Friday, February 8, 2013

Vachana 128: Aalavariyada Bhashe – Colorful Talk


ಆಳವರಿಯದ ಭಾಷೆ, ಬಹುಕುಳವಾದ ನುಡಿ,
ಇಂತೆರಡರ ನುಡಿ ಹುಸಿಯಯ್ಯಾ,
ಬಹು ಭಾಷಿತರು ಸುಭಾಷಿತವರ್ಜಿತರು,
ಶರಣ ಸತಿ ಲಿಂಗಪತಿ ಎಂಬರು ಹುಸಿಯಯ್ಯಾ
ಇಂತಪ್ಪವರ ಕಂಡು ನಾಚುವೆನಯ್ಯಾ ಗುಹೇಶ್ವರಾ.

TRANSLITERATION

aaLavariyada bhaaShe, bahukuLavaada nuDi,
iMteraDara nuDi husiyayyaa,
bahu bhaaShitaru subhaaShitavarjitaru,
sharaNa sati liMgapati eMbaru husiyayyaa,
iMtappavara kaMDu naacuvenayyaa guhEshvaraa.

CLICK HERE TO READ-ALONG:


TRANSLATION (WORDS)

aaLavariyada (without knowing the depth, meaningless,) bhaaShe (language,talk), bahukuLavaada(colourful) nuDi (talk),
iMteraDara (of these two kinds)  nuDi (talk) husiyayyaa (is false),
bahu bhaaShitaru (who talk a lot)  subhaaShitavarjitaru,(are without truth)
sharaNa (devotee) sati (is wife)  liMgapati (the God is husband) eMbaru (say)  husiyayyaa,(it is a lie)
iMtappavara (people like this) kaMDu (seeing) naacuvenayyaa guhEshvaraa (I am ashamed Guheshvara)

TRANSLATION

The language without depth, the colorful talk,
Both of these are false (useless), Sir!
Those who talk a lot ignore the truth,
They say ‘devotee is wife, the God is husband’, it is a lie, Sir!
Observing such people, I am ashamed oh Lord Guhesvara!

 COMMENTARY

In this Vachana, Allama Prabhu laments on individuals who are fond of talking without a deep understanding of what they are saying and says he is ashamed of such individuals. He implies that every word we use should be meaningful and appropriate. The talk should not just be a colorful talk to impress the audience; it should be experience based; it should take the audience and the context into account; it should be appropriate, not just full of colorful words with the main aim of mesmerizing the audience. As we have seen from earlier posts, the words should be like pearls in a necklace (in vachana No. 2) and when spoken the Lord should appreciate them. Any talk short of these characteristics is useless.

Those who talk a lot ignore the truth. Indeed, their main aim is to show off their oratory skills. Since they have to do this quite often, they run out of truth and true knowledge of what they are talking about. They invent words and sentences and make them just colorful.
 
One can give a big sermon on the concept of the devotee is wife and the God is husband. They can define and describe duties and nature of both the parties in this relationship at length. They will have never understood the concept and the deep meaning behind it. Instead of portraying the unique bond between the devotee and the God implied by this concept and conveying that the devotee and the God are one, they go through the verbal exercise of describing this concept at length. Such exercises are useless.

Conscioulsy or unconsciously everyone makes mistakes, and get carried away with their tongue while speaking. Some realize about their mistakes. Only very few try to keep in mind to avoid those mistakes. Paying very close attention to what one speaks results in knowing their own self. When one thinks subtley about their spoken words, where they came from, what it meant to them, why those words came about, its effect on others (good or bad), unfolds their own true nature to themselves and quietens thier mind.
 
We are now in the era of ‘marketing’. We have to market everything we can offer to ‘succeed’ in today’s world. Capability to mesmerize the audience is what is needed. It is easy to Google and find the material for our talk instantaneously. The problem comes when the audience probes on the topic of talk and what is said. Without the depth of knowledge, such talks can become useless and embarrassing.  

It is interesting that Allama Prabhu commented on this aspect of individuals. Apparently, the human behavior was the same as it is now during his times also! 
 
