Friday, September 7, 2012

Vachana 106: Vachisi Anubhaviyaagadava – True Scholarshipವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ,
ವಚಿಸಿ ಅನುಭವಿಯಾದವ ಪಂಡಿತನಯ್ಯಾ,
ವಿದ್ಯೆ ಎಂಬುದು ಅಭ್ಯಾಸಿಕನ ಕೈವಶವಯ್ಯಾ,
ಅವಿದ್ಯೆ ಎಂಬುದು ಸರ್ವರಲ್ಲಿ ವಶ,
ವಿದ್ಯಾ ಅವಿದ್ಯೆಯನರಿತು ಜಗದ್ವೇದ್ಯನಾಗಬಲ್ಲಡೆ
ಮಹಾಪಂಡಿತ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ

TRANSLITERATION

vacisi anubhaviyaagadava pishaaciyayyaa,
vacisi anubhaviyaadava paMDitanayyaa,
vidye eMbudu abhaasikana kaivasha,
avidye eMbudu sarvaralli vasha,
vidyaa avidyeyanaritu jagadvEdyanaagaballaDe
mahaa paMDita nODaa, kapilasiddhamallikaarjunaa


CLICK HERE TO READ-ALONG

http://youtu.be/_A-dnwP4JB0TRANSLATION (WORDS)

vacisi (the read,after reading ) anubhaviyaagadava (he who doesn’t experience it)  pishaaciyayyaa (is a ghost you see),
vacisi (the read, after reading) anubhaviyaadava (he who expiriences it) paMDitanayyaa (is a scholar),
vidye (knowledge, scholarship) eMbudu (is) abhyaasikana (he who practices it) kaivasha(is in the hands of),
avidye (ignorance) eMbudu (is)  sarvaralli vasha (is of everybody),
vidyaa (knowledge, scholarship)  avidyeyan (ignorance)aritu (knowing) jagadvEdyanaagaballaDe (if one knows the world)
mahaa paMDita (is a great scholar) nODaa (you see), kapilasiddhamallikaarjunaa.
(Kapilasiddhamallikaarjuna)


TRANSLATION

He who doesn’t experience it after reading is a ghost, Sir!
He who experiences it after reading is a scholar, Sir!
Scholarship is in the hands of he who practices it, Sir!
Ignorance is of everybody!
The one who distinguishes the knowledge from ignorance and knows the world, is indeed a great scholar, you see, Kapilasiddamallikarjuna!


COMMENTARY

In this Vachana, Sharana Siddarameswara says that a true scholar is one who experiences the knowledge acquired through reading, and understands the world. Ignorance is an attribute of everyone. Scholarship is in the hands of those who practice it. 

Very often, we read a book, recall the material from it and use it in our discussions and debates. We end up lecturing on the topics without truly understanding or internalizing the concepts read. We impress people and ourselves with our capability to present the material, while within us there would be an inadequacy or hesitation about the topics. This is because we will not have truly explored the material to understand it, experience it and internalize it. This inadequacy haunts us as a ghost.  A true scholar is one who experiences the knowledge and practices it.

Is it possible for us to experience everything we read and learn?  The experience need not be just personal. When our knowledge expands our heart and mind’s horizon to make us feel that we are all one and we are not separate, everyone’s experience becomes ours. Development of such fertile mind is true scholarship.

Knowledge has taken a different meaning in this day and age. We can ‘google’ and find out and use what we need, when we need it. We have lost the art of deepening our knowledge and understanding and have become a pancake generation, flat with no depth. Siddarameswara is urging us to get out of this ignorant mode and become true scholars.

The eleventh verse of Ishavasopanishad also addresses the issue of knowledge and ignorance thus:

Vidyaanchaavidyaancha yastadvedobhayam saha!
Avidyaya mrutyum teertvaa vidyaamrutamashnute!

Meaning:

Knowing the internals of knowledge and ignorance,
Crossing the death of ignorance, realizing the nectar of knowledge!


Some argue that true scholarship is understanding the self, and all other efforts to cultivate the knowledge necessary to be successful in this mundane world is equivalent to death. But, the fact remains that one must develop the skills and knowledge required survive in this world. What is needed then is a true balance of knowledge that allows us to be best in our materialistic duties (kaayaka) and the knowledge of the self. We cannot ignore this world. We cannot be completely immersed in this world. The true scholar experiences this world while explores the self.

Let us experience our knowledge through true understanding in our heart!


