Friday, March 29, 2013

Vachana 135: Hasivaayittendu Husidu – The rituals

VACHANA IN KANNADA

ಹಸಿವಾಯಿತ್ತೆಂದು ಹುಸಿದು ಮಜ್ಜನಕ್ಕೆರೆವರಯ್ಯಾ
ತೃಷೆಯಾಯಿತ್ತೆಂದು ಅರ್ಪಿತವ ಮಾಡುವರಯ್ಯಾ
ಇದೆಂತು ಭಕ್ತಿ ಸಂಬಂಧ? ಇದೆಂತು ಶರಣ ಸಂಬಂಧ?
ಇದೆಂತು ಲಿಂಗ ಸಂಬಂಧ?
ಕಾರಣವಿಲ್ಲದ ಭಕ್ತಿ ಕಂಡಡೆ
ಹೋಗನೂಕುವನು ಗುಹೇಶ್ವರಾ      

TRANSLITERATION

hasivaayitteMdu husidu majjanakkerevarayyaa
tRuSheyaayitteMdu arpitava maaDuvarayyaa
ideMtu bhakti saMbaMdha? ideMtu sharaNa saMbaMdha?
ideMtu liMgasaMbaMdha?
kaaraNavillada bhakti kaMDaDe
hOganUkuvanu guhEshvaraa

CLICK HERE FOR THE RECITATION:


TRANSLATION (WORDS)

hasivaayiteMdu (thinking God is hungry) husidu (lying)  majjanakkerevarayyaa (they wash the icon)
tRuSheyaayiteMdu (thinking God is thirsty)  arpitava maaDuvarayyaa (they  offer food and water)
ideMtu (what kind of)  bhakti (devotional) saMbaMdha (relationship)? ideMtu  (what kind of) sharaNa (a devotee) saMbaMdha  (relationship of )?
ideMtu(what kind of) liMga  (God) saMbaMdha (relationship with)?
kaaraNavillada (without any reason)  bhakti (devotion)  kaMDaDe  (if sees)
hOganUkuvanu  (pushes out, rejects) guhEshvaraa (Guheshvara)

VACHANA IN ENGLISH

Pretending that God is hungry, they wash the icon, Sir!
Pretending that God is thirsty, they offer food and water, Sir!
What kind of devotional relationship is this?
What kind of devotee relationship is this?
What kind of relationship with God is this?
If such superficial devotion is seen,
Lord Guhesvara rejects it!

COMMENTARY

In this Vachana, Allama Prabhu urges us to shed our ignorance and reach the profound principle beyond the idols and icons we have created. We made the idol in our own image and said it is God. We assumed that God gets hungry when we are hungry and thirsty and started offering water and food to the idol. We decided to bathe the idol with water, milk and honey. We embraced all these rituals and believed that it is the true devotion. We believed that the way to be devotional is to exhibit all these rituals in public and private. Even the Ishtalinga suggested by Sharanas  as an icon to get us started, took the form of God for us and we stayed happy in bathing, decorating and offering food and water to it. We did not get past the rituals to develop the true devotion to connect with the omnipresent, omniscient, omnipotent principle.  Allama Prabhu questions as to what kind of devotion is this? What kind of devotees are we and what kind of relationship with God we have developed? He says that lord Guhesvara simply rejects this kind of superficial devotion.

The idols and icons are just the initial media for us to develop the devotional attitude. We need to get past those, and realize the Self and the God within us and in everyone around us. Only then we are true devotees, and only that is the true devotion.

 Let us learn to move beyond the rituals!

