Saturday, August 2, 2014

Vachana 205: Pruthvige Huttida Shile – The Rock born to Earth


VACHANA IN KANNADA

ಪೃಥ್ವಿಗೆ ಹುಟ್ಟಿದ ಶಿಲೆ, ಕಲ್ಲುಕುಟಿಕಂಗೆ ಹುಟ್ಟಿದ ಮೂರುತಿ,
ಮಂತ್ರಕ್ಕೆ ಲಿಂಗವಾಯಿತ್ತಲ್ಲ!
ಈ ಮೂವರಿಗೆ ಹುಟ್ಟಿದ ಮಗುವ ಲಿಂಗವೆಂದು ಕೈವಿಡಿದ
ಅಚ್ಚ ವ್ರತಗೇಡಿಗಳನೇನೆಂಬೆ ಗುಹೇಶ್ವರಾ!

TRANSLITERATION

pRuthvige huTTida shile,  kallukuikaMge huTTida mUruti,
maMtrakke liMgavaayittalla!
I mUvarige  huTTida  maguva liMgaveMdu kaiviDida
acca vratagEDigaLanEneMbe guhEshvaraa!

CLICK HERE FOR A RECITATION


TRANSLATION (WORDS)

pRuthvige (to the earth) huTTida (born)  shile (rock),  kallukuikaMge (to the sculptor) huTTida(born) mUruti (figure,idol),
maMtrakke (to the Mantra, chant)  liMgavaayittalla (became the liMga)!
I mUvarige(to these three)  huTTida (born)  maguva (child) liMgaveMdu kaiviDida (accepted as Linga)
acca (sheer) vratagEDigaLanEneMbe (what shall I say about the one who breaks the ways of devotion – religious practice)  guhEshvaraa!

VACHANA IN ENGLISH

The rock born to earth, the idol born to the sculptor,
became Linga (God) through chanting Mantras (sacred utterances)!
What shall I say about these breakers of the ways of the religious practices,
who accept as Linga (God) the child born to these three, Guhesvara!

COMMENTARY

This Vachana from Allama Prabhu stresses the importance of realizing the purpose of Ishta Linga as an icon that forms the gateway for realizing self and the Divine. Allama Prabhu says that the devotee should not stop at the ritual worship of the Ishta Linga, but see past it to realize Prana Linga (Self, Soul) and Bhava Linga (the Supreme, the subtle, the Divine).
The rock is sourced by Earth. The sculptor turns it into the form of Linga. The Guru converts it into Ishta Linga through sacred chants. Thus the Ishta Linga is the child of these three. Guru offers it to the devotee and introduces him to the spiritual path, provides the appropriate knowledge of the divine and impresses on him the intense desire and efforts needed to succeed in the spiritual journey of realizing the self (divine). If the devotee just wears Ishta Linga on him and just stops at performing ritual worship holding it on his palm, according to Allama Prabhu the devotee has failed; he has broken the spiritual vow.

Let us see past the idols and realize the true self!

 KANNADA COMMENTARY

ಇದು ಅಲ್ಲಮಪ್ರಭುಗಳ ವಚನ. ಕಲ್ಲನ್ನೇ ಲಿಂಗವೆಂದು ಯಾಂತ್ರಿಕವಾಗಿ ಪೂಜಿಸುವವರನ್ನು ಕಂಡು ಈ ಉದ್ಗಾರದ ಮೂಲಕ ಯಾವುದು  ಲಿಂಗ ಯಾವುದು ಅಲ್ಲ ಎಂಬುದರ ಸೂಚನೆ ಕೊಡುತ್ತಿದ್ದಾರೆ.

ಭೂಮಿಗೆ ಹುಟ್ಟಿದ ಕಲ್ಲು,  ಎಂದರೆ ಭೂಮಿಯಲ್ಲಿ ಸಿಗುವ ಕಲ್ಲು,  ಕಲ್ಲು ಕುಟಿಗನ ಕೆತ್ತನೆಗೆ ಒಳಗಾಗುವ ಕಲ್ಲು, ಅಥವಾ ಶಿಲ್ಪಿಯ ಉಳಿಗೆ ಸಿಕ್ಕು ಮೂರ್ತಿಯಾಗುವ ಆ ಕಲ್ಲನ್ನು  ಮಂತ್ರವನ್ನು ಪಠಿಸಿ ಲಿಂಗಮಾಡುತ್ತಾರೆ. ಈ ಮೂವರಿಗೆ ಹುಟ್ಟಿದ ಮಗುವನ್ನು ನೆಚ್ಚುತ್ತಾರೆ ಜನರು. ಇಂತಹ ವ್ರತಗೇಡಿಗಳನ್ನು ಏನೆನ್ನಲಿ ಎನ್ನುತ್ತಾರೆ ಅಲ್ಲಮರು.  

ಒಂದು, ಭೂಮಿಯ ಕಲ್ಲು, ಇನ್ನೊಬ್ಬ ಕಲ್ಲುಕುಟಿಗ ಮತ್ತು ಇನ್ನೊಬ್ಬ ಮಂತ್ರ ಪಠಿಸುವವ. ಇವರಿಗೆ ಹುಟ್ಟಿದ ಕಲ್ಲು. ಈ ಮೂವರು ಸೇರಿ ಮಾಡಿದ ಲಿಂಗವನ್ನು ದೇವರೆಂದು ನಂಬುವ  ಜನರು ಶುದ್ಧ ಮೂರ್ಖರು.  ಅದು ಲಿಂಗವಾಗಲು ಹೇಗೆ ಸಾಧ್ಯ. ಗುರು  ಜಂಗಮರಿಂದ ಪಡೆದರೆ ಅವರು ಆ ಕುರುಹಿನ ಹಿಂದಿರುವ ಅರ್ಥವನ್ನು ವಿವರಿಸಿ ಅದನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ ತೋರಿಸುತ್ತಾರೆ. ಭೂಮಿಗೆ, ಕಲ್ಲುಕುಟಿಗನಿಗೆ ಆ ಸಾಮರ್ಥ್ಯವಿದೆಯೆ? ಕೇವಲ ಮಂತ್ರಪಠಣದಿಂದ ಆ ಕಲ್ಲು ಲಿಂಗವಾಗಲು ಸಾಧ್ಯವೆ? ಇಂತಹ ಕೇವಲ ಕಲ್ಲನ್ನು ಪೂಜಿಸುವವರು ವ್ರತಗೇಡಿಗಳು. ವ್ರತ ಕೆಟ್ಟಮೇಲೆ ಏನನ್ನೂ ಸಾಧಿಸಲಾಗುವುದಿಲ್ಲ. ಎಂದರೆ ಶಿವಯೋಗ ಸಾಧ್ಯವಾಗುವುದಿಲ್ಲ.  ಕುರುಹಿನ ಹಿಂದಿರುವ ಅರುಹನ್ನು  ಸಾಧಿಸುವುದೇ ನಿಜವಾದ ವ್ರತ. ಅದನ್ನು ತಪ್ಪಿದವರು ವ್ರತಗೇಡಿಗಳು.



No comments:

Post a Comment