ಬಂದುದ ಕಿರಿದು
ಮಾಡಿ ಬಾರದುದ ಹಿರಿದು ಮಾಡಿ, ಆವಾಗ ಚಿಂತಿಸಿ ಬಳಲುತ್ತಿಹಿರೇಕೆ?
ಇರುಹೆ
ಆರುದಿಂಗಳ ದವಸವ ಕೂಡಹಾಕುವಂತೆ, ತಾ ಕಿರಿದಾದರೂ ಆಸೆ ಹಿರಿದಾಯಿತ್ತು,
ಸ್ಥೂಲಕಾಯದ ಮದಗಜಕ್ಕೇನು ಮುಂದಕ್ಕೆ ಬೇಕೆಂಬ ಆಸೆಯುಂಟೆ? ಇಲ್ಲ.
ಇರುಹೆಯ
ಆನೆಯ ಅಂತರವ ನೋಡಿರಣ್ಣ,
ಅರಿದು
ಸಲಹುವ ಶಿವನಿದ್ದ ಹಾಗೆ ಬರಿದೆ ಆಸೆಯಿಂದಲೇಕೆ ಸಾಯುವಿರಿ?
ನಿಜಗುರು
ಸ್ವತಂತ್ರಸಿದ್ಧಲಿಂಗೇಶ್ವರನಾಧೀನವನರಿಯದೆ?
TRANSLITERATION
baMduda
kiridu maaDi baaraduda hiridu maaDi, aavaaga
ciMtisi baLaluttihirEke?
iruhe aarudiMgaLa davasava kUDahaakuvaMte,taa kiridaadarU aase
hiridaayittu.
sthUlakaayada madagajakkEnu muMdakke bEkeMba aaseyuMTe?
iruheya
aaneya aMtarava nODiraNNa,
aridu
salahuva shivanidda haage,baride aaseyiMdalEke
saayuviri?
nijaguru
svataMtrasiddhalingEshvaranaadheenavanariyade?
CLICK HERE
TO READ-ALONG:
TRANSLATION
(WORDS)
baMduda (that which has come our
way) kiridu (small) maaDi (considering) baaraduda
(that which has not come our way) hiridu (important) maaDi (considering)
aavaaga(at
that time) ciMtisi (worrying) baLaluttihirEke?
(why do you tire out)
iruhe (the
ant) aarudiMgaLa (for six months) davasava (grains) kUDahaaku(collects) vaMte (like)
taa
(oneself) kiridaadarU (though
small) aase (the desire) hiridaayittu, (is great)
sthUlakaayada
(of enormous body) madagajakkEnu? (what
for elephant)
muMdakke (
in future) bEkeMba (needed) aaseyuMTe? (does the elephant have the desire that
is )
iruheya (the
ant) aaneya (the elephant) aMtarava (the difference between) nODiraNNa, (you see)
aridu
(knows) salahuva (and protects) shivanidda (the God) haage (like)
baride(sheer)
aaseyiMdalEke (of desire) saayuviri? (why do you die)
nijaguru
svataMtrasiddhaligEshvaranaadheenavanariyade? (without knowing that everything
is in his hands).
TRANSLATION
Ignoring that
which came your way and desiring that which has not come your way (i.e. Ignoring
what you have and desiring what you don’t have), why are you worrying and getting
tired?
The Ant
collects the food to last for six months; though small, its desire is huge.
Does the
enormous bodied Elephant desires for what is needed in the future? No!
See the
difference between the Ant and the Elephant, Sirs!
Why are you
dying of desire, the God knows and He is there to protect you!
Everything
is in the hands of Lord SvataMtra SiddhalingEshvara!
COMMENTARY
Sharana SvatantraSiddalingesvara comments on the cycle of desire we are stuck in. He questions
why everyone is so ignorant of that they have and always be after that they don’t
have? Why is everyone so engulfed in this cycle of desire, worried and getting
unnecessarily tired? He uses two simple scenarios to drive his point home. The
Ant is small and possibly can get by with a minute amount of food. But, its
nature is to always collect food and store it for the rainy days and
winter. It is preoccupied in this collect
and store mode to a level where it does not have any time or inclination to
enjoy the food it has now. It is not living in the moment! The huge bodied
Elephant on the other hand, just enjoys tumbling trees and gulping the
greenery. It cares less what happens tomorrow. It will worry about it when it
gets hungry again! It is said that the Lion hunts only when it is hungry. When
it is full, it does not touch a deer dancing over it. The Vachana ends with a
reminder that the God knows what is needed and He is there to protect us.