KANNADA COMMENTARY

ಹಸಿವಾಯಿತ್ತೆಂದು ಹುಸಿದು (ಹಸಿವೆ ಆಯಿತು ಎಂದು ಸುಳ್ಳು ನುಡಿದು/ ತಿಳಿದು, ಏಕೆಂದರೆ ಅವರ ತಿಳುವಳಿಕೆ ಸತ್ಯವಾದುದಲ್ಲ) ಮಜ್ಜನಕ್ಕೆರೆವರಯ್ಯಾ (ಸ್ನಾನ/ ಜಳಕ, ತೊಳೆಯುವರು)
ತೃಷೆಯಾಯಿತ್ತೆಂದು (ಬಾಯಾರಿಕೆಯಾಯಿತು ಎಂದು ಎಣಿಸಿ)  ಅರ್ಪಿತವ ಮಾಡುವರಯ್ಯಾ (ಒಪ್ಪಿಸುವರು, ಅರ್ಪಣೆ ಮಾಡುವರು)
ಇದೆಂತು ಭಕ್ತಿ ಸಂಬಂಧ? (ಇದು ಎಂತಹ ಭಕ್ತಿಯ ಸಂಬಂಧ?) ಇದೆಂತು ಶರಣ ಸಂಬಂಧ? (ಇದು ಎಂತಹ ಶರಣ ಸಂಬಂಧ?)
ಇದೆಂತು ಲಿಂಗ ಸಂಬಂಧ? (ಇದೆಂತಹ ಲಿಂಗ ಸಂಬಂಧ?)
ಕಾರಣವಿಲ್ಲದ ಭಕ್ತಿ (ಲಿಂಗಕ್ಕಾಗಿ ಮಾಡದ  ಭಕ್ತಿ) ಕಂಡಡೆ (ಕಂಡರೆ)
ಹೋಗನೂಕುವನು (ಹೊರದೂಡುವನು, ತಿರಸ್ಕರಿಸುವನು)  ಗುಹೇಶ್ವರಾ (ಗುಹೇಶ್ವರನು)

ಭಕ್ತರು, ಶರಣರು ಎಂಬುವವರ ನಡತೆಯ ಪರಿಯನ್ನು ಪ್ರಶ್ನಿಸುತ್ತಿರುವರು ಅಲ್ಲಮಪ್ರಭುಗಳು. ಭಕ್ತರೆಲ್ಲರೂ ಲಿಂಗಪೂಜೆ ಮಾಡುವುದು ಸಾಮಾನ್ಯ. ಆದರೆ ಆ ಲಿಂಗ ಪೂಜೆಯ ಹಿಂದೆ ಯಾವ ಭಾವ ಅಡಗಿದೆ ಎಂಬುದು ಮುಖ್ಯ. ಅವರು ಹೇಳುತ್ತಾರೆ, ತನಗೆ ಹಸಿವು ನೀರಡಿಕೆಯಾದರೆ  ದೇವರಿಗೆ ಹಸಿವೆ ಬಾಯಾರಿಕೆಯಾಗಿದೆ ಎಂದು ತಿಳಿದು ಲಿಂಗಕ್ಕೆ ನೀರೆರೆದು ಎಡೆಯನ್ನು ಅರ್ಪಿಸುತ್ತಾರೆ. ಆಮೇಲೆ ಅದನ್ನು ತಾವು ಸ್ವೀಕರಿಸುತ್ತಾರೆ. ಲಿಂಗಕ್ಕೆ, ದೇವರಿಗೆ ಹಸಿವೆಯಾಗಿದೆ, ತೃಷೆಯಾಗಿದೆ ಎನ್ನುವುದು ಸುಳ್ಳು. ತನಗಾದ ಹಸಿವೆ ತೃಷೆಗಳು ದೇವರ ಹೆಸರಿನಲ್ಲಿ ತೋರಿಕೊಳ್ಳುತ್ತವೆ. ದೇವರ ಪೂಜೆ ಅವುಗಳನ್ನು ಪೂರೈಸಲು ಹೊರತು ಮತ್ತೇನಲ್ಲ. ಇದೇ ರೀತಿ ಮುಂದುವರೆದು ಇಂತಿಂತಹ ದೇವರಿಗೆ ಇಂತಿಂತಹ ಪಕ್ವಾನ್ನಗಳು ಇಷ್ಟವೆಂದು ಹೇಳಿ ಅವುಗಳನ್ನು ಎಡೆಮಾಡಿ ತಾವು ತಿನ್ನುವ ಪದ್ಧತಿ ಉಂಟಾಗಿದೆ.

