VACHANA IN KANNADA
ತಪ್ಪಿ ನೋಡಿದಡೆ ಮನದಲ್ಲಿ ಅಚ್ಚೊತ್ತಿದಂತಿತ್ತು
ಇಪ್ಪೆಡೆಯ ವಿಚಾರಿಸಿ ನೋಡಿದಡೆ ಇಲ್ಲದಂತಾಯಿತ್ತು
ತೆಪ್ಪದ ಜಲದ ಪಾದ ಘಾತದಂತೆ
ಕರ್ತೃತ್ವವೆಲ್ಲಿಯದೋ ಗುಹೇಶ್ವರಾ?
TRANSLITERATION
tappi nODidaDe manadalli accottidaMtittu
ippeDeya vicaarisi nODidaDe illadaMtaayittu
teppada jalada paada ghaatadaMte
kartRutvavelliyadO guheshvaraa?
CLICK HERE FOR A RECITATION:
TRANSLATION (WORDS)
tappi (without looking at the source) nODidaDe (if looked at the world) manadalli (in the mind) accottidaMtittu (the material world gets imprinted as the truth)
ippeDeya (the source of the world) vicaarisi nODidaDe (if looked at carefully) illadaMtaayittu (it dies)
teppada (of the small float) jalada (in water) paada (feet) ghaatadaMte (just as moving of)
kartRutvavelliyadO (where is the feeling of I ness) guheshvaraa?
VACHANA IN ENGLISH
When looked at the world the wrong way (ignoring the source), in the mind
The material world gets imprinted as the truth!
If looked carefully at the source of the world, it vanishes!
Just as the moving of the feet (of the swimmer) holding on to a float.
Where is the feeling of I-ness, Oh, Guhesvara?
COMMENTARY
Allama Prabhu directs us to the right perspective of viewing this material world in this Vachana, saying that the one who has realized the divine who is the source of this world, although participates in the business of the world fully, will never feel that he is the doer. He is the one who will have conquered the I-ness (ego).
It is important that everyone is aware of the divine as the source of this world. In practice, this is not the case. To most, this world appears real and true when they have not developed the God mindedness and have not invited Him into their lives. This is the state of the mind of common individuals. But, when the individual develops the subtle mind and probes to gain the awareness of the divine as the source, he graduates to the realization that the material world is an illusion. He then stays above the consequences of this world while being a full part of this world. He understands the limits and does not get perturbed by the highs and lows in his life. Allama Prabhu uses an interesting simile to describe this state. A swimmer holding on to the float moves his feet in rhythm to move forward. But he very soon realizes that he is moving forward because of the float and not due to his effort. He realizes that the swimming and moving forward are all His and the self is simply an actor in this drama of the Divine. He owns nothing and creates nothing without Him being behind it. Such realization in life is what is needed to remove the ‘I am the doer’ syndrome and to conquer the ego.
Oh Lord, Everything I do and I have is Yours!
KANNADA COMMENTARY
ಅರ್ಥ:
ತಪ್ಪಿ (ಶಿವನನ್ನು ನೋಡದೆ ತಪ್ಪಿ) ನೋಡಿದಡೆ (ಈ ಸಂಸಾರನ್ನು ನೋಡಿದರೆ) ಮನದಲ್ಲಿ ಅಚ್ಚೊತ್ತಿದಂತಿತ್ತು (ಈ ಸಂಸಾರ ನಿಜವೆಂಬತೆ ಅಚ್ಚೊತ್ತಿ ನಿಲ್ಲುತ್ತದೆ)
ಇಪ್ಪೆಡೆಯ (ಇಪ್ಪ=ಎಡೆ.ಇರುವ ಸ್ಥಳ, ಸಂಸಾರದ ಮೂಲವನ್ನು) ವಿಚಾರಿಸಿ ನೋಡಿದಡೆ ಇಲ್ಲದಂತಾಯಿತ್ತು (ವಿಚಾರ ಮಾಡಿ ನೋಡಿದಾಗ ಅದು ಇಲ್ಲವಾಯಿತು)
ತೆಪ್ಪದ ಜಲದ ಪಾದ ಘಾತದಂತೆ (ತೆಪ್ಪವನ್ನು ಹಿಡಿದು ಈಜುವವನ ಕಾಲು ಬಡಿಯುವಿಕೆ ಯಂತೆ)
ಕರ್ತೃತ್ವವೆಲ್ಲಿಯದೋ ಗುಹೇಶ್ವರಾ? (ತಾನು ಮಾಡಿದೆನೆಂಬ ಭಾವ ಇರುವುದಿಲ್ಲ)
ತಾತ್ಪರ್ಯ:
ಈ ಸಂಸಾರದ ಮೂಲದಲ್ಲಿರುವ ಪರವಸ್ತುವಿನ ಅರಿವು ಪಡೆದವನು ಈ ಸಂಸಾರದಲ್ಲಿ ಇದ್ದು ಇಲ್ಲಿಯ ವ್ಯವಹಾರದಲ್ಲಿ ಭಾಗವಹಿಸಿದರೂ ಸಹ ಆತನಲ್ಲಿ ಆ ಕೆಲಸ ತಾನು ಮಾಡಿದೆನು ಎಂಬ ಭಾವವಿರುವುದಿಲ್ಲ ಎನ್ನುತ್ತಾರೆ ಅಲ್ಲಮರು.
