VACHANA IN KANNADA
ಅರಿದೆವರಿದೆವೆಂಬಿರಿ ಅರಿದ ಪರಿಯೆಂತು
ಹೇಳಿರೆ?
ಅರಿದವರು
ಅರಿದೆವೆಂಬರೆ?
ಅರಿಯಬಾರದ
ಘನವನರಿದವರು
ಅರಿಯದಂತಿಪ್ಪರು
ಗುಹೇಶ್ವರಾ.
TRANSLITERATION
aridevarideveMbiri arida pariyeMtu hELire?
aridavaru
arideveMbare?
ariyabaarada
ghanavaridavaru
ariyadaMtipparu guhEshvaraa.
CLICK
HERE FOR A RECITATION:
TRANSLATION
(WORDS)
aridevarideveMbiri
(you say you know) arida (came to know)
pariyeMtu (how) hELire (tell me) how you came to know)?
aridavaru
(people who know) arideveMbare (do they
say that they know)?
ariyabaarada
(which cannot be known) ghanavaridavaru (those who know the absolute )
ariyadaMtipparu
(will live as if they don’t know) guhEshvaraa (Guheshvara).
VACHANA
IN ENGLISH
You
say you know, would you tell me how you
came to know?
Do
people who know say that they know?
Those
who know the absolute which cannot be known
live
as if they don't know, Guhesvara!
COMMENTARY
Allama
Prabhu distinguishes between two types of individuals in this Vachana: those
who know and those who say that they know. He is referring to knowing the
absolute (Truth), the Divine. The absolute cannot be known. He does not have a
form; He cannot be felt; He cannot be seen. Those who know Him cannot even say
what he is. They are just Him. There is no duality of Him and Me in them. They
are one with Him. they cannot explain this state of awareness, neither they
feel like expressing that awareness. they don't feel the need for showing off to
others that they know the Absolute. On the other hand, there are people who
feel that they know the divine. They try to impress others of this divine
awareness. Allama prabhu says that those who are in this state are simply in
the illusion that they know. Their awareness is superficial! The only way to
know the Absolute is to be one with HIm.
Although
Allama Prabhu is referring to knowing the Divine in this Vachana, the message
of the Vachana is equally applicable to all aspects of our lives. Those who
have the complete knowledge of any aspect will not have a tendency to show off
their accomplishment. Thos who are half-way knowledgeable are the ones who feel
the need to attract others with their accomplishment! The pot that is full does
not spill the water when carried; a half full pot tends to spill readily!
Let
us make all out efforts to be full pots!
KANNADA COMMENTARY
ಅರಿದೆವರಿದೆವೆಂಬಿರಿ
(ಅರಿತುಕೊಂಡಿದ್ದೇವೆ ಎನ್ನುತ್ತೀರಿ) ಅರಿದ ಪರಿಯೆಂತು
ಹೇಳಿರೆ (ಅರಿದ
ರೀತಿಯನ್ನು ಹೇಳಿರಿ
ನೋಡೋಣ)?
ಅರಿದವರು
ಅರಿದೆವೆಂಬರೆ?
ಅರಿಯಬಾರದ
(ಅರಿಯಲು ಬರದ)
ಘನವನರಿದವರು (ಮಹತ್ತಾದುದನ್ನು
ಅರಿತವರು)
ಅರಿಯದಂತಿಪ್ಪರು
ಗುಹೇಶ್ವರಾ.
ಬರಿದೆ
ಅರಿದೆನೆಂದು ಹೇಳುವವರು
ಮತ್ತು ನಿಜವಾಗಿ
ಅರಿದವರು ಯಾವ
ರೀತಿಯಿರುತ್ತಾರೆ ಎಂಬುದನ್ನು
ಇಲ್ಲಿ ಹೇಳುತ್ತಿದ್ದಾರೆ
ಅಲ್ಲಮ ಪ್ರಭುಗಳು..
’ನಾನು
ಅರಿತಿದ್ದೇನೆ” ಎಂದು
ಹೇಳಿಕೊಳ್ಳುವವರನ್ನು ಕುರಿತು
ಅಲ್ಲಮಪ್ರಭುಗಳು “ಹೇಗೆ
ಅರಿತಿದ್ದೀರಿ” ಎಂದು ಕೇಳುತ್ತಾರೆ. ಏಕೆಂದರೆ ಆ ಪರತತ್ವ
ಕಣ್ಣಿಗೆ ಕಾಣದು,
ಕೈಗೆ ಸಿಕ್ಕದು.