ಈ ರೀತಿಯಾಗಿ ಪರೋಕ್ಷವಾಗಿ ತಮ್ಮ ಆಸೆಗಳನ್ನು ತೀರಿಸಿಕೊಳ್ಳಲು ಮಾಡಿದ ಪೂಜೆ ನಿಜವಾದ ಪೂಜೆ ಎಂತಾಗುವುದು? ಇಂತಹವರನ್ನು ಕಂಡು, ಅಲ್ಲಮಪ್ರಭುಗಳು ಲಿಂಗದೊಂದಿಗೆ ಅವರ ಸಂಬಂಧವೆಂತಹುದು ಎಂದು ಅಚ್ಚರಿಪಡುತ್ತಾರೆ. ಭಕ್ತ ಮತ್ತು ದೇವರ ಸಂಬಂಧ  ಭಕ್ತನ  ಬೇಕುಗಳನ್ನು  ಮತ್ತು ಆಸೆಗಳನ್ನು ಅವಲಂಬಿಸಿರಬೇಕೆ? ಆತನ ಆಸೆಗಳನ್ನು ಅವಲಂಬಿಸಿದ ಭಕ್ತಿ ನಿಜವಾದ ಭಕ್ತಿಯಾಗಲು ಸಾಧ್ಯವೆ?  ತನ್ನನ್ನು ಭಕ್ತ ಅಥವಾ ಶರಣನೆಂದುಕೊಳ್ಳುವವರು ಲಿಂಗ ಅಥವಾ ದೇವರ ನಿಜವಾದ ಸ್ವರೂಪವನ್ನು ಅರಿಯದೆ ಮಾಡುವ ಭಕ್ತಿಯ ರೀತಿಯಿದು.
ವಚನದ ಮೊದಲ ಸಾಲುಗಳಲ್ಲಿಯೇ ಭಕ್ತನ, ಶರಣನ ಅಜ್ಞಾನದ ಪರಿಚಯವಾಗುತ್ತದೆ. ದೇವರ ಕುರುಹಾದ ಲಿಂಗವನ್ನೇ ಅಥವಾ ದೇವರ ಮೂರ್ತಿಯನ್ನೇ ದೇವರೆಂದು ಭಾವಿಸಿ ತನ್ನ ಆಸೆಗಳನ್ನು ಅದರ ಮೇಲೆ ಆರೋಪಿಸಿ ಮಾಡುವ ಆಚರಣೆ ಅರ್ಥವಿಲ್ಲದ್ದು. “ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ” ಎಂದು ಬಸವಣ್ಣನವರು ಆ ದೇವರ ಬಗ್ಗೆ ಹೇಳುತ್ತಾರೆ. ಇಂತಹ ಬೃಹತ್ತಾದ ಆ ತತ್ವಕ್ಕೆ ನಾನು ಮಜ್ಜನ ಮಾಡಿಸುತ್ತೇನೆ, ಅದಕ್ಕೆ ಅರ್ಪಣೆ ಮಾಡುತ್ತೇನೆ  ಎನ್ನುವುದು ಎಂತಹ ಮೂರ್ಖತನ. ಇಂತಹ ಆಚರಣೆಯಲ್ಲಿರುವ ಸೀಮಿತವಾದ ತಿಳಿವು ಮತ್ತು ಸ್ವಾರ್ಥ ಸ್ಪಷ್ಟವಾಗಿ ಗೋಚರಿಸುತ್ತದೆ.
ಲಿಂಗದ, ದೇವರ ನಿಜವಾದ  ಅರಿವಿರುವವನು ಇಂತಹ ಅರ್ಥವಿಲ್ಲದ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. “ಕಾರಣವಿಲ್ಲದ ಭಕ್ತಿ ಕಂಡಡೆ ಹೋಗನೂಕುವನು ಗುಹೇಶ್ವರ” ಎನ್ನುತ್ತಾರೆ ಅಲ್ಲಮರು. ಇಲ್ಲಿ “ಕಾರಣವಿಲ್ಲದ” ಅಂದರೆ   ಭಕ್ತಿಗೆ ಲಿಂಗವೇ ಕಾರಣವಾಗಿರಬೇಕೆ ಹೊರತು ಇನ್ನಿತರ ಆಸೆಗಳಲ್ಲ ಎಂದರ್ಥ. ಲಿಂಗಕ್ಕಾಗಿ ಭಕ್ತಿಯನ್ನು ಉಳಿದು ಬೇರೆ ಕಾರಣಕ್ಕಾಗಿ ಭಕ್ತಿಯನ್ನು ಮಾಡುವವನನ್ನು ಗುಹೇಶ್ವರನು ತಿರಸ್ಕರಿಸುತ್ತಾನೆ ಎನ್ನುತ್ತಾರೆ ಅಲ್ಲಮರು.

No comments:

Post a Comment