 KANNADA COMMENTARY

ಇಲ್ಲಿ ಸಿದ್ಧರಾಮೇಶ್ವರರು ನಿಜವಾದ ಪಂಡಿತನು ಯಾರು? ನಿಜವಾದ ವಿದ್ಯೆ ಯಾವುದು? ಓದು ಹೇಗಿರಬೇಕು? ಎಂಬುದನ್ನು ಹೇಳುತ್ತಾರೆ.

ಜ್ಞಾನದ ಬಗ್ಗೆ ಓದಿ ಅದನ್ನು ಅನುಭವಿಸದವನು ಪಿಶಾಚಿ, ಎನ್ನುತ್ತಾರೆ. ಅಂದರೆ ತಾನು ಓದಿದನ್ನು ಆಳವಾಗಿ ಅರಿಯದೆ ಇದ್ದರೆ, ಅದನ್ನು ತನ್ನ ಹೃದ್ಗತ ಮಾಡಿಕೊಳ್ಳದಿದ್ದರೆ ಆತನು ಪಿಶಾಚಿ ಎನ್ನುವ ಮಾತು ಹೇಳುತ್ತಾರೆ. ಆಗ, ಓದಿದ್ದು ಅರ್ಥವೇ ಆಗದೆ, ಕೇವಲ ಶಬ್ದ ಜಾಲವಾಗಿ ಉಳಿಯುತ್ತದೆ. ಅನುಭವದ ತಳವಿಲ್ಲದ ಆ ಓದು ಇತರರಿಗಾಗಲಿ ಅಥವಾ ತನಗೇ ಆಗಲಿ ಒಣ ಮಾತಾಗಿ ಕಾಡುತ್ತದೆ. ಅದಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಏಕೆಂದರೆ ಆತನ ಮಾತು ಕೇಳಿದವರು, ಆತನು ದೊಡ್ಡ ಪಂಡಿತನೆಂದುಕೊಳ್ಳುತ್ತಾರೆ. ಏಕೆಂದರೆ “ಆತನು ಓದಿರುವವನು, ಆತನ ಮಾತಿಗೆ ಬೆಲೆ ಕೊಡಬೇಕು” ಎಂದುಕೊಳ್ಳುತ್ತಾರೆ. ಆದರೆ ಆತನ ಮಾತುಗಳಿಗೆ ಅನುಭವದ ಆಧಾರವಿಲ್ಲದ್ದರಿಂದ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ, ಈ ಗೊಂದಲದಲ್ಲಿ ಸಿಲುಕಿ ಜನರು ಬಹಳ ಕಷ್ಟವನ್ನು ಅನುಭವಿಸುತ್ತಾರೆ. ಹೀಗಾಗಿ ಆತನ ಓದು ಅವರನ್ನು ಪಿಶಾಚಿಯಂತೆ ಕಾಡುತ್ತದೆ. ಆತನೂ ಕೂಡ ಜ್ಞಾನಿಯೂ ಅಲ್ಲದ ಅಜ್ಞಾನಿಯೂ ಅಲ್ಲದ ಸ್ಥಿತಿಯಲ್ಲಿರುತ್ತಾನೆ.  ಆದರೆ ತಾನು ಓದಿದುದನ್ನು ಅನುಭವಿಸಿದವನು ಪಂಡಿತನಾಗುತ್ತನೆ ಎನ್ನುತ್ತಾರೆ ಸಿದ್ಧರಾಮರು. ಅಂದರೆ ಎಲ್ಲವನ್ನೂ ಅನುಭವಿಸಿಯೇ ತಿಳಿಯ ಬೇಕೆ? ಒಬ್ಬ ವ್ಯಕ್ತಿಯು ಎಲ್ಲವನ್ನು ಅನುಭವಿಸಲು ಸಾಧ್ಯವೇ?  ಎಂಬಪ್ರಶ್ನೆ ಹುಟ್ಟುತ್ತದೆ.  ಎಲ್ಲರೂ ಎಲ್ಲವನ್ನೂ ವೈಯಕ್ತಿಕವಾಗಿ ಅನುಭವಿಸುವುದು ಸಾಧ್ಯವಿಲ್ಲ. ಆದರೆ ಮನಸ್ಸು ಸಂವೇದನಶೀಲವಾದಾಗ  ತಾನು ಬೇರೆ ಇನ್ನೊಬ್ಬ ಬೇರೆ ಎನ್ನುವ ಭಾವ ಮರೆಯಾಗುತ್ತದೆ.ಇನ್ನೊಬ್ಬರ ಅನುಭವವು ತಮ್ಮದಾಗುತ್ತದೆ. ಆಗ ಓದು ಅನುಭವದ ಮೂಸೆಯಲ್ಲಿ ಬೆಂದು ಚಿನ್ನವಾಗುತ್ತದೆ. ಇದನ್ನು ಸಾಧಿಸಿದವನು ಒಬ್ಬ ಸಾಮಾನ್ಯ ಪಂಡಿತನಾಗುತ್ತಾನೆ.

