ಹಬ್ಬಗಳೆಲ್ಲ ಉಬ್ಬುಬ್ಬಿ ಲಿಂಗದ ಹಬ್ಬಕ್ಕೆ ಬಂದಬ್ಬರವ ನೋಡಾ!
ಲಿಂಗದ ಹಬ್ಬ ನಿಮ್ಮ ಬಾಯಿಗೆ ಒಬ್ಬಿಯಲ್ಲದೆ ನಿಮ್ಮ ಜನನಕ್ಕೆ ಹಬ್ಬವೇನೋ?
ಕಬ್ಬಿಲ ಮಬ್ಬುಳ್ಳ ಕೊಬ್ಬಿಗರಿರಾ!
ಕಪಿಲಸಿದ್ಧಮಲ್ಲಿಕಾರ್ಜುನನರಿಯದಿರ್ದೆಡೆ?
TRANSLITERATION
habbagaLella ubbubbi liMgada habbakke baMdabbbarava nODaa!
liMgada habba nimma baayige obbiyallade nimma jananakke habbavEnO?
kabbila mabbuaLLa kobbigariraa!
kapilasiddhamallikaarjunanariyadirdeDe?
CLICK HERE TO READ-ALONG:
TRANSLATION (WORDS)
habbagaLella (all the festivals) ubbubbi (swollen, heightened, enhanced) liMgada (for God’s) habbakke (festival) baMdabbbarava ( have come with extravaganza) nODaa! (you see)
liMgada (God’s) habba (festival) nimma (your) baayige ( to your tongue) obbiyallade (other than sweet meet)
nimma( to your) jananakke (birth) habbavEnO? (is it a festival) kabbila mabbuaLLa (dense headed) kobbigariraa!( hauteur, haughty people!)
kapilasiddhamallikaarjunanariyadirdeDe? (if you don’t become aware of kapilasiddhamallikaarjuna)
TRANSLATION
With all the heightened excitement and festivities, look how extravagant these God’s festivals have become!
God’s festival has just become a sweet meet for your tongue, rather than a festival of your birth!
Oh! Dense headed hauteur!
(what good is it) if you don’t become aware of Lord Kapilasiddha Mallikaarjuna?
COMMENTARY
From this Vachana of Siddarameswara, it is apparent that even in the twelfth century, people celebrated festivals with lot of excitement and extravaganza. The extravagance has taken a much higher level now a days. We spend a lot of money and time on these festivals. We build bigger and bigger idols; our processions get larger and more elaborate; we block city streets to conduct these festivities; we fight to prove that our idol is bigger or more beautiful than other’s. We do all this in the name of God, but we forget Him completely. Siddarameswara says that these festivals have become a means of devouring sweet meets to keep our tongues satisfied. He questions if we ever celebrate festival of our birth. That means awareness of god should become the festival of our life to gain freedom from the cycle of life and death. He uses fairly harsh words in calling one a dense headed hauteur, if he/she just celebrates these festivals without becoming aware of the God.
The word ‘Kabbila’ means ‘hunter’. A hunter typically spends all his time in hunting animals. He boasts about how large or fierce an animal he killed. He feeds on the animals he hunts and does not think of anything else until the next day or the time his hunger propels him to hunt again. Siddrameswara compares people who simply celebrate festivals without becoming aware of God, to such hunters.
Celebrations and festivities are not wrong by any means. But, concentrating on the extravagance to show off what we have or what we can do; celebrating to prove one is superior to others; just following the rituals in the name of celebrating the God; etc. are not useful. What is most important is the awareness of God and striving to find Him within.
Let us always be aware of what we are celebrating!
KANNADA COMMENTARY
ಈ ವಚನವನ್ನೋದಿ ಹನ್ನೆರಡನೆಯ ಶತಮಾನದಲ್ಲಿಯೂ ಇಂದಿನಂತೆಯೇ ಜನರು ಹಬ್ಬಗಳನ್ನು ಶ್ರೀಮಂತಿಕೆಯ ಕೊಬ್ಬಿನಿಂದ, ವಿಜೃಂಭಣೆಯಿಂದ ಆಚರಿಸುತ್ತಿದ್ದರೆಂದು ತಿಳಿದು ಬರುತ್ತದೆ. ಈಗೀಗಂತೂ ಈ ಸಂಪ್ರದಾಯದ ಹಾವಳಿ ಅತಿಯಾಗಿದೆ. ಹಿಂದೆ ಅದಕ್ಕೆ ಬಡತನದ ಕಡಿವಾಣವಿತ್ತು. ಇಂದು ದುಡ್ಡಿನ ಅಬ್ಬರದೊಂದಿಗೆ ಹಬ್ಬಗಳ ಆಬ್ಬರವೂ ಹೆಚ್ಚಾಗಿದೆ. ಅಂತಹ ಅಬ್ಬರದ ಆಚರಣೆಯಿಂದ ಉಂಟಾಗುವ ಲಾಭವೇನೂ ಇಲ್ಲವೆಂದು ತಿಳಿಸುತ್ತಿದ್ದಾರೆ ಈ ವಚನದಲ್ಲಿ ಸಿದ್ಧರಾಮರು.
