Friday, February 22, 2013

Vachana 130: Maatu Maatige mathanava – The Illumine


ಮಾತು ಮಾತಿಗೆ ಮಥನವ ಮಾಡುವಾತನೆ ಜಾತ
ಮಾತಿಗೆ ಮೊದಲ ಕಂಡಾತನೆ ಅಜಾತ
ಕಾತರಕ್ಕೆ ಕಂಗೆಟ್ಟು ಕಳವಳಿಸದಿಪ್ಪನೆ ಪರಮಾತ್ಮ
ನೀತಿ ನಿಜ ನೆಲೆಗೊಂಡಾತನೆ ಜಗನ್ನಾಥ,
ಇವೇತರೊಳಗೂ ಸಿಕ್ಕದಿಪ್ಪಾತನೆ ಗುರುನಾಥ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
TRANSLITERATION

maatu  maatige mathanava maaDuvaatane jaata
maatige modala kaMDaatane ajaata
kaatarakke kaMgeTTu  kaLavaLisadippne paramaatma
nIti nija nelegoMDaatane jagannaathaivEtarOlagU sikadippaatane gurunaatha
basavapriya kUDalacennabasavaNNA    
CLICK HEAR TO HEAR THE RECITATION:

http://youtu.be/DlehLJYgra4
TRANSLATION (WORDS) 

maatu  (talk) maatige (for the talk, everything that has been talked) mathanava (churns, thinks) maaDuvaatane (the one who) jaata (is mortal, who takes birth and death)
maatige (of talk) modala (origin) kaMDaatane (the one who comes to know) ajaata (is unborn)kaatarakke (in panicking situation) kaMgeTTu (losing sight) kaLavaLisadippne (the one who is not perturbed) paramaatma (is God)
nIti (morality) nija (truth) nelegoMDaatane (the one who is established in) jagannaatha (is the lord of the universe)
ivEtarOlagU (in any of these) sikadippaatane (the one who is not entangled) gurunaatha (is Gurunatha, light )
basavapriya kUDalacennabasavaNNA (Basvapriya Kudalachennabasavannaa)

 TRANSLATION

The one who churns everything that has been said is mortal.
The one who sees the origin of what is said is immortal (unborn).
The one who does not lose sight and is not perturbed in panicky situations is God.
The one who is established in morality and truth is the lord of the Universe.
The one who is not entangled in any of these is the illumine (the Light),
Basvapriya Kudalachennabasavannaa!

COMMENTARY

Sharanas have viewed the talk from various angles. We have seen some of those in previous postings. In this Vachana, Hadapada Appanna tries to drive home that it is not sufficient just to understand what is being said.

It is very natural for us to make every effort to understand what is being said. We churn it, think through and try to find the hidden and apparent meanings. This churning process is sufficient to satisfy us. We are happy that we understood, we become proud that we understood it, we feel so great about this accomplishment and our ego shoots up. The result of enhanced ego is the pain attached to it. Thus, the one who is just satisfied with understanding what is said is still in the cycle of happiness and sadness and is very much mortal. 

Appanna says that the one who realizes the source of the talk is unborn or immortal.  This individual questions as to how the talk came about? What is its source? What does it depend on? When such questions are answered the result is the realization that behind everything that is said is that super soul. He is the reason for everything. The one who realizes this becomes immortal and escapes the cycle of life and death. 

When panicky situations arise, the one who does not get perturbed and does not lose sight of what is going on and stays calm and collected, is the super soul. He is the soul who is not tinged by the happenings of life; he has successfully removed all the walls built around the soul due to the ups and downs of life. He has realized the Self. 

Those who are established in morality and truth and do not stray from them no matter what situations arise are always respected and revered by everyone around them. They are indeed Lords of the Universe, but not realized the self.

The ultimate state one can attain is becoming illumine, the one who is the Light. This is the individual who shines, shines the light to drive the darkness and ignorance away. He is the one who is not stuck in the cycles of understanding and non-understanding, not perturbed by the ups and downs, not even concerned of  becoming the Lord of the Universe or the super soul.  

Let us be the Light! 

