Friday, March 1, 2013

Vachana 131: Chala Beku Sharanange – Persistence is a Must!


ಛಲ ಬೇಕು ಶರಣಂಗೆ  ಪರಧನವನೊಲ್ಲೆನೆಂಬ 
ಛಲ ಬೇಕು ಶರಣಂಗೆ  ಪರಸತಿಯನೊಲ್ಲೆನೆಂಬ 
ಛಲ ಬೇಕು ಶರಣಂಗೆ  ಪರದೈವವನೊಲ್ಲೆನೆಂಬ 
ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೇ ಎಂಬ
ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮ ದೇವ 

 TRANSLITERATION

Cala bEku sharqNaMge paradhanavanolleneMba
Cala bEku sharaNaMge parasatiyanolleMba
Cala bEku sharaNaMge paradaivavanolleMba
Cala bEku sharaNaMge  liMga jaMgama oMdE eMba
Cala bEku sharaNaMge prasaada ditaveMba
Calavilladavara mecca namma kUDalasaMgamadEva

CLICK HERE FOR RECITATION:


 TRANSLATION (WORDS) 

Cala (persistence, constancy) bEku (is needed)  sharqNaMge (for the devotee) paradhanavanolleneMba  ( to cause to say, ‘ I don’t want other’s wealth’)
Cala (persistence) bEku (is needed)  sharqNaMge (for the devotee) parasatiyanolleMba (to cause to say ‘I don’t want other’s wife’)
Cala (persistence) bEku (is needed)  sharqNaMge (for the devotee) paradaivavanolleMba (to cause to say ‘I don’t want other God’)
Cala (persistence) bEku (is needed)  sharqNaMge (for the devotee) liMga jaMgama oMdE eMba (to cause to say ‘LiMga/the God and Jamgama are one’)
Cala (persistence) bEku (is needed)  sharqNaMge (for the devotee) prasaada ditaveMba (to cause to say  the truth is that everything is Prasaada that is sacred)
Calavilladavara (those who don’t have persistence) mecca (will not like / admire) namma (our) kUDalasaMgamadEva (God Kudalasangamadeva)

TRANSLATION                                                                                                       

Persistence is needed for the devotee to cause to say ‘I don’t want other’s wealth’.
Persistence is needed for the devotee to cause to say ‘I don’t want other’s wife’.
Persistence is needed for the devotee to cause to say ‘I don’t want other God’.
Persistence is needed for the devotee to cause to say ‘Linga, the God and Jangama are one’.
Persistence is needed for the devotee to cause to say ‘the truth is that everything is Prasaada’.
Our God Kudalasangamadeva will not admire those who don’t have persistence!

COMMENTARY

Basavanna, in this popular Vachana stresses the importance of persistence or constancy for a devotee to succeed in spiritual path.
Morality is the most important tool for a devotee’s success in realizing the Self. Morality brings the calmness of mind, self-confidence and one mindedness and helps in reaching the Self. Two important aspects of the morality as stressed by the first two statements in the Vachana are not aspiring for other’s wealth and other’s wife. Aspiring for these two is the clear case of becoming the victim of desire. Desire is the root cause of all sorrow. Desires when fulfilled make one high and when not fulfilled make one low. An individual with such highs and lows cannot achieve anything. 
Basavanna’s use of the phrase ‘other’s wife’ should be interpreted as ‘other’s spouse – wife or husband’. Essentially, these belong to others. Aspiring for what belongs to others is foolishness and can only result in misery. A devotee must thus develop the persistence or constancy of mind to say that what belongs to others is not mine.
Basavanna insists on not swaying from being the devotee of one God, the God within us. An intense desire to merge with Him and persistent devotion is a must. Yielding to ignorance and momentary temptations to seek other Gods or other forms of God (other than Ishtalinga as an icon) stray the devotee from the spiritual path.
We have said that a Jangama is a wandering ascetic. He is dynamic. He has found the Self and his only purpose in life is to guide others into the achieving the success he has achieved. Basavanna says that Jangama is God. Since God is inherently a part of all those around us, seeing God in everyone is a must. A devotee must cultivate such persistence to say that God is in all the elements around us. Just concentrating on Linga worship and ignoring the fellow beings is not the right path; one should see and feel that God and everyone around us are one.