Sharanas paid a high respect to two aspects in life: Behavior (Nade) and Talk (Nudi). The advocated a behavior that sets an example for others to follow. They advocated a talk that is always appropriate and meaningful and matches the behavior. 
 

Let us always weigh our words! 

KANNADA COMMENTARY

ಅರ್ಥ:

ಆಳವರಿಯದ (ಅರ್ಥವಿಲ್ಲದ) ಭಾಷೆ (ಮಾತು), ಬಹುಕುಳವಾದ (ಬಣ್ಣ ಬಣ್ಣದ) ನುಡಿ (ಮಾತು),
ಇಂತೆರಡರ (ಈ ಎರಡು ರೀತಿಯ) ನುಡಿ (ಮಾತು) ಹುಸಿಯಯ್ಯಾ(ಅಸತ್ಯ),
ಬಹು ಭಾಷಿತರು (ಈ ರೀತಿಯಾಗಿ ಬಹಳ ಮಾತಾಡುವವರು) ಸುಭಾಷಿತವರ್ಜಿತರು (ಸತ್ಯವನ್ನು ಬಿಟ್ಟವರು),
ಶರಣ ಸತಿ (ಶರಣನು ಸತಿ) ಲಿಂಗಪತಿ (ಲಿಂಗವು ಪತಿ) ಎಂಬರು (ಎಂದು ಹೇಳುವರು)  ಹುಸಿಯಯ್ಯಾ (ಅದು ಅಸತ್ಯ)
ಇಂತಪ್ಪವರ (ಈ ರೀತಿಯಾಗಿ ಮಾತನಾಡುವವರನ್ನು) ಕಂಡು ನಾಚುವೆನಯ್ಯಾ(ಕಂಡು ನಾನು ನಾಚುವೆನಯ್ಯ) ಗುಹೇಶ್ವರಾ.

 ತಾತ್ಪರ್ಯ:

ತಾವು ಏನು ಮಾತಾಡುತ್ತಿದ್ದೇವೆ ಎಂಬುದರ ಕಡೆಗೆ ಗಮನ ಕೊಡದೆ ಸುಮ್ಮನೆ ಮಾತಾಡುವವರನ್ನು ಕಂಡು ಅಲ್ಲಮಪ್ರಭುಗಳು ’ನಾಚುತ್ತೇನೆ’ ಎನ್ನುತ್ತಾರೆ. ಅರ್ಥವಿಲ್ಲದ ಮಾತುಗಳು ಅಥವಾ ಬಣ್ಣಬಣ್ಣದ ಮಾತುಗಳು ಎಂದೂ ಸತ್ಯವಾಗಲಾರವು. ಏಕೆಂದರೆ ಅವುಗಳಲ್ಲಿ ಅನುಭವದ ಸೊಗಡು ಇರುವುದಿಲ್ಲ. ಅನುಭವದಿಂದ ದೂರವಾದ ಮಾತುಗಳು ಕೇವಲ ಆಡಂಬರದ ಮಾತುಗಳು. ಸತ್ಯಕ್ಕೆ ದೂರವಾದವುಗಳು. ಆದ್ದರಿಂದ ಅಂತಹ ಮಾತುಗಳು ಹುಸಿ ಅಥವಾ ಸುಳ್ಳು ಎನ್ನುತ್ತಾರೆ ಅಲ್ಲಮರು. 

