Friday, February 22, 2013

Vachana 130: Maatu Maatige mathanava – The Illumine


ಮಾತು ಮಾತಿಗೆ ಮಥನವ ಮಾಡುವಾತನೆ ಜಾತ
ಮಾತಿಗೆ ಮೊದಲ ಕಂಡಾತನೆ ಅಜಾತ
ಕಾತರಕ್ಕೆ ಕಂಗೆಟ್ಟು ಕಳವಳಿಸದಿಪ್ಪನೆ ಪರಮಾತ್ಮ
ನೀತಿ ನಿಜ ನೆಲೆಗೊಂಡಾತನೆ ಜಗನ್ನಾಥ,
ಇವೇತರೊಳಗೂ ಸಿಕ್ಕದಿಪ್ಪಾತನೆ ಗುರುನಾಥ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
TRANSLITERATION

maatu  maatige mathanava maaDuvaatane jaata
maatige modala kaMDaatane ajaata
kaatarakke kaMgeTTu  kaLavaLisadippne paramaatma
nIti nija nelegoMDaatane jagannaathaivEtarOlagU sikadippaatane gurunaatha
basavapriya kUDalacennabasavaNNA    
CLICK HEAR TO HEAR THE RECITATION:

http://youtu.be/DlehLJYgra4
TRANSLATION (WORDS) 

maatu  (talk) maatige (for the talk, everything that has been talked) mathanava (churns, thinks) maaDuvaatane (the one who) jaata (is mortal, who takes birth and death)
maatige (of talk) modala (origin) kaMDaatane (the one who comes to know) ajaata (is unborn)kaatarakke (in panicking situation) kaMgeTTu (losing sight) kaLavaLisadippne (the one who is not perturbed) paramaatma (is God)
nIti (morality) nija (truth) nelegoMDaatane (the one who is established in) jagannaatha (is the lord of the universe)
ivEtarOlagU (in any of these) sikadippaatane (the one who is not entangled) gurunaatha (is Gurunatha, light )
basavapriya kUDalacennabasavaNNA (Basvapriya Kudalachennabasavannaa)

 TRANSLATION

The one who churns everything that has been said is mortal.
The one who sees the origin of what is said is immortal (unborn).
The one who does not lose sight and is not perturbed in panicky situations is God.
The one who is established in morality and truth is the lord of the Universe.
The one who is not entangled in any of these is the illumine (the Light),
Basvapriya Kudalachennabasavannaa!

COMMENTARY

Sharanas have viewed the talk from various angles. We have seen some of those in previous postings. In this Vachana, Hadapada Appanna tries to drive home that it is not sufficient just to understand what is being said.

It is very natural for us to make every effort to understand what is being said. We churn it, think through and try to find the hidden and apparent meanings. This churning process is sufficient to satisfy us. We are happy that we understood, we become proud that we understood it, we feel so great about this accomplishment and our ego shoots up. The result of enhanced ego is the pain attached to it. Thus, the one who is just satisfied with understanding what is said is still in the cycle of happiness and sadness and is very much mortal. 

Appanna says that the one who realizes the source of the talk is unborn or immortal.  This individual questions as to how the talk came about? What is its source? What does it depend on? When such questions are answered the result is the realization that behind everything that is said is that super soul. He is the reason for everything. The one who realizes this becomes immortal and escapes the cycle of life and death. 

When panicky situations arise, the one who does not get perturbed and does not lose sight of what is going on and stays calm and collected, is the super soul. He is the soul who is not tinged by the happenings of life; he has successfully removed all the walls built around the soul due to the ups and downs of life. He has realized the Self. 

Those who are established in morality and truth and do not stray from them no matter what situations arise are always respected and revered by everyone around them. They are indeed Lords of the Universe, but not realized the self.

The ultimate state one can attain is becoming illumine, the one who is the Light. This is the individual who shines, shines the light to drive the darkness and ignorance away. He is the one who is not stuck in the cycles of understanding and non-understanding, not perturbed by the ups and downs, not even concerned of  becoming the Lord of the Universe or the super soul.  

Let us be the Light! 

KANNADA COMMENTARY

ಅರ್ಥ:
ಮಾತು ಮಾತಿಗೆ (ಪ್ರತಿಯೊಂದು ಮಾತನ್ನು)  ಮಥನವ ಮಾಡುವಾತನೆ (ಪರಿಶೀಲಿಸಿ ಅದರ ಅರ್ಥವನ್ನು ಹಿಂಡಿ ತೆಗೆಯುವಾತ) ಜಾತ (ಹುಟ್ಟುವವನು, ಹುಟ್ಟು ಸಾವಿನ ಚಕ್ರಕ್ಕೆ ಸಿಕ್ಕಿದವನು)
ಮಾತಿಗೆ ಮೊದಲ (ಮಾತಿನ ಮೂಲವನ್ನು )ಕಂಡಾತನೆ  (ತಿಳಿದವನು) ಅಜಾತ (ಹುಟ್ಟಿಲ್ಲದವನು)
ಕಾತರಕ್ಕೆ (ಅಂಜಿಕೆ ಹುಟ್ಟಿಸುವಂತಹ ಪ್ರಸಂಗಗಳಲ್ಲಿ) ಕಂಗೆಟ್ಟು (ದಿಕ್ಕುಗೆಟ್ಟು) ಕಳವಳಿಸದಿಪ್ಪನೆ (ಗೊಂದಲಗೊಳ್ಳದಿರುವವನೆ) ಪರಮಾತ್ಮ, 
ನೀತಿ (ಒಳ್ಳೆಯ ನಡತೆ) ನಿಜ (ಸತ್ಯ) ನೆಲೆಗೊಂಡಾತನೆ (ಗಳಿಗೆ ಸ್ಥಾನನಾದವನೆ) ಜಗನ್ನಾಥ,
ಇವೇತರೊಳಗೂ (ಈ ಯಾವುದರಲ್ಲಿಯು)ಸಿಕ್ಕದಿಪ್ಪಾತನೆ (ಸಿಕ್ಕಿಕೊಳ್ಳದಿರುವವನೆ) ಗುರುನಾಥ (ಬೆಳಕು)
ಬಸವಪ್ರಿಯ ಕೂಡಲಚೆನ್ನಬಸವಣ್ಣಾ
.  ( ವಚನ ಕಾರ- ಹಡಪದ ಅಪ್ಪಣ್ಣ ,   ಸಂಕೀರ್ಣ ವಚನ ಸಂಪುಟ ೪, ಪುಟ ೬೧೨, ವಚನ ಸಂಖ್ಯೆ ೧೦೧೦) 

ತಾತ್ಪರ್ಯ:

ಮಾತನ್ನು ಅನೇಕ ಆಯಾಮಗಳಿಂದ ನೋಡಿದ್ದಾರೆ ನಮ್ಮ ಶರಣರು. ಇಲ್ಲಿ ಹಡಪದ ಅಪ್ಪಣ್ಣನವರು ಕೇವಲ ಮಾತಿನ ಅರ್ಥವನ್ನು ತಿಳಿದುಕೊಂಡರೆ ಸಾಲದು ಎಂದು ಹೇಳುತ್ತಾರೆ. 

