PLEASE NOTE: THIS POST HAS 7 SECTIONS. IF YOU ARE NOT
FAMILIAR WITH KANNADA (THE LANGUAGE IN WHICH VACHANAS WERE COMPOSED
ORIGINALLY), SCROLL DOWN TO SECTIONS 5 AND 6.
1.
VACHANA IN KANNADA
ತತ್ವವ ನುಡಿವ ಹಿರಿಯರೆಲ್ಲರು
ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗ ಪಡುತ್ತಿದ್ದರು ನೋಡಾ
ನಿತ್ಯಾನಿತ್ಯವ ಹೇಳುವ ಹಿರಿಯರು
ತಮ್ಮ ಒಡಲ ಕಕ್ಕುಲತೆಗೆ ಹೋಗಿ.
ಭಕ್ತಿಯ ಹೊಲಬನರಿಯದ, ಜಡ ಜೀವಿ
ಮಾನವರ ಇಚ್ಛೆಯ ನುಡಿದು,
ಹಲಬುತಿಪ್ಪರು ನೋಡಾ!
ಕತ್ತೆಗೆ ಕರ್ಪೂರವ ಹೇರಿದಂತೆ
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ?
2.
TRANSLITERATION
tatvava
nuDiva hiriyarellaru
tuttnikkuvara
baagilalli, accugapaDuttiddaru nODaa!
nityaanityava
hELuva hiriyaru tamma oDala kakkulatege hOgi,
bhaktiya
holabanariyada jaDa jIvi maanavara icCeya nuDidu,
halabuttipparu
nODA!
kattege
karpoorava hEridaMte
avarige innettaNA muktiyO guhEshvaraa?
3.
RECITATION
4.
TRANSLATION
(WORDS)
tatvava
(principles of the dharma) nuDiva (speaking
of) hiriyarellaru (all the elders)
tuttnikkuvara
(those who provide food) baagilalli (at the door), accugapaDuttiddaru (worried)
nODaa (you see)!
nityaanityava
(eternal and the ephemeral) hELuva (saying) hiriyaru (the elders) tamma (of
their own) oDala (stomach) kakkulatege hOgi (for the worry of) ,
bhaktiya
(of devotion) holabanariyada (not
knowing the path) jaDa jIvi (inert) maanavara (humans) icCeya nuDidu (talking
of their interest),
halabuttipparu
nODA (feeling sorry you see)!
kattege
(the donkey) karpoorava (perfume) hEridaMte (like loading)
avarige (for those) innettaNA (when) muktiyO (liberation) guhEshvaraa?
5.
VACHANA
IN ENGLISH
All
those elders speaking of Righteousness,
are
at the doors of the providers of food, worried, you see!
The
elders speaking of the eternal and ephemeral, with the worry of their own
stomach, are
speaking to the interest of inert humans who are not aware of the path of
devotion and are feeling sorry, you see!
It
is like loading a donkey with perfumes!
When
will they attain liberation, Guhesvara?
6.
COMMENTARY
Allama Prabhu comments
on how the individuals, who have gained the knowledge of the principles of
righteousness and the awareness of the path of devotion, utilize that knowledge
to merely earning their living and filling their stomachs. He says, this is
like loading a donkey with perfume. The donkey carries a precious load, but is
never aware of how precious what it is carrying. Allama Prabhu questions as to
how such individuals ever gain liberation.
All these elders who
preach the principals of righteousness are at the doors of those who provide
them food. They are worried about filling their stomachs. Then there are elders
(experts) who speak of eternal and ephemeral. Their interest again is to fill their
stomach. They do not hesitate to speak to inert (ordinary) humans who have
never been exposed to the path of devotion, what they would like to hear.
The knowledge and
awareness gained by these elders has just become a way of earning a living.
They never internalized it. They never thought of following what they preach. They
are not interested in the eternal bliss.
We must gain the knowledge
needed to be the best in our careers and professions. We must gain the knowledge
that makes us devote human beings. The former brings us the worldly happiness
and the latter brings us the inner bliss. It will be great if we can preach
what we practice!
Let us not just say what others would like to hear!
7.
KANNADA COMMENTARY
ತತ್ವವ (ಧರ್ಮದ ಸಾರ) ನುಡಿವ ಹಿರಿಯರೆಲ್ಲರು
ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗ (ಮರುಕ) ಪಡುತ್ತಿದ್ದರು ನೋಡಾ
ನಿತ್ಯಾನಿತ್ಯವ ಹೇಳುವ ಹಿರಿಯರು
ತಮ್ಮ ಒಡಲ ಕಕ್ಕುಲತೆಗೆ (ಚಿಂತೆಗೆ)ಹೋಗಿ.
ಭಕ್ತಿಯ ಹೊಲಬನರಿಯದ (ಮಾರ್ಗವನ್ನರಿಯದ), ಜಡ ಜೀವಿ ಮಾನವರ ಇಚ್ಛೆಯ ನುಡಿದು,
ಹಲಬುತಿಪ್ಪರು (ದುಃಖ ಪಡುತ್ತಿದ್ದಾರೆ) ನೋಡಾ!
ಕತ್ತೆಗೆ ಕರ್ಪೂರವ ಹೇರಿದಂತೆ
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ?
ಜನರು ಹೇಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಧರ್ಮದ ಮಾತುಗಳನ್ನು
ಬಳಸುತ್ತಾರೆ ಎಂಬುದನ್ನು ಹೇಳುತ್ತ ಅಂತಹವರಿಗೆ ಮುಕ್ತಿ ಹೇಗೆ ದೊರೆಯಲು ಸಾಧ್ಯ ಎನ್ನುತ್ತಾರೆ
ಅಲ್ಲಮ ಪ್ರಭುಗಳು.
