VACHANA IN
KANNADA
ಹೋಹ
ಬಟ್ಟೆಯಲೊಂದು ಮಾಯೆ ಇದ್ದುದ ಕಂಡೆ
ಠಾಣಾಂತರ
ಹೇಳಿತ್ತು, ಠಾಣಾಂತರ ಹೇಳಿತ್ತು
ಅಲ್ಲಿಗಲ್ಲಿಗೆ
ಅಲ್ಲಿಗಲ್ಲಿಗೆ ಅಲ್ಲಿಗಲ್ಲಿಗೆ!
ಗುಹೇಶ್ವರನ
ಕರಣಂಗಳು ಕುತಾಪಿಗಳು
TRANSLITERATION
hOha
baTTeyaloMdu maaye idduda kaMDe
ThaaNaaMtara
hELittu, ThaaNaaMtara hELittu
alligallige alligallige
alligallige!
guhEshvarana
karaNaMgaLu kutaapigaLu.
CLICK HERE
FOR A RECITATION:
TRANSLATION
(WORDS)
hOha
(tread up on) baTTeyaloMdu (in the path people) maaye idduda kaMDe (I saw the illusion being there )
ThaaNaaMtara
hELittu (shows the different place other
than The God), ThaaNaaMtara hELittu (shows the different place other than The God),
alligallige alligallige
alligallige! (there and there, to the attractions of senses)
guhEshvarana
(which are meant for knowing Guheshvara) karaNaMgaLu (the senses) kutaapigaLu (are troublesome)
VACHANA IN
ENGLISH
In the path
that people tread upon, I saw the illusion (Maaye)
It showed a
different place (other than God), It showed a different place
There and
there, There and there, There and there (to the attraction of senses)!
The senses
which are meant for knowing God Guhesvara are troublesome.
COMMENTARY
In this
cryptic Vachana, Allama Prabhu says that he sees Maaye (Illusion) in the path
common people tread upon, and the Maaye directs people to a path other than the
one that leads to realizing God. It forces people’s senses to be immersed in
materialistic, mundane worldly activities. People follow this altered path
willingly and happily. Allama Prabhu wonders how the senses that are meant to
take the individual towards God have become troublesome through the influence
of Maaye!
It is interesting
to examine the lives of Sharanas in light of this Vachana. Allama Prabhu had
reached the highest spiritual cliff. As a realized soul he was a Guru, Jangama
and considered the living Linga (God). Other Sharanas seem to be well within
the realm of worldly life. But, they practiced selfless service (Kaayaka) and
sharing (Daasoha), and considered everything they have is the blessing
(Prasaada) from God. They continued with their worldly kaayaka with the utmost
respect for it. They did not curb their senses, neither did they indulged in
them. This balanced approach to life is what they called ‘Kailasa’ the abode of
Shiva created here on Earth. This
Vachana is urging us to follow the spiritual path demonstrated by Sharanas. It
is urging us to be aware of the influences of our senses and the power they
have to dissuade us from the joy, freedom and bliss we can achieve!
Does it
mean that we should get away from what we have accomplished? Should we give up
all the comforts and gadgets? Should we
not enjoy our success? The answers lie
in realizing that no matter how successful we are, we are always burdened by
that irksome feeling that the success may vanish in a hurry. If we can rise to
the level of being equanimous in success and failure, then we will have
overcome the influence of Maaye (the illusion). Such equanimity will keep us in
the true path of realization! That equanimous path is not as glamorous as the
one that Maaye pushes us into. The
journey through it requires a subtle mindset!
Let us
not sway from the spiritual path!
KANNADA COMMENTARY
ಅರ್ಥ:
ಹೋಹ
(ಜನರು ಹೋಗುವ, ನಡೆಯುವ) ಬಟ್ಟೆಯಲೊಂದು (ದಾರಿಯಲ್ಲೊಂದು) ಮಾಯೆ ಇದ್ದುದ ಕಂಡೆ (ಮಾಯೆ
ಇರುವುದನ್ನು ಕಂಡೆ)
ಠಾಣಾಂತರ
ಹೇಳಿತ್ತು (ಶಿವ ಪಥವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗಲು ಹೇಳಿತ್ತು), ಠಾಣಾಂತರ ಹೇಳಿತ್ತು (ಶಿವ ಪಥವನ್ನು ಬಿಟ್ಟು ಬೇರೆ
ಸ್ಥಳಕ್ಕೆ ಹೋಗಲು ಹೇಳಿತ್ತು),
ಅಲ್ಲಿಗಲ್ಲಿಗೆ
ಅಲ್ಲಿಗಲ್ಲಿಗೆ ಅಲ್ಲಿಗಲ್ಲಿಗೆ!
