Saturday, December 21, 2013

Vachana 173: Nelada Mareya Nidhaanadante – Like the Treasure Hidden in the Earth


VACHANA IN KANNADA

ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯ ಬಾರದು

TRANSLITERATION
nelada mareya nidhaanadaMte
phalada mareya ruciyaMte
shileya mareya hEmadaMte
tilada mareya tailadaMte
marada mareya tEjadaMte
bhaavada mareya brahmavaagippa
cennamallikaarjunana nilavanaarU ariya baaradu.
CLICK HERE FOR A RECITATION


TRANSLATION (WORDS)
nelada  (in earth) mareya (hidden/ unseen)  nidhaanadaMte (like the  treasure)
phalada (in a fruit)  mareya  (hidden/unseen) ruciyaMte (like sweetness)
shileya  (in the rock) mareya  (hidden/unseen) hEmadaMte (like gold)
tilada (in  sesame seed)  mareya (hidden/ unseen)  tailadaMte (like oil)
marada (in the tree)  mareya  (hidden/ unseen) tEjadaMte (like fire)
bhaavada  (in the feeling) mareya (hidden/unseen)  brahmavaagippa (that truth)
cennamallikaarjunana  (of Chennamallikaarjuna) nilavanaarU  (being) ariya baaradu (is almost impossible to understand/ is  difficult to understand).
VACHANA IN ENGLISH
Like the treasure hidden in the Earth
Like the sweetness hidden in the fruit
Like the Gold hidden in the rock
Like the oil hidden in the sesame seed
Like the fire hidden in the wood
The Truth is hidden in the feeling!
It is difficult to understand the being of the Divine Chenna Mallikaarjuna!

COMMENTARY

In this Vachana, Akka Mahaadevi emphasizes that the being of the Divine is very difficult to understand and it can only be felt. She uses several similes to drive the point home.
The treasure (minerals, oil, etc.) is hidden in the Earth. It cannot be seen by the superficial observation.  Gaining the knowledge of what is hidden where and how deep and excavating is needed to unearth the treasure.
The sweetness of the fruit can only be experienced. No amount of description by others can convey how sweet the fruit is and what that sweetness is.
The Gold is hidden in the rocks. One has to break the rocks, powder them and filter the Gold out of that powder. This calls for not only an extreme effort, but a good knowledge of how to distinguish between the Gold and the rock.
 The oil is hidden in the sesame seed. The seed need to be crushed to extract the oil. One needs to know how to crush and might have to utilize tools and assistance from others.
We can produce the fire by rubbing one piece of wood against the other. We should know the technique and need to put the effort to see the fire. We need to also be ready to lose the wood that produced the fire.
To understand the being of the Divine, awareness, knowledge and great effort is needed. The being can only be felt by such a devotee. It cannot be explained by others.
It is interesting that Akka is using so many similes to illustrate the concept of the being of the Divine. A close examination of each of these similes indicates what is expected of a devotee to understand His being. The devotee should cultivate awareness (the awareness that the treasure is hidden in the Earth), the intense curiosity  (not be satisfied with the description of others of the sweetness of the fruit), the effort and care (effort to powder the stone and care to not lose even a small strand of Gold in it), collaboration (with tools and knowledegeble people to crush the seed to extract oil), and finally the sacrifice (to sacrifice the wood that generated the fire).

Let us make an all-out effort to invite Him into our feelings!

KANNADA COMMENTARY
ನೆಲದ ಮರೆಯ ನಿಧಾನದಂತೆ (ಭೂಮಿಯ ಮರೆಯಲ್ಲಿ ಅಡಗಿರುವ ನಿಢಿಯಂತೆ)
ಫಲದ ಮರೆಯ ರುಚಿಯಂತೆ (ಹಣ್ಣಿನ ಮರೆಯಲ್ಲಿ ಇರುವ ರುಚಿಯಂತೆ)
ಶಿಲೆಯ ಮರೆಯ ಹೇಮದಂತೆ (ಕಲ್ಲಿನ ಮರೆಯಲ್ಲಿ ಅಡಗಿರುವ ಚಿನ್ನದಂತೆ)
ತಿಲದ ಮರೆಯ ತೈಲದಂತೆ (ಎಳ್ಳಿನ ಮರೆಯಲ್ಲಿ ಅಡಗಿರುವ ಎಣ್ಣೆಯಂತೆ)
ಮರದ ಮರೆಯ ತೇಜದಂತೆ  (ಮರದ ಮರೆಯಲ್ಲಿ ಅಡಗಿರುವ ಅಗ್ನಿಯಂತೆ)
ಭಾವದ ಮರೆಯ ಬ್ರಹ್ಮವಾಗಿಪ್ಪ  (ಭಾವದಲ್ಲಿ ಅಡಗಿರುವ ಬ್ರಹ್ಮನಂತೆ)
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯ ಬಾರದು (ಇರುವ ಚೆನ್ನ ಮಲ್ಲಿಕಾರ್ಜುನನ್ನು ಯಾರೂ ತಿಳಿದುಕೊಳ್ಳಲು ಬರುವುದಿಲ್ಲ)