ರೂಪ ಆಕಾರವಿಲ್ಲದ ಅದನ್ನು
ಕಾಣುವುದು. ಅರಿಯುವುದು ಸುಲಭವಲ್ಲ.
ನಾನು
ಅರಿತಿದ್ದೇನೆ ಎಂದು
ಯಾವುದೋ ಭ್ರಮೆಯಲ್ಲಿ
ಸಿಕ್ಕಿಕೊಳ್ಳುವುದು ಸಾಮಾನ್ಯ.
ಏಕೆಂದರೆ ನಮ್ಮ ಮನಸ್ಸು,
ವಿಚಾರಗಳ ಸುಳಿಯಲ್ಲಿ
ಸಿಕ್ಕಿಕೊಂಡು ಬಹು
ಬೇಗ ನಿರ್ಧಾರಕ್ಕೆ ಬರುವಂತಹುದು.
ನಾನು ಅರಿತಿದ್ದೇನೆ
ಎನ್ನುವುದು ಕೂಡ
ಇಂತಹ ಹುಸಿ
ನಿರ್ಧಾರವೇ ಆಗಿರುತ್ತದೆ. ಏಕೆಂದರೆ ಆ ಅರುಹನ್ನು
ಅರಿತು ಕೊಂಡು
ಅರಿತಿದ್ದೇನೆ ಎಂದು
ಹೇಳುವುದು ಸಾಧ್ಯವೇ
ಇಲ್ಲ. ಅದನ್ನು ನಿಜವಾಗಿ
ಅರಿತವರು ತಾವು
ಅದನ್ನು ಅರಿತಿದ್ದೇವೆ
ಎಂದು ಹೇಳುವುದೇ
ಇಲ್ಲ.
ಅದನ್ನು ಅರಿತಮೇಲೆ
ಅಲ್ಲಿ ದ್ವೈತಭಾವವಿರುವುದಿಲ್ಲ. ಎಂದರೆ “ನಾನು”
ಎಂಬುದು ಉಳಿಯುವುದಿಲ್ಲ.
ಅಂದಮೇಲೆ
ನಾನು ಅರಿತಿದ್ದೇನೆ
ಎಂಬ ಮಾತಿಗೆ ಅಲ್ಲಿ
ಸ್ಥಾನವೇ ಇಲ್ಲ.
ಅರಿತವರು ತಾವೇ
ಅರಿವಾಗಿರುತ್ತಾರೆ. ಆದ್ದರಿಂದ
ಅವರು ಆ
ವಿಷಯದ ಬಗ್ಗೆ
ಮೌನವಾಗಿರುತ್ತಾರೆ.
ಆದರೆ
ಜಗತ್ತಿನಲ್ಲಿ ಬಹಳಷ್ಟು
ಜನರು ತಾವು
ಅದನ್ನು ಅರಿತಿದ್ದೇವೆ ಎಂಬ ಭ್ರಮಎಯಲ್ಲಿ
ಸಿಕ್ಕು ಇತರರನ್ನು
ತಪ್ಪು ಕಲ್ಪನೆಯಲ್ಲಿ
ಮುಳುಗಿಸುತ್ತಾರೆ. ಇಂತಹ
ಸಂದರ್ಭಗಳನ್ನು ನೋಡಿ
ಅಲ್ಲಮರು ಹೀಗೆ
ಹೇಳುತ್ತಿದ್ದಾರೆ. ಈ
ವಚನದ ಮೂಲಕ ಹಾಗೆ ಹೇಳುವವರನ್ನು
ಮತ್ತು ಆ
ಮಾತನ್ನು ನಿಜವೆಂದು
ನಂಬುವವರನ್ನು, ಮೌಢ್ಯದ ಕೂಪದಲ್ಲಿ ಬೀಳುವವರನ್ನು
ಎಚ್ಚರಿಸುತ್ತಿದ್ದಾರೆ.
No comments:
Post a Comment