ಪ್ರತಿಯೊಬ್ಬನೂ ಈ ಸಂಸಾರದ ಮೂಲವನ್ನು ಕಂಡುಕೊಳ್ಳಬೇಕಾದದ್ದು ಸೂಕ್ತ, ನ್ಯಾಯ. ಅದರೆ ಹಾಗೆ ಆಗುವುದಿಲ್ಲ. ಆ ಶಿವನನ್ನು ಅರಿತುಕೊಳ್ಳದೆ ತಪ್ಪಿ ಈ ಜಗತ್ತನ್ನು ನೋಡಿದರೆ ಈ ಜಗತ್ತೇ ನಿಜವಾಗಿ ತೋರುತ್ತದೆ. ಮನಸ್ಸಿನಲ್ಲಿ ಅದರ ಅಚ್ಚು ಸತ್ಯವೆಂಬಂತೆ ಮೂಡಿಬಿಡುತ್ತದೆ. ಇದು ಸಹಜ. ಆದರೆ ವಿಚಾರ ಮಾಡಿ ಮೂಲವಸ್ತುವನ್ನು ನೋಡಿದಾಗ, ಅಂದರೆ “ನಾನು ನೋಡುತ್ತಿರುವ ಈ ಸಂಸಾರ ನಿಜವಾದದ್ದೇ? ಅಥವಾ ಇದರ ಮೂಲದಲ್ಲಿ ಬೇರೆ ಏನಾದರು ಇದೆಯೆ?” ಎಂದು ವಿಚಾರಮಾಡಿ ಕಂಡುಕೊಂಡಾಗ ನಿಜದ ಅರಿವು ಆಗುತ್ತದೆ. ಆ ಅರಿವು ಈ ಸಂಸಾರವನ್ನು ಇಲ್ಲವಾಗಿಸುತ್ತದೆ. ಏಕೆಂದರೆ ಕಣ್ಣಿಗೆ ಸತ್ಯವಾಗಿ ಕಾಣುವ ಸಂಸಾರಕ್ಕಿಂತಲೂ ಸೂಕ್ಷ್ಮವಾದರೂ ಘನವಾದ ಸತ್ಯದ ಅನುಭವವಾಗುತ್ತದೆ ವಿಚಾರಿಸಿ ನೋಡಿದಾಗ. ಹಾಗೆ ಆದಾಗ ಆ ಅರಿವು ಪಡೆದವನು ಈ ಸಂಸಾರದಲ್ಲ್ಲಿ ಇದ್ದುಕೊಂಡು ಇಲ್ಲದವನಾಗುತ್ತಾನೆ. ಅಂದರೆ ಅದರ ಇತಿ ಮಿತಿಗಳನ್ನು ಅರಿತ ಶರಣನು ಸಂಸಾರದ ಕಾರ್ಯ ಕೆಲಸಗಳನ್ನು ನಿರ್ವಹಿಸಿದರೂ ಆತನಲ್ಲಿ ಅವುಗಳನ್ನು ತಾನು ಮಾಡಿದೆನೆಂಬ ಭಾವವಿರುವುದಿಲ್ಲ. ತೆಪ್ಪವನ್ನು ಹಿಡಿದು ಈಜುತ್ತಿರುವವನು ನೀರಿನಲ್ಲಿ ತಾನು ಕಾಲುಬಡಿಯುತ್ತಿದ್ದರೂ ತಾನು ಚಲಿಸುತ್ತಿರುವುದು ತನ್ನ ಶಕ್ತಿಯಿಂದ ಅಲ್ಲ. ತೆಪ್ಪದ ಕಾರಣದಿಂದ ನಾನು ಚಲಿಸುತ್ತಿದ್ದೇನೆ ಎಂಬುದರ ಅರಿವು ಇರುತ್ತದೆ. ಅದೇ ರೀತಿ ಆತನಲ್ಲಿ ಕರ್ತೃತ್ವ ಭಾವವಿರುವದಿಲ್ಲ. ಆತನು ಶಿವನೆಂಬ ತೆಪ್ಪವನ್ನು ಹಿಡಿದುಕೊಂಡು ಈ ಸಂಸಾರ ಸಾಗರದಲ್ಲಿ ಈಜುತ್ತಿರುತ್ತಾನೆ. ಶಿವ ಭಾವ ಅವನನ್ನು ನಡೆಸುತ್ತದೆ. ಆತನಿಗೆ ಅದರ ಅರಿವಿರುತ್ತದೆ. ಆದ್ದರಿಂದ ಈಜಾಟ ಶಿವನದೆ. ತಾನು ನೆಪಮಾತ್ರವೆಂಬ ತಿಳಿವಳಿಕೆ ಆತನಲ್ಲಿರುತ್ತದೆ.
Devaji Patil commented on a link you shared.
Devaji wrote: "There is an excellent translation in the blog. I have chosedn to put my commnets on the FB ink because it is much easier to do ತಪ್ಪಿ ನೋಡಿದಡೆ ಮನದಲ್ಲಿ ಅಚ್ಚೊತ್ತಿದಂತಿತ್ತು ಇಪ್ಪೆಡೆಯ ವಿಚಾರಿಸಿ ನೋಡಿದಡೆ ಇಲ್ಲದಂತಾಯಿತ್ತು Here the poet gives an example similar to the proverbial example of the Rope mistaken to the snake.( a well known anology to illustrate two principles 1 Maaya 2 Avidya) If I were to see it , You would imprint it in my mind If I were to think and analyse... You would make it dissapear ತೆಪ್ಪದ ಜಲದ ಪಾದ ಘಾತದಂತೆ The shaft that floats ,get carried away by the flow It appears as though the float has feet.. and is swimming along ಕರ್ತೃತ್ವವೆಲ್ಲಿಯದೋ ಗುಹೇಶ್ವರಾ? Wouldnt then it be a folly to think that I do when Actually it is ALL done by You . and only You answer me O lord of the cave in my solemn heart"