Everything is under His control!
It is
natural for us to desire higher income, closer friendship, better mansion to
live in, higher position in society than what we have now, etc. The Vachana is not dissuading us to get away
from desiring better things; it is advocating enjoying what we already have to
the full extent, be thankful for it, and not ignore it in the pursuit of the
next thing, creating unnecessary stress on ourselves. The obvious question then is, if we are
completely content with what has come our way, how can we ‘progress’ to higher
things? Should
we not plan to achieve higher and better levels?
Sharanas
believed in giving 100% to their profession. They also believed in minimizing
their wants and needs and distribute the excess to benefit the community. In practice, we cannot be Omar Khayyams
living day by day; neither we should be ‘ants’ obsessed with accumulating
materials! We need to strike a balance and find our content levels. This is
only possible when we achive the maturity of assessing the importance of what
we do and what we have and decide how to be in the moment.
Consider a
vacation coming up in the near future. Obviously you have to plan on where you
are going, how to get there, what to do there, where to stay, how much to
spend, etc. Planning is neccessary however being obsessive about planning can ruin the vocation. But, once you get there, enjoy it! Not everything that happens while you are
there might be predictable and planned for. If unforeseen occurs, take it in
the stride and don’t blame yourself for not planning and anticipating it.
The above
example is of a mundane every day journey.
The journey of life is a bit more complicated. Very few accurate maps
are available. But, we have a Guide in God. When we come close to Him, the
journey gets planned and becomes smooth and savvy! This requires that we
accept Him and reach Him within us, meaning develop the equanimity and
maturity to live in the moment, and finding the appropriate level of contentment!
Buddha said ‘the desire is the root cause of all sufferings’!
Let us discipline
our Desire!
KANNADA
COMMENTARY
ಅರ್ಥ:
ಬಂದುದ
(ಬಂದುದನ್ನು) ಕಿರಿದು ಮಾಡಿ (ಚಿಕ್ಕದು ಮಾಡಿ)
ಬಾರದುದ (ಬರದೆ ಇರುವುದನ್ನು) ಹಿರಿದು ಮಾಡಿ (ದೊಡ್ಡದು ಮಾಡಿ)
ಆವಾಗ
(ಬರದೆ ಇದ್ದುದರ ಬಗ್ಗೆ) ಚಿಂತಿಸಿ (ಚಿಂತೆ ಮಾಡಿ) ಬಳಲುತ್ತಿಹಿರೇಕೆ? (ಏಕೆ ಆಯಾಸಗೊಳ್ಳುತ್ತೀರಿ?)
ಇರುಹೆ (ಇರುವೆ)
ಆರುದಿಂಗಳ (ಆರು ತಿಂಗಳಕ್ಕಾಗಿ) ದವಸವ
(ಧಾನ್ಯವನ್ನು) ಕೂಡಹಾಕುವಂತೆ (ಕೂಡಿಹಾಕುವಂತೆ)
ತಾ
(ತಾನು) ಕಿರಿದಾದರೂ (ಚಿಕ್ಕದಾಗಿದ್ದರೂ) ಆಸೆ
ಹಿರಿದಾಯಿತ್ತು, (ಆಸೆ ದೊಡ್ಡದಾಯಿತು)
ಸ್ಥೂಲಕಾಯದ (ದೊಡ್ಡ ದೇಹದ) ಮದಗಜಕ್ಕೇನು? (ಆನೆಗೆ ಅಂತಹ ಆಸೆ ಇಲ್ಲ?)
ಮುಂದಕ್ಕೆ
(ಭವಿಷ್ಯದಲ್ಲಿ) ಬೇಕೆಂಬ ಆಸೆಯುಂಟೆ? (ಬೇಕೆಂಬ
ಆಸೆ ಇದೆಯೆ?) ಇಲ್ಲ. (ಇಲ್ಲ್ಲ)
ಇರುಹೆಯ (ಇರುವೆ) ಆನೆಯ (ಮತ್ತು ಆನೆಯ) ಅಂತರವ ನೋಡಿರಣ್ಣ,
(ಅಂತರವನ್ನು ಗಮನಿಸಿರಿ)
ಅರಿದು
(ತಿಳಿದುಕೊಂಡು) ಸಲಹುವ (ಸಾಕುವ) ಶಿವನಿದ್ದ ಹಾಗೆ (ಶಿವನಿರುವಾಗ)
ಬರಿದೆ
(ಕೇವಲ) ಆಸೆಯಿಂದಲೇಕೆ ಸಾಯುವಿರಿ? (ಆಸೆಯಿಂದಲೇ ಸಾಯುವಿರೇಕೆ?)
