ಹಿಂದಳ ಮಾತ ಕೇಳಿ ಮುಂದೆ ನಿಂದ್ಯವನಾಡುವ
ಹೊಲೆಯನ ಮಾತ ಹೇಳಲಾಗದು ಕೇಳಲಾಗದು
ಮುಂದಲ ಮಾತ ಕೇಳಿ ನಿಂದ್ಯವನಾಡುವ
ಮಾದಿಗನ ಮಾತ ಹೇಳಲಾಗದು ಕೇಳಲಾಗದು
ಇಂತೀ ಇವರಿಬ್ಬರ ಮಾತು
ಸತ್ತ ಶ್ವಾನದ ಹೊಲಸಿನಿಂದತ್ತತ್ತಲಾಯಿತ್ತು ನೋಡು
ಝೇಂಕಾರ ನಿಜಲಿಂಗ ಪ್ರಭುವೆ
ಹೊಲೆಯನ ಮಾತ ಹೇಳಲಾಗದು ಕೇಳಲಾಗದು
ಮುಂದಲ ಮಾತ ಕೇಳಿ ನಿಂದ್ಯವನಾಡುವ
ಮಾದಿಗನ ಮಾತ ಹೇಳಲಾಗದು ಕೇಳಲಾಗದು
ಇಂತೀ ಇವರಿಬ್ಬರ ಮಾತು
ಸತ್ತ ಶ್ವಾನದ ಹೊಲಸಿನಿಂದತ್ತತ್ತಲಾಯಿತ್ತು ನೋಡು
ಝೇಂಕಾರ ನಿಜಲಿಂಗ ಪ್ರಭುವೆ
TRANSLITERATION
hiMdaLa maata kELi muMde niMdyavanaaDuva
holeyana maata hELalaagadu kELalaagad
muMdala maata kELi niMdyavanaaDuva
maadiagana maatu hELalaagadu kELalaagadu
iMtI ivaribbara maatu
satta shvaanada holasiniMdattattalaayittu nODu
JEMkaara nijaliMgaprabhuve.
CLICK HERE FOR A RECITATIONholeyana maata hELalaagadu kELalaagad
muMdala maata kELi niMdyavanaaDuva
maadiagana maatu hELalaagadu kELalaagadu
iMtI ivaribbara maatu
satta shvaanada holasiniMdattattalaayittu nODu
JEMkaara nijaliMgaprabhuve.
TRANSLATION (WORDS)
hiMdaLa maata (the talk behind one’s back) kELi (after listening to) muMde (in front) niMdyavanaaDuva (abusing, condemning)
holeyana (low cast, uncivilized) maata (words of) hELalaagadu (cannot be told) kELalaagadu (cannot be heard)muMdala maata (the direct talk) kELi (hearing) niMdyavanaaDuva (abusing, condemning)
maadiagana ( low cast, uncivilized) maatu (words of) hELalaagadu (cannot be told) kELalaagadu(cannot be heard)iMtI ivaribbara maatu (in this way the words of these two people
satta (dead) shvaanada (dog ) holasiniMdattattalaayittu (is worse than the bad smell of) nODu (yousee)
JEMkaara nijaliMgaprabhuve. (Oh! Jhenkara Nijalingaprabhu)
holeyana (low cast, uncivilized) maata (words of) hELalaagadu (cannot be told) kELalaagadu (cannot be heard)muMdala maata (the direct talk) kELi (hearing) niMdyavanaaDuva (abusing, condemning)
maadiagana ( low cast, uncivilized) maatu (words of) hELalaagadu (cannot be told) kELalaagadu(cannot be heard)iMtI ivaribbara maatu (in this way the words of these two people
satta (dead) shvaanada (dog ) holasiniMdattattalaayittu (is worse than the bad smell of) nODu (yousee)
JEMkaara nijaliMgaprabhuve. (Oh! Jhenkara Nijalingaprabhu)
The words of the uncivilized who after listening to the talk behind your back blames you, cannot be told, cannot be heard!
The words of the uncivilized, who after listening to you and about you, blames you directly, cannot be told, cannot be heard!
Thus, the words of these two are worse than the stench of the dead dog, you see!
Oh! Jhenkara Nijalingaprabhu!
This Vachana from Sharana Jakkannayya, supplements our previous posting on the vastness and effects of lose talk. In particular, it reflects on blame and gossip aspects of our conversations. This is the last posting on this topic for now.