ಮಾತಿನ ಅರ್ಥವನ್ನು ಅರಿಯಬೇಕೆನ್ನುವ ಆಸೆ  ಸಹಜವೆ. ಮೊಸರನ್ನು ಕಡೆಯುವಂತೆ ಮಾತನ್ನು ಮಥಿಸಿ ಅದರಲ್ಲಿ ಹುದುಗಿರುವ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಆ ಪ್ರಕ್ರಿಯೆಯೇ (process) ಅವರಿಗೆ ತೃಪ್ತಿ ಕೊಡುತ್ತದೆ. ಆ ಅರ್ಥ ತಿಳಿದುಕೊಂಡರೆ ತಮ್ಮ ಕೆಲಸವಾಯಿತು ಎನ್ನುವ ಭಾವ ಅವರಿಗೆ. ಅಲ್ಲಿಗೆ ಅದರ ಕೊನೆ. ಅಲ್ಲದೆ ತಾನು ಚೆನ್ನಾಗಿ ಮಥಿಸಿ ಅಂದರೆ ಎಲ್ಲ ಆಯಾಮಗಳಿಂದ ಮಾತಿನ ಅರ್ಥ ತಿಳಿದುಕೊಂಡಿದ್ದೇನೆ ಎನ್ನುವ ಅಹಂಕಾರ ಕೂಡ ಅದರೊಂದಿಗೆ ಬರುತ್ತದೆ. ಅಹಂಕಾರ ಒಂದು ಬಂದರೆ ಸಾಕು ಅದರೊಂದಿಗೆ ನೋವುಗಳು ಬಂದೇ ಬರುತ್ತವೆ. ಆದ್ದರಿಂದ ಈ ರೀತಿಯಾಗಿ ಮಾತಿನ ಅರ್ಥದಿಂದ ತೃಪ್ತಿಪಟ್ಟುಕೊಳ್ಳುವವನು ಹುಟ್ಟು ಸಾವಿನ ಚಕ್ರಕ್ಕೆ ಸಿಕ್ಕುವವನು. ಆತನೂ ಕೂಡ ಬದುಕಿನ ಸುಖ ದುಃಖಗಳಿಗೆ ಈಡಾಗುತ್ತಾನೆ. ಆದರೆ ಅದು ಸಾಲದು. ಕೇವಲ ಮಾತಿನ ಅರ್ಥ ಬೆಳಕಲ್ಲ. ಬೆಳಕು ಕಾಣುವುದು ನಮ್ಮ ಉದ್ದೇಶವಾಗಿರಬೇಕು. ಎನ್ನುವ ಸೂಚನೆ ಕೊಡುತ್ತಾರೆ ಅಪ್ಪಣ್ಣನವರು ಈ ವಾಕ್ಯದಲ್ಲಿ.

ಮಾತಿನ ಮೂಲವನ್ನು ಕಂಡುಕೊಳ್ಳುವವನು ಹುಟ್ಟಿಲ್ಲದವನು ಎನ್ನುತ್ತಾರೆ. ’ಈ ಮಾತು ಹೇಗೆ ಹುಟ್ಟಿತು? ಯಾವ ನೆಲೆಯಿಂದ ಅದು ಬಂದಿತು? ಇದಕ್ಕೆ ಆಧಾರ ಯಾವುದು?’ ಎಂಬಂತಹುದನ್ನು ಕಂಡುಕೊಂಡರೆ ಅದು ಅರ್ಥವಾಗುವ ರೀತಿಯೇ ಬೇರೆ. ಅರ್ಥವಾಗುವ ವಿಷಯವೇ ಬೇರೆ. ಎಲ್ಲ ಮಾತುಗಳ ಹಿಂದೆ ಶಿವನೇ ಇದ್ದಾನೆ ಎಂಬುದು ಮನಸ್ಸಿಗೆ ಬರುತ್ತದೆ. ಅಂತಹವನಿಗೆ ಸಾವು ನೋವುಗಳು ತಟ್ಟುವುದಿಲ್ಲ. ಹಾಗಾಗಿ ಆತನು ಅಜಾತನು. ಅಂದರೆ ಹುಟ್ಟು ಸಾವಿನ ಚಕ್ರಕ್ಕೆ ಸಿಗುವ ವನಲ್ಲ. 

ಬದುಕಿನಲ್ಲಿ ಕಠಿಣ ಪ್ರಸಂಗಗಳು ಉದ್ಭವಿಸಿ ದಿಗಿಲುಗೊಂಡು ದಾರಿಗಾಣದಾಗ  ಗೊಂದಲಗೊಳ್ಳದಿರುವವನೇ ಪರಮಾತ್ಮ ಎನ್ನುತ್ತಾರೆ. ಆತ್ಮನು ತಾನೇ ತನ್ನ ಸುತ್ತ  ಗೊಡೆಗಳನ್ನು ಕಟ್ಟಿಕೊಳ್ಳುತ್ತಾನೆ. ಇವುಗಳಿಂದಲೇ ಆತ್ಮನಿಗೆ ದುಃಖ  ಉಂಟಾಗುತ್ತದೆ. ಆ ಗೋಡೆಗಳನ್ನು ಇಲ್ಲದಂತೆ ಮಾಡುವುದು ಎಂದರೆ ಆತ್ಮದ ಮಿತಿಯನ್ನು ಒಪ್ಪಿಕೊಳ್ಳದೆ ಅದನ್ನು ಮೀರುವುದು ಎಂದರ್ಥ. ಅಂದರೆ ಪರಮಾತ್ಮನಾಗುವುದು. ಅಂತಹವನಿಗೆ ಯಾವ ಗೊಂದಲಗಳೂ ಉಂಟಾಗುವುದಿಲ್ಲ. 

ಯಾರಲ್ಲಿ ನೀತಿ ಮತ್ತು ಸತ್ಯವು ನೆಲೆಗೊಂಡಿರುತ್ತದೆಯೋ ಆತನೇ ಜಗತ್ತಿನ ಒಡೆಯ ಎನ್ನುತ್ತಾರೆ. ಯಾರು ನೀತಿ ಮತ್ತು ಸತ್ಯವನ್ನು ಎಂದಿಗೂ ಬಿಡುವುದಿಲ್ಲವೋ, ಏನೇ ಬಂದರೂ ನೀತಿ ಮತ್ತು ಸತ್ಯದಿಂದ ಹಿಂದೆ ಸರಿಯುವುದಿಲ್ಲವೋ ಅವರು ಜಗತ್ತಿನ ಒಡೆಯರು. ಎಂದರೆ ಜಗತ್ತು ಅವರನ್ನು ಸದಾ ಗೌರವಿಸುತ್ತದೆ.ಜಗತ್ತಿನ ಕಣ್ಣಲ್ಲಿ ಅವರು ದೇವರಿದ್ದಂತೆಯೇ. 
ಆದರೆ ಈ ಯಾವುದರಲ್ಲಿಯೂ ಸಿಕ್ಕದಿರುವವನೇ ಗುರುನಾಥ ಎನ್ನುತ್ತಾರೆ ಅಪ್ಪಣ್ಣನವರು. ಅಂದರೆ ಮಾತಿನ  ಅರ್ಥವನ್ನು
ಕಂಡುಕೊಳ್ಳಬೇಕು, ಅಥವಾ ಇದರ ಮೂಲವನ್ನು ತಿಳಿಯಬೇಕು, ಬದುಕಿನ ಗೊಂದಲಗಳಿಂದ ಮುಕ್ತಿ ಪಡೆಯಬೇಕು  ಅಥವಾ
ನೀತಿ ಮತ್ತು ಸತ್ಯವೇ ಮುಖ್ಯ ಎನ್ನುವಂತಹ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳದವನೇ ಗುರುನಾಥ ಎನ್ನುತ್ತಾರೆ. ಗುರು ಎಂದರೆ
 ಬೆಳಕು ತೋರುವವನು ಎಂದರ್ಥ. ನಾನು ಅಜಾತನಾಗಬೇಕು, ಪರಮಾತ್ಮನಾಗಬೇಕು, ಜಗತ್ತಿಗೆ ಒಡೆಯನಾಗಬೇಕು ಎಂಬೆಲ್ಲ ವಿಷಯಗಳಲ್ಲಿ ತೊಡಗದೆ ಇರುವವನೇ ಗುರುನಾಥ.  

ಮಾತಿನ ಅರ್ಥವನ್ನು ಹುಡುಕುವವನು ಇನ್ನೂ ಮಾತಿನ ಮಿತಿಯಲ್ಲಿಯೇ ಇರುವುದರಿಂದ ಆತನು ಅಜಾತ, ಪರಮಾತ್ಮ,
ಜಗದೊಡೆಯ ಆಗುತ್ತಾನೆಯೆ ಹೊರತು ಗುರುನಾಥನಾಗಲು ಸಾಧ್ಯವಿಲ್ಲ. ಮಾತಿನ ಅರ್ಥವನ್ನು ಮೀರಿದರೆ ಮಾತ್ರ ಎಲ್ಲವನ್ನು ಆಣುವ ಮತ್ತು ತೋರುವ ಬೆಳಕಾಗಬಹುದು ಎನ್ನುತ್ತಾರೆ ಅಪ್ಪಣ್ಣನವರು.

