VACHANA
IN KANNADA
ಆಕಾರವಿಲ್ಲದಾತಂಗೆ ಅಂಗವೆಂದೇಕೆ
ಕಲ್ಪಿಸಿ
ಹೇಳುವಿರಿ?
ಅದು
ಲಿಂಗಾನುಭವಿಗಳ
ದೃಷ್ಟಿಯೆ?
ಅಲ್ಲ,
ಬಿಡಾ
ಮರುಳೆ.ಮಮಕಾರವಿಲ್ಲದವಂಗೆ ಮಾನಿನಿಯರಿಬ್ಬರೆಂದೇನೋ?
ಮಾನಿನಿಯರಿಬ್ಬರಿಲ್ಲದಾತಂಗೆ, ಲೀಲಾ ಮಾಯಿಕದ ಸಂಸಾರದ ಕುರುಹೆಂದೇನೋ?
ನಾಮ ನಿರ್ನಾಮನಾದ ನಿರಾಲಂಬಿಗೆ, ನಾಮ ಸೀಮೆಯ ಕಲ್ಪಿಸಲುಂಟೆ?
ನಿಸ್ಸೀಮಂಗೆ ನಿರ್ವಿಕಲ್ಪಿತಂಗೆ ಕಲ್ಪಿತ ಉಂಟೆ?
ಕಲ್ಪಿತಕ್ಕೆ ತಂದು ಸತಿ ಸುತ ಸಂಸಾರ ಉಂಟೆಂಬ ಹೂಸಕಗರ ಮಾತ ಕೇಳಲಾಗದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.
TRANSLITERATION
aakaaravilladaataMge aMgaveMdEke kalpisi hELuviri?
adu
liMgaanubhavigaLa dRuShtiye? alla biDaa maruLe.mamakaarsavilladavaMge maaniniyaribbareMMdEnO?
maaniniyaribbarilladaataMge, lIlaa maayikada saMsaarada kuruheMdEnO?
naama nirnaamanaada niraalaMbige naama seemeya kalpisaluMTe?
nissImaMge nirvikalpitaMge kalpita uMTe?
kalpitakke taMdu sati suta samsara uMTeMba hUsakagara maata kELalaagadu kaaNaa
mahaaliMga guru shiva siddhEshvara prabhuve.
CLICK HERE FOR A RECITATION
TRANSLATION (WORDS)
aakaaravilladaataMge
(who doesn’t have a form) aMgaveMdEke(
has a body) kalpisi (imagine) hELuviri
(why do you say)?
adu
(that) liMgaanubhavigaLa (the one
who has experienced the God) dRuShtiye (is that the way of)? alla (no) biDaa maruLe. (leave it oh! fool)mamakaarsavilladavaMge (the one who doesn’t have any attachment) maaniniyaribbareMdEnO (can one say that he has two wives)?
maaniniyaribbarilladaataMge (the one who doesn’t have two wives)
lIlaa maayikada (game of illusion) saMsaarada (of the world) kuruheMdEnO (as a symbol)?naama nirnaamanaada (one without name) niraalaMbige (who doesn’t have or need any support)
naama (name) seemeya (limit) kalpisaluMTe (can you give him)?
nissImaMge (without boundaries) nirvikalpitaMge (doesn’t change) kalpita uMTe (can one give him forms in ones’ own imagination) ?
kalpitakke taMdu (imagining) sati (wife) suta (son) samsara (household) uMTeMba (saying he has)
hUsakagara (saying) maata (words) kELalaagadu kaaNaa (can’t listen to, you see)
mahaaliMga guru shiva siddhEshvara prabhuve (Mahalingaguru Shivasiddheshvara Prabhuve).
VACHANA
IN ENGLISH
He
doesn’t have a form – why do you imagine and say He has a body?
Is
that the way of the one who has experienced the Divine? No, Quit it oh! fool.He doesn’t have any attachments – why do you say he has two wives?
For the one who doesn’t have two wives, why create the symbol of the world’s game of illusion?
He is the one without a name, He doesn’t have or need any support – can one give a name and assign a boundary?
He is limitless (without boundaries), He doesn’t change – can one give him forms in one’s own imagination?
I can’t listen to the words of people who imagine and say He has a wife, son and household, you see!
Mahalingaguru Shivasiddheshvara Prabhuve!
COMMENTARY
In
this Vachana Thontada Siddalinga Swamigalu wonders why we imagine all sorts of
forms, activities, environment and boundaries for the God, while we know that
He is omnipresent, omniscient and omnipotent. He is formless. He does not
depend on anyone nor does He seek any support. He cannot be confined to a boundary-
he is everywhere. He does not have a family – He is the one and only. But, we imagine Him to be in our form. We
associate Him with wives and children just as we do. We say that He created
this world and the illusion associated with it as part of His game playing. Siddalinga Swamigalu says that this is not the
way of a true devotee, one who has experienced the Divine and one who has
realized Him. Granted, it is easier to visualize the Divine to be in our form.
