ನಿನ್ನ ದೇಹ ನೋಡುವಡೆ ಪಂಚಭೌತಿಕ, ನೀ ನೋಡುವಡೆ ಜೀವಾಂಶಿಕ;
ನಿನ್ನ ಧನ ನೋಡುವಡೆ ಕುಬೇರನದು, ನಿನ್ನ ಮನ ನೋಡುವಡೆ ವಾಯುವಕೂಡಿದ್ದು;
ವಿಚಾರಿಸಿ ನೋಡಿದಡೆ ಬ್ರಹ್ಮನದು.
ನಾ ಮಾಡುವೆನೆಂದಡೆ ಅದು ಆದಿ ಶಕ್ತಿ ಚೈತನ್ಯ;
ನಾ ತಿಳಿದಿಹೆನೆಂದಡೆ ಅದು ಜ್ಞಾನದ ಬಲ.
ಆ ಜ್ಞಾನವು ನಾ ಎಂದಡೆ ಇದಿರಿಟ್ಟು ತೋರುತ್ತದೆ.
ತೋರುವ ಆನಂದ ಮೂರ್ತಿ ನಾ ಎಂದಡೆ ಅದು ಸಾಕ್ಷಿಯಾಗಿ ನಿಂದಿತ್ತು.
ಸಾಕ್ಷಿ ಎಂಬುದದು ತಿಳಿದು ತಿಳಿಯದೆಂಬುದಕ್ಕೆ,
ಬಯಲಾದ ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ತಂದೆಯು
vicaarisi nODidaDe brahmanadu.
naa maaDuveneMdaDE adu aadi Shakti caitanya;
naa tiLidiheneMdaDe adu jn~aanada bala.
aa jn~aanavu naa eMdaDe idiriTTu tOruttade.
tOruva aanaMdamUrti naa eMdaDe adu saakShiyaagi niMdittu.
saakShi eMbudadu tiLidu tiLiyadeMbudakke,
bayalaada namma kapiasiddhamallikaarjuna taMdeyu
ninna (your) dhana (money) nODuvaDe (if you see, observe) kubEranadu( belongs to Kubera the God of wealth),
ninna (your) mana (mind) nODuvade (if you see, observe) vaayuvakUDiddu (is of air, wavers);
vicaarisi (think) nODidaDe (if you observe) brahmanadu (it is of Brahma).
naa (I)maaDuveneMdaDE (will do it ,if you say)adu (that is) aadi (source,beginning)Shakti caitanya (energy chaitanya);
naa (I) tiLidiheneMdaDe (I know it, if you say) adu(that is) jn~aanada (of knowledge) bala (power).
aa jn~aanavu (that knowledge is) naa (me) eMdaDe (if said) idiriTTu (holding it before you) tOruttade (it shows).
tOruva aanaMdamUrti (Ananadamurti the bliss that is seen) naa (I) eMdaDe (if said) adu (that) saakShiyaagi niMdittu (stands as witness).
saakShi (witness) eMbudadu (that which is said) tiLidu (knowing) tiLiyadeMbudakke (say that it is unknown),
bayalaada (he became one with , merged in)namma kapiasiddhamallikaarjuna taMdeyu (our kapilasiddhamallikaarjuna)
Look at your wealth; it belongs to Kubera, the God of wealth!
Look at your mind; it is wavering ever, never stable!
Look at your thoughts; they belong to Brahma, the creator!
If you say ‘I did it’, it is due to the embryonic energy source!
If you say ‘I know it’, it is due to the power of knowledge bestowed on you!
If you say ‘that knowledge is me’ (internalize it), it materializes in front of you!
If you say ‘I am the idol of bliss that materialized’, it will stand as witness!
Knowing the witness, yet saying that it is unknown makes you one with the Lord Kapilasiddhamallikaarjuna!
ನಿನ್ನ ಧನ ನೋಡುವಡೆ ಕುಬೇರನದು, ನಿನ್ನ ಮನ ನೋಡುವಡೆ ವಾಯುವಕೂಡಿದ್ದು;
ವಿಚಾರಿಸಿ ನೋಡಿದಡೆ ಬ್ರಹ್ಮನದು.
ನಾ ಮಾಡುವೆನೆಂದಡೆ ಅದು ಆದಿ ಶಕ್ತಿ ಚೈತನ್ಯ;
ನಾ ತಿಳಿದಿಹೆನೆಂದಡೆ ಅದು ಜ್ಞಾನದ ಬಲ.
ಆ ಜ್ಞಾನವು ನಾ ಎಂದಡೆ ಇದಿರಿಟ್ಟು ತೋರುತ್ತದೆ.