 

 

 

Friday, February 15, 2013

Vachana 129: Aa Maatu I Maatu – Loose Talk


ಆ ಮಾತು ಈ ಮಾತು ಹೋ ಮಾತು ಎಲ್ಲವೂ ನೆರೆದು ಹೋಯಿತ್ತಲ್ಲಾ!
ಭಕ್ತಿ ನೀರಲ್ಲಿ ನೆನೆದು ಜಲವ ಕೂಡಿ ಹೋಯಿತ್ತಲ್ಲಾ!
ಸಾವನ್ನಕ್ಕರ ಸರಸ ಉಂಟೆ? ಗುಹೇಶ್ವರಾ!

TRANSLITERATION
aa maatu I maatu hO maatu ellavU neredu hOyittallaa!
bhakti  nIralli nenedu  jalava kUDi hOyittallaa!
saavannakkara sarasa uMTe?  guhEshvaraa!


CLICK HERE FOR A RECITATION:


 TRANSLATION (WORDS)

aa maatu ( that talk, talk about the other world) I maatu  ( this talk, talk about this world) hO maatu (talk about many other things) ellavU (all) neredu (over flowing)  hOyittallaa! (alas! went waste)
bhakti  (little bhakti that was)  nIralli nenedu (got drenched in water)  jalava kUDi  (became one with water) hOyittallaa! (alas! went waste)
saavannakkara  (till death)  sarasa ( the joy)  uMTe? (is it there?)  guhEshvaraa! (Guheshvara)

TRANSLATION

That talk, this talk and talk about all other things, overflown and went to waste, alas!
The devotion got drenched in the water (of talk), became one with water and went to waste, alas!
Is the joy that would have been until death, still there? Guhesvara!

COMMENTARY

In our previous post, Allama Prabhu emphasized that there must be the strength of experience behind every word we utter.   He continues that view in this cryptic Vachana to impress on us how loose talk can take away what all we have.

That talk in the first line of Vachana is referring to other world (the world after) and this talk to the world we are now in. Talk about all the other things covers all the other discussions and speeches we get involved in. We really don’t know anything about the other world. We have not experienced it. We are only guessing what is out there. Yet, we talk all about it as though we have been there. We and everyone around us already know all about this world.  We are all in it. As such, our talk does not add any value to what we know already. Yet, we keep talking about it. The pot of this loose talk boils over and it is all a waste of time and resources.

Whatever the little devotion the devotee had, got drenched in the water of loose talk and became one with water and got wasted. The speaker was not a full-fledged devotee. But he started talking about devotion and how he has achieved it. This talk raised his ego (I-ness) to the level he lost his devotion (Bhakti).

The devotion should have contributed to an immense joy until the death. But, due to the loose talk the devotion got lost and hence the eternal joy vanished.

We are all fond of talking. We tend to keep talking to show off how smart, capable, and wealthy we are. We create stories to make the talk interesting. We get carried away mesmerized by our own capability to talk and hold the audience listening. But, talking without the appropriate experience to substantiate what we say would eventually be a waste. Listeners will eventually find the shallowness in the talk and the speaker ends up losing what he had.

When we speak the Lord should say ‘yes, yes’ in utmost appreciation! (Vachana 2)

 Let us make our talk substantial, not superficial!

KANNADA COMMENTARY

ಅರ್ಥ:

ಆ ಮಾತು (ಪರಲೋಕದ ಮಾತು)  ಈ ಮಾತು (ಇಹ ಲೋಕದ ಮಾತು)  ಹೋ ಮಾತು ಎಲ್ಲವೂ (ಬೇರೆ ರೀತಿಯ ಎಷ್ಟೋ ಮಾತುಗಳೆಲ್ಲ) ನೆರೆದು (ನೆರೆ ಬಂದು , ಉಕ್ಕಿ)  ಹೋಯಿತ್ತಲ್ಲಾ! (ಹೋಯಿತಲ್ಲ)
ಭಕ್ತಿ (ಇದ್ದ ಅಲ್ಪ ಸ್ವಲ್ಪ ಭಕ್ತಿ) ನೀರಲ್ಲಿ ನೆನೆದು ಜಲವ (ಮಾತೆಂಬ ನೀರಿನಲ್ಲಿ)  ಕೂಡಿ ಹೋಯಿತ್ತಲ್ಲಾ! (ಕೂಡಿಕೊಂಡು ಹರಿದು ಹೋಯಿತಲ್ಲ)
ಸಾವನ್ನಕ್ಕರ (ಸಾಯುವವರೆಗೆ) ಸರಸ (ಆನಂದ)  ಉಂಟೆ? ಗುಹೇಶ್ವರಾ! (ಇದೆಯೆ ಗುಹೇಶ್ವರ?)

ತಾತ್ಪರ್ಯ:
 ಮಾತಿನ ಪರಿಣಾಮದ ಬಗ್ಗೆ ಅಲ್ಲಮರು ಎಷ್ಟು ಆಳವಾಗಿ ಯೋಚಿಸಿದ್ದರು ಎಂಬುದು ಮಾತಿನ ಬಗ್ಗೆ ಅವರ ಈ ವಚನಗಳಿಂದ ಕಂಡು ಬರುತ್ತದೆ. ಮಾತಾಡುವುದು ಮನುಷ್ಯನ ಚಟವೇ ಆಗಿದೆ. ಆತ ಏನಾದರೂ ಮಾತಾಡುತ್ತಲೇ ಇರುತ್ತಾನೆ. ಅಲ್ಲಮರು ಅದನ್ನು ಬಹಳ ಸೊಗಸಾಗಿ ಹೇಳಿದ್ದಾರೆ – “ಆ ಮಾತು ಈ ಮಾತು ಹೋ ಮಾತು ಎಲ್ಲವೂ ನೆರೆದು ಹೋಯಿತ್ತಲ್ಲಾ!”  

ಹಿಂದಿನ ವಚನದಲ್ಲಿ ಹೇಳಿದಂತೆ ಅನುಭವದ ಆಳದಿಂದ ಬಂದ ಮಾತುಗಳಲ್ಲ. “ಆ ಮಾತು ಈ ಮಾತು”  ತನಗೆ ಸಂಬಂಧಿಸಿರುವ ಹಾಗೂ ತನಗೆ  ಸಂಭಂಧಿಸಿರದ, ತನಗೆ ತಿಳಿದಿರುವ ಹಾಗೂ  ತನಗೆ ತಿಳಿಯದೆ ಇರುವ ಮುಂತಾಗಿ ಹತ್ತು ಹಲವು ಮಾತುಗಳನ್ನಾಡುತ್ತಾನೆ ಮಾನವನು. ಈ ಲೋಕದ ಬಗ್ಗೆ  ಮತ್ತು ಪರಲೋಕದ ಬಗ್ಗೆಯೂ ತನಗೆಲ್ಲ ತಿಳಿದಿದೆ ಎನ್ನುವಂತೆ ಮಾತಾಡುತ್ತಾನೆ. ಈ ಎಲ್ಲ ಮಾತುಗಳೂ ವ್ಯರ್ಥ, ಏಕೆಂದರೆ ಕಾಣದ ಪರಲೋಕದ ಬಗ್ಗೆ ಯಾರೂ ಮಾತಾಡಲು ಸಾಧ್ಯವಿಲ್ಲ. ಆದರೂ ಜನರು ತಮಗೆ ಅದು ತಿಳಿದಿದೆ ಎನ್ನುವಂತೆ ವ್ಯರ್ಥವಾಗಿ ಮಾತಾಡುತ್ತಾರೆ. ಈ ಲೋಕದ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ತಿಳಿದದ್ದನ್ನೇ ಮತ್ತೆ ಮಾತಾಡುವುದರಿಂದ ಯಾವ ಲಾಭವೂ ಇಲ್ಲ. ಸಮಯ ವ್ಯರ್ಥವಾಗುತ್ತದ ಅಲ್ಲದೆ ಬೇಕಾದದ್ದನ್ನು ಮಾತಾಡುವ ನಾಲಿಗೆಯ ಚಟ ಇನ್ನೂ ಗಟ್ಟಿಯಾಗುತ್ತ ಹೋಗುತ್ತದೆ. ತನಗೆ ಗೊತ್ತಿರುವಂತಹ ಮತ್ತು ಗೊತ್ತಿಲ್ಲದ ಮಾತುಗಳಾಡಿ ಆತನು ಸೋಲನು. ಇನ್ನೂ ಇನ್ನೂ ಮಾತಾಡುತ್ತಲೇ ಇರುತ್ತಾನೆ. ಮಾತಿನ ಚಟಕ್ಕೆ ಬಿದ್ದು  ಆತನು ಮಾತಿಗೆ ನಿಂತರೆ ಸಾಕು ನೀರಿನ ಪ್ರವಾಹ ಉಕ್ಕಿ ಹರಿಯುವಂತೆ ಗಳಗಳನೆ ಮಾತಾಡುತ್ತಾನೆ. ಅನುಭವದ ಆಳವಿಲ್ಲದ ಮಾತುಗಳು ಉಕ್ಕುಕ್ಕಿ ಹರಿಯುತ್ತವೆ.