(ಆಯಾ ವಿಷಯಗಳಲ್ಲಿಗೆ)
ಗುಹೇಶ್ವರನ
ಕರಣಂಗಳು (ಗುಹೇಶ್ವರನನ್ನು ಕಾಣಲು ಇರುವ ಇಂದ್ರಿಯಗಳು) ಕುತಾಪಿಗಳು (ಕಂಟಕಗಳಾಗಿವೆ)
ತಾತ್ಪರ್ಯ:
ಈ
ವಚನದಲ್ಲಿ ಅಲ್ಲಮಪ್ರಭುಗಳು ಮಾಯೆ ಹೇಗೆ ಇಂದ್ರಿಯಗಳನ್ನು ಬೇರೆಡೆಗೆ ಸೆಳೆದು ಜೀವನನ್ನುಶಿವ
ಪಥದಿಂದ ದೂರವಿಡುತ್ತದೆ ಎಂಬುದನ್ನು ಹೇಳುತ್ತಾರೆ.
ಜನರು ಸಾಮಾನ್ಯವಾಗಿ ತುಳಿಯುವ ಹಾದಿಯಲ್ಲಿ ಮಾಯೆಯನ್ನು ಕಂಡೆ ಎಂದು ಹೇಳುತ್ತಾರೆ. ಇಲ್ಲಿ
ಒಂದು ವಿಷಯ ಗಮನಕ್ಕೆ ಬರುತ್ತದೆ. ಆ ದಾರಿಯಲ್ಲಿ ಹೋಗುವ ಜನರಿಗೆ ಅದರ ಅರಿವು ಉಂಟಾಗುವುದಿಲ್ಲ.
ಆದರೆ ಅನುಭಾವಿಗಳಾದ ಅಲ್ಲಮರಿಗೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಜನರು ಮಾಯೆ ತೋರಿದ
ಹಾದಿಯಲ್ಲಿ ಸಾಗುತ್ತಿದ್ದಾರೆ. ಆ ಮಾಯೆಯೋ ಶಿವನನ್ನು ಕಾಣುವ ದಾರಿಯನ್ನು ಬಿಟ್ಟು ಬೇರೆಯದೇ ದಾರಿ
ತೋರುತ್ತದೆ. ಜೀವ ಮಾಯೆ ಹೇಳಿದಂತೆಯೆ ಮಾಡುತ್ತದೆ.
ಏಕೆಂದರೆ, ಶಿವ ಪಥದಲ್ಲಿ ಥಳುಕಿಲ್ಲ. ಅದು ಮಹಾನ್ ಸಾತ್ವಿಕವಾಗಿ ಸದಾ ಮರೆಯಲ್ಲಿರುವಂತಹುದು,
ಸೂಕ್ಷ್ಮವಾದದ್ದು. ಮಾಯೆ ಥಳುಕಿನ ರೂಪವನ್ನು
ತೋರಿ ಜೀವನನ್ನು ಆಕರ್ಷಣೆಗೆ ಒಳಗು ಮಾಡುತ್ತದೆ. ಆಯಾ ಇಂದ್ರಿಯಗಳಿಗೆ ಆಯಾ ರೀತಿಯ
ಆಕರ್ಷಣೆಗಳನ್ನು ತೋರುತ್ತದೆ. ಆ ಜೀವನನ್ನು ಅಲ್ಲಲ್ಲಿಯೇ ನಿಂತು ಹೋಗುವಂತೆ ಅಥವಾ ಅದೇ ದಾರಿಯಲ್ಲಿ
ಇನ್ನೂ ಹೆಚ್ಚಿನ ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತದೆ. ಆಯಾ ಇಂದ್ರಿಯಗಳು ತಮ್ಮ ತಮ್ಮ
ವಿಷಯಗಳಲ್ಲಿ ಸುಖವಿದೆ ಎಂದು ನಂಬುವಂತೆ ಮಾಡುತ್ತದೆ. ಆ ಭ್ರಮೆಗೆ ಸಿಕ್ಕು ಜೀವ ದೇವನನ್ನು,
ಶಾಶ್ವತ ಸುಖವನ್ನು ಕಡೆಗಣಿಸುತ್ತದೆ.
