PLEASE
NOTE: THIS POST HAS SEVEN SECTIONS. IF YOU ARE NOT FAMILIAR WITH KANNADA (THE
LANGUAGE IN WHICH THE VACHANAS WERE ORGINALLY COMPOSED) PLEASE SCROLL TO
SECTIONS 5 AND 6.
1.VACHANA
IN KANNADA
ಓಟೆ
ಇದ್ದಂತೆ
ಕಾಯ
ಮೆದ್ದವರುಂಟೆ?
ಕಾಯದ
ಗುಣವಿದ್ದಂತೆ
ಲಿಂಗವನರಿದವರುಂಟೆ?
ಜೋಡು
ಹರಿದಲ್ಲದೆ
ಕಾಯವನಿರಿಯಲರಿಯದು
ಕೈದು
ಆ
ಭಾವ
ತಿಳಿದಲ್ಲದೆ ನಮ್ಮ
ಗುಹೇಶ್ವರನರಿಯ
ಬಾರದು
ಕಾಣಾ
ಎಲೆ
ಅಂಬಿಗರ
ಚೌಡಯ್ಯಾ.
2.
TRANSLITERATION
OTe
iddaMte kaaya meddavaruMTe?
kaayada
guNaviddaMte liMgavanaridavaruMTe?
jODu haridallade kaayavaniriyalariyadu kaidu.
aa
bhaava tiLidallade namma guhEshvaranariyabaaradu
kaaNaa
ele aMbigara chouDayyaa.
3.
CLICK HERE FOR A RECITATION
4.
TRANSLATION (WORDS)
OTe
(mango pit) iddaMte (with) kaaya (fruit ) meddavaruMTe
(has anybody eaten)?
kaayada
(of the body) guNaviddaMte (being with
the tendencies) liMgavanaridavaruMTe (has anybody been aware of the Linga)?
jODu
(the armor) haridallade (unless is
torn) kaayavaniriyalariyadu (the body cannot be pierced) kaidu (the weapon).
aa
bhaava tiLidallade (unless this is understood) namma guhEshvaranariyabaaradu (our Guheshvara
cannot be understood)
kaaNaa
ele aMbigara chouDayyaa. (you see Ambigara Choudayyaa)
5.
VACHANA IN ENGLISH
Has
anybody eaten a mango fruit along with its pit?
Has
anybody been aware of the Divine (Linga) being with the tendencies of the body?
Unless
the armor is torn, the weapon cannot pierce the body.
Our
Guhesvara cannot be realized unless this is understood,
you
see, Ambigaa Choudayya!
6.
COMMENTARY
In
this fairly simple Vachana, Allama Prabhu is impressing on Ambigara Choudayya,
that the prerequisite to realize the Divine (Guhesvara) is getting rid of the
tedndencies of the body! he uses two
similis to drive the point home. No one eats the Mango fruit along with its pit.
The pit must be separated from the fruit before eating the fruit. As long as the body is covered by
the armor, a weapon cannot pierce it. The armor must be torn to allow weapon to
pierce the body. Along the same lines, one must get rid of the tendencies of
the body, the attachment to the material, the influence of sense organs and the
passions of the mind.These tendencies make the individual drown in the sea of
life and push him/her in away from the divine. The senses come in the way of
realizing the divine. The prerequisite to realize the self (divine) then is to
identify the bodily tendencies and become independent of them.
Let
us discard the pit and enjoy the fruit !
7.
KANNADA COMMENTARY
ಓಟೆ
ಇದ್ದಂತೆ
ಕಾಯ
ಮೆದ್ದವರುಂಟೆ?
ಕಾಯದ
ಗುಣವಿದ್ದಂತೆ
ಲಿಂಗವನರಿದವರುಂಟೆ?
ಜೋಡು
(ಕವಚ) ಹರಿದಲ್ಲದೆ
ಕಾಯವನಿರಿಯಲರಿಯದು
(ದೇಹವನ್ನು ಇರಿಯಲು
ಸಾಧ್ಯವಿಲ್ಲ)
ಕೈದು
(ಆಯುಧ)
ಆ
ಭಾವ
ತಿಳಿದಲ್ಲದೆ ನಮ್ಮ
ಗುಹೇಶ್ವರನರಿಯ
ಬಾರದು
ಕಾಣಾ
ಎಲೆ
ಅಂಬಿಗರ
ಚೌಡಯ್ಯಾ.