ವಿದ್ಯೆ (knowledge) ಎಂಬುದು ಅಭ್ಯಾಸದಿಂದ ಕೈಗೂಡುತ್ತದೆ ಎನ್ನುತ್ತಾರೆ. ಯಾರು ಅಭ್ಯಾಸ ಮಾಡುತ್ತಾರೆಯೋ ಅವರ ಕೈವಶವಾಗುತ್ತದೆ ವಿದ್ಯೆ. ಅಭ್ಯಾಸ ಮಾಡದಿದ್ದರೆ ಆ ವಿದ್ಯೆ ಕೇವಲ ಓದಾಗಿ, ಬೌದ್ಧಿಕ ಕಸರತ್ತಾಗಿ ಉಳಿಯುತ್ತದೆ. ಆದ್ದರಿಂದ ಓದಿದುದನ್ನು ಬದಿಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಆದರೆ ಅವಿದ್ಯೆ (ignorance) ಯು ಸರ್ವರಿಗೂ ಅನಾಯಾಸವಾಗಿ ಬರುವಂತಹುದು. ಸಾಮಾನ್ಯವಾಗಿ ಎಲ್ಲರೂ ಅವಿದ್ಯೆಯ ವಶದಲ್ಲಿರುತ್ತಾರೆ. ಅದನ್ನು ತೊಡೆಯಬೇಕಾದರೆ ಪ್ರಯತ್ನದಿಂದ ವಿದ್ಯೆಯನ್ನು ಅಭ್ಯಸಿಸಬೇಕು. ಮತ್ತು  ಈ ವಿದ್ಯೆ ಹಾಗೂ ಅವಿದ್ಯೆ ಎರಡನ್ನೂ ಅರಿತುಕೊಂಡು ಜಗತ್ತನ್ನು ಅರ್ಥಮಾಡಿಕೊಂಡವನು ಮಾತ್ರ ಮಹಾಪಂಡಿತನಾಗುತ್ತಾನೆ ಎನ್ನುತ್ತಾರೆ ಸಿದ್ಧರಾಮೇಶ್ವರರು.

ಇದೇ ಮಾತನ್ನು ನಾವು ಈಶಾವಾಸೋಪನಿಷತ್ತಿನಲ್ಲಿ ಕಾಣುತ್ತೇವೆ:

ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ |

ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಾಯಾಮೃತಮಶ್ನುತೇ ||


ವಿದ್ಯೆ ಅವಿದ್ಯೆಗಳ  ಅಂತರಂಗವನರಿತು |

ಅವಿದ್ಯೆಯಿಂ ಮೃತ್ಯು ವನು ದಾಟಿ, ವಿದ್ಯೆಯಿಂದಮೃತವ ಪಡೆಯುವುದು ||

(ವಿದ್ಯೆ ಅವಿದ್ಯೆಗಳ ಅಂತರಂಗವನು ಅರಿತು ಅವಿದ್ಯಯಿಂ - ಅವಿದ್ಯೆಯಿಂದ, ಮೃತ್ಯುವನು ದಾಟಿ, ವಿದ್ಯೆಯಿಂದ ಅಮೃತವ ಪಡೆಯುವುದು)