ಇದು  ಅಕ್ಕಮಹಾದೇವಿಯ ವಚನ. ಇಲ್ಲಿ ಅಕ್ಕ ಮಹಾದೇವಿ ಆ ಪರವಸ್ತುವಿನ ಇರವು ಹೇಗಿದೆ ಎನ್ನುವುದನ್ನ್ನು ಅನೇಕ ಉದಾಹರಣೆಗಳ ಮೂಲಕ ಹೇಳುತ್ತಿದ್ದಾಳೆ.
’ನೆಲದ ಮರೆಯ ನಿಧಾನದಂತೆ’ ಎಂದು ಹೇಳುತ್ತಾಳೆ ಮೊದಲಿಗೆ. ಭೂಮಿಯ ಒಳಗೆ ನಮ್ಮ ಕಣ್ಣಿಗೆ ಕಾಣದೆಹೋದರೂ ನಿಧಿ ಅಡಗಿರುತ್ತದೆ. ಅದು ಮೇಲು ನೋಟಕ್ಕೆ ಕಾಣದೆ ಹೋದರೂ ಒಳಗೆ ಅಡಗಿರುತ್ತದೆ. ಅದನ್ನು ಶ್ರಮವಹಿಸಿ ಹುಡುಕ ಬೇಕು. ಅದೆಲ್ಲಿ ಇದೆ, ಎಷ್ಟು ಆಳದಲ್ಲಿ ಹುದುಗಿದೆ, ಎಂದು ನಮಗೆ ತಿಳಿದು ಬರುವುದಿಲ್ಲ. ಆದರೆ ಅದು ತನ್ನ ಪಾಡಿಗೆ ತಾನಿರುತ್ತದೆ. ಹುಡುಕಿದವರಿಗೆ ಸಿಗುತ್ತದೆ.
”ಫಲದ ಮರೆಯ ರುಚಿಯಂತೆ’ ಎಂದು ಹೇಳುವಲ್ಲಿ ಆ ಪರವಸ್ತುವಿನ ಇನ್ನೊಂದೇ ತೆರನ ಗುಣ ತಿಳಿಯುತ್ತದೆ. ಇಲ್ಲಿ ಹಣ್ಣು ಎದುರಿಗೆ ಕಾಣುತ್ತಿದೆ. ಕಣ್ಣಿಗೆ ಕಾಣುವ ಆ ಹಣ್ಣಿಗೆ ಒಂದು ರುಚಿಯಂತೂ ಇರಲೇ ಬೇಕು. ಆದರೆ ಅದನ್ನು ತಿಂದು ಅನುಭವಿಸುವವರೆಗೆ ಅದರ ರುಚಿ ಎಂತಹುದು ಎಂಬುದು ಯಾರಿಗೂ ತಿಳಿಯುವುದಿಲ್ಲ. ಅದನ್ನು ಅನುಭವಿಸಿದವರು, ಅದನ್ನು ನಾನಾ ರೀತಿಯಾಗಿ ವರ್ಣಿಸಬಹುದು. ಅದು ಜೇನಿನಂತೆ, ಬೆಲ್ಲದಂತೆ, ಸಕ್ಕರೆಯಂತೆ,  ಸಿಹಿಯಾಗಿದೆ ಎಂದು ಎಂದು ಅದರ ಸವಿಯನ್ನು ವರ್ಣಿಸ ಬಹುದು.  ಆದರೆ ಅವರ ಈ ಮಾತುಗಳಲ್ಲಿ ಯಾವುದು ನಿಜ? ಅಥವಾ ಅದು ಈ ಎಲ್ಲದರಗಿಂತ ಬೇರೆಯಾದ ರುಚಿ ಇದೆಯೇ ಎಂಬುದು ತಾನು ತಿಂದು ಅನುಭವಿಸಿದ ಮೇಲೆಯೇ ತಿಳಿಯುವುದು. ಅಲ್ಲಿಯವರೆಗೂ ಅದು ನಮ್ಮಿಂದ ಮರೆಯಾಗಿರುತ್ತದೆ.