ಮನದಲ್ಲಿ ಎಲ್ಲಿಯೋ ಇದ್ದ ಸುಪ್ತ ಅಲ್ಪ ಸ್ವಲ್ಪ ಭಕ್ತಿ  ಆ ಮಾತೆಂಬ ಪ್ರವಾಹದ ನೀರಿನಲ್ಲಿ ಕೂಡಿಕೊಂಡು ಹರಿದು ಹೋಯಿತು ಎನ್ನುತ್ತಾರೆ ಅಲ್ಲಮರು. ಮಾತು ಮಾನವನ ಅಭ್ಯಾಸವಾಗಿದೆ. ಅನೇಕ ಸಲ ಅದು ಯಾಂತ್ರಿಕವಾಗಿ ಹರಿಯುತ್ತದೆ. ಇಂತಹುದನ್ನು ಹೇಳಬೇಕು ಇಂತಹುದನ್ನು ಹೇಳಬಾರದು ಎನ್ನುವ ವಿವೇಕ ಅಲ್ಲಿರುವುದಿಲ್ಲ. ತಾನು ಅನುಭವಿಸಿದ್ದೇನೆ, ಆದ್ದರಿಂದ ಈ ಮಾತು ಅನುಭವ ಸಿದ್ಧವಾದದ್ದು, ಇದನ್ನು ಮಾತ್ರ  ತಾನು ಹೇಳಬಹುದು, ಅಥವಾ ಇದು ಹೇಳಲು ತಕ್ಕುದು ಅಥವಾ ಇಲ್ಲ ಎಂಬ ತಿಳುವಳಿಕೆಗೆ ಅಲ್ಲಿ ಸ್ಥಾನವೇ ಇರುವುದಿಲ್ಲ. ನದಿಯಲ್ಲಿ ಪ್ರವಾಹ ಬಂದಾಗ ನೀರು ಎಲ್ಲೆಂದರಲ್ಲಿ ಹರಿದು ಹೋಗುವಂತೆ ಮಾತು ಕೂಡ  ಹರಿಯುತ್ತದೆ. ಮನದಲ್ಲಿ ಎಲ್ಲೋ ಕಿಂಚಿತ್ ಭಕ್ತಿ ಇರುತ್ತದೆ. ಅದು ಸುಪ್ತವಾಗಿರುತ್ತದೆ. ಆದರೆ ಮಾತಿಗೆ ತೊಡಗಿದಾಗ ಅದು ವ್ಯಕ್ತವಾಗುತ್ತದೆ. ಆಮೇಲೆ ಅದರ ಬಗ್ಗೆ ಹೇಳಿಕೊಳ್ಳಬಾರದು ಎನ್ನುವ ವಿವೇಕ ನಾಶವಾಗುತ್ತದೆ. ಮತ್ತು ಅದರ ಬಗ್ಗೆಯೇ ಮಾತುಗಳು ಹರಿಯಲು ಆರಂಭಿಸುತ್ತವೆ. ಒಮ್ಮೆ ಅದರ ಬಗ್ಗೆ ಹೇಳಿಕೊಳ್ಳಲು ತೊಡಗಿದಾಗ ಮನದಲ್ಲಿ ಅಹಂಕಾರ ಹುಟ್ಟುತ್ತದೆ. ಅಷ್ಟು ಹೊತ್ತಿಗೆ ಆ ಭಕ್ತಿಯ ಪಾವಿತ್ರ್ಯ ಅಳಿದು ಹೋಗಿ ಅದು ಯಾಂತ್ರಿಕವಾಗುತ್ತದೆ ಕೇವಲ ಶಬ್ದವಾಗಿ ಉಳಿಯುತ್ತದೆ. ಇದನ್ನೇ ಅಲ್ಲಮರು ಮಾತೆಂಬ ಪ್ರವಾಹದ ನೀರಿನಲ್ಲಿ ಕೂಡಿಕೊಂಡು ಹರಿದು ಹೋಯಿತು ಎನ್ನುತ್ತಾರೆ.

ಭಕ್ತಿ ಹೀಗೆ ಹರಿದು ಹೋಗದಿದ್ದಿದ್ದರೆ ಸಾಯುವವರೆಗೂ ಅದರ ಆನಂದವನ್ನು ಅನಭವಿಸಬಹುದಾಗಿತ್ತು. ಆದರೆ ಈಗ ಅದು ಸಾಧ್ಯವಿಲ್ಲ. ಇದು ಮಾತುಗಳ ಪರಿಣಾಮ  ಎನ್ನುತ್ತಾರೆ ಅಲ್ಲಮಪ್ರಭುಗಳು.

Friday, February 8, 2013

Vachana 128: Aalavariyada Bhashe – Colorful Talk


ಆಳವರಿಯದ ಭಾಷೆ, ಬಹುಕುಳವಾದ ನುಡಿ,
ಇಂತೆರಡರ ನುಡಿ ಹುಸಿಯಯ್ಯಾ,
ಬಹು ಭಾಷಿತರು ಸುಭಾಷಿತವರ್ಜಿತರು,
ಶರಣ ಸತಿ ಲಿಂಗಪತಿ ಎಂಬರು ಹುಸಿಯಯ್ಯಾ
ಇಂತಪ್ಪವರ ಕಂಡು ನಾಚುವೆನಯ್ಯಾ ಗುಹೇಶ್ವರಾ.

TRANSLITERATION

aaLavariyada bhaaShe, bahukuLavaada nuDi,
iMteraDara nuDi husiyayyaa,
bahu bhaaShitaru subhaaShitavarjitaru,
sharaNa sati liMgapati eMbaru husiyayyaa,
iMtappavara kaMDu naacuvenayyaa guhEshvaraa.

CLICK HERE TO READ-ALONG:


TRANSLATION (WORDS)

aaLavariyada (without knowing the depth, meaningless,) bhaaShe (language,talk), bahukuLavaada(colourful) nuDi (talk),
iMteraDara (of these two kinds)  nuDi (talk) husiyayyaa (is false),
bahu bhaaShitaru (who talk a lot)  subhaaShitavarjitaru,(are without truth)
sharaNa (devotee) sati (is wife)  liMgapati (the God is husband) eMbaru (say)  husiyayyaa,(it is a lie)
iMtappavara (people like this) kaMDu (seeing) naacuvenayyaa guhEshvaraa (I am ashamed Guheshvara)

TRANSLATION

The language without depth, the colorful talk,
Both of these are false (useless), Sir!
Those who talk a lot ignore the truth,
They say ‘devotee is wife, the God is husband’, it is a lie, Sir!
Observing such people, I am ashamed oh Lord Guhesvara!

 COMMENTARY

In this Vachana, Allama Prabhu laments on individuals who are fond of talking without a deep understanding of what they are saying and says he is ashamed of such individuals. He implies that every word we use should be meaningful and appropriate. The talk should not just be a colorful talk to impress the audience; it should be experience based; it should take the audience and the context into account; it should be appropriate, not just full of colorful words with the main aim of mesmerizing the audience. As we have seen from earlier posts, the words should be like pearls in a necklace (in vachana No. 2) and when spoken the Lord should appreciate them. Any talk short of these characteristics is useless.

Those who talk a lot ignore the truth. Indeed, their main aim is to show off their oratory skills. Since they have to do this quite often, they run out of truth and true knowledge of what they are talking about. They invent words and sentences and make them just colorful.
 
One can give a big sermon on the concept of the devotee is wife and the God is husband. They can define and describe duties and nature of both the parties in this relationship at length. They will have never understood the concept and the deep meaning behind it. Instead of portraying the unique bond between the devotee and the God implied by this concept and conveying that the devotee and the God are one, they go through the verbal exercise of describing this concept at length. Such exercises are useless.

