Friday, September 5, 2014

Vachana 210: Kangala Mundana Kattale – The darkness before the Eyes

PLEASE NOTE THAT THERE ARE SEVEN SECTIONS IN THIS POST. IF YOU ARE NOT FAMILIAR WITH KANNADA (THE  LANGUAGE IN WHICH THE VACHANAS ARE COMPOSED ORIGINALLY) PLEASE SCROLL  DOWN TO SECTIONS 5 AND 6; SECTIONS 3 HAS A RECITATION OF THE VACHANA.


1.       VACHANA IN KANNADA

ಕಂಗಳ ಮುಂದಣ ಕತ್ತಲೆ ಇದೇನೋ?
ಮನದ ಮುಂದಣ ಮರವೆ ಇದೇನೋ?
ಒಳಗಣ ರಣರಂಗ ಹೊರಗಣ ಶೃಂಗಾರ!
ಬಳಕೆಗೆ ಬಂದ ಬಟ್ಟೆ ಇದೇನೋ ಗುಹೇಶ್ವರಾ?

2.       TRANSLITERATION

kaMgaLa muMdaNa kattale idEnO?
manada muMdaNa marave idEnO?
oLagaNa raNaraMga horagaNa shRuMgaara!
baLakege baMda baTTe idEnO guhEshvaraa?

3.       CLICK HERE FOR A RECITATION IN KANNADA


4.       TRANSLATION (WORDS)

kaMgaLa (the  eyes)  muMdaNa (before) kattale (darkness)  idEnO (what is this)?
manada ( the mind) muMdaNa (before)  marave (ignorance) idEnO(what is this)?
oLagaNa(of inward)  raNaraMga (battlefield)  horagaNa(outward)  shRuMgaara (beautification)!
baLakege baMda (which has been in use) baTTe (path)  idEnO  (what is this)guhEshvaraa (Giheshvara)?

5.       VACHANA IN ENGLISH

What is this darkness before the eyes?
What is this ignorance before the mind?
The inward  battlefield , the outward beautification!
What is this way that has been in use, Guhesvara?

6.       COMMENTARY

Allama Prabhu is wondering about the ways of the life of common man, in this Vachana!

We have eyes that allow us to see. Yet, there is darkness before the eyes. The darkness is the ignorance. The ignorance makes us evaluate the people, the scenery and the events we witness with our own measuring stick. We say how great this thing is or how better it could have been. We use this inference to take us to the heights of pleasure or depths of sorrow. We oscillate in this cycle of ups and downs. Do we ever question as to why we use this measuring stick? How did we acquire it? Is it necessary? This is the darkness in front of the eyes! Can we get out of judging people and events?

We all know that the mind is a monkey. It makes us to hop from one thing to the other constantly. We are happy with what we have for a moment and start desiring the next higher pleasure in the next moment. We are never satisfied or content with what is at present. This is the ignorance in front of the mind!

The mind is struggling with the ups and downs of desires. This is the battlefield inside. Yet, we try to project our happiness outwardly. We try to show off that all is well while the struggle is going on inside! This duality is our state of existence always!

Allama Prabhu questions ‘what is this way of life?” Do we ever get out of this mode of living and develop the awareness to make our inward and outward the same?

Let us see and think clearly!

KANNADA COMMENTARY

ಕಂಗಳ ಮುಂದಣ ಕತ್ತಲೆ ಇದೇನೋ?(ಕಣ್ಣುಗಳ ಮುಂದಿರುವ ಕತ್ತಲೆ ಇದು ಎಂತಹುದು?)
ಮನದ ಮುಂದಣ ಮರವೆ ಇದೇನೋ? (ಮನಸ್ಸಿನ ಮುಂದೆ ಕವಿದಿರುವ ಅಜ್ಞಾನ ಇದು ಯಾವುದು)
ಒಳಗಣ ರಣರಂಗ ಹೊರಗಣ ಶೃಂಗಾರ!(ಮನದಲ್ಲಿ ಸೆಣಸಾಟ, ಹೊರಗಡೆ ಅಲಂಕಾರ)
ಬಳಕೆಗೆ ಬಂದ ಬಟ್ಟೆ (ಎಲ್ಲರೂ ನಡೆದು ಬಂದ ದಾರಿ) ಇದೇನೋ ಗುಹೇಶ್ವರಾ?

ತಾತ್ಪರ್ಯ:

ಸಾಮಾನ್ಯ ಜನಜೀವನದ ರೀತಿಯನ್ನು ಕಂಡು ಅಲ್ಲಮರು ಎತ್ತಿದ ಉದ್ಗಾರವಿದು.