ನಿಜಗುರು
ಸ್ವತಂತ್ರಸಿದ್ಧಲಿಂಗೇಶ್ವರನಾಧೀನವನರಿಯದೆ? (ಎಲ್ಲವೂ ಸಿದ್ಧಲಿಂಗೇಶ್ವರನ
ಅಧೀನವಾಗಿರುವುದೆಂದರಿಯದೆ)
ತಾತ್ಪರ್ಯ:
ಬದುಕಿನಲ್ಲಿ
ತನ್ನ ಪಾಲಿಗೆ ಈಗ ಬಂದುದನ್ನು ಸಂತೋಷದಿಂದ
ಅನುಭವಿಸದೆ ಅದಕ್ಕೆ ಸಲ್ಲಬೇಕಾದ ಬೆಲೆಯನ್ನು ಸಲ್ಲಿಸದೆ ತನ್ನ ಪಾಲಿಗೆ ಬರದೆ ಇದ್ದುದನ್ನು ನೆನೆದು
ಅದಕ್ಕೆ ಹೆಚ್ಚಿನ ಮಹತ್ವ ಕೊಟ್ಟು
ಅದು ಬರಲಿಲ್ಲವಲ್ಲ ಎಂದು ಚಿಂತಿಸಿ ಆಯಾಸ ಪಡುತ್ತಾರೆ ಜನರು. ಇದು ಸರಿಯೆ ಎಂದು ಕೇಳುತ್ತಾರೆ ಸ್ವತಂತ್ರ ಸಿದ್ಧಲಿಂಗರು.
ಆಸೆ
ಎಂಬುದು ಹೇಗೆ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುತ್ತದೆ ನೋಡೋಣ. ನಮ್ಮ ಪಾಲಿಗೆ ಒಂದು ಮನೆ
ಬಂದಿದೆ ಎಂದುಕೊಳ್ಳೋಣ. ಅದನ್ನು ಸಂತೋಷದಿಂದ ಸ್ವೀಕರಿಸುವುದನ್ನು ಬಿಟ್ಟು ನಮ್ಮ ಮನಸ್ಸುಆ
ಮನೆಯನ್ನು ಕಡೆಗಣಿಸಿ ದೊಡ್ಡ ಬಂಗ್ಲೆಗೆ ಆಸೆಪಡುವುದು. ಮತ್ತು ಆ ಆಸೆ ಕೈಗೂಡಲಿಲ್ಲವೆಂದು ದುಃಖ
ಪಡುವುದು ಮತ್ತು ಅದನ್ನು ಸಾಧಿಸಲು ಹೆಣಗಾಡುವುದು ಅದರ ಸ್ವಭಾವವೇ ಆಗಿದೆ, ಆದರೆ ಅದರಿಂದ ವೃಥಾ
ಬಳಲಿಕೆಯಲ್ಲದೆ ಏನು ಲಾಭ?
ಇದಕ್ಕೊಂದು
ಉದಾಹರಣೆ ಕೊಡುತ್ತಾರೆ. ಇರುವೆ ಕಷ್ಟಕ್ಕಾಲಕ್ಕಿರಲಿ
(ಮಳೆಗಾಲ, ಚಳಿಗಾಲ) ಎಂದು ಧಾನ್ಯವನ್ನು ಕೂಡಿಡುತ್ತದೆ, ಅದರ ಗಾತ್ರ ನೋಡಿದರೆ ಬಲು
ಚಿಕ್ಕದು, ಅದರ ಹೊಟ್ಟೆಗೆ ಎಷ್ಟು ಆಹಾರ
ಬೇಕಾದೀತು? ರಭಸವಾಗಿ ಗಾಳಿ ಬೀಸಿದರೆ ಅದು ಹಾರಿ
ಹೋಗುತ್ತದೆ, ಯಾರ ಕಾಲಕೆಳಗಾದರೂ ಸಿಕ್ಕು
ಕ್ಷಣಮಾತ್ರದಲ್ಲಿ ಜಜ್ಜಿ ಹೋಗುತ್ತದೆ. ಆದರೆ
ಅದರ ಆಸೆ ಮಾತ್ರ ಬಲು ಹಿರಿದು. ತನ್ನ ಆಸೆಯನ್ನು ಪೂರೈಸಲು ಅದು ಸದಾ ಕೆಲಸದಲ್ಲಿ
ನಿರತವಾಗಿರುತ್ತದೆ. ಯಾವಾಗಲೂ ನಾಳಿನ ಸಲುವಾಗಿ ಆಹಾರ ಕೊಂಡೊಯ್ಯುವದರಲ್ಲಿ ಮುಳುಗಿರುತ್ತದೆ.