“ಹಬ್ಬಗಳೆಲ್ಲ ಉಬ್ಬುಬ್ಬಿ” ಎಂದರೆ ಜನರು ಹಬ್ಬಗಳನ್ನು ಉಬ್ಬುಬ್ಬಿ ಉತ್ಸಾಹದಿಂದ ಅತಿ ಹಿಗ್ಗಿನಿಂದ ಆಚರಿಸುತ್ತಾರೆ. ಲಿಂಗದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಹಬ್ಬಗಳನ್ನು ಅಬ್ಬರದಿಂದ ಆಡಂಬರದಿಂದ ಆಚರಿಸುತ್ತಾರೆ. ಇಂತಹ ಹಬ್ಬಗಳಿಂದ ಏನು ಪ್ರಯೋಜನವೆಂದು ಕೇಳುತ್ತಾರೆ. ಅವು “ಬಾಯಿಗೆ ಒಬ್ಬಿ” ಅಷ್ಟೆ. ಹಬ್ಬಗಳ ನೆಪದಲ್ಲಿ ಒಬ್ಬಟ್ಟು ತಿನ್ನಲು ದೊರೆಯುತ್ತದೆ. ನಾಲಗೆಯ ಚಪಲ ತಾತ್ಕಾಲಿಕವಾಗಿ ತೀರುತ್ತದೆ (ಹೆಚ್ಚುತ್ತದೆ). ಅದಕ್ಕಿಂತ ಹೆಚ್ಚಿನ ಲಾಭವೇನೂ ಇಲ್ಲ. ಹಬ್ಬಗಳ ಉದ್ದೇಶವಷ್ಟೇಯೆ? ಲಿಂಗ ಪೂಜೆ ಅಥವಾ ದೇವರ ಆಡಂಬರದ ಪೂಜೆಯೇ ಗುರಿ. ಅಷ್ಟೆಯೆ? ಹೋಳಿಗೆ ಮಾಡಿ ತಿನ್ನುವುದೇ ಏಕೈಕ ಉದ್ದೇಶವೆ? ಎಂದು ನಮ್ಮನ್ನೇ ನಾವು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ ಸಿದ್ಧರಾಮರು. ಹಬ್ಬಗಳ ಉದ್ದೇಶ ಅಷ್ಟೆಯಾದರೆ ಅದಕ್ಕೆ ಪೂಜೆಯ ನೆಪವೇಕೆ? ಹಾಗೆಯೇ ಹೋಳಿಗೆ ಮಾಡಿಕೊಂಡು ತಿಂದು ಬಾಯಿಯ ಚಪಲ ತೀರಿಸಿಕೊಳ್ಳಬಹುದಲ್ಲ? ಆದರೆ ಸಾಮಾನ್ಯವಾಗಿ ಜನರು ಹಬ್ಬಕ್ಕೇ ಹೋಳಿಗೆ ಮಾಡುತ್ತಾರೆ ಮತ್ತು ಅಂದು ಪೂಜೆ ಮುಖ್ಯವಾಗಿರುತ್ತದೆ. ಅಂದರೆ ಅದಕ್ಕೇನೋ ಹೆಚ್ಚಿನ ಅರ್ಥವಿರಬೇಕು? ಅದು ಯಾವುದು? ಅದನ್ನೇ ಮುಂದೆ “ ನಿನ್ನ ಜನನಕ್ಕೆ ಹಬ್ಬವೇನೋ” ಎಂದು ಕೇಳುವುದರಮೂಲಕ ನಮ್ಮ ಗಮನ ಆ ಕಡೆಗೆ ಹೋಗುವಂತೆ ಮಾಡುತ್ತಾರೆ. ಜನನಕ್ಕೆ ಹಬ್ಬವೆಂದರೇನು? ನಾವು ದೇವರನ್ನು ಪೂಜಿಸುವುದು ನಮ್ಮ ಜನ್ಮಕ್ಕೆ
ಹಬ್ಬವಾಗಬೇಕು. ಅಂದರೆ ಅದರಿಂದ ನಾವು ಹುಟ್ಟು ಸಾವಿನ ಚಕ್ರದಿಂದ ಹೊರಬರಬೇಕು ಎನ್ನುವ ಅರ್ಥ. ಆಗ ಅದು ನಿಜವಾದ ಹಬ್ಬವಾಗುತ್ತದೆ, ನಿಜವಾದ ಪೂಜೆಯಾಗುತ್ತದೆ. ಅಂದರೆ, ಆ ಪೂಜೆ ನಮಗೆ ಜ್ಞಾನೋದಯದ ಸಾಧನವಾಗಬೇಕು. ಆಗ ಅದು ನಿಜವಾದ ಹಬ್ಬವಾಗುತ್ತದೆ. ಇಲ್ಲದಿದ್ದರೆ “ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ” ಆಗುತ್ತದೆ. ಈ ಅರ್ಥಬರುವ ಮಾತನ್ನು ಮಾತ್ರ ಹೇಳಿ ನಿಲ್ಲಿಸುವುದಿಲ್ಲ ಸಿದ್ಧರಾಮರು. ಈ ರೀತಿಯಾಗಿ ಹಬ್ಬಗಳನ್ನು ಆಡಂಬರದಿಂದ ಆಚರಿಸಿ ತೃಪ್ತರಾಗಿ ಉಬ್ಬಿಹೋಗುವವರನ್ನು ಕುರಿತು “ಕಬ್ಬಿಲ ಮಬ್ಬುಳ್ಳ ಕೊಬ್ಬಿಗರಿರಾ” ಎಂದು ಹೇಳುತ್ತಾರೆ. ಕಬ್ಬಿಲ ಅಂದರೆ ಬೇಡ. ಬೇಡನು ಸದಾ ಬೇಟೆಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆಯಲ್ಲಿರುತ್ತಾನೆ. ಅದೇ ಆತನ ಜೀವನದ ಗುರಿಯಾಗಿರುತ್ತದೆ. ಒಳ್ಳೆಯ ಬೇಟೆಯಾಡಿ ಚೆನ್ನಾಗಿ ತಿಂದು, ತಾನು ಮಾಡಿದ ಕೆಲಸದಿಂದ “ನಾನು ಇಂತಿಂತಿಹ ಪ್ರಾಣಿಯನ್ನು ಹೀಗೆ ಹೀಗೆ ಬೇಟೆಯಾಡಿದೆ” ಎಂದುಕೊಂಡು ತೃಪ್ತನಾಗಿ ಕೊಬ್ಬುವುದೇ ಆತನ ಪರಿ. ಅದನ್ನು ಬಿಟ್ಟು ಬೇರೆ ಯಾವುದರ ಕಡೆಗೂ ಆತನ ಮನಸ್ಸು ಹೋಗುವುದಿಲ್ಲ. ಆತನ ಬುದ್ಧಿಗೆ ಮಬ್ಬು ಕವಿದಿರುತ್ತದೆ. ದೇವರ ಹೆಸರಿನಲ್ಲಿ ಆಡಂಬರದ ಪೂಜೆಮಾಡಿ ಹೋಳಿಗೆಯನ್ನು ಮೆದ್ದು ಸಂತಸದಲ್ಲಿ ಮುಳುಗಿರುವವರು ಸಹ ಆತನಂತೆಯೇ,ಆತನಲ್ಲಿ ಮತ್ತು ಬೇಡನಲ್ಲಿ ಯಾವ ಅಂತರವೂ ಇಲ್ಲ ಎಂದು ಹೇಳುವುದರ ಮೂಲಕ ನಮ್ಮ ತಪ್ಪನ್ನು ಸ್ಪಷ್ಟವಾಗಿ ತೋರಿಸಿ ಕೊಡುತ್ತಿದ್ದಾರೆ. ಕಪಿಲಸಿದ್ಧಮಲ್ಲಿಕಾರ್ಜುನನ್ನು ಅರಿಯದೆ ಕೇವಲ ಹಬ್ಬಗಳ ಆಡಂಬರಗಳಲ್ಲಿ ಮುಳುಗಿದ್ದರೆ ನಾವು ಕೊಬ್ಬಿದ, ಕೇವಲ ಹೊಟ್ಟೆ ತುಂಬಿಸಿಕೊಳ್ಳುವ, ನಾಲಗೆ ಚಪಲ ತೀರಿಸಿಕೊಳ್ಳುವ ಮಬ್ಬು ಕವಿದ ಬೇಟೆಗಾರನಂತೆ ಎಂದು ಹೇಳುತ್ತಾರೆ ಸಿದ್ಧರಾಮೇಶ್ವರರು. ಬೇಡನ ಬುದ್ಧಿಗೆ ಮಬ್ಬು ಕವಿದಿರುವ ಕಾರಣ ಆತನಿಗೆ ತಾನು ಮಾಡುತ್ತಿರುವ ಹಿಂಸೆ ತಪ್ಪೆಂದು ತೋರುವುದಿಲ್ಲ. ಅದೇ ರೀತಿಯಾಗಿ ಪೂಜೆ ಮಾಡುವವನಿಗೆ ಆಡಂಬರದ ಹೆಸರಿನಲ್ಲಿ ನಡೆಸುವ ಪ್ರಾಕೃರ್ತಿಕ ಹಾನಿಯ ಕಡೆಗೆ, ಅಂತಹ ಪೂಜೆಯ ನಿರರ್ಥಕತೆಯ ಕಡೆಗೆ ಗಮನ ಹರಿಯುವುದಿಲ್ಲ. ಇಬ್ಬರಿಗೂ ತಾವು ಮಾಡುತ್ತಿರುವುದು ಸರಿ ಎಂಬ ಮಬ್ಬು ಕವಿದಿರುತ್ತದೆ.

No comments:
Post a Comment