VACHANA IN KANNADA
ಹೀಂಗೆ ಉದ್ದೇಶದಿಂದ ತನುವ ಒಣಗಿಸಿದರೆ
ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ,
ತನು ಒಣಗಿದರೇನಯ್ಯ? ಮನದ ಮಲಿನ ಹಿಂಗದು.
ಮನದ ಮಲಿನ ಹಿಂಗದನ್ನಕ್ಕರ
ಭವ ಹಿಂಗಿತ್ತೆಂಬ ಭಂಡರನೇನೆಂಬೆನಯ್ಯ?
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ.
iMdriya nigrahava maaDi viShayaMgaLa baMdhisi
aatmaMge baMdhanava maaDidare, aatma drOhakaaNi bhO,
hIMge uddEshadiMda tanuva oNagisidare
hasiya marana taridu bisilige haakidaMte,
tanu oNagisidarEnayya? manada malina hiMgadu.
manada malina hiMgadannakkara
bhava hiMgitteMba bhaMDaranEneMbenayya?
mahaliMgaguru shiva siddhEshvara prabhuve.
TRANSLATION (WORDS)
iMdriya (the sense organs) nigrahava maaDi (controlled) viShayaMgaLa baMdhisi (imprisoning senses)
aatmaMge baMdhanava maaDidare (if made the soul a prisoner)
aatma drOha kaaNi bhO (it is deceiving the self you see),
hIMge (in this way) uddEshadiMda (with a purpose) tanuva (the body) oNagisidare (if punished)
hasiya marana (a living fresh tree) taridu (cutting) bisilige (in the sun) haakidaMte (like spreading),
tanu oNagisidarEnayya? ( what if the body is punished) manada malina hiMgadu (the polluted mind doesn’t become pure).
manada malina hiMgadannakkara (till the polluted mind doesn’t get purified)
bhava (the cycle of birth and death) hiMgitteMba (has ended) bhaMDaranEneMbenayya (what can I say about such impudents)?
mahaliMgaguru shiva siddhEshvara prabhuve (Mahalingaguru Shivasiddheshvara Prabhuve).
VACHANA IN ENGLISH
If sense organs are controlled, senses are imprisoned and the soul is made a prisoner,
It is deceiving the Self, you see!
Thus, if the body is punished on purpose,
It is like cutting the fresh living tree and spreading it in Sunshine!
Sir! Just by punishing the body, the polluted mind doesn’t become pure!
What shall I call these impudents who claim their cycle of birth and death has ended,
Without the polluted mind getting purified?
Oh, Mahalingaguru Shivasiddheshvara Prabhuve!
Let us not depend on just body and mind bending to reach the Divine!
KANNADA COMMENTARY
ಅರ್ಥ:
ಇಂದ್ರಿಯ ನಿಗ್ರಹವ ಮಾಡಿ (ಇಂದ್ರಿಯಗಳನ್ನು ಬಲವಂತದಿಂದ ವಶದಲ್ಲಿರಿಸಿ) ವಿಷಯಂಗಳ ಬಂಧಿಸಿ (ವಿಷಯೇಂದ್ರಿಯಗಳನ್ನು ಕಟ್ಟಿಹಾಕಿ)
ಆತ್ಮಂಗೆ ಬಂಧನವ ಮಾಡಿದರೆ (ಆತ್ಮವನ್ನು ಕಟ್ಟಿಹಾಕಿದರೆ)
ಆತ್ಮ ದ್ರೋಹ ಕಾಣಿಭೋ,(ಅದು ಆತ್ಮಕ್ಕೆ ದ್ರೋಹಮಾಡಿದಂತೆ)
ಹೀಂಗೆ ಉದ್ದೇಶದಿಂದ ತನುವ ಒಣಗಿಸಿದರೆ (ಹೀಗೆ ಉದ್ದೇಶಪೂರ್ವಕವಾಗಿ ದೇಹವನ್ನು ದಂಡಿಸಿದರೆ)
ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ,
ತನು ಒಣಗಿದರೇನಯ್ಯ? ಮನದ ಮಲಿನ ಹಿಂಗದು.(ದೇಹ ಬಳಲಿ ಬಡಕಲಾಗುತ್ತದೆ, ಆದರೆ ಮನದಲ್ಲಿಯ ಮಾಲಿನ್ಯ ಹಾಗೆಯೇ ಇರುತ್ತದೆ)
ಮನದ ಮಲಿನ ಹಿಂಗದನ್ನಕ್ಕರ (ಮನಸ್ಸಿನಲ್ಲಿಯ ವಿಷಯವಾಸನೆಗಳು ಮಾಯವಾಗದಿರುವಾಗ)
ಭವ ಹಿಂಗಿತ್ತೆಂಬ ಭಂಡರನೇನೆಂಬೆನಯ್ಯ? (ಅವರಿಗೆ ಭವದ ಆಸೆ ಇಲ್ಲವೆಂದು ಹೇಳುವ ಭಂಡರನ್ನು ಏನೆನೆನ್ನಲಿ?)