ಅನುಭವದಿಂದ ಮಾತಾಡುವವರು ಸಾಮಾನ್ಯವಾಗಿ ಮಿತಭಾಷಿಗಳಾಗಿರುತ್ತಾರೆ. ಏಕೆಂದರೆ ಅನುಭವದಿಂದ ಆಡಿದ ಮಾತು ಕೇಳುಗರ ಮೇಲೆ ನೇರವಾದ ಮತ್ತು ಆಳವಾದ ಪರಿಣಾಮ ಬೀರುತ್ತದೆ. ಅದನ್ನು ಮತ್ತೆ ಮತ್ತೆ  ಹೇಳುವ ಅವಶ್ಯಕತೆ ಇರುವುದಿಲ್ಲ. ಆದರೆ ಅನುಭವವಿಲ್ಲದ ಆಳವಿಲ್ಲದೆ  ಹೇಳುವ ಮಾತುಗಳು ಕೇಳುಗರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಅನೇಕಸಲ ಹೇಳುವವರಿಗೇ ಅದು ಅರ್ಥವಾಗಿರುವುದಿಲ್ಲ. ಆದ್ದರಿಂದ ಆ ರೀತಿಯಾಗಿ ಮಾತಾಡುವವರು ಅತೃಪ್ತಿಯಿಂದ ಸದಾ ಹೇಳಿದ್ದನ್ನೇ ಹೇಳುತ್ತಿರುತ್ತಾರೆ, ಮಾತಾಡುತ್ತಲೇ ಇರುತ್ತಾರೆ. ಅವರ ಮಾತುಗಳು ಹುಸಿಯಾಗಿರುತ್ತವೆ ಎನ್ನುತ್ತಾರೆ ಅಲ್ಲಮರು. 

ಬಣ್ಣ ಬಣ್ಣದ ಮಾತಾಡುವವರು “ಶರಣ ಸತಿ ಲಿಂಗಪತಿ” (ಸೃಷ್ಟಿಕರ್ತನು ಪುರುಷನೆಂದೂ ಸೃಷ್ಟಿಯ ಭಾಗವಾದ ಮಾನವರಲ್ಲರೂ ಸ್ತ್ರೀ ಎಂದೂ ಭಾವಿಸಿ ಉಪಾಸಿಸುವುದು”) ಎಂಬ ಮಾತನ್ನೂ ಹೇಳುತ್ತಾರೆ. ಆದರೆ ಅದು ಪೂರ್ಣ ಹುಸಿ.

ಶರಣ ಮತ್ತು ಲಿಂಗದ ನಡುವೆ ಸತಿ ಪತಿಗಳಂತಹ ಅನ್ಯೋನ್ಯವಾದ ಸಂಬಂಧವಿರುತ್ತದೆ. ಆ ಸಂಬಂಧದ ಅರಿವೇ ಇಲ್ಲದೆ ಕೇವಲ ಬಾಯಿ ಮಾತಿಗಾಗಿ ಆ ಪದಗಳನ್ನು ಬಳಸುತ್ತಾರೆ. ಅದಕ್ಕೆ ಏನೂ ಅರ್ಥವಿರುವುದಿಲ್ಲ. ಈ ರೀತಿಯಾಗಿ ತಾವು ಬಳಸುವ ಪದಗಳ ಅಥವಾ ಮಾತುಗಳ  ಅನುಭವವಿಲ್ಲದೆ ಆಡಂಬರದಿಂದ ದೊಡ್ಡ ಮಾತುಗಳನ್ನು ಆಡುವವರನ್ನು ಕಂಡು ಅಲ್ಲಮ ಪ್ರಭುಗಳು “ನಾಚುತ್ತೇನೆ” ಎನ್ನುತ್ತಾರೆ.  