But this visualization limits our ability to see beyond the icon. As we have
mentioned in previous posts, we should
go beyond the icon and realize
Him through the journey to within.
KANNADA
COMMENTARY
ಅರ್ಥ:ಆಕಾರವಿಲ್ಲದಾತಂಗೆ (ಆಕಾರವಿಲ್ಲದವನಿಗೆ) ಅಂಗವೆಂದೇಕೆ (ದೇಹವಿದೆ ಎಂದು) ಕಲ್ಪಿಸಿ (ಊಹಿಸಿ) ಹೇಳುವಿರಿ?
ಅದು ಲಿಂಗಾನುಭವಿಗಳ ದೃಷ್ಟಿಯೆ (ಲಿಂಗವನ್ನು ಅರಿತು ಅನುಭವಿಸಿದವರ ದೃಷ್ಟಿಯೆ)? ಅಲ್ಲ, ಬಿಡಾ ಮರುಳೆ .
ಮಮಕಾರವಿಲ್ಲದವಂಗೆ (ಯಾವುದೇ ರೀತಿಯ ಮೋಹವಿಲ್ಲವನಿಗೆ) ಮಾನಿನಿಯರಿಬ್ಬರೆಂದೇನೋ (ಇಬ್ಬರು ಹೆಂಡಿರು ಎಂದು ಹೇಳುವಿರಲ್ಲ)?
ಮಾನಿನಿಯರಿಬ್ಬರಿಲ್ಲದಾತಂಗೆ (ಇಬ್ಬರು ಹೆಂಡಿರು ಇಲ್ಲದವನಿಗೆ)
ಲೀಲಾ ಮಾಯಿಕದ (ಕ್ರೀಡೆಗಾಗಿ ಮಾಯೆಯಿಂದ ಕೂಡಿದ) ಸಂಸಾರದ ಕುರುಹೆಂದೇನೋ (ಸಂಸಾರವೆಂಬ ಕುರುಹು ಸೃಷ್ಟಿಸಿದನೇನು)?
ನಾಮ (ಹೆಸರು) ನಿರ್ನಾಮನಾದ (ಹೆಸರಿಲ್ಲದವನಾದ) ನಿರಾಲಂಬಿಗೆ (ಯಾವ ಆಲಂಬನೆ/ ಆಧಾರವಿಲ್ಲದೆ ಇರುವವನಿಗೆ)
ನಾಮ ಸೀಮೆಯ ಕಲ್ಪಿಸಲುಂಟೆ (ಆತನಿಗೊಂದು ಹೆಸರು, ಸೀಮೆಯನ್ನು ಕಲ್ಪಿಸಬಹುದೆ)?
ನಿಸ್ಸೀಮಂಗೆ ( ಸೀಮೆಯೇ ಇಲ್ಲದವನಿಗೆ) ನಿರ್ವಿಕಲ್ಪಿತಂಗೆ (ಯಾವ ಬದಲಾವಣೆಯೂ ಹೊಂದದವನಿಗೆ) ಕಲ್ಪಿತ ಉಂಟೆ (ನಾಮ ಸೀಮೆ, ಬದಲಾವಣೆಗಳನ್ನು ಊಹಿಸಬಹುದೆ)?
ಕಲ್ಪಿತಕ್ಕೆ ತಂದು ಸತಿ ಸುತ ಸಂಸಾರ ಉಂಟೆಂಬ (ಆತನಿಗೆ ಹೆಂಡತಿ, ಮಗ ಮತ್ತು ಸಂಸಾರ ಉಂಟೆಂದು)
ಹೂಸಕಗರ (ಊಹೆಯನ್ನು ಧರಿಸುವವರ) ಮಾತ ಕೇಳಲಾಗದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.
ತಾತ್ಪರ್ಯ:
ಈ
ವಚನದಲ್ಲಿ
ಸಿದ್ಧಲಿಂಗ
ಸ್ವಾಮಿಗಳು ಆಕಾರವಿಲ್ಲದ,
ನಿರ್ವಿಕಲ್ಪನಾದ
ಆ
ಪರವಸ್ತುವನ್ನು
ಮೂರ್ಖ
ಜನರು
ಹೇಗೆ
ತಮ್ಮ
ತಮ್ಮ
ಕಲ್ಪನೆಯಿಂದ
ನಾನಾವಿಧವಾಗಿ
ಊಹಿಸಿ
ಅನೇಕ
ನಾಮ
ಆಕಾರಗಳನ್ನು
ಕೊಡುತ್ತಾರೆ,
ಎಂಬುದನ್ನು
ಹೇಳುತ್ತಿದ್ದಾರೆ.
ಆಕಾರವಿಲ್ಲದವನಿಗೆ ದೇಹವಿದೆ
ಎಂದು
ಕಲ್ಪಿಸಿ
ಏಕೆ
ಹೇಳುತ್ತೀರಿ
ಎಂದು
ಕೇಳುತ್ತಾರೆ.