We are all proud of ourselves. We feel we are perfect in all ways and do not expect anyone to comment on us. But, the other’s may not feel that way and may even resort to commenting on us in our absence. We will eventually hear those comments from those who heard them. Our immediate reaction would be to start commenting on the individual who commented on us. We might even mistreat the individual who passed on the gossip to us. In fact, we should be sympathetic to the individual who blamed us behind our back, because he/she did not have the courage to say it to us directly. He is thus a weak individual, fallen for gossip about others and not aware of the consequence of his/her gossip. Trying to correct such individuals, getting upset with such blaming and trying to mistreat the individual who brings the gossip to us make us lesser of a human being, the ‘uncivilized’. Jakkannayya asks us to ignore such gossips, they cannot be talked about and they cannot be heard. We all fall prey to gossiping. We gossip intentionally, unintentionally and sometimes to raise the humor level in our conversations. We tend to get carried away. It is important to watch and control ourselves and what we speak. We should similarly be tolerant of those who blame us directly. Any such blame should be considered an opportunity to reflect on ourselves and improve ourselves. The least we can do is ignore the blame and be civilized in handling the blamer. It is very easy to get into conflicts and start the blame game. One wrong statement leads to the other, the gossip spreads and the scope of damage keeps increasing. Awareness of what our words lead to is thus a must.
In summary, there are three players in the blame game: the blamer (gossiper), the messenger, and the blamed. The blamed has the highest responsibility to ignore the blame and gossip and stay above taking the messenger to task. The messenger should understand the consequences of spreading the gossip and saty away from it. The blamer must watch his/her words and make sure they do not hurt others intentionally or unintentionally.
KANNADA COMMENTARY
ಅರ್ಥ:
ಹಿಂದಳ ಮಾತ (ಬೆನ್ನ ಹಿಂದೆ ಆಡಿದ ಮಾತು) ಕೇಳಿ (ಯಾರೋ ಹೇಳಿದುದನ್ನು ಕೇಳಿ) ಮುಂದೆ (ಎದುರಿಗೆ) ನಿಂದ್ಯವನಾಡುವ (ನಿಂದಿಸುವವನು)ಹೊಲೆಯನ ಮಾತ (ಕೀಳು ಮನದವನ ಮಾತು) ಹೇಳಲಾಗದು (ಇತರರಿಗೆ ಹೇಳಲು ಆಗದು) ಕೇಳಲಾಗದು (ಕೇಳಲು ಆಗದು)
ಮುಂದಲ ಮಾತ (ಎದುರಿಗೆ ಆಡಿದ ಮಾತು) ಕೇಳಿ ನಿಂದ್ಯವನಾಡುವ (ಕೇಳಿಸಿಕೊಂಡು ನಿಂದಿಸುವ)
ಮಾದಿಗನ ಮಾತ (ಕೀಳು ಮನದವನ ಮಾತು) ) ಹೇಳಲಾಗದು (ಇತರರಿಗೆ ಹೇಳಲು ಆಗದು) ಕೇಳಲಾಗದು (ಕೇಳಲು ಆಗದು)
ಇಂತೀ ಇವರಿಬ್ಬರ ಮಾತು (ಹೀಗೆ ಇಂತಹವರಿಬ್ಬರ ಮಾತು)
ಸತ್ತ ಶ್ವಾನದ (ಸತ್ತ ನಾಯಿಯ) ಹೊಲಸಿನಿಂದತ್ತತ್ತಲಾಯಿತ್ತು ನೋಡು (ದುರ್ಗಂಧಕ್ಕಿಂತ ಕೆಟ್ಟದಾಯಿತು)
ಝೇಂಕಾರ ನಿಜಲಿಂಗ ಪ್ರಭುವೆ (ವಚನಕಾರ – ಜಕ್ಕಣಯ್ಯನವರ ವಚನದ ಅಂಕಿತ)
ತಾತ್ಪರ್ಯ:
ಝೇಂಕಾರ ನಿಜಲಿಂಗ ಪ್ರಭು ಎಂಬ ಅಂಕಿತವುಳ್ಳ ವಚನಕಾರರಾದ ಜಕ್ಕಣಯ್ಯನವರು ಈ ವಚನದಲ್ಲಿ ಜನರು ಮಾಡುವ ನಿಂದೆನೆಯ ಪರಿಣಾಮವನ್ನು ಅದರ ಬಗ್ಗೆ ಅಸಹ್ಯ ಹುಟ್ಟುವಂತೆ ವರ್ಣಿಸುತ್ತಾರೆ. ಹಿಂದಿನ ವಚನದಲ್ಲಿ ವಿವರಿಸಿದ “ಮಾತಿನ ಪಸರದ ವ್ಯವಹಾರದಲ್ಲಿ ಸಿಕ್ಕ” ಸ್ಥಿತಿಯನ್ನು ಇದು ಹೆಚ್ಚು ವಿಷದಗೊಳಿಸುತ್ತದೆ.