Finally, the devotee must be persistent enough to say that the prasaada is truth. We offer food and other material to God as part of our worship. We then consume that material as the sacred giving from Him. This returned material is ‘prasaada’ in general. Basavanna is extending the concept of prasaada to everything that we have, since everything we have is really a gift from Him. As such, an appreciation for what has been given to us and the constancy to say that everything we have is His prasaada is a must.
Basavanna concludes by saying that the Lord will not appreciate those without persistence and constancy.   
While the Vachana is addressed to a devotee, the concepts presented by it are equally applicable to all aspects of our lives. We must be persistent to achieve what we set out to achieve. Giving up is easy to do!

 Let us develop the persistence and not stray from the spiritual path!   

KANNADA COMMENTARY

 ಅರ್ಥ: 
ಛಲ (ದೃಢ ನಿಶ್ಚಯ) ಬೇಕು ಶರಣಂಗೆ (ಶರಣನಿಗೆ, ಭಕ್ತನಿಗೆ) ಪರಧನವನೊಲ್ಲೆನೆಂಬ (ಬೇರೆಯವರ ಧನ ನನಗೆ ಬೇಡ ಎಂದು ಹೇಳುವ) 
ಛಲ (ದೃಢ ನಿಶ್ಚಯ) ಬೇಕು ಶರಣಂಗೆ (ಶರಣನಿಗೆ, ಭಕ್ತನಿಗೆ) ಪರಸತಿಯನೊಲ್ಲೆನೆಂಬ (ಬೇರೆಯವರ ಪತ್ನಿ ನನಗೆ ಬೇಡ ಎಂದು ಹೇಳುವ)
ಛಲ (ದೃಢ ನಿಶ್ಚಯ) ಬೇಕು ಶರಣಂಗೆ (ಶರಣನಿಗೆ, ಭಕ್ತನಿಗೆ) ಪರದೈವವನೊಲ್ಲೆನೆಂಬ (ಬೇರೆ ದೇವರು ನನಗೆ ಬೇಡ ಎಂದು ಹೇಳುವ)
ಛಲ (ದೃಢ ನಿಶ್ಚಯ) ಬೇಕು ಶರಣಂಗೆ (ಶರಣನಿಗೆ, ಭಕ್ತನಿಗೆ) ಲಿಂಗ ಜಂಗಮ ಒಂದೇ ಎಂಬ  (ಲಿಂಗ ಮತ್ತು ಜಂಗಮ ಎರಡೂ ಒಂದೇ ಎನ್ನುವ)
ಛಲ (ದೃಢ ನಿಶ್ಚಯ) ಬೇಕು ಶರಣಂಗೆ (ಶರಣನಿಗೆ, ಭಕ್ತನಿಗೆ) ಪ್ರಸಾದ ದಿಟವೆಂಬ ( ಎಲ್ಲವೂ ದೇವರ ಪ್ರಸಾದವೇ ಸತ್ಯವೆನ್ನುವ)
ಛಲವಿಲ್ಲದವರ  (ದೃಢ ನಿಶ್ಚಯ ಇಅಲ್ಲದವರನ್ನು) ಮೆಚ್ಚ  (ಮೆಚ್ಚನು, ಒಪ್ಪನು) ನಮ್ಮ ಕೂಡಲ ಸಂಗಮ ದೇವ 
ತಾತ್ಪರ್ಯ:

ಇಲ್ಲಿ ಬಸವಣ್ಣನವರು ಶರಣನಿಗೆ ಛಲ ಅಥವಾ ಹಠವಿರಬೇಕು ಎಂದು ಹೇಳುತ್ತಾರೆ. ಆದರೆ ಅದು ಯಾವ ವಿಷಯದಲ್ಲಿರಬೇಕೆನ್ನುವುದು ಮುಖ್ಯ.
ಶರಣನಿಗೆ ನೀತಿಯು ಬಲು ಮುಖ್ಯವಾದದ್ದು.  ನೈತಿಕತೆಯು ಅಂತರಂಗ ಶುದ್ಧಿಯ ಮಹತ್ವದ ಅಂಗ. ನೈತಿಕತೆಯಿಂದ ಮನಸ್ಸಿಗೆ ನೆಮ್ಮದಿ, ಆತ್ಮ ವಿಶ್ವಾಸ,  ಏಕಾಗ್ರತೆಗಳು ಉಂಟಾಗುತ್ತವೆ. ಇವುಗಳಿಂದ  ಆತ್ಮೋನ್ನತಿಯಲ್ಲಿ ಸಹಾಯವಾಗುತ್ತದೆ.
ಆದ್ದರಿಂದ  ಈ ನಿಟ್ಟಿನಲ್ಲಿ ಮೊದಲ ಎರಡು ನಿಯಮಗಳೆಂದರೆ  ಪರಧನ ಮತ್ತು ಪರಸತಿಯನ್ನು ಬಯಸದೆ ಇರುವುದು. 
ಪರಧನ, ಪರಸತಿಯನ್ನು ಬಯಸುವುದು ಎಂದರೆ ಆಸೆಗೆ ತುತ್ತಾಗುವುದು.  ಆಸೆ ಮನುಷ್ಯನನ್ನು ಅತ್ಯಂತ ಕೀಳಾಗಿಸುತ್ತದೆ. ಆಸೆ ಕೈಗೂಡಿದಾಗ ಸಂತೋಷದ ಶಿಖರಕ್ಕೆ ಏರುವುದು, ಕೈಗೂಡದೆ ಇದ್ದಾಗ  ನಿರಾಸೆಯ ಪಾತಾಳದ ಆಳಕ್ಕೆ ಬೀಳುವುದು ಸರ್ವೇ ಸಾಮಾನ್ಯ.  ಈ ರೀತಿಯಾಗಿ ಘಾಸಿಗೊಂಡು ಹೊಯ್ದಾಡುವ ಮನಸ್ಸು ಎನನ್ನೂ ಸಾಧಿಸಲಾರದು. ಆದ್ದರಿಂದ ಪರಧನ ಪರಸತಿಯ ಆಸೆಗೆ ಪಕ್ಕಾಗುವುದು ಸಲ್ಲದು.
ಇಲ್ಲಿ ಬಸವಣ್ಣನವರು ಪರಸತಿಯೆಂಬ ಪದವನ್ನು ಉಪಯೋಗಿಸಿದರೂ ಸಹ ಇದು ಹೆಣ್ಣು ಗಂಡು ಇಬ್ಬರಿಗೂ ಅನ್ವಯಿಸಿ ಪರ ಪುರುಷ ಮತ್ತು ಪರಸ್ತ್ರೀ ಎಂಬ ಅರ್ಥವನ್ನು ಸೂಚಿಸುತ್ತದೆ. ಪರಸ್ತ್ರೀ  ಅಥವಾ ಪರ ಪುರುಷನೂ ಪರ ಧನವೇ. ಯಾವುದು ತನ್ನದಲ್ಲವೋ ಅದಕ್ಕಾಗಿ ಆಸೆ  ಪಡುವುದು ಮೂರ್ಖತನ ಮತ್ತು ಅಪರಾಧ. ಆದ್ದರಿಂದ ಅದು ನಿಷೇಧವಾದದ್ದು ಎಂದು ಹೇಳುತ್ತಾರೆ. ಆದ್ದರಿಂದ ಅದನ್ನು ತಾನು ಬಯಸುವುದಿಲ್ಲವೆಂಬ ಛಲ ಶರಣನಿಗೆ ಅತ್ಯಂತ ಮುಖ್ಯವಾದದ್ದು