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ.
ತಾತ್ಪರ್ಯ:
ಅರಿವಿನ ಕುರುಹನರಿಯದೆ ತನುವ
ಕರಗಿಸಿ ಮನವ ಬಳಲಿಸಿದರೆ ಏನು ಪ್ರಯೋಜನವೋ?
ಇಂದ್ರಿಯ ನಿಗ್ರಹವ ಮಾಡಿ ವಿಷಯಂಗಳ ಬಂಧಿಸಿ
ಆತ್ಮಂಗೆ ಬಂಧನವ ಮಾಡಿದರೆ, ಆತ್ಮ ದ್ರೋಹ ಕಾಣಿಭೋ,ಹೀಂಗೆ ಉದ್ದೇಶದಿಂದ ತನುವ ಒಣಗಿಸಿದರೆ
ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ,
ತನು ಒಣಗಿದರೇನಯ್ಯ? ಮನದ ಮಲಿನ ಹಿಂಗದು.
ಮನದ ಮಲಿನ ಹಿಂಗದನ್ನಕ್ಕರ
ಭವ ಹಿಂಗಿತ್ತೆಂಬ ಭಂಡರನೇನೆಂಬೆನಯ್ಯ?
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ.
TRANSLITERATION
arivina kuruhanariyade
tanuva karagisi manava baLalisidare Enu prayOjana?iMdriya nigrahava maaDi viShayaMgaLa baMdhisi
aatmaMge baMdhanava maaDidare, aatma drOhakaaNi bhO,
hIMge uddEshadiMda tanuva oNagisidare
hasiya marana taridu bisilige haakidaMte,
tanu oNagisidarEnayya? manada malina hiMgadu.
manada malina hiMgadannakkara
bhava hiMgitteMba bhaMDaranEneMbenayya?
mahaliMgaguru shiva siddhEshvara prabhuve.
CLICK HERE FOR A RECITATION
aarivina (of awareness)
kuruhanariyade (without understanding the symbol, icon)
tanuva (the body) karagisi (by punishing) manava
(the mind) baLalisidare (if you tire)
Enu prayOjana (what is the use)?iMdriya (the sense organs) nigrahava maaDi (controlled) viShayaMgaLa baMdhisi (imprisoning senses)
aatmaMge baMdhanava maaDidare (if made the soul a prisoner)
aatma drOha kaaNi bhO (it is deceiving the self you see),
hIMge (in this way) uddEshadiMda (with a purpose) tanuva (the body) oNagisidare (if punished)
hasiya marana (a living fresh tree) taridu (cutting) bisilige (in the sun) haakidaMte (like spreading),
tanu oNagisidarEnayya? ( what if the body is punished) manada malina hiMgadu (the polluted mind doesn’t become pure).
manada malina hiMgadannakkara (till the polluted mind doesn’t get purified)
bhava (the cycle of birth and death) hiMgitteMba (has ended) bhaMDaranEneMbenayya (what can I say about such impudents)?
mahaliMgaguru shiva siddhEshvara prabhuve (Mahalingaguru Shivasiddheshvara Prabhuve).