ತೋರುವ ಆನಂದ ಮೂರ್ತಿ ನಾ ಎಂದಡೆ ಅದು ಸಾಕ್ಷಿಯಾಗಿ ನಿಂದಿತ್ತು.
ಸಾಕ್ಷಿ ಎಂಬುದದು ತಿಳಿದು ತಿಳಿಯದೆಂಬುದಕ್ಕೆ,
ಬಯಲಾದ ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ತಂದೆಯು
TRANSLITERATION
ninna dEha nODuvaDe paMcabhoutika, nI nODuvadE jIvaaMshika;
ninna dhana nODuvaDe kubEranadu, ninna mana nODuvade vaayuvaUDiddu;vicaarisi nODidaDe brahmanadu.
naa maaDuveneMdaDE adu aadi Shakti caitanya;
naa tiLidiheneMdaDe adu jn~aanada bala.
aa jn~aanavu naa eMdaDe idiriTTu tOruttade.
tOruva aanaMdamUrti naa eMdaDe adu saakShiyaagi niMdittu.
saakShi eMbudadu tiLidu tiLiyadeMbudakke,
bayalaada namma kapiasiddhamallikaarjuna taMdeyu
CLICK HERE TO READ-ALONG:
TRANSLATION (WORDS)
ninna (your) dEha (body) nODuvaDe (if you see, observe) paMcabhoutika (is of five elements).
nI (you) nODuvadE (if you see, observe) jIvaaMshika (are a part of life); ninna (your) dhana (money) nODuvaDe (if you see, observe) kubEranadu( belongs to Kubera the God of wealth),
ninna (your) mana (mind) nODuvade (if you see, observe) vaayuvakUDiddu (is of air, wavers);
vicaarisi (think) nODidaDe (if you observe) brahmanadu (it is of Brahma).
naa (I)maaDuveneMdaDE (will do it ,if you say)adu (that is) aadi (source,beginning)Shakti caitanya (energy chaitanya);
naa (I) tiLidiheneMdaDe (I know it, if you say) adu(that is) jn~aanada (of knowledge) bala (power).
aa jn~aanavu (that knowledge is) naa (me) eMdaDe (if said) idiriTTu (holding it before you) tOruttade (it shows).
tOruva aanaMdamUrti (Ananadamurti the bliss that is seen) naa (I) eMdaDe (if said) adu (that) saakShiyaagi niMdittu (stands as witness).
saakShi (witness) eMbudadu (that which is said) tiLidu (knowing) tiLiyadeMbudakke (say that it is unknown),
bayalaada (he became one with , merged in)namma kapiasiddhamallikaarjuna taMdeyu (our kapilasiddhamallikaarjuna)
TRANSLATION
Look at your body; it belongs to the five elements it is made of!
Look at you; you are made of life sources!Look at your body; it belongs to the five elements it is made of!
Look at your wealth; it belongs to Kubera, the God of wealth!
Look at your mind; it is wavering ever, never stable!
Look at your thoughts; they belong to Brahma, the creator!
If you say ‘I did it’, it is due to the embryonic energy source!
If you say ‘I know it’, it is due to the power of knowledge bestowed on you!
If you say ‘that knowledge is me’ (internalize it), it materializes in front of you!
If you say ‘I am the idol of bliss that materialized’, it will stand as witness!
Knowing the witness, yet saying that it is unknown makes you one with the Lord Kapilasiddhamallikaarjuna!
COMMENTARY
We have said that the ultimate goal of the spiritual path is to be one with God. Sharanas have termed it linga-anga saamarasya or achieving the null (bayalu, shoonya sampaadane). This is the ultimate state of self-realization. The prerequisite for achieving it is elimination of ego or I-ness. The journey through the spiritual path then is the process of turning our senses to inside from their constant preoccupation with the outside, the material world. In this Vachana, Sharana Siddarameswara urges us to examine various aspects of our lives contributing to the I-ness. He says that although you pay immense attention to your body and feel that it is yours, it actually belongs to the five elements it is made of. It is not really yours. Similarly, your ‘life’ (i.e. you) is a product of sources that gave you life. Your wealth belongs to Kubera, the God of wealth. Kubera is one among the eight guards of the universe, in charge of protecting natural resources from which the ‘wealth’ is made of. A natural calamity can wipe out these resources and hence the wealth. Only Kubera can protect it meaning that the nature is capable of reviving itself from any calamity, you are not. Hence the wealth does not belong to you. You cannot control your wavering mind and your thoughts are gifts of the creator Brahma. You cannot say ‘I did it’ because the capability to do is from that omnipotent energy source. You cannot even say ‘I know’ because the knowledge is bestowed on you by the creator, it is not yours. Siddarameswara says that when the knowledge is internalized meaning that you start looking deeply inside, it materializes as a separate entity in front of you. If you further feel that the blissful entity that just materialized is within you, then that entity will serve as the witness for your merger with God. The prerequisite for the merger though is the intense feeling inside and the state of not knowing all that is known. This is the egoless state. This is the merger with Him!
