Friday, March 8, 2013

Vachana 132: Maatina Pasarada Vyavahaaradolage - Stuck in the vastness of talk


ಮಾತಿನ ಪಸರದ ವ್ಯವಹಾರದೊಳಗೆ ಸಿಕ್ಕಿ         
ನೂಕು ತಾಕುಗೊಳುತಿರ್ಪವಂಗೆ ಮಹದ ಮಾತೇಕೆ?
ಕೊರಳುದ್ದಕ್ಕೆ ಹೂಳಿಸಿಕೊಂಡು ಮುಗಿಲುದ್ದಕ್ಕೆ
ನೆಗೆದೆಹೆನೆಂಬವನ ಹಾಗೆ
ಶಿವನ ಜೋಕೆಯನರಿಯದೆ ಮಾತನಾಡುವ ಮಾತೆಲ್ಲವು 
ಮಾತಿನ ಮಾಲೆಯಲ್ಲದೆ ಅಲ್ಲಿ ನಿಜವಿಲ್ಲ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ಅವರೆಲ್ಲ ಭೂಭಾರಕರಾದರು 

TRANSLITERATION

maatina pasarada vyavahaaradoLage sikki
nUku tAkugoLutirpavaMge mahada maatEke?
koraLuddakke hULisikoMDu  mugiluddakke
negedeheneMbavana haage
shivana jOkeyanariyade  maatanaaDuva maatellavu
maatina maaleyallade alli nijavilla
nijaguru svataMtra siddhaliMgEshvara avarella  bhUbhaarakaraadaru 
FOR A RECITATION CLICK HERE:
http://youtu.be/0AEsKz5nU4g

TRANSLATION (WORDS)                                          

maatina  (of talk)  pasarada  (expanse, vastness of) vyavahaaradoLage   (in the business )   sikki  (caught)
nUku (hurt ) tAkugoLutirpavaMge  (who is harmed)   mahada  ( of profound) maatEke? (why talk ) koraLuddakke (till neck)  hULisikoMDu ( being buried)  mugiluddakke (to the height of sky)  negedeheneMbavana (I will  jump) hage (like)
shivana (of God) jOkeyanariyade  (not knowing the beauty)  maatanaaDuva  (talking of) maatellavu (all  kind of talk)
maatina (of talk)  maaleyallade (is garland)  alli nijavilla (there is no truth/ self)
nijaguru svataMtra siddhaliMgEshvara (Nijagurusvatantra Siddhalingeshvara)  avarella  (all of them)  bhUbhaarakaraadaru ( have become burden to the earth)

TRANSLATION

Why talk of the Profound, when one is stuck in the vastness of the business of talk, hurt and harmed?
It is like buried neck deep and trying to jump  sky high!
Not knowing the beauty of God, talking of all kinds of talk,
Is nothing but a garland of talk, there is not truth (Self) in it.
Oh! Nijaguru Svatantra Siddalingesvara, all such  have become a burden on the Earth!

COMMENTARY

In this Vachana, sharana Svatantra Siddalingesvara deplores the one who keeps talking for talking sake and misses the point and profound. He says such individuals are simply a burden on Earth.
The scope of talk is quite vast. It can cover a wide variety of topics to various degrees of depth. For some, talking becomes just a habit they cannot live without. They invent topics and keep talking. In this process, they hurt others and hurt themselves. Those who are hurt by them, in turn get involved on further talk to hurt the former. This jumble of point and counter point leads pain and suffering, nothing else. For those involved in such jumble, there is no time or inclination to think or talk of the profound – the profound meaning God or a profound topic!  For such people who have become habitual talkers, trying to talk about the profound is like trying to jump sky high while buried neck deep. Siddalingesvara says that not knowing the beauty of God, not internalizing the concept of the Self and the profound, all the talk is just weaving a garland of talk, it is not worth anything! In fact, such depthless talkers are just burden on Earth!

Although the Vachana is implying that the only worthwhile talk is that of the beauty of God, the essence behind is applicable to our daily lives. Our talk should be meaningful; it should make sense and should be well thought of. A philosopher said that there must be three gates a thought should go through before it is delivered as a talk: Is it necessary? Does it hurt anyone? Does it accomplish what is intended?