’ಶಿಲೆಯ ಮರೆಯ ಹೇಮದಂತೆ’. ಕಲ್ಲಿನಲ್ಲಿ ಬಂಗಾರ ಕಣಕಣ ವಾಗಿ  ಅಡಗಿಕೊಂಡಿರುತ್ತದೆ. ಯಾವಾಗಲೋ ಒಂದೊಂದು ಸಲ ಮಾತ್ರ ಹೊಳೆಯುತ್ತದೆ. ಅದನ್ನು ಗುರುತಿಸಿ ಶ್ರಮವಹಿಸಿ ಆ ಕಲ್ಲನ್ನು ಕುಟ್ಟಿ ಪುಡಿಮಾಡಿ ಶೋಧಿಸಿ ತೆಗೆದಾಗ ಅದು ದೊರೆಯುತ್ತದೆ. ಇಲ್ಲದಿದ್ದರೆ ಇಲ್ಲ. ಆ ಪರವಸ್ತುವೂ ಅಷ್ಟೆ, ಯಾವಾಗಲಾದರೊಮ್ಮೆ ಹೊಳೆದು ಮಾಯವಾಗುವ ಅದನ್ನು ಗುರುತಿಸಿ ಶ್ರಮಪಟ್ಟಾಗ ಅದು ದೊರೆಯುವ ಸಾಧ್ಯತೆ ಇರುತ್ತದೆ.

’ತಿಲದ ಮರೆಯ ತೈಲದಂತೆ’. ಇಲ್ಲಿ ಅಕ್ಕನು ಆ ಪರವಸ್ತು ಎಳ್ಳಿನ ಮರೆಯಲ್ಲಿ ಅಡಗಿದ ಎಣ್ಣೆಯಂತೆ ಇದೆ ಎನ್ನುತ್ತಾಳೆ. ಎಳ್ಳನ್ನು ನೋಡಿದಾಗ ಅದು ಕಣ್ಣಿಗೆ ಕಾಣುವುದಿಲ್ಲ. ಅದರೆ ಅದನ್ನು ಗಾಣದಲ್ಲಿ ತಿರುವಿದಾಗ ಎಣ್ಣೆ ಸಿಗುತ್ತದೆ. ಅಂದರೆ ಅದನ್ನು ಪಡೆಯಲು ತಾನು ಶ್ರಮ ಪಡುವುದಲ್ಲದೆ ಇತರರ ಎಂದರೆ ಗಾಣದ, ಎತ್ತುಗಳ ಸಹಯೋಗದ ಅವಶ್ಯಕತೆಯೂ ಇದೆ ಎನ್ನುವುದನ್ನು ಸೂಚಿಸುತ್ತಿದ್ದಾಳೆ.

’ಮರದ ಮರೆಯ ತೇಜದಂತೆ’ ಎಂದು ಹೇಳುವಲ್ಲಿ ಮರದಲ್ಲಿ ಅಡಗಿರುವ ಅಗ್ನಿಯನ್ನು ಪಡೆಯಲು ಮರವನ್ನು ಘರ್ಷಿಸಬೇಕಾಗುತ್ತದೆ ಮತ್ತು ಆ ಕ್ರಿಯೆಯಲ್ಲಿ ಮರವು ಭಸ್ಮವಾಗುತ್ತದೆ ಎಂಬ ಭಾವವಿದೆ.

’ಭಾವದ ಮರೆಯ ಬ್ರಹ್ಮವಾಗಿಪ್ಪ’  ಎಂದು ಹೇಳಿ ಆ ಪರವಸ್ತುವು ಕೊನೆಗೆ ಭಾವದಲ್ಲಿ  ಅಡಗಿ ಹೋಗುತ್ತದೆ ಎನ್ನುತ್ತಾಳೆ. ಅದು ಇನ್ನು ಬೇರೆ ಯಾವ ರೀತಿಯಲ್ಲಿಯೂ ತೋರಿಸಲು, ಹೇಳಲು, ವರ್ಣಿಸಲು ಬರುವುದಿಲ್ಲವೆಂದು ಹೇಳುತ್ತಾಳೆ.