Conscioulsy or unconsciously everyone makes mistakes, and get carried away with their tongue while speaking. Some realize about their mistakes. Only very few try to keep in mind to avoid those mistakes. Paying very close attention to what one speaks results in knowing their own self. When one thinks subtley about their spoken words, where they came from, what it meant to them, why those words came about, its effect on others (good or bad), unfolds their own true nature to themselves and quietens thier mind.
 
We are now in the era of ‘marketing’. We have to market everything we can offer to ‘succeed’ in today’s world. Capability to mesmerize the audience is what is needed. It is easy to Google and find the material for our talk instantaneously. The problem comes when the audience probes on the topic of talk and what is said. Without the depth of knowledge, such talks can become useless and embarrassing.  

It is interesting that Allama Prabhu commented on this aspect of individuals. Apparently, the human behavior was the same as it is now during his times also! 
 
Sharanas paid a high respect to two aspects in life: Behavior (Nade) and Talk (Nudi). The advocated a behavior that sets an example for others to follow. They advocated a talk that is always appropriate and meaningful and matches the behavior. 
 

Let us always weigh our words! 

KANNADA COMMENTARY

ಅರ್ಥ:

ಆಳವರಿಯದ (ಅರ್ಥವಿಲ್ಲದ) ಭಾಷೆ (ಮಾತು), ಬಹುಕುಳವಾದ (ಬಣ್ಣ ಬಣ್ಣದ) ನುಡಿ (ಮಾತು),
ಇಂತೆರಡರ (ಈ ಎರಡು ರೀತಿಯ) ನುಡಿ (ಮಾತು) ಹುಸಿಯಯ್ಯಾ(ಅಸತ್ಯ),
ಬಹು ಭಾಷಿತರು (ಈ ರೀತಿಯಾಗಿ ಬಹಳ ಮಾತಾಡುವವರು) ಸುಭಾಷಿತವರ್ಜಿತರು (ಸತ್ಯವನ್ನು ಬಿಟ್ಟವರು),
ಶರಣ ಸತಿ (ಶರಣನು ಸತಿ) ಲಿಂಗಪತಿ (ಲಿಂಗವು ಪತಿ) ಎಂಬರು (ಎಂದು ಹೇಳುವರು)  ಹುಸಿಯಯ್ಯಾ (ಅದು ಅಸತ್ಯ)
ಇಂತಪ್ಪವರ (ಈ ರೀತಿಯಾಗಿ ಮಾತನಾಡುವವರನ್ನು) ಕಂಡು ನಾಚುವೆನಯ್ಯಾ(ಕಂಡು ನಾನು ನಾಚುವೆನಯ್ಯ) ಗುಹೇಶ್ವರಾ.

 ತಾತ್ಪರ್ಯ:

ತಾವು ಏನು ಮಾತಾಡುತ್ತಿದ್ದೇವೆ ಎಂಬುದರ ಕಡೆಗೆ ಗಮನ ಕೊಡದೆ ಸುಮ್ಮನೆ ಮಾತಾಡುವವರನ್ನು ಕಂಡು ಅಲ್ಲಮಪ್ರಭುಗಳು ’ನಾಚುತ್ತೇನೆ’ ಎನ್ನುತ್ತಾರೆ. ಅರ್ಥವಿಲ್ಲದ ಮಾತುಗಳು ಅಥವಾ ಬಣ್ಣಬಣ್ಣದ ಮಾತುಗಳು ಎಂದೂ ಸತ್ಯವಾಗಲಾರವು. ಏಕೆಂದರೆ ಅವುಗಳಲ್ಲಿ ಅನುಭವದ ಸೊಗಡು ಇರುವುದಿಲ್ಲ. ಅನುಭವದಿಂದ ದೂರವಾದ ಮಾತುಗಳು ಕೇವಲ ಆಡಂಬರದ ಮಾತುಗಳು. ಸತ್ಯಕ್ಕೆ ದೂರವಾದವುಗಳು. ಆದ್ದರಿಂದ ಅಂತಹ ಮಾತುಗಳು ಹುಸಿ ಅಥವಾ ಸುಳ್ಳು ಎನ್ನುತ್ತಾರೆ ಅಲ್ಲಮರು. 

ಅನುಭವದಿಂದ ಮಾತಾಡುವವರು ಸಾಮಾನ್ಯವಾಗಿ ಮಿತಭಾಷಿಗಳಾಗಿರುತ್ತಾರೆ. ಏಕೆಂದರೆ ಅನುಭವದಿಂದ ಆಡಿದ ಮಾತು ಕೇಳುಗರ ಮೇಲೆ ನೇರವಾದ ಮತ್ತು ಆಳವಾದ ಪರಿಣಾಮ ಬೀರುತ್ತದೆ. ಅದನ್ನು ಮತ್ತೆ ಮತ್ತೆ  ಹೇಳುವ ಅವಶ್ಯಕತೆ ಇರುವುದಿಲ್ಲ. ಆದರೆ ಅನುಭವವಿಲ್ಲದ ಆಳವಿಲ್ಲದೆ  ಹೇಳುವ ಮಾತುಗಳು ಕೇಳುಗರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಅನೇಕಸಲ ಹೇಳುವವರಿಗೇ ಅದು ಅರ್ಥವಾಗಿರುವುದಿಲ್ಲ. ಆದ್ದರಿಂದ ಆ ರೀತಿಯಾಗಿ ಮಾತಾಡುವವರು ಅತೃಪ್ತಿಯಿಂದ ಸದಾ ಹೇಳಿದ್ದನ್ನೇ ಹೇಳುತ್ತಿರುತ್ತಾರೆ, ಮಾತಾಡುತ್ತಲೇ ಇರುತ್ತಾರೆ. ಅವರ ಮಾತುಗಳು ಹುಸಿಯಾಗಿರುತ್ತವೆ ಎನ್ನುತ್ತಾರೆ ಅಲ್ಲಮರು. 

ಬಣ್ಣ ಬಣ್ಣದ ಮಾತಾಡುವವರು “ಶರಣ ಸತಿ ಲಿಂಗಪತಿ” (ಸೃಷ್ಟಿಕರ್ತನು ಪುರುಷನೆಂದೂ ಸೃಷ್ಟಿಯ ಭಾಗವಾದ ಮಾನವರಲ್ಲರೂ ಸ್ತ್ರೀ ಎಂದೂ ಭಾವಿಸಿ ಉಪಾಸಿಸುವುದು”) ಎಂಬ ಮಾತನ್ನೂ ಹೇಳುತ್ತಾರೆ. ಆದರೆ ಅದು ಪೂರ್ಣ ಹುಸಿ.

ಶರಣ ಮತ್ತು ಲಿಂಗದ ನಡುವೆ ಸತಿ ಪತಿಗಳಂತಹ ಅನ್ಯೋನ್ಯವಾದ ಸಂಬಂಧವಿರುತ್ತದೆ. ಆ ಸಂಬಂಧದ ಅರಿವೇ ಇಲ್ಲದೆ ಕೇವಲ ಬಾಯಿ ಮಾತಿಗಾಗಿ ಆ ಪದಗಳನ್ನು ಬಳಸುತ್ತಾರೆ. ಅದಕ್ಕೆ ಏನೂ ಅರ್ಥವಿರುವುದಿಲ್ಲ. ಈ ರೀತಿಯಾಗಿ ತಾವು ಬಳಸುವ ಪದಗಳ ಅಥವಾ ಮಾತುಗಳ  ಅನುಭವವಿಲ್ಲದೆ ಆಡಂಬರದಿಂದ ದೊಡ್ಡ ಮಾತುಗಳನ್ನು ಆಡುವವರನ್ನು ಕಂಡು ಅಲ್ಲಮ ಪ್ರಭುಗಳು “ನಾಚುತ್ತೇನೆ” ಎನ್ನುತ್ತಾರೆ.  