Without gaining the awareness of the icon,
If one punishes the body and tires the mind, what is the use?If sense organs are controlled, senses are imprisoned and the soul is made a prisoner,
It is deceiving the Self, you see!
Thus, if the body is punished on purpose,
It is like cutting the fresh living tree and spreading it in Sunshine!
Sir! Just by punishing the body, the polluted mind doesn’t become pure!
What shall I call these impudents who claim their cycle of birth and death has ended,
Without the polluted mind getting purified?
Oh, Mahalingaguru Shivasiddheshvara Prabhuve!
COMMENTARY
In this Vachana Thontada Siddalinga Swamigalu is again emphasizing the
importance of gaining awareness of the Divine and purifying the mind as the
only way to realize Self. He stresses that no amount of rituals and excessive disciplining
of the body and mind would take us to the divine and free us from the cycle of
birth and death.
The Guru has provided us with an icon along with the knowledge of what it
stands for and has directed us as to how see past the icon and realize what it
stands for, and use it as a mirror to see the Self. In our efforts to do so, we
become victims of various types of rituals and practices. We fast and put our
body through lot of hardship, and exhaust (tire) our mind. We try to control
our desires by controlling our sense organs and imprison our soul. It is very
natural to have desires. However when we study the nature of these desires, understand
how and what role they have on our mind, these desires become less and less and
even stop naturally. The Vachana says that without this awareness it is like
cutting a live tree and spreading it in the Sun. The exterior of the tree dries
