Saturday, May 31, 2014

Vachana 196: Agnanadinda Huttittu – Born of the Ignorance



VACHANA IN KANNADA

ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ, ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ
ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ, ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ
ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ, ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ
ಅಜ್ಞಾನದಿಂದ ಹುಟ್ಟಿತ್ತು ಸಂಸಾರ, ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ
ಅಜ್ಞಾನದಿಂದ ಹುಟ್ಟಿತ್ತು ಸರ್ವ ಪ್ರಪಂಚು, ಅಜ್ಞಾನದಿಂದ ಹುಟ್ಟಿತ್ತು ಸರ್ವ ದುಃಖ
ಕೂಡಲಸಂಗಮದೇವಾ ಅಜ್ಞಾನ ಭ್ರಮೆಯ ಕೆಡಿಸಿದುದಲ್ಲದೆ
ನಿಮ್ಮನೊಡಗೂಡಬಾರದಯ್ಯಾ

TRANSLITERATION

aj~jaanadiNda huTittu ahaM mamate, aj~jaanadiNda huTittu  manassaMcala
aj~jaanadiNda huTittu iMdriyOdrEka, aj~jaanadiNda huTittu  dEha mOha
aj~jaanadiNda huTittu atikaaMkShe, aj~jaanadiNda huTittu trividhamala
aj~jaanadiNda huTittu samsara, aj~jaanadiNda huTittu raagadvESha
aj~jaanadiNda huTittu sarva prapaMcu, aj~jaanadiNda huTittu sarva duHkha
kUDalasaMgamadEvaa aj~jaana bhrameya keDisidudallade
nimmanoDagUDabaaradayyaa

CLICK HERE FOR A RECITATION


TRANSLATION (WORDS)

aj~jaanadiNda (of ignorance)  huTittu (is born)  ahaM (ego)  mamate (love for self) 
aj~jaanadiNda (of ignorance)  huTittu (is born)    manassaMcala  (wandering mind) 
aj~jaanadiNda (of ignorance)  huTittu (is born)  iMdriyOdrEka  ( senses are provoked)
aj~jaanadiNda (of ignorance)  huTittu (is born)  dEha mOha ( attachment for the body)
aj~jaanadiNda (of ignorance)  huTittu (is born)  atikaaMkShe ( more ambition)
aj~jaanadiNda (of ignorance)  huTittu (is born)  trividhamala  ( three kinds of  burdens)
aj~jaanadiNda (of ignorance)  huTittu (is born)  samsara  (house hold)
aj~jaanadiNda (of ignorance)  huTittu (is born)  raagadvESha  (love and hate)
aj~jaanadiNda (of ignorance)  huTittu (is born)  sarva prapaMcu (the whole world)
aj~jaanadiNda (of ignorance)  huTittu (is born)  sarva duHkha (all sorrow)
kUDalasaMgamadEvaa (kudalasangamadeva) aj~jaana bhrameya (illusion of ignorance)  keDisidudallade (unless destroyed)
nimmanoDagUDabaaradayyaa  (will not be able to become one with you)

VACHANA IN ENGLISH

Ego (love for self) is born of ignorance; wandering mind is born of ignorance
Excitement of senses is born of ignorance; Attachment to the body is born of ignorance
Unbounded ambition is born of ignorance; the three kinds of burdens are born of ignorance
The household is born of ignorance; Love and hate are born of ignorance
The whole world is born of ignorance; all sorrow is born of ignorance
Kudalasangamadeva, unless the illusion of ignorance is destroyed, 
one will not be able to become one with you!

 COMMENTARY

In this simple Vachana, Basavanna provides a list of (negative) attributes we possess and says that the root cause of all these is ‘ignorance’. When the self-respect turns to self-love, the ego takes over and becomes a negative trait. The only way to escape from this is to shed the ignorance and become aware of the nature and effect of ego. The key concept is that of ‘understanding’, not ‘controlling’. Similar comments can be made of all the other attributes listed in the Vachana. The Vachana aptly urges that the illusion of ignorance must be destroyed before we can become one with the divine.  Awareness, an intense desire, self-discipline, and one mindedness are a must to reach this merger.