Let us think first and talk later!
KANNADA COMMENTARY

ಅರ್ಥ:
ಮಾತಿನ ಪಸರದ  (ಮಾತುಗಳ ವಿಸ್ತಾರವಾದ)  ವ್ಯವಹಾರದೊಳಗೆ ಸಿಕ್ಕಿ (ವ್ಯವಹಾರದೊಳಗೆ ಸಿಕ್ಕಿಕೊಂಡು)       
ನೂಕು  (ತಳ್ಳುವುದು, ಆಕ್ರಮಣ ಮಾಡುವುದು) ತಾಕುಗೊಳುತಿರ್ಪವಂಗೆ (ಮೇಲೆ ಬೀಳುವವನಿಗೆ, ಬಾಧಿಸುವವನಿಗೆ)   ಮಹದ  (ಮಹತ್ತಾದುದರ  ಬಗ್ಗೆ ) ಮಾತೇಕೆ? (ಮಾತೇಕೆ?)
ಕೊರಳುದ್ದಕ್ಕೆ  (ಕೊರಳಿನ ತನಕ,  ಇಡೀ  ಮುಂಡಭಾಗವನ್ನು)  ಹೂಳಿಸಿಕೊಂಡು (ಹೂಳಿಸಿಕೊಂಡು, ಮುಳುಗಿಸಿಕೊಂಡು)  ಮುಗಿಲುದ್ದಕ್ಕೆ (ಮುಗಿಲಿನ ಎತ್ತರಕ್ಕೆ)
ನೆಗೆದೆಹೆನೆಂಬವನ ಹಾಗೆ (ನೆಗೆಯುತ್ತೇನೆ ಎನ್ನುವವನ ಹಾಗೆ)
ಶಿವನ ಜೋಕೆಯನರಿಯದೆ (ಶಿವನ ಸೊಗಸನ್ನು ತಿಳಿಯದೆ)  ಮಾತನಾಡುವ ಮಾತೆಲ್ಲವು   ( ಆಡುವ ಎಲ್ಲ ಮಾತುಗಳು)
ಮಾತಿನ ಮಾಲೆಯಲ್ಲದೆ  (ಸುಂದರವಾಗಿ ಹೆಣೆದ ಮಾಲೆ ಅಷ್ಟೆ) ಅಲ್ಲಿ ನಿಜವಿಲ್ಲ (ಅದರಲ್ಲಿ ಸತ್ಯವಿಲ್ಲ)
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ಅವರೆಲ್ಲ ಭೂಭಾರಕರಾದರು ( ಅಂತಹವರೆಲ್ಲ ಭೂಮಿಗೆ ಭಾರವಾಗಿರುವರು)

                 
ತಾತ್ಪರ್ಯ:

ಸ್ವತಂತ್ರಸಿದ್ಧಲಿಂಗರು ಇಲ್ಲಿ ಮಾತಿನ ವ್ಯವಹಾರದಲ್ಲಿ  ಸಿಕ್ಕವನ ಸ್ಥಿತಿಯಬಗ್ಗೆ ಹೇಳುತ್ತಿದ್ದಾರೆ.
ಮಾತಿನ ಹರಹು ಬಹಳ  ವಿಸ್ತಾರವಾದದ್ದು. ಅದರಲ್ಲಿ ಸಿಕ್ಕಿಕೊಂಡರೆ  ನೂಕು ತಾಕುಗಳಿಗೆ ಒಳಗಾಗಬೇಕಾಗುತ್ತದೆ. ಸದಾ ಮಾತನಾಡುವ ಅಭ್ಯಾಸಕ್ಕೆ ಒಳಗಾದವರು (ಸಾಮಾನ್ಯವಾಗಿ ಎಲ್ಲರೂ), ಎಂದರೆ ಅರಿವಿಲ್ಲದೆ ಮಾತನಾಡುವವರು  ಏನಾದರೂ ಮಾತನಾಡುತ್ತಲೇ ಇರುತ್ತಾರೆ. ತಮ್ಮ ಮಾತುಗಳಿಂದ  ತಿಳಿದೋ ತಿಳಿಯದೆಯೋ ಇನ್ನೊಬ್ಬರಿಗೆ ನೋವುಂಟುಮಾಡುತ್ತಾರೆ. ಮತ್ತು ನೋವಿಗೆ ಒಳಗಾದವರು ತಿರುಗಿ  ತಾವೂ ನೋವುಂಟುಮಾಡುತ್ತಾರೆ. ಮಾತುಗಳಿಂದಲೇ ಒಬ್ಬರ ಮೇಲೊಬ್ಬರು ಹರಿಹಾಯುತ್ತಾರೆ. ಹೀಗಾಗಿ ಇಬ್ಬರೂ ನೂಕು ತಾಕುಗಳಿಗೆ ಸಿಕ್ಕಿಕೊಳ್ಳುತ್ತಾರೆ. ಇದರಿಂದ ದೈಹಿಕ ಹಿಂಸೆಯಾಗದಿದ್ದರೂ ಮಾನಸಿಅವಾಗಿ ಅಪಾರ ಹಿಂಸೆಯುಂಟಾಗುತ್ತದೆ.