up, but the interior stays green. Our practices punish the body and tire the
mind, but our awareness level still stays green and immature. The Vachana
implores such routine practices and says that we can never escape from the
cycle of birth and death (ups and downs of this mortal world) unless we gain
the awareness of the Divine, i.e. travel within!
ಅರ್ಥ:
ಅರಿವಿನ (ಜ್ಞಾನದ, ಎಚ್ಚರದ)
ಕುರುಹನರಿಯದೆ (ಚಿಹ್ನೆ ಎಂಬುದನ್ನು ಅರಿಯದೆ)
ತನುವ ಕರಗಿಸಿ (ದೇಹವನ್ನು ದಂಡಿಸಿ)
ಮನವ ಬಳಲಿಸಿದರೆ (ಮನಸ್ಸನ್ನು ಶಿಕ್ಷೆಗೆ ಒಡ್ಡಿದರೆ) ಏನು ಪ್ರಯೋಜನವೋ?ಇಂದ್ರಿಯ ನಿಗ್ರಹವ ಮಾಡಿ (ಇಂದ್ರಿಯಗಳನ್ನು ಬಲವಂತದಿಂದ ವಶದಲ್ಲಿರಿಸಿ) ವಿಷಯಂಗಳ ಬಂಧಿಸಿ (ವಿಷಯೇಂದ್ರಿಯಗಳನ್ನು ಕಟ್ಟಿಹಾಕಿ)
ಆತ್ಮಂಗೆ ಬಂಧನವ ಮಾಡಿದರೆ (ಆತ್ಮವನ್ನು ಕಟ್ಟಿಹಾಕಿದರೆ)
ಆತ್ಮ ದ್ರೋಹ ಕಾಣಿಭೋ,(ಅದು ಆತ್ಮಕ್ಕೆ ದ್ರೋಹಮಾಡಿದಂತೆ)
ಹೀಂಗೆ ಉದ್ದೇಶದಿಂದ ತನುವ ಒಣಗಿಸಿದರೆ (ಹೀಗೆ ಉದ್ದೇಶಪೂರ್ವಕವಾಗಿ ದೇಹವನ್ನು ದಂಡಿಸಿದರೆ)
ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ,
ತನು ಒಣಗಿದರೇನಯ್ಯ? ಮನದ ಮಲಿನ ಹಿಂಗದು.(ದೇಹ ಬಳಲಿ ಬಡಕಲಾಗುತ್ತದೆ, ಆದರೆ ಮನದಲ್ಲಿಯ ಮಾಲಿನ್ಯ ಹಾಗೆಯೇ ಇರುತ್ತದೆ)
ಮನದ ಮಲಿನ ಹಿಂಗದನ್ನಕ್ಕರ (ಮನಸ್ಸಿನಲ್ಲಿಯ ವಿಷಯವಾಸನೆಗಳು ಮಾಯವಾಗದಿರುವಾಗ)
ಭವ ಹಿಂಗಿತ್ತೆಂಬ ಭಂಡರನೇನೆಂಬೆನಯ್ಯ? (ಅವರಿಗೆ ಭವದ ಆಸೆ ಇಲ್ಲವೆಂದು ಹೇಳುವ ಭಂಡರನ್ನು ಏನೆನೆನ್ನಲಿ?)
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ.
ತಾತ್ಪರ್ಯ:
ಇಲ್ಲಿ ಸಿದ್ಧಲಿಂಗ ಸ್ವಾಮಿಗಳು
ಮನಸ್ಸು ಮಾಗದೆ ಇದ್ದಾಗ ಬಲವಂತವಾಗಿ ಇಂದ್ರಿಯಗಳನ್ನು ತುಳಿದಿಟ್ಟು ತಮಗೆ ಭವದ ಆಸೆ
ಇಲ್ಲವೆಂದು ಹೇಳುವಂತಹ ಭಂಡರನ್ನು ಕುರಿತು ಹೇಳುತ್ತಿದ್ದಾರೆ.
ಕುರುಹಿನ ನಿಜವಾದ
ಅರ್ಥವನ್ನು ತಿಳಿದುಕೊಳ್ಳದೆ, ಅರ್ಥವಿಲ್ಲದ ಆಚಾರಕ್ಕೆ ಮಹತ್ವ ಕೊಟ್ಟು ದೇಹವನ್ನು ದಂಡಿಸುತ್ತಾರೆ ಜನರು, ಉಪವಾಸ, ವ್ರತ, ನಿಯಮಗಳನ್ನು
ಪಾಲಿಸುತ್ತಾರೆ. ಕುರುಹಿನ ಪೂಜೆ ನಾನಾ ರೀತಿಯಲ್ಲಿ ಮಾಡುವುದರಲ್ಲಿ, ವ್ರತಗಳನ್ನು
ಪಾಲಿಸಿವುದರಲ್ಲಿ ತನುವನ್ನು ಬಳಲಿಸುತ್ತಾರೆ. ಇದರಿಂದ ಮನಸ್ಸು ಬಳಲುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಿ ಅವುಗಳ ಆಸೆಗಳನ್ನು
ಹತ್ತಿಕ್ಕಿ ಆತ್ಮವನ್ನೇ ಬಂಧನದಲ್ಲಿರಿಸುತ್ತಾನೆ. ಇದು ಆತ್ಮದ್ರೋಹ ಎನ್ನುತ್ತಾರೆ
ಸಿದ್ಧಲಿಂಗರು.. ಇಂದ್ರಿಯಗಳು ವಿಷಯಗಳಿಗೆ ಹರಿಯುವುದು ಸಹಜ. ಅವುಗಳ ಸಹಜಗುಣವನ್ನು ಅರಿತುಕೊಳ್ಳಬೇಕು.