ತಿಳಿಯದೆ ಎಲ್ಲರೂ ತಪ್ಪು ಮಾಡುತ್ತಾರೆ. ನಾಲಿಗೆಗೆ ವಶವಾಗಿ ಅರ್ಥವಿಲ್ಲದ ಮಾತಾಡುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ  ಮಾತಿನ ಅರ್ಥವೇನಾಗಿತ್ತು ಎಂದು ಯೋಚಿಸುತ್ತಾರೆ. ಇಲ್ಲದಿದ್ದರೆ ಅದೇ ತಪ್ಪು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾರೆ. ಮಾಡಿದ ತಪ್ಪಿನ ಅರಿವಾಗುವುದು ಯಾವಾಗ? ತಾನು ಮಾತಾಡುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಾಗ. ಹಾಗೆ ಗಮನಿಸಿ ತಾನು ಮಾಡಿದ ತಪ್ಪನ್ನು ಗುರುತಿಸಿದಾಗ ನಾಚಿಕೆಯಾಗುವುದು ಸಹಜ. ಆ ಹೊತ್ತಿಗೆ ನಾಚಿಕೆಯಾಗಿ ಅದನ್ನು ಮರೆಯುತ್ತಾರೆ. ಮತ್ತೆ ಯಥಾಪ್ರಕಾರ ಅರ್ಥವಿಲ್ಲದ ಮಾತಾಡುವ ಅಭ್ಯಾಸಕ್ಕೆ ಬಲಿಯಾಗುತ್ತಾರೆ.  ಆದರೆ ಅದನ್ನು ಮರೆಯದೆ, ಅದನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಅಂತಹ ತಪ್ಪು ನಡೆಯದೆ ಇರುವಂತೆ ನೋಡಿಕೊಳ್ಳುವವರು ಅತಿ ವಿರಳ. ತಾನು ಆಡುವ ಪ್ರತಿ ಮಾತನ್ನು ಸೂಕ್ಷ್ಮವಾಗಿ ಗಮನಿಸುವುದು ಎಂದರೆ ತನ್ನನ್ನು ತಾನು ಅರಿಯುವುದು ಎಂದಾಗುತ್ತದೆ. ತಾನು ಏನು ನುಡಿದೆ? ಏಕೆ ಹಾಗೆ ನುಡಿದೆ? ಅದರ ಪರಿಣಾಮವೇನಾಯಿತು? ಆ ಮಾತು ಯಾವ ನೆಲೆಯಿಂದ ಬರುತ್ತಿದೆ? ನಾನು ಯಾವ ಪೂರ್ವಗ್ರಹಕ್ಕೆ ತುತ್ತಾಗಿದ್ದೇನೆ? ಅದರಿಂದ ತನಗೆ ಅಥವಾ ಇತರರಿಗೆ ಆದ ಲಾಭ ಅಥವಾ ಹಾನಿ ಏನು ಎಂದೆಲ್ಲ ಗಮನಿಸಿದರೆ ತಮ್ಮ ಮನಸ್ಸಿನ  ಅನೇಕ ಪದರುಗಳು ತಾವಾಗಿಯೇ ತೆರೆದು ಕೊಂಡು ತನ್ನ ಸ್ವರೂಪ ನಿಚ್ಚಳವಾಗುತ್ತ ಹೊಗುತ್ತದೆ.  ಮನಸ್ಸು ಮೌನವಾಗುತ್ತದೆ. 

ಈ ಎಲ್ಲ ವಿಷಯಗಳು ಅಡಕವಾಗಿವೆ ಈ ವಚನದಲ್ಲಿ. ಇದನ್ನೆಲ್ಲ ಅರಿಯದೆ ಕೇವಲ ಅಭ್ಯಾಸ ಬಲದಿಂದ ಮಾತಾಡುತ್ತ ಬದುಕನ್ನು ಕಳೆಯುವವರನ್ನು ನೋಡಿ ಅಲ್ಲಮಪ್ರಭುಗಳು ನಾಚುತ್ತಾರೆ. 

ಅಂದೂ ಕೂಡ ಅನೇಕರು ಕೇವಲ  ಆಡಂಬರದ ಮಾತುಗಳಿಂದ ಮೋಡಿಮಾಡುವವರು ಇದ್ದರು ಎಂದು ತೋರುತ್ತದೆ. ಅಂತಹವರನ್ನು ನಂಬಿ ಜನರು ಮೋಸ ಹೋಗುತ್ತಿದ್ದಿರಬೇಕು. ಇಂತಹವರನ್ನು ಕುರಿತು ಅಲ್ಲಮರು ಹೀಗೆ ಹೇಳಿದರೆಂದು ತೋರುತ್ತದೆ.

 

 

Friday, February 1, 2013

Vachana 127: Banduda Kiridu Maadi - The Cycle of Desire


ಬಂದುದ ಕಿರಿದು ಮಾಡಿ ಬಾರದುದ ಹಿರಿದು ಮಾಡಿ, ಆವಾಗ ಚಿಂತಿಸಿ ಬಳಲುತ್ತಿಹಿರೇಕೆ?
ಇರುಹೆ ಆರುದಿಂಗಳ ದವಸವ ಕೂಡಹಾಕುವಂತೆ, ತಾ ಕಿರಿದಾದರೂ ಆಸೆ ಹಿರಿದಾಯಿತ್ತು,
ಸ್ಥೂಲಕಾಯದ  ಮದಗಜಕ್ಕೇನು ಮುಂದಕ್ಕೆ ಬೇಕೆಂಬ ಆಸೆಯುಂಟೆ? ಇಲ್ಲ.
ಇರುಹೆಯ ಆನೆಯ ಅಂತರವ ನೋಡಿರಣ್ಣ,
ಅರಿದು ಸಲಹುವ ಶಿವನಿದ್ದ ಹಾಗೆ ಬರಿದೆ ಆಸೆಯಿಂದಲೇಕೆ ಸಾಯುವಿರಿ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾಧೀನವನರಿಯದೆ?

TRANSLITERATION

baMduda kiridu maaDi baaraduda hiridu maaDi,  aavaaga ciMtisi  baLaluttihirEke?
iruhe  aarudiMgaLa davasava  kUDahaakuvaMte,taa kiridaadarU aase hiridaayittu.
sthUlakaayada  madagajakkEnu muMdakke bEkeMba aaseyuMTe?
iruheya aaneya aMtarava nODiraNNa,
aridu salahuva shivanidda haage,baride aaseyiMdalEke  saayuviri?
nijaguru svataMtrasiddhalingEshvaranaadheenavanariyade? 

CLICK HERE TO READ-ALONG:


TRANSLATION (WORDS)
baMduda (that which has come our way)  kiridu (small) maaDi (considering) baaraduda (that which has not come our way) hiridu (important) maaDi  (considering)
aavaaga(at that time) ciMtisi  (worrying) baLaluttihirEke? (why do you tire out)
iruhe (the ant)  aarudiMgaLa (for six months)  davasava  (grains)  kUDahaaku(collects)  vaMte (like)
taa (oneself) kiridaadarU  (though small)  aase (the desire)  hiridaayittu, (is  great)
sthUlakaayada (of enormous body)   madagajakkEnu? (what for elephant)
muMdakke ( in future) bEkeMba (needed) aaseyuMTe? (does the elephant have the desire that is )
iruheya  (the  ant) aaneya (the elephant)  aMtarava (the difference between)  nODiraNNa, (you see)
aridu (knows) salahuva (and protects) shivanidda (the God) haage (like)
baride(sheer)  aaseyiMdalEke (of desire)   saayuviri? (why do you die)
nijaguru svataMtrasiddhaligEshvaranaadheenavanariyade? (without knowing that everything is in his hands).
 
TRANSLATION

Ignoring that which came your way and desiring that which has not come your way (i.e. Ignoring what you have and desiring what you don’t have), why are you worrying and getting tired?
The Ant collects the food to last for six months; though small, its desire is huge.
Does the enormous bodied Elephant desires for what is needed in the future? No!
See the difference between the Ant and the Elephant, Sirs!
Why are you dying of desire, the God knows and He is there to protect you!
Everything is in the hands of Lord SvataMtra SiddhalingEshvara!

COMMENTARY

Sharana SvatantraSiddalingesvara comments on the cycle of desire we are stuck in. He questions why everyone is so ignorant of that they have and always be after that they don’t have? Why is everyone so engulfed in this cycle of desire, worried and getting unnecessarily tired? He uses two simple scenarios to drive his point home. The Ant is small and possibly can get by with a minute amount of food. But, its nature is to always collect food and store it for the rainy days and winter.  It is preoccupied in this collect and store mode to a level where it does not have any time or inclination to enjoy the food it has now. It is not living in the moment! The huge bodied Elephant on the other hand, just enjoys tumbling trees and gulping the greenery. It cares less what happens tomorrow. It will worry about it when it gets hungry again! It is said that the Lion hunts only when it is hungry. When it is full, it does not touch a deer dancing over it. The Vachana ends with a reminder that the God knows what is needed and He is there to protect us. Everything is under His control! 