ಭೀಮಾಕಾರದ
ಆನೆ ಮಾತ್ರ ಯಾವತ್ತೂ ನಾಳೆಯ ಚಿಂತೆ ಮಾಡುವುದಿಲ್ಲ. ಅದರ ನಡತೆ ನೋಡಿದರೆ ಅದಕ್ಕೆ “ನನ್ನ
ಇಷ್ಟು ದೊಡ್ಡ ಹೊಟ್ಟೆಗೆ ನಾಳೆ
ಆಹಾರ ಸಿಗದಿದ್ದರೇನು ಮಾಡುವುದು” ಎಂಬ ಚಿಂತೆ ಇದೆಯೆಂದು
ತೋರುವುದಿಲ್ಲ. ಇರುವೆ ಮತ್ತು ಆನೆಗಳ ನಡುವಿನ ಈ ಅಂತರವನ್ನು ಗಮನಿಸಿದರೆ ಆನೆ
ನಿಶ್ಚಿಂತೆಯಿಂದ ಯಾವಾಗ ಏನು ಸಿಗುತ್ತದೆಯೋ ಆಗ ಅದನ್ನು ಸ್ವೀಕರಿಸುತ್ತದೆ ಎಂಬುದು
ಕಂಡುಬರುತ್ತದೆ. ಜೀವನನ್ನು ಬದುಕಿಸುವುದು ಶಿವನ
ಅಧೀನದಲ್ಲಿರುವ ವಿಷಯ. ಎಲ್ಲವನ್ನೂ ಅರಿತು ಎಲ್ಲರನ್ನೂ ಸಲಹುವ ಶಿವನು ಇರುವಾಗ ನಾಳೆಯ ಚಿಂತೆ
ಅಥವಾ ಹೆಚ್ಚಿನ ಆಸೆ ಮಾಡಿ ಏಕೆ ಬಳಲುವಿರಿ ಎಂದು ಕೇಳುತ್ತಾರೆ ಸಿದ್ಧಲಿಂಗರು.
ಹಾಗಾದರೆ
ನಾಳೆಯ ಬಗ್ಗೆ ಯೋಚಿಸಲೇ ಬಾರದೆ? ಹಾಗೆ ಯೋಚಿಸದೆ ಬದುಕುವುದು ಸಾಧ್ಯವೆ? ಎಂಬಂತಹ ಪ್ರಶ್ನೆಗಳು
ಹುಟ್ಟುತ್ತವೆ. ಈ ನಿಟ್ಟಿನಲ್ಲಿ ಈ ವಚನವನ್ನು
ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಲು ಮುಖ್ಯ. ಈ ಸಂಸಾರದಲ್ಲಿ ತೊಡಗಿಸಿಕೊಂಡವರಿಗೆ ಪೂರ್ತಿಯಾಗಿ
ಮೇಲೆ ಹೇಳಿದಂತೆ ಇರುವುದು ಅಸಾಧ್ಯವೇ ಆಗುತ್ತದೆ.
ಇಲ್ಲಿ
ಸಿದ್ಧಲಿಂಗರು ದಿನನಿತ್ಯದ ವಿಷಯಗಳಬಗ್ಗೆ
ಹೇಳುತ್ತಿಲ್ಲವೆನಿಸುತ್ತದೆ. ಉದಾಹರಣೆಗೆ, ನಮಗೆ ನಾಳೆ ಎಲ್ಲಿಯೋ ಹೋಗಬೇಕಾಗಿದೆ ಎಂದುಕೊಳ್ಳೋಣ.
ಆಗ ಆ ಕೆಲಸಕ್ಕೆ ತಕ್ಕಂತೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ನಾಳೆಯ ಬಗ್ಗೆ ಯೋಚಿಸಲೇ ಬೇಕು.