KANNADA COMMENTARY

ಅರ್ಥ:
ಮಾತು ಮಾತಿಗೆ (ಪ್ರತಿಯೊಂದು ಮಾತನ್ನು)  ಮಥನವ ಮಾಡುವಾತನೆ (ಪರಿಶೀಲಿಸಿ ಅದರ ಅರ್ಥವನ್ನು ಹಿಂಡಿ ತೆಗೆಯುವಾತ) ಜಾತ (ಹುಟ್ಟುವವನು, ಹುಟ್ಟು ಸಾವಿನ ಚಕ್ರಕ್ಕೆ ಸಿಕ್ಕಿದವನು)
ಮಾತಿಗೆ ಮೊದಲ (ಮಾತಿನ ಮೂಲವನ್ನು )ಕಂಡಾತನೆ  (ತಿಳಿದವನು) ಅಜಾತ (ಹುಟ್ಟಿಲ್ಲದವನು)
ಕಾತರಕ್ಕೆ (ಅಂಜಿಕೆ ಹುಟ್ಟಿಸುವಂತಹ ಪ್ರಸಂಗಗಳಲ್ಲಿ) ಕಂಗೆಟ್ಟು (ದಿಕ್ಕುಗೆಟ್ಟು) ಕಳವಳಿಸದಿಪ್ಪನೆ (ಗೊಂದಲಗೊಳ್ಳದಿರುವವನೆ) ಪರಮಾತ್ಮ, 
ನೀತಿ (ಒಳ್ಳೆಯ ನಡತೆ) ನಿಜ (ಸತ್ಯ) ನೆಲೆಗೊಂಡಾತನೆ (ಗಳಿಗೆ ಸ್ಥಾನನಾದವನೆ) ಜಗನ್ನಾಥ,
ಇವೇತರೊಳಗೂ (ಈ ಯಾವುದರಲ್ಲಿಯು)ಸಿಕ್ಕದಿಪ್ಪಾತನೆ (ಸಿಕ್ಕಿಕೊಳ್ಳದಿರುವವನೆ) ಗುರುನಾಥ (ಬೆಳಕು)
ಬಸವಪ್ರಿಯ ಕೂಡಲಚೆನ್ನಬಸವಣ್ಣಾ
.  ( ವಚನ ಕಾರ- ಹಡಪದ ಅಪ್ಪಣ್ಣ ,   ಸಂಕೀರ್ಣ ವಚನ ಸಂಪುಟ ೪, ಪುಟ ೬೧೨, ವಚನ ಸಂಖ್ಯೆ ೧೦೧೦) 

ತಾತ್ಪರ್ಯ:

ಮಾತನ್ನು ಅನೇಕ ಆಯಾಮಗಳಿಂದ ನೋಡಿದ್ದಾರೆ ನಮ್ಮ ಶರಣರು. ಇಲ್ಲಿ ಹಡಪದ ಅಪ್ಪಣ್ಣನವರು ಕೇವಲ ಮಾತಿನ ಅರ್ಥವನ್ನು ತಿಳಿದುಕೊಂಡರೆ ಸಾಲದು ಎಂದು ಹೇಳುತ್ತಾರೆ. 