ಮುಂದೆ ಪರದೈವದ ಬಗ್ಗೆ ಹೇಳುತ್ತಾರೆ. ಶರಣನಿಗೆ ದೇವರನ್ನು ಕಾಣುವ ಜಿಜ್ಞಾಸೆಯಿರುತ್ತದೆ. ಈ ಜಿಜ್ಞಾಸೆಯಲ್ಲಿ ಮುಂದುವರಿದಂತೆ ಆತನಿಗೆ  ದೇವನು ಒಬ್ಬನೇ ಎನ್ನುವುದು ಸ್ಪಷ್ಟವಾಗುತ್ತದೆ. ಆ ಲಿಂಗವೊಂದೇ  ದೇವರು ಎನ್ನುವ ಭಾವ ಗಟ್ಟಿಗೊಳ್ಳುತ್ತದೆ.  ಆದರೆ ಆಗಾಗ ಅಜ್ಞಾನದ ಕತ್ತಲೆ ಆವರಿಸಿ ಇತರ ದೈವಗಳನ್ನು ನಂಬುವಂತೆ ಮಾಡಬಹುದು. ಆ ದೈವಗಳು ಅರಗು ತಿಂದು ಕರಗುವವಾಗಿರಬಹುದು,  ಅಥವಾ ಮಣ್ಣು ಇಲ್ಲವೆ ಸಗಣಿಯಿಂದ ಮಾಡಿದವುಗಳಾಗಿರಬಹುದು ಅಥವಾ ಇನ್ನಾವುದೋ ರೂಪದಲ್ಲಿರಬಹುದು.  ಒಂದು ಕ್ಷಣದ ಅಜ್ಞಾನ ಇವುಗಳನ್ನೆಲ್ಲ ದೇವರು ಎಂದು ನಂಬುವಂತೆ ಮಾಡುತ್ತದೆ. ಆದ್ದರಿಂದ ಆ ಅಜ್ಞಾನಕ್ಕೆ ಒಳಗಾಗದೆ  ಇತರ ದೇವರುಗಳನ್ನು ನಂಬದೆ ಇರುವಂತಹ ಛಲಬೇಕು ಶರಣನಿಗೆ ಎನ್ನುತ್ತಾರೆ. ಈ ಛಲ ಆತನನ್ನು ಏಕಾಗ್ರತೆಯಿಂದ ತನ್ನ ದಾರಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ.
ಆಮೇಲೆ, ಶರಣನಿಗೆ ಲಿಂಗ ಜಂಗಮ ಒಂದೇ ಎನ್ನುವ ಅರಿವು ಇರಬೇಕು ಎನ್ನುತ್ತಾರೆ.   ಲಿಂಗ ಎಂದರೆ ದೇವರು. ಜಂಗಮ ಎಂದರೆ  ಆ ಲಿಂಗವನ್ನು ಅರಿತು ಅನುಭವಿಸಿದವನು. ಮತ್ತು ಆ ಅರಿವನ್ನು ಪಡೆಯಲು  ಯೋಗ್ಯರಾದವರ ಹತ್ತಿರ ತಾನೇ ನಡೆತಂದು ಆ ಅರಿವನೆಡೆಗೆ ಹೋಗಲು ಸಹಾಯ ಮಾಡುವ ವ್ಯಕ್ತಿ. ಒಟ್ಟಿನಲ್ಲಿ ಜಂಗಮ  ಲಿಂಗಸ್ವರೂಪಿ. ಲಿಂಗ ಮಾತ್ರ ದೇವರು ಎಂದುಕೊಂಡು ನಿರ್ಜೀವವಾದ ಲಿಂಗವನ್ನು ಮಾತ್ರ ಪೂಜಿಸುತ್ತ ಇರುವುದು ತಪ್ಪು ಮತ್ತು ಅಜ್ಞಾನ. ಲಿಂಗಸ್ವರೂಪಿಯಾದ ಜಂಗಮನೂ ಲಿಂಗವೇ. ಇಬ್ಬರೂ ಒಂದೇ ಎನ್ನುವ ತಿಳುವಳಿಕೆ ಇರಬೇಕು. ಬಸವಣ್ಣನವರಂತೂ ಜಂಗಮರನ್ನೂ ಕೂಡಲಸಂಗನ ರೂಪವೆಂದೇ ಪರಿಗಣಿಸುತ್ತಿದ್ದರು.
ಸಮಾಜದಲ್ಲಿಯ ಮಾನವರಿಗೆ ಗೌರವವನ್ನು ಕೊಡದೆ ಕೇವಲ ಲಿಂಗಪೂಜೆ ಮಾಡಿದರೆ ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಪ್ರತಿಜೀವಿಯೂ ದೇವರ ಅಂಶವೇ ಅದ್ದರಿಂದ  ಅದು ಲಿಂಗವೇ ಎನ್ನುವ ಅರಿವು ಗಟ್ಟಿಗೊಳ್ಳಬೇಕು. ಅದಲ್ಲದ ಭಾವ ಮನದಲ್ಲಿ ಬರಗೊಡದ ಛಲ ಬೇಕು ಶರಣನಿಗೆ.