ಮೂಲಭೂತವಾಗಿ
ದೇವನನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಇಂದ್ರಿಯಗಳು ತಮ್ಮ ಚಂಚಲತೆಗೆ ಒಳಗಾಗಿ
ದೇವನನ್ನು ಸಂಪೂರ್ಣವಾಗಿ ಮರೆಯುತ್ತವೆ. ಅವುಗಳ ಈ ಚಂಚಲ ಬುದ್ಧಿಯೇ ಅವುಗಳನ್ನು ಜೀವನಿಗೆ ಕಂಟಕಗಳನ್ನಾಗಿ
ಮಾಡಿದೆ. ಮಾಯೆಯ ಆಕರ್ಷಣೆಗೆ ಪಕ್ಕಾಗಿ ಇಂದ್ರಿಯಗಳು ಜೀವನನ್ನು ಭೌತಿಕ ಜೀವನದ ನರಕಕ್ಕೆ
ತಳ್ಳುತ್ತವೆ. ಈ ಮಾಯೆಯ ಭ್ರಮೆಯನ್ನು ಅರಿತು ಅದರಿಂದ ಬಿಡಿಸಿಕೊಂಡರೆ ಲಿಂಗವನ್ನು ಸ್ವಾಯತ
ಮಾಡಿಕೊಳ್ಳಬಹುದು.
ಇಲ್ಲಿ
ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಭೌತಿಕ
ಜೀವನವು ನರಕವೇ? ನಾವೆಲ್ಲ ಸುಖವಾಗಿಯೇ
ಇದ್ದೇವಲ್ಲ. ಶಾಶ್ವತವಾದ ಸುಖವಾವುದು? ಇತ್ಯಾದಿ.
ಮೇಲ್ನೋಟಕ್ಕೆ
ನಮ್ಮ ಬದುಕು ಸುಖಮಯವಾಗಿ ಕಂಡರೂ, ನನ್ನ ಈ ಸುಖ ಎಲ್ಲಿ ಕಳೆದು ಹೋಗುವುದೋ ಎನ್ನುವ (ಸಾಧಾಣವಾಗಿ
ಗಮನಕ್ಕೆ ಬಾರದ) ಭಯದ ನರಕದಲ್ಲಿ ನಾವು ಬದುಕುತ್ತೇವೆ. ನಮಗೆ ತಿಳಿಯದೆಯೇ ಆ ಭಯ ನಮ್ಮನ್ನು ಪೂರ್ತಿಯಾಗಿ
ಆವರಿಸಿಕೊಂಡಿದೆ. ಅದಕ್ಕಾಗಿಯೇ ನಾವು ನಮ್ಮೆಲ್ಲ ಸುಖ ಸಾಧನಗಳಿಗೆ ಗಟ್ಟಿಯಾಗಿ ಕಚ್ಚಿಕೊಂಡಿದ್ದೇವೆ. ಆ ಎಲ್ಲ ಸುಖ ಸಾಧನಗಳು ಇಲ್ಲದೇ ಹೋದಾಗಲೂ ಸಹ
ಶಾಂತಿಯಿಂದಿರುವ ಕಲೆಯನ್ನು ಕರಗತ ಮಾಡಿಕೊಂಡವನು ಶಾಶ್ವತ ಸುಖ ಪಡೆಯುತ್ತಾನೆ. ಅದನ್ನು ಗಳಿಸುವ
ಮಾರ್ಗವೇ ಶಿವ ಪಥ. ಆ ಪಥದಲ್ಲಿ ಅಡ್ಡಿ ಉಂಟುಮಾಡುವ ಇಂದ್ರಿಯಗಳೇ ಕುತಾಪಿಗಳು.
We are always given two choices-the right one and the wrong one, one leads to God and the other to Maya, led by Maya. As the vachana says at the end, by His grace you can take the right path. How do you tell people the प्रसाद-पन्चामृत- चरणामृत -the fruits and the sweets are all from Him, you offer them to back to Him and then accept it as His prasad!
ReplyDeleteWhat is yours is your ego, and that is very hard to see by yourself and even harder to get rid of and accept the Truth. How does one get the equanimity of the Sharanas? By His grace, by getting rid of your ignorance, and seeing the light...We struggle and We hope and We Try. The ego makes the w in the We bigger!
Thanks for the weekly reminders. I try...
Meera