ತಿಳಿಯದೆ ಎಲ್ಲರೂ ತಪ್ಪು ಮಾಡುತ್ತಾರೆ. ನಾಲಿಗೆಗೆ ವಶವಾಗಿ ಅರ್ಥವಿಲ್ಲದ ಮಾತಾಡುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ  ಮಾತಿನ ಅರ್ಥವೇನಾಗಿತ್ತು ಎಂದು ಯೋಚಿಸುತ್ತಾರೆ. ಇಲ್ಲದಿದ್ದರೆ ಅದೇ ತಪ್ಪು ಮತ್ತೆ ಮತ್ತೆ ಮಾಡುತ್ತಲೇ ಇರುತ್ತಾರೆ. ಮಾಡಿದ ತಪ್ಪಿನ ಅರಿವಾಗುವುದು ಯಾವಾಗ? ತಾನು ಮಾತಾಡುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಾಗ. ಹಾಗೆ ಗಮನಿಸಿ ತಾನು ಮಾಡಿದ ತಪ್ಪನ್ನು ಗುರುತಿಸಿದಾಗ ನಾಚಿಕೆಯಾಗುವುದು ಸಹಜ. ಆ ಹೊತ್ತಿಗೆ ನಾಚಿಕೆಯಾಗಿ ಅದನ್ನು ಮರೆಯುತ್ತಾರೆ. ಮತ್ತೆ ಯಥಾಪ್ರಕಾರ ಅರ್ಥವಿಲ್ಲದ ಮಾತಾಡುವ ಅಭ್ಯಾಸಕ್ಕೆ ಬಲಿಯಾಗುತ್ತಾರೆ.  ಆದರೆ ಅದನ್ನು ಮರೆಯದೆ, ಅದನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಅಂತಹ ತಪ್ಪು ನಡೆಯದೆ ಇರುವಂತೆ ನೋಡಿಕೊಳ್ಳುವವರು ಅತಿ ವಿರಳ. ತಾನು ಆಡುವ ಪ್ರತಿ ಮಾತನ್ನು ಸೂಕ್ಷ್ಮವಾಗಿ ಗಮನಿಸುವುದು ಎಂದರೆ ತನ್ನನ್ನು ತಾನು ಅರಿಯುವುದು ಎಂದಾಗುತ್ತದೆ. ತಾನು ಏನು ನುಡಿದೆ? ಏಕೆ ಹಾಗೆ ನುಡಿದೆ? ಅದರ ಪರಿಣಾಮವೇನಾಯಿತು? ಆ ಮಾತು ಯಾವ ನೆಲೆಯಿಂದ ಬರುತ್ತಿದೆ? ನಾನು ಯಾವ ಪೂರ್ವಗ್ರಹಕ್ಕೆ ತುತ್ತಾಗಿದ್ದೇನೆ? ಅದರಿಂದ ತನಗೆ ಅಥವಾ ಇತರರಿಗೆ ಆದ ಲಾಭ ಅಥವಾ ಹಾನಿ ಏನು ಎಂದೆಲ್ಲ ಗಮನಿಸಿದರೆ ತಮ್ಮ ಮನಸ್ಸಿನ  ಅನೇಕ ಪದರುಗಳು ತಾವಾಗಿಯೇ ತೆರೆದು ಕೊಂಡು ತನ್ನ ಸ್ವರೂಪ ನಿಚ್ಚಳವಾಗುತ್ತ ಹೊಗುತ್ತದೆ.  ಮನಸ್ಸು ಮೌನವಾಗುತ್ತದೆ. 

ಈ ಎಲ್ಲ ವಿಷಯಗಳು ಅಡಕವಾಗಿವೆ ಈ ವಚನದಲ್ಲಿ. ಇದನ್ನೆಲ್ಲ ಅರಿಯದೆ ಕೇವಲ ಅಭ್ಯಾಸ ಬಲದಿಂದ ಮಾತಾಡುತ್ತ ಬದುಕನ್ನು ಕಳೆಯುವವರನ್ನು ನೋಡಿ ಅಲ್ಲಮಪ್ರಭುಗಳು ನಾಚುತ್ತಾರೆ. 

ಅಂದೂ ಕೂಡ ಅನೇಕರು ಕೇವಲ  ಆಡಂಬರದ ಮಾತುಗಳಿಂದ ಮೋಡಿಮಾಡುವವರು ಇದ್ದರು ಎಂದು ತೋರುತ್ತದೆ. ಅಂತಹವರನ್ನು ನಂಬಿ ಜನರು ಮೋಸ ಹೋಗುತ್ತಿದ್ದಿರಬೇಕು. ಇಂತಹವರನ್ನು ಕುರಿತು ಅಲ್ಲಮರು ಹೀಗೆ ಹೇಳಿದರೆಂದು ತೋರುತ್ತದೆ.

 

 

No comments:

Post a Comment