ಮಾತಿನ ಅರ್ಥವನ್ನು ಅರಿಯಬೇಕೆನ್ನುವ ಆಸೆ  ಸಹಜವೆ. ಮೊಸರನ್ನು ಕಡೆಯುವಂತೆ ಮಾತನ್ನು ಮಥಿಸಿ ಅದರಲ್ಲಿ ಹುದುಗಿರುವ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಆ ಪ್ರಕ್ರಿಯೆಯೇ (process) ಅವರಿಗೆ ತೃಪ್ತಿ ಕೊಡುತ್ತದೆ. ಆ ಅರ್ಥ ತಿಳಿದುಕೊಂಡರೆ ತಮ್ಮ ಕೆಲಸವಾಯಿತು ಎನ್ನುವ ಭಾವ ಅವರಿಗೆ. ಅಲ್ಲಿಗೆ ಅದರ ಕೊನೆ. ಅಲ್ಲದೆ ತಾನು ಚೆನ್ನಾಗಿ ಮಥಿಸಿ ಅಂದರೆ ಎಲ್ಲ ಆಯಾಮಗಳಿಂದ ಮಾತಿನ ಅರ್ಥ ತಿಳಿದುಕೊಂಡಿದ್ದೇನೆ ಎನ್ನುವ ಅಹಂಕಾರ ಕೂಡ ಅದರೊಂದಿಗೆ ಬರುತ್ತದೆ. ಅಹಂಕಾರ ಒಂದು ಬಂದರೆ ಸಾಕು ಅದರೊಂದಿಗೆ ನೋವುಗಳು ಬಂದೇ ಬರುತ್ತವೆ. ಆದ್ದರಿಂದ ಈ ರೀತಿಯಾಗಿ ಮಾತಿನ ಅರ್ಥದಿಂದ ತೃಪ್ತಿಪಟ್ಟುಕೊಳ್ಳುವವನು ಹುಟ್ಟು ಸಾವಿನ ಚಕ್ರಕ್ಕೆ ಸಿಕ್ಕುವವನು. ಆತನೂ ಕೂಡ ಬದುಕಿನ ಸುಖ ದುಃಖಗಳಿಗೆ ಈಡಾಗುತ್ತಾನೆ. ಆದರೆ ಅದು ಸಾಲದು. ಕೇವಲ ಮಾತಿನ ಅರ್ಥ ಬೆಳಕಲ್ಲ. ಬೆಳಕು ಕಾಣುವುದು ನಮ್ಮ ಉದ್ದೇಶವಾಗಿರಬೇಕು. ಎನ್ನುವ ಸೂಚನೆ ಕೊಡುತ್ತಾರೆ ಅಪ್ಪಣ್ಣನವರು ಈ ವಾಕ್ಯದಲ್ಲಿ.

ಮಾತಿನ ಮೂಲವನ್ನು ಕಂಡುಕೊಳ್ಳುವವನು ಹುಟ್ಟಿಲ್ಲದವನು ಎನ್ನುತ್ತಾರೆ. ’ಈ ಮಾತು ಹೇಗೆ ಹುಟ್ಟಿತು? ಯಾವ ನೆಲೆಯಿಂದ ಅದು ಬಂದಿತು? ಇದಕ್ಕೆ ಆಧಾರ ಯಾವುದು?’ ಎಂಬಂತಹುದನ್ನು ಕಂಡುಕೊಂಡರೆ ಅದು ಅರ್ಥವಾಗುವ ರೀತಿಯೇ ಬೇರೆ. ಅರ್ಥವಾಗುವ ವಿಷಯವೇ ಬೇರೆ. ಎಲ್ಲ ಮಾತುಗಳ ಹಿಂದೆ ಶಿವನೇ ಇದ್ದಾನೆ ಎಂಬುದು ಮನಸ್ಸಿಗೆ ಬರುತ್ತದೆ. ಅಂತಹವನಿಗೆ ಸಾವು ನೋವುಗಳು ತಟ್ಟುವುದಿಲ್ಲ. ಹಾಗಾಗಿ ಆತನು ಅಜಾತನು. ಅಂದರೆ ಹುಟ್ಟು ಸಾವಿನ ಚಕ್ರಕ್ಕೆ ಸಿಗುವ ವನಲ್ಲ. 

ಬದುಕಿನಲ್ಲಿ ಕಠಿಣ ಪ್ರಸಂಗಗಳು ಉದ್ಭವಿಸಿ ದಿಗಿಲುಗೊಂಡು ದಾರಿಗಾಣದಾಗ  ಗೊಂದಲಗೊಳ್ಳದಿರುವವನೇ ಪರಮಾತ್ಮ ಎನ್ನುತ್ತಾರೆ. ಆತ್ಮನು ತಾನೇ ತನ್ನ ಸುತ್ತ  ಗೊಡೆಗಳನ್ನು ಕಟ್ಟಿಕೊಳ್ಳುತ್ತಾನೆ. ಇವುಗಳಿಂದಲೇ ಆತ್ಮನಿಗೆ ದುಃಖ  ಉಂಟಾಗುತ್ತದೆ. ಆ ಗೋಡೆಗಳನ್ನು ಇಲ್ಲದಂತೆ ಮಾಡುವುದು ಎಂದರೆ ಆತ್ಮದ ಮಿತಿಯನ್ನು ಒಪ್ಪಿಕೊಳ್ಳದೆ ಅದನ್ನು ಮೀರುವುದು ಎಂದರ್ಥ. ಅಂದರೆ ಪರಮಾತ್ಮನಾಗುವುದು. ಅಂತಹವನಿಗೆ ಯಾವ ಗೊಂದಲಗಳೂ ಉಂಟಾಗುವುದಿಲ್ಲ. 