ಆ
ಪರವಸ್ತು
ನಿರಾಕಾರವಾದದ್ದು.
ನಿರಾಕಾರವಾದದ್ದಕ್ಕೆ
ಶರೀರವಿರಲು
ಹೇಗೆ
ಸಾಧ್ಯ?
ಇಲ್ಲದ್ದನ್ನು
ಇದೆ
ಎಂದು
ಏಕೆ
ಕಲ್ಪಿಸಿಕೊಳ್ಳಬೇಕು?
ಇದು
ಲಿಂಗವನ್ನು
ಅನುಭವಿಸಿ
ಅರಿತು
ಹೇಳುವಂತಹ
ಮಾತಲ್ಲ.
ಲಿಂಗದ
ಅನುಭವವಿಲ್ಲದವರು,
ಅರಿವು
ಇಲ್ಲದವರು,
ಇದನ್ನು
ಹೇಳುತ್ತಾರೆ.
ಮತ್ತು
ಮರುಳರು
ಅದನ್ನು
ನಂಬುತ್ತಾರೆ.
ಅಂತಹವರ
ಮಾತನ್ನು
ನಂಬಬಾರದು.ಲಿಂಗಕ್ಕೆ ಅಥವಾ ಆ ಪರವಸ್ತುವಿಗೆ ಮಮಕಾರವೇ ಇಲ್ಲ. ಅಂದರೆ ತನ್ನದು ಎನ್ನುವಂತಹದ್ದು ಏನೂ ಇಲ್ಲ. ಅದು ನನ್ನದು ತನ್ನದು ಎನ್ನುವ ಭಾವರಹಿತವಾದದ್ದು. ಅದಕ್ಕೆ ಯಾವ ರೀತಿಯ ಮೋಹವೂ ಇಲ್ಲ. ಅಂತಹವನಿಗೆ ಇಬ್ಬರು ಹೆಂಡಿರಿದ್ದಾರೆ ಎಂದು ಹೇಳುವುದು ಸರಿಯೆ? ಎಂದು ಕೇಳುತ್ತಾರೆ. ತಮಗೆ ಇಷ್ಟವಾದ ಅಥವಾ ತಿಳಿದ ಒಂದು ಆಕಾರವನ್ನು ಕಲ್ಪಿಸಿ ಅದನ್ನು ಆ ಪರವಸ್ತುವಿಗನ ಮೇಲೆ ಆರೋಪಿಸುತ್ತಾರೆ.
ಆತನು ಲೀಲೆಗಾಗಿ ಮಾಯೆಯಿಂದ ಕೂಡಿದ ಈ ಸಂಸಾರವನ್ನು ಸೃಷ್ಟಿಸಿದ, ಅದು ಆತನ ಕುರುಹು ಎಂದು ಏನೇನೋ ಹೇಳುತ್ತಾರೆ. ಹೆಸರೇ ಇಲ್ಲದವನಿಗೆ, ಯಾವ ಆಲಂಬನೆ ಅಥವಾ ಆಧಾರವೂ ಇಲ್ಲದವನಿಗೆ ಸೀಮೆಯನ್ನುಊಹಿಸಬಹುದೆ? ಯಾವುದೇ ಪರಿಮಿತಿಗೆ ಸಿಗದವನನ್ನು , ಎಂದಿಗೂ ಬದಲಾಗದವನನ್ನು, ಊಹೆಯಿಂದ ಏನೇನೋ ಕಲ್ಪಿಸಿಕೊಂಡು ಮನಸ್ಸಿಗೆ ಬಂದುದನ್ನು ಹೇಳಬಹುದೆ? ಮಾನವರಂತೆ ಅತನಿಗೂ ಮಡದಿ ಮಕ್ಕಳು ಇದ್ದಾರೆಂದು ಹೇಳುತ್ತಾರೆ ಜನರು. ತಾವು ಆತನನ್ನು ಅರಿತಿದ್ದೇವೆ ಎಂದು ತೋರಿಸಿಕೊಳ್ಳಬೇಕೆ ಎಂಬ ಜನರ ಆಸೆಯೇ ಅವರನ್ನು ಹೀಗೆ ಕೇಳಲು ಪ್ರೇರೇಪಿಸುತ್ತದೆ.
ಇದು ಸರಿಯೇ? ಎಂದು ಕೇಳುತ್ತಾರೆ ಸಿದ್ಧಲಿಂಗರು. ಇಲ್ಲದ ಸಲ್ಲದ ಕಲ್ಪನೆಯನ್ನು ಆರೋಪಿಸುವವರ ಮಾತು ಕೇಳಲಾಗದು , ಅಂತಹವರ ಮಾತುಗಳನ್ನು ನಂಬಲಾಗದು ಎಂದು ಹೇಳುತ್ತಾರೆ.
No comments:
Post a Comment