ಧರ್ಮದ ಸಾರವನ್ನು ಹೇಳುವ ಹಿರಿಯರಿಗೂ ಹೊಟ್ಟೆಯ ಚಿಂತೆಯಿದೆ. ಅವರು ತಮ್ಮ ಹೊಟ್ಟೆಯಪಾಡಿಗಾಗಿ
ಉಳ್ಳವರ ಬಾಗಿಲಲ್ಲಿ ನಿಂತು ತಮಗಾಗಿ ಮರುಕಪಡುತ್ತಿದ್ದಾರೆ. ಧರ್ಮದ ಸಾರವನ್ನು ಬೌದ್ಧಿಕವಾಗಿ
ತಿಳಿದುಕೊಂಡಿದ್ದರೂ ತಮಗಾಗಿ ಮರುಕ ಪಡುತ್ತಾರೆ. ತಾವು ತಿಳಿದುಕೊಂಡ ಧರ್ಮದ ಸಾರ ಅವರ ಸಹಾಯಕ್ಕೆ
ಬರದಾಗಿದೆ.
ಯಾವುದು ನಿತ್ಯ ಯಾವುದು ಅನಿತ್ಯ ಎಂದು ಹೇಳುವ ದೊಡ್ಡವರು ತಮ್ಮ ಹೊಟ್ಟೆಯ ಚಿಂತೆಗೆ
ಬಲಿಯಾಗಿ ಭಕ್ತಿ ಎಂದರೇನು ಎಂಬುದನ್ನು ತಿಳಿಯದ
ಜಡ ಜೀವಿಗಳಿಗೆ ಅವರು ತಮ್ಮ ಮನದಲ್ಲಿ ಏನನ್ನು
ಬಯಸುತ್ತಾರೆಯೋ ಅದನ್ನೇ ಹೇಳಿ ತಾವು ದುಃಖಪಡುತ್ತಿದ್ದಾರೆ ಮತ್ತು ಅವರ ದುಃಖವನ್ನೂ
ದೂರಮಾಡುತ್ತಿಲ್ಲ. ನಿತ್ಯ ಅನಿತ್ಯದ ಬಗ್ಗೆ ಹೇಳಿದರೂ ತಮ್ಮ ಅನಿತ್ಯವಾದ ಚಿಂತೆಯಿಂದ ಹೊರಬರಲು
ಅವರಿಗೆ ಸಾಧ್ಯವಾಗಿಲ್ಲ. ಭಕ್ತಿಯ ದಾರಿಯನ್ನರಿಯದ ಜಡಜೀವಿಗಳು ಎನ್ನುತ್ತಾರೆ ಸಾಮಾನ್ಯರನ್ನು.
ಏಕೆಂದರೆ ಭಕ್ತಿ ಇತರರಿಂದ ಕೇಳಿ ಮಾಡುವಂತಹುದಲ್ಲ. ಅದು ತಾನಾಗಿಯೇ ಸ್ಫುರಿಸಬೇಕು. ಭಕ್ತಿ
ಮಾಡುವುದು ಮತ್ತು ಮಾಡುವುದನ್ನು ಹೇಳುವುದು ಎರಡು ಅರ್ಥವಿಲ್ಲದವು. ಆದರೆ ಜನರು ಭಕ್ತಿಯ ವಿಷಯದಲ್ಲಿ ತಾವು ಜಡವಾಗಿದ್ದು, ಹೊಟ್ಟೆಯ ಪಾಡಿಗಾಗಿ ಈ ಮಾರ್ಗವನ್ನು
ಹಿಡಿದಿದ್ದಾರೆ. ತತ್ವವನ್ನು ಅರಿದವರಿಗೆ ತನುಗುಣಗಳು ಬಾಧಿಸುವುದಿಲ್ಲ. ಆದರೆ ಇಲ್ಲಿ ಹೊಟ್ಟೆಯ
ಚಿಂತೆ ಅವರನ್ನು ಕಾಡುತ್ತಿದೆ.
ಕತ್ತೆಯ ಮೇಲೆ ಕರ್ಪೂರವನ್ನು ಹೇರಿದರೆ ಏನು ಉಪಯೋಗ. ಅದಕ್ಕೆ ಕರ್ಪೂರದ ಬೆಲೆ ಅಥವಾ
ಅದರ ಸುವಾಸನೆಯ ಅರಿವು ಇಲ್ಲ. ಅದೇ ರೀತಿಯಾಗಿ ಇಂತಹ ಜನರು ಶಾಸ್ತ್ರಗಳನ್ನು ಓದಿ
ತಿಳಿದಿರುತ್ತಾರೆ. ಆದರೆ ಅದರ ನಿಜವಾದ ಬೆಲೆ, ಅರ್ಥ ತಿಳಿದಿರುವುದಿಲ್ಲ. ಅದು ಅವರ ಜೀವನದ ಆವಿಭಾಜ್ಯ ಅಂಗವಾಗಿರುವುದಿಲ್ಲ. ಅದು
ತಿಳಿದುಕೊಳ್ಳಬೇಕಾದ ಮಹತ್ವ ಪೂರ್ಣ ಅಂಶವಾಗಿರುತ್ತದೆ ಅಷ್ಟೆ. ಯಾವುದೋ ಕಾರಣಕ್ಕಾಗಿ ಅದನ್ನು ತಿಳಿದುಕೊಂಡು ಉಪಯೋಗಿಸಿದರೆ
ಅದರಿಂದ ಹೊಟ್ಟೆ ತುಂಬಬಹುದೆ ಹೊರತು ಮುಕ್ತಿ ದೊರೆಯಲಾರದು ಎನ್ನುತ್ತಾರೆ ಅಲ್ಲಮರು.
No comments:
Post a Comment