Let us shed our ignorance and strive to become one with Him!



KANNADA COMMENTARY
ಆರ್ಥ:

ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ (ಅಹಂಕಾರ ಮತ್ತು ಮೋಹ)
ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ (ಮನಸ್ಸಿನ ತಿರುಗಾಟ, ಸಂಚಲನೆ)
ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ (ಇಂದ್ರಿಯಗಳ ಉದ್ರೇಕ)
ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ (ದೇಹದ ಬಗ್ಗೆ ಮೋಹ)
ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ ( ಹೆಚ್ಚಿನ ಬಯಕೆಗಳು)
ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ (ಮೂರು ರೀತಿಯ ಮಲಗಳು. ಆಣವ, ಮಾಯಾ, ಕಾರ್ಮಿಕ)
ಅಜ್ಞಾನದಿಂದ ಹುಟ್ಟಿತ್ತು ಸಂಸಾರ (ಈ ಜಗತ್ತು)
ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ (ಪ್ರೀತಿ ಮತ್ತು ದ್ವೇಷ)
ಅಜ್ಞಾನದಿಂದ ಹುಟ್ಟಿತ್ತು ಸರ್ವ ಪ್ರಪಂಚು (ವಿಶ್ವ)
ಅಜ್ಞಾನದಿಂದ ಹುಟ್ಟಿತ್ತು ಸರ್ವ ದುಃಖ (ಎಲ್ಲ ರೀತಿಯ ದುಃಖ)
ಕೂಡಲಸಂಗಮದೇವಾ ಅಜ್ಞಾನ ಭ್ರಮೆಯ ಕೆಡಿಸಿದುದಲ್ಲದೆ (ಅಜ್ಞಾನವೆಂಬ ಭ್ರಮೆಯನ್ನು ನಾಶ ಮಾಡದೆ)
ನಿಮ್ಮನೊಡಗೂಡಬಾರದಯ್ಯಾ (ನಿಮ್ಮನ್ನು ಕೂಡಿಕೊಳ್ಳಲು ಬರದು)


ಕೂಡಲ ಸಂಗಮನು ಈ ಪ್ರಪಂಚದ ಅನುಭವದಿಂದ ಬೇರೆಯಾದವನು.  ಅವನನ್ನು ಕಾಣಲು  ಆತ್ಮಬಲ, ಹಂಬಲ ಮತ್ತು ಏಕಾಗ್ರತೆ ಬೇಕು. ಆದರೆ ಹಲವಾರು ಮನೋವಿಕಾರಗಳಿಗೆ ಬಲಿಯಾದವರಲ್ಲಿ ಈ ಗುಣಗಳು ಹೇಗೆ ಕಂಡಾವು? ಅಜ್ಞಾನವೇ ಎಲ್ಲ ಮನೋವಿಕಾರಗಳಿಗೂ  ಮೂಲವಾಗಿ ಕೂಡಲಸಂಗಮನನ್ನು ಅರಿಯದಿರುವುದಕ್ಕೆ ಕಾರಣವಾಗುತ್ತದೆ ಎನ್ನುತಾರೆ ಬಸವಣ್ಣನವರು.
ಅಹಂಕಾರ ಮತ್ತು ಮೋಹಗಳು ಅಜ್ಞಾನದಿಂದ ಹುಟ್ಟುತ್ತವೆ. ನಾನು ಮತ್ತು ನನ್ನವರು, ನನ್ನದು ಎಂಬ ಭಾವನೆ ಬಹಳ ಬಲವಾದದ್ದು. ಅದು ಪ್ರತಿಯೊಬ್ಬನ ಮನದಲ್ಲಿರುತ್ತದೆ.  ನನ್ನದು ಎಂಬುದರ ಮೇಲೆ ಮೋಹ. ಅದನ್ನು ಬಿಟ್ಟಿರಲಾರದ ಭಾವನೆ. ಈ ಎಲ್ಲ ಭಾವನೆಗಳು ಅಜ್ಞಾನದಿಂದ ಹುಟ್ಟುತ್ತವೆ. ನಾನಿಲ್ಲದೆ ಹೋದರೂ ಪ್ರಪಂಚ ನಡೆಯುತ್ತದೆ, ನಮ್ಮ ಮೋಹದ ವಸ್ತು, ವ್ಯಕ್ತಿ ನಾವಿಲ್ಲದೆ ಹೋದರೂ ಚೆನ್ನಾಗಿಯೆ ಇರುತ್ತಾರೆ ಎಂಬುದನ್ನು ಅರಿಯದೆ ನನ್ನಿಂದಲೇ ಇದೆಲ್ಲ ನಡೆಯುತ್ತಿರುವುದು, ನಾನಿಲ್ಲದೆ ಹೋದರೆ ಎಲ್ಲರಿಗೂ ನಷ್ಟ ಎನ್ನುವ ಹುಸಿ ನಂಬಿಕೆ ನಮ್ಮದು, ಅದರ ಮೂಲ ಅಜ್ಞಾನ,
ಮನಸ್ಸು ಬಹಳ ಚಂಚಲ.ಒಂದೆಡೆ ಅದು ನಿಲ್ಲುವುದಿಲ್ಲ. ಒಂದರಿಂದ ಇನ್ನೊಂದಕ್ಕೆ ಚಲಿಸುತ್ತಲೇ ಇರುತ್ತದೆ. ಇಲ್ಲಿ ಸುಖವಿದೆ ಎಂದುಕೊಳ್ಳುತ್ತಿರುವಾಗಲೆ ಇನ್ನೂ ಹೆಚ್ಚಿನ ಸುಖದ ಆಸೆಗೆ ಇನ್ನೊಂದಕ್ಕೆ ನೆಗೆಯುತ್ತದೆ. ಒಂದು ಕ್ಷಣವೂ ಅದು ಸುಮ್ಮನಿರುವುದಿಲ್ಲ. ಅದರ ಈ ಸಂಚಾರಕ್ಕೆ ಯಾವ ಅರ್ಥವೂ ಇಲ್ಲವೆಂಬುದು  ತಿಳಿದು ನೋಡಿದರೆ ಅನುಭವಕ್ಕೆ  ಬರುತ್ತದೆ.ಅದರೆ ಅದನ್ನು ಮನಸ್ಸು ಒಪ್ಪಲು ಸಿದ್ಧವಿರುವುದಿಲ್ಲ.ಏಕೆಂದರೆ ಅದು ಅಜ್ಞಾನದಲ್ಲಿ ಮುಳುಗಿದೆ.
