಲ್ಲಿರುತ್ತದೆ?

ಆದರೆ ಶಿವಪಥದಲ್ಲಿ ಮನಸ್ಸಿಟ್ಟ ವ್ಯಕ್ತಿಯ ತಿಳಿವಳಿಕೆಯೇ ಬೇರೆ. ಆತನೂ ಲೋಕದ ವ್ಯವಹಾರದಲ್ಲಿ ತೊಡಗಿರುತ್ತಾನೆ. ಆದರೆ ಆತನಿಗೆ ಅವುಗಳ ಆಮಿಷವು ಕಾಣುವುದಿಲ್ಲ. ಅವುಗಳು ಕೊಡುವ ಕ್ಷಣಿಕ ಸುಖದ ಪೂರ್ಣ ಅರಿವು ಆತನಿಗಾಗಿರುತ್ತದೆ. ಅವುಗಳು ಒಡ್ಡುವ ನಶ್ವರವಾದ ಸುಖದ ಕುಣಿಕೆಯಲ್ಲಿ ಅವನು ಸಿಕ್ಕಿಹಾಕಿಕೊಳ್ಳುವುದಿಲ್ಲ. ಆದ್ದರಿಂದ ಆ ವ್ಯವಹಾರಗಳನ್ನು ಅಂಟಿಯೂ ಅಂಟದಂತೆ ನಿರ್ವಹಿಸುತ್ತಾನೆ. ತನ್ನ ಬದುಕಿಗೆ ಎಷ್ಟು ಬೇಕೋ ಅಷ್ಟನ್ನೇ ಆತ ಮಾಡುತ್ತಾನೆ. ಅದು ಕೂಡ ಸಂಪೂರ್ಣ ನಿಷ್ಕಾಮದ ದೃಷ್ಟಿಯಿಂದ. ಹೀಗಾಗಿ  ಅಲ್ಲಿ ಆತನಿಗೆ ಅಶಾಂತತೆ ಅಥವಾ ಈ ಜಗತ್ತಿನ ಧಾವಂತಗಳು ಕಾಡುವುದಿಲ್ಲ.  ಆತನಿಗೆ ಸತ್ಯದ ನೆಲೆಯ ಅರಿವಾಗಿರುತ್ತದೆ. ಅದು ಆತನನ್ನು ಲೋಕದ ವ್ಯವಹಾರದಲ್ಲಿ ಮುಳುಗಲು ಬಿಡುವುದಿಲ್ಲ.

 

 

No comments:

Post a Comment