ಕೊನೆಯದಾಗಿ ಪ್ರಸಾದದ ವಿಷಯ. ಸಾಮಾನ್ಯವಾಗಿ ನಾವು ದೇವರಿಗೆ ಎಡೆ ಮಾಡಿದದು ಪ್ರಸಾದ ಎಂಬುದು ಎಲ್ಲರಿಗೂ ತಿಳಿದದ್ದು. ಅಂದರೆ ಪ್ರಕೃತಿಯಲ್ಲಿರುವುದನ್ನು ನಾವು ಆರಿಸಿ ತಂದು ಅದನ್ನು ದೇವರಿಗೆ ಅರ್ಪಿಸುತ್ತೇವೆ. ಆನಂತರ ಅದು ದೇವರಿಂದ ನಮಗೆ ಪ್ರಸಾದವಾಗಿ ಬರುತ್ತದೆ. ಇದನ್ನು ಪ್ರಸಾದವೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಇಲ್ಲಿ ಬಸವಣ್ಣನವರು ಹೇಳುತ್ತಿರುವುದು ಭಿನ್ನವಾಗಿದೆ ಎನ್ನಿಸುತ್ತದೆ. ಪ್ರಕೃತಿಯಲ್ಲಿರುವುದೆಲ್ಲವೂ ಪ್ರಸಾದವೇ. ಏಕೆಂದರೆ ಎಲ್ಲವೂ ದೇವರ ಸೃಷ್ಟಿಯೇ, ದೇವರ ಕೊಡುಗೆಯೇ. ಅಲ್ಲಿ ನನ್ನದು ಎನ್ನುವುದು ಏನೂ ಇಲ್ಲ. ಅಲ್ಲಿ ನಾನು ಮಾಡಿದುದು ಏನೂ ಇಲ್ಲ. ಆದ್ದರಿಂದ ಎಲ್ಲವೂ ದೇವರ ಪ್ರಸಾದವೇ ಸತ್ಯ ಎಂಬ ಭಾವವಿರಬೇಕು, ಎನ್ನುತ್ತಾರೆ ಬಸವಣ್ಣನವರು.
ನೈತಿಕತೆಯನ್ನು ಕಾಪಾಡಿಕೊಳ್ಳುವ ಛಲದಿಂದ ಪ್ರಾರಂಭವಾಗಿ  ಶರಣನು ಅಧ್ಯಾತ್ಮದ ದಾರಿಯಲ್ಲಿ ಮುಂದುವರಿದು  ದೇವನು ಒಬ್ಬನೇ, ಲಿಂಗ ಜಂಗಮ ಒಂದೇ ಮತ್ತು ಎಲ್ಲವೂ ದೇವರ ಪ್ರಸಾದವೇ ಎನ್ನುವ ಮಟ್ಟಕ್ಕೆ ಏರಬಹುದು. ಸಕಾರಾತ್ಮಕವಾದ ಛಲ ಆತನನ್ನು ಈ  ಔನ್ನತ್ಯಕ್ಕೇರಿಸುತ್ತದೆ.





1 comment:

  1. This is one of those vachanas that simply sticks in your mind. Perhaps, it is because of the simple repetition of the powerful word "Chhala". I have known this vachana from my childhood days, however, only after reading the commentary, I understand the meaning of "Chhala beku sharanage prasada ditavebma" we should accept gods' blessing with gratitude. Very nice commentary.

    ReplyDelete