ಅವರು ಹೇಳುತ್ತಾರೆ-
ಕಣ್ಣುಗಳ ಮುಂದೆ ಕತ್ತಲೆ ಇದೆ.  ಕತ್ತಲೆ ಎಂದರೆ ಅಜ್ಞಾನ. ಎಂತಹ ಕತ್ತಲೆ ನಮ್ಮನ್ನು ಆವರಿಸಿದೆ ಎಂಬುದನ್ನು ನೋಡೋಣ. ನಾವು ಕಾಣುವ ಪ್ರತಿಯೊಂದನ್ನು (ಒಬ್ಬ ವ್ಯಕ್ತಿ, ಒಂದು ವಸ್ತು, ವಿಷಯ, ಪ್ರಸಂಗ ಎಲ್ಲವನ್ನೂ) ನಾವು ಒಂದು ಅಳತೆಗೋಲಿನಿಂದ ನೋಡುತ್ತೇವೆ.  ಅದನ್ನು ಅಳತೆ ಮಾಡಿ ಎಷ್ಟು ಚೆನ್ನಾಗಿದೆ, ಚೆನಾಗಿಲ್ಲ ಎಂದು ನಿರ್ಧರಿಸುತ್ತೇವೆ. ಅದು ಹೀಗಿರಬೇಕಿತ್ತು, ಹಾಗಿರಬೇಕಿತ್ತು ಎಂದು ಬಯಸುತ್ತೇವೆ. ಅದಕ್ಕೆ ಅನುಗುಣವಾಗಿ ಅದು ನಮಗೆ ಸುಖ, ದುಃಖ, ಸಮಾಧಾನ, ಅಸಮಾಧಾನ ಇತ್ಯಾದಿ ಕೊಡುತ್ತದೆ. ಈ ಅಳತೆಗೋಲು ನಮ್ಮನ್ನು ಒಮ್ಮೆ ಸುಖದ ಶಿಖರಕ್ಕೆ   ಮತೊಮ್ಮೆ  ನಿರಾಸೆಯ ಪಾತಾಳಕ್ಕೆ ಕೊಂಡೊಯ್ಯುತ್ತದೆ. ಹಾಗಾಗಿ ನಾವು ಸುಖ ದುಃಖದ ಚಕ್ರದಲ್ಲಿ ಸಿಕ್ಕು ತೊಳಲಾಡುತ್ತೇವೆ.  “ಈ ಅಳತೆಗೋಲು ಬಂದುದೆಲ್ಲಿಂದ? ಯಾವುದನ್ನಾದರೂ ನೋಡಲು ನಮಗೆ ಅದರ ಅವಶ್ಯಕತೆಯಿದೆಯೆ?” ಎಂದು, ಎಂದೂ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದಿಲ್ಲ. ಇದೇ ಕಂಗಳ ಮುಂದಣ ಕತ್ತಲೆ.

ಮನದಲ್ಲಿ ನಾನಾ ಆಸೆಗಳಿರುತ್ತವೆ.  ಬಗೆ ಬಗೆಯ ವಾಹನಗಳ, ಯಂತ್ರೋಪಕರಣಗಳ (gadget), ದೊಡ್ಡ ಮನೆಗಳ, ಒಡವೆಗಳ, ಸೀರೆಗಳ, ಊಟ ತಿಂಡಿಗಳ, ಕೀರ್ತಿ ಪಡೆಯುವ, ಇನ್ನೂ ಏನೇನೋ ಆಸೆಗಳು ಮನದಲ್ಲಿ ಮನೆಮಾಡಿರುತ್ತವೆ. ಆದರೆ ಇವು ಯಾವವುಗಳಿಂದಲೂ ಮನಸ್ಸು ಪೂರ್ತಿಯಾಗಿ ತೃಪ್ತವಾಗುವುದಿಲ್ಲ. ಒಂದನ್ನು ಪಡೆದ ನಂತರ ಇನ್ನೊಂದು, ಮತ್ತೊಂದು, ಮಗದೊಂದು ಎಂದು ಇನ್ನೂ ಇನ್ನೂ ಓಡುತ್ತಲೇ ಇರುತ್ತದೆ ಮನಸ್ಸು. ಇದು ಮನಸ್ಸಿನ ರೀತಿ. ಇದು ಅದರ ಅರ್ಥವಿಲ್ಲದ ಚಾಳಿ, ಒಮ್ಮೆ ಇದರ ಈ ಓಟವನ್ನು ನಿಧಾನಗೊಳಿಸಿದರೆ ಅಥವಾ ನಿಲ್ಲಿಸಿದರೆ ಏನಾಗುತ್ತದೆ? ಎಂದು ಯೋಚಿಸುವುದಿಲ್ಲ ನಾವು. ಅದರ ಈ ಆಸೆಯಿಂದ ನಮಗೆ ಎಂದಾದರೂ ಸುಖ ಸಿಕ್ಕಿದೆಯೆ? ಎಂದು ಕೇಳಿಕೊಳ್ಳುವುದಿಲ್ಲ ನಾವು. ಇದೇ ಮನದ ಮುಂದಣ ಮರವೆ.