Let us become sincere observers of our own self and the surroundings and achieve independence from it all!
KANNADA COMMENTARY
ಸದಾ “ಇದು ನಾನು” “ಇದು ನಾನು” ಎಂದು ಉಬ್ಬುಬ್ಬಿ ಮಾತನಾಡುವವರಿಗೆ “ನಾನು” ಎನ್ನುವ ಆ ವಸ್ತು ವಾಸ್ತವದಲ್ಲಿ ಯಾರು ಅಥವಾ ಏನು ಎಂಬುದನ್ನು ಈ ವಚನದಲ್ಲಿ ತಿಳಿಸುತ್ತಿದ್ದಾರೆ ಸಿದ್ಧರಾಮೇಶ್ವರರು. ನಾವು ಪಡೆದುಕೊಂಡ ಈ ದೇಹವನ್ನೇ “ನಾನು” ಎಂದು ಕರೆದುಕೊಳ್ಳುತ್ತೇವೆ ನಾವು. ಆದರೆ ಅದು ಪಂಚಭೂತಗಳಿಂದ ಆಗಿರುವುದು. ಆದ್ದರಿಂದ ಅದು ಪಂಚಭೂತಗಳಿಗೆ ಸೇರಿದುದು. ಪಂಚಭೂತಗಳಿಲ್ಲದಿದ್ದರೆ ದೇಹವೂ ಇಲ್ಲ. ಆ ದೇಹದಲ್ಲಿ ಜೀವವಿರುವುದರಿಂದ ಅದು ” ನಾನು” ಎನ್ನುತ್ತದೆ. ಜೀವವಿಲ್ಲದಿದ್ದ ದೇಹವಿದ್ದು ಪ್ರಯೋಜನವೇನು? ಇನ್ನು ಧನವನ್ನು “ನನ್ನದು” ಎನ್ನುತ್ತೇವೆ. ಆದರೆ ಅದು ಸಂಪತ್ತಿನ ಅಧಿದೇವತೆಯಾದ ಕುಬೇರನದು ಎನ್ನತ್ತಾರೆ ಸಿದ್ಧರಾಮೇಶ್ವರರು. ಕುಬೇರನು ಅಷ್ಟದಿಕ್ಪಾಲಕರಲ್ಲಿ ಒಬ್ಬನು ಮತ್ತು ಆತನು ಧನದ ಅಧಿದೇವತೆ ಕೂಡ. ಪ್ರಕೃತಿಯ ಸಂಪನ್ಮೂಲಗಳಿಂದ ಧನವನ್ನು ಗಳಿಸುತ್ತಾರೆ ಜನರು. ದಿಕ್ಕುಗಳನ್ನು ಕಾಯವವ ಕುಬೇರ. ಎಂದರೆ ಪ್ರಕೃತಿಯಲ್ಲಿ ಕೆಲಮಟ್ಟಿಗೆ ಅಸಂತುಲನವಾದರೆ ಅದನ್ನು ಸರಿಪಡಿಸಿಕೊಳ್ಳುವ ಚೈತನ್ಯ ಪ್ರಕೃತಿಯಲ್ಲಿದೆ. ಆ ತತ್ವವನ್ನೇ, ಆ ಚೈತನ್ಯವನ್ನೇ ದಿಕ್ಪಾಲಕವೆಂದು ಹೇಳಬಹುದು. ಪ್ರಕೃತಿಯ ಎಲ್ಲವೂ ಪ್ರಕೃತಿಗೇ ಸೇರಿದ್ದು. ಅಂದರೆ ಕುಬೇರನಿಗೆ ಸೇರಿದ್ದು. ಅದುನ್ನು ಮಾನವನು ತನ್ನದು ಎನ್ನುವದು ತಪ್ಪು ಎನ್ನುತ್ತಾರೆ. ಇನ್ನು ಮನ ನನ್ನದು ಎಂದು ಬೀಗಬಹುದು. ಆದರೆ ಅದು ಪ್ರಾಣವಾಯುವಿನದು. ಏಕೆಂದರೆ ಪ್ರಾಣವಿಲ್ಲದಿದ್ದರೆ ಮನಸ್ಸು ಇರುವುದಿಲ್ಲ. ವಿಚಾರಿಸಿ ನೋಡಿದರೆ ಅದು ಬ್ರಹ್ಮನದು. ಮನಸ್ಸನ್ನು “ನಾನು” ಸೃಷ್ಟಿಸಿದುದಲ್ಲ. ಎಲ್ಲವನ್ನೂ ಸೃಷ್ಟಿಸಿದ ಬ್ರಹ್ಮನೇ ಅದನ್ನೂ ಸೃಷ್ಟಿಸಿದ್ದಾನೆ. ಬ್ರಹ್ಮ ಎಂದರೆ ಇಲ್ಲಿ ನಾವು ಅದನ್ನು ಪರತತ್ವ ಎಂದು ಪರಿಗಣಿಸಬೇಕು. ಈ ಜಗತ್ತಿನಲ್ಲಿ ಸೃಷ್ಟಿಯಾದದ್ದೆಲ್ಲವೂ ಪರತತ್ವದಿಂದ ಉಂಟಾದದ್ದು. ಅದನ್ನು ನಾನು, ಅಥವಾ ಒಬ್ಬ ವ್ಯಕ್ತಿ ಮಾಡಿದುದಲ್ಲ. ಮಾನವನ ಮನಸ್ಸು ತನ್ನ ಸುತ್ತಮುತ್ತಲಿನ ಇಡೀ ವಾತಾವರಣ ಮತ್ತು ತನ್ನ ಒಡನಾಡಿಗಳಿಂದ ಹುಟ್ಟರುವಂತಹದು. ಆದ್ದರಿಂದ ಅದು ನನ್ನದು ಎಂದು ಬೀಗುವುದಕ್ಕೆ ಅವಕಾಶವೇ ಇಲ್ಲ. ಇದೆಲ್ಲವೂ ನಾನಲ್ಲ ಎಂದರೆ ಹೋಗಲಿ. ಆದರೆ, ನಾನು ಏನೇನು ಮಾಡುತ್ತೇನೆಯೋ ಅದೆಲ್ಲ ನಾನೇ ಎಂದು ಹೇಳಿದರೆ ಅದು ಕೂಡ ತಪ್ಪು. ಏಕೆಂದರೆ ನನ್ನಿಂದ ನಡೆಯುವುದೆಲ್ಲದಕ್ಕೂ ಮೂಲವಾದದ್ದು ಆದಿ ಶಕ್ತಿ ಚೈತನ್ಯ. ಆ ಚೈತನ್ಯದ ಅಸ್ತಿತ್ವದಿಂದಲೇ ಎಲ್ಲವೂ ನಡೆಯುವುದು. ಆದ್ದರಿಂದ “ನಾನು ಮಾಡಿದೆನು“ ಎನ್ನುವುದಕ್ಕೆ ಅರ್ಥವೇ ಇಲ್ಲ. ಹೋಗಲಿ ಎಂದು ಅದನ್ನೆಲ್ಲ ಬಿಟ್ಟು “ನಾನು ತಿಳಿದಿದ್ದೇನೆ” ಎಂದರೆ ಆ ಭಾವ ಜ್ಞಾನದ ಬಲದಿಂದ ಬರುವಂತಹದ್ದು. ತಾನು ಗಳಿಸಿದ ಜ್ಞಾನದ ಬಲದಿಂದ “ನಾನು ತಿಳಿದಿದ್ದೇನೆ” ಎನ್ನುವ ಅಹಂಕಾರ ಉಂಟಾಗುತ್ತದೆ. ಇನ್ನು “ಆ ಜ್ಞಾನವೇ ನಾನು” ಎಂದುಕೊಳ್ಳುತ್ತೇವೆ. ಆದರೆ ಆಳವಾಗಿ ಗಮನಿಸಿದಾಗ ಆ ಜ್ಞಾನ “ನನ್ನಿಂ”ದ ಬೇರೆಯಾಗಿ ನಿಲ್ಲುತ್ತದೆ. ಹಾಗೆ ತಟಸ್ಥವಾಗಿ ನಿಲ್ಲುವ ಆ ಆನಂದಮೂರ್ತಿಯೇ ನಾನು ಎಂದುಕೊಂಡರೆ ಅದು ಕೇವಲ ಸಾಕ್ಷಿಯಾಗಿ ನಿಲ್ಲುತ್ತದೆ. ಆ ಸಾಕ್ಷಿಯನ್ನು ಅರಿತು ಕೂಡ ಅರಿಯದಂತೆ ಇದ್ದಾಗ ಎಲ್ಲವೂ ಬಯಲಾಗಿ ಹೋಗುತ್ತದೆ ಎನ್ನುತ್ತಾರೆ ಸಿದ್ಧರಾಮೇಶ್ವರರು.
No comments:
Post a Comment