ಮನುಷ್ಯನಿಗೆ ಮಾತನಾಡುವ ಅಭ್ಯಾಸ ಇದೆ.  ಇದರಿಂದ ಬಿಡಿಸಿಕೊಳ್ಳುವುದು ಬಹು ಕಷ್ಟ.  ಮತ್ತು ಇದರ ಪರಿಣಾಮ ಕೂಡ ಎಲ್ಲರ ಮೇಲಾಗುತ್ತದೆ.  ಅಭ್ಯಾಸಕ್ಕೆ ಸಿಕ್ಕು ಒಬ್ಬ ವ್ಯಕ್ತಿ ಏನೇನೋ ನುಡಿಯುತ್ತಾನೆ ಎಂದಿಟ್ಟುಕೊಳ್ಳೋಣ.  ನುಡಿಯುವಾಗ ಆತನಿಗೆ ತಾನು ಮಾತಾಡಿದುದುರ  ಪರಿಣಾಮ ಏನಾಗುತ್ತದೆ ಎಂಬುದರ ಅರಿವಿರುವುದಿಲ್ಲ. ಆದರೆ  ಆತನ ಮಾತಿನ ಪರಿಣಾಮ ಇತರರ ಮೇಲೆ ಆಗುವುದು ತಪ್ಪುವುದಿಲ್ಲ.  ಇತರರು ಅದನ್ನು ಸರಿಯಾಗಿಯೋ ಇಲ್ಲವೆ ತಪ್ಪಾಗಿಯೋ ಗ್ರಹಿಸಿ  ಅದಕ್ಕೆ ತಕ್ಕಂತೆ ಸ್ಪಂದಿಸುತ್ತಾರೆ.  ಈ ಸ್ಪಂದನಕ್ಕೆ ಪ್ರತಿಸ್ಪಂದನ ಉಂಟಾಗುತ್ತದೆ.  ಇದು ನಿರಂತರ ನಡೆಯುತ್ತಲೇ ಇರುತ್ತದೆ. ಮೊದಲು ಮಾತನಾಡಿದವನು ಅದನ್ನು ಮರೆತಿರಬಹುದು ಇಲ್ಲವೆ ತಾನೂ ಅದರ ವ್ಯವಹಾರದಲ್ಲಿ ಸಿಕ್ಕಿಕೊಂಡಿರಬಹುದು. ಒಟ್ಟಿನಲ್ಲಿ ಮಾತಿನ ವ್ಯವಹಾರ ವಿಸ್ತರಿಸುತ್ತ ಹೋಗುತ್ತದೆ.  ಅದರಲ್ಲಿ ನೋವು, ದುಃಖ ದುಮ್ಮಾನಗಳು  ಮನೆಮಾಡಿರುತ್ತವೆ. 
ಸ್ಪಂದನ ಪ್ರತಿಸ್ಪಂದನದ ವ್ಯವಹಾರದಲ್ಲಿ ಸಿಕ್ಕಿಬಿದ್ದವನ ಸ್ಥಿತಿ ಬಹಳ ವಿಷಾದನೀಯ. ಅತನು ನೂಕು ತಾಕುಗಳಿಗೆ ಒಳಗಾಗುತ್ತಾನೆ. ಆತನ ಮನವು ಸದಾ ತಾನು  ಆಯಾ ಮಾತಿಗೆ ಹೇಗೆ ಸ್ಪಂದಿಸಬೇಕು ಎನ್ನುವುದರಲ್ಲಿ ಪೂರ್ತಿಯಾಗಿ ಮುಳುಗಿಹೋಗಿರುತ್ತದೆ. ಇಂತಹವನಿಗೆ “ಮಹದ” ಮಾತೇಕೆ ಎನ್ನುತ್ತಾರೆ ಸಿದ್ಧಲಿಂಗರು. ಎಂದರೆ ಆತನಿಗೆ ಮಹತ್ತಾದ  ಶಿವತತ್ವದ  ಮಾತು ಅರ್ಥವಾಗುವುದಿಲ್ಲ, ರುಚಿಸುವುದೂ ಇಲ್ಲ.