ಅವು ಹಾಗೇಕೆ ಮಾಡುತ್ತವೆ, ಎಂಬುದನ್ನು
ಗಮನಿಸಿದಾಗ, ಅದರಲ್ಲಿ ಮನಸ್ಸಿನ ಪಾತ್ರ ಏನು, ಎಷ್ಟು ಎನ್ನುವುದನ್ನು ಅರ್ಥಮಾಡಿಕೊಂಡಾಗ
ಇಂದ್ರಿಯಗಳು ಹೊರಗೆ ಹರಿಯುವುದನ್ನು ಬಿಟ್ಟು ಬಿಡುತ್ತವೆ.ಎಂದರೆ, ಇಂದ್ರಿಯಗಳು ತಮಗೆ ಹಿಂದೆ ಆದ
ಅನುಭವದಿಂದ , ಅಥವಾ ಯಾವುದೋ ಒಂದು ಭ್ರಮೆಯಲ್ಲಿ ವಿಷಯಗಳಿಂದ ತನಗೆ ಸುಖ ಸಿಗುತ್ತದೆ ಎನ್ನುವ
ಕಲ್ಪನೆಯಿಂದ ಅವುಗಳನ್ನು ಬಯಸುತ್ತವೆ. ಅವುಗಳ ಆ
ಭಾವನೆ ಅಸತ್ಯವೆಂಬ ಆಳವಾದ ಜ್ಞಾನದಿಂದ ಅವುಗಳ
ಆಸೆ ತಾನಾಗಿಯೆ ನಿಂತುಹೋಗುತ್ತದೆ. ಅದನ್ನು ಬಿಟ್ಟು, ಅಂದರೆ ವಿಷಯಗಳ ಸುಖವೆಂಬುದು ಮಾನಸಿಕ
ಭ್ರಮೆ ಎನ್ನುವ ಜ್ಞಾನವನ್ನು ಗಳಿಸದೆ, ಅನೇಕ ಬಾಹ್ಯ ಆಚರಣೆಗಳಿಂದ, ನಿರರ್ಥಕವಾದ ವ್ರತ ನಿಯಮಗಳ
ಪಾಲನೆಯಿಂದ ತನು ಮನವನ್ನು ಬಳಲಿಸುತ್ತಾರೆ. ಈ
ರೀತಿ ಮಾಡುವುದು ಹಸಿಯ ಮರವನ್ನು ಕಡಿದು ತಂದು
ಬಿಸಿಲಿಗೆ ಹಾಕಿ ಒಣಗಿಸಿದಂತೆ ಎನ್ನುತ್ತಾರೆ ಸಿದ್ಧಲಿಂಗರು. ಅಂತಹ ಸಂದರ್ಭದಲ್ಲಿ ಆ ಮರ ಮೇಲೆ
ಮೇಲೆ ಒಣಗಿದಂತೆ ಕಂಡರೂ ಒಳಗೆ ಹಸಿಯಾಗಿಯೇ ಇರುತ್ತದೆ. ಅದೇ ರೀತಿ ಇಂತಹ ಜನರು ಮೇಲೆ
ವಿರಾಗಿಗಳಂತೆ ಕಂಡರೂ ಮನದಲ್ಲಿ ಇನ್ನೂ ಭೋಗದ ಲಾಲಸೆಗೆ ಒಳಗಾಗಿರುತ್ತಾರೆ. ಮನದ ಆಳದಲ್ಲಿ ಭೋಗದ
ಲಾಲಸೆಯನ್ನು ಇಟ್ಟುಗೊಂಡವರು ಮೇಲೆ ಮಾತ್ರ ತಾವು ಭವವನ್ನು ಬಿಟ್ಟವರು ಎಂದು ಹೇಳುವವರು ಭಂಡರು.
ಅಂತಹವರನ್ನು ಏನೆಂದ ಕರೆಯಬೇಕೆಂದು ಕೇಳುತ್ತಾರೆ ಸಿದ್ಧಲಿಂಗಸ್ವಾಮಿಗಳು.
No comments:
Post a Comment