Friday, February 15, 2013

Vachana 129: Aa Maatu I Maatu – Loose Talk


ಆ ಮಾತು ಈ ಮಾತು ಹೋ ಮಾತು ಎಲ್ಲವೂ ನೆರೆದು ಹೋಯಿತ್ತಲ್ಲಾ!
ಭಕ್ತಿ ನೀರಲ್ಲಿ ನೆನೆದು ಜಲವ ಕೂಡಿ ಹೋಯಿತ್ತಲ್ಲಾ!
ಸಾವನ್ನಕ್ಕರ ಸರಸ ಉಂಟೆ? ಗುಹೇಶ್ವರಾ!

TRANSLITERATION
aa maatu I maatu hO maatu ellavU neredu hOyittallaa!
bhakti  nIralli nenedu  jalava kUDi hOyittallaa!
saavannakkara sarasa uMTe?  guhEshvaraa!


CLICK HERE FOR A RECITATION:


 TRANSLATION (WORDS)

aa maatu ( that talk, talk about the other world) I maatu  ( this talk, talk about this world) hO maatu (talk about many other things) ellavU (all) neredu (over flowing)  hOyittallaa! (alas! went waste)
bhakti  (little bhakti that was)  nIralli nenedu (got drenched in water)  jalava kUDi  (became one with water) hOyittallaa! (alas! went waste)
saavannakkara  (till death)  sarasa ( the joy)  uMTe? (is it there?)  guhEshvaraa! (Guheshvara)

TRANSLATION

That talk, this talk and talk about all other things, overflown and went to waste, alas!
The devotion got drenched in the water (of talk), became one with water and went to waste, alas!
Is the joy that would have been until death, still there? Guhesvara!

COMMENTARY

In our previous post, Allama Prabhu emphasized that there must be the strength of experience behind every word we utter.   He continues that view in this cryptic Vachana to impress on us how loose talk can take away what all we have.

That talk in the first line of Vachana is referring to other world (the world after) and this talk to the world we are now in. Talk about all the other things covers all the other discussions and speeches we get involved in. We really don’t know anything about the other world. We have not experienced it. We are only guessing what is out there. Yet, we talk all about it as though we have been there. We and everyone around us already know all about this world.  We are all in it. As such, our talk does not add any value to what we know already. Yet, we keep talking about it. The pot of this loose talk boils over and it is all a waste of time and resources.

Whatever the little devotion the devotee had, got drenched in the water of loose talk and became one with water and got wasted. The speaker was not a full-fledged devotee. But he started talking about devotion and how he has achieved it. This talk raised his ego (I-ness) to the level he lost his devotion (Bhakti).

The devotion should have contributed to an immense joy until the death. But, due to the loose talk the devotion got lost and hence the eternal joy vanished.

We are all fond of talking. We tend to keep talking to show off how smart, capable, and wealthy we are. We create stories to make the talk interesting. We get carried away mesmerized by our own capability to talk and hold the audience listening. But, talking without the appropriate experience to substantiate what we say would eventually be a waste. Listeners will eventually find the shallowness in the talk and the speaker ends up losing what he had.

When we speak the Lord should say ‘yes, yes’ in utmost appreciation! (Vachana 2)

 Let us make our talk substantial, not superficial!

KANNADA COMMENTARY

ಅರ್ಥ:

ಆ ಮಾತು (ಪರಲೋಕದ ಮಾತು)  ಈ ಮಾತು (ಇಹ ಲೋಕದ ಮಾತು)  ಹೋ ಮಾತು ಎಲ್ಲವೂ (ಬೇರೆ ರೀತಿಯ ಎಷ್ಟೋ ಮಾತುಗಳೆಲ್ಲ) ನೆರೆದು (ನೆರೆ ಬಂದು , ಉಕ್ಕಿ)  ಹೋಯಿತ್ತಲ್ಲಾ! (ಹೋಯಿತಲ್ಲ)
ಭಕ್ತಿ (ಇದ್ದ ಅಲ್ಪ ಸ್ವಲ್ಪ ಭಕ್ತಿ) ನೀರಲ್ಲಿ ನೆನೆದು ಜಲವ (ಮಾತೆಂಬ ನೀರಿನಲ್ಲಿ)  ಕೂಡಿ ಹೋಯಿತ್ತಲ್ಲಾ! (ಕೂಡಿಕೊಂಡು ಹರಿದು ಹೋಯಿತಲ್ಲ)
ಸಾವನ್ನಕ್ಕರ (ಸಾಯುವವರೆಗೆ) ಸರಸ (ಆನಂದ)  ಉಂಟೆ? ಗುಹೇಶ್ವರಾ! (ಇದೆಯೆ ಗುಹೇಶ್ವರ?)