It is natural for us to desire higher income, closer friendship, better mansion to live in, higher position in society than what we have now, etc.  The Vachana is not dissuading us to get away from desiring better things; it is advocating enjoying what we already have to the full extent, be thankful for it, and not ignore it in the pursuit of the next thing, creating unnecessary stress on ourselves.  The obvious question then is, if we are completely content with what has come our way, how can we ‘progress’ to higher things?    Should we not plan to achieve higher and better levels? 

Sharanas believed in giving 100% to their profession. They also believed in minimizing their wants and needs and distribute the excess to benefit the community.  In practice, we cannot be Omar Khayyams living day by day; neither we should be ‘ants’ obsessed with accumulating materials! We need to strike a balance and find our content levels. This is only possible when we achive the maturity of assessing the importance of what we do and what we have and decide how to be in the moment.  

Consider a vacation coming up in the near future. Obviously you have to plan on where you are going, how to get there, what to do there, where to stay, how much to spend, etc.  Planning is neccessary however being obsessive about planning can ruin the vocation. But, once you get there, enjoy it! Not everything that happens while you are there might be predictable and planned for. If unforeseen occurs, take it in the stride and don’t blame yourself for not planning and anticipating it. 

The above example is of a mundane every day journey.  The journey of life is a bit more complicated. Very few accurate maps are available. But, we have a Guide in God. When we come close to Him, the journey gets planned and becomes smooth and savvy! This requires that we accept Him and reach Him within us, meaning develop the equanimity and maturity to live in the moment, and finding the appropriate level of contentment! Buddha said ‘the desire is the root cause of all sufferings’! 

Let us discipline our Desire!
 

KANNADA COMMENTARY 

ಅರ್ಥ:
ಬಂದುದ (ಬಂದುದನ್ನು) ಕಿರಿದು ಮಾಡಿ  (ಚಿಕ್ಕದು ಮಾಡಿ) ಬಾರದುದ (ಬರದೆ ಇರುವುದನ್ನು) ಹಿರಿದು ಮಾಡಿ (ದೊಡ್ಡದು ಮಾಡಿ)
ಆವಾಗ (ಬರದೆ ಇದ್ದುದರ ಬಗ್ಗೆ) ಚಿಂತಿಸಿ (ಚಿಂತೆ ಮಾಡಿ)  ಬಳಲುತ್ತಿಹಿರೇಕೆ? (ಏಕೆ  ಆಯಾಸಗೊಳ್ಳುತ್ತೀರಿ?)
ಇರುಹೆ (ಇರುವೆ) ಆರುದಿಂಗಳ (ಆರು ತಿಂಗಳಕ್ಕಾಗಿ)  ದವಸವ (ಧಾನ್ಯವನ್ನು) ಕೂಡಹಾಕುವಂತೆ (ಕೂಡಿಹಾಕುವಂತೆ)
ತಾ (ತಾನು) ಕಿರಿದಾದರೂ (ಚಿಕ್ಕದಾಗಿದ್ದರೂ)  ಆಸೆ ಹಿರಿದಾಯಿತ್ತು, (ಆಸೆ ದೊಡ್ಡದಾಯಿತು)
ಸ್ಥೂಲಕಾಯದ  (ದೊಡ್ಡ ದೇಹದ) ಮದಗಜಕ್ಕೇನು? (ಆನೆಗೆ  ಅಂತಹ ಆಸೆ ಇಲ್ಲ?)
ಮುಂದಕ್ಕೆ (ಭವಿಷ್ಯದಲ್ಲಿ)  ಬೇಕೆಂಬ ಆಸೆಯುಂಟೆ? (ಬೇಕೆಂಬ ಆಸೆ ಇದೆಯೆ?) ಇಲ್ಲ. (ಇಲ್ಲ್ಲ)
ಇರುಹೆಯ  (ಇರುವೆ) ಆನೆಯ (ಮತ್ತು ಆನೆಯ) ಅಂತರವ ನೋಡಿರಣ್ಣ, (ಅಂತರವನ್ನು ಗಮನಿಸಿರಿ)
ಅರಿದು (ತಿಳಿದುಕೊಂಡು)  ಸಲಹುವ  (ಸಾಕುವ) ಶಿವನಿದ್ದ ಹಾಗೆ (ಶಿವನಿರುವಾಗ)
ಬರಿದೆ (ಕೇವಲ) ಆಸೆಯಿಂದಲೇಕೆ ಸಾಯುವಿರಿ? (ಆಸೆಯಿಂದಲೇ ಸಾಯುವಿರೇಕೆ?)
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾಧೀನವನರಿಯದೆ? (ಎಲ್ಲವೂ ಸಿದ್ಧಲಿಂಗೇಶ್ವರನ ಅಧೀನವಾಗಿರುವುದೆಂದರಿಯದೆ) 


ತಾತ್ಪರ್ಯ:  

ಬದುಕಿನಲ್ಲಿ ತನ್ನ ಪಾಲಿಗೆ ಈಗ ಬಂದುದನ್ನು  ಸಂತೋಷದಿಂದ ಅನುಭವಿಸದೆ ಅದಕ್ಕೆ ಸಲ್ಲಬೇಕಾದ ಬೆಲೆಯನ್ನು ಸಲ್ಲಿಸದೆ ತನ್ನ ಪಾಲಿಗೆ ಬರದೆ ಇದ್ದುದನ್ನು ನೆನೆದು ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಅದು ಬರಲಿಲ್ಲವಲ್ಲ ಎಂದು ಚಿಂತಿಸಿ ಆಯಾಸ ಪಡುತ್ತಾರೆ ಜನರು.  ಇದು ಸರಿಯೆ ಎಂದು  ಕೇಳುತ್ತಾರೆ ಸ್ವತಂತ್ರ ಸಿದ್ಧಲಿಂಗರು.

ಆಸೆ ಎಂಬುದು ಹೇಗೆ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುತ್ತದೆ ನೋಡೋಣ. ನಮ್ಮ ಪಾಲಿಗೆ ಒಂದು ಮನೆ ಬಂದಿದೆ ಎಂದುಕೊಳ್ಳೋಣ. ಅದನ್ನು ಸಂತೋಷದಿಂದ ಸ್ವೀಕರಿಸುವುದನ್ನು ಬಿಟ್ಟು ನಮ್ಮ ಮನಸ್ಸುಆ ಮನೆಯನ್ನು ಕಡೆಗಣಿಸಿ ದೊಡ್ಡ ಬಂಗ್ಲೆಗೆ ಆಸೆಪಡುವುದು. ಮತ್ತು ಆ ಆಸೆ ಕೈಗೂಡಲಿಲ್ಲವೆಂದು ದುಃಖ ಪಡುವುದು ಮತ್ತು ಅದನ್ನು ಸಾಧಿಸಲು ಹೆಣಗಾಡುವುದು ಅದರ ಸ್ವಭಾವವೇ ಆಗಿದೆ, ಆದರೆ ಅದರಿಂದ ವೃಥಾ ಬಳಲಿಕೆಯಲ್ಲದೆ ಏನು ಲಾಭ? 

ಇದಕ್ಕೊಂದು ಉದಾಹರಣೆ ಕೊಡುತ್ತಾರೆ. ಇರುವೆ  ಕಷ್ಟಕ್ಕಾಲಕ್ಕಿರಲಿ (ಮಳೆಗಾಲ, ಚಳಿಗಾಲ) ಎಂದು ಧಾನ್ಯವನ್ನು ಕೂಡಿಡುತ್ತದೆ, ಅದರ ಗಾತ್ರ ನೋಡಿದರೆ ಬಲು ಚಿಕ್ಕದು,  ಅದರ ಹೊಟ್ಟೆಗೆ ಎಷ್ಟು ಆಹಾರ ಬೇಕಾದೀತು?  ರಭಸವಾಗಿ ಗಾಳಿ ಬೀಸಿದರೆ ಅದು ಹಾರಿ ಹೋಗುತ್ತದೆ, ಯಾರ ಕಾಲಕೆಳಗಾದರೂ ಸಿಕ್ಕು  ಕ್ಷಣಮಾತ್ರದಲ್ಲಿ ಜಜ್ಜಿ ಹೋಗುತ್ತದೆ. ಆದರೆ  ಅದರ ಆಸೆ ಮಾತ್ರ ಬಲು ಹಿರಿದು. ತನ್ನ ಆಸೆಯನ್ನು ಪೂರೈಸಲು ಅದು ಸದಾ ಕೆಲಸದಲ್ಲಿ ನಿರತವಾಗಿರುತ್ತದೆ. ಯಾವಾಗಲೂ ನಾಳಿನ ಸಲುವಾಗಿ ಆಹಾರ ಕೊಂಡೊಯ್ಯುವದರಲ್ಲಿ ಮುಳುಗಿರುತ್ತದೆ.  