ಎಲ್ಲರಿಗೂ ತಮ್ಮ ತಮ್ಮ ಬಗೆಗೆ ಅತಿಯಾದ ಮಮತೆ ಮತ್ತು ಅಹಂಕಾರ. ಯಾರೂ ತಮ್ಮನ್ನು ಕೀಳಾಗಿ ಎಣಿಸಬಾರದು, ತಮ್ಮ ಬಗ್ಗೆ ಬೆನ್ನ ಹಿಂದೆಯಾದರೂ ಸರಿಯೆ ಜರೆದು ಮಾತಾಡಬಾರದು. ತಮ್ಮ ಬೆನ್ನ ಹಿಂದೆ ಜರೆದು ಮಾತಾಡಿದುದನ್ನು ಮೂರನೆಯವರಿಂದ ತಿಳಿದು ಜರಿದ ವ್ಯಕ್ತಿಯನ್ನು ನೇರವಾಗಿ ನಿಂದಿಸುವುದು ಅತ್ಯಂತ ಕೀಳಾದದ್ದು. ಆದರೆ ಇದು ಸರ್ವೇ ಸಾಮಾನ್ಯವಾದದ್ದು. ನಿಜವಾಗಿ ನೋಡಿದರೆ ಬೆನ್ನ ಹಿಂದ ಜರೆದು ನುಡಿದ ವ್ಯಕ್ತಿಯ ಬಗ್ಗೆ ಅನುಕಂಪವಿರಬೇಕು. ಏಕೆಂದರೆ ಆ ವ್ಯಕ್ತಿಗೆ ಎದುರಿಗೆ ಜರೆಯುವ ಧೈರ್ಯವಿಲ್ಲ. ಆದರೆ ನಿಂದೆ ಮಾಡುವ ವ್ಯಸನಕ್ಕೆ ಬಲಿಯಾದವನು. ತನ್ನ ಮಾತಿನ ಪರಿಣಾಮವೇನಾಗುತ್ತದೆ ಎಂಬುದರ ಬಗ್ಗೆ ಅರಿವಿಲ್ಲದವನು. ಆತ ವಾಸ್ತವದಲ್ಲಿ ಹೇಡಿ. ಹೆದರಿಕೆಯಿಂದ ಅವನು ಅರ್ಧ ಸತ್ತಿರುತ್ತಾನೆ. ಅಂತಹವನನ್ನು ನೇರವಾಗಿ ನಿಂದಿಸುವುದು ಸರಿಯೆ? ಹಾಗೆ ಆತನನ್ನು ನೇರವಾಗಿ ನಿಂದಿಸಿದರೆ ಅದು ಘೋರ ಹಿಂಸೆಯಾಗುತ್ತದೆ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ. ಆ ರೀತಿಯಾಗಿ ಹಿಂಸಿಸುವನೇ ನಿಜವಾದ ಹೊಲೆಯ ಎನ್ನುತ್ತಾರೆ ಜಕ್ಕಣಯ್ಯರು. ಜಾತಿಯಿಂದ ಹೊಲೆಯನಾದವನನ್ನು ಹೊಲೆಯ ಎನ್ನುವುದು ತಪ್ಪು. ಮೇಲೆ ಹೇಳಿದ ರೀತಿಯಲ್ಲಿ ನಡೆದುಕೊಳ್ಳುವವನೆ ಹೊಲೆಯ. “ಹೊಲೆಯನ ಮಾತ ಹೇಳಲಾಗದು ಕೇಳಲಾಗದು” ಎನ್ನುತ್ತಾರೆ. ಅಂತಹವನ ವಿಷಯ ಮಾತನಾಡಬಾರದು ಅಂತಹವನ ವಿಷ ಯ ಯಾರಾದರೂ ಹೇಳಲು ಬಂದರೆ ಅದನ್ನು ಕೇಳಿಸಿಕೊಳ್ಳಬಾರದು. ಈ ಮಾತು ಬಹಳ ಮುಖ್ಯ. ಇದೇ ಮಾತಿನ ಪಸರದ ವ್ಯವಹಾರ. ನಿಂದಕನ ವಿಷಯ ಒಬ್ಬನಿಂದ ಒಬ್ಬನಿಗೆ ಮತ್ತೊಬ್ಬನಿಗೆ ಮಗದೊಬ್ಬನಿಗೆ ಇಡೀ ಸಮಾಜಕ್ಕೆ ಹರಡಿಕೊಂದು ಹೊಲಸೆಬ್ಬಿಸುತ್ತದೆ. ಆದ್ದರಿಂದ ಹೊಲೆಯನ ಮಾತ ಹೇಳಲಾಗದು ಕೇಳಲಾಗದು ಎನ್ನುತ್ತಾರೆ.
