ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ !
ಘಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ !
ತನ್ನನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರ
TRANSLITERATION
GaLigeya bETava mADiheneMba pariya nODA !
tannanikki nidhAnava sAdhisiheneMdaDe
binnANa tappittu guhESvara
CLICK HERE TO HEAR IT:
TRANSLATION
sAsiveyaShTu (the size of a mustard seed)suKakke (for the pleasure of ) sAgaradaShTu(ocean of) duHKa(suffering) nODA(you see) !
GaLigeya(the moment’s) bETava(pleasure of senses) mADiheneMba(working for) pariya(the way of) nODA (you see)!
Tannanikki(giving up oneself) nidhAnava(wealth) sAdhisiheneMdaDe(if one achieves)
binnANa(beauty – of truth) tappittu(is lost) guhESvara(Lord Guheshvara)
For the pleasure of the size of a mustard seed, an ocean of suffering, you see!
Amazing how one works for the moment’s pleasure of senses!
Giving up one’s true self to achieve the moment’s pleasure, the true beauty (of the devotion, truth, God) is lost, Lord Guhesvara!
COMMENTARY
In this vachana, Allama Prabhu wonders how man goes through an ocean of suffering for a moment’s pleasure. He suggests that one should not ignore the permanent happiness of spiritual wealth, over the moment’s happiness of mundane wealth.
Our basic needs are food to maintain the body and health, and shelter and clothing to protect ourselves from the environment. But, none of us are ever satisfied with these basic needs and we always add on to our needs and wants. We strive to acquire the resources needed to satisfy these enhanced needs and wants. The moment we satisfy one, our list expands to the next higher need. We continue in this cycle of being unhappy with what we have, forever. Understanding the impermanence of happiness brought by the mundane wealth, is the prerequisite for one to start working towards spiritual wealth i.e. realizing the self and the lord within. Our true nature is the progress towards such spiritual success and happiness. We should not abandon that path in favor of momentary happiness of the worldly ways.
Let us downsize our needs and wants and move towards spiritual, permanent happiness!
KANNADA COMMENTARY
ಈ ವಚನದಲ್ಲಿ ಅಲ್ಲಮಪ್ರಭುಗಳು ಅಲ್ಪ ಸುಖಕ್ಕಾಗಿ ಮಾನವನು ಅತ್ಯಧಿಕ ದುಃಖವನ್ನು ಅನುಭವಿಸುತ್ತಾನೆ, ಅದಕ್ಕಾಗಿ ಅಮೂಲ್ಯವಾದ, ಶಾಶ್ವತವಾದ ಸುಖದ ಸೌಂದರ್ಯವನ್ನು ಕಡೆಗಣಿಸುತ್ತಾನೆ ಎಂಬುದನ್ನು ಹೇಳುತ್ತಾರೆ. ಸಾಸಿವೆಯಷ್ಟು ಸುಖಕ್ಕಾಗಿ ಆತನು ಸಾಗರದಷ್ಟು ದುಃಖವನ್ನು ಅನುಭವಿಸುತ್ತಾನೆ. ಕಷ್ಟವಾದರೂ ಸಹ ಒಂದು ಘಳಿಗೆಯ ಸುಖ ಪಡೆಯುತ್ತೇನೆ ಎನ್ನುತ್ತಾನೆ ಆತನು. ಆತನ ಈ ರೀತಿ ಆಶ್ಚರ್ಯ ಹುಟ್ಟಿಸುವಂತಿದೆ, ತಾನು ತನ್ನ ನೈಜ ಸ್ವರೂಪವನ್ನು ಮರೆತು ಧನ ಸಂಪತ್ತನ್ನು ಸಾಧಿಸುತ್ತೇನೆ ಎನ್ನುವವನು ಆ ಶಾಶ್ವತವಾದ ಸೌಂದರ್ಯದಿಂದ ವಂಚಿತನಾಗುತ್ತಾನೆ, ಎನ್ನುತ್ತಾರೆ.
ಈಗ ಸುಖವಿದೆ ಎನ್ನುಕೊಳ್ಳುತ್ತಿರುವಾಗಲೆ ಅದು ಮಾಯವಾಗಿ ದುಃಖ ನಮ್ಮನ್ನು ಆವರಿಸಿಕೊಳ್ಳುವುದು ನಾವು ನಮ್ಮ ಬದುಕಿನಲ್ಲಿ ಸಾಮಾನ್ಯವಾಗಿ ಅನುಭವಿಸುವ ವಿಷಯ. ಇದನ್ನು ತಿಳಿದೂ ಸಹ ನಾವು ಶಾಶ್ವತವಾದ ಸುಖ ಕಂಡುಕೊಳ್ಳುವುದರಕಡೆಗೆ ಗಮನ ಕೊಡದೆ ಅದೇ ಕ್ಷಣಿಕ ಸುಖಕ್ಕಾಗಿಯೇ ಹಾತೊರೆಯುತ್ತೇವೆ. ಒಂದು ಗಳಿಗೆಯ ಇಂದ್ರಿಯ ಸುಖಕ್ಕಾಗಿ ಏನೇನೋ ಉಪಾಯಗಳನ್ನು ಮಾಡುತ್ತದೆ ಮನಸ್ಸು. ಮಾನವನಿಗೆ ಮುಖ್ಯವಾಗಿ ಬೇಕಾಗಿರುವುದು, ಹೊಟ್ಟೆ ತುಂಬಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ, ಮಳೆ, ಚಳಿ ಮತ್ತು ಬಿಸಿಲುಗಳಿಂದ ರಕ್ಷಣೆ ಪಡೆಯಲು ಆಶ್ರಯ ತಾಣ ಮತ್ತು ವಸ್ತ್ರಗಳು. ಆದರೆ ಯಾರೂ ಕೇವಲ ಅಷ್ಟರಿಂದಲೇ ತೃಪ್ತರಾಗುವುದಿಲ್ಲ.