ತಾತ್ಪರ್ಯ:
 ಮಾತಿನ ಪರಿಣಾಮದ ಬಗ್ಗೆ ಅಲ್ಲಮರು ಎಷ್ಟು ಆಳವಾಗಿ ಯೋಚಿಸಿದ್ದರು ಎಂಬುದು ಮಾತಿನ ಬಗ್ಗೆ ಅವರ ಈ ವಚನಗಳಿಂದ ಕಂಡು ಬರುತ್ತದೆ. ಮಾತಾಡುವುದು ಮನುಷ್ಯನ ಚಟವೇ ಆಗಿದೆ. ಆತ ಏನಾದರೂ ಮಾತಾಡುತ್ತಲೇ ಇರುತ್ತಾನೆ. ಅಲ್ಲಮರು ಅದನ್ನು ಬಹಳ ಸೊಗಸಾಗಿ ಹೇಳಿದ್ದಾರೆ – “ಆ ಮಾತು ಈ ಮಾತು ಹೋ ಮಾತು ಎಲ್ಲವೂ ನೆರೆದು ಹೋಯಿತ್ತಲ್ಲಾ!”  

ಹಿಂದಿನ ವಚನದಲ್ಲಿ ಹೇಳಿದಂತೆ ಅನುಭವದ ಆಳದಿಂದ ಬಂದ ಮಾತುಗಳಲ್ಲ. “ಆ ಮಾತು ಈ ಮಾತು”  ತನಗೆ ಸಂಬಂಧಿಸಿರುವ ಹಾಗೂ ತನಗೆ  ಸಂಭಂಧಿಸಿರದ, ತನಗೆ ತಿಳಿದಿರುವ ಹಾಗೂ  ತನಗೆ ತಿಳಿಯದೆ ಇರುವ ಮುಂತಾಗಿ ಹತ್ತು ಹಲವು ಮಾತುಗಳನ್ನಾಡುತ್ತಾನೆ ಮಾನವನು. ಈ ಲೋಕದ ಬಗ್ಗೆ  ಮತ್ತು ಪರಲೋಕದ ಬಗ್ಗೆಯೂ ತನಗೆಲ್ಲ ತಿಳಿದಿದೆ ಎನ್ನುವಂತೆ ಮಾತಾಡುತ್ತಾನೆ. ಈ ಎಲ್ಲ ಮಾತುಗಳೂ ವ್ಯರ್ಥ, ಏಕೆಂದರೆ ಕಾಣದ ಪರಲೋಕದ ಬಗ್ಗೆ ಯಾರೂ ಮಾತಾಡಲು ಸಾಧ್ಯವಿಲ್ಲ. ಆದರೂ ಜನರು ತಮಗೆ ಅದು ತಿಳಿದಿದೆ ಎನ್ನುವಂತೆ ವ್ಯರ್ಥವಾಗಿ ಮಾತಾಡುತ್ತಾರೆ. ಈ ಲೋಕದ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ತಿಳಿದದ್ದನ್ನೇ ಮತ್ತೆ ಮಾತಾಡುವುದರಿಂದ ಯಾವ ಲಾಭವೂ ಇಲ್ಲ. ಸಮಯ ವ್ಯರ್ಥವಾಗುತ್ತದ ಅಲ್ಲದೆ ಬೇಕಾದದ್ದನ್ನು ಮಾತಾಡುವ ನಾಲಿಗೆಯ ಚಟ ಇನ್ನೂ ಗಟ್ಟಿಯಾಗುತ್ತ ಹೋಗುತ್ತದೆ. ತನಗೆ ಗೊತ್ತಿರುವಂತಹ ಮತ್ತು ಗೊತ್ತಿಲ್ಲದ ಮಾತುಗಳಾಡಿ ಆತನು ಸೋಲನು. ಇನ್ನೂ ಇನ್ನೂ ಮಾತಾಡುತ್ತಲೇ ಇರುತ್ತಾನೆ. ಮಾತಿನ ಚಟಕ್ಕೆ ಬಿದ್ದು  ಆತನು ಮಾತಿಗೆ ನಿಂತರೆ ಸಾಕು ನೀರಿನ ಪ್ರವಾಹ ಉಕ್ಕಿ ಹರಿಯುವಂತೆ ಗಳಗಳನೆ ಮಾತಾಡುತ್ತಾನೆ. ಅನುಭವದ ಆಳವಿಲ್ಲದ ಮಾತುಗಳು ಉಕ್ಕುಕ್ಕಿ ಹರಿಯುತ್ತವೆ.

ಮನದಲ್ಲಿ ಎಲ್ಲಿಯೋ ಇದ್ದ ಸುಪ್ತ ಅಲ್ಪ ಸ್ವಲ್ಪ ಭಕ್ತಿ  ಆ ಮಾತೆಂಬ ಪ್ರವಾಹದ ನೀರಿನಲ್ಲಿ ಕೂಡಿಕೊಂಡು ಹರಿದು ಹೋಯಿತು ಎನ್ನುತ್ತಾರೆ ಅಲ್ಲಮರು. ಮಾತು ಮಾನವನ ಅಭ್ಯಾಸವಾಗಿದೆ. ಅನೇಕ ಸಲ ಅದು ಯಾಂತ್ರಿಕವಾಗಿ ಹರಿಯುತ್ತದೆ. ಇಂತಹುದನ್ನು ಹೇಳಬೇಕು ಇಂತಹುದನ್ನು ಹೇಳಬಾರದು ಎನ್ನುವ ವಿವೇಕ ಅಲ್ಲಿರುವುದಿಲ್ಲ. ತಾನು ಅನುಭವಿಸಿದ್ದೇನೆ, ಆದ್ದರಿಂದ ಈ ಮಾತು ಅನುಭವ ಸಿದ್ಧವಾದದ್ದು, ಇದನ್ನು ಮಾತ್ರ  ತಾನು ಹೇಳಬಹುದು, ಅಥವಾ ಇದು ಹೇಳಲು ತಕ್ಕುದು ಅಥವಾ ಇಲ್ಲ ಎಂಬ ತಿಳುವಳಿಕೆಗೆ ಅಲ್ಲಿ ಸ್ಥಾನವೇ ಇರುವುದಿಲ್ಲ. ನದಿಯಲ್ಲಿ ಪ್ರವಾಹ ಬಂದಾಗ ನೀರು ಎಲ್ಲೆಂದರಲ್ಲಿ ಹರಿದು ಹೋಗುವಂತೆ ಮಾತು ಕೂಡ  ಹರಿಯುತ್ತದೆ. ಮನದಲ್ಲಿ ಎಲ್ಲೋ ಕಿಂಚಿತ್ ಭಕ್ತಿ ಇರುತ್ತದೆ. ಅದು ಸುಪ್ತವಾಗಿರುತ್ತದೆ. ಆದರೆ ಮಾತಿಗೆ ತೊಡಗಿದಾಗ ಅದು ವ್ಯಕ್ತವಾಗುತ್ತದೆ. ಆಮೇಲೆ ಅದರ ಬಗ್ಗೆ ಹೇಳಿಕೊಳ್ಳಬಾರದು ಎನ್ನುವ ವಿವೇಕ ನಾಶವಾಗುತ್ತದೆ. ಮತ್ತು ಅದರ ಬಗ್ಗೆಯೇ ಮಾತುಗಳು ಹರಿಯಲು ಆರಂಭಿಸುತ್ತವೆ. ಒಮ್ಮೆ ಅದರ ಬಗ್ಗೆ ಹೇಳಿಕೊಳ್ಳಲು ತೊಡಗಿದಾಗ ಮನದಲ್ಲಿ ಅಹಂಕಾರ ಹುಟ್ಟುತ್ತದೆ. ಅಷ್ಟು ಹೊತ್ತಿಗೆ ಆ ಭಕ್ತಿಯ ಪಾವಿತ್ರ್ಯ ಅಳಿದು ಹೋಗಿ ಅದು ಯಾಂತ್ರಿಕವಾಗುತ್ತದೆ ಕೇವಲ ಶಬ್ದವಾಗಿ ಉಳಿಯುತ್ತದೆ. ಇದನ್ನೇ ಅಲ್ಲಮರು ಮಾತೆಂಬ ಪ್ರವಾಹದ ನೀರಿನಲ್ಲಿ ಕೂಡಿಕೊಂಡು ಹರಿದು ಹೋಯಿತು ಎನ್ನುತ್ತಾರೆ.

ಭಕ್ತಿ ಹೀಗೆ ಹರಿದು ಹೋಗದಿದ್ದಿದ್ದರೆ ಸಾಯುವವರೆಗೂ ಅದರ ಆನಂದವನ್ನು ಅನಭವಿಸಬಹುದಾಗಿತ್ತು. ಆದರೆ ಈಗ ಅದು ಸಾಧ್ಯವಿಲ್ಲ. ಇದು ಮಾತುಗಳ ಪರಿಣಾಮ  ಎನ್ನುತ್ತಾರೆ ಅಲ್ಲಮಪ್ರಭುಗಳು.

No comments:

Post a Comment