ಇನ್ನು ಮುಂದುಗಡೆಯೇ ನಿಂದಿಸುವವನೂ ಕೂಡ ಅಷ್ಟೆ ಕೆಟ್ಟವನು ಅಥವಾ ಮಾದಿಗನು. ಎದುರಿಗೆ ನಿಂದಿಸುವವನಿಗೆ ಕೆಟ್ಟ ಧೈರ್ಯವಿರುತ್ತದೆ. ತಾನು ಹೇಳಿದುದು ಶತ ಸತ್ಯವೆಂದು ಪ್ರಮಾಣಿಸುವ ಆತುರವಿರುತ್ತದೆ ಆತನಿಗೆ. ಅದೆಲ್ಲ ಸುಳ್ಳು ಎಂದು ಪ್ರಮಾಣಿಸುವ ಹುಚ್ಚು ಎದುರಾಳಿಗೆ. ಈ ಪೈಪೋಟಿ ಅವರ ಬಾಯಿಯಿಂದ ಎಂತೆಂತಹ ಮಾತುಗಳನ್ನಾಡಿಸುತ್ತದೆ ಎಂಬುದನ್ನು ಇಲ್ಲಿ ಹೇಳುವ ಅವಶ್ಯಕತೆಯಿಲ್ಲ. ಒಟ್ಟಿನಲ್ಲಿ ಎದುರೆದುರಿಗೆ ಒಬ್ಬರೊನ್ನೊಬ್ಬರು ನಿಂದಿಸುವ ನೋಟ ಭಯಂಕರ. ಅದರ ಕೆಟ್ಟಪರಿಣಾಮ ಸುತ್ತಲಿದ್ದವರ ಮೇಲೆಲ್ಲ ಉಂಟಾಗುತ್ತದೆ. ಅಂತಹವರು ಮಾದಿಗರು. ಅಂದರೆ ಅತ್ಯಂತ ಕೀಳು ಮನೋಭಾವದವರು ಎಂದರ್ಥ.
ಈ ಎರಡೂ ಸನ್ನಿವೇಶದ ಪರಿಣಾಮವನ್ನು ಜಕ್ಕಣಯ್ಯನವರು ಸತ್ತು ಹೊಲಸು ನಾರುತ್ತಿರುವ ನಾಯಿಗೆ ಹೋಲಿಸುತ್ತಾರೆ. ಆದ್ದರಿಂದಲೇ ಹಾಗೇನಾದರೂ ಆದರೆ ಆ ಮಾತುಗಳನ್ನು ಯಾರೂ ಮುಂದುವರಿಸದಂತೆ ಯಾರೂ ಯಾರಿಗೂ ಹೇಳಬಾರದು ಯಾರೂ ಕೇಳಿಸಿಕೊಳ್ಳಬಾರದು ಎಂದು ಹೇಳುತ್ತಾರೆ. ಅಂದರೆ ಅದು ಅಲ್ಲಿಯೇ ಸತ್ತು ಹೋಗುತ್ತದೆ. ಮತ್ತೆ ಹರಡಿಕೊಳ್ಳುವ ಅವಕಾಶ ಅದಕ್ಕಿರುವುದಿಲ್ಲ.
No comments:
Post a Comment