ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ ಪಂಚಕರಣಂಗಳಿರವ ಹೇಳಿಹೆ ಕೇಳಿರಯ್ಯಾ,
ಇಲ್ಲದುದ ಕಲ್ಪಿಸುವುದೆ ಸಂಕಲ್ಪ, ಇದ್ದುದನರಿಯದುದೆ ವಿಕಲ್ಪ,
ಕಲ್ಪಿಸಿ ರಚಿಸುವುದೆ ಬುದ್ಧಿಯಯ್ಯಾ, ಕಲ್ಪಿಸಿ ಮಾಡುವುದು ಚಿತ್ತವಯ್ಯಾ,
ಮಾಡಿದುದಕ್ಕೆ ನಾನೆಂಬುದು ಅಹಂಕಾರವಯ್ಯಾ,
ಮಾಡುವ ನೀಡುವ ಭಾವ ಶಿವಕೃತ್ಯವೆಂದಡೆ ಜ್ಞಾನ ವೈರಾಗ್ಯವಯ್ಯಾ,
ಅರಿಯದ ಅರಿವು ಮಹಾಜ್ಞಾನ, ಮೋಕ್ಷದ ಇರವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
TRANSLITERATION
mana buddhi citta ahaMkaara j~jaanaveMba paMcakaraNaMgaLirava hELihe kELirayyaa,
manaveMbududu saMkalpa vikalpakkoLagaayittuilladuda kalpisuvude saMkalpa, iddudanariyadude vikalpa,
kalpisi rachisuvude buddhiyayyaa, kalpisi maaDuvudu cittavayyaa,
maaDidudakke naaneMbudu ahaMkaaravayyaa,
maaDuva nIDuva bhaava shivakRutyaveMdaDe j~aana vairaagyvayyaa,
ariyada arivu mahaaj~jaana, mOkShada iravu nODaa, kapilasiddhamallikaarjunaa
CLICK HERE TO READ-ALONG:
TRANSLATION (WORDS)
mana (mind) buddhi (intellect) citta (conviction, emotive state of mind) ahaMkaara (ego) j~jaanaveMba (knowledge)
paMcakaraNaMgaLirava (the traits of the five senses which are said to be) hELihe (I will say) kELirayyaa (listen Oh sirs!),manaveMbudu (mind ) saMkalpa (was under resolution) vikalpakkoLagaayittu (was under scruple, doubt)
illaduda (that which is not now) kalpisuvude (thinking of) saMkalpa (is conviction,or becoming),
iddudanariyadude ( not knowing that which is) vikalpa (is doubt),
kalpisi (thought) rachisuvude (that which makes it (thought) come true) buddhiyayyaa (is intellect you see),
kalpisi (thought) maaDuvudu (putting in to action) cittavayyaa ( is conviction you see),
maaDidudakke (that which is done) naaneMbudu (recognizing with “I”) ahaMkaaravayyaa (is ego you see),
maaDuva (doing) nIDuva (giving) bhaava (feeling of) shivakRutyaveMdaDe (if you consider as divine work)
j~aana vairaagyvayyaa (is knowledge and renunciation you see),
ariyada (not knowing, not knowing that I know) arivu (awareness is) mahaaj~jaana (great knowledge), mOkShada ( of salvation, liberation) iravu (is state ) nODaa (you see sir),
kapilasiddhamallikaarjunaa (Kapilasiddhamallikarjuna)
TRANSLATION
Listen Oh Sirs! I am talking about mind, intellect, conviction, ego and knowledge which are said to be the traits of the five senses.
The mind is subjected to resolution (conviction) and doubt!Thinking of that ‘which is not now’ is conviction, not knowing ‘that which is’ is doubt!
Making the thoughts come true is intellect, Sir!
Putting the thoughts into action is conviction, Sir!
Saying that ‘I did it’ is ego, Sir!
Considering all doing and giving as divine work, is renunciation and knowledge, Sir!
Awareness of not knowing that I know is the greatest knowledge and the state of liberation, you see Sir! Kapilasiddamallikarjuna!