ತನ್ನ ಈ ಆಸೆಗಳನ್ನು ಪೂರ್ತಿಗೊಳಿಸಲು ಮನಸ್ಸು ಸದಾ ಹೆಣಗಾಡುತ್ತದೆ, ನಾನಾ ಉಪಾಯಗಳನ್ನು ಮಾಡುತ್ತದೆ. ಏನೇನನ್ನೋ, ಯಾರಾರನ್ನೋ ತುಳಿಯಲು ನೋಡುತ್ತದೆ, ತಾನು ಮುನ್ನುಗ್ಗಲು ಅವಕಾಶಕ್ಕಾಗಿ ಕಾಯುತ್ತದೆ.  ಒಟ್ಟಿನಲ್ಲಿ ಮನಸ್ಸು ಸದಾ ಆಸೆಗಳನ್ನು ಪೂರ್ತಿಮಾಡಿಕೊಳ್ಳಲು ಸೆಣಸಾಡುತ್ತದೆ. ಇದೇ ಒಳಗಣ ರಣರಂಗ.

ಆದರೆ ಹೊರಗಡೆ ಮಾತ್ರ  ತಾನು ಬಹಳ ಸಭ್ಯ, ಬಹಳ ಉದಾರಿ, ಇತರರ ಬಗ್ಗೆ ಕಾಳಜಿಯುಳ್ಳವನು, ಶಾಂತಿಪ್ರಿಯನು ಎಂದು ತೋರಿಸಿ  ಕೊಳ್ಳುತ್ತದೆ. ಇದೇ ಹೊರಗಣ ಶೃಂಗಾರ. ಒಳಗಣ ರಣರಂಗ ಮತ್ತು ಹೊರಗಣ ಶೃಂಗಾರದ ಈ ದಾರಿಯನ್ನು ಜನರು ಅನೇಕ ವರ್ಷಗಳಿಂದ ತುಳಿಯುತ್ತ  ಬಂದಿದ್ದಾರೆ. ಇದು ಎಂತಹ ದಾರಿ? ಎಂದು ಕೇಳುತ್ತಿದ್ದಾರೆ ಅಲ್ಲಮ ಪ್ರಭುಗಳು. ಎಂದರೆ ಈ ದಾರಿಗೆ ಅರ್ಥವಿದೆಯೆ? ಇದು ಬೇಕೆ? ಎಂಬ ಭಾವ ಇಲ್ಲಿ ಕಂಡುಬರುತ್ತದೆ. 
 ಕತ್ತಲೆಯಲ್ಲಿಯೆ ಎಲ್ಲ ವ್ಯವಹಾರಗಳು ನಡೆಯುತ್ತಿವೆ. ಜನರಿಗೆ ಯಾವುದು ಸರಿ, ಯಾವುದು ಸರಿಯಲ್ಲ, ಯಾವುದು ನಿಜವಾದ ಸುಖ, ಯಾವುದು ಭ್ರಮೆ, ಎನ್ನುವುದರ ಪರಿವೆ ಇಲ್ಲ. ಕತ್ತಲೆಯನ್ನು ಪರಿಹರಿಸಿಕೊಳ್ಳಬೇಕೆಂಬ ತವಕವಿಲ್ಲ. ಕತ್ತಲೆಯಿಂದ ಜೀವನ ಕೆಡುತ್ತಿದೆ ಎಂಬ ಅರಿವಿಲ್ಲ. ಅದು ಸಾಮಾನ್ಯವೆಂಬಂತೆ ಇರುತ್ತಾರೆ. ಇದು ಎಂತಹ ವಿಚಿತ್ರ? ಎನ್ನುತ್ತಾರೆ ಅಲ್ಲಮರು.




No comments:

Post a Comment