ಇಂದ್ರಿಯಗಳು  ವಿಷಯಗಳನ್ನು ನೆನೆದು, ನೋಡಿ ಉದ್ರೇಕಗೊಳ್ಳುತ್ತವೆ. ಆಯಾ ವಿಷಯಗಳಿಂದ  ಸುಖ ಸಿಗುವುದು ಖಂಡಿತವೆಂದು ನಂಬುತ್ತವೆ. ಆದ್ದರಿಂದಲೇ ವಿಷಯಗಳನ್ನರಸಿ ಓಡುತ್ತವೆ.  ಅವುಗಳ ಈ ನಂಬಿಕೆ ಅಜ್ಞಾನದಿಂದ ಉಂಟಾಗುತ್ತದೆ. ಯಾವುದರಲ್ಲಿಯೂ ಶಾಶ್ವತವಾದ ಸುಖವಿಲ್ಲವೆಂದು ಗೊತ್ತಿದ್ದರೂ ಅದನ್ನು ನಂಬುವುದಿಲ್ಲ.  ಅಜ್ಞಾನದಿಂದಲೇ ದೇಹದ ಬಗ್ಗೆ ಮೋಹ ಹುಟ್ಟುತ್ತದೆ.  ದೇಹದ ಸೌಂದರ್ಯ ಶಾಶ್ವತವೆಂದು ನಂಬಿ  ಅದರ ಬಗ್ಗೆ ಮೋಹ ತಳೆಯುತ್ತದೆ. ಇದೆಲ್ಲವೂ  ಅಜ್ಞಾನದ ಫಲ.
ಮನಸ್ಸಿನಲ್ಲಿ ಆಕಾಂಕ್ಷೆಗಳು ಹುಟ್ಟುವುದು,  ಮತ್ತು ಅವುಗಳನ್ನು ತೀರಿಸಿಕೊಳ್ಳಲು ಏನೇನೋ ಮಾಡುವುದು, ಆ ಕೆಲಸದ  ನಾನಾ ಪರಿಣಾಮಕ್ಕೆ ಸಿಕ್ಕಿಕೊಳ್ಳುವುದು,  ಆ ಎಲ್ಲವೂ ಸುಖಕೊಡುತ್ತವೆ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ನಂಬುವುದು ಎಲ್ಲವೂ ಅಜ್ಞಾನದಿಂದಲೇ.
ಸಂಸಾರದಲ್ಲಿ ಕಾಣುವುದರ  ಹೊರರೂಪವನ್ನೇ ನಿಜವೆಂದು ನಂಬಿ ಅದರ ಬಗ್ಗೆ ರಾಗ ದ್ವೇಷತಾಳುವುದು ಕೂಡ ಅಜ್ಞಾನವೇ.  ಈ ಪ್ರಪಂಚವನ್ನು ನಾವು ನಮ್ಮ ನಮ್ಮ ಅಳತೆಯಿಂದ  ಅಳೆಯುತ್ತೇವೆ. ಈತ ದೊಡ್ಡವ್ಯಕ್ತಿ, ಈತ  ಸಾಮನ್ಯ, ಅದು ಮಹತ್ವದ್ದು, ಇದು ಬೆಲೆಯಿಲ್ಲದ್ದು,  ಈತನಿಗೆ ಗೌರವ ಕೊಡಬೇಕು, ಈತನಿಗೆ  ಅವಮಾನವೇ ಸರಿಯಾದ ಚಿಕಿತ್ಸೆ, ಇತ್ಯಾದಿಯಾಗಿ ಎಲ್ಲವನ್ನೂ ನಾವು ನಮ್ಮ ನಮ್ಮ  ಇಷ್ಟದಂತೆ  ನಂಬಿಕೆಯಂತೆ  ತೂಗಿ ನೋಡುತ್ತೇವೆ. ಆದರೆ ನಮ್ಮ ಈ ಎಲ್ಲ   ಭಾವನೆಗಳ ಆಧಾರವೇನೆಂದು ಅರಿತುಕೊಂಡರೆ  ನಮ್ಮ ಭ್ರಮೆ ಅರಿವಿಗೆ ಬರುವ ಸಾಧ್ಯತೆಯಿರುತ್ತದೆ. ಆದರೆ ಹಾಗೆ ಮಾಡದೆ ಭ್ರಮೆಯನ್ನೇ ನಿಜವೆಂದು ನಂಬುವುದರಿಂದ ದುಃಖವುಂಟಾಗುತ್ತದೆ.  ಆ ನಂಬಿಕೆ ಅಜ್ಞಾನಮೂಲದ್ದು.  ಕೂಡಲ ಸಂಗಮನನ್ನು  ಕೂಡಿಕೊಳ್ಳಲು  ಈ ಅಜ್ಞಾನವೆಂಬ ಭ್ರಮೆಯನ್ನು ಕಳೆದುಕೊಳ್ಳಬೇಕು ಎನ್ನುತ್ತಾರೆ  ಬಸವಣ್ಣನವರು. 
               

http://www.jkrishnamurti.org/krishnamurti-teachings/view-video/understanding-not-controlling-desire.php


No comments:

Post a Comment