ಅಗತ್ಯವಿಲ್ಲದ ಅಗತ್ಯಗಳನ್ನು ಸ್ವತಃ ನಿರ್ಮಿಸಿ, ಅವುಗಳನ್ನು ಪಡೆಯಬೇಕೆಂಬ ಕೃತಕ ಒತ್ತಡವನ್ನು ತನ್ನ ಮೇಲೆ ತಾನೇ ಹೇರಿಕೊಂಡು, ಅದರಿಂದ ಸುಖ ಸಿಗುತ್ತದೆ ಎನ್ನುವ ಕುರುಡು ನಂಬಿಗೆಯೊಂದಿಗೆ, ಅವುಗಳನ್ನು ಸಂಪಾದಿಸುವುದರಲ್ಲಿ ನಿರಂತರವಾಗಿ ತೊಡಗಿ ಬಳಲುತ್ತದೆ ಮನಸ್ಸು. ಅವುಗಳು ದೊರೆತಾಗ ಉಂಟಾಗುವ ಸುಖ ಕ್ಷಣಭಂಗುರವಾದದ್ದು. ಏಕೆಂದರೆ ಒಂದು ಆಸೆ ನೆರವೇರಿದೊಡನೆ ಅದಕ್ಕಿಂತ ಹೆಚ್ಚಿನ ಆಸೆ ಆಗಲೆ ಮನದಲ್ಲಿ ಮೊಳಕೆಯೊಡೆಯುತ್ತದೆ ಮತ್ತು ಆ ಕ್ಷಣ, ಕೈಗೂಡಿದ ಆಸೆಯ ಸುಖ ಕ್ಷಯವಾಗುತ್ತದೆ, ಆ ಇನ್ನೊಂದಿಲ್ಲವಲ್ಲ ಎಂಬುವ ದುಃಖ ಕಾಡುತ್ತದೆ. ಇಲ್ಲಿ ಅಂಬಿಗರ ಚೌಡಯ್ಯನವರ “ ಬಡತನಕೆ ಉಂಬುವ ಚಿಂತೆ” ಎಂಬ ವಚನವನ್ನು ನೆನೆಯಬಹುದು. ಒಟ್ಟಿನಲ್ಲಿ ಪ್ರಾಪಂಚಿಕ ಸುಖ ತಾತ್ಕಾಲಿಕವಾದದ್ದು. ಆದರೂ ಸಹ ಅದರ ಹಿಂದೆಯೇ ಹೋಗುವ ಧಾವಂತ ನಮಗೆ. ಅದನ್ನು ಕಂಡು ಅಲ್ಲಮರ ಮನಸ್ಸು ಅಚ್ಚರಿಪಡುತ್ತದೆ.
ಈ ಸುಖದ ಕ್ಷಣಭಂಗುರತೆಯ ಆಳವಾದ ಅರಿವಾಗಿ ಅದರ ಬಗ್ಗೆ ವ್ಯಕ್ತಿಯಲ್ಲಿ ಸಹಜವಾಗಿ ವೈರಾಗ್ಯ ಮೂಡಬೇಕು. ಆಗ ಮಾತ್ರ ಅಧ್ಯಾತ್ಮದ ಕಡೆಗೆ ಮನಸ್ಸು ತಾನಾಗಿಯೇ ಹೋಗುತ್ತದೆ. ಆಗ ಮಾತ್ರ ಅಲ್ಲಿಯ ಶಾಶ್ವತವಾದ ಸುಖದ ಅನುಭವವಾಗಲು ಸಾಧ್ಯ. ಆದರೆ ಅದರ ಗಂಧವೂ ಇಲ್ಲದವರು ತಮ್ಮ ನಿಜವಾದ ಸ್ವರೂಪವನ್ನು ಮರೆತು ಕ್ಷಣಿಕವಾದ ಸುಖದಹಿಂದೆ ಓಡುವುದು ಸ್ವಾಭಾವಿಕ. ಆದರೆ ಸ್ವಾಭಾವಿಕ ಎಂದುಕೊಂಡು ಅದರಲ್ಲಿಯೇ ಮುಳುಗುವುದು ಎಷ್ಟು ಸರಿ? ಸಾಸಿವೆಯಷ್ಟು ಸುಖಕ್ಕೆ ಅನುಭವಿಸಬೇಕಾದ ದುಃಖ ಸಾಗರದಷ್ಟು ಎಂಬುದು ಎಲ್ಲರ ಅನುಭವಕ್ಕೆ ಬರುವ ವಿಷಯ. ಆದರೂ ಸಹ ಅದರ ಹಿಂದೆಯೇ ಏಕೆ ಈ ಮನಸ್ಸು ಓಡುತ್ತದೆ ಎಂದು ತಮ್ಮನ್ನು ತಾವು ಕೇಳಿಕೊಳ್ಳಬೇಕಾದದ್ದು ನ್ಯಾಯವಲ್ಲವೇ? ಇಲ್ಲದಿದ್ದರೆ ಅಂತಹವರು ಶಾಶ್ವತವಾದ ಸೌಂದರ್ಯ ಮತ್ತು ಸುಖದಿಂದ ವಂಚಿತರಾಗಿ ಉಳಿಯದೆ ಬೇರೆ ದಾರಿ ಇದೆಯೆ?.
No comments:
Post a Comment