ಯಾರಲ್ಲಿ ನೀತಿ ಮತ್ತು ಸತ್ಯವು ನೆಲೆಗೊಂಡಿರುತ್ತದೆಯೋ ಆತನೇ ಜಗತ್ತಿನ ಒಡೆಯ ಎನ್ನುತ್ತಾರೆ. ಯಾರು ನೀತಿ ಮತ್ತು ಸತ್ಯವನ್ನು ಎಂದಿಗೂ ಬಿಡುವುದಿಲ್ಲವೋ, ಏನೇ ಬಂದರೂ ನೀತಿ ಮತ್ತು ಸತ್ಯದಿಂದ ಹಿಂದೆ ಸರಿಯುವುದಿಲ್ಲವೋ ಅವರು ಜಗತ್ತಿನ ಒಡೆಯರು. ಎಂದರೆ ಜಗತ್ತು ಅವರನ್ನು ಸದಾ ಗೌರವಿಸುತ್ತದೆ.ಜಗತ್ತಿನ ಕಣ್ಣಲ್ಲಿ ಅವರು ದೇವರಿದ್ದಂತೆಯೇ. 
ಆದರೆ ಈ ಯಾವುದರಲ್ಲಿಯೂ ಸಿಕ್ಕದಿರುವವನೇ ಗುರುನಾಥ ಎನ್ನುತ್ತಾರೆ ಅಪ್ಪಣ್ಣನವರು. ಅಂದರೆ ಮಾತಿನ  ಅರ್ಥವನ್ನು
ಕಂಡುಕೊಳ್ಳಬೇಕು, ಅಥವಾ ಇದರ ಮೂಲವನ್ನು ತಿಳಿಯಬೇಕು, ಬದುಕಿನ ಗೊಂದಲಗಳಿಂದ ಮುಕ್ತಿ ಪಡೆಯಬೇಕು  ಅಥವಾ
ನೀತಿ ಮತ್ತು ಸತ್ಯವೇ ಮುಖ್ಯ ಎನ್ನುವಂತಹ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳದವನೇ ಗುರುನಾಥ ಎನ್ನುತ್ತಾರೆ. ಗುರು ಎಂದರೆ
 ಬೆಳಕು ತೋರುವವನು ಎಂದರ್ಥ. ನಾನು ಅಜಾತನಾಗಬೇಕು, ಪರಮಾತ್ಮನಾಗಬೇಕು, ಜಗತ್ತಿಗೆ ಒಡೆಯನಾಗಬೇಕು ಎಂಬೆಲ್ಲ ವಿಷಯಗಳಲ್ಲಿ ತೊಡಗದೆ ಇರುವವನೇ ಗುರುನಾಥ.  

ಮಾತಿನ ಅರ್ಥವನ್ನು ಹುಡುಕುವವನು ಇನ್ನೂ ಮಾತಿನ ಮಿತಿಯಲ್ಲಿಯೇ ಇರುವುದರಿಂದ ಆತನು ಅಜಾತ, ಪರಮಾತ್ಮ,
ಜಗದೊಡೆಯ ಆಗುತ್ತಾನೆಯೆ ಹೊರತು ಗುರುನಾಥನಾಗಲು ಸಾಧ್ಯವಿಲ್ಲ. ಮಾತಿನ ಅರ್ಥವನ್ನು ಮೀರಿದರೆ ಮಾತ್ರ ಎಲ್ಲವನ್ನು ಆಣುವ ಮತ್ತು ತೋರುವ ಬೆಳಕಾಗಬಹುದು ಎನ್ನುತ್ತಾರೆ ಅಪ್ಪಣ್ಣನವರು.

 

 

 

No comments:

Post a Comment