ಇಲ್ಲಿ ಒಂದು ಪ್ರಶ್ನೆ ಹುಟ್ಟುತ್ತದೆ. ಆ ಪರವಸ್ತು ಯಾವ ರೀತಿ ಇದೆ ಎನ್ನುವುದಕ್ಕೆ ಏಕೆ ಇಷ್ಟೊಂದು ಉದಾಹರಣೆಗಳನ್ನು ಕೊಡಬೇಕು. ಯಾವುದಾದರು ಒಂದು ಉದಾಹರಣೆ ಸಾಲುತ್ತಿರಲಿಲ್ಲವೆ? ಎಂದು. ಆದರೆ ಇಲ್ಲಿಯ ಒಂದೊಂದನ್ನೂ ಸೂಕ್ಶ್ಮವಾಗಿ ಗಮನಿಸಿದಾಗ ಅದರ ಔಚಿತ್ಯ ಗೊತ್ತಾಗುತ್ತದೆ. ಅದು, ನೆಲದ  ನಿಧಿ, ಹಣ್ಣಿನ ರುಚಿ, ಕಲ್ಲಿನಲ್ಲಿರುವ ಚಿನ್ನ, ಎಳ್ಳಿನಲ್ಲಿರುವ ಎಣ್ಣೆ, ಮತ್ತು ಮರದಲ್ಲಿ ಅಡಗಿರುವ ಅಗ್ನಿಯಂತೆ ಎಂದು ಹೇಳುತ್ತಾಳೆ.  ನೆಲದ ಮರೆಯ ನಿಧಾನವನ್ನು ಪಡೆಯಲು ಅದರ ಬಗ್ಗೆ ಏನೂ ತಿಳಿಯದಿದ್ದರೂ ಅದು ಇದೆ ಎನ್ನುವ ಬಗ್ಗೆ ಶ್ರದ್ಧೆ ಇರಬೇಕಾಗುತ್ತದೆ.  ಫಲದ ಮರೆಯಲ್ಲಿರುವ, ನಾನಾ ಜನರು ನಾನಾ ರೀತಿಯಾಗಿ ವರ್ಣಿಸುವ ಹಣ್ಣಿನ ರುಚಿಯು ಹೇಗಿರಬಹುದೆಂಬ ಜಿಜ್ಞಾಸೆ ಇರಬೇಕು.  ಕಲ್ಲಿನ ಮರೆಯಲ್ಲಿ ಹೊಳೆಯುವ ಚಿನ್ನವನ್ನು ಪಡೆಯಲು ಬೇಕಾಗುವ ಶ್ರಮ ಮತ್ತು ಕಲ್ಲು ಒಡೆಯುವಾಗ ಅದರ ಒಂದು ಚಿಕ್ಕ ತುಂಡು ಹಾರಿ ಹೋದರೂ ಚಿನ್ನ ಕಳೆದುಹೋಗಬಹುದು ಎಂಬ ಎಚ್ಚರಿಕೆ ಇರಬೇಕು. ಎಳ್ಳಿನಲ್ಲಿ ಇರುವ ಎಣ್ಣೆಯನ್ನು ಪಡೆಯಲು ಗಾಣದ ಸಹಾಯ ಮತ್ತು ಎತ್ತುಗಳ ಸಹಯೋಗ ಬೇಕು. ಮತ್ತು ಕೊನೆಯದಾಗಿ  ಘರ್ಷಣೆಯಿಂದ ಮರದಲ್ಲಿರುವ ಅಗ್ನಿ ಹೊರಬಂದು ಆ ಮರವನ್ನೇ ಸುಡುವಂತೆ ತಾನು ಅವಲಂಬಿಸಿದವುಗಳನ್ನೇ ತ್ಯಜಿಸುವ ಗಟ್ಟಿತನ ಬೇಕು. ಈ ರೀತಿಯಾಗಿ  ಶ್ರದ್ಧೆ, ಜಿಜ್ಞಾಸೆ, ಎಚ್ಚರಿಕೆ, ಇತರರ ಸಹಯೋಗ ಮತ್ತು ನಿರಾವಲಂಬನೆಗಳು ಬೇಕಾಗುತ್ತವೆ. ಈ ಎಲ್ಲವೂ ಒಟ್ಟುಗೂಡಿದಾಗ ಆ ಪರವಸ್ತುವಿನ ಅನುಭವ ಆಗುವ ಸಾಧ್ಯತೆ ಇರಬಹುದು. ಅದು ಕೂಡ ಬಹಳ ಕಷ್ಟ ಎಂಬುದನ್ನು ಅಕ್ಕ ಹೇಳುತ್ತಿದ್ದಾಳೆ ಎನ್ನಿಸುತ್ತದೆ.


1 comment:

  1. Great explanation of the vachana. Especially the last part that gives the steps involved in gaining the Divine knowledge. These are marvelous vachanas and thanks for explaining them so well.

    ReplyDelete