COMMENTARY
In this Vachana, Sharana Siddarameswara elaborates on five traits of humans brought about by the sense organs: mana (manas, mind), buddhi (intellect, reasoning part of mind), citta (conviction, state of mind, mindedness, emotive mind), ahankara (ego, the I-ness) and Jnana (knowledge). Mind is a monkey. It is subjected to being resolute or being in doubt, up or down, happy or sad, so on. Resolute mind decides to do something about which it may not know anything. It thinks of it that is not there now and tries to create it. Doubtful mind is a result of not knowing what there is, hesitation, wavering, sometimes thinking that it is there when it is not, and some other time thinking that it is not there when it is there. Making the thoughts come true is intellect. Putting thoughts into action is conviction (citta). When thoughts are put into action or made to come true, the individual feels “I did it’. Saying ‘I did it’ is ego. The state of mind where everything that is done or given is divine work is considered knowledge and renunciation. The Vachana uses the word Jnanavairaagya to describe this state. This is the ultimate state in which the individual is indifferent (Viragya) to the tag of jnani or knowledgeable. Awareness of not knowing that I know is the greatest knowledge and the state of liberation. Siddarameswara says that not knowing that I have realized (become aware, knowledgeable) i.e. becoming egoless is the greatest knowledge and the sign of liberation. The message of the Vachana is that we should be aware of the state of our mind, realize the subtleness of intellect and conviction, contain ego and progress in the spiritual path.