ಅದನ್ನು ಬಿಡುವುದು ಮೂರ್ಖತನವಾಗುತ್ತದೆ. ಆದರೆ ಭವಿಷ್ಯದಲ್ಲಿ ಬೇಕಾಗುತ್ತದೆ ಎಂದು ಹಣವನ್ನು
ಕೂಡಿಡುವುದಕ್ಕಾಗಿ ನಿರಂತರವಾಗಿ ದುಡಿತದಲ್ಲಿಯೇ ಬದುಕು ಕಳೆಯುವುದು ತಪ್ಪು. ಎಂದರೆ ಅದಕ್ಕೆ
ಒಂದು ಮಿತಿ ಇರಬೇಕು. ಇನ್ನೊಂದು ಉದಾಹರಣೆ ತೆಗೆದುಕೊಳ್ಳಬಹುದು. ಒಂದು ದೂರದ ಮತ್ತು ಬಹುದಿನದ
ಪ್ರಯಾಣಕ್ಕೆ ಹೊರಟಿದ್ದೇವೆ ಎಂದುಕೊಳ್ಳೋಣ. ಆ ಸ್ಥಳದ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ನಮ್ಮ
ತಿಳುವಳಿಕೆಗೆ ತಕ್ಕಂತೆ ನಾವು ಸ್ವಲ್ಪಮಟ್ಟಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸರಿಯೆ. ಆದರೆ
ಅದಕ್ಕಿಂತ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಂಡರೆ ಅವು ಅಲ್ಲಿ ಕೆಲಸಕ್ಕೆ ಬಾರದವಾಗುತ್ತವೆ. ಅದರಿಂದ
ಏನು ಪ್ರಯೋಜನ. ಅಲ್ಲಿ ಹೋದಮೇಲೆ ಒದಗುವ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಉತ್ತಮ ವಿಚಾರ.
ಅದನ್ನು ಬಿಟ್ಟು ಈಗಿನಿಂದಲೆ ಅದರ ಬಗ್ಗೆ ಕೇವಲ ಮನದಲ್ಲಿಯೇ ಮಂಡಿಗೆಗಳನ್ನು ತಿನ್ನುವುದರಿಂದ
ಅಥವಾ ವೃಥಾ ಚಿಂತೆ ಮಾಡುವುದರಿಂದ ಏನು
ಲಾಭ? ಈ ಎರಡೂ ಮನೋದೌರ್ಬಲ್ಯಗಳು. ಇದರಿಂದ ಮನಃ
ಶಕ್ತಿ ಕುಂದುತ್ತದೆ. ಶಾಂತಿ ಇಲ್ಲವಾಗುತ್ತದೆ.
ಬದುಕು
ಕೂಡ ಒಂದು ಅಪರಿಚಿತ ಪ್ರಯಾಣ. ಈ ಪ್ರಯಾಣಕ್ಕೆ ನಾವು ಅಲ್ಪಸ್ವಲ್ಪ ಸಿದ್ಧತೆಗಳನ್ನು
ಮಾಡಿಕೊಳ್ಳಬಹುದು. ಆದರೆ ಅದಕ್ಕಾಗಿ ಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತೇನೆ ಎನ್ನುವುದು ಮೂರ್ಖತನ.
ಯಾವುದೇ ರೀತಿಯ ಭೌತಿಕ ಸಿದ್ಧತೆಗಳು ಹೆಚ್ಚಿನ
ಕೆಲಸಕ್ಕೆ ಬಾರದವಾಗುತ್ತವೆ. ಅದಕ್ಕೆ ಬೇಕಾದ
ಸಿದ್ಧತೆಯೇ ಬೇರೆ. ಅದು ಆತ್ಮಕ್ಕೆ ಸಂಬಂಧಪಟ್ಟದ್ದು. ಮತ್ತು ಅದು ಹೀಗೆಯೇ ನಡೆಯಬೇಕು ಎಂದು ಹೇಳಲಾಗುವುದಿಲ್ಲ. ಅದನ್ನು ಪ್ರತಿಯೊಬ್ಬರು ತಮ್ಮ ಅರಿವಿನ ದೃಷ್ಟಿಯಿಂದ
ಕಂಡುಕೊಳ್ಳಬೇಕು.
No comments:
Post a Comment