ಈಶಾವಸೋಪನಿಷತ್ತಿನ ಈ ೧೧ನೇ ಮಂತ್ರದಲ್ಲಿ ವಿದ್ಯೆ ಮತ್ತು ಅವಿದ್ಯೆಯ ಸಾಧನೆ, ಪ್ರಯೋಜನಗಳನ್ನು ಹೇಳಿದೆ. ಅವಿದ್ಯೆಯ ಉಪಾಸಕನು ಕತ್ತಲೆಯನ್ನು  ಸೇರುತ್ತಾನೆ ಎನ್ನುತ್ತದೆ ಉಪನಿಷತ್ತು. ಅಂದರೆ, ಆತ್ಮ ಜ್ಞಾನವಲ್ಲದ ಎಲ್ಲವೂ ಅವಿದ್ಯೆ ಎಂದರ್ಥ. ಕೇವಲ ಆತ್ಮಜ್ಞಾನ ಮಾತ್ರ ಬೆಳಕನ್ನು ತೋರುವುದು. ಪೂಜೆ ಪುನಸ್ಕಾರಗಳಾಗಲಿ ಅಥವಾ ಹೊಟ್ಟೆಪಾಡಿಗಾಗಿ ಗಳಿಸುವ ಜ್ಞಾನವಾಗಲಿ ಎಲ್ಲವೂ ಅವಿದ್ಯೆಯೆ.  ಇವುಗಳಿಂದ “ಮೃತ್ಯು” ಅಂದರೆ ಹಸಿವನ್ನು ಗೆಲ್ಲಬಹುದು ಅಷ್ಟೆ. ಜೀವನದ ಅವಶ್ಯಕತೆಗೆ ಮತ್ತು ಕೇವಲ ಹಣಗಳಿಕೆಗೆ ಲೌಕಿಕ ವಿದ್ಯೆಯೊಂದನ್ನೇ ಅವಲಂಬಿಸಿದರೆ ಆದು ಕತ್ತಲೆ, ಎಂದರೆ ಅದು ಅಜ್ಞಾನ. ವಿದ್ಯೆ ಎಂದರೆ ಆತ್ಮ ಜ್ಞಾನದ ಮಾರ್ಗ. ಲೌಕಿಕ ಧರ್ಮವನ್ನು ಬಿಟ್ಟು ಕೇವಲ ಆತ್ಮ ಜ್ಞಾನದ ಮಾರ್ಗ ಒಂದನ್ನೇ ಅನುಸರಿಸುವವನು ಇನ್ನೂ ಹೆಚ್ಚಿನ ಕತ್ತಲೆಯನ್ನು ಸೇರುವನು. ಕೇವಲ ವಿದ್ಯೆಯೊಂದನ್ನೇ ನಂಬಿ ಜಗತ್ತನ್ನು ತಿರಸ್ಕರಿಸಿದರೆ ಅದೂ ಕತ್ತಲೆ.  ಎಂದರೆ ಆತನು ಉಪವಾಸವಿರಬೇಕು ಇಲ್ಲವೇ ಪರಾವಲಂಬಿಯಾಗಿ ಬಾಳಬೇಕು, ಇದು ಹೆಚ್ಚಿನ ತಪ್ಪು ಮತ್ತು ಅಜ್ಞಾನ.

ಆದರೆ ಕೆಲವರು ವಿದ್ಯೆಯೇ ಎಂದರೆ ಜ್ಞಾನಕ್ಕಾಗಿ ಕರ್ಮತ್ಯಾಗ ಮಾಡುವುದೇ ಶ್ರೇಷ್ಠ ಎನ್ನುತ್ತಾರೆ. ಮತ್ತೆ ಕೆಲವರು ಲೌಕಿಕ ಧರ್ಮವನ್ನು ಬಿಡದೆ ಪಾಲಿಸುವುದೇ ಉತ್ತಮ ಎನ್ನತ್ತಾರೆ.ಆದ್ದರಿಂದ ಸಮನ್ವಯವೇ ಜೀವನದ ಸೂತ್ರ. ಕಾಯಕದಿಂದ ಹೊಟ್ಟೆ ತುಂಬಿಸಿಕೊಳ್ಳಬೇಕು, ಜ್ಞಾನ ಸಾಧನೆಯಿಂದ ಅಮೃತತ್ವವನ್ನು ಪಡೆಯಬೇಕು. ಜ್ಞಾನಿಯಾದರೂ ಕಾಯಕವನ್ನು ತಿರಸ್ಕರಿಸಬಾರದು. ಎಂಬುದು ಇದರ ಅರ್ಥ.ಕೃಪೆ: ಈಶಾವಾಸೊಪನಿಷತ್ತು, ವಿಕಿಪೀಡಿಯಾ.

1 comment:

  1. How true, but so difficult. We can make minute progress by being mindful in experiencing and practicing what we read. It will take a few lives over (if there is such a thing)to get there. Very nice commentary of both vachana and shloka.
    My "hats off" to Dr. Sajjan Shiva and Mrs. Leela Garady for their diligent practice of sharing the knowledge!

    Thanks,

    Bharti

    ReplyDelete