Let us become egoless by realizing the subtle states of our mind, intellect and conviction!
KANNADA COMMENTARY
ಇಲ್ಲಿ ಸಿದ್ಧರಾಮರು ಜ್ಞಾನೇಂದ್ರಿಯಗಳನ್ನು ವಿವರಿಸುತ್ತ ಅರಿವು ಎಂದರೇನು ಎಂಬುದನ್ನು ಸ್ಪಷ್ಟಪಡಿಸುತ್ತಿದ್ದಾರೆ. ಮನ, ಬುದ್ಧಿ, ಚಿತ್ತ ಅಹಂಕಾರ ಮತ್ತು ಜ್ಞಾನ ಇವುಗಳು ನಮ್ಮಲ್ಲಿ ಇರುವ ರೀತಿಯನ್ನು ತಿಳಿಸುತ್ತಾರೆ. ಮನದ ಚಲನವಲನಗಳು ನೂರಾರು. ಮನವು ಯಾವಾಗಲೂ ಒಂದೇ ತರಹ ಇರುವುದಿಲ್ಲ. ಅದು ಸಂಕಲ್ಪ ಮತ್ತು ವಿಕಲ್ಪಗಳಿಗೆ ಒಳಗಾಗುತ್ತದೆ. ಸಂಕಲ್ಪವೆಂದರೆ, ತಾನು ಏನೋ ಮಾಡಬೇಕೆಂದು ನಿರ್ಧರಿಸುವುದು. ಅಂದರೆ ತನ್ನಲ್ಲಿ ಇಲ್ಲದೆ ಇರುವುದನ್ನು ಮಾಡಬೇಕೆಂದು ತೀರ್ಮಾನಿಸುವುದು. ಇಲ್ಲದುದನ್ನು ಕಲ್ಪಿಸುವುದು ಎನ್ನುತ್ತಾರೆ. ತನ್ನಲ್ಲಿ ಇಂತಹುದು ಇಲ್ಲ, ಆದ್ದರಿಂದ ಅದನ್ನು ತಾನು ಸಾಧಿಸಬೇಕು ಎನ್ನುವುದು ಸಂಕಲ್ಪ. ವಿಕಲ್ಪ ಎಂದರೆ, ಅನುಮಾನ, ಸಂದಿಗ್ಧತೆ, ಸಂದೇಹ. ಅಂದರೆ ತನ್ನಲ್ಲಿ ಇರುವುದನ್ನು ಅರಿಯದೆ ಇರುವುದು. ಒಂದು ಸಲ ತನ್ನಲ್ಲಿ ಇಲ್ಲದುದನ್ನು ಇದೆಯಂದೂ, ಇನ್ನೊಂದು ಸಲ ಇಲ್ಲವೆಂದೂ ಅಂದುಕೊಳ್ಳುವುದು. ತನ್ನಲ್ಲಿ ಇರುವುದನ್ನು ನಿರ್ದಿಷ್ಟವಾಗಿ, ಸ್ಪಷ್ಟವಾಗಿ ತಿಳಿಯದೆ ಇರುವುದು ವಿಕಲ್ಪ. ಇನ್ನು ಬುದ್ಧಿ ಎಂದರೇನು? “ಇದು ಹೀಗಿರಬೇಕು” ಎಂದು ಕಲ್ಪಿಸಿಕೊಂಡು ಅದರ ಚಿತ್ರವನ್ನು ರಚಿಸುವುದೆ ಬುದ್ಧಿ. ಹಾಗೆ ಕಲ್ಪಿಸಿಕೊಂಡುದನ್ನು ಮಾಡುವುದೇ ಚಿತ್ತ ಎನ್ನುತ್ತಾರೆ. ಕಲ್ಪಿಸಿಕೊಂಡದ್ದನ್ನೆಲ್ಲ ಯಾವಾಗಲೂ ಮಾಡಲಾಗುವುದಿಲ್ಲ. ಆದರೆ ಹಾಗೆ ಮಾಡಿದಾಗ ಕೂಡಲೆ “ನಾನು ಮಾಡಿದೆ” ಎಂಬ ಭಾವ ಹುಟ್ಟುತ್ತದೆ. ಅದೇ ಅಹಂಕಾರ. ನಾನು ಮಾಡಿದೆ, ನಾನು ನೀಡಿದೆ ಎಂಬ ಭಾವವನ್ನು ಬಿಟ್ಟು ಅದು ಶಿವನ ಕೃತ್ಯ ಎಂದು ತಿಳಿದರೆ ಅದು ಜ್ಞಾನ ವೈರಾಗ್ಯವೆನ್ನುತ್ತಾರೆ. ನನಗೆ ಅರಿವು ಉಂಟಾಗಿದೆ ಎಂದು ಅರಿಯದಿರುವುದೇ, ಅಂದರೆ ಅಹಂಕಾರರಹಿತವಾಗಿರುವುದೇ ಮಹಾ ಜ್ಞಾನ, ಅದೇ ಮೋಕ್ಷದ ಲಕ್ಷಣ ಎನ್ನುತ್ತಾರೆ ಸಿದ್ಧರಾಮೇಶ್ವರರು.
ಇಂತು ಜ್ಞಾನೇಂದ್ರಿಯಗಳಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳನ್ನು, ಅವುಗಳ ಗುಣ ಲಕ್ಷಣಗಳನ್ನು ತಿಳಿಸುತ್ತಾರೆ. ಇದರಿಂದ ನಾವು ಪ್ರತಿ ಹಂತದಲ್ಲಿಯೂ ನಮ್ಮ ನಮ್ಮ ಭಾವನೆಗಳನ್ನು, ನಮ್ಮ ಮನದ ಚಲನವಲನಗಳನ್ನು ಗಮನಿಸಿಕೊಂಡು ಮನ, ಬುದ್ಧಿ, ಚಿತ್ತ ಅಹಂಕಾರಗಳನ್ನು ಗುರುತಿಸಿಕೊಳ್ಳಲು ಮತ್ತು ಆ ಮೂಲಕ ಆತ್ಮೋನ್ನತಿಯ ಕಡೆ ಹೋಗಲು ಒಳ್ಳೆಯ ಸುಲಭವಾದ ಮಾರ್ಗವನ್ನು ತೋರುತ್ತಾರೆ ಸಿದ್ಧರಾಮೇಶ್ವರರು.
ಚಿತ್ತ.........= subconscious repository of memories.. from this birth and the earlier ones..
ReplyDelete