ಎಲ್ಲಿಯವರೆಗೂ
ಕಾಯದ
ಗುಣಗಳು
ದೂರವಾಗುವುದಿಲ್ಲವೋ
ಅಲ್ಲಿಯವರೆಗೆ ಲಿಂಗದ
ಅರಿವು
ಉಂಟಾಗುವುದಿಲ್ಲ
ಎನ್ನುತ್ತಾರೆ
ಅಲ್ಲಮ
ಪ್ರಭುಗಳು.
ಮಾವಿನ
ಹಣ್ಣನ್ನು
ಓಟೆಯ
ಸಹಿತ
ತಿನ್ನಲಾಗುವುದೆ?
ಯಾರೂ
ಅದನ್ನು
ಓಟೆ
ಸಹಿತ
ತಿನ್ನುವುದಿಲ್ಲ.
ಓಟೆಯನ್ನು
ಬೇರ್ಪಡಿಸಿ
ತಿರುಳನ್ನು
ಸವಿಯುತ್ತಾರೆ.
ಅದೇ ರೀತಿಯಾಗಿ
ದೇಹದ
ಗುಣಗಳು
ಇನ್ನೂ
ಬಿಟ್ಟು
ಹೋಗದ
ಮುಂಚೆ
ಲಿಂಗವನ್ನು
ಅರಿಯಲಾಗುವುದಿಲ್ಲ.
ದೇಹದ
ಗುಣಗಳು
ಜೀವನನ್ನು
ಸಂಸಾರದಲ್ಲಿ
ಮುಳುಗುವಂತೆ
ಮಾಡುತ್ತವೆ.
ಇಂದ್ರಿಯಗಳಿಗೆ
ಆತನು
ತುತ್ತಾಗುತ್ತಾನೆ.
ಇಂದ್ರಿಯಗಳು
ಆತನನ್ನು
ಬೇರೆ
ಬೇರೆ
ದಿಶೆಗಳೆಡೆಗೆ
ಎಳೆಯುತ್ತವೆ.
ಆತನ ಮನಸ್ಸು
ಲಿಂಗದ
ಕಡೆಗೆ
ಹೋಗುವುದಿಲ್ಲ.
ಲಿಂಗವನ್ನು
ಅರಿಯುವ
ದಾರಿಯಲ್ಲಿ
ಇಂದ್ರಿಯಗಳು
ಅಡ್ಡಿಯನ್ನುಂಟು
ಮಾಡುತ್ತವೆ. ಮೊದಲು
ದೇಹದ
ಗುಣಗಳನ್ನು
ಗುರುತಿಸಿ
ಅವುಗಳಿಂದ
ಬಿಡುಗಡೆ
ಪಡೆಯ
ಬೇಕು.
ಅಂದರೆ
ಓಟೆಯನ್ನು
ಬೇರ್ಪಡಿಸಿ
ಹಣ್ಣನ್ನು
ಸವಿಯುವಂತೆ
ಲಿಂಗದ
ಜ್ಞಾನ
ಸಾಧ್ಯವಾಗುತ್ತದೆ.
ಇದಕ್ಕೆ
ಇನ್ನೊಂದು
ಉದಾಹರಣೆ
ಕೊಡುತ್ತಾರೆ.
ಶಸ್ತ್ರ
ಯೋಧನನ್ನು
ಇರಿಯಬೇಕಾದರೆ
ಅದು
ಮೊದಲು
ಆತ
ತೊಟ್ಟ
ಕವಚವನ್ನು
ಹರಿಯಬೇಕಾಗುತ್ತದೆ.
ಕವಚವನ್ನು
ಹರಿಯದೆ
ಶಸ್ತ್ರ
ದೇಹವನ್ನು
ಇರಿಯಲು
ಸಾಧ್ಯವಿಲ್ಲ.
ಅದೇ
ರೀತಿ ಲಿಂಗಾನುಭವಕ್ಕೆ
ಅಡ್ಡಿಯಾಗಿರುವ
ತನುಗುಣಗಳನ್ನು
ಮೊದಲು
ಗುರುತಿಸಿ
ಇಲ್ಲವಾಗಿಸಬೇಕು
ಆನಂತರವೇ ಆ
ಲಿಂಗದ
ಭಾವ
ಅಳವಡುತ್ತದೆ
ಎಂದು
ಅಲ್ಲಮರು
ಅಂಬಿಗರ
ಚೌಡಯ್ಯನವರಿಗೆ
ತಿಳಿಸುತ್ತಿದ್ದಾರೆ.
No comments:
Post a Comment