ಒಂದು ವೇಳೆ ಆತನೇನಾದರು  ಮಹತ್ತಾದುದರ   ಬಗ್ಗೆ ಮಾತಾಡಲು ಪ್ರಯತ್ನಿಸಿದರೆ ಅದು  ನೆಲದಲ್ಲಿ ಕೊರಳವರೆಗೆ ಹೂಳಿಸಿಕೊಂಡು  ಮುಗಿಲಿನ ಎತ್ತರಕ್ಕೆ ಹಾರ ಬಯಸಿದವನಂತೆ ಆಗುತ್ತದೆ ಎನ್ನುತ್ತಾರೆ.   ಮಣ್ಣಿನಲ್ಲಿ ಕೊರಳಿನ ವರೆಗೆ ಹೂತ ಮನುಷ್ಯ ತನ್ನನ್ನು ಬಿಡಿಸಿಕೊಳ್ಳೂವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ  ಮಾತಿನ ವ್ಯವಹಾರದಲ್ಲಿ ಪೂರ್ತಿಯಾಗಿ ಸಿಕ್ಕಿಕೊಂಡವನು ಅದರಿಂದ ಬಿಡಿಸಿಕೊಂಡು  ಶಿವತತ್ವದಂತಹ   ಮಹತ್ತರವಾದ ವಿಷಯದ ಬಗ್ಗೆ  ಮಾತಾಡುವುದು ಅಸಾಧ್ಯವಾಗಿ ತೋರುತ್ತದೆ.
ಮಾತಿನ ವಿಸ್ತಾರವಾದ ವ್ಯವಹಾರದಲ್ಲಿ ಸಿಕ್ಕಿಕೊಂಡವನು ಶಿವನ  ಗುಣದಿಂದ ಅಪರಿಚಿತನು ಅವನಿಗೆ ಶಿವ ಗುಣದ ಸೌಂದರ್ಯದ ಅರಿವು ಇರುವುದಿಲ್ಲ. ಶಿವ ಎಂದರೆ ಮಂಗಳ,  ಸುಂದರ, ಸತ್ಯ.  ಅಲ್ಲಿ ನೂಕು ತಾಕುಗಳಿಗೆ ದುಃಖ ದುಮ್ಮಾನಗಳಿಗೆ, ಒಣ ಮಾತುಗಳಿಗೆ ಅವಕಾಶವಿಲ್ಲ.
ಮಂಗಳ, ಸತ್ಯ, ಸುಂದರವಾದ ಶಿವಗುಣವಿಲ್ಲದ ಮಾತುಗಳೆಲ್ಲ ಕೇವಲ ಒಣ ಮಾತಿನ ಮಾಲೆಗಳಲ್ಲದೆ  ಅದರಲ್ಲಿ ಯಾವ ಸೊಗಸೂ ಇಲ್ಲ. ಮಾಲೆ ಕೇವಲ ಅಲಂಕಾರಕ್ಕೆ ಬರುವ ವಸ್ತು. ಅದರಿಂದ ಬೇರೆ ಲಾಭವೇನೂ ಇಲ್ಲ ಎಂಬ ಅರ್ಥ. ಇಂತಹ ಜನರು ಭೂಮಿಗೆ ಭಾರವಾಗುತ್ತಾರೆ ಎನ್ನುತ್ತಾರೆ ಸ್ವತಂತ್ರ ಸಿದ್ಧಲಿಂಗರು.





No comments:

Post a Comment