ಭೀಮಾಕಾರದ ಆನೆ ಮಾತ್ರ ಯಾವತ್ತೂ ನಾಳೆಯ ಚಿಂತೆ ಮಾಡುವುದಿಲ್ಲ. ಅದರ ನಡತೆ ನೋಡಿದರೆ ಅದಕ್ಕೆ ನನ್ನ ಇಷ್ಟು ದೊಡ್ಡ ಹೊಟ್ಟೆಗೆ ನಾಳೆ ಆಹಾರ ಸಿಗದಿದ್ದರೇನು ಮಾಡುವುದು ಎಂಬ ಚಿಂತೆ ಇದೆಯೆಂದು  ತೋರುವುದಿಲ್ಲ. ಇರುವೆ ಮತ್ತು ಆನೆಗಳ ನಡುವಿನ ಈ ಅಂತರವನ್ನು ಗಮನಿಸಿದರೆ ಆನೆ ನಿಶ್ಚಿಂತೆಯಿಂದ ಯಾವಾಗ ಏನು ಸಿಗುತ್ತದೆಯೋ ಆಗ ಅದನ್ನು ಸ್ವೀಕರಿಸುತ್ತದೆ ಎಂಬುದು ಕಂಡುಬರುತ್ತದೆ. ಜೀವನನ್ನು ಬದುಕಿಸುವುದು  ಶಿವನ ಅಧೀನದಲ್ಲಿರುವ ವಿಷಯ. ಎಲ್ಲವನ್ನೂ ಅರಿತು ಎಲ್ಲರನ್ನೂ ಸಲಹುವ ಶಿವನು ಇರುವಾಗ ನಾಳೆಯ ಚಿಂತೆ ಅಥವಾ ಹೆಚ್ಚಿನ ಆಸೆ ಮಾಡಿ ಏಕೆ ಬಳಲುವಿರಿ ಎಂದು ಕೇಳುತ್ತಾರೆ ಸಿದ್ಧಲಿಂಗರು.

ಹಾಗಾದರೆ ನಾಳೆಯ ಬಗ್ಗೆ ಯೋಚಿಸಲೇ ಬಾರದೆ? ಹಾಗೆ ಯೋಚಿಸದೆ ಬದುಕುವುದು ಸಾಧ್ಯವೆ? ಎಂಬಂತಹ ಪ್ರಶ್ನೆಗಳು ಹುಟ್ಟುತ್ತವೆ. ಈ  ನಿಟ್ಟಿನಲ್ಲಿ ಈ ವಚನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಲು ಮುಖ್ಯ. ಈ ಸಂಸಾರದಲ್ಲಿ ತೊಡಗಿಸಿಕೊಂಡವರಿಗೆ ಪೂರ್ತಿಯಾಗಿ ಮೇಲೆ ಹೇಳಿದಂತೆ ಇರುವುದು ಅಸಾಧ್ಯವೇ ಆಗುತ್ತದೆ.

ಇಲ್ಲಿ ಸಿದ್ಧಲಿಂಗರು  ದಿನನಿತ್ಯದ ವಿಷಯಗಳಬಗ್ಗೆ ಹೇಳುತ್ತಿಲ್ಲವೆನಿಸುತ್ತದೆ. ಉದಾಹರಣೆಗೆ, ನಮಗೆ ನಾಳೆ ಎಲ್ಲಿಯೋ ಹೋಗಬೇಕಾಗಿದೆ ಎಂದುಕೊಳ್ಳೋಣ. ಆಗ ಆ ಕೆಲಸಕ್ಕೆ ತಕ್ಕಂತೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ನಾಳೆಯ ಬಗ್ಗೆ ಯೋಚಿಸಲೇ ಬೇಕು. ಅದನ್ನು ಬಿಡುವುದು ಮೂರ್ಖತನವಾಗುತ್ತದೆ. ಆದರೆ ಭವಿಷ್ಯದಲ್ಲಿ ಬೇಕಾಗುತ್ತದೆ ಎಂದು ಹಣವನ್ನು ಕೂಡಿಡುವುದಕ್ಕಾಗಿ ನಿರಂತರವಾಗಿ ದುಡಿತದಲ್ಲಿಯೇ ಬದುಕು ಕಳೆಯುವುದು ತಪ್ಪು. ಎಂದರೆ ಅದಕ್ಕೆ ಒಂದು ಮಿತಿ ಇರಬೇಕು. ಇನ್ನೊಂದು ಉದಾಹರಣೆ ತೆಗೆದುಕೊಳ್ಳಬಹುದು. ಒಂದು ದೂರದ ಮತ್ತು ಬಹುದಿನದ ಪ್ರಯಾಣಕ್ಕೆ ಹೊರಟಿದ್ದೇವೆ  ಎಂದುಕೊಳ್ಳೋಣ.  ಆ ಸ್ಥಳದ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ನಮ್ಮ ತಿಳುವಳಿಕೆಗೆ ತಕ್ಕಂತೆ ನಾವು ಸ್ವಲ್ಪಮಟ್ಟಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸರಿಯೆ. ಆದರೆ ಅದಕ್ಕಿಂತ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಂಡರೆ ಅವು ಅಲ್ಲಿ ಕೆಲಸಕ್ಕೆ ಬಾರದವಾಗುತ್ತವೆ. ಅದರಿಂದ ಏನು ಪ್ರಯೋಜನ. ಅಲ್ಲಿ ಹೋದಮೇಲೆ ಒದಗುವ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಉತ್ತಮ ವಿಚಾರ. ಅದನ್ನು ಬಿಟ್ಟು ಈಗಿನಿಂದಲೆ ಅದರ ಬಗ್ಗೆ ಕೇವಲ ಮನದಲ್ಲಿಯೇ ಮಂಡಿಗೆಗಳನ್ನು ತಿನ್ನುವುದರಿಂದ ಅಥವಾ ವೃಥಾ ಚಿಂತೆ ಮಾಡುವುದರಿಂದ  ಏನು ಲಾಭ?  ಈ ಎರಡೂ ಮನೋದೌರ್ಬಲ್ಯಗಳು. ಇದರಿಂದ ಮನಃ ಶಕ್ತಿ ಕುಂದುತ್ತದೆ. ಶಾಂತಿ ಇಲ್ಲವಾಗುತ್ತದೆ.   

ಬದುಕು ಕೂಡ ಒಂದು ಅಪರಿಚಿತ  ಪ್ರಯಾಣ.  ಈ ಪ್ರಯಾಣಕ್ಕೆ ನಾವು ಅಲ್ಪಸ್ವಲ್ಪ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಆದರೆ ಅದಕ್ಕಾಗಿ ಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತೇನೆ ಎನ್ನುವುದು ಮೂರ್ಖತನ. ಯಾವುದೇ ರೀತಿಯ  ಭೌತಿಕ ಸಿದ್ಧತೆಗಳು ಹೆಚ್ಚಿನ ಕೆಲಸಕ್ಕೆ ಬಾರದವಾಗುತ್ತವೆ.  ಅದಕ್ಕೆ ಬೇಕಾದ ಸಿದ್ಧತೆಯೇ ಬೇರೆ. ಅದು ಆತ್ಮಕ್ಕೆ ಸಂಬಂಧಪಟ್ಟದ್ದು. ಮತ್ತು ಅದು ಹೀಗೆಯೇ ನಡೆಯಬೇಕು  ಎಂದು ಹೇಳಲಾಗುವುದಿಲ್ಲ.  ಅದನ್ನು ಪ್ರತಿಯೊಬ್ಬರು ತಮ್ಮ ಅರಿವಿನ ದೃಷ್ಟಿಯಿಂದ ಕಂಡುಕೊಳ್ಳಬೇಕು.